19 ವರ್ಷದ ಚೀನಾ-ಅಮೆರಿಕನ್ ಪೈಲಟ್ ಈಥನ್ ವಾ ಮುಂದಿನ ವಾರ ಭಾರತದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಈ ವಿಷಯವನ್ನು ಈಥನ್ ವಾ ಸೌದಿ ಅರೇಬಿಯಾದಿಂದ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಮಕ್ಕಳಲ್ಲಿನ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸಲು ಅಗತ್ಯವಿರುವ ದೇಣಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಈಥನ್ ವಾ ಏಳು ಖಂಡಗಳಲ್ಲಿ ಒಬ್ಬರೇ ವಿಮಾನ ಹಾರಾಟ ನಡೆಸುತ್ತಿದ್ದಾರೆ. ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದ ಯಾನವೂ ಇದಾಗಿದೆ. ‘ಫ್ಲೈಟ್ ಅಗೇನ್ಸ್ಟ್ ಕ್ಯಾನ್ಸರ್’ ಎನ್ನುವ ಹೆಸರಿನ ಯಾನವು ಸ್ವಿಟ್ಜರ್‌ಲೆಂಡ್‌ನ ಜಿನೀವಾದಲ್ಲಿ ಶುರುವಾಗಿತ್ತು. 50 ಸಾವಿರ ಮೈಲು ದೂರದ ಪ್ರಯಾಣವು 75 ಟೇಕಾಫ್‌ಗಳು ಹಾಗೂ ಲ್ಯಾಂಡಿಂಗ್‌ಗಳನ್ನು ಒಳಗೊಂಡಿದೆ. 60 ದೇಶಗಳಲ್ಲಿ ಅವರು ಸಂಚರಿಸಿದ್ದಾರೆ. ಟೆನೆಸ್ಸಿಯ ಮೆಂಫಿಸ್‌ನಲ್ಲಿ ಇರುವ ಸೇಂಟ್ ಜ್ಯೂಡ್ ಮಕ್ಕಳ ಕಾಯಿಲೆಗಳ ಸಂಶೋಧನಾ ಆಸ್ಪತ್ರೆಗಾಗಿ ಅವರು 10 ಲಕ್ಷ ಡಾಲರ್ ದೇಣಿಗೆ ಸಂಗ್ರಹಿಸಲು ನಿಶ್ಚಯಿಸಿದ್ದಾರೆ. ಈಥನ್ ವಾಭಾರತಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಸ್ಥಳೀಯರಿಂದ ಅಲ್ಲಿನ ಸಂಸ್ಕೃತಿ ಇತಿಹಾಸದ ಕುರಿತು ತಿಳಿದುಕೊಳ್ಳುವೆ ಎಂದು ಹೇಳಿದ್ದಾರೆ.
Author: Prajatv Kannada
ಸೂರ್ಯೋದಯ: 06:04, ಸೂರ್ಯಾಸ್ತ : 06:34 ಶ್ರಾವಣ ಮಾಸ,ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080, ಗ್ರಿಷ್ಮ ಋತು, ದಕ್ಷಿಣಾಯಣ , ತಿಥಿ: ಪಾಡ್ಯ ನಕ್ಷತ್ರ: ಶತಭಿಶ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ:09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ರಾ 8:44 ನಿಂದ ರಾ .10:10 ತನಕ ಅಭಿಜಿತ್ ಮುಹುರ್ತ: ಬೆ.11:54 ನಿಂದ ಮ.12:44 ತನಕ ಮೇಷ : ಮದುವೆ ಚರ್ಚೆ ಸಂಭವ,ವಿದೇಶ ಪ್ರವಾಸದ ಕನಸು ನನಸು,ಜನಪ್ರತಿನಿಧಿಗಳಿಗೆ ಸಿಹಿ ಸುದ್ದಿ,ಅಧಿಕಾರಿ ವರ್ಗದವರಿಗೆ ಸಿಹಿ ಸುದ್ದಿ,ಭೂಮಿ ವಿಚಾರಕ್ಕಾಗಿ ವಾಗ್ವಾದ, ರಾಜೀ ಮಾಡಿಕೊಳ್ಳುವುದು ಉತ್ತಮ,ಸಂಗಾತಿಯಿಂದ ಒಲವಿನ ಉಡುಗೊರೆ,ಸ್ನೇಹಿತರ ಸಹಕಾರದಿಂದ ಉದ್ಯೋಗ ಲಭಿಸಲಿದೆ. ಕಠಿಣ ಶ್ರಮದಿಂದ ಸರಕಾರಿ ಉದ್ಯೋಗ ಸಿಗುತ್ತದೆ.ಕೃಷಿಕರಿಗೆ ಸರ್ಕಾರದಿಂದ ಸಹಾಯ,ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ,ಬೆಲೆಬಾಳುವ ವಸ್ತು ಹುಡುಕಾಟ, ಮಕ್ಕಳ ಮದುವೆ ಮರು ಮಾತುಕತೆ ಸಂಭವ. ಹೊಸ ಉದ್ಯಮ ಪ್ರಾರಂಭದ ಚಿಂತನೆ. ಶಿಕ್ಷಕವೃಂದದವರ ಮಕ್ಕಳ ಮದುವೆ ಚಿಂತನೆ ಮಾಡುವಿರಿ.…
ಮಂಗಳೂರು:- ಮಾಡಿದ ಸಾಲ ತೀರಿಸಲು ನಕಲಿ ಕರೆನ್ಸಿ ನೋಟ್ ಪ್ರಿಂಟ್ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ವಿ ಪ್ರಿಯೇಶ್, ವಿನೋದ್ ಕುಮಾರ್ ಕೆ, ಅಬ್ದುಲ್ ಖಾದರ್ ಎಸ್ಎಂ ಮತ್ತು ಅಯೂಬ್ ಖಾನ್ ಬಂಧಿತರು. ಬಂಧಿತರಿಂದ 500 ರೂಪಾಯಿ ಮುಖಬೆಲೆಯ 2,13,500 ರೂಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡಿನ ಚೆರ್ಕಳದಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿರುವ ಪ್ರಮುಖ ಆರೋಪಿ ಪ್ರಿಯೇಶ್ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸಾಲ ಮರುಪಾವತಿಸಲು ನಕಲಿ ನೋಟು ಮುದ್ರಣಕ್ಕೆ ಮುಂದಾಗಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ. ಅವರು ಕೋಝಿಕ್ಕೋಡ್ ಮತ್ತು ದೆಹಲಿಯಿಂದ ಆನ್‌ಲೈನ್‌ನಲ್ಲಿ ಕಚ್ಚಾ ವಸ್ತುಗಳನ್ನು ಖರೀದಿಸಿದ್ದರು. ಯೂಟ್ಯೂಬ್ ಮೂಲಕ ನಕಲಿ ಕರೆನ್ಸಿ ಮುದ್ರಿಸುವುದನ್ನು ಕಲಿತರು. ಈತ ಕಳೆದ ಮೂರು ತಿಂಗಳಿಂದ ಚೆರ್ಕಳದಲ್ಲಿರುವ ತನ್ನ ಪ್ರಿಂಟಿಂಗ್ ಪ್ರೆಸ್ನಲ್ಲಿ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ. ಆರೋಪಿಗಳು ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು (ಎಫ್‌ಐಸಿಎನ್) ಪ್ರಿಂಟ್ ಮಾಡಿದ್ದು, ಇದು ನಕಲಿ ಎಂದು ಕಂಡುಹಿಡಿಯುವುದು ಸಾಮಾನ್ಯ ಜನರಿಗೆ ಕಷ್ಟಕರವಾಗಿದೆ…
ಅಮೆರಿಕದ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್‌ಗಿಂತ ಜನಪ್ರಿಯತೆಯಲ್ಲಿ 4 ಪಾಯಿಂಟ್‌ಗಳಿಂದ ಮುಂದಿದ್ದಾರೆ. ಆಂಗ್ಲಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದ್ದು, ಅಧ್ಯಕ್ಷ ಜೋ ಬೈಡೆನ್ ಅಭ್ಯರ್ಥಿ ಆಗಿದ್ದಾಗ ಅವರಿಗೆ ಶೇ.39 ಮಂದಿ ಮಾತ್ರ ಬೆಂಬಲ ವ್ಯಕ್ತಪಡಿಸಿದ್ದರು. ಹೊಸ ಸಮೀಕ್ಷೆಯಲ್ಲಿ ಕಮಲಾ ಹ್ಯಾರಿಸ್ ಅವರಿಗೆ ಶೇ.49, ಟ್ರಂಪ್ ಅವರಿಗೆ ಶೇ.45 ಬೆಂಬಲ ವ್ಯಕ್ತವಾಗಿದೆ. ಮತ್ತೂಂದು ಸಮೀಕ್ಷೆಯಲ್ಲೂ ಅಮೆರಿಕದ ಶೇ.48 ಮಂದಿ ಕಮಲಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟ್ರಂಪ್ ಪರವಾಗಿ ಶೇ.41 ಮಂದಿ ಬೆಂಬಲ ಸೂಚಿಸಿದ್ದಾರೆ. ಬೈಡೆನ್ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಕಮಲಾ ಡೆಮಾ ಕ್ರಟಿಕ್ ಪಕ್ಷದ ಅಭ್ಯರ್ಥಿ ಆಗಿದ್ದಾರೆ. ಕಮಲಾ ಮದ್ಯ ಸೇವಿಸಿ ಪ್ರಚಾರ? ಡೆಮಾಕ್ರಾಟ್ ನಾಯಕಿ ಕಮಲಾ ಹ್ಯಾರಿಸ್ ಮೇರಿಲ್ಯಾಂಡ್‌ನಲ್ಲಿ ನಡೆದಿದ್ದ ಪ್ರಚಾರದಲ್ಲಿ ಮದ್ಯ ಸೇವಿಸಿ ಪ್ರಚಾರ ನಡೆಸಿದ್ದರೇ ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಹ್ಯಾರಿಸ್ ಭಾಷಣದ ವೇಳೆ ತೊದಲುತ್ತಿದ್ದಂತೆ ಭಾಸವಾಗುತ್ತಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದರೆ. ಆದರೆ…
ಬಾಂಗ್ಲಾದ ಚುನಾವಣ ಆಯೋಗ, ನ್ಯಾಯಾಂಗ, ಭದ್ರತೆ ಮತ್ತು ಆಡಳಿತದಲ್ಲಿ ಕೆಲವು ಪ್ರಮುಖ ಸುಧಾರಣೆಗಳನ್ನು ತಂದು ಅನಂತರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾಗುವುದು ಎಂದು ಬಾಂಗ್ಲಾ ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಘೋಷಿಸಿದ್ದಾರೆ. ಈ ಮೂಲಕ ಸಾರ್ವತ್ರಿಕ ಚುನಾವಣೆ ಮತ್ತಷ್ಟು ವಿಳಂಬವಾಗುವ ಸುಳಿವನ್ನು ಯೂನುಸ್ ನೀಡಿದ್ದಾರೆ. ಈ ಮಧ್ಯೆ ಢಾಕಾದಲ್ಲಿ ಪೊಲೀಸ್ ಇಲಾಖೆಗೆ ಯೂನುಸ್ ಸರಕಾರಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. 32 ಪೊಲೀಸ್ ಠಾಣೆಗಳ ಮುಖ್ಯಸ್ಥರನ್ನು ವರ್ಗಾವಣೆ ಮಾಡಲಾಗಿದೆ. ಈವರೆಗೆ ಒಟ್ಟು ವರ್ಗಾವಣೆಗೊಂಡ ಪೊಲೀಸರ ಸಂಖ್ಯೆ 50ಕ್ಕೆ ತಲುಪಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ, ನ್ಯಾಷನಲ್ ಪಕ್ಷದ ಮುಖ್ಯಸ್ಥೆ ಖಲೀದಾ ಜಿಯಾ ಅವರ ಬ್ಯಾಂಕ್ ಖಾತೆಯನ್ನು 17 ವರ್ಷಗಳ ಬಳಿಕ ಆದಾಯ ಇಲಾಖೆ ಸಕ್ರಿಯಗೊಳಿಸಿದೆ. ‘ಖಲೀದಾ ಅವರಿಗೆ ಸಂಬಂಧಿಸಿದ ಯಾವುದೇ ತೆರಿಗೆ ಬಾಕಿ ಉಳಿದಿಲ್ಲ, ಹೀಗಾಗಿ ಅವರ ಬ್ಯಾಂಕ್ ಖ್ಯಾತೆಗಳನ್ನು ಸಕ್ರಿಯಗೊಳಿಸಲು ಆದೇಶಿಸಿದ್ದೇವೆ, ತಕ್ಷಣದಿಂದಲೇ ಖಲೀದಾ ಅವರ ಬ್ಯಾಂಕ್ ಖಾತೆಗಳು ಕಾರ್ಯನಿರ್ವಹಿಸಲಿವೆ’ ಎಂದು ಅಧಿಕಾರಿಗಳು ಹೇಳಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 2007ರ ಆಗಸ್ಟ್‌ನಲ್ಲಿ, ರಾಷ್ಟ್ರೀಯ ಕಂದಾಯ ಮಂಡಳಿಯ ಕೇಂದ್ರ ಗುಪ್ತಚರ ಕೋಶವು ಖಲೀದಾ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು. 15 ವರ್ಷಗಳ ಕಾಲ ಬಾಂಗ್ಲಾದಲ್ಲಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಶೇಖ್ ಹಸೀನಾ, ಮೀಸಲಾತಿ ದಂಗೆಯಿಂದಾಗಿ ಹುದ್ದೆ ತೊರೆದು ದೇಶ ಬಿಟ್ಟ ಬಳಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚಿಸಲಾಗಿದೆ. ಈ ನಡುವೆ ಜೈಲಿನಲ್ಲಿದ್ದ ಖಲೀದಾ ಜಿಯಾ ಅವರ ಬಿಡುಗಡೆ ಮಾಡಲಾಗಿತ್ತು.
ಮಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಗರಿಗೆದರಿದ್ದು, ರಾಜಕೀಯ ಪಕ್ಷಗಳ ನಡುವಿನ ಜಟಾಪಟಿಗೆ ಕಾರಣವಾಗಿದೆ. ರಾಜ್ಯಪಾಲರು ಸಂವಿಧಾನ ವಿರೋಧಿ ಕ್ರಮ ಅನುಸರಿಸಿದ್ದಾರೆ, ಕೇಂದ್ರದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯದಾದ್ಯಂತ ನಿನ್ನೆ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಮುಖಂಡ ಐವಾನ್ ಡಿಸೋಜಾ, ರಾಜ್ಯಪಾಲರನ್ನು ವಾಪಾಸ್ ಕರೆಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಬಾಂಗ್ಲಾದೇಶದ ಪ್ರಧಾನಿಗೆ ಬಂದ ಸ್ಥಿತಿ ಇಲ್ಲಿನ ರಾಜ್ಯಪಾಲರಿಗೆ ಬರಬಹುದು ಎಂದು ಹೇಳುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸದ್ಯ ಈ ಹೇಳಿಕೆಯ ಬೆನ್ನಲ್ಲೆ ಇನ್ನೋರ್ವ ಕಾಂಗ್ರೆಸ್ ಮುಖಂಡ ಇದೇ ಹೇಳಿಕೆಯನ್ನು ಪುನರ್ ಉಚ್ಛರಿಸುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಯುವ ಮುಖಂಡರಾಗಿರುವ ರಕ್ಷಿತ್ ಶಿವರಾಮ್ ಅವರು, ಇಂದು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿ ನಡೆದ…
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬೈಕ್ ವೀಲಿಂಗ್ ಹಾವಳಿ ಮೀತಿ ಮೀರಿದೆ. ಮೂರು ಬಾರಿ ಬಂಧಿಸಿದ್ರೂ, ಈ ಆರೋಪಿ ಮಾತ್ರ ಬೈಕ್ ವೀಲಿಂಗ್ ಬಿಟ್ಟಿಲ್ಲ https://youtu.be/JiKWFzNZdLU?si=Ps-bNberJd3u6UWc ಹೌದು, ಆರ್.ಟಿ.ನಗರ ಸಂಚಾರಿ ಪೊಲೀಸರು ವ್ಹೀಲಿಂಗ್ ಮಾಡುತ್ತಿದ್ದ ಸಂದರ್ಭ ಮೂರು ಬಾರಿ ಬಂಧಿಸಿದ್ರು ಆರೋಪಿ ಮಾತ್ರ ತನ್ನ ಛಾಳಿ ಮುಂದುವರಿಸಿದ್ದ. ಬಂಧನ ಬಳಿಕ ವೀಲಿಂಗ್ ಮಾಡದಂತೆ ಆರೋಪಿಗೆ ಹಾಗೂ ಆತನ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಈ ವೇಳೆ ನಾನು ಸೊಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ರೆ, ಹಣ ಬರುತ್ತೆ ಎಂದು ಸವಾರ ಹೇಳಿದ್ದ. ತಿಂಗಳಿಗೆ ಬೈಕ್ ವೀಲಿಂಗ್ ಮಾಡಿ 30 ಸಾವಿರ ಸಂಪಾದನೆ ಮಾಡೋದಾಗಿ ಹೇಳಿದ್ದ. ನನಗೆ ಏನು ಕೆಲಸವಿಲ್ಲ ,ಬೈಕ್ ವೀಲಿಂಗ್ ಮಾಡಿದ್ರೆ ಹಣ ಬರುತ್ತೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದು ಬೈಕ್ ಸವಾರ ಪೊಲೀಸರಿಗೆ ಹೇಳಿದ್ದ. ಬಂಧಿಸಿ ದಂಡ ಹಾಕಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಆಗಿದ್ದ. ಇದೀಗ ಬೈಕ್ ಸವಾರ ಮತ್ತೆ ಅದೇ ಚಾಳಿ ಮುಂದುವರೆಸಿದ್ದು, ಪ್ರತಿನಿತ್ಯ ಬೈಕ್…
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಜೈಲು ಸೇರಿದ್ದಾರೆ. ಪ್ರಕರದಲ್ಲಿ 17ಮಂದಿಯನನ್ನು ಬಂಧಿಸಿದ್ದು ಇವರುಗಳು ಜೈಲು ಸೇರಿ 75 ದಿನ ಕಳೆದಿದೆ. ಆದ್ರೆ ಇದುವರೆಗೂ ಯಾರೂ ಕೂಡ ಬಿಡುಗಡೆ ಬಯಸಿ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಖುದ್ದು ದರ್ಶನ್ ಕೂಡ ಬೇಲ್ಗಾಗಿ ಅರ್ಜಿ ನೀಡಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದು ಪವಿತ್ರಾಗೌಡ ಎಲ್ಲರಿಗಿಂತ ಮೊದಲು ಜೈಲಿನಿಂದ ಹೊರ ಬರಲು ರೆಡಿಯಾಗಿದ್ದು ಅದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಎಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅತ್ತ ದರ್ಶನ್ ಜೈಲುವಾಸಕ್ಕೆ ಒಗ್ಗಿಕೊಂಡ್ರೂ ಅಲ್ಲಿನ ಊಟ ಸೇರಲಾರದೇ ಮನೆ ಭೋಜನಕ್ಕೆ ಕೋರ್ಟ್ಗೆ ಮನವಿ ಮಾಡಿ ಮಾಡಿ ಕೊನೆಗೆ ಆ ಊಟಕ್ಕೂ ತಮ್ಮನ್ನು ಒಗ್ಗಿಕೊಂಡಿದ್ದಾರೆ. ದರ್ಶನ್ನಿಂದ ಹಿಡಿದು ಯಾವ ಆರೋಪಿಗೂ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವ ಲಕ್ಷಣವಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದುವಾಗಿರುವ ನಟಿ ಹಾಗೂ ಪ್ರಕರಣದ ಎ1 ಆರೋಪಿ…
ದಾಸರಹಳ್ಳಿ: ಇಲ್ಲಿನ ಪ್ರಸಿದ್ಧ ಬಾಗಲಗುಂಟೆ ಮಾರಮ್ಮ ದೇವಲಯದ ಬೀಗ ಹೊಡೆದು ಖದೀಮರು ಹುಂಡಿ ಹಣ ಕಳ್ಳತನ ಮಾಡಿರುವ ಘಟನೆ ಇಂದು ಬೆಳಗಿನ ಜಾವ 3:30ರ ಸುಮಾರಿನಲ್ಲಿ ಜರುಗಿದೆ. https://youtu.be/39giEKFiUBg?si=Q-HiVvX6bdLtSm9v ದೇವಾಲಯದ ಎರಡು ಹುಂಡಿಯಲ್ಲಿದ್ದ 20ಲಕ್ಷಕ್ಕೂ ಹೆಚ್ಚು ಹಣ ಕಳ್ಳತನ ಮಾಡಲಾಗಿದೆ. ಅರ್ಚಕ ಮಹೇಂದ್ರ ಪೂಜೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಮಾರಮ್ಮ ದೇವಾಲಯ ಇದ್ದು, ಪೊಲೀಸ್ ಬೀಟ್ ಹೆಚ್ಚಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ. ಇನ್ನೂ ದೇವಲಯಕ್ಕೆ ಸೂಕ್ತ ಭದ್ರತೆ ಕಲ್ಪಿಸದ ತಹಸಿಲ್ದಾರ್ ವಿರುದ್ಧ ಗ್ರಾಮಸ್ಥರು ಅಕ್ರೋಶ ಹೊರ ಹಾಕಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.