ಸೂರ್ಯೋದಯ: 06:03, ಸೂರ್ಯಾಸ್ತ : 06:36 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ , ಶ್ರಾವಣಮಾಸ , ಶುಕ್ಲ ಪಕ್ಷ, ತಿಥಿ: ತ್ರಯೋದಶಿ, ನಕ್ಷತ್ರ: ತ್ರಯೋದಶಿ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ಬೆ.7:11 ನಿಂದ ಬೆ.8:44 ತನಕ ಅಭಿಜಿತ್ ಮುಹುರ್ತ: ಬೆ.11:55 ನಿಂದ ಮ.12:45 ತನಕ ಮೇಷ ರಾಶಿ ಅಡುಗೆ ಗುತ್ತಿಗೆದಾರರಿಗೆ ಧನಲಾಭ, ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ ಮನೆಯಲ್ಲಿ ಸಂತಸ ವಾತಾವರಣ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯ ಸೇರ್ಪಡೆ, ವಾಹನ ಚಾಲನೆ ಜಾಗೃತಿ ವಹಿಸಿ,ಮೊದಲನೇ ಬಾರಿ ಗರ್ಭಿಣಿಯಾದ ಹೆಣ್ಣುಮಕ್ಕಳು ಎಚ್ಚರದಿಂದಿರಬೇಕು, ಇವರಿಗೆ ಕುಟುಂಬ ವರ್ಗದಿಂದ ಕಾಳಜಿ ಮಾಡುವುದು ಉತ್ತಮ, ವಿಶ್ರಾಂತಿ ಅವಶ್ಯಕವಾಗಿದೆ, ವಿಚ್ಛೇದನ ಪಡೆದ ಮತ್ತು ವಿಧವಾ ಎರಡನೇ ಮದುವೆ ಚರ್ಚೆ ನಡೆಯಲಿದೆ, ಕೆಲವರಿಗೆ ಅತ್ತೆ ಮತ್ತು…
Author: Prajatv Kannada
ನವದೆಹಲಿ ಪಾಕಿಸ್ತಾನಿ ಹಿಂದೂಗಳಿಗೆ ಭಾರತೀಯ ಪೌರತ್ವವನ್ನು ನೀಡಲು ಕೇಂದ್ರ ಸಚಿವ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ. ಸಿಎಎ ಅಡಿಯಲ್ಲಿ ಪೌರತ್ವವನ್ನು ನೀಡಲಾಗುತ್ತಿರುವ ಮೊದಲ ನಿದರ್ಶನವನ್ನು ಇದು ಗುರುತಿಸುತ್ತದೆ. ಪಾಕಿಸ್ತಾನದಲ್ಲಿನ ಧಾರ್ಮಿಕ ಕಿರುಕುಳದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದವರಿಗೆ ಈ ಸಿಎಎ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿದೆ. ಅಹಮದಾಬಾದ್ ಜಿಲ್ಲೆಯಲ್ಲಿ ಗುಜರಾತ್ ಸರ್ಕಾರದಿಂದ ಇದುವರೆಗೆ ಒಟ್ಟು 1,167 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಈ ವರ್ಷದ ಆರಂಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಾರಂಭ ಆಯೋಜಿಸಲಾಗಿದ್ದು, ಪಾಕಿಸ್ತಾನದಿಂದ ವಲಸೆ ಬಂದು ಅಹಮದಾಬಾದ್‌ನಲ್ಲಿ ನೆಲೆಸಿರುವ 18 ಮಂದಿಗೆ ಪೌರತ್ವ ಪ್ರಮಾಣ ಪತ್ರ ವಿತರಿಸಲಾಯಿತು. ಭಾರತದ ಮೂರು ನೆರೆಯ ದೇಶಗಳಿಂದ ಕಿರುಕುಳಕ್ಕೊಳಗಾದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು ವಿವಾದಾಸ್ಪದ ಕಾನೂನಿನಡಿಯಲ್ಲಿ ನಿಯಮಗಳು ಸೂಚನೆ ನೀಡಿದ ಸುಮಾರು 2 ತಿಂಗಳ ನಂತರ, ಈ ಕಾಯ್ದೆಯಡಿಯಲ್ಲಿ ಮೊದಲ ಸೆಟ್ ಪೌರತ್ವ ಪ್ರಮಾಣಪತ್ರಗಳನ್ನು ದೆಹಲಿಯಲ್ಲಿ 14 ಜನರಿಗೆ ಈ ವರ್ಷದ ಮೇನಲ್ಲಿ ನೀಡಲಾಯಿತು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳ…
ಲಕ್ನೋ ಇಂದು ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ ಕನಿಷ್ಠ 20 ಬೋಗಿಳು ಹಳಿ ತಪ್ಪಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ ಅಹಮದಾಬಾದ್‌ಗೆ ತೆರಳುತ್ತಿದ್ದ ಸಬರ್‌ಮತಿ ಎಕ್ಸ್‌ಪ್ರೆಸ್ ರೈಲಿನ 20 ಬೋಗಿಗಳು ಶನಿವಾರ ಮುಂಜಾನೆ ಉತ್ತರ ಪ್ರದೇಶದ ಕಾನ್ಪುರ ಮತ್ತು ಭೀಮಸೇನ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳಿಯಲ್ಲಿ ಬಿದ್ದಿದ್ದ ಬಂಡೆಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ʼʼಘಟನೆಯಲ್ಲಿ ಯಾವುದೇ ಪ್ರಾಣಹಾನಿ, ಗಾಯ ಉಂಟಾಗಿಲ್ಲ. ಪ್ರಯಾಣಿಕರನ್ನು ಕಾನ್ಪುರಕ್ಕೆ ತಲುಪಿಸಲು ಭಾರತೀಯ ರೈಲ್ವೆ ಇಲಾಖೆ ಸ್ಥಳಕ್ಕೆ ಬಸ್ಸುಗಳನ್ನು ಕಳುಹಿಸಿದೆ ಮತ್ತು ಅಲ್ಲಿಂದ ಅಹಮದಾಬಾದ್‌ಗೆ ಪ್ರಯಾಣ ಮುಂದುವರಿಸಲು ವ್ಯವಸ್ಥೆ ಮಾಡಲಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕೂಡಲೇ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ವಾಹನ ಮತ್ತು ಆಯಂಬುಲೆನ್ಸ್ ಧಾವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಾಣಾಲು ಗ್ರಾಮದ ಗ್ರಾಮಸ್ಥರು ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತೀಚಿಗೆ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಸವಾಣಾಲು ಗ್ರಾಮದ ಪಿಲಿಕಲ ರಸ್ತೆ ಬಿರುಕು ಬಿಟ್ಟು ವಾಹನ ಸಂಚಾರ ಹಾಗೂ ಜನರ ಓಡಾಟಕ್ಕೆ ಅಡಚಣೆ ಉಂಟಾಗಿತ್ತು. ಇಲ್ಲಿಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಸ್ಥಳೀಯ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಳೆ ಹಾನಿ ಪ್ರದೇಶಕ್ಕೆ ತಡವಾಗಿ ಭೇಟಿ ನೀಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಈ ವೇಳೆ ಕ್ಷೇತ್ರದ ಜನರ ಜೊತೆಗೂ ಶಾಸಕ ಹರೀಶ್ ಪೂಂಜಾ ಕಿರಿಕ್ ಮಾಡಿಕೊಂಡಿದ್ದಾರೆ. MLAಗೆ ಏಕೆ ತಡವಾಗಿ ಬಂದೆ ಎಂದು ಪ್ರಶ್ನೆ ಮಾಡುವ ಹಕ್ಕು ನಿಮಗಿಲ್ಲ’ ಆ ರೀತಿ ಪ್ರಶ್ನೆ ಮಾಡಿದ್ರೆ ದೇವರ ಮೇಲೆ ಇಡುತ್ತೇನೆ ಎಂದು ಪ್ರಶ್ನೆ ಮಾಡಿದ ಜನರಿಗೆ ದೇವರ ಹೆಸರಲ್ಲಿ ಹರೀಶ್ ಪೂಂಜಾ ಬ್ಲ್ಯಾಕ್ಮೇಲ್ ಮಾಡಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವರ್ತನೆಗೆ ಗ್ರಾಮದ ಜನರು ಆಕ್ರೋಶ ಹೊರ…
ಉಡುಪಿ:- ಕಾರಿನಲ್ಲಿ ಮಲಗೋ ಮುನ್ನ ಹುಷಾರಾಗಿರಿ. ಎಲ್ಲ ಗ್ಲಾಸ್‌ಗಳನ್ನು ಮುಚ್ಚಿಕೊಂಡು ಮಲಗಿದ್ದ ಚಾಲಕರೊಬ್ಬರು ಉಸಿರು ಗಟ್ಟಿ ಚಾಲಕರೊಬ್ಬರು ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ಜರುಗಿದೆ. 37 ವರ್ಷದ ಆನಂದ ಮೃತಪಟ್ಟವರು ಎನ್ನಲಾಗಿದೆ. ಇವರು ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ಮಣಿಪಾಲದಲ್ಲಿ ಉಳಿದುಕೊಳ್ಳಲು ಯಾವುದೇ ರೂಮ್ ಸಿಗದ ಕಾರಣ ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡಿ ಒಳಗೆ ಮಲಗಿದ್ದರು. ಕಾರಿನ ಎಲ್ಲ ಗ್ಲಾಸುಗಳನ್ನು ಏರಿಸಿಕೊಂಡು ಬಂದ್ ಮಾಡಿ ಮಲಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಬೆಂಗಳೂರು:- ವಿದ್ಯುತ್ ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಇಂದು ಕರೆಂಟ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. https://youtu.be/H8tckiPnsvY?si=PkMfJRsRxvnzfPaF ಪವರ್ ಕಟ್ ಆಗುವ ಸ್ಥಳಗಳು:- ಐಟಿಪಿಎಲ್ ಮುಖ್ಯ ರಸ್ತೆ, ರಾಜಪಾಳ್ಯ, ವಿಎಸ್‌ಎನ್‌ಎಲ್ ಡೇಟಾ ಸೆಂಟರ್, ಕನ್ಯಾಕುಮಾರಿ ಸಾಫ್ಟ್‌ವೇರ್, ಹೋಟೆಲ್ ಜೂರಿ ವೈಟ್‌ಫೀಲ್ಡ್ ಮುಖ್ಯ ರಸ್ತೆ, ಹೇಮಕುಂಡ್ ರಸ್ತೆ, ಗ್ರಾಫೈಟ್ ಇಂಡಿಯಾ ರಸ್ತೆ, ಕಾವೇರಿ ನಗರ, ದೇವಸಂದ್ರ ಕೈಗಾರಿಕಾ ಪ್ರದೇಶ, ಗರುಡಾಚಾರ್ ಪಾಳ್ಯ, ಆರ್.ಎಚ್.ಬಿ ಕಾಲೋನಿ, ಲಕ್ಷ್ಮಿ ಸಾಗರ, ಮಹೇಶ್ವರಮ್ಮ ದೇವಸ್ಥಾನ, ಫೀನಿಕ್ಸ್ ಮಾಲ್, ಸಿಂಗಾಯನ ಪಾಳ್ಯ, ದೂರವಾಣಿ ಕೇಬಲ್ ರಸ್ತೆ, ವಿ ಆರ್ ಮಾಲ್ ಡೌನ್, ರೈಲ್ವೆ ಟ್ರ‍್ಯಾಕ್ ರಸ್ತೆ, ಮಣಿಪಾಲ್ ಆಸ್ಪತ್ರೆ, ಜೆನಿಸಿಸ್ ಕಂಪನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಈ ಹೂಡಿ ಸ್ಟೇಷನ್ ವ್ಯಾಪ್ತಿಯಲ್ಲಿವೆ ಎಂದು ಬೆಸ್ಕಾಂ ತಿಳಿಸಿದೆ. ಲಾಜರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರಸ್ತೆ, ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆ, ಗ್ಯಾಂಗ್‌ಮೆನ್, ಹಚಿನ್ಸ್ ರಸ್ತೆ, ಪ್ಯಾರಲರ್ ರಸ್ತೆ, ದೇಶೀಯನಗರ ಸ್ಲಂ, 5ನೇ ಮತ್ತು 6ನೇ ಅಡ್ಡ…
ಬೆಂಗಳೂರು:- ಕೋಲ್ಕತ್ತ ವೈದ್ಯಯ ಹತ್ಯೆ ಖಂಡಿಸಿ IMA ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಇಂದು ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆ ಬಂದ್ ಆಗಿದೆ. https://youtu.be/w8kUfDN4zT4?si=DxQNQB_achLtPV6C ಇನ್ನೂ OPD ಕ್ಲೋಸ್ ಹಿನ್ನೆಲೆ, ಖಾಸಗಿ ಆಸ್ಪತ್ರೆಗಳಿಗೆ ಬಂದು ರೋಗಿಗಳು ರಿಟರ್ನ್ ಆಗುತ್ತಿದ್ದಾರೆ. ಡಯಾಲಿಸಿಸ್ ಸಿಗದೇ ರೋಗಿಗಳು ಪರದಾಟ ನಡೆಸಿದ್ದಾರೆ. ರಾಜಾಜಿನಗರ ಸುಗುಣ ಆಸ್ಪತ್ರೆಗೆ ಗೊರವನಹಳ್ಳಿ ತುಮಕೂರು ಇಂದ ಡಯಾಲಿಸಿಸ್ ರೋಗಿಗಳು ಬಂದಿದರು. OPD ಬಂದ್ ಹಿನ್ನೆಲೆ ವಾಪಸ್ ಆಗಿದ್ದಾರೆ. ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿದ್ದರು. ಆದ್ರೆ ಪ್ರೊಟೆಸ್ಟ್ ಇರೋ ಕಾರಣ ಸೋಮವಾರ ಬರಲು ಸಿಬ್ಬಂದಿ ಹೇಳಿದ್ದಾರೆ. ಪಾಪ ಅವರು ಪ್ರತಿಭಟನೆ ಮಾಡ್ತಾ ಇದ್ದಾರೆ. ಿಷಯ ಗೊತ್ತಿಲ್ಲದೆ ಬಂದಿದ್ದೇವೆ . ಏನು ಮಾಡೋಕೆ ಆಗಲ್ಲ ಎಂದು ರೋಗಿಗಳು ವಾಪಸ್ ಹೋಗಿದ್ದಾರೆ
ಖ್ಯಾತ ನಟ ರಾಜ್ ಬಿ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಾಜ್ ಬಿ ಶೆಟ್ಟಿಯವರ ಹೊಸ ಸಿನಿಮಾ ಸೆಟ್ಟೇರಿದ್ದು ಚಿತ್ರಕ್ಕೆ ‘ರಕ್ಕಸಪುರದೋಳ್’ ಎಂದು ಶೀರ್ಷಿಕೆ ಇಡಲಾಗಿದೆ. ಸಾಹಸ ನಿರ್ದೇಶಕರಾಗಿ ದೇಶಾದ್ಯಂತ ಜನಪ್ರಿಯತೆ ಪಡೆದಿರುವ ಕೆ. ರವಿವರ್ಮ ಅವರ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಇದುವರೆಗೂ ಸಾಹಸ ನಿರ್ದೇಶಕರಾಗಿದ್ದ ರವಿವರ್ಮ ಈ ಸಿನಿಮಾದ ಮೂಲಕ ನಿರ್ಮಾಪಕರಾಗಿ ಭಡ್ತಿ ಪಡೆದುಕೊಂಡಿದ್ದಾರೆ. ಇದು ಅವರ ಪ್ರಥಮ ನಿರ್ಮಾಣದ ಸಿನಿಮಾ ಎಂಬುದು ವಿಶೇಷ. ಈ ಚಿತ್ರಕ್ಕೆ ರವಿ ಸಾರಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕರಾಗಿ ಅವರಿಗೂ ಇದು ಮೊದಲ ಸಿನಿಮಾ. ಬೆಂಗಳೂರಿನ ನೆಟಕಲ್ಲಪ್ಪ ಸರ್ಕಲ್ನಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ಮಾಡಲಾಗಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಮುಹೂರ್ತ ನಡೆಸಲಾಗಿದೆ. ‘ರಕ್ಕಸಪುರದೋಳ್’ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರು ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿದ್ದೂ ಅಲ್ಲದೇ, ಶೀರ್ಷಿಕೆ ಅನಾವರಣ ಮಾಡಿ ಶುಭ ಹಾರೈಸಿದರು. ‘ಕೆ.ವಿ.ಎನ್. ಪ್ರೊಡಕ್ಷನ್ಸ್’ ಸಂಸ್ಥೆಯ ಸುಪ್ರೀತ್ ಅವರು…
ಆಗಸ್ಟ್ 16ರಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿದೆ. ಫೀಚರ್ ಸಿನಿಮಾಗಳು ಮಾತ್ರವಲ್ಲದೆ ಡಾಕ್ಯುಮೆಂಟರಿ, ಕಿರುಚಿತ್ರ, ಅನಿಮೇಟೆಡ್ ಸಿನಿಮಾ, ಆರ್ಟ್ ಸಿನಿಮಾ ಇನ್ನಿತರೆ ಮಾದರಿಯ ಸಿನಿಮಾಗಳಿಗೆ ನಾನ್ ಫೀಚರ್ ಕ್ಯಾಟಗರಿ ಅಡಿಯಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ನಾನ್ ಫೀಚರ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳ ಪಟ್ಟಿ ಇಲ್ಲಿದೆ. ನಾನ್ ಫೀಚರ್ ಫಿಲಂ ಕ್ಯಾಟಗರಿಯಲ್ಲಿ 17 ಭಾಷೆಗಳ 130 ಸಿನಿಮಾಗಳು ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದವು. ನಾನ್ ಫೀಚರ್ ಸಿನಿಮಾ ವಿಭಾಗದಲ್ಲಿ 18 ಕ್ಯಾಟಗರಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದ್ದು, ಪ್ರತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನಿಮಾ, ತಂತ್ರಜ್ಞರು, ನಟ-ನಟಿಯರ ಹೆಸರು ಇಲ್ಲಿದೆ. ವಿಶೇಷ ಪ್ರಶಸ್ತಿ: ಬಿರುಬಾಲ (ಅಸ್ಸಾಮಿ), ಹಾರ್ಗಿಲ (ಅಸ್ಸಾಮಿ) ಅತ್ಯುತ್ತಮ ಚಿತ್ರಕತೆ: ಕೌಶಿಕ್ ಸರ್ಕಾರ್ (ಮೊನೊ ನೊ ಅವೇರ್) ಅತ್ಯುತ್ತಮ ನರೇಷನ್: ಸುಮಂತ್ ಶಿಂಧೆ (ಮರ್ಮರ್ಸ್ ಆಫ್ ಜಂಗಲ್) ಮರಾಠಿ ಡಾಕ್ಯುಮೆಂಟರಿ ಅತ್ಯುತ್ತಮ ಸಂಗೀತ: ವಿಶಾಲ್ ಭಾರಧ್ವಜ (ಫುರ್ಸತ್) ಅತ್ಯುತ್ತಮ ಎಡಿಟಿಂಗ್ : ಸುರೇಶ್ ಅರಸ್ (ಮಧ್ಯಂತರ)…
ಪ್ರಶಸ್ತಿ ಸಮಾರಂಭಗಳ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದರಲ್ಲಿ ನೈತಿಕತೆ ಇರೋದಿಲ್ಲ ಅನ್ನೋದು ಅನೇಕರ ವಾರ. ಇದೇ ಕಾರಣಕ್ಕೆ ಆಮಿರ್ ಖಾನ್ ಯಾವುದೇ ಅವಾರ್ಡ್ ಫಂಕ್ಷನ್ಗೆ ಬರೋದಿಲ್ಲ. ವಿದ್ಯಾ ಬಾಲನ್ ಅವರು ಈ ಮೊದಲು ಶಾರುಖ್ ಖಾನ್ ಅವಾರ್ಡ್ ಖರೀದಿ ಮಾಡಿದ ಬಗ್ಗೆ ಟೀಕೆ ಮಾಡಿದ್ದರು. ಅದೇ ರೀತಿ ಸೈಫ್ ಅಲಿ ಖಾನ್ ಕೂಡ ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದರು. ನೈತಿಕತೆಯ ಆಧಾರದ ಮೇಲೆ ಅವಾರ್ಡ್ ನೀಡುವುದಿಲ್ಲ ಅನ್ನೋದು ಸೈಫ್ ಅಲಿ ಖಾನ್ ಅಭಿಪ್ರಾಯವಾಗಿದೆ. ಅನುಪಮಾ ಚೋಪ್ರಾ ಬಳಿ ಮಾತನಾಡಿದ ಸೈಫ್, ಅವಾರ್ಡ್ ಕಾರ್ಯಕ್ರಮದಲ್ಲಿ ಯಾವುದೇ ನೈತಿಕ ಆಧಾರತೆ ಇರುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ಚಾನೆಲ್ಗಳು ನೀಡುವ ಅವಾರ್ಡ್ ಫಂಕ್ಷನ್ ಗಳು ದೊಡ್ಡ ಜೋಕ್ ಎಂದು ಹೇಳಿದ್ದಾರೆ. ‘ಮೋಸ್ಟ್ ಬ್ಯೂಟಿಫುಲ್ ಸ್ಮೈಲ್, ಗ್ಲಾಮರಸ್ ದಿವಾ ರೀತಿಯ ವಿಭಾಗಗಳನ್ನು ಅವಾರ್ಡ್ ಕಾರ್ಯಕ್ರಮದವರು ಸೃಷ್ಟಿ ಮಾಡುತ್ತಾರೆ. ಯಾರಿಗೆ ಅತ್ಯುತ್ತಮ ನಟ/ನಟಿ ಅವಾರ್ಡ್ ಸಿಕ್ಕಿದೆ ಎಂಬುದು ನೆನಪೂ ಇರುವುದಿಲ್ಲ. ಯಾರೂ ಜೋಕ್ ಹೇಳಿರುವುದಿಲ್ಲ. ಆದರೂ ಅವರು ನಗುತ್ತಾರೆ.…