ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕರ್ನಾಟಕದ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆದರೆ ರಾಜ್ಯಪಾಲರ ನಡೆಯನ್ನು ಸಿಎಂ ಸಿದ್ದರಾಮಯ್ಯ ನಿರೀಕ್ಷೆ ಮಾಡಿದ್ದರೆಂದು ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದು, ನಾನು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ https://youtu.be/96tI9ukF3IY?si=uabS7X8Q5-mmRE3e ಈ ಕುರಿತು ಮಾತನಾಡಿರುವ ಅವರು, ರಾಜ್ಯಪಾಲರ ಈ ನಡೆಯನ್ನು ನಾನು ಇರೀಕ್ಷೆ ಮಾಡಿದ್ದೆ. ಏಕೆಂದರೆ ಪ್ರಕರಣದ ಕುರಿತು ಸಂಪೂರ್ಣ ವಿವರಣೆ ನೀಡಿದ ಬಳಿಕವೂ ರಾಜ್ಯಪಾಲರು ನೋಟಿಸ್ ನೀಡಿದ್ದ ಕಾರಣ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡ್ತಾರೆ ಅಂತ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ. ಮುಡಾ ಬದಲಿ ಸೈಟ್ ಹಗರಣದಲ್ಲಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿದ ನೀಡಿದ ಬೆನ್ನಲ್ಲೇ ಸಿಎಂ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದು, ಲೀಗಲ್ ಟೀಮ್ ಜೊತೆ ಸತತ ಸಮಾಲೋಚನೆ ನಡೆಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಎರಡು ಪ್ರತ್ಯೇಕ ದೂರು ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೊರೆ ಹೋಗುವ ತೀರ್ಮಾನ ಮಾಡಿದ್ದಾರೆ. ಕೋರ್ಟ್…
Author: Prajatv Kannada
ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಂ ಆರ್ ಟಿ ಮ್ಯೂಸಿಕ್ ಸಂಸ್ಥೆಯು ಕಾಫಿ ರೈಟ್ ಉಲ್ಲಂಘನೆ ಆರೋಪ ಮಾಡತ್ತು. ಅನುಮತಿ ಪಡೆಯದೇ ‘ಬ್ಯಾಚ್ಯುಲರ್ ಪಾರ್ಟಿ’ ಸಿನಿಮಾದಲ್ಲಿ ಎರಡು ಹಾಡುಗಳನ್ನು ಬಳಕೆ ಮಾಡಿದ್ದಕ್ಕಾಗಿ ಎಂಆರ್ ಟಿ ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿತ್ತು. ಇದೀಗ ದೆಹಲಿ ಹೈಕೋರ್ಟ್ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ. ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಎಂ.ಆರ್.ಟಿ ಹಕ್ಕು ಹೊಂದಿರೋ ‘ನ್ಯಾಯ ಎಲ್ಲಿದೆ’ ಮತ್ತು ‘ಒಮ್ಮೆ ನಿನ್ನನ್ನು’ ಹಾಡು ಬಳಕೆ ಮಾಡಿದ್ದರು ರಕ್ಷಿತ್ ಶೆಟ್ಟಿ. ಅನುಪತಿ ಪಡೆಯದೇ ಬಳಸಿದ್ದನ್ನೂ ಒಪ್ಪಿಕೊಂಡಿದ್ದರು. ತುಣುಕು ಹಾಡುಗಳನ್ನು ಬಳಸಿಕೊಳ್ಳಲು ಅನುಮತಿ ಬೇಕಾ ಎಂದು ಪ್ರಶ್ನೆ ಮಾಡಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ರಕ್ಷಿತ್ ಶೆಟ್ಟಿ ಮತ್ತು ಪರಂವಾಗೆ ಹೈಕೋರ್ಟ್ ನೋಟಿಸ್ ನೀಡಿತ್ತು. ಈ ನೋಟಿಸ್ ಗೆ ರಕ್ಷಿತ್ ಶೆಟ್ಟಿ ಕೋರ್ಟಿಗೆ ಹಾಜರಾಗದ ಕಾರಣದಿಂದಾಗಿ ಸೋಷಿಯಲ್ ಮೀಡಿಯಾ ಸೇರಿದಂತೆ, ಹಾಡುಗಳು ಬಳಕೆಯಾದ ಕಡೆಯಲ್ಲಿ…
ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಬದುಕು ಬಂದಂತೆ ಸ್ವೀಕರಿಸಿ ಎಂಬ ಸ್ವೀಟ್ ಸಂದೇಶ ಕೊಟ್ಟು ಫ್ಯಾಮಿಲಿ ಪ್ರೇಕ್ಷಕ ಪ್ರಭುವಿನಿಂದ ಚಪ್ಪಾಳೆ ಪಡೆದಿದ್ದ ರಾಮೇನಹಳ್ಳಿ ಜಗನ್ನಾಥ ಈಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ವರಮಹಾಲಕ್ಷ್ಮೀ ಹಬ್ಬದಂದು ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಚಿತ್ರ ಸೆಟ್ಟೇರಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ಪುತ್ರಿ ಸಿನಿಮಾಗೆ ಕ್ಲ್ಯಾಪ್ ಮಾಡಿದರೆ, ನವೀನ್ ಶಂಕರ್ ಹಾಗೂ ನಟಿ ಅರ್ಚನಾ ಜೋಯಿಸ್ ಕ್ಯಾಮೆರಾಗೆ ಚಾಲನೆ ನೀಡಿದರು. ಜಗನ್ನಾಥ ಅವರ ಹೊಸ ಪ್ರಯತ್ನಕ್ಕೆ ‘ತೀರ್ಥರೂಪ ತಂದೆಯವರಿಗೆ’ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ತೆಲುಗಿನಲ್ಲಿ ಗುಪ್ಪೆಡಂತ ಮನಸು ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಪ್ರೀತಿ ಪಡೆದಿರುವ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಸದ್ಯ ಮುಖೇಶ್ ಹೀರೋ ಆಗಿ ಬಣ್ಣ ಹಚ್ಚಿರುವ ಗೀತಾ ಶಂಕರಂ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇದರ ಬೆನ್ನೆಲ್ಲೇ ನಿಹಾರ್ ಮುಖೇಶ್ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕನ್ನಡ ಹಾಗೂ…
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾಗೆ ಎರಡು ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮ ಹಂಚಿಕೊಂಡಿರುವ ನಟ ಯಶ್ ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದಿದ್ದಾರೆ. ‘ಕೆಜಿಎಫ್ 2’ (KGF 2) ಸಿನಿಮಾಗೆ ಎರಡು ನ್ಯಾಷನಲ್ ಅವಾರ್ಡ್ ಸಿಕ್ಕ ಹಿನ್ನೆಲೆ ಯಶ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ, ಇದು ನಿಜಕ್ಕೂ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ಷಣ ಎಂದಿದ್ದಾರೆ. ನಟ ರಿಷಬ್ ಶೆಟ್ಟಿ, ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ಪ್ರಶಾಂತ್ ನೀಲ್‌ಗೆ ಅಭಿನಂದನೆಗಳು. ‘ಕಾಂತಾರ’ ಹಾಗೂ ‘ಕೆಜಿಎಫ್ 2’ಗೆ ಪ್ರಶಸ್ತಿ ಬಂದಿರುವುದು ಅರ್ಹವಾದ ಮನ್ನಣೆಯಾಗಿದೆ ಎಂದು ಯಶ್ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’, ಮತ್ತು ‘ಕಾಂತಾರ’ (Kantara) ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಿಕ್ಕಿದೆ. ಜೊತೆಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ‘ಕೆಜಿಎಫ್ 2’ ಸಿನಿಮಾದ…
ಆಗಸ್ಟ್ 15 ರಂದು ಹಲವು ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿ ಕೃಷ್ಣಂ ಪ್ರಣಯ ಸಖಿ, ಗೌರಿ, ತಮಿಳಿನಲ್ಲಿ ತಂಗಲಾನ್, ತೆಲುಗಿನಲ್ಲಿ ‘ಡಬಲ್ ಇಸ್ಮಾರ್ಟ್’ ಮತ್ತು ‘ಮಿಸ್ಟರ್ ಬಚ್ಚನ್’ ಸಿನಿಮಾಗಳು ಬಿಡುಗಡೆ ಆಗಿವೆ. ಬಹುತೇಕ ಎಲ್ಲ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿವೆ. ಆದರೆ ರವಿತೇಜ ನಟಿಸಿರುವ ತೆಲುಗಿನ ‘ಮಿಸ್ಟರ್ ಬಚ್ಚನ್’ ಸಿನಿಮಾದ ಡ್ಯಾನ್ಸ್ ಸ್ಟೆಪ್ ವಿವಾದ ಸೃಷ್ಟಿಸಿದೆ. ರವಿತೇಜ ನಟಿಸಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾದ ‘ಸಿತಾರ’ ರೊಮ್ಯಾಂಟಿಕ್ ಹಾಡೊಂದರಲ್ಲಿ ಸ್ಟೆಪ್ ಒಂದಿದೆ. ಆ ಸ್ಟೆಪ್ನಲ್ಲಿ ರವಿತೇಜ, ನಟಿ ಭಾಗ್ಯಶ್ರೀ ಬೋರ್ಸೆ ಅವರ ನಡುವಿನ ಬಳಿ ಕೈ ಹಾಕಿ ಪಾಕೆಟ್ ರೀತಿ ಸೀರೆಯನ್ನು ಹಿಡಿದುಕೊಳ್ಳುತ್ತಾರೆ. ಹೀಗೆ ಹಿಡಿದುಕೊಂಡೇ ಒಂದು ಡ್ಯಾನ್ಸ್ ಸ್ಟೆಪ್ ಸಹ ಮಾಡುತ್ತಾರೆ. ಈ ದೃಶ್ಯಕ್ಕೆ ಕೆಲ ಮಾಸ್ ಆಡಿಯೆನ್ಸ್ ಶಿಳ್ಳೆ ಹೊಡೆದು ಎಂಜಾಯ್ ಮಾಡಿದ್ದಾರಾದರೂ ಹಲವರಿಗೆ ಈ ಸ್ಟೆಪ್ ಸರಿ ಎನಿಸಿಲ್ಲ. ಹಾಗಾಗಿ ಟ್ವಿಟ್ಟರ್ನಲ್ಲಿ ಈ ಬಗ್ಗೆ ಪ್ರಶ್ನೆ ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾದ ನಿರ್ದೇಶಕ ಹರೀಶ್…
ಫ್ರಿಡ್ಜ್ ನಲ್ಲಿ ಇರುವ ಎಲ್ಲಾ ವಸ್ತುಗಳು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದನ್ನು ನಾವು ತಿಳಿಯಬೇಕಾಗುತ್ತದೆ. ಕೆಲವು ಬೇಗನೆ ಹಾಳಾಗಬಹುದು. ಇನ್ನು ಕೆಲವು ಪೋಷಕಾಂಶಗಳನ್ನು ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಫ್ರಿಡ್ಜ್ ನಲ್ಲಿ ಇರಿಸಲಾದ ಆಹಾರ, ಹಣ್ಣು ಮತ್ತು ತರಕಾರಿಗಳನ್ನು ಎಷ್ಟು ಸಮಯದವರೆಗೆ ಸೇವನೆ ಮಾಡಬೇಕು? ಯಾವ ರೀತಿಯ ಆಹಾರಗಳ ಸೇವನೆ ಒಳ್ಳೆಯದಲ್ಲ ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ. ಆಹಾರವನ್ನು ಇಟ್ಟರೆ ಅದು ಅಲ್ಪಾವಧಿಯಲ್ಲಿ ಅದರ ಪೌಷ್ಠಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಇನ್ನು ಆಯುರ್ವೇದದ ಪ್ರಕಾರ, ಎಲ್ಲಾ ಬೇಯಿಸಿದ ಆಹಾರವು ಕೇವಲ 6 ಗಂಟೆಗಳವರೆಗೆ ಮಾತ್ರ ಪೌಷ್ಠಿಕಾಂಶವನ್ನು ಒದಗಿಸುತ್ತದೆ. ಅದರ ನಂತರ, ಅದು ಎಲ್ಲಾ ರೀತಿಯ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ನೀವು ಗೋಧಿ ರೊಟ್ಟಿಯನ್ನು ಮಾಡಿ 12 ರಿಂದ 14 ಗಂಟೆಗಳ ಒಳಗೆ ಅದನ್ನು ತಿನ್ನಬೇಕು. ಇಲ್ಲದಿದ್ದರೆ, ಅದರಲ್ಲಿ ಪೋಷಕಾಂಶ ಮೌಲ್ಯಗಳು ಇರುವುದಿಲ್ಲ. ಅದಲ್ಲದೆ ಫ್ರಿಡ್ಜ್ ನಲ್ಲಿ ಹೆಚ್ಚು ಹೊತ್ತು ಇಟ್ಟಿರುವ ಬ್ರೆಡ್ ತಿನ್ನುವುದರಿಂದಲೂ ಹೊಟ್ಟೆ ನೋವು ಉಂಟಾಗಬಹುದು. ಉಳಿದಿರುವ ಬೇಳೆಕಾಳುಗಳು ಹಾಳಾಗುವುದನ್ನು ತಡೆಯಲು ಫ್ರಿಡ್ಜ್ ನಲ್ಲಿ ಅದನ್ನು…
ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಬಿಪಿ ಅಥವಾ ಮಧುಮೇಹಕ್ಕೆ ತುತ್ತಾಗಿದ್ದಾರೆ. ಇಂಥಹ ಆರೋಗ್ಯ ಸಮಸ್ಯೆಗಳಿಗೆ ಆಹಾರ ಪದ್ಧತಿಯೇ ದೀರ್ಘಕಾಲದ ಪರಿಹಾರವಾಗಿದೆ. ಆ ಹಿನ್ನೆಲೆಯಲ್ಲಿ ಹೆಸರು ಕಾಳು ಎಷ್ಟು ಪ್ರಯೋಜನಕಾರಿ ಹೆಸರು ಕಾಳಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆಯಂತೆ. ಇನ್ನೂ ಯಾವ್ಯಾವ ಕಾಯಿಲೆಗಳಿಗೆ ಹೆಸರು ಕಾಳು ಬೆಸ್ಟ್. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಕಾರಣವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಶೇಖರಣೆಯಾಗುವ ಮೂಲಕ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೆಸರು ಕಾಳು ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆ ಸೂಚಿಸುತ್ತದೆ. ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದು ಗಂಭೀರ ಸಮಸ್ಯೆಯಾಗಿದೆ. ಆದರೆ ಹೆಸರು ಕಾಳು ತಿನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಸರು ಕಾಳಿನಲ್ಲಿ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಇದೆ. ಇದು ರಕ್ತದಲ್ಲಿನ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಮೊಳಕೆ ಹೊಡೆದ ಹೆಸರು ಕಾಳು…
ಬೆಂಗಳೂರು: ಮುಡಾ ಅಕ್ರಮ ಕೇಸ್‌ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ ದೊರೆತಿದೆ. ಅಬ್ರಾಹಂ ಎಂಬವರು ನೀಡಿದ್ದ ಖಾಸಗಿ ದೂರಿನ ಆಧಾರದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. https://youtu.be/rNXSrLM3ZSs?si=YOQu2KxWDbW6Plyp ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ ನೀಡಿರುವ ಹಿನ್ನೆಲೆ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಆರಂಭವಾಗಲಿದೆ. ಸಿಎಂ ತನಿಖೆ ಅಥವಾ ಕೋರ್ಟ್ ವಿಚಾರಣೆ ಎದುರಿಸಬೇಕಾಗುವುದು. ದೂರುದಾರರಾದ ವಕೀಲ ಟಿ.ಜೆ. ಅಬ್ರಹಾಂ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ನೀಡಿರುವ ಈ ಖಾಸಗಿ ದೂರಿಗೆ ರಾಜ್ಯಪಾಲರ ಪೂರ್ವಾನುಮತಿಯ ಬಲ ಸಿಗಲಿದೆ. ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಅನುಮತಿಯ ವಿಚಾರವೂ ಪ್ರಸ್ತಾಪವಾಗಿತ್ತು. ಅನುಮತಿ ನೀಡಿರುವುದರಿಂದ ಕೋರ್ಟ್ ಆದೇಶ ಮಹತ್ವ ಪಡೆಯಲಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ 3 ಸಾಧ್ಯತೆಗಳಿವೆ. ಮೊದಲನೆಯದು ಮೇಲ್ನೋಟಕ್ಕೆ ಆರೋಪ ಕಂಡುಬಂದರೆ ತನಿಖೆಗೆ ಆದೇಶಿಸಬಹುದು. ಎರಡನೆಯದು ತಾವೇ ಪರಿಜ್ಞಾನಕ್ಕೆ ಪಡೆದು ಸಿಎಂಗೆ ಸಮನ್ಸ್ ಜಾರಿಗೊಳಿಸಬಹುದು.
ಬೆಂಗಳೂರು:-:RBI ಹೊಸ ರೂಲ್ಸ್ ಗಳಿಗೆ ಬ್ಯಾಂಕ್‌ಗಳಿಗೆ ಶಾಕ್ ಎದುರಾಗಿದೆ. https://youtu.be/8TDjirT9GX4?si=0CX3sCb-z1PorxpH ಕೆಲವೊಂದು ಕಟ್ಟುನಿಟ್ಟಾದ ನಿಯಮಗಳನ್ನು ಸಡಿಲಿಸುವುದು ಸೇರಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನ ಮುಂದಿನ ನಡೆಯು ಮುಂದಿನ ಆರ್ಥಿಕ ವರ್ಷವು ಕಠಿಣ ಸಮಯವಾಗಬಹುದೆಂದು ಬ್ಯಾಂಕ್‌ಗಳು ಚಿಂತೆಗೊಳಗಾಗಿವೆ ಈ ವರ್ಷದ ನಂತರ ಆರ್‌ಬಿಐ ಈ ನಿಯಮಗಳನ್ನು ಬಹುತೇಕ ಪರಿಚಯಿಸುವ ನಿರೀಕ್ಷೆ ಇರುವುದರಿಂದ ಮಧ್ಯಮಾವಧಿಯಲ್ಲಿ ಲಾಭದಾಯಕತೆಯ ಮೇಲೆ ಇದು ಪರಿಣಾಮ ಬೀರಬಹುದು ಎಂದು ಬ್ಯಾಂಕ್‌ಗಳು ಘಾಸಿಗೊಳಗಾಗಿವೆ. ಯೋಜನೆಯ ಹಣಕಾಸು ಮಾನದಂಡಗಳು, ನಿರ್ದಿಷ್ಟವಾಗಿ, ಬಹಳ ಕಠಿಣವಾಗಿವೆ. ಅದರ ಪ್ರಸ್ತುತ ರೂಪದಲ್ಲಿ ಕಾರ್ಯಗತಗೊಳಿಸಿದರೆ, ಅದು ವಲಯಕ್ಕೆ ಹಣಕಾಸಿನ ತೊಂದರೆಯಾಗಬಹುದು ಎಂದು ಸಾರ್ವಜನಿಕ ವಲಯದ ಬ್ಯಾಂಕ್‌ನ ಕಾರ್ಯನಿರ್ವಾಹಕರೊಬ್ಬರು ತಿಳಿಸಿದ್ದಾರೆ. ಭಾರತವು ವೇಗವಾಗಿ ಬೆಳೆಯಲು ನೋಡುತ್ತಿರುವ ಸಮಯದಲ್ಲಿ ಮತ್ತು ಯಾವುದೇ ಬಿಕ್ಕಟ್ಟು ಇಲ್ಲದಿರುವಾಗ, ಈ ಮಾನದಂಡಗಳು ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿಯನ್ನುಂಟುಮಾಡುತ್ತವೆ ಎಂದು ತಿಳಿಸಿದ್ದಾರೆ ಯೋಜನಾ ಹಣಕಾಸು ಕುರಿತು ಕೇಂದ್ರ ಬ್ಯಾಂಕ್ ಏಪ್ರಿಲ್‌ನಲ್ಲಿ ಕರಡು ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಕರಡು ಮಾರ್ಗಸೂಚಿಗಳಲ್ಲಿ, ಯೋಜನೆಯು ನಿರ್ಮಾಣ ಹಂತದಲ್ಲಿದ್ದಾಗ ಸಂಭಾವ್ಯ ನಷ್ಟವನ್ನು ಸರಿದೂಗಿಸಲು ತಮ್ಮ…