Author: Prajatv Kannada
ಇಟಲಿ ಕರಾವಳಿಯಲ್ಲಿ ವಿಹಾರ ನೌಕೆ ಮುಳುಗಿದ ಪರಿಣಾಮ ನೌಕೆಯಲ್ಲಿದ್ದ ‘ಬ್ರಿಟಿಷ್ ಬಿಲ್ ಗೇಟ್ಸ್’ ಎಂದೇ ಖ್ಯಾತಿಯಾಗಿದ್ದ ಸಾಫ್ಟ್‌ವೇರ್ ಉದ್ಯಮಿ ಮೈಕ್ ಲೆಂಚ್ ನಾಪತ್ತೆಯಾಗಿದ್ದಾರೆ. ಶನಿವಾರ ಇಟಲಿಯ ಸಿಸಿಲಿ ಕರಾವಳಿಯಲ್ಲಿ ಭಾರಿ ಬಿರುಗಾಳಿಗೆ ಸಿಕ್ಕು ವಿಹಾರ ನೌಕೆ ಮುಳುಗಿತ್ತು. ನೌಕೆಯಲ್ಲಿ ಮೈಕ್ ಲೆಂಚ್, ಅವರ ಹೆಂಡತಿ ಹಾಗೂ ಮಗಳು ಸೇರಿದಂತೆ 22 ಜನ ಇದ್ದರು. ಪತ್ತೆ ಕಾರ್ಯಾಚರಣೆ ನಡೆಯುತ್ತಿದ್ದು ಒಬ್ಬರ ಶವ ಪತ್ತೆಯಾಗಿದೆ. ಆದರೆ, ಮೈಕ್ ಅವರು ಇನ್ನೂ ಪತ್ತೆಯಾಗಿಲ್ಲ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹಡಗು ಬಿರುಗಾಳಿಗೆ ಸಿಕ್ಕ ಕೂಡಲೇ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣೆಗೆ ಧಾವಿಸಿ ಮೈಕ್ ಹೆಂಡತಿ ಸೇರಿದಂತೆ 15 ಜನರನ್ನು ರಕ್ಷಿಸಿದ್ದರು. ಮೈಕ್ ಹಾಗೂ ಅವರ ಮಗಳು ಸೇರಿದಂತೆ ಇನ್ನೂ ಆರು ಜನ ಪತ್ತೆಯಾಗಿಲ್ಲ. ಐರ್ಲೆಂಡ್ ಮೂಲದ ಮೈಕ್, ಯು.ಕೆ ದೇಶದ ಬಿಲಿಯನೇರ್ ಉದ್ಯಮಿ. ಅವರು ಅಟೊನಾಮಿ ಸಾಫ್ಟ್‌ವೇರ್ ಕಂಪನಿ ಸಂಸ್ಥಾಪಕರು. ಪ್ರಕರಣವೊಂದರಲ್ಲಿ ಇತ್ತೀಚೆಗೆ ಯು.ಎಸ್ ಕೋರ್ಟ್‌ನಿಂದ ತಮ್ಮ ಪರವಾಗಿ ತೀರ್ಪು ಬಂದಿದ್ದಕ್ಕೆ ಮೈಕ್ ಹಾಗೂ…
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಹೊರ ವಲಯದಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಸೇರಿ 100ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಆದರೆ, ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ತಾನು ಪಾರ್ಟಿಗೆ ಹೋಗಿಲ್ಲ ಎಂದು ವಿಡಿಯೋ ಹರಿಬಿಟ್ಟಿದ್ದ ನಟಿ ಹೇಮಾ, ಕೊನೆಗೆ ಕೆಲವು ದಿನ ಬೆಂಗಳೂರಿನಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿ ಹೋಗಿದ್ದರು. ಇದೀಗ ಸ್ವತಃ ನಟಿ ಹೇಮಾ ತಾನು ಬೆಂಗಳೂರು ಪಾರ್ಟಿಯಲ್ಲಿ ಭಾಗವಹಿಸಿದ್ದಾಗಿ ಹೇಳಿಕೊಂಡಿದ್ದಾರೆ. ಬೆಂಗಳೂರು ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಇದ್ದಾರೆ ಎಂದು ಪೊಲೀಸರು ಆಕೆಯ ಫೋಟೋ ಬಿಡುಗಡೆ ಮಾಡಿದ್ದರೂ, ಇದನ್ನೊಪ್ಪಿಕೊಳ್ಳದೇ ನಟಿ ಹೇಮಾ ತಾನು ಆಂಧ್ರದಲ್ಲಿದ್ದೇನೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ, ಬೆಂಗಳೂರಿನಲ್ಲಿ ನಡೆದ ಪಾರ್ಟಿಯಲ್ಲಿ ನಾನು ಭಾಗವಹಿಸಿದ್ದೇನೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದರು. ಅಂದರೆ, ಈ ಹಿಂದೆ ನಟಿ ಹೇಮಾ ಸುಳ್ಳು ಹೇಳಿದ್ದಾರೆ ಎಂದು ಸಾಬೀತಾಗಿದೆ. ತಾನು ಪಾರ್ಟಿಯಲ್ಲಿ ಭಾಗಿಯಾಗಿದ್ದೆ ಎಂದು ಸ್ವತಃ ನಟಿ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ…
ಸ್ಯಾಂಡಲ್ವುಡ್ ಚಿತ್ರರಂಗದ ಹಿರಿಯ ನಟಿ ಶ್ರುತಿ ಮಗಳ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದು ಮಂಜುನಾಥನ ದರ್ಶನ ಪಡೆದಿದ್ದಾರೆ. ಬಳಿಕ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿದ್ದಾರೆ. ರಕ್ಷಾ ಬಂಧನದ ಹಿನ್ನೆಲೆಯಲ್ಲಿ ನಟಿ ಶ್ರುತಿ ವೀರೇಂದ್ರ ಹೆಗ್ಗಡೆಯವರ ಕೈಗೆ ರಾಖಿ ಕಟ್ಟಿ ಆಶೀರ್ವಾದ ಪಡೆಯುವ ಮೂಲಕ ವಿಶೇಷವಾಗಿ ರಕ್ಷಾಬಂಧನವನ್ನ ಆಚರಿಸಿದ್ದಾರೆ. ಇನ್ನು ಈ ವಿಶೇಷವಾದ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹಾಗೂ ಪೂಜ್ಯರ ಆಶೀರ್ವಾದ ಪಡೆದು, ನಿನ್ನೆ ರಕ್ಷಾ ಬಂಧನದ ದಿನ ಅವರಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆದ ನಾವು ಧನ್ಯ. ಶ್ರೀ ಮಂಜುನಾಥ್ ನಿಮ್ಮೆಲ್ಲರಿಗೂ ಒಳ್ಳೆಯದು ಮಾಡಲಿ ಅಂತ ಶ್ರುತಿ ಬರೆದುಕೊಂಡಿದ್ದಾರೆ. ಸದ್ಯ ನಟಿ ಶ್ರುತಿ ಅವರು ಗಿಚ್ಚಿ ಗಿಲಿಗಿಲಿ ಕಾಮಿಡಿ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾದ ವರ್ಷದಲ್ಲಿ ಹೊಸ ಅತಿಥಿಯ ಆಗಮನದ ಖುಷಿಯಲ್ಲಿರುವ ನಟಿ ಇದೀಗ ಭಿನ್ನವಾಗಿ ಪ್ರೆಗ್ನೆನ್ಸಿ ಫೋಟೊಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ. ನಟಿ ಹರ್ಷಿಕಾ ಪೂಣಚ್ಚ ತಾಯಿ ಆಗಲಿದ್ದಾರೆ. ತಮ್ಮ ತಾಯ್ತನವನ್ನು ಭಿನ್ನವಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಡಿಫರೆಂಟ್ ಡಿಫರೆಂಟ್ ಆಗಿ ಪ್ರೆಗ್ನೆನ್ಸಿ ಫೋಟೊಶೂಟ್ ಮಾಡಿಸುತ್ತಿದ್ದಾರೆ. ಈ ಮೊದಲು ಕುಟುಂಬದೊಟ್ಟಿಗೆ ಕೊಡವ ಸಂಪ್ರದಾಯದಂತೆ ಉಡುಗೆ ತೊಟ್ಟು ಫೋಟೊಶೂಟ್ ಮಾಡಿಸಿಕೊಂಡು ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ಗಮನ ಸೆಳೆದಿದ್ದರು. ಇದೀಗ ಮತ್ತೊಂದು ಡಿಫರೆಂಟ್ ಫೋಟೋ ಶೂಟ್ ನಲ್ಲಿ ಹರ್ಷಿಕಾ ಮಿಂಚಿದ್ದಾರೆ. ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಭಿನ್ನವಾಗಿ ಪ್ರೆಗ್ನೆನ್ಸಿ ಫೊಟೊಶೂಟ್ ಮಾಡಿಸಿದ್ದಾರೆ. ರವಿವರ್ಮನ ಪೇಂಟಿಂಗ್ ರೀತಿಯಲ್ಲಿ ಹರ್ಷಿಕಾ ಪೂಣಚ್ಚ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ. ರವಿವರ್ಮನ ಪೇಂಟಿಂಗ್ ರೀತಿ ಫೋಟೊಶೂಟ್ ಮಾಡಿಸಿದ್ದು ಮಾತ್ರವೇ ಅಲ್ಲದೆ, ಸ್ವತಃ ತಮ್ಮ ಚಿತ್ರವನ್ನು ಪೇಂಟಿಂಗ್ ಸಹ ಮಾಡಿಸಿಕೊಂಡಿದ್ದಾರೆ ನಟಿ ಹರ್ಷಿಕಾ ಪೂಣಚ್ಚ. ಹಲವು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಹರ್ಷಿಕಾ ಪೂಣಚ್ಚ ಹಾಗೂ…
ಹಾಲಿವುಡ್ ಸಿನಿಮಾಗಳಲ್ಲಿ ಬಳಸಲಾದ ಹಲವು ವಸ್ತುಗಳನ್ನು ಬಳಿಕ ಹರಾಜುಹಾಕಲಾಗುತ್ತದೆ. ಇವುಗಳನ್ನು ಜನ ಕೋಟಿ ಕೋಟಿ ಹಣ ನೀಡಿ ಕೊಂಡುಕೊಳ್ಳುತ್ತಾರೆ. ಇದೀಗ ಹಾಲಿವುಡ್ನ ಜನಪ್ರಿಯ ಸಿನಿಮಾದಲ್ಲಿ ನಾಯಕ ತೊಟ್ಟಿದ್ದ ಟೋಪಿಯನ್ನು ಹರಾಜು ಹಾಕಲಾಗಿದ್ದು, ಈ ಹಳೆಯ ಟೋಪಿ ಬರೋಬ್ಬರಿ 5.28 ಕೋಟಿ ರೂಪಾಯಿಗೆ ಹರಾಜಾಗಿದೆ. ಭಾರತದಲ್ಲಿ ಚಿತ್ರೀಕರಣವಾಗಿದ್ದ ಬ್ಲಾಕ್ ಬಸ್ಟರ್ ಹಾಲಿವುಡ್ ಸಿನಿಮಾ ‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದಲ್ಲಿ ನಾಯಕ ಧರಿಸಿದ್ದ ಟೋಪಿ ಬಹಳ ಜನಪ್ರಿಯವಾಗಿತ್ತು. ಆ ಟೋಪಿ ಅಥವಾ ಹ್ಯಾಟ್ ಅನ್ನು ಇದೀಗ ಹರಾಜು ಹಾಕಲಾಗಿದ್ದು ಸಿನಿಮಾ ಪ್ರೇಮಿಯೊಬ್ಬರು ಬರೋಬ್ಬರಿ 5.28 ಕೋಟಿ ರೂಪಾಯಿ ಹಣ ಖರೀದಿ ಮಾಡಿದ್ದಾರೆ. ‘ಇಂಡಿಯಾನಾ ಜೋನ್ಸ್ ಆಂಡ್ ದಿ ಟೆಂಪಲ್ ಆಫ್ ಡೂಮ್’ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಿರುವ ಖ್ಯಾತ ನಟ ಹ್ಯಾರಿಸನ್ ಫೋರ್ಡ್, ಇಡೀ ಸಿನಿಮಾದಲ್ಲಿ ಹ್ಯಾಟ್ ಒಂದನ್ನು ತೊಟ್ಟಿರುತ್ತಾರೆ. ಯಾವುದೇ ವಿಶೇಷ ಡಿಸೈನ್ ಇಲ್ಲದ ಸಾಧಾರಣ ಹ್ಯಾಟ್ ಅದು. ಆದರೆ ಆ ಹ್ಯಾಟ್, ಸಿನಿಮಾದ ನಾಯಕ ಪಾತ್ರಕ್ಕೆ…
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದದಾರೆ. ಆರೋಗ್ಯ ಸಮಸ್ಯೆಯನ್ನು ಕಾರಣವನ್ನಾಗಿ ನೀಡಿ ಮನೆ ಊಟಕ್ಕೆ ಹಾಗೂ ಇತರೆ ಕೆಲವು ವಸ್ತುಗಳಿಗೆ ಬೇಡಿಕೆ ಇರಿಸಿದ್ದರು. ಮನೆ ಊಟ ಹಾಗೂ ಇತರೆ ವಸ್ತುಗಳನ್ನು ಜೈಲಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಆರೋಗ್ಯ ಸಮಸ್ಯೆ, ನಿದ್ರಾಹೀನತೆ ಕಾಡುತ್ತಿರುವುದಾಗಿ ಕಾರಣ ನೀಡಿ, ಮನೆ ಊಟ, ಹಾಸಿಗೆ, ಚಮಚ, ತಟ್ಟೆಗಳನ್ನು ತರಸಿಕೊಳ್ಳಲು ಅನುಮತಿ ಕೋರಿ ನಟ ದರ್ಶನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು, ಜೈಲು ಅಧಿಕಾರಿಗಳು ತಮ್ಮ ನಿರ್ಣಯವನ್ನು ನೀಡುವಂತೆ ಹೇಳಿದ್ದರು. ಅಂತೆಯೇ ನಿರ್ಧಾರವನ್ನು ಹೈಕೋರ್ಟ್ಗೆ ನೀಡಿದ್ದ ಜೈಲು ಅಧಿಕಾರಿಗಳು ದರ್ಶನ್ಗೆ ಜೈಲು ಊಟ ಸಾಕೆಂದಿದ್ದರು. ಜೈಲಿನ ವೈದ್ಯಾಧಿಕಾರಿ ನೀಡಿದ್ದ ವರದಿಯನ್ನು ಸಹ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇಂದು ಹೈಕೋರ್ಟ್ನ ಏಕಸದಸ್ಯ ಪೀಠದ…
ಕಾಯಿಲೆಗಳು ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತಾ ಎನ್ನುವ ಮಾತು ನಮ್ಮ ಕಿವಿಗೆ ಆಗಾಗ ಮನೆಯ ಹಿರಿಯರಿಂದ ಕೇಳುತ್ತಿತ್ತು. ಮನುಷ್ಯನಿಗೆ ಬರುತ್ತೆ ನಿಜ. ಆದರೆ ಅದಕ್ಕೂ ಒಂದು ವಯಸ್ಸು ಎಂದು ಇದೆ ಅಲ್ಲವೇ? ಹಿಂದಿನ ಕಾಲದವರನ್ನು ನೋಡಿಕೊಂಡರೆ ಅವರು ಆರೋಗ್ಯ ಹದಗೆಡಿಸಿ ಕೊಳ್ಳುತ್ತಿದ್ದ ಉದಾಹರಣೆಗಳೇ ಇಲ್ಲ. ಏನಿದ್ದರೂ ವಯಸ್ಸಾದ ಮೇಲೆ ವಯೋಸಹಜ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದರು. ಆದರೆ ಈಗ ಹೇಗೆ ಕೆಲವರಿಗೆ ಅರ್ಧ ರಾತ್ರಿಯಲ್ಲಿ ಶ್ರೀಮಂತಿಕೆ ಬರುತ್ತದೆ, ಅದೇ ರೀತಿ ಕಾಯಿಲೆಗಳು ಕೂಡ, ಯಾವಾಗ ಬೇಕಾದರೂ ಬರಬಹುದು. ಯಾರಿಗೆ ಏನು ಬೇಕಾದರೂ ಆಗಬಹುದು. ಇದು ನಮ್ಮ ಜೀವನ… ವಿಶೇಷವಾಗಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುವ 40 ರ ಹರೆಯದ ಪುರುಷರು ಇದನ್ನೂ ಗಮನಿಸಬೇಕು. ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಕೆಲವು ಸೂಪರ್‌ಫುಡ್‌ಗಳು ಇಲ್ಲಿವೆ: ಕೊಬ್ಬಿನ ಮೀನು: ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಸಾಲ್ಮನ್, ಮ್ಯಾಕೆರೆಲ್ ಮತ್ತು ಟ್ರೌಟ್‌ನಂತಹ ಮೀನುಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.…
ನಾವು ದಿನ ನಿತ್ಯ ಮನೆಯಲ್ಲಿ ತಯಾರು ಮಾಡುವ ಅನೇಕ ಬಗೆಯ ಆಹಾರ ಪದಾರ್ಥಗಳು ಶುಂಠಿ -ಬೆಳ್ಳುಳ್ಳಿ ಪೇಸ್ಟ್ ಬಳಕೆ ಮಾಡುವುದರಿಂದ ಬಹಳಷ್ಟು ರುಚಿ ಕೊಡುತ್ತವೆ. ಜೀರ್ಣ ಶಕ್ತಿ ದುರ್ಬಲವಾಗಿರುವವರಿಗೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಬಳಕೆ ಮಾಡಿದ ಆಹಾರ ಸೇವನೆ ಮಾಡುವುದರಿಂದ ಅಜೀರ್ಣತೆ ಮತ್ತು ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಔಷಧೀಯ ತಯಾರಿಕೆ ಹಾಗೂ ಅಡುಗೆಯ ರುಚಿಯನ್ನು ಹೆಚ್ಚಿಸುವ ಈ ಎರಡು ಪದಾರ್ಥಗಳು ಎಲ್ಲರ ಅಡುಗೆ ಮನೆಯಲ್ಲಿಯೂ ಇದ್ದೆ ಇರುತ್ತದೆ. ಅದಲ್ಲದೇ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹೆಚ್ಚು ಉಪಯೋಗಿಸುವವರೇ ಹೆಚ್ಚು.ಆದರೆ ಕೆಲವರು ಫ್ರೆಶ್ ಆಗಿರಲೆಂದು ಮನೆಯಲ್ಲಿ ಈ ಮಿಶ್ರಣವನ್ನು ತಯಾರಿಸುತ್ತಾರೆ. ಯಾವುದೇ ಕಲಬೆರಕೆಯಿಲ್ಲದೇ ಸುಲಭವಾಗಿ ಈ ಪೇಸ್ಟನ್ನು ಮನೆಯಲ್ಲಿ ಮಾಡಿಕೊಳ್ಳುವುದು ಕಷ್ಟವೇನಲ್ಲ. ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಸುವಾಗ ಶುಂಠಿಯನ್ನು ಸಿಪ್ಪೆ ಸುಲಿಯಬೇಕು. ಇಲ್ಲದಿದ್ದರೆ ಅದರ ಸಿಪ್ಪೆಯಿಂದಾಗಿ ಪೇಸ್ಟ್ ಬೇಗನೆ ಹಾಳಾಗುತ್ತದೆ. ಅದಲ್ಲದೇ ಈ ಮಿಶ್ರಣವು ಕಹಿಯಾಗಿರುತ್ತದೆ. ಶುಂಠಿ ಬೆಳ್ಳುಳ್ಳಿ ಜೊತೆಗೆ ಒಂದು ಚಮಚ ಎಣ್ಣೆ, ಒಂದು ಚಮಚ…
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ ಒಂದು ದಶಕದಲ್ಲಿ ಒಂದು ಮಹಾ ಬದಲಾವಣೆಯ ಪರ್ವವೇ ನಡೆದು ಹೋಗಿದೆ ಎನ್ನುವುದನ್ನು ಒಪ್ಪಲೇಬೇಕು ಯಾಕೆಂದರೆ ಇಂದು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಗೃಹಿಣಿಯರಿಂದ ಹಿಡಿದು ಉದ್ಯೋಗಸ್ಥನಿಗೂ, ಉದ್ಯಮಿಗೂ ಹೀಗೆ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಖಾತೆ ಎನ್ನುವುದು ಅನಿವಾರ್ಯ. ಸರ್ಕಾರ ನೀಡುವ ಸ್ಕಾಲರ್ಶಿಪ್, ಸಹಾಯಧನಗಳು, ಪಿಂಚಣಿ ಪಡೆಯುವುದಕ್ಕೆ ಅಥವಾ ಬ್ಯಾಂಕ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಕಾರಣದಿಂದ ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ಹಣಕಾಸಿನ ವಿನಿಮಯ ಸರಾಗವಾಗಲಿ ಎನ್ನುವ ಉದ್ದೇಶದಿಂದ ಅಥವಾ ಬ್ಯಾಂಕ್ ಗಳಿಂದ ಸಾಲ ಪಡೆಯುವುದಕ್ಕೆ ಹೀಗೆ ಒಂದಲ್ಲ ಒಂದು ಕಾರಣದಿಂದ ಪ್ರತಿಯೊಬ್ಬರು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಆದ್ರೆ ನಂತರವೂ ಆ ಖಾತೆಗಳನ್ನು ನಿರ್ವಹಿಸುವುದು ಸಹ ಅಷ್ಟೇ ಜವಾಬ್ದಾರಿಯನ್ನು ಕೆಲಸವಾಗಿದೆ ಯಾಕೆಂದ್ರೆ ಹೆಚ್ಚಿನ ಜನರು ತಮ್ಮಂಹ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಆ ಖಾತೆಯ ಮೂಲಕ ತಮ್ಮ ಕಾರ್ಯ ಮುಗಿದ ಮೇಲೆ ಅವುಗಳಿಗೆ ಹಣ ಹಾಕದೆ ಅವುಗಳನ್ನು ಸರಿಯಾಗಿ ನಿರ್ವಹಿಸದೇ ಹಾಗೆ ಬಿಡುತ್ತಾರೆ. ಇದರಿಂದಲೇ ಖಾತೆ ರದ್ದಾಗುವ…