Author: Prajatv Kannada

ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ಭೂಲ್ ಭುಲಯ್ಯ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ಚಿತ್ರದ ಸೀಕ್ವೆಲ್​ಗೆ ಅಕ್ಷಯ್ ಕುಮಾರ್ ಬದಲು ಕಾರ್ತಿಕ್ ಆರ್ಯನ್ ಅವರನ್ನು ಹಾಕಿಕೊಳ್ಳಲಾಯಿತು. ಹೀಗಾದಾಗ ಯಾರಿಗಾದರೂ ಬೇಸರ ಆಗಿಯೇ ಆಗುತ್ತದೆ. ಅಕ್ಷಯ್ ಕುಮಾರ್ ಅವರಿಗೂ ಈ ವಿಚಾರದಲ್ಲಿ ಬೇಸರ ಆಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಈ ಬಗ್ಗೆ ನಟ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ‘ಭೂಲ್ ಭುಲಯ್ಯ 3’ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದ ಮೂಲಕ ನಟಿ ವಿದ್ಯಾ ಬಾಲನ್ ಕಂಬ್ಯಾಕ್ ಮಾಡುತ್ತಿದ್ದಾರೆ. ಅದೇ ರೀತಿ ಅಕ್ಷಯ್ ಕುಮಾರ್ ಅವರ ಆಗಮನವೂ ಆಗಲಿದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಆ ರೀತಿ ಆಗಿಲ್ಲ. ಈ ವದಂತಿಗೆ ಅಕ್ಷಯ್ ಕುಮಾರ್ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ‘ನಾನು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅದು ಫೇಕ್ ನ್ಯೂಸ್’ ಎಂದು ಹೇಳಿದ್ದಾರೆ.…

Read More

ಹುಬ್ಬಳ್ಳಿ: ಹಿಂದುಗಳ ಬಹು ದೊಡ್ಡ ಹಬ್ಬ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆ. 25, 26 & 27ರಂದು ರಾಯಾಪುರ ಬಳಿಯ ಹುಬ್ಬಳ್ಳಿ ಧಾರವಾಡ ಇಸ್ಕಾನ್ನಲ್ಲಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರಾಜೀವ ಲೋಚನದಾಸ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಕಾನ್ ಮಂದಿರದಲ್ಲಿ ಅಂದು ಇಡೀ ದಿನ ಕಾರ್ಯಕ್ರಮಗಳು ನಡೆಯಲಿವೆ. ಈ ಬಾರಿ ಸುಮಾರು 60 ಸಾವಿರ ಭಕ್ತರು ಶ್ರೀ ಕೃಷ್ಣ ಬಲರಾಮರ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿದ್ಯುತ್ ದೀಪ, ಪರಿಮಳಯುಕ್ತ ಹೂಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅಂದು ಬೆಳಗ್ಗೆ 4.30ಕ್ಕೆ ಕೃಷ್ಣ ಬಲರಾಮರಿಗೆ ಮಂಗಳಾರತಿಯೊಂದಿಗೆ ಜನ್ಮಾಷ್ಟಮಿ ಕಾರ್ಯಕ್ರಮ ಆರಂಭವಾಗಲಿವೆ. ವಿಶೇಷ ಅಲಂಕಾರ ನಡೆಯಲಿದೆ. ಬೆಳಗ್ಗೆ 7.30ಕ್ಕೆ ಶೃಂಗಾರ ಆರತಿ ಮುಖಾಂತರ ದೇವಸ್ಥಾನದಲ್ಲಿ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ. ಮಧ್ಯರಾತ್ರಿವರೆಗೂ ಅನೇಕ ಭಕ್ತರು ಉಪವಾಸ ವ್ರತ ಕೈಗೊಳ್ಳುವರು. ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುವರು ಎಂದರು. ದೇವಸ್ಥಾನದ ಮುಖ್ಯಸಭಾಂಗಣದಲ್ಲಿ ಬೆಳಗ್ಗೆ 8ರಿಂದ ಅರ್ಚನೆ, ಆರತಿಗಳು ನಿರಂತರವಾಗಿ ನಡೆಯಲಿವೆ.…

Read More

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭಗೊಂಡಿದೆ. ಮೈಸೂರಿನಲ್ಲಿ ಗತ ವೈಭವ ಕಳೆಗಟ್ಟುತ್ತಿವೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಸಮಾರಂಭ ನಡೆಯಲಿದೆ. ಗಜಪಯಣ ಕಾರ್ಯಕ್ರಮದ ಮೂಲಕ ಕಾಡಿನಿಂಡ ನಾಡಿಗೆ ಗಜಪಡೆ ಆಗಮಿಸಿವೆ.. ವೀರನಹೊಸಹಳಗಳ್ಳಿಯಿಂದ ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಅಂಡ್ ಟೀಂ ಆಗಮಿಸಿವೆ. ಮೈಸೂರು- ಕೊಡಗು ಜಿಲ್ಲೆ ಗಡಿ ವೀರನಹೊಸಹಳ್ಳಿ ಬಳಿ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ದಸರಾ ಸಮಿತಿಯಿಂದ ಬರ ಮಾಡಿಕೊಳ್ಳಲಾಯಿತು. ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ವಿಶೇಷ ಪೂಜೆಯನ್ನು ಸಚಿವರಾದ ಡಾ.ಮಹದೇವಪ್ಪ, ಈಶ್ವರ್‌ ಖಂಡ್ರೆ ಮತ್ತಿತರರು ಸಲ್ಲಿಸಿದರು. ಅಭಿಮನ್ಯು ನೇತೃತ್ವದಲ್ಲಿ ಒಟ್ಟು ಒಂಬತ್ತು ಆನೆಗಳು ಮೊದಲನೇ ತಂಡದಲ್ಲಿ ಮೈಸೂರು ಕಡೆಗೆ ಹೆಜ್ಜೆ ಹಾಕಿದವು, ದಸರಾ ಆನೆಗಳು ಹತ್ತು ತಿಂಗಳು ಕಾಡಿನಲ್ಲಿದ್ದರೆ. ಎರಡು ತಿಂಗಳು ಮೈಸೂರಿನಲ್ಲಿರಲಿವೆ. ಅವುಗಳಿಗೆ ವಿಶೇಷ ಆರೈಕೆಯನ್ನು ಈ ವೇಳೆ ಮಾಡಲಾಗುತ್ತದೆ.

Read More

ಬ್ರಿಟನ್ ಪುರುಷರ ವೀರ್ಯಾಣುಗಳನ್ನು ಅತಿ ಹೆಚ್ಚು ರಫ್ತು ಮಾಡುವ ದೇಶವಾಗಿದೆ ಎಂದು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ. ಯುಕೆ ವೀರ್ಯಕ್ಕೆ ಇತರ ದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದ್ದು, ಇದು ವಿಶ್ವಾದ್ಯಂತ ಹೆಚ್ಚಿನ ಸಂಖ್ಯೆಯ ಶಿಶುಗಳಿಗೆ ಕಾರಣವಾಗಿದೆ ಮತ್ತು ಜೈವಿಕವಾಗಿ ಅವರೆಲ್ಲರೂ ಒಡಹುಟ್ಟಿದವರು ಎಂದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದಿ ಗಾರ್ಡಿಯನ್ ಪ್ರಕಾರ, ಯು.ಕೆ. ಫಲವತ್ತತೆ ಚಿಕಿತ್ಸಾಲಯಗಳಲ್ಲಿ 10 ಕ್ಕಿಂತ ಹೆಚ್ಚು ಕುಟುಂಬಗಳನ್ನು ರಚಿಸಲು ಒಬ್ಬ ದಾನಿಯನ್ನು ಬಳಸಬಹುದು, ದೇಶದಿಂದ ವೀರ್ಯ ಅಥವಾ ಅಂಡಾಣುಗಳನ್ನು ವಿದೇಶಕ್ಕೆ ಕಳುಹಿಸಲು ಯಾವುದೇ ನಿರ್ಬಂಧವಿಲ್ಲ. ಈ ಕಾನೂನು ಲೋಪದೋಷವನ್ನು ಉದ್ಯಮ ಮಟ್ಟದ ಅಭ್ಯಾಸದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದು ಕೆಲವು ದಾನಿ-ಗರ್ಭಧರಿಸಿದ ಮಕ್ಕಳು ಯುರೋಪ್ ಮತ್ತು ಅದರಾಚೆಗಿನ ಡಜನ್ಗಟ್ಟಲೆ ಜೈವಿಕ ಅರ್ಧ-ಒಡಹುಟ್ಟಿದವರೊಂದಿಗೆ ಸಂಬಂಧಗಳನ್ನು ಮುಂದುವರಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಏತನ್ಮಧ್ಯೆ, ನಿರ್ಬಂಧಗಳನ್ನು ಬಿಗಿಗೊಳಿಸುವಂತೆ ತಜ್ಞರು ಮಾನವ ಫಲೀಕರಣ ಮತ್ತು ಭ್ರೂಣಶಾಸ್ತ್ರ ಪ್ರಾಧಿಕಾರಕ್ಕೆ (ಎಚ್‌ಎಫ್‌ಇಎ) ಕರೆ ನೀಡುತ್ತಿದ್ದಾರೆ. ದಿ ಗಾರ್ಡಿಯನ್ ಪ್ರಕಾರ, ಅಸೋಸಿಯೇಷನ್ ಫಾರ್ ರಿಪ್ರೊಡಕ್ಟಿವ್ ಅಂಡ್ ಕ್ಲಿನಿಕಲ್ ಸೈಂಟಿಸ್ಟ್ಸ್ (ಎಆರ್ಸಿಎಸ್) ಅಧ್ಯಕ್ಷ ಪ್ರೊಫೆಸರ್ ಜಾಕ್ಸನ್ ಕಿರ್ಕ್ಮನ್-ಬ್ರೌನ್,…

Read More

ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಮಾಡೆಲ್ ಮೈಕಲ್ ಪ್ರತಿಯೊಬ್ಬರಿಗು ಚಿರಪರಿಚಿತರಾಗಿದ್ದಾರೆ. ಇಂಟರ್ನ್ಯಾಷನಲ್ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಮೈಕಲ್ ಗೆ ಕನ್ನಡದ ಮೇಲಿರುವ ಅಭಿಮಾನ ನೋಡಿ ಸಾಕಷ್ಟು ಮಂದಿ ದಿಲ್ ಖುಷ್ ಆಗಿದ್ದಾರೆ. ಸದ್ಯ ಗೋವಾ ಟ್ರಿಪ್ ಹೋಗಿರುವ ಮೈಕಲ್ ಈ ವೇಳೆ ಸಮುದ್ರ ತೀರದಲ್ಲಿ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಮೈಕೆಲ್ ಬೀಚ್ ನಲ್ಲಿ ಸಖತ್ತಾಗಿರೋ ಫೋಟೋ ಶೂಟ್ ಮಾಡಿಸಿದ್ದಾರೆ. ಯಾವ ನಟಿಯರಿಗೂ ಕಮ್ಮಿ ಇಲ್ಲದಂತೆ ಮೈಕಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಮೈಕಲ್ ಮೈಮಾಟಕ್ಕೆ ಗುಡುಗರ ಕಣ್ ಕಣ್ ಅರಳಿಸ್ತಿದ್ರೆ ಹುಡುಗಿರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಗೋವಾ ಬೀಚ್ ನಲ್ಲಿ ಮೈಕಲ್ ವಾಕಿಂಗ್ ಸ್ಟೈಲ್ ನಲ್ಲಿ ಫೋಟೋಗೆ ಫೋಸ್ ನೀಡಿದ್ದಾರೆ. ಇದರಲ್ಲಿ ಮೈಕಲ್ ಫಿಸಿಕ್ ಎದ್ದು ಕಾಣುತ್ತಿದ್ದು ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ. ಕಟ್ಟುಮಸ್ತಾದ ದೇಹ ಸಿರಿಗೆ ಪ್ರತಿಯೊಬ್ಬರು ಫಿದಾ ಆಗಿದ್ದಾರೆ. ಮೈಕೆಲ್ ಇಂಟರ್ನ್ಯಾಷನಲ್ ಮಾಡೆಲ್ ಆಗಿದ್ದರು ಹೆಚ್ಚು ಖ್ಯಾತಿ ಘಳಿಸಿದ್ದರು ಬಿಗ್ ಬಾಸ್ ಮೂಲಕವೇ. ಬಿಗ್ ಬಾಸ್ ಮೂಲಕ…

Read More

ಪತ್ನಿ ಸೇರಿದಂತೆ 42 ಮಹಿಳೆಯರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಿ ಕ್ವಾರಿಗೆ ಎಸೆದಿದ್ದು ಕೀನ್ಯಾದ ಸರಣಿ ಹಂತಕ ಕಾಲಿನ್ಸ್ ಜುಮೈಸಿ ಖಲುಶಾ ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೀನ್ಯಾವನ್ನು ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ 33 ವರ್ಷದ ಖಲುಶಾ ಆಗಸ್ಟ್ 19ರಂದು ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿಯಾಗಿದೆ. ಕೀನ್ಯಾವನ್ನು ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ 33 ವರ್ಷದ ಖಲುಶಾ ಆಗಸ್ಟ್ 19ರಂದು ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 9 ಮಹಿಳೆಯರ ಮೃತದೇಹಗಳು ನೈರೋಬಿಯ ಕ್ವಾರಿಯೊಂದರಲ್ಲಿ ಪತ್ತೆಯಾದ ಬಳಿಕ ಭಾರಿ ಕಾರ್ಯಾಚರಣೆ ನಡೆಸಿದ ಕೀನ್ಯಾ ಪೊಲೀಸರು ಜುಲೈ 16 ರಂದು ಖಲುಶಾನನ್ನು ಬಂಧಿಸಿದ್ದರು. ಆದರೆ ಈಗ ಆತ ಜೇಲಿನಿಂದ ಪರಾರಿಯಾಗಿದ್ದು, ನೈರೋಬಿ ಮಹಿಳೆಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಪ್ರೇಮ ವೈಫಲ್ಯದ ಬಳಿಕ ಆತ ಮಹಿಳೆಯರಿಗೆ ಆಮಿಷ ತೋರಿಸಿ ನಂತರ ಅವರನ್ನು ಭೀಕರವಾಗಿ ಹತ್ಯೆಗೈದು ಕ್ವಾರಿಗೆ ಎಸೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.…

Read More

ಇರಾನ್​ನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಪಾಕಿಸ್ತಾನದಿಂದ ಇರಾಕ್​ಗೆ ಹೊರಟಿದ್ದ 35 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಕನಿಷ್ಠ 18 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ. ಪಾಕಿಸ್ತಾನದಿಂದ ಇರಾಕ್‌ಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಇರಾನ್‌ನ ಯಾಜ್ದ್ ಪ್ರಾಂತ್ಯದಲ್ಲಿ ಉರುಳಿಬಿದ್ದಿದ್ದು, ಕನಿಷ್ಠ 35 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ 53 ಪ್ರಯಾಣಿಕರು ಇದ್ದರು, ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರದವರಾಗಿದ್ದಾರೆ. ಇರಾನ್‌ನ ಸರ್ಕಾರಿ ಸ್ವಾಮ್ಯದ ಐಆರ್​ಎನ್​ಎ ಸುದ್ದಿ ಸಂಸ್ಥೆ ಪ್ರಕಾರ, ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 18 ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಶಿಯಾ ಯಾತ್ರಿಕರು ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ತೆರಳಿದ್ದರು. ಪಾಕಿಸ್ತಾನದಿಂದ ಬಂದ ಯಾತ್ರಿಕರು ಶಿಯಾ ಸಮುದಾಯಕ್ಕೆ ಸೇರಿದವರು. ಈ ದಿನದಂದು ಹೆಚ್ಚಿನ ಸಂಖ್ಯೆಯ ಶಿಯಾಗಳು ಕರ್ಬಲಾಕ್ಕೆ ಭೇಟಿ ನೀಡುತ್ತಾರೆ. ಬಸ್‌ನ ಬ್ರೇಕ್…

Read More

ನಾವೆಲ್ಲರೂ ನಮ್ಮ ಮನೆಗಳನ್ನು ಸುಂದರವಾದ ಪೀಠೋಪಕರಣಗಳಿಂದ ಅಲಂಕರಿಸುವುದನ್ನು ಇಷ್ಟಪಡುತ್ತೇವೆ. ಅದಕ್ಕಾಗಿಯೇ ಅನೇಕ ವಸ್ತುಗಳನ್ನ ಸಹ ನಾವು ತಂದು ಇಟ್ಟುಕೊಳ್ಳುತ್ತೇವೆ. ಹೂವಿನ ಕುಂಡ, ಟೇಬಲ್, ಫೋಟೋ, ಪೇಂಟಿಂಗ್ ಹೀಗೆ ವಿಭಿನ್ನವಾದ ವಸ್ತುಗಳನ್ನ ತಂದು ನಾವು ಮನೆಯ ಅಲಂಕಾರ ಮಾಡುತ್ತೇವೆ. ಈ ವಸ್ತುಗಳು ನಮ್ಮ ಮನೆಯ ಅಂದವನ್ನ ಹೆಚ್ಚಿಸುತ್ತದೆ. ಈ ರೀತಿಯ ವಸ್ತುಗಳಲ್ಲಿ ನವಿಲು ಗರಿ ಸಹ ಒಂದು. ಹಾಗಾಗಿಯೇ ಅನೇಕ ಜನರು ನವಿಲು ಗರಿಯನ್ನ ಅಥವಾ ಅದರಿಂದ ಮಾಡಿದ ಸಣ್ಣ ಕೈ ಫ್ಯಾನ್​ಗಳನ್ನ ಇಟ್ಟುಕೊಂಡಿರುತ್ತದೆ. ಇದು ಮನೆಗೆ ಒಂಥರ ಲುಕ್ ಕೊಡುತ್ತದೆ ಎನ್ನಬಹುದು. ಪ್ರತಿಯೊಬ್ಬರಿಗೂ ಸಂಪತ್ತು ಪಡೆಯಬೇಕು ಎನ್ನುವ ಆಸೆ ಇರುತ್ತದೆ. ಹಾಗಾಗಿ ಅನೇಕ ಪ್ರಯತ್ನಗಳನ್ನ ಮಾಡುತ್ತಾರೆ. ಕೆಲವರು ಅದೆಷ್ಟೇ ಹಣವನ್ನ ಗಳಿಸಿದರೂ ಸಹ ಅದನ್ನ ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ ಅದಕ್ಕೆ ಸಹ ಈ ನವಿಲು ಗರಿ ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯ ದೇವ ಮತ್ತು ಇಂದ್ರ ದೇವ ಪೂರ್ವ ದಿಕ್ಕಿನ ಅಧಿಪತಿಗಳು. ಹಾಗಾಗಿ ಮನೆಯ ಪೂರ್ವ ದಿಕ್ಕಿನಲ್ಲಿ ನವಿಲು…

Read More

ಹಬ್ಬದ ಋತುವಿನಲ್ಲಿ ಮೇಕಪ್ ಇಲ್ಲದೆ ನೈಸರ್ಗಿಕ ಹೊಳಪನ್ನು ಸಾಧಿಸಲು ಕೆಲವು ಸುಲಭ ಸಲಹೆಗಳನ್ನು ಈ ಕೆಳಗೆ ತಿಳಿಸಲಾಗಿದೆ. ನಿಮ್ಮ ಚರ್ಮದ ಪ್ರಕಾರಕ್ಕೆ ಹೊಂದುವ ಸೌಮ್ಯವಾದ ಕ್ಲೆನ್ಸರ್‌ನೊಂದಿಗೆ ಪ್ರಾರಂಭಿಸಿ ಕ್ಯಾಮೊಮೈಲ್ ಅಥವಾ ಗ್ರೀನ್‌ ಟೀಯಂಥ ಪದಾರ್ಥಗಳನ್ನು ಪರಿಗಣಿಸಿ. ಇದು ನಿಮ್ಮ ಚರ್ಮವನ್ನು ಅದರ ನೈಸರ್ಗಿಕ ತೈಲಗಳನ್ನು ತೆಗೆದುಹಾಕದೆಯೇ ಸ್ವಚ್ಛಗೊಳಿಸಬಹುದು. ಇದಕ್ಕೆ ಪರ್ಯಾಯವಾಗಿ,ನೀವು ನೈಸರ್ಗಿಕ ಕ್ಲೆನ್ಸರ್ ಕೂಡ ಮಾಡಬಹುದು. ಇದಕ್ಕಾಗಿ ಜೇನುತುಪ್ಪ ಮತ್ತು ಹಾಲನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ. ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಹಾಲು ನಿಧಾನವಾಗಿ ಚರ್ಮವನ್ನು ಎಫ್ಫೋಲಿಯೇಟ್ ಮತ್ತು ಹೈಡ್ರೇಟ್ ಮಾಡುತ್ತದೆ. ಕೊಳಕು ಮತ್ತು ಕಲ್ಮಶಗಳನ್ನು ತೆಗೆದುಹಾಕಲು ನಿಮ್ಮ ಮುಖವನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಿ. ಡೆಡ್‌ಸ್ಕಿನ್‌ ತೆಗೆದುಹಾಕಲು ನಿಮ್ಮ ಚರ್ಮವನ್ನು ವಾರಕ್ಕೆ 2-3 ಬಾರಿ ಎಫ್ಫೋಲಿಯೇಟ್ ಮಾಡಿ. ಚರ್ಮವನ್ನು ಹೈಡ್ರೀಕರಿಸಿ ನಿಮ್ಮ ಚರ್ಮವನ್ನು ಹೈಡ್ರೀಕರಿಸಿಸುವುದು ಬಹಳ ಮುಖ್ಯ. ಇದಕ್ಕಾಗಿ ಶಿಯಾ ಬೆಣ್ಣೆ, ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆಯಂತಹ ಪದಾರ್ಥಗಳನ್ನು ಹೊಂದಿರುವ ನೈಸರ್ಗಿಕ ಮಾಯಿಶ್ಚರೈಸರ್ ಬಳಸಿ. ಪದಾರ್ಥಗಳು ಚರ್ಮವನ್ನು…

Read More