ಬೆಂಗಳೂರು:- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ KSRTC, BMTC ನೌಕರರು ಮುಷ್ಕರಕ್ಕೆ ತಯಾರಿ ಮಾಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒತ್ತಡ ಹಾಕುವ ಸಂಬಂದ ಶುಕ್ರವಾರ ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಗಾಂಧಿನಗರದ ಸಿಐಟಿಯು ಮುಖ್ಯ ಕಚೇರಿಯಲ್ಲಿ ಸಭೆ ನಡೆಸಿತು. ಈ ವೇಳೆ ಮಾತನಾಡಿದ ಸಾರಿಗೆ ಮುಖಂಡ ಅನಂತ್ ಸುಬ್ಬರಾವ್, ಮುಖ್ಯಮಂತ್ರಿಯಲ್ಲಿ ಕೇಳಿ ಕೊಳ್ಳುವುದಿಷ್ಟೆ; ಈ ಹಿಂದೆ ನೀವು ಸಿಎಂ ಆಗಿದ್ದಾಗ, ನಾವು ಮೂರು ದಿನ ಮುಷ್ಕರ ಮಾಡಿದ್ದೆವು. ನಂತರ ಮೂರನೇ ದಿನ ನಮ್ಮ ಬೇಡಿಕೆ ಈಡೇರಿಸಲು ಮುಂದಾಗಿದ್ದಿರಿ. ಈ ಬಾರಿ ಆ ಪರಿಸ್ಥಿತಿ ತರಬೇಡಿ. ಈಗಾಗಲೇ ಸಾರಿಗೆ ನೌಕರರು ಮುಷ್ಕರ ಮಾಡುವ ಮನಸ್ಥಿತಿಯಲ್ಲಿದ್ದಾರೆ ಎಂದರು. https://youtu.be/B3Perqi5U_g?si=bK5zJkYR8ILU3km1 ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಎಂದು ನಾವು ನೌಕರರಿಗೆ ಹೇಳಿದ್ದೇವೆ. ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಮ್ಮ ಮುಷ್ಕರ ವಾಪಸ್ಸು ಪಡೆಯಲ್ಲ. ಇದು ಬಹಳ ಸ್ಪಷ್ಟ, ನೌಕರರು ಮುಷ್ಕರಕ್ಕೆ ಸಿದ್ಧರಾಗಿದ್ದಾರೆ. ನಾವು ಈಗ ಮುಷ್ಕರದ ದಿನಾಂಕ ಘೋಷಣೆ ಮಾಡುವುದಷ್ಟೇ ಬಾಕಿ. ಇಲ್ಲಿಯವರೆಗೆ…
Author: Prajatv Kannada
ಬೆಂಗಳೂರು:- ಸಾಕಷ್ಟು ಕುತೂಹಲ ಕೆರಳಿಸಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಗೆಲುವು ಖಚಿತವಾಗುವ ಮುನ್ನವೇ MLA ನಿಖಿಲ್ ಎನ್ನುವ ಫಲಕ ಸಿದ್ಧವಾಗಿರುವುದು ಗಮನ ಸೆಳೆದಿದೆ. https://youtu.be/rlQvLLAHXHY?si=41argYEBMX1L5ed0 ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರೇ ಬಹುತೇಕ ಗೆಲ್ಲುವ ಸಾಧ್ಯತೆಗಳಿವೆ ಎಂದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸೆಲೆಬ್ರೇಷನ್‌ಗೆ ಮುಂದಾಗಿದ್ದಾರೆ. ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇಂದು ತೆರೆಗೆ ಬೀಳಲಿದ್ದು, ಅದರಲ್ಲೂ ಎಲ್ಲರ ಚಿತ್ತ ಚನ್ನಪಟ್ಟಣದ ಬಳಿ ಮುಖ ಮಾಡಿದೆ. ಹಿರಿಯ ರಾಜಕಾರಣಿಯು ಆಗಿರುವ ಸಿ.ಪಿಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿದ್ದಾರೆ. ಇದೀಗ 6ನೇ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ. ಹಿರಿಯ ರಾಜಕಾರಣಿಗೆ ಎದುರಾಳಿಯಾಗಿ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಅನುಭವಿ ಹಾಗೂ ಯುವ ರಾಜಕಾರಣಿ…
ರಾಮನಗರ: ಚನ್ನಪಟ್ಟಣದಲ್ಲಿ ಮತ ಎಣಿಕೆಯಲ್ಲಿ ಕಾಂಗ್ರೆಸ್ ಭಾರೀ ಮುನ್ನಡೆ ಸಾಧಿಸುತ್ತಿದೆ. 9ನೇ ಸುತ್ತು ಮುಕ್ತಾಯವಾಗಿದ್ದು, ಹತ್ತನೇ ಸುತ್ತಿನಲ್ಲಿ ಕಾಂಗ್ರೆಸ್ ಆಭ್ಯರ್ಥಿ ಸಿಪಿ ಯೋಗೇಶ್ವರ್ 19000 ಮತಗಳ ಮುನ್ನಡೆ ಸಾಧಿಸಿದ್ದು, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಭಾರೀ ಹಿನ್ನಡೆಯಾಗಿದೆ. https://youtu.be/1aneth8PZIY?si=MOdUxMwr0ORAYCy_
ಶಿಗ್ಗಾಂವಿಯಲ್ಲಿ ಬಿಜೆಪಿ ಲೆಕ್ಕಾಚಾರ ಉಲ್ಟಾ ಹೊಡಿತಿದೆ. 11 ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿ ಭರತ್ ಬೊಮ್ಮಾಯಿಗೆ 55, 285 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 68, 078ಗ ಪಡೆದಿದ್ದು, 12, 793 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ ಕಂಡಿದೆ. https://youtu.be/DwlWCj1H2bg?si=SYHO6WBwajbBJb_c
ಬೆಂಗಳೂರು:- ಇತ್ತೀಚೆಗೆ ನಡೆದ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಇಂದು ಹೊರ ಬೀಳಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂರು ಕ್ಷೇತ್ರದಲ್ಲೂ ಮನೆ ಮಾಡಿದೆ. https://youtu.be/2hC47HmvpZg?si=XwrLP8MGlV9yu-Ak ಇಂದು ಬೆಳಗ್ಗೆ 11 ಗಂಟೆಗೆ ಗೆಲ್ಲೋದು ಯಾರು ಎನ್ನುವ ಬಗ್ಗೆ ಒಂದು ಪಿಚ್ಚರ್ ಸಿಗಲಿದೆ. ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಮತಎಣಿಕೆ ನಡೆಯುತ್ತಿದ್ದರೆ ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಗ್ಗಾಂವಿ ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಡೂರು ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮತಗಟ್ಟೆ ಸಮೀಕ್ಷೆಗಳು ಅವರದ್ದು ಅವರಿಗೆ ಎಂದು ಹೇಳ್ತಿದ್ದರೂ, ಇದನ್ನು ನಂಬಲು ಕಾಂಗ್ರೆಸ್ ಸಿದ್ದವಿಲ್ಲ. ನಮಗೆ ಎಕ್ಸಿಟ್‌ಪೋಲ್‌ಗಳ ಬಗ್ಗೆಯೇ ನಂಬಿಕೆ ಇಲ್ಲ. ಮೂರು ಕಡೆಯೂ ನಮ್ದೇ ಗೆಲುವು ಅಂತಿದೆ. ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ಸೋತರೇ ನಾನೇ ಸೋತಂತೆ ಎಂದು ಹೇಳಿಬಿಟ್ಟಿದ್ದಾರೆ. ಇದೇ ವೇಳೆ, ಕುಮಾರಸ್ವಾಮಿ ಸಹ…
ಬೆಂಗಳೂರು:- ರಾಜ್ಯದ ಜನತೆ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕೆಲವೇ ಗಂಟೆಗಳಲ್ಲಿ ಹೊರ ಬೀಳಲಿದೆ. https://youtu.be/JMdWwvLL8mU?si=zbu1yw4nt2XSVV2A ಹೀಗಾಗಲೇ ಮತ ಎಣಿಕೆ ಆರಂಭವಾಗಿದ್ದು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಎರದರಲ್ಲಿ ಮುನ್ನಡೆ ಕಾಯ್ದು ಕೊಂಡರೆ ಕಾಂಗ್ರೆಸ್ ಒಂದರಲ್ಲಿ ಮುನ್ನಡೆ ಕಾಯ್ದು ಕೊಂಡಿದೆ. ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 205 ಮತಗಳ ಮುನ್ನಡೆ ಸಾಧಿಸಿದರೆ ಭರತ್ ಬೊಮ್ಮಾಯಿಗೆ 1,567 ಮತಗಳ ಮುನ್ನಡೆ ಸಾಧಿಸಿದ್ದಾರೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು 1,155ಮತಗಳ ಮುನ್ನಡೆ ಸಾಧಿಸಿದ್ದು, ಸಿಪಿ ಯೋಗೇಶ್ವರ್ ಹಿನ್ನಡೆ ಅನುಭವಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ದರ್ಶನ್ ಗೆ ಅನಾರೋಗ್ಯದ ಕಾರಣದಿಂದ ಆರು ವಾರಗಳ ಶರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಈಗಾಗಲೇ ಮೂರು ವಾರ ಕಳೆದಿದ್ದು ಇದುವರೆಗೂ ದರ್ಶನ್ ಗೆ ಶಸ್ತ್ರ ಚಿಕಿತ್ಸೆ ನಡೆದಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿರುವ ದರ್ಶನ್ ಪರ ವಕೀಲರು ದರ್ಶನ್ ಇನ್ನೂ ಮಾನಸಿಕವಾಗಿ ಸಿದ್ಧವಾಗದ ಕಾರಣ ಶಸ್ತ್ರಚಿಕಿತ್ಸೆ ನಡೆಸಿಲ್ಲ ಎಂದಿದ್ದಾರೆ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಗೆ ಹೈಕೋರ್ಟ್ 6 ವಾರಗಳ ಜಾಮೀನು ನೀಡಿತ್ತು. ಜಾಮೀನು ನೀಡಿದರೂ ದರ್ಶನ್ ಅವರಿಗೆ ಇನ್ನೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ಹೀಗಾಗಿ ಶಸ್ತ್ರ ಚಿಕಿತ್ಸೆ ಯಾಕೆ ನಡೆದಿಲ್ಲ ಎಂಬ ಪ್ರಶ್ನೆಗೆ ದರ್ಶನ್ ಪರ ವಕೀಲರು ಆರೋಗ್ಯಕ್ಕೆ ಸಂಬಂಧಿಸಿದ ವರದಿಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ದರ್ಶನ್ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡುವುದಕ್ಕೆ ತಯಾರಿ ಮಾಡಲಾಗುತ್ತಿದೆ. ದರ್ಶನ್ ಕೂಡ ಶಸ್ತ್ರಚಿಕಿತ್ಸೆಗೆ ತಯಾರಾಗುತ್ತಿದ್ದಾರೆ. ಆದರೆ ಅತಿಯಾದ ರಕ್ತದೊತ್ತಡ ಸಮಸ್ಯೆ ಎದುರಾಗಿದೆ. ಆಪರೇಷನ್ ಮಾಡಬೇಕಾದರೆ ರಕ್ತದೊತ್ತಡ ಸಮತೋಲನ ಆಗಿರಬೇಕು. ದರ್ಶನ್ ರಕ್ತದೊತ್ತಡದ…
ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಇತ್ತೀಚೆಗೆ ಸಿಂಪಲ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಸಹೋದರನ ನಿಶ್ಚಿತಾರ್ಥದ ಫೋಟೋವನ್ನು ಶೇರ್ ಮಾಡಿರುವ ರಕ್ಷಿತಾ ಪ್ರೇಮ್ ನವ ಜೋಡಿಗೆ ಶುಭ ಹಾರೈಸಿದ್ದಾರೆ. ‘ಏಕ್ ಲವ್ ಯಾ’ ಸಿನಿಮಾ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಣಾ ಇದೀಗ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮದಲ್ಲಿ ರಕ್ಷಿತಾ ಪ್ರೇಮ್ ಮತ್ತು ಕುಟುಂಬಸ್ಥರು ಭಾಗಿಯಾಗಿದ್ದಾರೆ. ಭಾವಿ ಪತ್ನಿ ಜೊತೆಗಿನ ರಾಣಾ ಫೋಟೋ ನೋಡಿ ಅಭಿಮಾನಿಗಳು ನವ ಜೋಡಿಗೆ ಶುಭ ಕೋರಿದ್ದಾರೆ. ಇನ್ನೂ ರಾಣಾ ಮದುವೆಯಾಗುತ್ತಿರುವ ಹುಡುಗಿ ಯಾರು, ಯಾವ ಊರು ಎಂಬುದು ರಿವೀಲ್ ಆಗಿಲ್ಲ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮದುವೆ ಯಾವಾಗ, ಎಲ್ಲಿ ಎಂಬುದು ಕುಟುಂಬ ಸದಸ್ಯರು ಮಾಹಿತಿ ನೀಡಿಲ್ಲ.
ಕ್ಸೇವಿಯರ್ ಸಿ.ಬಿ.ಎಸ್.ಇ ಶಾಲೆ ಮಾನವಿಯಲ್ಲಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಎಕ್ಸ್ ಫ್ಲೋರ್ – 2024 ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಕಾರ್ಯನಿರ್ವಹಿಕ ಇಂಜಿನಿಯರ್, ಶ್ರೀ ವಿದ್ಯಾಸಾಗರ್ ವ್ಯಾಲೆನ್ಸ್ ರವರು ಭಾಗವಹಿಸಿದ್ದರು. https://youtu.be/KBFKeLwi8dI?si=cOWqjjlN2IESjrHy ದೇಶದ ಸಾಮಾಜಿಕ ಆರ್ಥಿಕ ಭದ್ರತೆಗೆ ಅಚಲ ಗುರಿಗಳನ್ನು ಇಟ್ಟುಕೊಂಡ ಯುವ ಸಮುದಾಯ ಅತ್ಯಗತ್ಯ, ಇಂದಿನ ಮಕ್ಕಳು ಸಮರ್ಪಕ ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದರೆ ಸಮಾಜದ ಹಲವಾರು ಸಮಸ್ಯೆಗಳಿಗೆ ಅದು ಅಂತಿಮ ಪರಿಹಾರ ನೀಡಬಲ್ಲದು, ಈ ನಿಟ್ಟಿನಲ್ಲಿ ಮಕ್ಕಳನ್ನು ಸಿದ್ಧಗೊಳಿಸುವಲ್ಲಿ ವಿಜ್ಞಾನ ಹಾಗೂ ಕಲೆಯ ಅಭಿವ್ಯಕ್ತಿಗೆ ಅವಕಾಶ ನೀಡುವ ಶಾಲಾ ವಸ್ತು ಪ್ರದರ್ಶನಗಳು ಅತಿ ಮುಖ್ಯ ವೇದಿಕೆಗಳಾಗಿವೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಈ ಕಾರ್ಯಕ್ರಮದಲ್ಲಿ ವ.ಫಾ.ಲಿಯೋ ಪಿರೇರಾ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವೈಜ್ಞಾನಿಕ ದೃಷ್ಟಿಕೋನ ಕೇವಲ ಒಂದು ಪರಿಕಲ್ಪನೆ ಅಲ್ಲ, ನಮ್ಮ ಸಂವಿಧಾನದ ಆಶಯವು ಹೌದು ಎಂದು ಅಭಿಪ್ರಾಯಪಟ್ಟರು ಮತ್ತು ಶಾಲೆಯ ಪ್ರಾಚಾರ್ಯರಾದ ವ.ಫಾ. ವಿಲ್ಸನ್ ಬೆನ್ನಿಸ್…
ಗದಗ: 2A ಮೀಸಲಾತಿ ಜಾರಿಗಾಗಿ ಈ ಬಾರಿ ಕಠೋರ ಹೋರಾಟ ಮಾಡುತ್ತೇವೆ ಮಾಜಿ ಸಚಿವ ಸಿ ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ಜಯ ಮೃತ್ಯುಂಜಯ ಶ್ರೀಗಳ ಸಾನಿಧ್ಯದಲ್ಲಿ ಕಠೋರ ಹೋರಾಟ ಮಾಡುತ್ತೇವೆ. ಸಾವಿರಾರು ಟ್ರಾಕ್ಟರ್ ತೆಗೆದುಕೊಂಡು ಸುವರ್ಣ ಸೌಧ ಮುತ್ತಿಗೆ ಹಾಕೋದು ಅಂತಾ ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ. https://youtu.be/Xe-tTxQqvn4?si=dSwYhrHgoCi4-P-h ದೆಹಲಿ ಮಾದರಿಯಲ್ಲಿ ನಾವು ಸಹ ಮಾಡು ಇಲ್ಲವೇ ಮಡಿ ಹೋರಾಟ ಮಾಡ್ತೇವೆ ಎಂದರು. ಇನ್ನೂ ಇದೇ ವೇಳೆ ಕೋವಿಡ್ ಹಗರಣದ ಬಗ್ಗೆ ನ್ಯಾಯಮೂರ್ತಿ ಖನ್ನಾ ವರದಿ ವಿಚಾರವಾಗಿ ಮಾತನಾಡಿ, ನ್ಯಾಯಮೂರ್ತಿ ಖನ್ನಾ ನೇಮಕ ಮಾಡಿದಾಗಲೇ ಅವರು ಏನು ವರದಿ ಕೊಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಅವರು ಯಾವ ಕಮ್ಯೂನಿಟಿ ಪ್ರತಿನಿಧಿಸ್ತಾರೆ..? ವರದಿ ಪೂರ್ಣ ಪ್ರಮಾಣದ್ದಲ್ಲ, ಮಧ್ಯಂತರ ವರದಿಯಷ್ಟೇ.. ಮಧ್ಯಂತರ ವರದಿ ಮೇಲೆ ಯಡಿಯೂರಪ್ಪ ಮೇಲೆ ಎಸ್‌ಐಟಿ ಬೇಡ, ಸಿದ್ದರಾಮಯ್ಯನವರೇ ಸೇಡಿನ ರಾಜಕಾರಣ ಬೇಡ ಎಂದಿದ್ದಾರೆ. ಸೂರ್ಯ ಚಂದ್ರರು ಇರೋವರೆಗೂ ಅಂತಾ ಡಿ…