ಆಂದ್ರದ ಖ್ಯಾತ ಜ್ಯೋತಿಷಿ, ಅದರಲ್ಲೂ ಸಿನಿ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಹಲವು ಸೆಲಬ್ರಿಟಿಗಳ ಜ್ಯೋತಿಷ್ಯ ಹೇಳುವ ಮೂಲಕ ಖ್ಯಾತಿ ಘಳಿಸಿದ್ದ ಜ್ಯೋತಿಷಿ ವೇಣುಸ್ವಾಮಿಯವರ ಗ್ರಹಚಾರ ಕೆಟ್ಟಂತಿದೆ. ಇದುವರೆಗೂ ಸಿನಿಮಾ ರಂಗದ ಘಟಾನುಘಟಿಗಳ ಭವಿಷ್ಯ ನುಡಿದು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ವೇಣುಸ್ವಾಮಿ ತಮ್ಮ ಪತ್ನಿ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.’ ವೇಣುಸ್ವಾಮಿ ಪತ್ನಿ ಜೊತೆ ಆತ್ಮಹತ್ಯೆಗೆ ಯತ್ನಿಸಿದ್ದು ಈ ಸುದ್ದಿ ಹೈದರಾಬಾದ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ವೇಣುಸ್ವಾಮಿ ಹಾಗೂ ಅವರ ಪತ್ನಿ ವೀಣಾ ಶ್ರೀವಾಣಿ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿಗಷ್ಟೇ ವೇಣುಸ್ವಾಮಿ ತೆಲುಗು ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಲಿಪಾಲ ವೈವಾಹಿಕ ಜೀವನದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದರು. ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ ಮೆಂಟ್ ಮಾಡಿಕೊಂಡ ಮರುದಿನವೇ ಚೈತನ್ಯ ಹಾಗೂ ಶೋಭಿತಾ ಮದುವೆಯಾದರೆ ತುಂಬಾ ವರ್ಷ ಒಟ್ಟಿಗೆ ಇರೋದಿಲ್ಲ ಎಂದು ಹೇಳಿದ್ದರು. ಶೋಭಿತಾ ಜಾತಕ ಸರಿ ಇಲ್ಲ. ನಾಗಚೈತನ್ಯ ಹಾಗೂ ಶೋಭಿತಾ ಸಾಂಸಾರಿಕ…
Author: Prajatv Kannada
ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಕ್ರೇನ್ ಗೆ ಭೇಟಿ ನೀಡಲಿದ್ದಾರೆ. ಮೋದಿ ಸ್ವಾಗತಕ್ಕಾಗಿ ಉಕ್ರೇನ್ನಲ್ಲಿ ವಿಶೇಷ ರೈಲು ರೆಡಿಯಾಗಿದ್ದು ಆ ರೈಲಿನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ 20 ಗಂಟೆಗಳ ಕಾಲ ಪ್ರಯಾಣ ಮಾಡಲಿದ್ದಾರೆ. ಇದು ಕೇವಲ ಒಂದು ಪ್ರಯಾಣವಲ್ಲ, ಮೋದಿ ತಮ್ಮ ಬದುಕಿನಲ್ಲಿ ಈ ಹಿಂದೆ ವಿಶ್ವದ ಹಲವು ನಾಯಕರು ಕೈಗೊಂಡಂತಹ ವಿಶೇಷ ರೈಲು ಪ್ರಯಾಣ ಮಾಡಲಿದ್ದಾರೆ. ಅತ್ಯಂತ ಐಷಾರಾಮಿ ಹಾಗೂ ಹೈ ಸೆಕ್ಯೂರಿಟಿ ಗುಣಗಳನ್ನು ಹೊಂದಿರುವ ಈ ರೈಲಿನಲ್ಲಿ ಈ ಹಿಂದೆ ಅಮೆರಿಕಾದ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರೆಲ್, ಜರ್ಮನ್ನ ಚಾನ್ಸಲರ್ ಒಲಾಫ್ ಸ್ಕೋಲ್ಜ್ನಂತ ಗಣ್ಯರು ಪ್ರಯಾಣ ಮಾಡಿದ್ದಾರೆ. ಈ ಟ್ರೇನ್ನ್ನು ವಿಶೇಷವಾಗಿ ಡಿಸೈನ್ ಮಾಡಿ ರೆಡಿ ಮಾಡಲಾಗಿದೆ. ಎಂತಹುದೇ ದಾಳಿಯನ್ನು ಸರಳವಾಗಿ ತಡೆಗಟ್ಟುವ ಹೈ ಸೆಕ್ಯೂರಿಟಿಯನ್ನೊಳಗೊಂಡ ಈ ಟ್ರೇನ್ ಇದಾಗಿದೆ. ಕಟ್ಟಿಗೆಯಿಂದ ನಿರ್ಮಾಣವಾದ ಕ್ಯಾಬಿನ್ನಲ್ಲಿ ಅಗತ್ಯವಾದ ಐಷಾರಾಮಿ ವಿಶ್ರಾಂತಿ ಕೋಣೆಯಿದ್ದು, ಮೀಟಿಂಗ್ಗಳನ್ನು ನಡೆಸಲು ಬಹುದೊಡ್ಡದಾದ ಟೇಬಲ್ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿದೆ. ದೊಡ್ಡದಾದ ಟಿವಿ, ಐಷಾರಾಮಿ…
ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಸೋಮವಾರ ರಾತ್ರಿ ತಮ್ಮ ರಾಜಕೀಯದ ಕೊನೆಯ ಭಾಷಣ ಮಾಡಿದ್ದು ಈ ವೇಳೆ ನೆರೆದಿದ್ದ ಜನಸಮೂಹ ಚಪ್ಪಾಳೆಯ ಸುರಿಮಳೆ ಗೈದಿದ್ದಾರೆ. ಡೆಮಾಕ್ರಟಿಕ್ ನ್ಯಾಷನಲ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಜೋ ಬೈಡನ್ಗೆ ಅಮೆರಿಕಾದ ಪ್ರಜೆಗಳು ಮನದುಂಬಿ ವಿದಾಯ ಹೇಳಿದರು. ಸಮಾವೇಶದಲ್ಲಿ ನೆರೆದಿದ್ದ ಸಹಸ್ರ ಸಹಸ್ರ ಸಂಖ್ಯೆಯ ಡೆಮಾಕ್ರಟಿಕ್ ನ್ಯಾಷನಲ್ ಪಕ್ಷದ ಬೆಂಬಲಿಗರು ನಿರಂತರ 4 ನಿಮಿಷಗಳ ಕಾಲ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಅಧ್ಯಕ್ಷನನ್ನು ಬೀಳ್ಕೊಟ್ಟರು. ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ 81 ವರ್ಷದ ಜೋ ಬೈಡನ್ ಮುಂದಿನ ಚುನಾವಣೆಯಿಂದ ಹಿಂದೆ ಸರಿಯಬೇಕು ಎಂಬ ಮಾತುಗಳು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಬೈಡನ್ ನಿರ್ಧರಿಸಿದ್ದರು. ಅಲ್ಲದೆ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಮುಂದಿನ ಅಧ್ಯಕ್ಷ ಅಭ್ಯರ್ಥಿಯನ್ನಾಗಿ ಕಮಲಾ ಹ್ಯಾರಿಸ್ ಹೆಸರು ಸೂಚಿಸುವ ಮೂಲಕ ಸಕ್ರಿಯ ರಾಜಕಾರಣದಿಂದ ಜೋ ಬೈಡನ್ ದೂರ ಸರಿದರು. ದೂರ ಸರಿದ ನಾಯಕನಿಗೆ ಹೃದಯತುಂಬಿ ವಿದಾಯ ಹೇಳುವುದಕ್ಕೂ,…
ಮೈಸೂರು: ಸಿಎಂ ಸಿದ್ದರಾಮಯ್ಯ ಮುಂದೆ ಕಾನೂನಿನ ಸಂಕಷ್ಟ ಎದುರಾಗಿದೆ. ತಮ್ಮ 40 ವರ್ಷಗಳ ರಾಜಕಾರಣದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಂಕಷ್ಟ ಎದುರಿಸುತ್ತಿದ್ದು ಸಹಜವಾಗಿಯೇ ಅವರ ಇಡೀ ಕುಟುಂಬಕ್ಕೆ ಮಾನಸಿಕವಾಗಿ ಆಘಾತವಾಗಿದೆ. ಇದೇ ಮೊದಲ ಬಾರಿಗೆ ಅದನ್ನು ಪುತ್ರ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಬಹಿರಂಗವಾಗಿ ವ್ಯಕ್ತಪಡಿಸಿದರು. ತಮ್ಮ ತಂದೆ ಮೇಲಿನ ಆರೋಪಗಳ ಬಗ್ಗೆ ಮಾತಾಡುವಾಗ ಯತೀಂದ್ರ ಕಣ್ತುಂಬಿಕೊಂಡಿದ್ದಾರೆ. ನನಗೂ ನನ್ನ ತಾಯಿ ಇಬ್ಬರಿಗೂ ಈ ವಿಚಾರದಲ್ಲಿ ಅತೀವ ಬೇಸರವಾಗಿದೆ. ನನ್ನ ತಂದೆ ಏನೂ ತಪ್ಪು ಮಾಡಿಲ್ಲ. ಆದರೂ ಇಂತಹ ಸುಳ್ಳು ಸೃಷ್ಟಿಸಿದ್ದ ಕಾರಣ ಮಾನಸಿಕವಾಗಿ ನೊಂದಿದ್ದೇನೆ ಎಂದು ಹೇಳಿದ್ದಾರೆ. 2014 ರ ನಂತರ ಈ ರೀತಿಯ ಅನೀತಿ ರಾಜಕಾರಣ ಶುರುವಾಯ್ತು. ಅದರ ಭಾಗವೇ ಈ ಆರೋಪ ಎಂದು ಬೇಸರ ಹೊರಹಾಕಿದರು
ಕಾರವಾರ: ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬಾಳ್ಳುಪೇಟೆ ಮಾರ್ಗದ ರೈಲು ಹಳಿಯ ಮೇಲೆ ಭೂಕುಸಿತದಿಂದ ಮಣ್ಣು ಬಿದ್ದಿದ್ದು ಈ ಭಾಗದಲ್ಲಿ ತೆರಳುವ ರೈಲ್ವೆ ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಆದರೀಗ ಮಣ್ಣನ್ನು ತೆರವುಗೊಳಿಸಲಾಗಿದ್ದು ಎಂದಿನಂತೆ ಕರಾವಳಿ ಹಾಗೂ ಇತರೆ ಭಾಗಕ್ಕೆ ಸಂಚರಿಸುವ ರೈಲುಗಳು ಎಂದಿನಂತೆ ಆಗಸ್ಟ್ 20 ರಿಂದ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಆಗಸ್ಟ್ 20 ರಿಂದ ಈ ಭಾಗದ ರೈಲು ಸಂಚಾರ ಪುನರಾರಂಭ 1) ರೈಲು ಸಂಖ್ಯೆ- 16586 SMVT- ಮುರ್ಡೇಶ್ವರ – ಬೆಂಗಳೂರು ಎಕ್ಸ್‌ಪ್ರೆಸ್ 2) ರೈಲು ಸಂಖ್ಯೆ- 16585 SMVT – ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ 3) ರೈಲು ಸಂಖ್ಯೆ- 16595 KSR-ಬೆಂಗಳೂರು -ಕಾರವಾರ ಎಕ್ಸ್‌ಪ್ರೆಸ್ 4) ರೈಲು ಸಂಖ್ಯೆ-16596 -ಕಾರವಾರ KSR- ಬೆಂಗಳೂರು ಎಕ್ಸ್‌ಪ್ರೆಸ್ 5) ರೈಲು ಸಂಖ್ಯೆ- 16511KSR- ಬೆಂಗಳೂರು -ಕಣ್ಣೂರು ಎಕ್ಸ್‌ಪ್ರೆಸ್ 6) ರೈಲು ಸಂಖ್ಯೆ- 16511 KSR- ಕಣ್ಣೂರು- ಬೆಂಗಳೂರು ಎಕ್ಸ್‌ಪ್ರೆಸ್ 7) ರೈಲು ಸಂಖ್ಯೆ-16515- ಯಶವಂತಪುರ- ಕಾರವಾರ…
ಚಾಮರಾಜನಗರ:- ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಭಾರೀ ಮಳೆ ಆಗಿದೆ. ಕಳೆದ 4 ದಿನದಿಂದ ಪ್ರತಿದಿನ ಮದ್ಯಾಹ್ನದ ವೇಳೆ 1 ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಅವಾಂತರ ಸೃಷ್ಟಿ ಆಗಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ರಸ್ತೆ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಜಿಲ್ಲಾಡಳಿತ ಭವನ ಮುಂಭಾಗ ರಸ್ತೆ ಕೆರೆಯಂತಾಗಿದ್ದು, ರಸ್ತೆಯಲ್ಲಿ ಸಾಗಲು ವಾಹನ ಸವಾರರು ಸರ್ಕಸ್ ಮಾಡಿದ್ದಾರೆ. ಪ್ರತೀಬಾರೀ ಮಳೆಯಾದಗಲೆಲ್ಲ ಈ ರಸ್ತೆಯಲ್ಲಿ ಕೃತಕ ರಸ್ತೆ ನಿರ್ಮಾಣಗೊಳ್ಳಲಿದ್ದು, ಸಾರ್ವಜನಿಕರಿಂದ ಹಿಡಿಶಾಪ ಹಾಕಲಾಗಿದೆ.
ಮೊಸರನ್ನು ತಿನ್ನುವಾಗ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಿನ್ನಲು ಇಷ್ಟಪಡುತ್ತಾರೆ. ಕೆಲವರು ಉಪ್ಪು ಸೇರಿಸಿದ್ರೆ ಇನ್ನೂ ಕೆಲವರು ಸಕ್ಕರೆ ಸೇರಿಸುತ್ತಾರೆ. ಊಟದ ಜೊತೆಗೆ ಮೊಸರು ಇರಲೇಬೇಕು ಅಂತಾರೆ ಕೆಲವರು. ಆಯುರ್ವೇದದ ಪ್ರಕಾರವೂ ಮೊಸರಿನಲ್ಲಿ ಹತ್ತಾರು ಪೋಷಕಾಂಶಗಳು, ಔಷಧೀಯ ಗುಣಗಳು ಅಡಗಿವೆ. ಆದರೆ, ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಉಪಯೋಗವಾಗುತ್ತದೆ. ಹಾಗಾದ್ರೆ, ಮೊಸರನ್ನು ಸೇವಿಸುವ ಸರಿಯಾದ ಕ್ರಮ ಯಾವುದು ಗೊತ್ತಾ? ಕೆಲವರು ಮೊಸರನ್ನು ಸಕ್ಕರೆ ಜೊತೆ ತಿನ್ನಲು ಬಯಸಿದರೆ ಇನ್ನು ಕೆಲವರು ಉಪ್ಪಿನೊಂದಿಗೆ ತಿನ್ನಲು ಬಯಸುತ್ತಾರೆ. ಆದ್ರೆ ಹೀಗೆ ತಿನ್ನುವ ವಿಧಾನಗಳಲ್ಲಿ ಯಾವುದು ಆರೋಗ್ಯಕರ ಅಂತಾ ನಮಗೆ ಗೊತ್ತೇ ಇಲ್ಲ. ಹಾಗಿದ್ರೆ ಇಲ್ಲಿ ಸಕ್ಕರೆಯೊಂದಿಗೆ ಮೊಸರು ಮತ್ತು ಉಪ್ಪಿನೊಂದಿಗೆ ಮೊಸರು ಇವೆರೆಡರಲ್ಲಿ ಯಾವುದು ಆರೋಗ್ಯಕರ ಅಂತಾ ನೋಡೋಣ. ಸಕ್ಕರೆ ಮತ್ತು ಮೊಸರು ಮೊಸರು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಮತ್ತು ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದೆ, ಇದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಾಗಿವೆ. ಸಕ್ಕರೆಯನ್ನು ಇದಕ್ಕೆ ಸೇರಿಸಿದಾಗ ಮೊಸರು ಇನ್ನೂ…
ಪೇರಲ ಎಲೆಗಳು ಸಹ ಅನೇಕ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಉಪಯುಕ್ತವಾಗಿವೆ. ಇದರಲ್ಲಿ ಹಲವು ಬಗೆಯ ಔಷಧಗಳಿವೆ ಎನ್ನುತ್ತಾರೆ ತಜ್ಞರು.. ಈ ಎಲೆಗಳಿಂದ ದೀರ್ಘಕಾಲದ ಕಾಯಿಲೆಗಳನ್ನೂ ಗುಣಪಡಿಸಬಹುದು. ಪೇರಳೆ ಎಲೆಗಳನ್ನು ಸೇವಿಸುವುದರಿಂದ ಯಾವ ರೀತಿಯ ಸಮಸ್ಯೆಗಳಿಂದ ದೂರವಿರಬಹುದು ಎಂದು ಈಗ ತಿಳಿಯೋಣ. ಸಕ್ಕರೆ ಕಾಯಿಲೆ ನಿಯಂತ್ರಣ: ಪೇರಲ ಎಲೆಗಳನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಇದರಲ್ಲಿರುವ ಫೀನಾಲಿಕ್ ಸಂಯುಕ್ತವು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಮಧುಮೇಹಿಗಳು ಪೇರಲ ಎಲೆಗಳನ್ನು ಜಗಿಯುವುದು ತುಂಬಾ ಒಳ್ಳೆಯದು. ಬಿಪಿ ನಿಯಂತ್ರಣ: ಪೇರಲ ಎಲೆಗಳನ್ನು ತಿನ್ನುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು. ಪೇರಲ ಹಣ್ಣಿನಂತೆ, ಎಲೆಗಳಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಇವು ಬಿಪಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಾಗಿ ಬಿಪಿ ಇರುವವರು ಪೇರಲ ಹಣ್ಣನ್ನು ತಿಂದರೆ ಅಥವಾ ಎಲೆಗಳನ್ನು ಜಗಿಯಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ತೂಕ ನಷ್ಟವಾಗುತ್ತದೆ: ಪೇರಲ ಎಲೆಗಳನ್ನು ತಿನ್ನುವುದರಿಂದ ಅಧಿಕ ತೂಕದ ಸಮಸ್ಯೆಯೂ ಕಡಿಮೆಯಾಗುತ್ತದೆ.…