ಕಾರವಾರ:- ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ರಕ್ಷಣಾ ಸಿಬ್ಬಂದಿ ಸತತ ಒಂಭತ್ತು ಗಂಟೆಗಳು ಕಾರ್ಯಾಚರಣೆ ಮಾಡಿ ಹೊರಕ್ಕೆ ತೆಗೆಯಲಾಗಿದೆ. ಜಿಲ್ಲೆಯ ಕಾರವಾರ ತಾಲೂಕಿನ ಕೊಡಿಬಾಗ್ ಬ್ರಿಡ್ಜ್ ಬಳಿ ಕಾಳಿ ನದಿಗೆ ಬಿದ್ದಿದ್ದ ಲಾರಿಯನ್ನು ಸತತ ಕಾರ್ಯಚರಣೆ ಮೂಲಕ ರಕ್ಷಣಾ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ. ಆಗಸ್ಟ್ 7ರಂದು ಸೇತುವೆ ಕುಸಿದಾಗ ಕಾಳಿ ನದಿಗೆ ಲಾರಿ ಬಿದ್ದಿತ್ತು. ತಮಿಳುನಾಡು ಮೂಲದ ಸೆಂಥಿಲ್ ಒಡೆತನದ ಲಾರಿಯನ್ನು 2 ಕ್ರೇನ್, 3 ಟೋಯಿಂಗ್ ವೆಹಿಕಲ್, ಈಶ್ವರ ಮಲ್ಪೆ ತಂಡದಿಂದ ಹೊರತೆಗೆಯಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು ಸೇರಿ 100ಕ್ಕೂ ಜನರ ಪ್ರಯತ್ನ ಸಫಲವಾಗಿದೆ ಎಂದು ಹೇಳಲಾಗಿದೆ.
Author: Prajatv Kannada
ಬೆಂಗಳೂರು:- ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್ ಶೋ 8 ನೇ ದಿನಕ್ಕೆ ಕಾಲಿಟ್ಟಿದ್ದು, ಜನತೆ ಮುಗಿ ಬಿದ್ದಿದ್ದಾರೆ. https://youtu.be/dGYMgQaazJY?si=-OS_YDEcfaWvUzS5 ಒಂದೆಡೆ ಸಾಲು ಸಾಲು ರಜೆ ಇರುವ ಹಿನ್ನೆಲೆ ಫ್ಲವರ್ ಶೋ ನೋಡಲು ಮುಗಿ ಬಿದ್ದಿದ್ದಾರೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಿನ್ನಲೆ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧರಿಸಿ ಫ್ಲವರ್ ಶೋ 8 ನೇ ದಿನಕ್ಕೆ ಕಾಲಿಟ್ಟಿದ್ದು, ಕುಟುಂಬ ಸಮೇತ ಲಕ್ಷಾಂತರ ಜನರು ಲಾಲ್ ಬಾಗ್‌ಗೆ ಭೇಟಿಕೊಟ್ಟು ಸಂಭಮಿಸಿದ್ದಾರೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಲಾಲ್‌ಬಾಗ್‌ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನ ಚರಿತ್ರೆ ಅನಾವರಣಗೊಂಡು ಎಂಟನೇ ದಿನಕ್ಕೆ ಕಾಲಿಟ್ಟಿದೆ. ಅಲ್ಲದೇ ನಿನ್ನೆ 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಲಾಲ್‌ಬಾಗ್‌ನತ್ತ ಜನ ಸಾಗರವೆ ಹರಿದು ಬಂದಿತ್ತು. ಮಕ್ಕಳು, ಪೋಷಕರು, ಯುವ ಜನರು, ವೃದ್ಧರೂ ಸೇರಿದಂತೆ ಎಲ್ಲರೂ ಸೆಲ್ಫಿಗೆ…
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬ ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗ್ತಿದೆ. ಇತ್ತ ಬೆಂಗಳೂರಲ್ಲಿ ಎಂಎಲ್‌ಸಿ ಶರವಣ ಮನೆಯಲ್ಲಿಯೂ ವರಮಹಾಲಕ್ಷ್ಮೀ ಹಬ್ಬವನ್ನ ಅದ್ದೂರಿಯಿಂದ ಆಚರಿಸಲಾಯಿತು. ದೇವಿ ಮಹಾಲಕ್ಷ್ಮೀಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬೆಳ್ಳಿ, ಚಿನ್ನದ ವಸ್ತುಗಳನ್ನ ದೇವಿ ಮುಂದಿಟ್ಟು ಪೂಜೆ ಸಲ್ಲಿಸಲಾಯ್ತು. ಈ ಬಾರಿಯ ಪೂಜೆಯಲ್ಲಿ ಸ್ಯಾಂಡಲ್ ವುಡ್ ಹಿರಿಯ ನಟಿ ಪ್ರೇಮರನ್ನ ಮುಖ್ಯ ಅತಿಥಿಯಾಗಿ ಕರೆಸಿ ಅರಶಿನ ಕುಂಕುಮ ನೀಡಿದ್ರು. ಈ ವೇಳೆ ಮಾತನಾಡಿದ ಎಂಎಲ್ ಸಿ ಶರವಣ ನಾಡಿನ ಸಮಸ್ತ ಜನರ ಜೀವನದಲ್ಲಿ ಬೆಳಕು ಮೂಡಲಿ ಎಂದು ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಪೂಜೆಯನ್ನ ನೇರವೇರಿಸಿದ್ದಾಗಿ ತಿಳಿಸಿದ್ರು, ನಂತರ ಮಾತನಾಡಿದ ನಟಿ ಪ್ರೇಮ ಇದೇ ಮೊದಲಬಾರಿಗೆ ವರಮಹಾಲಕ್ಷ್ಮೀ ಹಬ್ಬದಲ್ಲಿ ಭಾಗಿಯಾಗಿದ್ದು ತುಂಬಾ ಖುಷಿ ತಂದಿದೆ ಎಂದರು.
ಮನೀಶಾ ಕೊಯಿರಾಲಾ ಹುಟ್ಟುಹಬ್ಬದ ಶುಭಾಶಯಗಳು..! Prajaatv Kannada |
ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲೊಂದಾದ ವರಮಹಾಲಕ್ಷ್ಮಿ ವ್ರತ ಶುಕ್ರವಾರದಂದು ನಡೆಯಲಿದೆ. ಮನೆಗೆ ಸಂಪತ್ತು, ಸಮೃದ್ಧಿ ಕರುಣಿಸು ಎಂದು ದೇವಿ ಲಕ್ಷ್ಮಿಯನ್ನು ಪ್ರಾರ್ಥಿಸುವ, ಪೂಜಿಸುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಸಮುದ್ರ ಮಥನದ ಸಮಯದಲ್ಲಿ ಉದ್ಭವಿಸಿದ ಲಕ್ಷ್ಮಿ, ಸಂಪತ್ತಿನ ಅಧಿದೇವತೆಯಾಗಿ ಎಲ್ಲರಿಗೂ ಬೇಕಾದವಳಾಗಿದ್ದಾಳೆ. ಜೊತೆಗೆ ಮುತ್ತೈದೆ ತನದ ಸಂಕೇತವಾಗಿಯೂ ಆಕೆಯನ್ನು ಆರಾಧಿಸಲಾಗುತ್ತದೆ. ಅಷ್ಟಕ್ಕೂ ಈ ಹಬ್ಬದ ವೈಶಿಷ್ಟ್ಯವೇನು? ಆಚರಣೆ ಹೇಗೆ? ಇಲ್ಲಿದೆ ಮಾಹಿತಿ ಪುರಾಣ ಏನು ಹೇಳುತ್ತೆ..?: ಚಾರುಮತಿ ಎಂಬ ಸ್ತ್ರೀ ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ, ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ. ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ…
ಬೆಂಗಳೂರು:- ಇಂದಿನಿಂದ ಮೂರು ದಿನ ರಾಜ್ಯದಾದ್ಯಂತ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. https://youtu.be/fIULiZL0Z4E?si=NH-HQMPI7gV8UMv5 ದಕ್ಷಿಣ ಒಳನಾಡಿನ ರಾಮನಗರದಲ್ಲಿ ಸಾಧಾರಣದೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಚದುರಿದಂತೆ ಮತ್ತು ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಇನ್ನೂ ಉತ್ತರ ಒಳನಾಡಿನಲ್ಲಿ ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ಜಿಲ್ಲೆಗಳಲ್ಲಿ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾದರೆ, ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಲಿದ್ದು, ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಐನಾತಿ ಕಳ್ಳನ ಸೆರೆಯಾಗಿದ್ದು ಸಿಟಿಯಲ್ಲಿ ಕಳ್ಳತನ, ಕಾಡಿನಲ್ಲಿ ವಾಸಸ್ಥಾನ ಮಾಡುತ್ತಿದ್ದ ಪಾಕಡ ನನ್ಮಗ ಅಂದ್ರೂ ತಪ್ಪಾಗಲ್ಲ ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಆಸಾಮಿ. ಹೌದು .. ಐನಾತಿ ಕಳ್ಳನ ಸೆರೆಯಾಗಿದ್ದು ಗಿರಿನಗರ ಪೊಲೀಸರಿಂದ ಕುಖ್ಯಾತ ಕಳ್ಳ ನರಸಿಂಹ ರೆಡ್ಡಿ ಬಂಧನ ಮಾಡಲಾಗಿದ್ದು ಸುಮಾರು 50 ಕ್ಕು ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆಸಾಮಿ ಇತ್ತೀಚಿಗೆ ಗಿರಿನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ ಆರೋಪಿ. ಎರಡು ಕಾಡುಗಳನ್ನ ತನ್ನ ಆವಾಸಸ್ಥಾನ ಮಾಡಿಕೊಂಡಿದ್ದ ಕಳ್ಳ ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್ ನಲ್ಲಿ ವಾಸ ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ ಆರೋಪಿ ಪೊಲೀಸರು ಬೆನ್ನತ್ತಿದರೆ ಚಾಲೆಂಜ್ ಮಾಡಿ ಹೋಗುತ್ತಿದ್ದ. ಪೊಲೀಸರು ನನ್ನ ಹಿಂದೆ ಬರಬೇಕು, ಬೆನ್ನತ್ತಬೇಕು ಅಂತಾ ಚಾಲೆಂಜ್. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿ ಬಂಧನ. ಗಿರಿನಗರ ಪೊಲೀಸರಿಂದ ನರಸಿಂಹ ರೆಡ್ಡಿ ಬಂಧನ ಮಾಡಿದ್ದು ನೆಲಮಂಗಲದ ಸೋಲೂರು ಮೂಲದ…
ಬೆಂಗಳೂರು: ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ಸಮಸ್ಯೆ ಬಗೆಹರಿಸಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ಬಿಬಿಎಂಪಿಗೆ (BBMP) ಮನವಿ ಮಾಡಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಹೌದು. ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಅಥವಾ ಬಿಎಂಆರ್‌ಸಿಇಎಲ್ ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಸ್ತೆ ಇರುವ ಜಾಗ ಕೃಷ್ಣ ಬೈರೇಗೌಡರ ಕ್ಷೇತ್ರಕ್ಕೆ ಬರುತ್ತಿದೆ. ಹೀಗಿದ್ದರೂ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ನರೇಂದ್ರ ಸಿಂಹ ಮೂರ್ತಿ ಎಂಬವರು, ಮಂತ್ರಿಗಳೇ ಇಷ್ಟು ಅಸಹಾಯಕರಾದರೆ ಹೇಗೆ? ಒಂದು ಫೋನ್ ಮಾಡಿದರೆ ಬಿಬಿಎಂಪಿ ಕಮಿಷನರ್ ನಿಮ್ಮ ಫೋನ್ ಸ್ವೀಕರಿಸುತ್ತಿದ್ದಾರೋ ಇಲ್ಲವೋ ಎಂದು ಪ್ರಶ್ನಿಸಿದ್ದಾರೆ.
ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ. ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್ ಅಗತ್ಯವಾಗಿರುವುದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ. ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.76 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.66 ರೂ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.43 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 89.95 ರೂ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.93 ರೂ ಮತ್ತು…
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳ ಬಗ್ಗೆ ಈಗಾಗಲೇ ಪೊಲೀಸರು ಸಾಕಷ್ಟು ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹ್ವತ್ವದ ಮಾಹಿತಿ ಪೊಲೀಸರ ಕೈ ಸೇರಿದೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ಮೃತದೇಹವನ್ನು ಆರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಕಾರಿನಲ್ಲಿ ಸಾಗಾಟ ಮಾಡಿದ್ದರು. ಕಾರನ್ನು ಪರಿಶೀಲನೆ ಮಾಡುವಾಗ ಪೊಲೀಸರಿಗೆ ಕೂದಲು ಸಿಕ್ಕಿತ್ತು. ಈ ಕುರಿತು ಪೊಲೀಸರು ಕೆಲ ಮಾಹಿತಿಗಳನ್ನು ಸಂಗ್ರಹ ಮಾಡಿದ್ದರು. ಬಳಿಕ ಆರೋಪಿಗಳ ಕೂದಲು ಮಾದರಿಯನ್ನು ಎಫ್ಎಸ್ಎಲ್ಗೆ ಕಳುಹಿಸಿ ಕೊಟ್ಟಿದ್ದರು. ಇದೀಗ ಎಫ್ಎಸ್ಎಲ್ನಿಂದ ವರದಿ ಬಂದಿದ್ದು ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹ ಸಾಗಾಟ ಮಾಡಿರೋದು ದೃಢವಾಗಿದೆ. ಇದರ ರಿಪೋರ್ಟ್ ಪೊಲೀಸರ ಕೈಸೇರಿದೆ. ಮೃತದೇಹ ಸಾಗಿಸಿದ್ದ ಅರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಅವರ ಕೂದಲು ಅನ್ನೋದು ವರದಿಯಿಂದ ಕನ್ಫರ್ಮ್ ಆಗಿದೆ.