ಪ್ರಪಂಚದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ WhatsApp ಒಂದಾಗಿದೆ. ಸಾಕಷ್ಟು ಜನರು ಈ ವಾಟ್ಸಾಪ್ ಬಳಸುತ್ತಾರೆ. ಜನರ ಬಹುತೇಕ ಅಗತ್ಯಗಳನ್ನು ವಾಟ್ಸಾಪ್ ಪೂರೈಸುತ್ತಿದೆ. ಪ್ರಪಂಚದಾದ್ಯಂತ ಇರುವ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಸಾಫ್ಟ್‌ವೇರ್ ಅನ್ನು ಬಳಸಬಹುದು. ಇದು ಅತ್ಯಂತ ಜನಪ್ರಿಯ ಸಂದೇಶ ಸೇವೆಯಾಗಿದೆ. WhatsApp Android ಮತ್ತು iOS ಸ್ಮಾರ್ಟ್‌ಫೋನ್‌ಗಳೆರಡಕ್ಕೂ ಹೊಂದಿಕೊಳ್ಳುತ್ತದೆ ಮತ್ತು ಕಂಪ್ಯೂಟರ್ ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ WhatsApp ಆನ್‌ಲೈನ್ ಮೂಲಕವೂ ಇದನ್ನು ಪ್ರವೇಶಿಸಬಹುದು. ಗ್ರಾಹಕರು ತಮ್ಮ ಸೆಲ್ ಫೋನ್‌ನಲ್ಲಿ ತಮ್ಮ ನಂಬರ್ ಸೇವ್ ಮಾಡದೆ ಯೇಯಾರನ್ನಾದರೂ ಸಂವಹನ ಮಾಡಲು ಬಯಸಿದಾಗ, ಅವರು ಗೊಂದಲಕ್ಕೊಳಗಾಗಬಹುದು. ಏಕೆಂದರೆ ಹಾಗೆ ಮಾಡುವುದು ಕಷ್ಟಕರವೆಂದು ತೋರುತ್ತದೆ. ಈ ಕ್ರಿಯೆ ಸಾಧ್ಯವೇ ಇಲ್ಲ ಎನ್ನಬಹುದು. ಅದೃಷ್ಟವಶಾತ್, ಇಂಟರ್ನೆಟ್ ಬ್ರೌಸರ್ ಮೂಲಕ WhatsApp ನ ಕ್ಲಿಕ್ ಟು ಚಾಟ್ ವೈಶಿಷ್ಟ್ಯವನ್ನು ಬಳಸಿಕೊಂಡು ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಸೇವ್ ಮಾಡದೆಯೇ ಯಾರೊಂದಿಗಾದರೂ ಚಾಟ್ ಮಾಡಬಹುದು. ಯಾವುದೇ ಸಕ್ರಿಯ WhatsApp ಬಳಕೆದಾರರೊಂದಿಗೆ ಸಂವಾದವನ್ನು ಪ್ರಾರಂಭಿಸಲು ನಿಮಗೆ ಅನುಮತಿಸಲು ವೈಶಿಷ್ಟ್ಯವು wa.me…
Author: Prajatv Kannada
ಮುಂಬೈ: ಬೆಳ್ಳುಳ್ಳಿ ಸಿಪ್ಪೆ ಸುಲಿಯುತ್ತಿರುವಾಗ ನಕಲಿ ಬೆಳ್ಳುಳ್ಳಿ ಎಂದು ಗೊತ್ತಾಗಿರುವ ಘಟನೆಯೊಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ತುಂಬಾ ಗಟ್ಟಿಯಾಗಿರುವ ಅನುಭವವಾಗಿದ್ದು, ಒಳಗಡೆ ನೋಡಿದಾಗ ಸಿಮೆಂಟ್ ಕಂಡುಬಂದಿದೆ. ದೇಶದಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳುಳ್ಳಿ ದರ ೩೦೦-೩೫೦ ರೂ.ಗೆ ಏರಿಕೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ಕಡೆಗಳಲ್ಲಿ ಸಿಮೆಂಟ್‌ನಿಂದ ತಯಾರಾದ ಬೆಳ್ಳುಳ್ಳಿ ಮಾರಾಟವಾಗಿರುವ ಘಟನೆಗಳು ಪತ್ತೆಯಾಗಿವೆ. ನಿಜವಾದ ಬೆಳ್ಳುಳ್ಳಿ ರೀತಿಯಲ್ಲಿ ಸಿಮೆಂಟ್‌ನಿಂದ ಬೆಳ್ಳುಳ್ಳಿ ತಯಾರಿಸಿ, ನಂತರ ಅದಕ್ಕೆ ಬಿಳಿ ಬಣ್ಣವನ್ನು ಲೇಪಿಸುತ್ತಾರೆ. ಅಸಲಿ ಬೆಳ್ಳುಳ್ಳಿಯ ಜೊತೆಗೆ ನಕಲಿ ಬೆಳ್ಳುಳ್ಳಿಯನ್ನು ಸೇರಿಸಿ, ತೂಕ ಹೆಚ್ಚಿಸುವ ಮೂಲಕ ವ್ಯಾಪಾರಿಗಳನ್ನು ವಂಚನೆ ಮಾಡಲಾಗುತ್ತಿದೆ. ನಕಲಿ ಬೆಳ್ಳುಳ್ಳಿ ಒಡೆದಾಗ ಅದರಲ್ಲಿ ಸಿಮೆಂಟ್ ಪುಡಿ ಉದುರುತ್ತಿವೆ.
ಮುಸ್ಲಿಂ ಜೋಡಿ ಹಸೆಮಣೆ ಏರುವ ವೇಳೆ ರಾಷ್ಟ್ರಗೀತೆ ಹಾಡು ಕೇಳಿ ಬಂದಿದ್ದು, ಆ ವೇಳೆ ಮುಸ್ಲಿಂ ಬಾಂಧವರು ಸಲ್ಲಿಸಿದ ಗೌರವ ಸಲ್ಲಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸ್ವಾತಂತ್ರ ದಿನಾಚರಣೆಯಂದು ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದು, ಈ ಮದುವೆ ನಡೆಯುತ್ತಿದ್ದ ವೇಳೆಯೇ ರಾಷ್ಟ್ರಗೀತೆಯ ಗಾಯನ ಕೇಳಿ ಬಂದಿದೆ. ಹೀಗಾಗಿ ಮದುವೆಯಲ್ಲಿ ಸೇರಿದ್ದ ಎಲ್ಲರೂ ಎದ್ದು ನಿಂತು ಗೌರವ ಸೂಚಿಸುತ್ತಿದ್ದಾರೆ. ಇದರ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಲಕ್ಷಾಂತರ ಜನ ಈ ವೀಡಿಯೋ ವೀಕ್ಷಿಸಿ ನವ ಜೋಡಿಗೆ ಶುಭ ಹಾರೈಸುವ ಜೊತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಇದು ಎಲ್ಲಿ ನಡೆದಿರುವ ಮದುವೆ ಎಂಬ ಉಲ್ಲೇಖ ವೀಡಿಯೋದಲ್ಲಿ ಇಲ್ಲ, ಆದರೆ ವೇಷಭೂಷಣ ನೋಡಿದರೆ ಇದು ಬಹುಶಃ ಕೇರಳದ ಮುಸ್ಲಿಂ ಸಮುದಾಯದಲ್ಲಿ ನಡೆದಿರುವ ಮದುವೆ ಎಂಬುದು ಖಚಿತವಾಗುತ್ತಿದೆ. ಜೊತೆಗೆ ಅನೇಕರು ಮಲೆಯಾಳಂ ಭಾಷೆಯಲ್ಲಿ ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ದೊಡ್ಡದಾದ ಹಾಲೊಂದರಲ್ಲಿ ಮದುವೆ ನಡೆಯುತ್ತಿದ್ದು,…
ನವದೆಹಲಿ:- ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಸುಪ್ರೀಂ ನಲ್ಲಿ ಇಂದು ವಿಚಾರಣೆ ನಡೆಯಲಿದೆ. ಸಂತ್ರಸ್ತೆ ಸಾವಿಗೆ ನ್ಯಾಯ ಸಿಗಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಧ್ಯಪ್ರದೇಶ ಮಾಡಲು ನಿರ್ಧರಿಸಿ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10:30ಕ್ಕೆ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಇರುವ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಲಿದೆ. ಇನ್ನೂ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ…
ಬೆಂಗಳೂರು: ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, 300-ಕ್ಕೂ ಹೆಚ್ಚು ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಅದರ ಸಂಯೋಜಿತ ಕಾಲೇಜುಗಳೊಂದಿಗೆ ಕೆಲಸ ಮಾಡುವ ಗುರಿಯನ್ನು ಹೊಂದಿದೆ. 2013 ರಲ್ಲಿ ಪ್ರಾರಂಭವಾದ PM-USHA ಅರ್ಹ ರಾಜ್ಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕಾರ್ಯತಂತ್ರದ ಹಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. https://youtu.be/39giEKFiUBg?si=_wfFunnobcyVswTT 12ನೇ ತರಗತಿ / ದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವ & 3 ವರ್ಷಗಳ ಸ್ನಾತಕ ಪದವಿ ಅಧ್ಯಯನ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ ನೀಡಲಾಗುವ ಪಿಎಂ ಉಷಾ ಸ್ಕಾಲರ್‌ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಕೇಂದ್ರದ ಉನ್ನತ ಶಿಕ್ಷಣ ಇಲಾಖೆಯು ಈ ಸ್ಕಾಲರ್‌ಶಿಪ್‌ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆದಿದೆ. ಸ್ಕಾಲರ್‌ಶಿಪ್ ಹೆಸರು ಪಿಎಂ ಉಷಾ ವಿದ್ಯಾರ್ಥಿವೇತನ ವಿದ್ಯಾರ್ಥಿವೇತನ ಸೌಲಭ್ಯ Rs.12000-20000. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31, 2024 ವೆಬ್ ವಿಳಾಸ www.scholarship.gov.in ಅರ್ಹತೆ ದ್ವಿತೀಯ ಪಿಯುಸಿ ಶಿಕ್ಷಣವನ್ನು ಶೇಕಡ.80 ಕ್ಕಿಂತ ಹೆಚ್ಚಿನ ಅಂಕ ಪಡೆದಿರುವವರು. ಪದವಿ…
ಕುಂದಾಪ್ರ ಕನ್ನಡ ಹಬ್ಬ 2024ರ ಪ್ರಯುಕ್ತ Easy Events ವತಿಯಿಂದ ಜರುಗಿದ ಮೆಗಾ ಡಿಜಿಟಲ್ ಲಕ್ಕಿ ಡ್ರಾ, ಕುಂದಾಪ್ರ ಕನ್ನಡ ಹಬ್ಬದ ಸಮಾರೋಪ ಸಮಾರಂಭದ ಸಂದರ್ಭ ಜರಗಿದ್ದು https://youtu.be/tRLKICRbY44?si=MdAR9Adqk8jr-Sc5 ತಂಡ ಪ್ರಪ್ರಥಮ ಬಾರಿಗೆ ವಿನೂತನ ರೀತಿಯಲ್ಲಿ ಕಾಗದ ಮುಕ್ತ ಮೆಗಾ ಡಿಜಿಟಲ್ ಲಕ್ಕಿ ಡ್ರಾ ನಡೆಸಿದ್ದು, ಕುಂದಾಪ್ರ ಕನ್ನಡ ಹಬ್ಬಕ್ಕೆ ಆಗಮಿಸಿದ ಎಲ್ಲರಿಗೂ ಕೂಡ ಮುಖೇನ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಸುಲಭ ಅವಕಾಶವನ್ನು ಮಾಡಿಕೊಟ್ಟಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ. ಸ್ಪರ್ಧೆಯವಿಜೇತರ ವಿವರಗಳು ಈ ರೀತಿಯಾಗಿವೆ. ಮೆಗಾ ಲಕ್ಕಿ ಡ್ರಾ ಪ್ರಥಮ ಬಹುಮಾನ ಗೋಲ್ಡ್ ಸಿಲ್ವರ್ ಪ್ಲೇಟೆಡ್ ಸೀರೆ ಪೂರ್ಣಿಮಾ ಶೆಟ್ಟಿ ದ್ವಿತೀಯ, ಮಣಿಕಂಠ ಪೂಜಾರಿ. ತೃತೀಯ – 1 ಗ್ರಾಂ ಗೋಲ್ಡ್ ಕಾಯಿನ್ ( ನಕ್ಷತ್ರ ಜ್ಯುವೆಲರ್ಸ್ ಕುಂದಾಪ್ರ ) – ವಿಲಾಸ್ ಶೇಖರ್ ಚತುರ್ಥ – ವಾಷಿಂಗ್ ಮಷೀನ್ – ಗೋವರ್ಧನ್ B
ಮಂಗಳೂರು:- ರೈಲ್ವೆ ಭದ್ರತಾ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬೀಳುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಜರುಗಿದೆ. ಸಸಾಂಗ್ ಆಯತಪ್ಪಿ ಬಿದ್ದ ವ್ಯಕ್ತಿ ಎನ್ನಲಾಗಿದೆ. ಮಂಗಳೂರಿಂದ ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ರೈಲು ಹತ್ತಲು ಯತ್ನಿಸಿದ್ದ ಪ್ರಯಾಣಿಕ ಸಸಾಂಗ್ ರೈಲು ಹತ್ತುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ರೈಲು ಮತ್ತು ಪ್ಲಾಟ್ಫಾರ್ಮ್ ಮಧ್ಯೆ ಸಿಲುಕಿಕೊಂಡಿದ್ದಾರೆ. ತಕ್ಷಣ ಸಸಾಂಗ್ನನ್ನ ಆರ್ಪಿಎಫ್ ಹೆಡ್ಕಾನ್ಸ್ಟೇಬಲ್ ಕೈ ಹಿಡಿದು ಎಳೆದು ಪ್ರಾಣ ರಕ್ಷಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಬೆಂಗಳೂರು:- ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ https://youtu.be/eVp1wjzAZxo?si=zxM6Dmv9tmklUsGo ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ರಾಮನಗರ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸಂಜೆ ವೇಳೆಗೆ ಮಳೆಯಾಗುತ್ತಿದೆ. ಎಚ್ಎಎಲ್ನಲ್ಲಿ 30.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 30.2ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಬೆಂಗಳೂರು/ಮೈಸೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಅನುಮತಿ ಕೊಟ್ಟ ಬಳಿಕ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದೆ. https://youtu.be/C82i_Z_S2N4?si=CBRqa-oOJdcUegA2 ಅಲ್ಲದೇ ಸಿದ್ದರಾಮಯ್ಯ ಪರ ನಿಂತಿರುವ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಾದ್ಯಂತ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನೂ ಪ್ರತಿಭಟನೆ ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆ ಇದ್ದು, ಸಿದ್ದರಾಮಯ್ಯ ಪರ ಪ್ರತಿಭಟನೆಗೆ ಬರದಿದ್ದರೆ ಗೃಹಲಕ್ಷ್ಮಿ, ಅಕ್ಕಿ ದುಡ್ಡು, ಉಚಿತ ಕರೆಂಟ್ ಸೇರಿ ಗ್ಯಾರಂಟಿ ಬಂದ್ ಆಗುವ ಎಚ್ಚರಿಕೆ ನೀಡಲಾಗಿದೆ. ರಾಜಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯದ ಬಹುತೇಕ ಕಡೆ ಪ್ರತಿಭಟನೆ ನಡೆಸಲಾಗಿದೆ. ಸಿಎಂ ಪರವಾದ ಪ್ರತಿಭಟನೆಯಲ್ಲಿ ಭಾಗವಹಿಸದಿದ್ದರೆ ಸರ್ಕಾರದಿಂದ ನೀಡಲಾಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಲಾಗುವುದು ಎಂದು ಡಂಗೂರ ಸಾರಲಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಚಿನ್ನದಗುಡಿಹುಂಡಿ ಗ್ರಾಮದಲ್ಲಿ ಡಂಗೂರ ಸಾರಿ ಗ್ರಾಮಸ್ಥರನ್ನು ಪ್ರತಿಭಟನೆಗೆ ಕರೆಯಲಾಗಿದೆ. ಡಂಗೂರ ಸಾರಿ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಡೆಯುವ ಪ್ರತಿಭಟನೆಗೆ ಬರಬೇಕಂತೆ. ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆ 2000 ರೂ.,…