Author: Prajatv Kannada

ಆನೇಕಲ್:- ಬೆಂಗಳೂರು ಹೊರ ವಲಯದ ಆನೇಕಲ್ ನ ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಆರು ಮಂದಿ ರೋಗಿಗಳಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ. ಆರು‌ ಮಂದಿಗೆ ಚಳಿ, ಜ್ವರ ಮತ್ತು ಮೈಕೈ ನೋವಿನಿಂದ ಡೆಂಗ್ಯೂ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಡೆಂಗ್ಯೂ ರ‍್ಯಾಂಡಮ್‌ ಟೆಸ್ಟ್ ವೇಳೆ ಝಿಕಾ ವೈರಸ್ ಪತ್ತೆಯಾಗಿದೆ. ಸದ್ಯ ಮನೆಯಲ್ಲಿ ಎಲ್ಲರೂ ವಿಶ್ರಾಂತಿ ಪಡೆಯುತ್ತಿದ್ದಾರೆ. ಝಿಕಾ ವೈರಸ್ ಪತ್ತೆ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಜಿಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ 3 ಕಿ.ಮೀ ರೇಡಿಯಸ್ ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ಕ್ರಮವಹಿಸಲಾಗಿದ್ದು, ಫಾಗಿಂಗ್, ಲಾರ್ವ ನಾಶ ಸೇರಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

Read More

ಬೆಂಗಳೂರು:- ಚಂದ್ರಲೇಔಟ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ತಾಯಿ-ಮಗನನ್ನು ಕಿಡ್ನ್ಯಾಪ್‌ ಮಾಡಿ ಕಿರುಕುಳ ನೀಡಿದ ಆರೋಪದಲ್ಲಿ 9 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹಣ ವಸೂಲಿ ಮಾಡಲು ಯುವಕ ಹಾಗೂ ಆತನ ತಾಯಿಯನ್ನು ಆರೋಪಿಗಳು ಅಪಹರಿಸಿ, ಕಿರುಕುಳ ನೀಡಿದ್ದರು ಎನ್ನಲಾಗಿದೆ. ವರುಣ್ ಮತ್ತು ಆತನ ತಾಯಿಯನ್ನು ಅಪಹರಣ ಮಾಡಲಾಗಿತ್ತು. ರೌಡಿ ಶೀಟರ್‌ಗಳಾದ ಜೋಸೆಫ್, ಶ್ರೀನಿವಾಸ್ @ ಪಾಗಲ್ ಸೀನಾ, ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು ಎನ್ನಲಾಗಿದೆ. ವರುಣ್ ಹಾಗೂ ತಾಯಿ ಇಬ್ಬರು ಸೇರಿ ಕಳ್ಳತನ ಮಾಡಿರುವ ವಿಚಾರ ಆರೋಪಿಗಳಿಗೆ ತಿಳಿದಿತ್ತು. ಹಾಗಾಗಿ ಕಳ್ಳತನ ಮಾಡಿರುವ ಹಣ ನೀಡುವಂತೆ ತಾಯಿ-ಮಗನನ್ನು ಆರೋಪಿಗಳು ಬೆದರಿಸಿದ್ದರು. ಆದರೆ, ಅವರು ಹಣ ನೀಡದ ಹಿನ್ನೆಲೆ ತಾಯಿ- ಮಗನನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಆ. 13ರಂದು ತಾಯಿ-ಮಗನನ್ನು ಆರೋಪಿಗಳಾದ ಜೋಸೇಫ್ ಮತ್ತು ಶ್ರೀನಿವಾಸ್@ಪಾಗಲ್ ಸೀನಾ ಕಿಡ್ನ್ಯಾಪ್‌ ಮಾಡಿದ್ದರು. ನಂತರ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ನೀಡಲಾಗಿದೆ. ಈ ವೇಳೆ…

Read More

ಪ್ರತಿ ಶ್ರಾವಣ ಮಾಸದಲ್ಲಿ ರಕ್ಷಾ ಬಂಧನ (Raksha Bandhan 2024) ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟುತ್ತಾರೆ. ಅನಾದಿ ಕಾಲದಿಂದಲೂ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವೈದಿಕ ಕಾಲದಲ್ಲೂ ರಕ್ಷಾ ಬಂಧನ ಆಚರಣೆಯಲ್ಲಿತ್ತು ಎಂದು ಹೇಳಬಹುದು. ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಧಾರ್ಮಿಕ ಬಾಂಧವ್ಯಕ್ಕೆ ಹೆಸರಾಗಿದೆ. ರಕ್ಷಾ ಎಂದರೆ ಸುರಕ್ಷತೆ ಮತ್ತು ಬಂಧನ ಎಂದರೆ ಬಂಧ ಅಥವಾ ಬಾಂಧವ್ಯ. ಸಹೋದರಿಯರು ತಮ್ಮ ಸಹೋದರರ ಕೈಗೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಪ್ರತಿಯಾಗಿ ಅವನ ರಕ್ಷಣೆಯನ್ನು ಬಯಸುತ್ತಾರೆ. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನ ಅಥವಾ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ. ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್‌ 19 ರಂದು ಸೋಮವಾರದಂದು ಆಚರಿಸಲಾಗುವುದು. ಇದು ಸಹೋದರ ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಸಂಕೇತಿಸುವ ಹಬ್ಬವಾಗಿದೆ. ಶ್ರಾವಣ ಮಾಸದ ಸೋಮವಾರದಂದು ರಕ್ಷಾಬಂಧನ ಬರುವುದರಿಂದ ಇದರ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಈ ಬಾರಿ ಶ್ರಾವಣ ಮಾಸದ ಹುಣ್ಣಿಮೆಯಂದು ಸಹೋದರಿಯರು…

Read More

ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಕೆಲ ವರ್ಷಗಳೇ ಕಳೆದಿದೆ. ಆದರೆ ಇದುವರೆಗೂ ಸುಶಾಂತ್ ಸಾವಿಗೆ ಕಾರಣ ಮಾತ್ರ ಬಯಲಾಗಿಲ್ಲ. ಸುಶಾಂತ್ ಸಿಂಗ್ ನಿಧನದ ಬಳಿಕ ಹೊರಬಂದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್​ನ ಹಲವು ದಿಗ್ಗಜರ ವಿಚಾರಣೆ ನಡೆಸಲಾಗಿತ್ತು. ಕೆಲವರು ಜೈಲು ಸಹ ಸೇರಿದರು. ಅದರಲ್ಲಿ ಸುಶಾಂತ್​ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಸಹ ಒಬ್ಬರು. ಸುಶಾಂತ್ ಮರಣಾನಂತರ ರಿಯಾ ಚಕ್ರವರ್ತಿ ಹಲವು ಸಮಸ್ಯೆಗಳನ್ನು ಎದುರಿಸಿದರು. ತೀವ್ರ ನಿಂದನೆಗೆ ಗುರಿಯಾಗಿ ಜೂಲು ಸೇರಿದ್ದ ರಿಯಾ ಚಕ್ರವರ್ತಿ ಇದೀಗ ಅದೆಲ್ಲದರಿಂದ ಹೊರ ಬಂದಿದ್ದಾರೆ. ಇದೀಗ ರಿಯಾ ಬೆಂಗಳೂರಿನ ಖ್ಯಾತ ಉದ್ಯಮಿಯ ಜೊತೆ ಡೇಟಿಂಗ್​ ನಡೆಸುತ್ತಿದ್ದಾರೆ. ಭಾರತದ ನಂಬರ್ 1 ಷೇರು ಬ್ರೋಕರೇಜ್ ಕಂಪೆನಿ ಜಿರೋದಾದ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆಗೆ ರಿಯಾ ಚಕ್ರವರ್ತಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗಷ್ಟೆ ರಿಯಾ ಚಕ್ರವರ್ತಿ ಹಾಗೂ ನಿಖಿಲ್ ಕಾಮತ್ ಬೈಕ್​ನಲ್ಲಿ ಮುಂಬೈ ರಸ್ತೆಗಳಲ್ಲಿ ಓಡಾಡುತ್ತಿರುವ ವಿಡಿಯೋ, ಚಿತ್ರಗಳು ವೈರಲ್ ಆಗುತ್ತಿವೆ. ಚಿತ್ರದಲ್ಲಿ ದುಬಾರಿ ಸೂಪರ್…

Read More

ಸ್ಯಾಂಡಲ್ ವುಡ್ ಚಿತ್ರರಂಗದ ಖ್ಯಾತ ನಿರ್ಮಾಪಕ ಜಾಕ್ ಮಂಜು ವಿರುದ್ಧ ಎಫ್ ಐಆರ್ ದಾಖಲಾಗಿದೆ. ಬೆಂಗಳೂರಿನ ಉಪ್ಪಾರ್​ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಕೊರ್ಟ್​ನ ಪಿಸಿಆರ್ ಆಧರಿಸಿ ಎಫ್​ಐಆರ್ ದಾಖಲು ಮಾಡಲಾಗಿದೆ. ಜಾಕ್ ಮಂಜು ವಿರುದ್ದ ಕನ್ನಡದ ಮತ್ತೋರ್ವ ನಿರ್ಮಾಪಕ ಶಿವಶಂಕರ್ ಎಂಬುವವರು ದೂರು ದಾಖಲು ಮಾಡಿದ್ದರು. ಜಾಕ್ ಮಂಜು ವಿರುದ್ಧ ಮೋಸ ಮಾಡಿದ ಆರೋಪ ಕೇಳಿ ಬಂದಿದ್ದು, ಜಾಕ್ ಮಂಜು ಜೊತೆ ಜೊತೆ ಸಿದ್ದೇಶ್, ಮುರುಳಿ ಎಂಬುವವರ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ. ಅನೀಶ್ ನಟನೆ ಮಾಡಿದ್ದ ‘ಮಾಯಾನಗರಿ’ ಚಿತ್ರದ ಸಂಬಂಧ ಕೇಸ್ ದಾಖಲಾಗಿದೆ. ಈ ಚಿತ್ರಕ್ಕೆ ಸಿದ್ದೇಶ್ ಎಂಬುವವರು ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ನೇಮಕ ಮಾಡಲಾಗಿತ್ತು. ಅವರು ಈ ಚಿತ್ರಕ್ಕೆ 8 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದರು. ಚಿತ್ರೀಕರಣಕ್ಕೆ ಹಣ ಒದಗಿಸಿಕೊಡು ಎಂದು ನಿರ್ಮಾಪಕ ಶಿವಶಂಕರ್‌ ಅವರು ಸಿದ್ದೇಶ ಬಳಿ ಕೇಳಿಕೊಂಡಿದ್ದರು. ಈ ವೇಳೆ ‘ಶಾಲಿನಿ ಆರ್ಟ್ಸ್​​’ನ ಮೇಲ್ವಿಚಾರಕ ಮುರುಳಿ ಎಂಬುವವರನ್ನು ಶಿವಶಂಕರ್​ಗೆ ಸಿದ್ದೇಶ್ ಭೇಟಿ ಮಾಡಿಸಿದರು. ಸಿನಿಮಾ ನೋಡಿದ…

Read More

ಖ್ಯಾತ ಗಾಯಕಿ ಪಿ.ಸುಶೀಲಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 86 ವರ್ಷದ ಸುಶೀಲಾ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಹಿನ್ನೆಲೆ ಆ.17ರಂದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೊಟ್ಟೆ ನೋವಿನ ನಿಮಿತ್ತ ಆಸ್ಪತ್ರೆಗೆ ಗಾಯಕಿಯನ್ನು ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆಯ ಬಳಿಕ ಪಿ.ಸುಶೀಲಾ ಅವರು ಆರೋಗ್ಯ ಸ್ಥಿರವಾಗಿದೆ. ನಾಳೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ.  ಸದ್ಯ ಈ ಸುದ್ದಿ ತಿಳಿದು ಅಭಿಮಾನಿಗಳು ನಿರಾಳವಾಗಿದ್ದಾರೆ. ಅಂದಹಾಗೆ, ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಪಿ.ಸುಶೀಲಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದಾರೆ. ಇದೇನ ಸಭ್ಯತೆ ಇದೇನ ಸಂಸ್ಕೃತಿ, ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ, ಫಲಿಸಿತು ಒಲವಿನ ಪೂಜಾ ಫಲ, ಒಲವೇ ಜೀವನ ಸಾಕ್ಷಾತ್ಕಾರ, ನೀ ಬಂದು ನಿಂತಾಗ ಹೀಗೆ ಕನ್ನಡದಲ್ಲೇ 5000ಕ್ಕೂ ಹೆಚ್ಚು ಹಾಡುಗಳನ್ನು ಪಿ.ಸುಶೀಲಾ ಹಾಡಿದ್ದಾರೆ.

Read More

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್ ಸಿಕ್ಸ್ ಬಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಮಿತ್, ಕೆಎಸ್‌ಸಿಎ ಆಯೋಜಿಸುತ್ತಿರುವ ಮಹಾರಾಜ ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಬೆಂಗಳೂರು ಬ್ಲಾಸ್ಟರ್ ವಿರುದ್ಧದ ಪಂದ್ಯದಲ್ಲಿ ಅವರು ಬಾರಿಸಿದ ಸಿಕ್ಸ್‌  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ನೋಡಿದ ಎಲ್ಲರೂ ದ್ರಾವಿಡ್ ಮತ್ತು ಸಮಿತ್ ನಡುವೆ ಹೋಲಿಕೆ ಮಾಡುತ್ತಿದ್ದಾರೆ. ಸಮಿತ್‌ರನ್ನು ಜೂನಿಯರ್ ರಾಹುಲ್ ದ್ರಾವಿಡ್ ಎಂದು ಅಭಿಮಾನಿಗಳು ಹೊಗಳುತ್ತಿದ್ದಾರೆ. ಮೈಸೂರು ವಾರಿಯರ್ಸ್ ತಂಡ ದೊಡ್ಡ ಮೊತ್ತದ ರನ್ ಗಳಿಸಿದರೂ 4 ರನ್‌ಗಳಿಂದ ಸೋಲು ಕಂಡಿತು. ಪಂದ್ಯಕ್ಕೆ ಸ್ವಲ್ಪ ಹೊತ್ತು ಮಳೆಯೂ ಅಡ್ಡಿಪಡಿಸಿತು. ಕಳೆದ ಜೂನ್ ತಿಂಗಳಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.  

Read More

ರಾಯಚೂರು:- ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆಯಾದ ಘಟನೆ ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿ ಜರುಗಿದೆ. ಆರೋಪಿಗೆ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಇದ್ದರೂ ಅದನ್ನು ಮುಟ್ಟೇ ಕೇವಲ ಒಟಿ, ಚಾಯ್ಸ್ ಸೇರಿದಂತೆ ಲೋಕಲ್ ಬ್ರಾಂಡ್​ನ ಮದ್ಯ ಎತ್ತಿಕೊಂಡು ಪರಾರಿಯಾಗುತ್ತಿದ್ದ. ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯು ಎಣ್ಣೆ ಕದಿಯಲು ಬರುವಾಗ ಡಾಬಾದ ಬಾಗಿಲು ಅಥವಾ ಬೀಗ ಮುರಿಯುತ್ತಿರಲಿಲ್ಲ. ಟಿನ್ ಶೀಟ್ ಹಾಕಿದ್ದ ಡಾಬಾದಲ್ಲಿ ಸಂದಿಯಿಂದ ನುಗ್ಗಿಕೊಂಡು ಬರುತ್ತಿದ್ದ. ಎಣ್ಣೆಯ ಆಸೆ ಶುರುವಾದ ತಕ್ಷಣ ಹಾವಿನಂತೆ ಸಂದಿಯಲ್ಲಿ ನುಗ್ಗಿ ಡಾಬಾಗೆ ಪ್ರವೇಶ ಪಡೆಯುತ್ತಿದ್ದ. ಬಳಿಕ ಅಲ್ಲಿನ ಡ್ರಾಯರ್​ಗಳನ್ನು ತೆರೆದು ಎಣ್ಣೆ…

Read More

ಅಪ್ರಾಪ್ತ ಬಾಲಕಿ ಮೇಲೆ ಐವರಿಂದ ಸಾಮೂಹಿಕ ರೇಪ್ ನಡೆದ ಘಟನೆ ಐಎಸ್​ಬಿಟಿ ಬಸ್​ನಲ್ಲಿ ಜರುಗಿದೆ. ಮೊರಾದಾಬಾದ್​ನಿಂದ ಡೆಹ್ರಾಡೂನ್​ಗೆ ಹೊರಟಿದ್ದ ಅಪ್ರಾಪ್ತ ಬಾಲಕಿ ಮೇಲೆ ಐವರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆಗಸ್ಟ್ 13 ರಂದು ನಡೆದಿದೆ ಎನ್ನಲಾಗಿದೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹುಡುಗಿ ಮೊರಾದಾಬಾದ್‌ನಿಂದ ಯುಪಿ ರೋಡ್‌ವೇಸ್ ಬಸ್‌ಗೆ ಏರಿದ್ದಳು. ಅವಳು ಆಗಸ್ಟ್ 13 ರಂದು ಮಧ್ಯರಾತ್ರಿ ಘಟನೆ ನಡೆದಿದೆ ಎನ್ನಲಾಗಿದೆ. ಬಾಲಕಿ ಪಂಜಾಬ್ ನಿವಾಸಿ ಎಂದು ಹೇಳಲಾಗಿದೆ. ಅವಳು ಪಂಜಾಬ್‌ನಿಂದ ದೆಹಲಿಗೆ ಮತ್ತು ಅಲ್ಲಿಂದ ಮೊರಾದಾಬಾದ್‌ಗೆ ಬಂದಿದ್ದಳು. ಮಕ್ಕಳ ಕಲ್ಯಾಣ ಸಮಿತಿಯು ಐಎಸ್‌ಬಿಟಿ ಪೊಲೀಸ್ ಪೋಸ್ಟ್‌ಗೆ ವರದಿ ಸಲ್ಲಿಸಿತು. ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಕೂಡ ಐಎಸ್‌ಬಿಟಿ ಪೋಸ್ಟ್‌ಗೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಅವರ ಸೂಚನೆ ಮೇರೆಗೆ ಪೊಲೀಸರು ನಾಲ್ವರು ಅಪರಿಚಿತರ ವಿರುದ್ಧ…

Read More

ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಆರೋಗ್ಯ ತೊಂದರೆ ಕಾರಣ ಮಲಯಾಳಂನ ಸ್ಟಾರ್‌ ನಟ ಮೋಹನ್‌ ಲಾಲ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ಸೋಂಕಿನಿಂದ ಈ ರೀತಿ ಆಗಿದೆ ಎಂದು ವೈದ್ಯರು ತಿಳಿಸಿದ್ದು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ನಟ ಮೋಹನ್ ಲಾಲ್ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದರು. ಮೋಹನ್‌ಲಾಲ್‌ ಹೀಗೆ ಆಸ್ಪತ್ರೆ ಸೇರುತ್ತಿದ್ದಂತೆ, ಅವರ ಅಪಾರ ಅಭಿಮಾನಿಗಳು ಕೆಲ ಕಾಲ ಆತಂಕಕ್ಕೆ ಒಳಗಾದರು. ಬಳಿಕ ಆಸ್ಪತ್ರೆಯಿಂದ ಅಧಿಕೃ ಹೆಲ್ತ್‌ ಬುಲಿಟಿನ್‌ ಬಿಡುಗಡೆ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ. 64 ವರ್ಷ ವಯಸ್ಸಿನ ಮೋಹನ್ ಲಾಲ್ ಅವರಿಗೆ ಐದು ದಿನಗಳವರೆಗೆ ವಿಶ್ರಾಂತಿಗೆ ತಿಳಿಸಲಾಗಿದೆ. ಸಾರ್ವಜನಿಕ ಭೇಟಿ ತಪ್ಪಿಸಲು ಮತ್ತು ಸೂಚಿಸಲಾದ ಔಷಧಿ ಸೂಚನೆ ಅನುಸರಿಸಲು ಸಲಹೆ ನೀಡಲಾಗಿದೆ. ಇನ್ನೂ ʻಬರೋಜ್ʼ ಚಿತ್ರವು ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಇದು ನಟನ ಮೊದಲ ನಿರ್ದೇಶನದ ಸಿನಿಮಾ. ಈ ಚಲನಚಿತ್ರವನ್ನು ಆರಂಭದಲ್ಲಿ ಮಾರ್ಚ್ 28, 2024 ರಂದು ಬಿಡುಗಡೆ ಮಾಡಲು…

Read More