ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗಿದೆ. ರಾಜ್ಯದ 43 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು ಶಾಂತಿಯುತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಸಮಗ್ರ ವ್ಯವಸ್ಥೆ ಮಾಡಿರುವುದಾಗಿ ಚುನಾವಣಾ ಆಯೋಗ ಹೇಳಿಕೊಂಡಿದೆ.ಇಂದು ಜಾರ್ಖಂಡ್‌ನ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, 24 ಜಿಲ್ಲೆಗಳ ಒಟ್ಟು 81 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನದ ಕ್ಷೇತ್ರಗಳಲ್ಲಿ 685 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ 20ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, 38 ಕ್ಷೇತ್ರಗಳಲ್ಲಿ ಉಳಿದ 528 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಇಂಡಿಯಾ ಮೈತ್ರಿಕೂಟದಲ್ಲಿ ಜೆಎಂಎಂ, ಕಾಂಗ್ರೆಸ್, ಆರ್ ಜೆಡಿ ಇದೆ. ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ, ಜೆಡಿಯು, ಎಲ್‌ಜೆಪಿ ಮತ್ತು ಎಜೆಎಸ್‌ಯು ಒಂದಾಗಿ ಸ್ಪರ್ಧಿಸಲಿವೆ. ಜಾರ್ಖಂಡ್ ಚುನಾವಣೆಯ ಮೊದಲ ಹಂತದ ಪ್ರಮುಖ ಅಭ್ಯರ್ಥಿಗಳೆಂದರೆ, ಚಂಪೈ ಸೊರೆನ್, ಮಹುವಾ ಮಜಿ, ಗೀತಾ ಕೋಡಾ, ಅಜೋಯ್ ಕುಮಾರ್, ಬನ್ನಾ ಗುಪ್ತಾ ಮತ್ತು ಸುಖರಾಮ್ ಓರಾನ್. ಮೊದಲ ಹಂತದ ಮತದಾನದಲ್ಲಿ…
Author: Prajatv Kannada
ಶಿಗ್ಗಾವಿ:- ಉಪ ಚುನಾವಣೆ ಹಿನ್ನೆಲೆ, ಮತದಾನಕ್ಕೂ ಮುನ್ನ ಶಿಗ್ಗಾಂವಿಯಲ್ಲಿ “ಕೈ” ಅಭ್ಯರ್ಥಿಗೆ ಬಿಗ್ ಶಾಕ್ ಎದುರಾಗಿದ್ದು, ಚುನಾವಣಾ ಆಯುಕ್ತರಿಗೆ ಬಿಜೆಪಿ ದೂರು ಕೊಟ್ಟಿದೆ.ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ರೌಡಿ ಶೀಟ್ ಪ್ರಕರಣ ಇದೆ. ಆದ್ರೆ, ಅವರು ನಾಮಪತ್ರದ ಅಫಡವಿಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಕೇಸ್ ಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಹೀಗಾಗಿ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಚುನಾವಣಾ ಏಜೆಂಟ್ ಎಸ್ ಕೆ ಅಕ್ಕಿ ಅವರು ಇ – ಮೇಲ್ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದಾರೆ. ಯಾಸೀರ್ ಖಾನ್ ಪಠಾಣ್ ಮೇಲೆ ರೌಡಿ ಶೀಟರ್ ಸ್ಟೇಟಸ್ ಇದೆ ಎಂದು ಹಾವೇರಿ ಎಸ್ ಪಿ ಹೇಳಿಕೆ ನೀಡಿದ್ದಾರೆ. ಆದ್ರೆ, ಪಠಾಣ್ ಅಫಡವಿಟ್ ನಲ್ಲಿ ತಮ್ಮ ವಿರುದ್ಧ ಯಾವುದೇ ಕೇಸ್ ಗಳಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಕಳೆದ ಚುನಾವಣೆ ವೇಳೆ ಅವರ ಮೇಲೆ ಹಲವು ಕೇಸ್ ಇದ್ದವು. ಆದರೆ ಆಶ್ಚರ್ಯ ಅಂದರೆ ಉಪ ಚುನಾವಣೆಗೆ ಸಲ್ಲಿಸಿರುವ ಅಪಡವಿಟ್ ನಲ್ಲಿ ಕೇಸ್ ಗಳು…
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂ ಬೆಳಗ್ಗೆ ತುಂತುರು ಮಳೆ ಶುರುವಾಗಿದೆ. ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ತುಂತುರು ಮಳೆ ಶುರುವಾಗಿದೆ. https://youtu.be/8IfslRZ8xxM?si=0M3mbFlQq_DLyDpG ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಜಿಲ್ಲೆಗಳಿಗೆ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಿದೆ. ಇಂದು ಮತ್ತು ನಾಳೆ ಮಳೆಯ ಮುನ್ಸೂಚನೆ ನೀಡಿದ್ದು, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿದೆ.
ಚನ್ನಪಟ್ಟಣ:- ಉಪಚುನಾವಣೆ ಹಿನ್ನೆಲೆ, ಚನ್ನಪಟ್ಟಣದಲ್ಲಿ ಸಾಂಪ್ರದಾಯಿಕ ಗೊಂಬೆ ಮತಗಟ್ಟೆ ಗಮನ ಸೆಳೆದಿದೆ. ಬೆಳಗಿನ ಜಾವ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ಇದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 276 ಮತಗಟ್ಟೆಗಳ ಸ್ಥಾಪನೆ ಮಾಡಗಿದೆ. ನಗರ ಪ್ರದೇಶದಲ್ಲಿ 62, ಗ್ರಾಮೀಣ ಪ್ರದೇಶದಲ್ಲಿ 214 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 276 ಮತಗಟ್ಟೆಗಳಲ್ಲಿ ಆಯೋಗ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಿದೆ. 276 ಮತಗಟ್ಟೆಗಳ ಪೈಕಿ 119 ಮತಗಟ್ಟೆಗಳನ್ನು ಸೂಕ್ಷ್ಮವೆಂದು ಗುರುತಿಸಲಾಗಿದೆ. ಚುನಾವಣಾ ಆಯೋಗ 119 ಮೈಕ್ರೋ ಅಬ್ಸರ್ವರ್ಸ್ ನಿಯೋಜಿಸಲಾಗಿದೆ. ಚನ್ನಪಟ್ಟಣ ಗೊಂಬೆಗಳಿಗೆ ವಿಶ್ವ ವಿಖ್ಯಾತಿ ಪಡೆದಿದೆ. ಇಲ್ಲಿನ ಗೊಂಬೆಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಚುನಾವಣಾ ಆಯೋಗ ಗೊಂಬೆ ಮತಗಟ್ಟೆ ನಿರ್ಮಾಣ ಮಾಡಿದೆ. ಈ ಮೂಲಕ ಚನ್ನಪಟ್ಟಣ ಗೊಂಬೆಗಳ ವಿಶೇಷ ಪ್ರಾಶಸ್ತ್ಯ ನೀಡಿದೆ. ಚನ್ನಪಟ್ಟಣದ ಕೋಟೆ ಬಡಾವಣೆಯಲ್ಲಿ ವಿಶೇಷ ಸಾಂಪ್ರದಾಯಿಕ ಗೊಂಬೆ ಮತಗಟ್ಟೆ ನಿರ್ಮಿಸಲಾಗಿದೆ. ಮತಗಟ್ಟೆ ಹೊರಭಾಗದಲ್ಲಿ ಆಕರ್ಷಕ ಬಲೂನ್ ಕಮಾನು, ಗೊಂಬೆಗಳ ಫ್ಲೆಕ್ಸ್ ಅಳವಡಿಸಲಾಗಿದೆ. ಮತದಾನ ಮಾಡಲು ಬಂದಿರುವ ಮತದಾರರು ಗೊಂಬೆ ಮತಗಟ್ಟೆ…
ಬೆಂಗಳೂರು:- ಗಾಡಿಗೆ ಸೈಡ್ ಬಿಡದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನ ಕಾರ್ಪೋರೇಷನ್ ಬಳಿ ಜರುಗಿದೆ. ಬಸ್ ವಿಂಡೋವನ್ನ ಪುಡಿ ಪುಡಿ ಮಾಡಿ ಬಸ್ ಚಾಲಕನನ್ನ ಕೆಳಗಿಳಿಸಿ ಹಲ್ಲೆ ಮಾಡಲಾಗಿದೆ. ದ್ವಿಚಕ್ರ ವಾಹನದಲ್ಲಿ ಯುವಕ ಹೋಗುತ್ತಿದ್ದ. ಈ ವೇಳೆ ಬಸ್ ಹಾಗೂ ಡಿವೈಡರ್ ಮಧ್ಯೆ ಯುವಕ ಗಾಡಿ ನುಗ್ಗಿಸಿದ್ದಾನೆ. ಬಳಿಕ ಬಸ್ ಡ್ರೈವರ್ ಗೆ ಸೈಡ್ ಕೊಡುವಂತೆ ಅವಾಜ್ ಹಾಕಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಗ್ಯಾರೇಜ್ ಯುವಕ ನಲ್ಲಿ ಕೆಲಸ ಮಾಡುತ್ತಿದ್ದ. ಟೂಲ್ಸ್ ಸಮೇತ ಗಾಡಿಯಲ್ಲಿ ಹೋಗ್ತಿದ್ದ. ಸಿಗ್ನಲ್ ಬಳಿ ಬಸ್ ನಿಲ್ಲಿಸ್ತಿದ್ದಂತೆ ಬಸ್ ಚಾಲಕನ ಮೇಲೆ ದಾಳಿ ನಡೆದಿದೆ. ಟೂಲ್ಸ್ ನಿಂದ ಬಿಎಂಟಿಸಿ ಬಸ್ ಡ್ರೈವರ್ ಮೇಲೆ ಹಲ್ಲೆ ನಡೆದಿದೆ. ಕೂಡಲೇ ಆರೋಪಿಯನ್ನ ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಆರೋಪಿ ಥಳಿಸಿ ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಹೆಣ್ಣೂರು ಬಂಡೆ, ಸಮುದ್ರಿಕಾ ಎನ್‌ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತು ಜಯಂತಿ ಕಾಲೇಜು, ಕೆ ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್‌ಶಿಪ್, ಐಶ್ವರ್ಯ ಲೇಔಟ್, ಮಾರುತಿ ಟೌನ್‌ಶಿಪ್, ನಗರಗಿರಿ ಟೌನ್‌ಶಿಪ್, ಕೆ ನಾರಾಯಣಪುರ ಕ್ರಾಸ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಆಂಜನಪ್ಪ ಜಿ. https://youtu.be/kNDPmHdtQUU?si=HhUiLMjYHM28CIw8 ಕ್ರಾಸ್, ಬೈರತಿ ಗ್ರಾಮ, ಎವರ್ಗ್ರೀನ್ ಲೇಔಟ್, ಕನಕಶ್ರೀ ಲೇಔಟ್, ಗೆದ್ದಲಹಳ್ಳಿ, ಬ್ಲೆಸ್ಸಿಂಗ್ ಗಾರ್ಡನ್, ಮಂತ್ರಿ ಅಪಾರ್ಟ್‌ಮೆಂಟ್, ಹಿರೇಮಠ ಲೇಔಟ್, ಟ್ರಿನಿಟಿ ಫಾರ್ಚೂನ್, ಮೈಕಲ್ ಸ್ಕೂಲ್, ಬಿಎಚ್‌ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ಅನುಗ್ರಹ ಲೇಔಟ್, ದೋಡ್‌ಆರ್‌ಸಿ ವಿದ್ಯಾನಗರ, ಕಾವೇರಿ ಲೇಔಟ್, ಕಾವೇರಿ, ಅತ್ತೂರು ಕುವೆಂಪು ಲೇಔಟ್, ಸಂಗಮ್ ಎನ್‌ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಆಂಧ್ರ ಕಾಲೋನಿ, ಮಂಜುನಾಥ ನಗರ, ಹೊರಮಾವು ಬಿಬಿಎಂಪಿ, ಅಗರ ಗ್ರಾಮ, ಪಟಾಲಮ್ಮ ದೇವಸ್ಥಾನ, ಎಕೆಆರ್ ಸ್ಕೂಲ್ ನ್ಯೂ ಮಿಲೇನಿಯಂ ಶಾಲೆ, ಲಕ್ಕಮ್ಮ ಲೇಔಟ್, ಪ್ರಕಾಶ್ ಗಾರ್ಡನ್, ಕ್ರಿಶ್ಚಿಯನ್ ಕಾಲೇಜು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ…
ಕಾಲಿವುಡ್ನ ಖ್ಯಾತ ನಟ ನೆಪೋಲಿಯನ್ ಮಗ ಧನುಷ್ ವಿವಾಹವನ್ನು ನ. 7ರಂದು ಜಪಾನ್ನಲ್ಲಿ ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಧನುಷ್ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವಾಗಲೇ ತಮಿಳುನಾಡಿನ ಖ್ಯಾತ ಸಾಮಾಜಿಕ ಕಾರ್ಯಕರ್ತ ಕೃಷ್ಣವೇಲ್ ನೀಡಿರುವ ಹೇಳಿಕೆಗಳು ಭಾರಿ ಚರ್ಚೆಗೆ ಕಾರಣವಾಗಿದೆ. ನೆಪೋಲಿಯನ್ ಮಗನಿಗೆ ನಡೆದ ಮದುವೆ ಒಂದು ಕೈಗೊಂಬೆ ಮದುವೆ ಎಂದು ಕೃಷ್ಣವೇಲ್ ಟೀಕಿಸಿದ್ದಾರೆ. ನೆಪೋಲಿಯನ್ ಪುತ್ರ ಧನುಷ್ ಹಾಗೂ ಅಕ್ಷಯ ಮದುವೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಸ್ಕ್ಯುಲರ್ ಡಿಸ್ಟ್ರೋಫಿ ಎಂಬ ಕಾಯಿಲೆಯಿಂದ ಬಳಲುತ್ತಿರುವ ಧನುಷ್, ಜೀವನವಿಡಿ ಎದ್ದು ನಡೆಯಲಾಗದಂತಹ ಸ್ಥಿತಿಯಲ್ಲಿದ್ದಾರೆ. ಯಾವಾಗಲೂ ಕುರ್ಚಿಯ ಆಸರೆ ಇರಬೇಕು. ಹೀಗಿರುವಾಗ ಧನುಷ್, ವೈವಾಹಿಕ ಜೀವನ ನಡೆಸುವುದು ಸಾಧ್ಯವೇ? ಹಣಕ್ಕಾಗಿ ಈ ಹೆಣ್ಣು ತನ್ನ ಜೀವನವನ್ನೇ ಹಾಳು ಮಾಡಿಕೊಂಡಿದ್ದಾಳೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆರಂ ನಾಡು ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿರುವ ರಾಜಕೀಯ ವಿಮರ್ಶಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೃಷ್ಣವೇಲ್, ಈ ಮಹಿಳೆಯನ್ನು ನೆಪೋಲಿಯನ್ ಪುತ್ರ…
ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾಯ್ತಿರ್ತಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್ ಖಾನ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ 2022 ರಲ್ಲಿ ಬಿಡುಗಡೆಯಾಯಿತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾ ಫ್ಲಾಪ್ ಆಗಿತ್ತು. ಅದರ ನಂತರ, ಆಮೀರ್ ನಟನೆಯನ್ನು ಬಿಡಲು ನಿರ್ಧರಿಸಿದ್ರಂತೆ. ಇದೀಗ ಈ ದೊಡ್ಡ ನಿರ್ಧಾರದ ಹಿಂದಿನ ಕಾರಣ ರಿವೀಲ್ ಮಾಡಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅಮೀರ್ ಖಾನ್, ನಟನೆಯನ್ನು ತ್ಯಜಿಸುವ ನಿರ್ಧಾರದ ಬಗ್ಗೆ ಹೇಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲಿನಿಂದ ಕಂಗೆಟ್ಟು ನಟನೆಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ನಾನು ಬರಲಿಲ್ಲ ಎಂದಿದ್ದಾರೆ. ಸಿನಿಮಾ ಕೆಲಸದ ಬಗ್ಗೆ ಮಾತಾಡಿದ ನಟ ಅಮೀರ್ ಖಾನ್, “ನಾನು 18 ವರ್ಷದವನಾಗಿದ್ದಾಗಿನಿಂದಲೂ ನನ್ನ ಗಮನವೆಲ್ಲಾ ಕೆಲಸದ…
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ದನಿಯೋಳೆ’ ಹಾಡು ಸೈಪರ್ ಹಿಟ್ ಆಗಿತ್ತು. ಈ ಹಾಡು ಹಾಡಿದ್ದು ಜಸ್ ಕರಣ್ ಸಿಂಗ್. ಇದೀಗ ಈ ಜಸ್ ಕರಣ್ ಸಿಂಗ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ಹಾಡಿಗೆ ಧನಿಯಾಗಿದ್ದಾರೆ. ಮೂಲತಃ ಪಂಜಾಬ್ನವರಾದರೂ ರಿಯಾಲಿಟಿ ಶೋಗಳ ಮೂಲಕ ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಮಧುರ ಕಂಠದಿಂದಾಗಿ ಕನ್ನಡದವರೇ ಆಗಿಬಿಟ್ಟಿರುವ ಜಸ್ ಕರಣ್ ಸಿಂಗ್ ಈಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಸಿನಿಮಾದ ಹೆಸರು ‘ಅಂಶು’. ‘ಗಟ್ಟಿಮೇಳ’ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ‘ಅಂಶು’ ಸಿನಿಮಾನಲ್ಲಿ ಜಸ್ ಕರಣ್ ಸಿಂಗ್ ಮಧುರವಾದ ಹಾಡೊಂದನ್ನು ಹಾಡಿದ್ದಾರೆ. ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಕಾಣಿಸಿಕೊಂಡಿದ್ದಾರೆ. ಮಹಿಳೆಯ ಆಂತರಿಕ ತುಮುಲಗಳನ್ನು, ಮಾಡುತ್ತಿರುವ ಹೋರಾಟವನ್ನು ಹೇಳುವ ಹಾಡುವ ಇದಾಗಿದ್ದು, ಜಸ್ ಕರಣ್ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಈಗ ಬಿಡುಗಡೆ ಆಗಿರುವ ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಜೊತೆಗೆ ಸಿನಿಮಾದ ಕೆಲವು ತುಣುಕುಗಳನ್ನು ಸೇರಿಸಲಾಗಿದೆ. ಚಿತ್ರ ಸನ್ನಿವೇಶಗಳಿಗೆ…