ಬೆಂಗಳೂರು:- ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಕಾರ್ಯ ಯಶಸ್ವಿ ಆಗಿದ್ದು, DCM ಡಿಕೆ ಶಿವಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ‘ತುಂಗಭದ್ರಾ ಡ್ಯಾಂ ಗೇಟ್ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. ಎಲ್ಲರೂ ಒಟ್ಟಾಗಿ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ದುರಸ್ತಿ ಕಾರ್ಯ ಮಾಡಿದ್ದಾರೆ. ಆ ಎಲ್ಲ ಸಿಬ್ಬಂದಿಗಳಿಗೆ ಧನ್ಯವಾದ ಎಂದರು. ರಾಜ್ಯದ ತುಂಗಭದ್ರಾ ಅಣೆಕಟ್ಟಿನಲ್ಲಿ 19 ನೇ ಗೇಟ್ ಚೈನ್ ಕಟ್ ಆಗಿ 35 ಟಿಎಂಸಿ ನೀರು ಲಾಸ್ ಆಗಿದೆ. ನಾವೆಲ್ಲ ಗಾಬರಿ ಆಗಿದ್ದೆವು, ದೊಡ್ಡ ಸಮಸ್ಯೆ ಎದುರಿಸಬೇಕಾದ ಸ್ಥಿತಿ ಇತ್ತು. ಇನ್ನು ನಾವೆಲ್ಲ ಆತಂಕದಲ್ಲಿ ಇದ್ದೆವು, ಸ್ಥಳೀಯ ಅಧಿಕಾರಿಗಳು, ಸಚಿವರು ಹಾಗೂ ಶಾಸಕರು ನಿಂತು ಕೆಲಸ ಮಾಡಿದ್ದಾರೆ. ಸೆಟ್ ಆಫ್ ಡಿಸೈನ್ ಡಾಕ್ಯುಮೆಂಟ್ ನಮ್ಮ ಬಳಿ ಇತ್ತು. ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಅವರ ಹತ್ತಿರ ಚರ್ಚೆ ಮಾಡಿ ರಿಸ್ಟೋರ್ ಮಾಡಲು ಮುಂದಾದೆವು. ರಾಜ್ಯ ಸರ್ಕಾರ, ರೈತರ ಪರವಾಗಿ ಎಲ್ಲರೂ ದುಡಿದಿದ್ದಾರೆ. ಇದೀಗ ಕ್ರೆಸ್ಟ್…
Author: Prajatv Kannada
ಗದಗ:- ಜಿಲ್ಲೆ ನರಗುಂದ ತಾ. ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಜರುಗಿದೆ. ಮೃತರು ಕಲ್ಲಾಪೂರ ಬಸವೇಶ್ವರ ದೇವಸ್ಥಾನಕ್ಕೆ ಹೊರಟಿದ್ದವರು ಎನ್ನಲಾಗಿದೆ. ಹಾವೇರಿ ಮೂಲದ ರುದ್ರಪ್ಪ ಅಂಗಡಿ(55),ಪತ್ನಿ ರಾಜೇಶ್ವರಿ (45),ಮಗಳು ಐಶ್ವರ್ಯ (16),ಮಗ ವಿಜಯ(12) ಮೃತರು. ಇಳಕಲ್ ನಿಂದ ಹುಬ್ಬಳ್ಳಿ ಗೆ ಸಾರಿಗೆ ಬಸ್ ಹೊರಟಿತ್ತು. ಅದೇ ರೀತಿ ಕಲ್ಲಾಪೂರ ಕಡೆಗೆ ಹೊರಟಿದ್ದ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ ಬಹಳ ಪ್ರಚಲಿತದಲ್ಲಿದ್ದು ಸೆಲೆಬ್ರೆಟಿಗಳು ಕೂಡ ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರಲು ಜೊತೆಗೆ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಈ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹಾಗಾದರೆ ಮಧ್ಯಂತರ ಉಪವಾಸ ಮಾಡುವುದು ಹೇಗೆ? ಉಪಯೋಗವೇನು? ಪ್ರತಿದಿನ ಬೆಳಿಗ್ಗೆ ತಿಂಡಿಯನ್ನು 9 ಅಥವಾ 10 ಗಂಟೆಗೆ ಮಾಡಿದರೆ ಮಧ್ಯಾಹ್ನ ಸರಿಯಾದ ಸಮಯಕ್ಕೆ ಊಟ ಮಾಡಿ, ರಾತ್ರಿ ಊಟವನ್ನು ಸಾಯಂಕಾಲ 6 ಗಂಟೆಯೊಳಗೆ ಮುಗಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರನ್ನು ಬಿಟ್ಟು ಏನನ್ನು ಸೇವಿಸಬೇಡಿ. ಈ ರೀತಿ ಮಾಡುವುದರಿಂದ ನಿಮ್ಮ ದೇಹಕ್ಕೆ 15 ರಿಂದ16 ಗಂಟೆಗಳ ಗ್ಯಾಪ್ ಸಿಗುತ್ತದೆ. ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ವೈಜ್ಞಾನಿಕ ಪುರಾವೆಗಳ ಪ್ರಕಾರ ಈ ರೀತಿ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ. ಕ್ಯಾನ್ಸರ್ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಅದಲ್ಲದೆ ಈ ಕ್ರಮವನ್ನು ರೂಢಿಸಿಕೊಳ್ಳುವುದರಿಂದ ದೇಹದಲ್ಲಿ ಊರಿಯೂತ ಕಡಿಮೆ ಆಗುತ್ತದೆ. ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಬರದಂತೆ ಇದು…
ಹುಬ್ಬಳ್ಳಿ:- ಜನರಿಗೆ ತಪ್ಪು ಗ್ರಹಿಕೆ ಆಗಬಾರದು ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ಬಿಜೆಪಿಗಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.ಮತದಾರರು ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಜನಾದೇಶ ಕೊಟ್ಟಿದ್ದಾರೆ. ಹಾಗಾಗಿ ನಾವು ಬೀಳಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಪ್ರತಿಕ್ರಿಯಿಸಿದರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ನಾವು ಅಧಿಕಾರಕ್ಕೆ ಬರುವ ಆಲೋಚನೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷ ಸಂಪೂರ್ಣ ಆಡಳಿತ ನಡೆಸಲಿ ಎಂಬುದೇ ಬಿಜೆಪಿಯ ನಿಲುವು ಮತ್ತು ಆಶಯವಾಗಿದೆ. ಕಳೆದ ಬಾರಿ ಬಿಜೆಪಿ 104 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ 68ಕ್ಕೆ ಇಳಿದಿತ್ತು. ಜನ ಅವರನ್ನು ತಿರಸ್ಕಾರ ಮಾಡಿದ್ದರು. ಆದಾಗ್ಯೂ ಕಾಂಗ್ರೆಸ್ – ಜೆಡಿಎಸ್ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸಿದ್ದರು. ಬಳಿಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಯತ್ನಿಸಿದರು. ಹಾಗಾಗಿ ಆಗಿನ ಸಂದರ್ಭದಲ್ಲಿ ಬಿಜೆಪಿ ಸಹ ಸರ್ಕಾರ ರಚಿಸಲು ಪ್ರಯತ್ನಿಸಿತ್ತು. ಆದರೆ, ಈ ಬಾರಿ ಬಿಜೆಪಿ ಅಂಥ ಯಾವುದೇ ಪ್ರಯತ್ನ ನಡೆಸುವುದಿಲ್ಲ ಎಂದರು
ಬೆಂಗಳೂರು: ವೈದ್ಯಕೀಯ ವಿದ್ಯಾರ್ಥಿಯ ಕೊಲೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಬೆಂಗಳೂರಿನ ಕೋರಮಂಗಲದ ಪಬ್‌ನಿಂದ ಪಾನಮತ್ತರಾಗಿ ಮಧ್ಯರಾತ್ರಿ ಹೊರ ಬಂದಿದ್ದ ಯುವತಿ ತನ್ನ ದ್ವಿಚಕ್ರ ವಾಹನ ಓಡಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ವಾಹನ ಅಪಘಾತವಾಗಿದ್ದು ಯುವತಿ ವಾಹನ ಬಿಟ್ಟು ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಆಟೋ ಚಾಲಕ, ಯುವತಿಯ ಸ್ಥಿತಿ ಕಂಡು ದುರ್ಬಳಕೆ ಮಾಡಿಕೊಂಡಿದ್ದಾನೆ. ಆಟೋ ಹತ್ತಿದ್ದ ಯುವತಿಯನ್ನು ಹೆಚ್‌ಎಸ್‌ಆರ್ ಲೇಔಟ್‌ಗೆ ಕರೆದುಕೊಂಡು ಹೋಗಿ ಗ್ಯಾಂಗ್ ರೇಪ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಯುವತಿ ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂತ್ರಸ್ಥೆ ಅರೆ ಪ್ರಜ್ಞಾವಸ್ಥೆಯಲ್ಲಿ ತನ್ನ ಸ್ನೇಹಿತೆಗೆ ಕರೆ ಮಾಡಿದ್ದು ಸ್ನೇಹಿತೆ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ. ಈ ವೇಳೆ ವೈದ್ಯರು ಯುವತಿಯನ್ನು ಪರೀಕ್ಷಿಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರೋದು ಗೊತ್ತಾಗಿದೆ. ಆಸ್ಪತ್ರೆ ಸಿಬ್ಬಂದಿ ತಕ್ಷಣ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆ ಸಂಬಂಧ ಹೆಚ್ಎಸ್ಆರ್…
ತುಮಕೂರು: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಸುದ್ದಿಆಗರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ಪರ ಸೋಮಣ್ಣ ಬ್ಯಾಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯನವರು ನುರಿತ ರಾಜಕಾರಣಿಯಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ ಆದ್ದರಿಂದ ಕಾನೂನಿನ ಕೆಲಸ ಕಾನೂನು ಮಾಡುತ್ತೆ. ಇದರಿಂದ ಸಿದ್ದರಾಮಯ್ಯ ಸಾಹೆಬ್ರು ಸಹ ಅವರೇನು ಮಾಡ್ಬೇಕು ಅದನ್ನೇ ಮಾಡ್ತಾರೆ ಎಂದರು. ಇನ್ನೂ ನನಗೂ 45 ವರ್ಷಗಳ ರಾಜಕೀಯ ಅನುಭವ ಇದೆ. ಸಿದ್ದರಾಮಯ್ಯ ಅವರು ಬುದ್ಧಿವಂತರಿದ್ದಾರೆ. ನಾನು ಅವರು ಬಹಳ ಆತ್ಮೀಯರಾಗಿ ಕೆಲಸ ಮಾಡಿದ್ದೇವೆ. ನಿನ್ನೆ ಕೂಡ ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದನ್ನು ನಾನು ಬಹಳ ಆನಂದದಿಂದ ಸ್ವೀಕಾರ ಮಾಡಿದ್ದೇನೆ. ಬಾಕಿದ್ದೆಲ್ಲಾ ಕಾನೂನು ನೋಡುತ್ತದೆ. ಕಾನೂನು ಏನು ಹೇಳುತ್ತದೆಯೋ ಅದು ಆಗುತ್ತದೆ” ಎಂದು ಕೆಂದ್ರ ಸಚಿವ ವಿ. ಸೋಮಣ್ಣ ತಿಳಿಸಿದರು.
ಬೆಂಗಳೂರು:- ಕರ್ನಾಟಕಕ್ಕೆ ಝಿಕಾ ವೈರಸ್ ಆತಂಕ ಹೆಚ್ಚಾಗಿದ್ದು, 7 ಕೇಸ್ ಪತ್ತೆಯಾಗಿದೆ. ಈ ಮೂಲಕ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಅತಿಯಾದ ತಲೆನೋವು, ಕೆಂಪಾದ ಕಣ್ಣು, ಜ್ವರ, ಮೈಯಲ್ಲಿ ಗುಳ್ಳೆ, ದದ್ದುಗಳು ಕಾಣಿಸಿಕೊಳ್ಳೋದು ಝಿಕಾ ವೈರಸ್ ಗುಣ ಲಕ್ಷಣ. ಇನ್ನು ಬಹುತೇಕ ಝೀಕಾ ಸೋಂಕಿತರಿಗೆ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಉಳಿದಂತೆ ರೋಗಲಕ್ಷಣಗಳ ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2-7 ದಿನಗಳವರೆಗೆ ಇರುತ್ತದೆ. ಇಂತಹ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವಂತೆ, ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಝಿಕಾ ವೈರಸ್ ದೃಢಪಟ್ಟರೆ, ಕುಟುಂಬದ ಸದಸ್ಯರ ರಕ್ತದ ಮಾದರಿ ಲ್ಯಾಬ್ ಟೆಸ್ಟ್ಗೆ ಒಳಪಡಿಸಬೇಕು. ಮನೆಯ ಸುತ್ತಮುತ್ತಲಿನ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜನರನ್ನು ಪರೀಕ್ಷೆಗೊಳಪಡಿಸುವುದು ಕಡ್ಡಾಯ. ಆ ಪ್ರದೇಶದ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಕಂಟೈನ್ವೆಂಟ್ ಜೋನ್ ಎಂದು ಪರಿಗಣಿಸಲಾಗುವುದು. ಝಿಕಾ ವೈರಸ್ಗೆ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ವೈರಸ್ ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು…
ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ ಸದಾ ತಮ್ಮ ಹೇಳಿಕೆಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಇದೀಗ ತಮ್ಮ ಮಗಳ ಬಗ್ಗೆಯೇ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಪ್ರತಿಯೊಬ್ಬರನ್ನು ಅಚ್ಚರಿಗೀಡು ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಶ್ವೇತಾ ತಿವಾರಿ, ತಮ್ಮ ಮಗಳು ಪಾಲಕ್ ಬಗ್ಗೆ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗಾಲ್ಟಾ ಇಂಡಿಯಾದೊಂದಿಗೆ ಮಾತನಾಡಿದ ತಿವಾರಿ, “ಪಾಲಕ್ ತುಂಬಾ ಧೈರ್ಯವಂತೆ. ಆಕೆಯ ಬಗ್ಗೆ ಸತ್ಯ ತಿಳಿದಿರುವವರೆಗೂ ಯಾರು ಏನು ಹೇಳುತ್ತಾರೆ ಎಂಬುದನ್ನು ಆಕೆ ಗಮನಿಸಲ್ಲ. ಆಕೆಯ ವಿಚಾರದಲ್ಲಿ ಸಾಕಷ್ಟು ವದಂತಿಗಳು ಹರಡುತ್ತವೆ. ಇವತ್ತು ಒಬ್ಬ, ನಾಳೆ ಮತ್ತೊಬ್ಬ… ಪ್ರತಿ ನಿಮಿಷಕ್ಕೆ ಆಕೆಗೆ ಒಬ್ಬ ಬಾಯ್ ಫ್ರೆಂಡ್ ಬೇಕು ಎಂಬೆಲ್ಲಾ ಅರ್ಥಗಳಲ್ಲಿ ವದಂತಿ ಹರಿದಾಡುತ್ತವೆ ಈ ಬಗ್ಗೆ ಹೆಚ್ಚು ಗಮನ ಹರಿಸಲ್ಲ” ಎಂದಿದ್ದಾರೆ. “ಆಕೆ ಬಲಶಾಲಿ ಹೌದು. ಆದರೆ ನಾಳೆ ಕೆಲವು ಕಾಮೆಂಟ್, ಕೆಲವು ಲೇಖನ, ಕೆಲವು ಅಂತಹ ವಿಷಯಗಳು ಆಕೆಗೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲ ಆತ್ಮವಿಶ್ವಾಸವನ್ನು ಅಲುಗಾಡಿಸಬಹುದು. ಹಾಗಾಗಿ ಈ ರೀತಿಯ ಏನಾದರೂ…
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ 58 ವರ್ಷ ವಯಸ್ಸು. ಇಂದಿಗೂ ನಟ ಸಖತ್ ಎಂಗ್ ಎಂಡ್ ಎನರ್ಜಿಟಿಕ್ ಆಗಿದ್ದು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಶಾರುಖ್ ತಾವು ದಿನದಲ್ಲಿ ಒಂದೇ ಒಂದು ಬಾರಿ ಮಾತ್ರವೇ ಊಟ ಮಾಡುತ್ತೇನೆ ಎಂದಿದ್ದಾರೆ. ಶಾರುಖ್ ಅವರು ದಿ ಗಾರ್ಡಿಯನ್‌ಗೆನೀಡಿದ ಸಂದರ್ಶನದಲ್ಲಿ ‘ದಿನಕ್ಕೆ ಒಂದು ಊಟವನ್ನು ಮಾತ್ರ ಮಾಡುತ್ತೇನೆ. ಇದು ಯಾವುದೇ ಪಥ್ಯಕ್ಕಾಗಿ ಅಲ್ಲ, ಬದಲಿಗೆ ಇದು ನನ್ನ ಆಯ್ಕೆ’ ಎಂದಿದ್ದಾರೆ. “ನಿತ್ಯ ನಾನು ಬೆಳಗ್ಗೆ 5 ಗಂಟೆಗೆ ಮಲಗುತ್ತೇನೆ. ಮಾರ್ಕ್ ವಾಲ್ಬರ್ಗ್ (American actor) ಎದ್ದಾಗ, ನಾನು ಮಲಗಲು ಹೋಗುತ್ತೇನೆ. ಶೂಟಿಂಗ್ ವೇಳೆ ಒಂಬತ್ತು ಅಥವಾ 10 ಗಂಟೆಗೆ ಎಚ್ಚರಗೊಳ್ಳುತ್ತೇನೆ. ಆದರೆ ನಾನು ರಾತ್ರಿ 2 ಗಂಟೆಗೆ ಮನೆಗೆ ಬಂದು ಸ್ನಾನ ಮಾಡಿ ಮಲಗುವ ಮೊದಲು ವ್ಯಾಯಾಮ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ‘ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನ “ಕ್ರೀಡಾಪಟು” ಆಗಬೇಕೆಂದುಕೊಂಡಿದ್ದೆ. ನಟನೆಯ ಆರಂಭದ ದಿನಗಳಲ್ಲಿ ಆಕ್ಷನ್ ಹೀರೋ ಆಗುವ ಕನಸನ್ನು ಸಹ ಹೊಂದಿದ್ದೆ. ಚಿತ್ರರಂಗಕ್ಕೆ…
ನನ್ನ ಸಿನಿಮಾದ ಎಲ್ಲ ಕಥೆಗಳಿಗೂ ಕುಂದಾಪುರದ ನನ್ನೂರು ಕೆರಾಡಿಯೇ ಕಾರಣ, ನಾನು ಬೆಳೆದ ಪರಿಸರವೇ ಪ್ರೇರಣೆ ಎಂದು ನಟ ರಿಷಬ್ ಶೆಟ್ಟಿ ತಾವು ಬೆಳೆದು ಬಂದ ತನ್ನೂರಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ ‘ಕುಂದಾಪ್ರ ಕನ್ನಡ ಪ್ರತಿಷ್ಠಾನದ ‘ಕುಂದಾಪುರ ಕನ್ನಡ ಹಬ್ಬ-2024’ರ ಮೊದಲ ದಿನವಾದ ಶನಿವಾರ ‘ಊರ ಗೌರವ’ ಸನ್ಮಾನ ಸ್ವೀಕರಿಸಿ ರಿಷಬ್ ಶೆಟ್ಟಿ ಮಾತನಾಡಿದರು. ನಾವು ಎಲ್ಲಿಗೆ ಹೋದರೂ, ಏನೇ ಮಾಡಿದರೂ, ಎಲ್ಲಿಂದ ಬಂದಿದ್ದೇವೆ ಎನ್ನುವುದು ಮುಖ್ಯ. ಆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಮ್ಮ ಭಾಷೆ ಸಂಸ್ಕೃತಿ ಮಕ್ಕಳಿಗೆ ಗೊತ್ತಾಗಬೇಕು. ಅದಕ್ಕಾಗಿ ಇಂಥ ಹಬ್ಬಗಳು ಅತ್ಯಗತ್ಯ. ತುಳಸಿ ಕಟ್ಟೆಗಳು ಅಪರೂಪ ಆಗಿರುವ ಈ ಕಾಲದಲ್ಲಿ ಇಲ್ಲಿ ತುಳಸಿ ಕಟ್ಟೆ ಇಟ್ಟು ಉದ್ಘಾಟನೆ ನಡೆಸಿರುವುದು ಉತ್ತಮ ಸಂಗತಿ. ನಾನು ಕೂಡ ನನ್ನ ಪ್ರತಿ ಸಿನಿಮಾದಲ್ಲೂ ಅಕ್ಕಿಮುಡಿ, ನೆಟ್ಟಿ ಮುಂತಾದವನ್ನು ತೋರಿಸುತ್ತಿರುತ್ತೇನೆ ಎಂದು ರಿಷಬ್ ಶೆಟ್ಟಿ ಹೇಳಿದರು. ರಿಷಬ್ ಶೆಟ್ಟಿ- ಪ್ರಗತಿ…