ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಜೈಲು ಸೇರಿದ್ದಾರೆ. ಪ್ರಕರದಲ್ಲಿ 17ಮಂದಿಯನನ್ನು ಬಂಧಿಸಿದ್ದು ಇವರುಗಳು ಜೈಲು ಸೇರಿ 75 ದಿನ ಕಳೆದಿದೆ. ಆದ್ರೆ ಇದುವರೆಗೂ ಯಾರೂ ಕೂಡ ಬಿಡುಗಡೆ ಬಯಸಿ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಖುದ್ದು ದರ್ಶನ್ ಕೂಡ ಬೇಲ್ಗಾಗಿ ಅರ್ಜಿ ನೀಡಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದು ಪವಿತ್ರಾಗೌಡ ಎಲ್ಲರಿಗಿಂತ ಮೊದಲು ಜೈಲಿನಿಂದ ಹೊರ ಬರಲು ರೆಡಿಯಾಗಿದ್ದು ಅದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಎಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅತ್ತ ದರ್ಶನ್ ಜೈಲುವಾಸಕ್ಕೆ ಒಗ್ಗಿಕೊಂಡ್ರೂ ಅಲ್ಲಿನ ಊಟ ಸೇರಲಾರದೇ ಮನೆ ಭೋಜನಕ್ಕೆ ಕೋರ್ಟ್ಗೆ ಮನವಿ ಮಾಡಿ ಮಾಡಿ ಕೊನೆಗೆ ಆ ಊಟಕ್ಕೂ ತಮ್ಮನ್ನು ಒಗ್ಗಿಕೊಂಡಿದ್ದಾರೆ. ದರ್ಶನ್ನಿಂದ ಹಿಡಿದು ಯಾವ ಆರೋಪಿಗೂ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವ ಲಕ್ಷಣವಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದುವಾಗಿರುವ ನಟಿ ಹಾಗೂ ಪ್ರಕರಣದ ಎ1 ಆರೋಪಿ…
Author: Prajatv Kannada
ದಾಸರಹಳ್ಳಿ: ಇಲ್ಲಿನ ಪ್ರಸಿದ್ಧ ಬಾಗಲಗುಂಟೆ ಮಾರಮ್ಮ ದೇವಲಯದ ಬೀಗ ಹೊಡೆದು ಖದೀಮರು ಹುಂಡಿ ಹಣ ಕಳ್ಳತನ ಮಾಡಿರುವ ಘಟನೆ ಇಂದು ಬೆಳಗಿನ ಜಾವ 3:30ರ ಸುಮಾರಿನಲ್ಲಿ ಜರುಗಿದೆ. https://youtu.be/39giEKFiUBg?si=Q-HiVvX6bdLtSm9v ದೇವಾಲಯದ ಎರಡು ಹುಂಡಿಯಲ್ಲಿದ್ದ 20ಲಕ್ಷಕ್ಕೂ ಹೆಚ್ಚು ಹಣ ಕಳ್ಳತನ ಮಾಡಲಾಗಿದೆ. ಅರ್ಚಕ ಮಹೇಂದ್ರ ಪೂಜೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮುಜರಾಯಿ ಇಲಾಖೆ ಸುಪರ್ದಿಯಲ್ಲಿರುವ ಮಾರಮ್ಮ ದೇವಾಲಯ ಇದ್ದು, ಪೊಲೀಸ್ ಬೀಟ್ ಹೆಚ್ಚಿಸುವಂತೆ ಗ್ರಾಮಸ್ಥರ ಮನವಿ ಮಾಡಿದ್ದಾರೆ. ಇನ್ನೂ ದೇವಲಯಕ್ಕೆ ಸೂಕ್ತ ಭದ್ರತೆ ಕಲ್ಪಿಸದ ತಹಸಿಲ್ದಾರ್ ವಿರುದ್ಧ ಗ್ರಾಮಸ್ಥರು ಅಕ್ರೋಶ ಹೊರ ಹಾಕಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಿವುಡ್ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಇನ್ನಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಶ್ರೇಯಸ್ ತಲ್ಪಾಡೆ ಅವರು ಇನ್ನಿಲ್ಲ ಎಂಬ ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಈ ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ. ಹೌದು, ನಟ ಶ್ರೇಯಸ್ ತಲ್ಪಾಡೆ ನಿಧನರಾಗಿದ್ದಾರೆ ಎಂಬ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ಪೋಸ್ಟ್ ನೋಡಿದ ನಟ ಶ್ರೇಯಸ್ ತಲ್ಪಾಡೆ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಖುದ್ದು ನಟ ಶ್ರೇಯಸ್ ತಲ್ಪಾಡೆ ಅವರೇ ಪೋಸ್ಟ್ ಮಾಡಿಕೊಳ್ಳುವ ಮೂಲಕ ನಾನು ಜೀವಂತವಾಗಿದ್ದೇನೆ. ನನ್ನ ಭಾವನೆಗಳೊಂದಿಗೆ ಆಟವಾಡಬೇಡಿ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ನಾನು ಜೀವಂತವಾಗಿದ್ದೇನೆ, ಸಂತೋಷವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನನ್ನ ಮರಣವನ್ನು ಹೇಳಿಕೊಳ್ಳುವ ವೈರಲ್ ಪೋಸ್ಟ್‌ನ ಬಗ್ಗೆ ನನಗೆ ಅರಿವಾಗಿದೆ. ಅದನ್ನು ನೋಡಿದ ಕೂಡಲೇ ಯಾರೋ ತಮಾಷೆಯಾಗಿ ಶುರು ಮಾಡಿದ್ದೆಲ್ಲ ಈಗ ಚಿಂತೆಯನ್ನು ಹುಟ್ಟುಹಾಕುವಂತಿದೆ. ನನ್ನ ಬಗ್ಗೆ ಅದರಲ್ಲೂ…
ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿ ಗತಿ ಬಗ್ಗೆ ಅಧ್ಯಯನ ನಡೆಸಿರುವ ಹೇಮಾ ವರದಿಯನ್ನು ಇತ್ತೀಚೆಗಷ್ಟೆ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಲಾಗಿದೆ. 2017ರಲ್ಲಿ ಮಲಯಾಳಂ ನಟಿಯೊಬ್ಬರ ಮೇಲೆ ಸ್ಟಾರ್ ನಟನೊಬ್ಬನ ಚೇಲಾಗಳಿಂದ ಅತ್ಯಾಚಾರ ಯತ್ನ ನಡೆದ ಬಳಿಕ ಹೇಮಾ ನಿಗಮವನ್ನು ರಚಿಸಲಾಗಿತ್ತು. ಮಾಜಿ ಹೈಕೋರ್ಟ್ ಜಡ್ಜ್ ಹೇಮಾ, ನಿವೃತ್ತ ಐಎಎಸ್ ಅಧಿಕಾರಿ, ಹಿರಿಯ ನಟಿ ಶಾರದಾ ಇನ್ನಿತರರನ್ನು ಈ ಸಮಿತಿ ಒಳಗೊಂಡಿತ್ತು. 2019ರಲ್ಲಿಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತಾದರೂ ಸೂಕ್ಷ್ಮ ಅಂಶಗಳನ್ನು ವರದಿ ಒಳಗೊಂಡಿದ್ದರಿಂದ ಸರ್ಕಾರ ಅದನ್ನು ಬಹಿರಂಗಪಡಿಸಿರಲಿಲ್ಲ. ಬಳಿಕ ಹಲವು ಆರ್ಟಿಐ ಅರ್ಜಿಗಳು ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ಈಗ ಬಹಿರಂಗಪಡಿಸಲಾಗಿದೆ. ಹೇಮಾ ವರದಿಯಲ್ಲಿ ಮಲಯಾಳಂ ಚಿತ್ರರಂಗದ ಕರಾಳ ಮುಖ ಬಯಲಾಗಿದೆ. ಹಲವು ಸಿನಿಮಾ ನಟಿಯರು ಅನುಭವಿಸಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಹಿಂದಿನ ರಾತ್ರಿ ಯಾವ ನಟನಿಂದ ಲೈಂಗಿಕ ದೌರ್ಜನ್ಯ ಎದುರಿಸಿದ್ದರೋ ಅದೇ ನಟನ ಜೊತೆಗೆ ಬೆಳೆಗೆದ್ದು ಪತಿ-ಪತ್ನಿಯಾಗಿ ನಟಿಸಬೇಕಿತ್ತು. ನನಗೆ ಪ್ರೀತಿಯಿಂದ ನಟಿಸಲು ಸಾಧ್ಯವಾಗದೆ 17 ಟೇಕ್ ತೆಗೆದುಕೊಂಡೆ…
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ಗೆ ಮನೆ ಊಟ ಬೇಕೆಂದು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು (ಆಗಸ್ಟ್ 20) ನಡೆಯಲಿದೆ. ಅನಾರೋಗ್ಯದ ಕಾರಣದಿಂದ ಮನೆ ಊಟ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ನಟ ದರ್ಶನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ಇಂದು ನಡೆಸಲಿದೆ. ಕಳೆದ ಬಾರಿ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈಗಾಗಲೇ ವರದಿ ಸಲ್ಲಿಕೆ ಆಗಲಿದ್ದು, ಇಂದು ಹೈಕೋರ್ಟ್ ಏಕ ಸದಸ್ಯ ಪೀಠ ತನ್ನ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ. ಜೈಲು ಅಧಿಕಾರಿಗಳು, ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗಿದೆ. ಜೈಲಿನ ವೈದ್ಯಾಧಿಕಾರಿಗಳು ಸಹ ದರ್ಶನ್ಗೆ ಮನೆ ಊಟದ ಅವಶ್ಯಕತೆ ಇಲ್ಲವೆಂದೇ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು…
ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದೆ. ಕಳೆದ ತಡರಾತ್ರಿ ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಂಧನಕ್ಕೆ ತೆರಳಿದ ಪೊಲೀಸ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ರೌಡಿ ಶೀಟರ್ ಆರೋಪಿಗೆ ಪೊಲೀಸರು ಕಾಲಿಗೆ ಗುಂಡು ಹೊಡೆದುಬಂಧನ ಮಡಿರುವ ಘಟನೆ ನಡೆದಿದೆ. ರೌಡಿಶೀಟರ್ ಅಪ್ತಾಬ್ ಕರಡಿಗುಡ್ಡ ಪೊಲೀಸರಿಂದ ಗುಂಡೇಟು ತಿಂದಿದ್ದ ಆರೋಪಿಯಾಗಿದ್ದಾನೆ. ಕಳೆದ ಭಾನುವಾರದಂದು ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗ ವಾರ್‌ನಲ್ಲಿ ಜಾವೂರ್ ಎಂಬಾತ ಗಾಯವಾಗೊಂಡಿದ್ದ, ಗಾಯಾಳನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ದೂರು ಪಡೆದುಕೊಂಡು ಆರೋಪಿಗಳ ಬಂಧನಕ್ಕೆ ಕಸಬಾ ಠಾಣೆಯ ಪೊಲೀಸರು ಮುಂದಾಗಿದ್ದರು. ಈ ವೇಳೆ ಬುಡರಸಿಂಗಿ ರಸ್ತೆಯಲ್ಲಿ ಆರೋಪಿ ಅಪ್ತಾಬ್ ಕರಡುಗುಡ್ಡ ಬಂಧನಕ್ಕೆ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ತಂಡ ತೆರಳಿತ್ತು. ಆದರೆ ಈ ವೇಳೆ ಅಪ್ತಾಬ್ ಪೊಲೀಸ ಸಿಬ್ಬಂದಿಗಳಾದ ರಾಜು ರಾಠೋಡ್ ಮತ್ತು ಪಾಲಯ್ಯ ಮೇಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಕೂಡಲೇ ಅಲರ್ಟ್ ಆದ ಇನ್ಸ್ಪೆಕ್ಟರ್ ರಾಘವೇದ್ರ…
ಕ್ಯಾನ್ಸರ್‌ನಲ್ಲಿ ಕೂಡ ಅನೇಕ ಬಗೆಯ ಕ್ಯಾನ್ಸರ್‌ಗಳು ಇರುವುದನ್ನು ಕಾಣಬಹುದಾಗಿದೆ. ಇನ್ನೂ ನೀವೇನಾದರು ಅಂಡಾಶಯ ಕ್ಯಾನ್ಸರ್ ಬಗ್ಗೆ ತಿಳದುಕೊಳ್ಳಬೇಕೆಂದು ಭಯಯಸಿದರೆ ಇಲ್ಲಿ ನೀಡಿರು ನಾಲ್ಕು ಸರಳ ವಿಧಾನಗಳನ್ನು ಅನುಸರಿಸಿ ಅಂಡಾಶಯದ ಕ್ಯಾನ್ಸರ್ ಇಂದು ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾದ ಕಾಯಿಲೆಯಾಗಿದೆ, ಅಂಡಾಶಯದಲ್ಲಿ ರೂಪುಗೊಳ್ಳುವ ಜೀವಕೋಶಗಳ ಬೆಳವಣಿಗೆಯಾಗಿದೆ. ಜೀವಕೋಶಗಳು ವೇಗವಾಗಿ ಗುಣಿಸುತ್ತವೆ ಮತ್ತು ಆರೋಗ್ಯಕರ ದೇಹದ ಅಂಗಾಂಶವನ್ನು ನಾಶಮಾಡುತ್ತವೆ. ಇದು ರೋಗ ಉಲ್ಬಣಗೊಳ್ಳಲು ಕಾರಣವಾಗುತ್ತದೆ. ಅಂಡಾಶಯದ ಕ್ಯಾನ್ಸರ್ ಅದರ ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚಲು ಕಷ್ಟಕರವಾದ ಕಾಯಿಲೆಯಾಗಿದೆ, ಅದು ತೀವ್ರವಾಗಿ ಮತ್ತು ಚಿಕಿತ್ಸೆ ನೀಡಲು ಕಷ್ಟಕರವಾದಾಗ ಮಾತ್ರ ತಿಳಿಯುತ್ತದೆ. ಆದಾಗ್ಯೂ, ಈ ನಾಲ್ಕು ರೋಗಲಕ್ಷಣಗಳ ಮೂಲಕ ಅಂಡಾಶಯದ ಕ್ಯಾನ್ಸರ್ ಅನ್ನು ಅದರ ಆರಂಭಿಕ ಹಂತಗಳಲ್ಲಿ ಗುರುತಿಸಬಹುದು ಎಂದು ಹೊಸ ಅಧ್ಯಯನವು ಹೇಳುತ್ತದೆ. ರೋಗದ ಕುರಿತಾದ ಆರಂಭಿಕ ಪತ್ತೆ ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಂಡಾಶಯದ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ತಪ್ಪಾಗಿ ನಿರ್ಣಯಿಸಲಾಗುತ್ತದೆ ಏಕೆಂದರೆ ರೋಗಲಕ್ಷಣಗಳು ಅಸ್ಪಷ್ಟವಾಗಿರುತ್ತವೆ ಮತ್ತು ಇತರ ಕಾಯಿಲೆಗಳಿಗೆ ಹೋಲುತ್ತವೆ. ಆರಂಭಿಕ ಹಂತದಲ್ಲಿ ಅಂಡಾಶಯದ ಕ್ಯಾನ್ಸರ್ ಪತ್ತೆಯಾದರೆ…
ಕೋಲಾರ: ಇತ್ತೀಚೆಗೆ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಲಾಯ್ತು. ಇದರ ಬೆನ್ನಲ್ಲೇ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೋಲಾರದ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದಲ್ಲಿ7 ವರ್ಷದ ಬಾಲಕಿಯ ಮೇಲೆಮೊಬೈಲ್ ಆಸೆ ತೋರಿಸಿಅತ್ಯಾಚಾರವೆಸಗಿದ್ದಾನೆ. ಸಂದೀಪ್ ಎಂಬಾತ ಈ ಕೃತ್ಯ ನಡೆಸಿದ್ದಾನೆ. ಬಾಲಕಿ ಮನೆಯಲ್ಲಿ ಆಡುವಾಡುತ್ತಿದ್ದಳು. ಈ ವೇಳೆ ಬಾಲಕಿಯ ತಂದೆ ಜತೆಗೆ ಮಾತನಾಡುವ ನೆಪದಲ್ಲಿ ಬಂದಿದ್ದ ಈ ಸಂದೀಪ್, ಬಳಿಕ ಮೊಬೈಲ್ ಆಸೆ ತೋರಿಸಿ ಕರೆದಿದ್ದಾನೆ. ಸಂದೀಪ್ ಪರಿಚಯಸ್ಥನೇ ಆಗಿದ್ದರಿಂದ ಬಾಲಕಿ ಮೊಬೈಲ್ ನೋಡಲು ಆತನೊಂದಿಗೆ ಹೋಗಿದ್ದಾಳೆ. ಮನೆಯ ಮಹಡಿ ಮೇಲೆ ಕರೆದುಕೊಂಡು ಹೋದ ಸಂದೀಪ್ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಬಾಲಕಿ ನೋವಿನಿಂದ ಕೂಗಿಕೊಂಡಾಗ ಆಕೆಯ ಬಾಯಿಮುಚ್ಚಿ ದೌರ್ಜನ್ಯ ನಡೆಸಿದ್ದಾನೆ. ಅತ್ಯಾಚಾರ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ವಾಪಸ್ ಮನೆಗೆ ಬಂದ ಬಾಲಕಿ ಮಂಕಾಗಿದ್ದಾಳೆ. ಆಕೆ ನೋವಿನಿಂದ ಒದ್ದಾಡುತ್ತಿದ್ದನ್ನು ಗಮನಿಸಿದ ಬಾಲಕಿ ತಾಯಿ ವಿಚಾರಿಸಿದ್ದಾರೆ. ಆಗ ಬಾಲಕಿ ನಡೆದಿದ್ದನ್ನು ಹೇಳಿದ್ದಾಳೆ. ಕೂಡಲೇ ಅಸ್ವಸ್ಥಳಾಗಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು…
ಬೆಂಗಳೂರು:- ರಾಜ್ಯದಲ್ಲಿ ಗಲಾಟೆ, ಹಲ್ಲೆಯಾದ್ರೆ ಅದಕ್ಕೆ ರಾಜ್ಯಪಾಲರೇ ನೇರ ಹೊಣೆ ಎಂದು ಸಿಎಂ ಆಪ್ತ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. https://youtu.be/ACgZC-HRwbA?si=F0nZzEYfXZCBvwzI ರಾಜ್ಯಪಾಲರ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಪ್ರಶ್ನೆಯೇ ಇಲ್ಲ . ಬಿಜೆಪಿ, ಜೆಡಿಎಸ್ ಏನೇ ಮಾಡಿದರೂ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಆಗಲ್ಲ. ವರಿಷ್ಠರು, ರಾಜ್ಯದ ಏಳು ಕೋಟಿ ಜನ ಸಿಎಂ ಪರವಾಗಿ ಇದ್ದಾರೆ. ಏನಾದರೂ ಗಲಾಟೆ, ಹಲ್ಲೆಯಾದ್ರೆ ಅದಕ್ಕೆ ರಾಜ್ಯಪಾಲರೇ ಹೊಣೆ. ಕರ್ನಾಟಕದ ಜನ ಸುಮ್ಮನೆ ಕೂರಲ್ಲ ಎಂದರು. ಹಿಂದುಳಿದ ವರ್ಗದ ನಾಯಕನಾಗಿರುವುದಕ್ಕೆ ಸಿಎಂ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಸಂವಿಧಾನ ವಿರುದ್ಧವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ಕಚೇರಿ ಮಾಡಿಕೊಂಡಿದ್ದಾರೆ. ಬಿಜೆಪಿ ಸರ್ಕಾರದಲ್ಲೇ ಕಾಲದಲ್ಲಿ 14 ನಿವೇಶನ ಕೊಟ್ಟಿದ್ದಾರೆ. ಸಿಎಂ ಪಾಪ್ಯುಲಾರಿಟಿ ಸಹಿಸಲಾಗದೆ ಸರ್ಕಾರ ತೆಗೆಯಲು ಯತ್ನಿಸಲಾಗುತ್ತಿದೆ. ಬಿಜೆಪಿಯವರಿಗೆ ಜನ…
ಬೆಂಗಳೂರು:- ಥಾವರ್ ಚಂದ್ ಗೆಹ್ಲೋಟ್ ಒಬ್ಬ ಅಯೋಗ್ಯ, ಬೇಜವಾಬ್ದಾರಿ ಗವರ್ನರ್ ಎಂದು ಹೇಳುವ ಮೂಲಕ ರಾಜ್ಯಪಾಲರ ವಿರುದ್ಧ ಏಕವಚನದಲ್ಲೇ ಸಲೀಂ ಅಹ್ಮದ್ ವಾಗ್ದಾಳಿ ಮಾಡಿದ್ದಾರೆ. https://youtu.be/aS_hb7EKut8?si=6Cl3yUIZSoKYg17O ಯಾವುದೇ ದಾಖಲೆ ಇಲ್ಲದೇ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ನಾವು ಸುಮ್ಮನೆ ಕೂರಲ್ಲ, ಹೋರಾಟ ಮಾಡ್ತೀವಿ ಎಂದು ಕಿಡಿಕಾರಿದ್ದಾರೆ. ಇನ್ನೂ ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟ ವಿಚಾರ, ಕಾಂಗ್ರೆಸ್ ಪಡೆ ಕೆರಳಿ ಕೆಂಡವಾಗುವಂತೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವ ಇಡೀ ಪಕ್ಷ ಷಡ್ಯಂತ್ರಕ್ಕೆ ಸವಾಲು ಎಂದು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ. ಬೆಂಕಿ ಹಚ್ಚಿ, ದಿಕ್ಕಾರ ಕೂಗಿ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.