ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. https://youtu.be/SQBNJCM7rO0?si=MI6ATX9GTG1VgII3 ರಸ್ತೆ ರಸ್ತೆಯಲ್ಲಿಯೂ ಟೂಲ್ಸ್ ಹಿಡಿದು ರಾಬರಿ ಮಾಡಲಾಗುತ್ತಿದೆ. ಅದರಂತೆ ಇದೀಗ ಡಿಲವರಿ ಬಾಯ್ ಅಡ್ಡಹಗಟ್ಟಿ ರಾಬರಿ ಮಾಡಲಾಗಿದೆ. ತಲ್ವಾರ್ ನಿಂದ ಹೊಡೆದು ಅಟ್ಟಹಾಸ ಮೆರೆಯಲಾಗಿದೆ. ಒಂದೇ ಕಡೆ ಎರಡೆರಡು ಘಟನೆ ನಡೆದರು ಪೊಲೀಸರು ಕ್ಯಾರೆ ಅಂದಿಲ್ಲ. ಹೊಟ್ಟೆಪಾಡಿಗಾಗಿ ಮಧ್ಯರಾತ್ರಿವರೆಗು ಡಿಲವರಿ ಬಾಯ್ಸ್ ಕೆಲಸ ಮಾಡ್ತಾರೆ. ಆದರೆ ಈ ಪುಂಡರು ಅವರನ್ನೇ ಹೆದರಿಸಿ ಕಿತ್ತು ತಿನ್ನುತ್ತಾರೆ. ಆಗಸ್ಟ್ 4 ಮತ್ತು 20 ರ ಮಧ್ಯರಾತ್ರಿ ಒಂದೇ ಕಡೆ ಎರಡು ಬಾರಿ ರಾಬರಿ ನಡೆದಿದೆ. ಕೋನೇನ ಅಗ್ರಹಾರ ವಿನಾಯಕನಗರ ಬಿ ಬ್ಲಾಕ್ ನಲ್ಲಿ ಘಟನೆ ಹಾಗೂ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.
Author: Prajatv Kannada
ಬೆಂಗಳೂರು:- ಅನ್ನಭಾಗ್ಯ ಫಲಾನುಭವಿಗಳಿಗೆ ಶುಭ ಸುದ್ದಿ ಸಿಕ್ಕಿದ್ದು, ಇನ್ಮುಂದೆ ಹಣದ ಬದಲಾಗಿ ಸಿಗಲಿದೆ 10 ಕೆಜಿ ಉಚಿತ ಅಕ್ಕಿ ನೀಡಲಾಗುತ್ತದೆ. https://youtu.be/NWQDCUFS-Ak?si=Y53iBwx0J5ZXQVKz ಬಿಪಿಎಲ್ ಕಾರ್ಡುದಾರರಿಗೆ ಉಚಿತ ಅಕ್ಕಿ ನೀಡುವುದಕ್ಕಾಗಿ ಕರ್ನಾಟಕಕ್ಕೆ ಅಕ್ಕಿ ಪೂರೈಸಲು ಸಿದ್ಧವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಕ್ಕಿ ಪೂರೈಸುವ ಬಗ್ಗೆ ಭಾರತೀಯ ಆಹಾರ ನಿಗಮ ಈಗಾಗಲೇ ಘೋಷಣೆ ಮಾಡಿದೆ. ಹೀಗಾಗಿ ಫಲಾನುಭವಿಗಳಿಗೆ ಈಗ ನೀಡುತ್ತಿರುವ 170 ರೂಪಾಯಿಗಳ ಬದಲಿಗೆ 5 ಕೆಜಿ ಅಕ್ಕಿ ಹೆಚ್ಚು ಸಿಗುವ ಸಾಧ್ಯತೆಯಿದೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಕೇಂದ್ರ ಸರ್ಕಾರ ಕಳೆದ ವರ್ಷ ತಿರಸ್ಕರಿಸಿತ್ತು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಆದರೆ, ಇದೀಗ ಕೇಂದ್ರ ಸರ್ಕಾರ ನಿರ್ಧಾರ ಬದಲಾಯಿಸಿದೆ. ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗಾಗಿ 2.38 ಲಕ್ಷ ಟನ್ ಅಕ್ಕಿಯನ್ನು ಪೂರೈಸಲು ಮನವಿ ಮಾಡಿದೆ. ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಎಫ್‌ಸಿಐನ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಮಹೇಶ್ವರಪ್ಪ…
ಕನ್ನಡದ ಖ್ಯಾತ ರಿಯಾಲಿಟಿ ಶೋ ನಿರೂಪಣೆಯಿಂದ ಕಿಚ್ಚ ಸುದೀಪ್ ಹೊರ ಬಂದಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಖತ್ ಸದ್ದು ಮಾಡಿತ್ತು. ಈ ವಿಚಾರ ಕೇಳಿ ಅನೇಕರಿಗೆ ಆಕ್ ಆಗಿತ್ತು. ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರ ಬರಲು ಕಾರಣವೇನು ಎಂದು ಸಾಕಷ್ಟು ಮಂದಿ ಪ್ರಶ್ನಿಸಿದ್ದರು. ಆದರೆ ಇದೀಗ ಸುದೀಪ್ ಅವರು ಈ ಶೋನ ತೊರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅವರು ಈ ಮೊದಲು ನೀಡಿದ ಹೇಳಿಕೆ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೇರೆ ಬೇರೆ ಭಾಷೆಗಳಲ್ಲಿ ‘ಬಿಗ್ ಬಾಸ್’ ಪ್ರಸಾರ ಕಂಡಿದೆ. ಬೇರೆ ಬೇರೆ ಹೀರೋಗಳು ಬೇರೆ ಬೇರೆ ಭಾಷೆಗಳಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಆದರೆ, ಸುದೀಪ್ ರೀತಿಯ ಸಾಧನೆಯನ್ನು ಯಾರೆಂದರೆ ಯಾರೂ ಮಾಡಿಲ್ಲ. ಸುದೀಪ್ ಅವರು ಈವರೆಗೆ 10 ಟಿವಿ ಸೀಸನ್, ಒಂದು ಒಟಿಟಿ ಸೀಸನ್ ಹಾಗೂ ಒಂದು ಮಿನಿ ಸೀಸನ್ ನಡೆಸಿಕೊಟ್ಟಿದ್ದಾರೆ. ಬೇರೆ ಭಾಷೆಗಳಲ್ಲಿ ಈ ರೀತಿಯ ಸಾಧನೆ ಆಗಿಲ್ಲ. ‘ಬಿಗ್ ಬಾಸ್ನಲ್ಲಿ ಜನರು ನನ್ನನ್ನು ನೋಡೋಕೆ ಇಷ್ಟಪಡ್ತಾರಾ,…
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂಬ ರಾಜಕೀಯ ಪಕ್ಷವನ್ನು ಫೆಬ್ರವರಿಯಲ್ಲಿ ಪ್ರಾರಂಭಿಸಿದ್ದ ವಿಜಯ್ 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಇದೀಗ ದಳಪತಿ ವಿಜಯ್ ಗುರುವಾರ ತಮ್ಮ ರಾಜಕೀಯ ಪಕ್ಷದ ಬಾವುಟ ಹಾಗೂ ಚಿಹ್ನೆಯನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ನಟ ದಳಪತಿ ವಿಜಯ್ ಅವರು ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಇದರೊಂದಿಗೆ 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ವಿಜಯ್ ಹೇಳಿದ್ದರು. ಈ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ಯಾವುದೇ ಮೈತ್ರಿ ಅಥವಾ ಪಕ್ಷವನ್ನು ಬೆಂಬಲಿಸಲಿಲ್ಲ. ಮತ್ತೊಂದೆಡೆ, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಕಳೆದ ಮೂರು ವರ್ಷಗಳಲ್ಲಿ ರಾಜ್ಯವು 9.74 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಿದೆ, ಇದು 31 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಿದರು. ತಮಿಳುನಾಡಿನಲ್ಲಿ 68,773…
ಬೆಂಗಳೂರು:- ಮುಡಾ ಕೇಸ್ ಗೆ ಸಂಬಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ ಮುಡಾದ ಮೂಲ ದಾಖಲೆಗಳಿರುವ ಬಗ್ಗೆ ಆರ್ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಆರ್ಟಿಐನಲ್ಲಿ ದಾಖಲೆ ಕೇಳಿದ್ದೆ ಆದರೆ, ಮುಡಾ ಕಚೇರಿ ಕೊಟ್ಟಿಲ್ಲ. ಬದಲಿಗೆ ಆ ದಾಖಲೆಗಳನ್ನ ಸುದ್ದಿಗೋಷ್ಠಿಯಲ್ಲಿ ಸಿಎಂ ಬಿಡುಗಡೆ ಮಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯರಿಗೆ ಆ ದಾಖಲೆಗಳು ಹೇಗೆ ಸಿಕ್ಕವು ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿ, ಡಿಸಿ, ಮುಡಾ ಆಯುಕ್ತರು ಮತ್ತು ಅಧ್ಯಕ್ಷರು ಸೇರಿ ಹಲವರಿಗೆ ಪತ್ರ ಬರೆದಿದ್ದಾರೆ. ಆ ದಾಖಲೆ ಸಿಎಂ ಅವರ ಮನೆಯಲ್ಲೇ ಇರಬೇಕು. ಈ ಕುರಿತು ಸ್ಪಷ್ಟನೆ ನೀಡುವಂತೆ, ಜೊತೆಗೆ ಆದಷ್ಟು ಬೇಗ ಕೇಳಿರುವ ದಾಖಲೆ ನೀಡುವಂತೆ ಪತ್ರ ಬರೆದಿದ್ದಾರೆ. ದಾಖಲೆ ನೀಡದಿದ್ದರೆ ಈ ವಿಚಾರ ಕೋರ್ಟ್ ಗಮನಕ್ಕೆ ತಂದು ದೂರು ದಾಖಲಿಸುವುದಾಗಿ ಎಚ್ಚರಿಕೆ ಕೂಡ ನೀಡಿದ್ದಾರೆ. ಹಗರಣದ ವಿರುದ್ಧ ಖಾಸಗಿ ದೂರು ದಾಖಲು ಮಾಡಲು ಹಲವಾರು ದಾಖಲೆಗಳನ್ನು ಇಲ್ಲಿವರೆಗೂ ತಮ್ಮ ಕಚೇರಿಯ ಅಧಿಕಾರಿಗಳಿಗೆ…
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು ಕೆಲ ದಿಟ್ಟ ಕ್ರಮಕೈಗೊಂಡಿದ್ದು, ವೀಕೆಂಡ್ನಲ್ಲಿ ಡ್ರಂಕ್ & ಡ್ರೈವ್ ತಪಾಸಣೆ ಕಡ್ಡಾಯ ಮಾಡಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ರೋಡ್ ರೇಜ್ ಕೇಸ್ ಹೆಚ್ಚಳ ಹಿನ್ನೆಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರತಿ ಠಾಣೆಯಲ್ಲೂ ರಾತ್ರಿ ಕರ್ತವ್ಯಕ್ಕೆ ಇಬ್ಬರು ಮಹಿಳಾ ಹೆಚ್‌ಸಿ, ಪಿಸಿ ನಿಯೋಜನೆ ಮತ್ತು ರೋಡ್ ರೇಜ್ ಕೇಸ್ ನಿಯಂತ್ರಣಕ್ಕೆ ಪ್ರತಿ ಗುರುವಾರದಿಂದ ಭಾನುವಾರದವರೆಗೂ ಡ್ರಂಕ್ & ಡ್ರೈವ್ ಟೆಸ್ಟ್‌ಗೆ ಸೂಚನೆ ನೀಡಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರು:- ರೇಣುಕಾಸ್ವಾಮಿ ಬಚಾವ್ ಆದರೆ ಸಾಕಪ್ಪಾ ಅಂತಾ ಕಣ್ಣೀರಿಡುತ್ತಿರುವ ನಟ ದರ್ಶನ್ಗೆ FSL ಕಂಟಕ, ಬಿಟ್ಟೂಬಿಡದಂತೆ ಕಾಡೋದಕ್ಕೆ ಶುರುವಾಗಿದೆ. ಈಗಾಗಲೇ ನೂರಾರು ಸಾಕ್ಷ್ಯಗಳನ್ನ ಸಂಗ್ರಹಿಸಿರುವ ಪೊಲೀಸರು, ಕಾನೂನು ತಜ್ಞರ ಜೊತೆ ಸಮಾಲೋಚನೆಗೆ ಅಖಾಡ ರೆಡಿ ಮಾಡಿದ್ದಾರೆ. ಇದರ ನಡುವೆಯೇ ಅಭಿಮಾನ ಅನ್ನೋದು ಅತಿಯಾದರೆ ಏನಾಗುತ್ತೆ ಅನ್ನೋದು ಜೈಲು ಸೇರಿರುವ 15 ಮಂದಿ ಆರೋಪಿಗಳಿಗೆ ಅರ್ಥವಾಗಿದೆ ಅಂತ ಕಾಣುತ್ತಿದೆ. ಹೀಗಾಗಿಯೇ ನಾವ್ ಬಚಾವ್ ಆದ್ರೆ ಸಾಕು ಅನ್ನೋ ಹಂತಕ್ಕೆ ಬಂದಿದ್ದಾರಂತೆ. ಈಗಾಗಲೇ ಆರೋಪಿ ಅನುಕುಮಾರ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಚಾರ್ಜ್‌ಶೀಟ್ ಬಳಿಕ ಇನ್ನೂ ಹಲವರು ಬೇಲ್‌ಗೆ ಪ್ಲ್ಯಾನ್ ಮಾಡ್ಕೊಂಡಿದ್ದಾರಂತೆ. ಅಲ್ಲದೆ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಹಾಯ ಮಾಡ್ತಾರೆ ಅನ್ನೋ ನಂಬಿಕೆಯನ್ನೂ ಕಳ್ಕೊಂಡಿದ್ದಾರೆ. ಇದೇ ಕಾರಣಕ್ಕೆ ತಮ್ಮ ತಲೆಗೆ ತಮ್ಮದೇ ಕೈ ಅನ್ನೋದನ್ನ ಅರ್ಥ ಮಾಡ್ಕೊಂಡಿದ್ದಾರೆ. ಒಟ್ನಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೆ ಎಲ್ಲರೂ ಒಂದೇ ಕಣ್ಣಲ್ಲಿ ಕಣ್ಣೀರಿಡ್ತಿದ್ದಾರೆ ಎನ್ನಲಾಗಿದೆ. ಇತ್ತ ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳೇ ಕಂಟಕವಾಗಿ ಕಾಡೋದಕ್ಕೆ ಶುರುವಾಗಿವೆ.…
ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ರಸ್ತೆ ರಸ್ತೆಯಲ್ಲಿಯೂ ಟೂಲ್ಸ್ ಹಿಡಿದು ರಾಬರಿ ಮಾಡಲಾಗುತ್ತಿದೆ. ಅದರಂತೆ ಇದೀಗ ಡಿಲವರಿ ಬಾಯ್ ಅಡ್ಡಹಗಟ್ಟಿ ರಾಬರಿ ಮಾಡಲಾಗಿದೆ. ತಲ್ವಾರ್ ನಿಂದ ಹೊಡೆದು ಅಟ್ಟಹಾಸ ಮೆರೆಯಲಾಗಿದೆ. ಒಂದೇ ಕಡೆ ಎರಡೆರಡು ಘಟನೆ ನಡೆದರು ಪೊಲೀಸರು ಕ್ಯಾರೆ ಅಂದಿಲ್ಲ. ಹೊಟ್ಟೆಪಾಡಿಗಾಗಿ ಮಧ್ಯರಾತ್ರಿವರೆಗು ಡಿಲವರಿ ಬಾಯ್ಸ್ ಕೆಲಸ ಮಾಡ್ತಾರೆ. ಆದರೆ ಈ ಪುಂಡರು ಅವರನ್ನೇ ಹೆದರಿಸಿ ಕಿತ್ತು ತಿನ್ನುತ್ತಾರೆ. ಆಗಸ್ಟ್ 4 ಮತ್ತು 20 ರ ಮಧ್ಯರಾತ್ರಿ ಒಂದೇ ಕಡೆ ಎರಡು ಬಾರಿ ರಾಬರಿ ನಡೆದಿದೆ. ಕೋನೇನ ಅಗ್ರಹಾರ ವಿನಾಯಕನಗರ ಬಿ ಬ್ಲಾಕ್ ನಲ್ಲಿ ಘಟನೆ ಹಾಗೂ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.
ವಿಶ್ವಸಂಸ್ಥೆ ನೇಮಿಸಿರುವ ವಿಶೇಷ ವರದಿಗಾರ ರಿಚರ್ಡ್ ಬೆನ್ನೆಟ್ ಅಫ್ಘಾನಿಸ್ತಾನದ ವಿರುದ್ಧ ಅಪಪ್ರಚಾರ ಮಾಡುತ್ತಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ರಿಚರ್ಡ್ ಅವರನ್ನು ತಾಲಿಬಾನ್ ಅಫ್ಘಾನಿಸ್ತಾನ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ವರದಿಗಳು ಉಲ್ಲೇಖಿಸಿವೆ. 2021ರಲ್ಲಿ ಅಫ್ಘಾನಿಸ್ತಾನ ತಾಲಿಬಾನ್ ನಿಯಂತ್ರಣಕ್ಕೆ ಬಂದ ಬಳಿಕ ಆ ದೇಶದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡಲು ಬೆನೆಟ್‍ರನ್ನು 2022ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ನೇಮಕಗೊಳಿಸಿತ್ತು. ತಾಲಿಬಾನ್‍ಗಳು ಮಹಿಳೆಯರು ಮತ್ತು ಹುಡುಗಿಯರನ್ನು ನಡೆಸಿಕೊಳ್ಳುವುದು ಮಾನವೀಯತೆಯ ವಿರುದ್ಧದ ಅಪರಾಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದ ಬೆನೆಟ್ ಅಫ್ಘಾನಿಸ್ತಾನದಿಂದ ಹೊರಗೆ ನೆಲೆಸಿದ್ದಾರೆ. ಆದರೆ ಪರಿಸ್ಥಿತಿಯನ್ನು ಪರಾಮರ್ಶಿಸಲು ಹಲವು ಬಾರಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಕೆಲಸದ ಸಮಯದಲ್ಲಿ ವೃತ್ತಿಪರತೆಗೆ ಬದ್ಧವಾಗಿರಲು ಬೆನೆಟ್‍ಗೆ ಪದೇ ಪದೇ ವಿನಂತಿಸಿದ ನಂತರವೂ, ಅವರ ವರದಿಗಳು ಪೂರ್ವಾಗ್ರಹ ಪೀಡಿತವಾಗಿದ್ದು ಅಫ್ಘಾನಿಸ್ತಾನ ಮತ್ತು ಅಫ್ಘಾನಿಸ್ತಾನದ ಜನತೆಯ ಹಿತಾಸಕ್ತಿಗಳಿಗೆ ಹಾನಿಕಾರಕವಾದ ಉಪಾಖ್ಯಾನಗಳನ್ನು ಆಧರಿಸಿವೆ ಎಂದು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಅಫ್ಘಾನಿಸ್ತಾನಕ್ಕೆ ಪ್ರಯಾಣಿಸಲು ವೀಸಾ ಪಡೆಯಲು ಸಾಧ್ಯವಾಗದು ಎಂದು ಅಫ್ಘಾನಿಸ್ತಾನದ…
45 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್ ಮತ್ತು ಉಕ್ರೇನ್‌ಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಪೋಲೆಂಡ್ ರಾಜಧಾನಿ ವಾಸಾಕ್ಕೆ ಬಂದಿಳಿದಿರುವ ಮೋದಿ ಅವರು ಇಲ್ಲಿ ಎರಡು ದಿನಗಳು ವಾಸ್ತವ್ಯ ಹೂಡಲಿದ್ದಾರೆ. ಇದು 45 ವರ್ಷಗಳ ನಂತರ ಈ ದೇಶಕ್ಕೆ ಭಾರತದ ಪ್ರಧಾನಿಯೊಬ್ಬರ ಮೊದಲ ಅಧಿಕೃತ ಭೇಟಿಯಾಗಿದೆ. ಪೋಲೆಂಡ್ ಪ್ರವಾಸದ ನಂತರ ಮೋದಿ ಅವರು ಇದೇ 23ರಂದು ಉಕ್ರೇನ್ ರಾಜಧಾನಿ ಕೀವ್‌ಗೆ ಭೇಟಿ ಕೊಡಲಿದ್ದಾರೆ. ಅಂದು ಸುಮಾರು ಏಳು ತಾಸು ಅವರು ಕೀವ್‌ನಲ್ಲಿ ಇರಲಿದ್ದಾರೆ. ಪೋಲೆಂಡ್‌ನಿಂದ ಕೀವ್‌ಗೆ ‘ರೈಲ್ ಫೋರ್ಸ್ ಒನ್’ ರೈಲಿನಲ್ಲಿ ಮೋದಿ ಅವರು ಹೋಗಿ ಬರಲಿದ್ದಾರೆ. ಎರಡೂ ಕಡೆಯ ಪ್ರಯಾಣ ಅವಧಿ ಒಟ್ಟು 20 ತಾಸು ಆಗಲಿದೆ. ಅದಕ್ಕಾಗಿ ವಿಶೇಷ ರೈಲಿನ ವ್ಯವಸ್ಥೆಯನ್ನು ಮಾಡಲಾಗಿದೆ. 1991ರಲ್ಲಿ ಉಕ್ರೇನ್ ಸ್ವತಂತ್ರವಾದ ನಂತರ ಭಾರತದ ಪ್ರಧಾನಿಯೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ನವದೆಹಲಿಯಿಂದ ಪ್ರಯಾಣ ಹೊರಡುವ ಮೊದಲು ಮೋದಿ ಅವರು ಉಕ್ರೇನ್ ಸಂಘರ್ಷ ಉಲ್ಲೇಖಿಸಿ,…