Author: Prajatv Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಭೈರತಿ ರಣಗಲ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಮಧ್ಯೆ ಶಿವಣ್ಣನ 131ನೇ ಸಿನಿಮಾಗೆ ಚಾಲನೆ ಸಿಕ್ಕಿದೆ. ವರಮಹಾಲಕ್ಷ್ಮೀ ಹಬ್ಬದ ಶುಭದಿನದಂದು ಬೆಂಗಳೂರಿನ‌ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಬಳಿಕ ಮಾತನಾಡಿದ ಶಿವಣ್ಣ, 2 ವರ್ಷಗಳ ಹಿಂದೆ ಚಿತ್ರತಂಡ ಕಥೆ ಹೇಳಿದ್ದರು. ಯಾಕೆ ಇಷ್ಟು ಲೇಟ್ ಎಂದು ಕೇಳಬೇಡಿ. ಮೊದಲ ಬಾರಿಗೆ ಸ್ಕ್ರೀಪ್ಟ್ ಕೇಳಿದಾಗ ತುಂಬಾ ಚೆನ್ನಾಗಿ ಇತ್ತು. ಅಲ್ಲಿ ಏನೋ ಬೇಕಾಗಿತ್ತು ಎಂದು ಹೇಳುತ್ತಿದ್ದೆ. ಆದರೆ ಇಂಟ್ರೆಸ್ಟಿಂಗ್ ಇತ್ತು. ಈ ಚಿತ್ರದಲ್ಲಿ ಎಲ್ಲರಿಗೂ ಕೆಲಸವಿದೆ. ಡೈಲಾಗ್ ರೈಟರ್, ಕ್ಯಾಮೆರಾಮನ್‌ಗೂ ತುಂಬಾ ಕೆಲಸವಿದೆ. ಮ್ಯೂಸಿಕ್ ಡೈರೆಕ್ಟರ್‌ಗೂ ತುಂಬ ತುಂಬ ಕೆಲಸವಿದೆ. ಎಲ್ಲಾ ಆರ್ಟಿಸ್ಟ್ ಗೂ ಕೆಲಸವಿದೆ ಎಂದರು. ಒಂದು ಸಿನಿಮಾವೆಂದರೆ ಟೆಕ್ನಿಕಲ್ ಅಂತಾರೆ ಇಲ್ಲ ಆಕ್ಟರ್ಸ್ ಸಿನಿಮಾ ಎಂದು ಕರೆಯುತ್ತಾರೆ. ಇದು ಎಲ್ಲರ ಸಿನಿಮಾ. ಕಲಾವಿದರು, ತಂತ್ರಜ್ಞನರ ಸಿನಿಮಾ. ಜನ ಕುತೂಹಲದಿಂದ ಸಿನಿಮಾ ನೋಡಬೇಕು. ನಾನು ನವೀನ್ ಜೊತೆ ಮೊದಲ ಬಾರಿಗೆ ಕೆಲಸ…

Read More

ಬೆಂಗಳೂರು:- ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕು ಆಗಿದ್ದು, 1 ವಾರ ಮಳೆಯ ಮುನ್ಸೂಚನೆ ಕೊಡಲಾಗಿದೆ. ಅಲ್ಲದೇ 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಎಕವಿದ ವಾತಾವರಣವಿದ್ದು, ಮಳೆಯಾಗುವ ನಿರೀಕ್ಷೆ ಇದೆ. ಎಚ್​ಎಎಲ್​ನಲ್ಲಿ 31.1 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.7ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 22.4 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 30.2 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 21.8 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.0ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 18.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Read More

ಬೆಂಗಳೂರು:- ರಸ್ತೆ ಗುಂಡಿ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಮಾಡಿದ ಟ್ವೀಟ್ ಗೆ ಇದೀಗ ಸ್ಪಂದನೆ ಸಿಕ್ಕಿದೆ. ಸಚಿವರ ಟ್ವೀಟ್​​ಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಸ್ಪಂದಿಸಿದೆ. ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ವೀರಣ್ಣಪಾಳ್ಯದಿಂದ ಹೆಬ್ಬಾಳ ವೃತ್ತದ ಕಡೆಗಿನ ರಿಂಗ್​​​ ರೋಡಿನ ಸರ್ವಿಸ್ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ರವಿವಾರ 18 ರಿಂದ ಬುಧವಾರ 21ರವರೆಗೆ ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚಲಿದೆ. ಹೀಗಾಗಿ ರಾತ್ರಿ 10.00 ಗಂಟೆಯಿಂದ ಮುಂಜಾನೆ 06.00 ಗಂಟೆಯ ವರೆಗೆ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗ ಸೂಚಿಸಲಾಗಿದೆ. ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳದ ಕಡೆಗೆ ಸಂಚರಿಸುವ ವಾಹನ ಸವಾರರು ಹೊರ ವರ್ತುಲ ರಸ್ತೆಯ ಮುಖ್ಯ ಪಥವನ್ನೇ ಪರ್ಯಾಯ ರಸ್ತೆಯನ್ನಾಗಿ ಬಳಸುವಂತೆ ಬೆಂಗಳೂರು ನಗರ ಸಂಚಾರ ಪೊಲೀಸ್​ ಸೂಚಿಸಿದೆ. ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು…

Read More

ದರ್ಶನ್ ಚಿತ್ರ ಜೀವನದಲ್ಲಿ ಕರಿಯ ಸಿನಿಮಾ ಸಾಕಷ್ಟು ವಿಶೇಷವಾಗಿದೆ. ಮೆಜೆಸ್ಟಿಕ್ ಸಿನಿಮಾದ ಬಳಿಕ ತೆರೆಗೆ ಬಂದ ಈ ಚಿತ್ರವನ್ನು ನಿರ್ದೇಶಕ ಜೋಗಿ ಪ್ರೇಮ್ ಡೈರೆಕ್ಷನ್ ಮಾಡಿದ್ದರು.  ಈ ಸಿನಿಮಾ ದರ್ಶನ್ ಸಿನಿ ಕೆರಿಯರ್ ಗೆ ದೊಡ್ಡ ಬ್ರೇಕ್ ನೀಡಿತ್ತು. ಇದೀಗ ಈ ಸಿನಿಮಾ ರಿರಿಲೀಸ್ ಆಗುತ್ತಿದೆ. 2003ರಲ್ಲಿ ತೆರೆಕಂಡ ಕರಿಯಾ ಸಿನಿಮಾವನ್ನು ಆನೇಕಲ್ ಬಾಲರಾಜ್ ನಿರ್ಮಾಣ ಮಾಡಿದ್ರು. ಈ ಸಿನಿಮಾ ಇದುವರೆಗೂ ಸುಮಾರು 15 ಸಲ ರೀ-ರಿಲೀಸ್ ಆಗಿದೆ. ಆದರೆ, ಈ ಸಿನಿಮಾ ಆದ್ಮೇಲೆ ಡೈರೆಕ್ಟರ್ ಪ್ರೇಮ್ ಮತ್ತು ದರ್ಶನ್ ಬೇರೆ ಯಾವುದೇ ಚಿತ್ರವನ್ನು ಮಾಡಿಲ್ಲ. ಆದರೆ ದರ್ಶನ್ ಜೈಲಿಗೆ ಹೋಗುವ ಕೆಲವೇ ಕೆಲವು ದಿನಗಳ ಮೊದಲು ದರ್ಶನ್ ಮತ್ತು ಜೋಗಿ ಪ್ರೇಮ್ ಸಿನಿಮಾವೊಂದನ್ನ ಘೋಷಣೆ ಮಾಡಿದ್ದರು. ಆದರೆ ಆ ಬಳಿಕ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಸಿನಿಮಾ ಜೀವನದಲ್ಲಿ ಕರಿಯ ಚಿತ್ರಕ್ಕೂ ಮಹತ್ವ ಇದೆ. ಗ್ಯಾಂಗ್‌ಸ್ಟರ್ ಒಬ್ಬನ ಕಥೆಯ ಚಿತ್ರ ಇದಾಗಿತ್ತು. ಈ ಸಿನಿಮಾದಲ್ಲಿ ದರ್ಶನ್‌ಗೆ ಅಭಿನಯಶ್ರೀ ಜೋಡಿ ಆಗಿದ್ದರು.…

Read More

ಬೆಂಗಳೂರು: ತೈವಾನ್ ಮೂಲದ ಆಪಲ್ ಫೋನ್  ತಯಾರಿಸುವ ಫಾಕ್ಸ್‌ಕಾನ್ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧ್ಯಕ್ಷ ಯಂಗ್ ಲಿಯು ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯಚರ್ಚೆ ನಡೆಸಿದರು. https://youtu.be/gPAVlgpz4c8?si=39cGT46sHuNTaK8i ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಭೋಜನ ಕೂಟದ ವೇಳೆ ಫಾಕ್ಸ್‌ಕಾನ್ ಕಂಪನಿಗೆ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರ, ನೆರವು ಒದಗಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ. ಸಾಂಸ್ಕೃತಿಕವಾಗಿ ಉನ್ನತ ಮೌಲ್ಯಗಳನ್ನು ಆಚರಿಸುತ್ತಿರುವ ರಾಜ್ಯದಲ್ಲಿ ಕೈಗಾರಿಕೆಗಳಿಗೆ ಅತ್ಯಗತ್ಯವಾದ ಕಾನೂನು ಮತ್ತು ಸುವ್ಯವಸ್ಥೆಯೂ ಉತ್ತಮವಾಗಿದೆ ಎಂದರು. ಡಿಸಿಎಂ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್ ರೂಪ್ ಕೌರ್ ಸೇರಿದಂತೆ ಕೈಗಾರಿಕೆ ಮತ್ತು ಐಟಿ ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಭೋಜನ ಕೂಟದಲ್ಲಿ ಭಾಗವಹಿಸಿದ್ದರು.

Read More

ನಡುರಸ್ತೆಯಲ್ಲಿ ಹಾವೊಂದು ಕಲ್ಲುಗಂಬದಂತೆ ಎದ್ದು ನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸಾಮಾನ್ಯವಾಗಿ ಹಾವುಗಳ ಅಪಾಯಕಾರಿ ವೀಡಿಯೊವನ್ನು ನೋಡಿರುತ್ತೇವೆ. ಇಲ್ಲವೇ ತಮಾಷೆಯ ವೀಡಿಯೊಗಳನ್ನಾದರೂ ಕಂಡಿರುತ್ತೇವೆ. ಆ ಈ ವಿಡಿಯೋದಲ್ಲಿ ಮಾತ್ರ ಹಾವೊಂದು ಸ್ಟೈಲ್‌ ಆಗಿ ನಿಂತಿರುವುದನ್ನು ಕಾಣಬಹುದು. ಇದನ್ನು ಕಂಡರೆ ಶಾಕ್‌ ಆಗದೆ ಇರಲಾರಿರಿ. ಈ ದೃಶ್ಯವನ್ನು ನೋಡಿದ ನಂತರ ನಿಮಗೂ ಶಾಕ್‌ ಆಗಿರಬಹುದು. ಈ ಅಪರೂಪದ ದೃಶ್ಯವನ್ನು ನೋಡಿದ ಬಹುತೇಕರಿಗೆ ನಂಬಲು ಕಷ್ಟವಾಗುತ್ತಿದೆ. ‘ಸೋಲಾರ್_ವಿಸ್ಪರ್’ ಹೆಸರಿನ ಪುಟದಿಂದ ಇನ್‌ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಜನರು ಅಚ್ಚರಿಯ ವಿಡಿಯೋವನ್ನು ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ

Read More

ಕೆ.ಆರ್.ಪುರ: ಚಂದ್ರಯಾನ ನಾಲ್ಕರ ಬಗ್ಗೆ ಹೆಚ್ಚು ಅಧ್ಯಯನಗಳು ನಡೆಯುತ್ತಿದ್ದು, ನಾವು ಚಂದ್ರಯಾನದಿಂದ ವಸ್ತುವೊಂದನ್ನು ತರುವ ಮಹತ್ತರ ಉದ್ದೇಶ ಹೊಂದಿದ್ದೆವೆ ಎಂದು ಇಸ್ರೋ ಪ್ರಾಧ್ಯಾಪಕ ಡಾ.ಪಿ.ಜಿ. ದಿವಾಕರ್ ಅವರು ತಿಳಿಸಿದರು. ಕೆ.ಆರ್.ಪುರದ ಕೇಂಬ್ರಿಡ್ಜ್ ಕಾಲೇಜನಲ್ಲಿ ಏರ್ಪಡಿಸಿದ್ದ 14ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಸ್ರೋ ವತಿಯಿಂದ ಚಂದ್ರಯಾನ ನಾಲ್ಕರ ಬಗ್ಗೆ ಅಧ್ಯಯನಗಳು ನಡೆಯುತ್ತಿದ್ದು,ಉಪಗ್ರಹ ಉಡಾವಣೆ ಕೇಂದ್ರ ಸ್ಥಾಪಿಸುವ ಉದ್ದೇಶ ಹೊಂದಿದ್ದೆವೆ ಎಂದು ನುಡಿದರು. ಮುಂದಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚು ಸಂಶೋಧನೆಗಳಲ್ಲಿ ತೊಡಗಿಕೊಳ್ಳಬೇಕು ಆ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಸಲಹೆ ನೀಡಿದರು. ಭೂಮಿ, ಸಾಗರ, ವಾಯುಮಂಡಲದ ನಂತರ ಬಾಹ್ಯಾಕಾಶ ಕ್ಷೇತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಬಾಹ್ಯಾಕಾಶ ಅನ್ವೇಷಣೆ, ಸಾಹಸ, ಬಾಹ್ಯಾಕಾಶ ಪ್ರವಾಸೋದ್ಯಮ, ವಸತಿ, ಇಂಧನ, ಭೂಮಿಗಾಗಿ ಬಾಹ್ಯಾಕಾಶ ಮೊದಲಾದ ಪರಿಕಲ್ಪನೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಪ್ರಗತಿ ಸಾಧಿಸುತ್ತಿದೆ. ಬಾಹ್ಯಾಕಾಶ ನಿಲ್ದಾಣ ನಿರ್ಮಾಣ, ಚಂದ್ರನ ಮೇಲೆ ಮಾನವರನ್ನು ಇಳಿಸಲು ಯೋಜನೆ ರೂಪಿಸಲಾಗುತ್ತಿದೆ. ಭಾರತವು ಈ ಕ್ಷೇತ್ರದಲ್ಲಿ ಸಮರ್ಥ ದೇಶವಾಗಿ ಹೊರ ಹೊಮ್ಮಿದ್ದು, ಹೊರ…

Read More

“ರಾಜ್ಯಪಾಲರ ಕಚೇರಿ ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಅಸ್ಥಿರಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. https://youtu.be/vajtTNJ2axo?si=gqvKAiP5IL0lwZ1k ಇಡೀ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುತ್ತದೆ, ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಖಡಕ್ಕಾಗಿ ತಿಳಿಸಿದರು. ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವ ಬಗ್ಗೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಂಪುಟ ಸಹೋದ್ಯೋಗಿಗಳ ಜತೆ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, “ಸಿದ್ದರಾಮಯ್ಯ ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ನಮ್ಮ ಮುಖ್ಯಮಂತ್ರಿಗಳು ಈ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಅವರು ನಮ್ಮ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿದ್ದು, ನಾವು ಒಟ್ಟಾಗಿ ರಾಜ್ಯದ ಜನರ ಸೇವೆ ಮುಂದುವರಿಸುತ್ತೇವೆ. ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಇಡೀ ಇಂಡಿಯಾ ಒಕ್ಕೂಟ ನಮ್ಮ ಮುಖ್ಯಮಂತ್ರಿಗಳ ಬೆನ್ನಿಗೆ ನಿಲ್ಲಲಿದೆ. ಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸಲಾಗಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ…

Read More

ಮಧ್ಯ ಸುಡಾನ್‍ನ ಸಿನ್ನಾರ್ ರಾಜ್ಯದ ಹಳ್ಳಿಯೊಂದರ ಮೇಲೆ ಅರೆಸೇನಾ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಐದು ದಿನಗಳ ಮುತ್ತಿಗೆಯ ನಂತರ ಸಿನ್ನಾರ್ ರಾಜ್ಯದ ಜಲ್ಕ್ನಿ ಗ್ರಾಮದ ಮೇಲೆ ಆರ್‌ಎಸ್‌ಎಫ್ ದಾಳಿ ನಡೆಸಿದೆ. ಗ್ರಾಮದಿಂದ ಯುವತಿಯರನ್ನು ಅಪಹರಿಸಲು ಆರ್‌ಎಸ್‌ಎಫ್ ಪ್ರಯತ್ನಿಸಿತು. ಇದಕ್ಕೆ ನಿವಾಸಿಗಳು ವಿರೋಧಿಸಿದಾಗ ಅವರ ಮೇಲೆ ಈ ದಾಳಿ ನಡೆಸಲಾಯಿತು. ಪರಿಣಾಮ ಕನಿಷ್ಠ 80 ಜನ ಸಾವಿಗೀಡಾಗಿದ್ದಾರೆ ಎಂದು ಸಿನ್ನಾರ್ ಯೂತ್ ಗ್ಯಾದರಿಂಗ್ ತಿಳಿಸಿದೆ. ಘಟನೆಯ ಬಗ್ಗೆ ಆರ್‌ಎಸ್‌ಎಫ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜೂನ್‍ನಿಂದ, ರಾಜ್ಯದ ರಾಜಧಾನಿ ಸಿಂಗಾ ಸೇರಿದಂತೆ ಸಿನ್ನಾರ್ ರಾಜ್ಯದ ಹೆಚ್ಚಿನ ಭಾಗಗಳನ್ನು ಆರ್‌ಎಸ್‌ಎಫ್ ನಿಯಂತ್ರಣದಲ್ಲಿದೆ. ಇನ್ನೂ ಸುಡಾನ್‍ನ ಸಶಸ್ತ್ರ ಪಡೆಗಳು (ಎಸ್‍ಎಎಫ್) ಪೂರ್ವ ಸಿನ್ನಾರ್ ಪ್ರದೇಶವನ್ನು ನಿಯಂತ್ರಿಸುತ್ತದೆ. ಅಮೆರಿಕ, ಸೌದಿ ಅರೆಬಿಯಾ ಮತ್ತು ಸ್ವಿಸ್ ಮಧ್ಯಸ್ಥಿಕೆಯಲ್ಲಿ ಸ್ವಿಟ್ಜರ್ಲೆಂಡ್‍ನಲ್ಲಿ ಬುಧವಾರ ಕದನ ವಿರಾಮ ಮಾತುಕತೆ ಪ್ರಾರಂಭವಾಯಿತು. ಈ ಸಭೆಗೆ ಸುಡಾನ್ ಸೈನ್ಯವು ಭಾಗವಹಿಸಲು ನಿರಾಕರಿಸಿತು. ಏ.15, 2023 ರಿಂದ ಸುಡಾನ್‍ನಲ್ಲಿ…

Read More