ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಕಾಯ್ತಿರ್ತಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೀರ್ ಖಾನ್ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಚಿತ್ರ 2022 ರಲ್ಲಿ ಬಿಡುಗಡೆಯಾಯಿತು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಲಿಲ್ಲ. ಈ ಸಿನಿಮಾ ಫ್ಲಾಪ್ ಆಗಿತ್ತು. ಅದರ ನಂತರ, ಆಮೀರ್ ನಟನೆಯನ್ನು ಬಿಡಲು ನಿರ್ಧರಿಸಿದ್ರಂತೆ. ಇದೀಗ ಈ ದೊಡ್ಡ ನಿರ್ಧಾರದ ಹಿಂದಿನ ಕಾರಣ ರಿವೀಲ್ ಮಾಡಿದ್ದಾರೆ. ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಅಮೀರ್ ಖಾನ್, ನಟನೆಯನ್ನು ತ್ಯಜಿಸುವ ನಿರ್ಧಾರದ ಬಗ್ಗೆ ಹೇಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲಿನಿಂದ ಕಂಗೆಟ್ಟು ನಟನೆಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ನಾನು ಬರಲಿಲ್ಲ ಎಂದಿದ್ದಾರೆ. ಸಿನಿಮಾ ಕೆಲಸದ ಬಗ್ಗೆ ಮಾತಾಡಿದ ನಟ ಅಮೀರ್ ಖಾನ್, “ನಾನು 18 ವರ್ಷದವನಾಗಿದ್ದಾಗಿನಿಂದಲೂ ನನ್ನ ಗಮನವೆಲ್ಲಾ ಕೆಲಸದ…
Author: Prajatv Kannada
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ‘ಜೇನ ದನಿಯೋಳೆ’ ಹಾಡು ಸೈಪರ್ ಹಿಟ್ ಆಗಿತ್ತು. ಈ ಹಾಡು ಹಾಡಿದ್ದು ಜಸ್ ಕರಣ್ ಸಿಂಗ್. ಇದೀಗ ಈ ಜಸ್ ಕರಣ್ ಸಿಂಗ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ಹಾಡಿಗೆ ಧನಿಯಾಗಿದ್ದಾರೆ. ಮೂಲತಃ ಪಂಜಾಬ್ನವರಾದರೂ ರಿಯಾಲಿಟಿ ಶೋಗಳ ಮೂಲಕ ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಮಧುರ ಕಂಠದಿಂದಾಗಿ ಕನ್ನಡದವರೇ ಆಗಿಬಿಟ್ಟಿರುವ ಜಸ್ ಕರಣ್ ಸಿಂಗ್ ಈಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಹಾಡು ಹಾಡಿದ್ದಾರೆ. ಸಿನಿಮಾದ ಹೆಸರು ‘ಅಂಶು’. ‘ಗಟ್ಟಿಮೇಳ’ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ‘ಅಂಶು’ ಸಿನಿಮಾನಲ್ಲಿ ಜಸ್ ಕರಣ್ ಸಿಂಗ್ ಮಧುರವಾದ ಹಾಡೊಂದನ್ನು ಹಾಡಿದ್ದಾರೆ. ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಕಾಣಿಸಿಕೊಂಡಿದ್ದಾರೆ. ಮಹಿಳೆಯ ಆಂತರಿಕ ತುಮುಲಗಳನ್ನು, ಮಾಡುತ್ತಿರುವ ಹೋರಾಟವನ್ನು ಹೇಳುವ ಹಾಡುವ ಇದಾಗಿದ್ದು, ಜಸ್ ಕರಣ್ ಕಂಠದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಈಗ ಬಿಡುಗಡೆ ಆಗಿರುವ ಹಾಡಿನ ವಿಡಿಯೋನಲ್ಲಿ ಜಸ್ ಕರಣ್ ಜೊತೆಗೆ ಸಿನಿಮಾದ ಕೆಲವು ತುಣುಕುಗಳನ್ನು ಸೇರಿಸಲಾಗಿದೆ. ಚಿತ್ರ ಸನ್ನಿವೇಶಗಳಿಗೆ…
ಬೆಂಗಳೂರು: ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪರಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮದ್ಯ ಮಾರಾಟಗಾರರ ಸಂಘ ಗಂಭೀರ ಆರೋಪ ಮಾಡಿದೆ. https://youtu.be/n2xHD8tYdMY?si=tLSknxcXaYRgktK0 ಸುಮಾರು 500 ಕೋಟಿ ರೂ. ನಷ್ಟು ಹಣವನ್ನು ಅಬಕಾರಿ ಸಚಿವರು ವಸೂಲಿ ಮಾಡಿದ್ದಾರೆ. ಒಟ್ಟು 700 ಕೋಟಿ ರೂ. ನಷ್ಟು ವಸೂಲಿ ಆಗಿದೆ. ಭ್ರಷ್ಟಾಚಾರ ಫ್ರೂವ್ ಮಾಡಿದ್ರೆ ಸಿಎಂ ರಾಜಕೀಯ ನಿವೃತ್ತಿ ಎಂದಿದ್ದಾರೆ. ಅಂದು 40 ಪರ್ಸೆಂಟ್ ಆರೋಪ ಮಾಡಿದ್ದ ಕಾಂಗ್ರೆಸ್ ಅದನ್ನು ಪ್ರೂವ್ ಮಾಡಿದ್ಯಾ ?, ಗುತ್ತಿಗೆದಾರರ ಆರೋಪವನ್ನ ಸತ್ಯ ಎಂದಿದ್ದ ಕಾಂಗ್ರೆಸ್, ಈಗ ಈಗ ವೈನ್ ಮರ್ಚಂಟ್ಸ್ ಆರೋಪ ಯಾಕೆ ಒಪ್ಪಲ್ಲ ಎಂದು ಪ್ರಶ್ನಿಸಿದ್ರು. ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ, ಅದನ್ನು ಮರೆ ಮಾಚಲು ಪ್ರಯತ್ನಮಾಡುತ್ತಿದ್ದಾರೆ. ಹೊಸ ಮದ್ಯದಂಗಡಿಗೆ ಲೈಸೆನ್ಸ್ ಪಡೆಯಲು 70-80 ಲಕ್ಷ ಕೊಡಬೇಕು. ಪ್ರತಿ ವರ್ಷ ರಿನಿವಲ್ ಗೆ 4 ಲಕ್ಷ ಲಂಚ ಸೇರಿ 6 ಲಕ್ಷ ಕೊಡಬೇಕು.…
ಬೆಂಗಳೂರು : ತಮ್ಮ ಕ್ಷೇತ್ರದ ಅನುದಾನದ ಬಗ್ಗೆ ಪ್ರಶ್ನೆ ಕೇಳಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಗೆ ನನ್ನ ಮುಂದೆ ತಗ್ಗಿಬಗ್ಗಿ ನಡೆಯಬೇಕು ಎಂದು ಹೇಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ. https://youtu.be/n2xHD8tYdMY?si=Ru5RMLpdv1FeWFAg ಡಿಕೆಶಿಗೆ ಹಿಟ್ಲರ್ ಎಂದು ಟೀಕಿಸಿರುವ ಬಿಜೆಪಿ, ತಗ್ಗಿ ಬಗ್ಗಿ ನಡೀಬೇಕು ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದೆ. ಹಿಟ್ಲರ್ ಹೋಲುವಂತೆ ಡಿಕೆಶಿ ಪೋಸ್ಟರ್ ಪೋಸ್ಟ್ ಮಾಡಿ “ನನ್ನ ಮುಂದೆ ತಗ್ಗಿ ಬಗ್ಗಿ ನಡೆಯಬೇಕು” ಎಂದು ಕಟ್ಟಾಜ್ಞೆ ಮಾಡಿರುವ ಅಡೋಲ್ಫ್ ಹಿಟ್ಲರ್‌ನ ಅಪರಾವತಾರ ಆ ದಿನಗಳ ಸಾಹೇಬ್ಕ ನ್ನಡಿಗರು ಶಾಂತಿ ಪ್ರಿಯರು ಎಂದ ಮಾತ್ರಕ್ಕೆ ನಿಮ್ಮ ದರ್ಪ ದಬ್ಬಾಳಿಕೆಯನ್ನು ಸಹಿಸುವುದಿಲ್ಲ. ನಿಮ್ಮ ಆ ದಿನಗಳ ಕೊತ್ವಾಲ್ ದರ್ಬಾರ್ ಅಂದಿಗೆ ಸೀಮಿತ ಇಂದಿಗಲ್ಲʼ ಎಂದು ಚಾಟಿ ಬೀಸಿದೆ. ನಮ್ಮ ಮೆಟ್ರೋ ನಾಗಸಂದ್ರ-ಮಾದಾವರ ವಿಸ್ತರಿತ ಮಾರ್ಗಕ್ಕೆ ಚಾಲನೆ ನೀಡುವ ಸಂದರ್ಭ ಸಂಸದ ತೇಜಸ್ವಿ ಸೂರ್ಯ, ಡಿಸಿಎಂ ಡಿಕೆಶಿಗೆ ಜೊತೆಗೆ ಚರ್ಚೆ ನಡೆಸಿದ್ದರು. ಈ ವೇಳೆ ಬೆಂಗಳೂರು…
ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಮಗ ಆರ್ಯನ್ ಅವರು ಈಗ ಅವಳಾಗಿ ಬದಲಾಗಿದ್ದಾರೆ. ಈ ವಿಚಾರ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಸಂಜಯ್ ಬಂಗಾರ್ ಅವರ ಹಿರಿಯ ಪುತ್ರ ಆರ್ಯನ್, ಶಸ್ತ್ರಚಿಕಿತ್ಸೆ ಮಾಡಿಕೊಂಡ ನಂತರ ಹುಡುಗಿಯಾಗಿ ರೂಪಾಂತರಗೊಂಡಿದ್ದಾರೆ. ಈ ವಿಷಯವನ್ನು ಖುದ್ದು, ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಕುರಿತಾದ ಅವರ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಕಳೆದ ಹತ್ತು ತಿಂಗಳಿನಿಂದ ಹಾರ್ಮೋನ್ ಬದಲಾವಣೆಯ ಚಿಕಿತ್ಸೆಯನ್ನು ಆರ್ಯನ್ ಪಡೆದುಕೊಳ್ಳುತ್ತಿದ್ದರು. ಇದೀಗ ಚಿಕಿತ್ಸೆ ಮುಗಿದಿದ್ದು, ನಾನು ಅನಯಾ ಬಂಗಾರ್ ಆಗಿ ಬದಲಾಗಿದ್ದೇನೆ. ಹಾಗಾಗಿ, ನನ್ನ ಕ್ರಿಕೆಟ್ ಬದುಕನ್ನೂ ತ್ಯಾಗ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಶಸ್ತ್ರಚಿಕಿತ್ಸೆಯ ಸುಮಾರು 11 ತಿಂಗಳ ನಂತರ, ಕ್ರಿಕೆಟಿಗನ ಪುತ್ರ ತನ್ನನ್ನು ಅರ್ಯನ್ ಬದಲಾಗಿ ಅನಾಯಾ ಎಂದು ಗುರುತಿಸಿಕೊಂಡಿದ್ದಾಳೆ. ಮಗಳಾಗಿ ಬದಲಾಗಿರುವ ಅನಯಾ ತಂದೆಯಂತೆ, ಈಗ ಎಡಗೈ ಬ್ಯಾಟರ್ ಆಗಿದ್ದಾರೆ ಮತ್ತು ಸ್ಥಳೀಯ ಕ್ಲಬ್ ಕ್ರಿಕೆಟ್‌ನಲ್ಲಿ ಇಸ್ಲಾಂ ಜಿಮ್ಖಾನಾ ತಂಡದ ಪರ ಆಡುತ್ತಿದ್ದರು. ಇದರ…
ತಮಿಳುನಾಡು: ಕಾಡನ್ನು ಬಿಟ್ಟ ಗಜಪಡೆ ನಾಡಿಗೆ ಲಗ್ಗೆ ಇಟ್ಟಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉಡೆದುರ್ಗಂ ಬಳಿ 20ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಿಗೆ ಅರಣ್ಯ ಅಧಿಕಾರಿಗಳಿಂದ ಎಚ್ಚರಿಕೆ ನೀಡಿದ್ದಾರೆ. ಪ್ರತಿ ವರ್ಷವೂ ಅಕ್ಟೋಬರ್ ತಿಂಗಳಲ್ಲಿ ಕಾಡಾನೆಗಳು ಬರುವುದು ಸಾಮಾನ್ಯವಾಗಿದೆ. ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಡೆಂಕಣಿಕೊಟೆ, ಶಾನಮಾವು, ಜವಳಗೆರೆ ಕೃಷ್ಣಗಿರಿ ಅರಣ್ಯ ಪ್ರದೇಶದ ಮೂಲಕ ಕಾಡಾನೆಗಳು ವಲಸೆ ಬರುತ್ತವೆ. ಕಳೆದ 15 ದಿನಗಳಿಂದಲೂ ಉಡೆದುರ್ಗ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕರ್ನಾಟಕದಿಂದ ವಲಸೆ ಬಂದಿರುವ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಆಹಾರ ಅರಸಿ ಬರುವ ಆನೆಗಳು ಅರಣ್ಯದ ಸಮೀಪದಲ್ಲಿರುವ ಕೃಷಿ ಜಮೀನುಗಳಿಗೆ ನುಗ್ಗಿ ರಾಗಿ,ಟಮ್ಯಾಟೋ, ಬೀನ್ಸ್‌ನಂತಹ ಕೃಷಿ ಬೆಳೆಗಳನ್ನು ನಾಶಗೊಳಿಸಿವೆ.
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ https://youtu.be/LIlWFdaLqCk?si=l5mPhcARNWadm8qR ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಸೇರಿದಂತೆ ನ.14ರಿಂದ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಹಾವೇರಿ, ಧಾರವಾಡ, ಮಂಡ್ಯ, ಹಾಸನ, ಚಿತ್ರದುರ್ಗ, ಬೀದರ್, ಕೊಪ್ಪಳ, ವಿಜಯಪುರ, ದಾವಣಗೆರೆ, ತುಮಕೂರು, ರಾಮನಗರ, ಕೋಲಾರ, ಗದಗ, ಬೆಳಗಾವಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲೂ ಕೂಡ ಮಳೆಯಾಗುವ ಸಾಧ್ಯತೆ ಇದೆ.
ಗದಗ: ಶಕ್ತಿ ಯೋಜನೆ ಎಫೆಕ್ಟ್ʼನಿಂದ ಸಾರಿಗೆ ಸಂಸ್ಥೆ ಬಸ್ ಚಕ್ರದಡಿ ಸಿಲುಕಿ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ನಡೆದಿದೆ. ರಾಘವೇಂದ್ರ (21) ಮೃತ ವಿದ್ಯಾರ್ಥಿಯಾಗಿದ್ದು, ರಾಮದುರ್ಗ ಹೊಸಪೇಟೆ ಬಸ್ ಏರಿ ಕೊಣ್ಣೂರಿನಿಂದ ನರಗುಂದ ಕಾಲೇಜಿಗೆ ಹೊರಟ್ಟಿದ್ದನು. https://youtu.be/LIlWFdaLqCk?si=pHzfMX5v-DGQ31Pf ಬಸ್ ಫುಲ್ ಇದ್ದ ಕಾರಣ ಬಸ್ ನ ಮುಂಭಾಗದ ಬಾಗಿಲಿನಿಂದ ಹತ್ತಲು ಹೋಗಿದ್ದನು. ಈ ವೇಳೆ ಜಾರಿ ಬಿದ್ದಿದ್ದಾನೆ, ಈ ಪರಿಣಾಮ ತಲೆ ಮೇಲೆ ಬಸ್ ಬಸ್ ಹಿಂಬದಿ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ನರಗುಂದ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಡ್ಯ: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಬೆಂಗಳೂರು, ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಕೊಪ್ಪಳ, ಚಾಮರಾಜನಗರ, ಬಳ್ಳಾರಿ, ವಿಜಯನಗರ, ಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ. https://youtu.be/fNJ9h8RqmoA?si=vqst_M_hSlUl6yhK ಅದರಂತೆ ಚನ್ನಪಟ್ಟಣ ನಗರಸಭೆ ಆಯುಕ್ತರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಅವರ ಶ್ರೀರಂಗಪಟ್ಟಣದ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿದ್ದಾರೆ. ಈ ಹಿಂದೆ ಅವರು ಮಂಡ್ಯದ ಶ್ರೀರಂಗಪಟ್ಟಣದ ತಹಶಿಲ್ದಾರ್ ಆಗಿದ್ದರು. ತಹಶಿಲ್ದಾರ್ ಆಗಿದ್ದಾಗ ಶ್ರೀರಂಗಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿದ್ದರು. ನಾಗೇಶ್ ಅಪಾರ್ಟ್ಮೆಂಟ್ ಪಕ್ಕದ ಬಾಡಿಗೆ ಮನೆ ಮೇಲೆ ಮೈಸೂರು ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ.