Author: Prajatv Kannada

ಪುಟ್ಟಗೌರಿ ಧಾರವಾಹಿ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ಸಾನ್ಯಾ ಅಯ್ಯರ್ ಇದೀಗ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡಲಿದ್ದಾರೆ. ಸದಾ ಸ್ಟೈಲಿಶ್ ಹಾಗೂ ಬೋಲ್ಡ್ ಫೋಟೋಶೂಟ್​ ಮೂಲಕ ಅಭಿಮಾನಿಗಳ ಮನ ಕದಿಯುವ ನಟಿ ಇದೀಗ ಮತ್ತಷ್ಟು ಹಾಟ್ ಆಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಪುಟ್ಟಗೌರಿ ಪಾತ್ರ ಮಾಡಿ ಕರುನಾಡ ಜನರ ಮನಸ್ಸು ಗೆದ್ದಿದ್ದ ಸಾನ್ಯಾ ಐಯ್ಯರ್ ಬಳಿಕ ಬಿಗ್ ಬಾಸ್ ನಲ್ಲೂ ಮಿಂಚಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಸಾನ್ಯಾ ಗೌರಿ ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದಲ್ಲಿ ಸಾನ್ಯಾಗೆ ಜೋಡಿಯಾಗಿ ಸಮರ್ಜಿತ್ ಲಂಕೇಶ್ ಕಾಣಿಸಿಕೊಂಡಿದ್ದಾರೆ. ಸಾನ್ಯಾ ಸಿನಿಮಾದ ಜೊತೆಗೆ ಫೋಟೋ ಶೂಟ್ ಮೂಲಕವೇ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಸದ್ಯ ಸಖತ್​ ಸ್ಟೈಲಿಶ್ ಆಗಿ ಫೋಟೋ ತೆಗೆಸಿಕೊಂಡಿರುವ ನಟಿ ಆ​ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನ ಯಾವ ನಟಿಯೂ ಸಾನ್ಯಾ ಅಯ್ಯರ್ ಕಡಿಮೆ ಇಲ್ಲ. ನಟಿಯ ಫೋಟೋಗಳಿಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಸ್ಟೈಲಿಶ್​ ಡ್ರೆಸ್​​ನಲ್ಲಿ ಪೋಸ್​ ಕೊಟ್ಟ…

Read More

ರಾಜ್ಯದ ರೈತರಿಗೆ ಗುಡ್‌ ನ್ಯೂಸ್‌ ಸಿಕ್ಕಿದ್ದು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 4 ಲಕ್ಷ ಸಬ್ಸಿಡಿಯನ್ನು ನೀಡುವ ಮೂಲಕ ರಾಜ್ಯದ ರೈತರಿಗೆ ಬೋರ್ವೆಲ್ ಕೊರಸಿಕೊಳ್ಳುವ ಅವಕಾಶವನ್ನು ನೀಡಿದೆ. https://youtu.be/zTsVnRut7wc?si=NZJPN4rFm8D_Sa6U ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರನ ವಯೋಮಿತಿಯು 18 ವರ್ಷ ಮೇಲ್ಪಟ್ಟಿರಬೇಕು. ಅಷ್ಟೇ ಅಲ್ಲದೆ ಅರ್ಜಿದಾರನು ಒಂದೇ ಸ್ಥಳದಲ್ಲಿ ಎರಡು ಎಕ್ಕರೆ ಅಥವಾ 5 ಎಕರೆ ಜಮೀನನ್ನು ಹೊಂದಿರಬೇಕು. ಜಮೀನನ್ನು ಹೊಂದಿರುವ ಸ್ಥಳದಲ್ಲಿ ಯಾವುದೇ ರೀತಿಯ ನೀರಾವರಿ ವ್ಯವಸ್ಥೆಯು ಆ ಜಮೀನಿಗೆ ಇರಬಾರದು. ಅಲ್ಲಿನ ನಿಗಮಕ್ಕೆ ಸಂಬಂಧಪಟ್ಟವರ ವರ್ಗಕ್ಕೆ ಮಾತ್ರ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ . ಅಷ್ಟೇ ಅಲ್ಲದೆ ಕೊಡಗು, ಉತ್ತರ ಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಮತ್ತು ಹಾಸನ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಎಕರೆ ಜಮೀನನ್ನು ಹೊಂದಿರಬೇಕು. ಅಷ್ಟೇ ಅಲ್ಲದೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಕಡಿಮೆ ಇರಬೇಕು ಗಂಗಾ ಕಲ್ಯಾಣ ಯೋಜನೆಗೆ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು.? ಅರ್ಜಿದಾರನ ಆಧಾರ್ ಕಾರ್ಡ್ ಜಾತಿ ಮತ್ತು ಆದಾಯ…

Read More

ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರವು ಉದ್ದೇಶ ಪೂರ್ವಕವಾಗಿ 14 ಲಕ್ಷ ಹೆಣ್ಣುಮಕ್ಕಳನ್ನು ಶಾಲೆಗಳಿಂದ ಹೊರಗುಳಿಯುವಂತೆ ಮಾಡಿದೆ ಎಂದು ಯುನೆಸ್ಕೊ ಹೇಳಿದೆ. ಹೆಣ್ಣುಮಕ್ಕಳು ಪ್ರೌಢ ಮತ್ತು ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಫ್ಗಾನಿಸ್ತಾನದಲ್ಲಿ ನಿಷೇಧ ಹೇರಲಾಗಿದೆ. 2021ರಲ್ಲಿ ಅಫ್ಗಾನಿಸ್ತಾನದ ಆಡಳಿತವನ್ನು ತನ್ನ ಕೈವಶ ಮಾಡಿ ಕೊಂಡಿದ್ದ ತಾಲಿಬಾನ್‌, ಹೆಣ್ಣುಮಕ್ಕಳು ಆರನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆಯುವುದನ್ನು ನಿಷೇಧಿಸಿತ್ತು. ಇದೀಗ ತಾಲಿಬಾನ್‌ ಆಡಳಿತ ಮೂರು ವರ್ಷ ಪೂರ್ಣಗೊಂಡಿದ್ದು, ಈ ನಿಷೇಧ ತೆರವುಗೊಳಿಸುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. 2023ರ ಏಪ್ರಿಲ್‌ ಬಳಿಕ 3 ಲಕ್ಷ ಹೆಣ್ಣುಮಕ್ಕಳು ಒಳಗೊಂಡಂತೆ ತಾಲಿಬಾನ್‌ ಸಂಘಟನೆ ಅಧಿಕಾರ ವಹಿಸಿಕೊಂಡ ನಂತರ ಸುಮಾರು 14 ಲಕ್ಷ ಹೆಣ್ಣುಮಕ್ಕಳು ಪ್ರೌಢ ಶಾಲಾ ಶಿಕ್ಷಣ ಪಡೆಯುವ ಅವಕಾಶ ಕಳೆದುಕೊಂಡಿದ್ದಾರೆ ಎಂದು ಯುನೆಸ್ಕೊ ತಿಳಿಸಿದೆ. ಈ ನಿಷೇಧ ಜಾರಿಗೂ ಮುನ್ನ ಶಾಲೆಗಳಿಂದ ದೂರವುಳಿದವರನ್ನೂ ಸೇರಿಸಿಕೊಂಡರೆ, ಸುಮಾರು 25 ಲಕ್ಷ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Read More

ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ವಾಸ್ತು ನಿಯಮವಿದೆ. ಮನೆಯಲ್ಲಿನ ಪ್ರತಿಯೊಂದು ವಸ್ತುವನ್ನು ಕೂಡ ಆ ಪ್ರಕಾರವೇ ಇಡಬೇಕು. ಇದೇ ರೀತಿ ಮನೆಯ ಕಸದ ಬುಟ್ಟಿ ಇಡುವುದಕ್ಕೂ ತನ್ನದೇ ಆದ ಸರಿಯಾದ ದಿಕ್ಕು ಇದೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಡಸ್ಟ್‌ಬಿನ್ ಅನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಮನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ತಪ್ಪಾದ ಜಾಗದಲ್ಲಿ ಕಸದ ಬುಟ್ಟಿ ಇಟ್ಟರೆ ನಕಾರಾತ್ಮಕ ಶಕ್ತಿ ಹರಡುತ್ತದೆ. ಮನೆಯಲ್ಲಿ ಆರ್ಥಿಕ ತೊಂದರೆ ಎದುರಾಗುತ್ತದೆ. ಅದಕ್ಕಾಗಿಯೇ ಡಸ್ಟ್‌ಬಿನ್ ಅನ್ನು ಇರಿಸುವಾಗ, ಸರಿಯಾಗಿ ಕಾಳಜಿ ವಹಿಸುವುದು ಬಹಳ ಮುಖ್ಯ. ಹಾಗಾಗಿ ಮನೆಯಲ್ಲಿ ಕಸದಬುಟ್ಟಿಯನ್ನು ಯಾವ ಜಾಗದಲ್ಲಿ ಇಡಬಾರದು ಇಟ್ಟರೆ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಕಸವನ್ನು ಇಡಲು ವಿಶೇಷ ನಿರ್ದೇಶನವಿದೆ. ಇದನ್ನು ನೆನಪಿಡಿ. ಕಣ್ಣಿಗೆ ಕಾಣುವಂತೆ ನೇರ ದೃಷ್ಟಿಯಲ್ಲಿ ಕಸವನ್ನು ಎಂದಿಗೂ ಇಡಬೇಡಿ. ವಿಶೇಷವಾಗಿ ಪೂಜಾ ಸ್ಥಳವು ಕಸ ವಿಲೇವಾರಿ ಪ್ರದೇಶದ ಹತ್ತಿರ ಇರಬಾರದು ಎಂಬುದನ್ನು ನೆನಪಿಡಿ. ವಾಸ್ತು ಪ್ರಕಾರ…

Read More

ಯೋಗಕ್ಷೇಮಕ್ಕೆ ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಲೈಂಗಿಕ ಜೀವನವನ್ನು ಸಮರ್ಥವಾಗಿ ಹೆಚ್ಚಿಸುವುದು. ಸುಧಾರಿತ ಲೈಂಗಿಕ ಕಾರ್ಯಕ್ಷಮತೆ ಅಥವಾ ತೃಪ್ತಿಯನ್ನು ಖಾತರಿಪಡಿಸುವ ಯಾವುದೇ ನಿರ್ದಿಷ್ಟ ಯೋಗ ಭಂಗಿಗಳಿಲ್ಲದಿದ್ದರೂ, ಕೆಲವು ಯೋಗ ಭಂಗಿಗಳು ನಮ್ಯತೆ, ಶಕ್ತಿ ಮತ್ತು ದೇಹದ ಜಾಗೃತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸೇತು ಬಂಧ ಸರ್ವಾಸನ   ಈ ಭಂಗಿಯು ಸ್ನಾಯುಗಳು, ಮತ್ತು ಮಂಡಿಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಇದು ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಸ್ಥಿರತೆ ಮತ್ತು ಸಹಿಷ್ಣುತೆಯನ್ನು ಸುಧಾರಿಸುತ್ತದೆ. ಹ್ಯಾಪಿ ಬೇಬಿ ಪೋಸ್ (ಆನಂದ ಬಾಲಾಸನ): ಈ ಭಂಗಿಯು ಸೊಂಟ, ತೊಡೆಸಂದು ಮತ್ತು ಕೆಳ ಬೆನ್ನನ್ನು ವಿಸ್ತರಿಸುತ್ತದೆ, ಆ ಪ್ರದೇಶಗಳಲ್ಲಿ ಒತ್ತಡವನ್ನು ಬಿಡುಗಡೆ ಮಾಡಲು ಮತ್ತು ನಮ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೌಂಡ್ ಆಂಗಲ್ ಭಂಗಿ (ಬದ್ಧ ಕೋನಸಾನ): ಚಿಟ್ಟೆ ಭಂಗಿ ಎಂದೂ ಕರೆಯಲ್ಪಡುವ ಈ ಭಂಗಿಯು ಒಳ ತೊಡೆಗಳು ಮತ್ತು ಸೊಂಟವನ್ನು ವಿಸ್ತರಿಸುತ್ತದೆ, ನಮ್ಯತೆಯನ್ನು ಉತ್ತೇಜಿಸುತ್ತದೆ ಮತ್ತು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಪ್ಲ್ಯಾಂಕ್ ಭಂಗಿ (ಫಲಕಾಸನ): ಈ ಭಂಗಿಯು…

Read More

ಪ್ಯೂ ಥಾಯ್ ಪಕ್ಷವು ತನ್ನ ಅಧ್ಯಕ್ಷ ಪೆಟೊಂಗ್ಟಾರ್ನ್ ಶಿನವಾತ್ರಾ ಅವರನ್ನು ಥೈಲ್ಯಾಂಡ್ ಹೊಸ ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡುವುದಾಗಿ ಘೋಷಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೊರವಾಂಗ್ ಟಿಯೆನ್ ಥಾಂಗ್ ತಮ್ಮ ನಾಮನಿರ್ದೇಶನವನ್ನು ಘೋಷಿಸಿದ ಕೂಡಲೇ, ಜನಪ್ರಿಯ ಫು ಥಾಯ್ ನೇತೃತ್ವದ 11 ಪಕ್ಷಗಳ ಒಕ್ಕೂಟದ ನಾಯಕರು ಅವರಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಪೆಟೊಂಗ್ಟಾರ್ನ್ ಶಿನವಾತ್ರಾ ಅವರು ಸಮ್ಮಿಶ್ರ ಪಾಲುದಾರರಿಗೆ ಧನ್ಯವಾದ ಹೇಳಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಪ್ರಧಾನಿ ಶ್ರೆಟ್ಟಾ ತವಿಸ್ ಅವರನ್ನು ಸಾಂವಿಧಾನಿಕ ನ್ಯಾಯಾಲಯ ಬುಧವಾರ ಅಧಿಕಾರದಿಂದ ವಜಾಗೊಳಿಸಿದೆ. ಶೆಟ್ಟಾ ತವಿಸ್ ಕೇವಲ ಒಂದು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದರು.

Read More

ವರಲಕ್ಷ್ಮೀ ವ್ರತ, ಸಿಂಹ ಸಂಕ್ರಾಂತಿ, ಶ್ರಾವಣ ಪುತ್ರದಾ ಏಕಾದಶಿ ಸೂರ್ಯೋದಯ: 06:03, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ ,ಶ್ರಾವಣ ಮಾಸ, ಶುಕ್ಲ ಪಕ್ಷ, ತಿಥಿ: ಎಕಾದಶಿ ನಕ್ಷತ್ರ: ಮೂಲ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ:07:30 ನಿಂದ 09:00 ತನಕ ಅಮೃತಕಾಲ: ಬೆ.6:27 ನಿಂದ ಬೆ.8:02 ತನಕ ಅಭಿಜಿತ್ ಮುಹುರ್ತ: ಬೆ.11:55 ನಿಂದ ಮ.12:45 ತನಕ ಮೇಷ ರಾಶಿ: ಚಲನಚಿತ್ರ ನಿರ್ಮಾಪಕರಿಗೆ ಆರ್ಥಿಕ ತೊಂದರೆ ಕಾಡಲಿದೆ, ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಎಚ್ಚರಿಕೆಯಿಂದ ನಿರ್ವಹಿಸಿ, ಕಾಂಡಿಮೆಂಟ್ಸ್ ವ್ಯಾಪಾರಸ್ಥರಿಗೆ ಆದಾಯ ಉತ್ತಮ, ಕಲಾವಿದರಿಗೆ ಹಣಕಾಸಿನಲ್ಲಿ ತೊಂದರೆ, ಪ್ಲಿವುಡ್ಸ, ಬಂಗಾರ ಆಭರಣ ತಯಾರಿ ಮಾಡುವವರಿಗೆ ಧನಲಾಭ, ಸಂತಾನ ನಿರೀಕ್ಷಣೆ ಶೀಘ್ರ ಸಿಹಿ ಸುದ್ದಿ , ಮದುವೆ ಚರ್ಚೆ ಭರದಿಂದ ನಡೆಯಲಿದೆ, ಕಚೇರಿ ಕೆಲಸ ಕಾರ್ಯಗಳಲ್ಲಿ ಜಯ, ಕುಟುಂಬದೊಂದಿಗೆ ತೃಪ್ತಿದಾಯಕ ಬದುಕು, ವ್ಯಾಪಾರದಲ್ಲಿ ಹಣಕಾಸಿನ…

Read More

ಕನ್ನಡದ ಕಿರುತೆರೆಯಲ್ಲಿ ನಟಿಸುತ್ತಿದ್ದ ನಟಿ ಜ್ಯೋತಿ ರೈ ಸದ್ಯ ಕಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅಶ್ಲೀಲ ಮೆಸೇಜ್ ಮಾಡುವವರಿಗೆ ನಟಿ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೆಟ್ಟ ಸಂದೇಶ ಕಳುಹಿಸುತ್ತಿದ್ದ 1 ಸಾವಿರ ಅಕೌಂಟ್ ಅನ್ನು ನಟಿ ಬ್ಲಾಕ್ ಮಾಡುವ ಮೂಲಕ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ಸ್ಟಾಗ್ರಾಂ ಬ್ಲಾಕ್ ಫೀಚರ್ ಅನ್ನು ನಾನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ಕಾಮೆಂಟ್ ಸೆಕ್ಷನ್‌ನಲ್ಲಿ ಕೆಟ್ಟ ಹಾಗೂ ಅಗೌರವದಿಂದ ಮೆಸೇಜ್ ಮಾಡುವ ಮೂಲಕ ಕೆಟ್ಟ ವರ್ತನೆ ತೋರಿದ್ದ 1 ಸಾವಿರಕ್ಕೂ ಅಧಿಕ ವೈಯಕ್ತಿಕ ಖಾತೆಗಳನ್ನು ನಾನು ತೆಗೆದು ಹಾಕಿದ್ದೇನೆ. ಅವರೊಂದಿಗೆ ಮಾತುಕತೆ ಮಾಡುವ ಮೂಲಕ ಚರ್ಚೆ ಮಾಡೋದು ನನಗೆ ಇಷ್ಟವಿಲ್ಲ. ಪಾಸಿಟಿವ್ ಆಗಿ ಪರಿಸರವನ್ನು ರಚನೆ ಮಾಡಲು ನೀವು ಕೂಡ ಇಂಥ ಟೂಲ್‌ಗಳನ್ನು ಬಳಕೆ ಮಾಡಿ ಎಂದಿದ್ದಾರೆ. ಈ ವಿಚಾರದಲ್ಲಿ ಯಾರಾದರೂ ಕಲಿಯಬೇಕು ಎಂದಿದ್ದರೆ, ಅದಕ್ಕೆ ನಾನು ಸ್ವಾಗತ ನೀಡುತ್ತಿದ್ದೇನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ಬರೆದುಕೊಂಡಿದ್ದಾರೆ. ಅಂದಹಾಗೆ, ಇತ್ತೀಚೆಗೆ ಜ್ಯೋತಿ ರೈ ಬಿಗ್…

Read More

ಎಷ್ಟೇ ಹುಡುಕಿದರೂ ವಧು ಸಿಗದ ಹಿನ್ನೆಲೆ, ವಿಧಿ ಇಲ್ಲದೇ ಯುವಕ ಕುಕ್ಕರ್ ಮದುವೆಯಾಗಿದ್ದಾರೆ. ಇಂಡೋನೇಷ್ಯಾದ ಯುವಕನೊಬ್ಬನ ವಿಶಿಷ್ಟ ವಿವಾಹವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಯುವಕನ ಮದುವೆಯ ಫೋಟೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಧುಮಗ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕುಕ್ಕರ್​ನ ಮೇಲ್ಭಾಗಕ್ಕೆ ಹುಡುಗಿಯಂತೆ ಶಾಲು ಹೊಂದಿಸಿ,ಮುತ್ತಿಡುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ. ಈ ಯುವಕ ಖೋಯಿರುಲ್ ಅನಮ್ ಎಂದು ಗುರುತಿಸಲಾಗಿದ್ದು, ಸಾಕಷ್ಟು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ. ಹುಡುಗಿ ಸಿಗದೇ ಬೇಸತ್ತು ಈಗ ಕುಕ್ಕರನ್ನೇ ತನ್ನ ಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ. ಕುಕ್ಕರ್​ ತನಗೆ ಯಾವತ್ತೂ ಮೋಸ ಮಾಡಲ್ಲ. ಜೊತೆಗೆ ಅಡುಗೆಯಲ್ಲಿ ಪರಿಣಿತಳು’ ಹಾಗಾಗಿ ಒಡನಾಡಿಯಾಗಿ ಆರಿಸಿಕೊಳ್ಳುತ್ತಿದ್ದೇನೆ ಎಂದು ಕುಕ್ಕರ್​ ಜೊತೆ ಮದುವೆಯ ಬಗ್ಗೆ ಈತ ಹೇಳಿಕೊಂಡಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಆದರೆ ಮದುವೆಯಾಗಿ ನಾಲ್ಕೇ ದಿನದಲ್ಲಿ ಪತ್ನಿ ಅಂದರೆ ಕುಕ್ಕರ್​ಗೆ ವಿಚ್ಛೇದನ ನೀಡಿರುವುದು ವರದಿಯಾಗಿದೆ. ನನ್ನ ಪತ್ನಿಗೆ ಅನ್ನ ಬೇಯಿಸುವುದು ಮಾತ್ರ ಸಾಧ್ಯ, ಬೇರೇನೂ ಗೊತ್ತಿಲ್ಲ, ಹೀಗಾಗಿ ವಿಚ್ಛೇದನ…

Read More

ಕನ್ನಡದ ನಟಿ ಶ್ರೀಲೀಲಾಗೆ ಟಾಲಿವುಡ್ ನಿಂದ ಸಖತ್ ಆಫರ್ ಬರ್ತಿದೆ. ಬ್ಯಾಕ್ ಟು ಬ್ಯಾಖ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಗೆ ಇದೀಗ ಬಾಲಿವುಡ್ ನಲ್ಲೂ ಬಾಗಿಲು ತೆರೆದಿದೆ. ಸ್ಟಾರ್ ನಟನಿಗೆ ಜೋಡಿಯಾಗುವ ಮೂಲಕ ಶ್ರೀಲೀಲಾ ಹಿಂದಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತೆಲುಗಿನ ಸಾಲು ಸಾಲು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಬೆನ್ನಲ್ಲೇ ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಹೀರೋಯಿನ್ ಆಗಿ ನಟಿಸುವ ಅವಕಾಶ ಶ್ರೀಲೀಲಾಗೆ ಸಿಕ್ಕಿದೆ. ಚಿತ್ರತಂಡ ಈಗಾಗಲೇ ನಟಿಯನ್ನು ಭೇಟಿಯಾಗಿದ್ದು, ಸ್ಕ್ರಿಪ್ಟ್ ಬಗ್ಗೆ ಮಾತುಕತೆಯಾಗಿದೆ. ನಟಿ ಕೂಡ ಕಥೆ ಕೇಳಿ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಡ್ರಾಮಾ ಕಥೆಯಾಗಿದ್ದು, ಶ್ರೀಲೀಲಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಬಲ್ವಿಂದರ್ ಸಿಂಗ್ ಜಾಂಜುವಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಅಕ್ಟೋಬರ್‌ನಿಂದ ಶೂಟಿಂಗ್ ಶುರುವಾಗಲಿದೆ. ಮೊದಲ ಬಾರಿಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಶ್ರೀಲೀಲಾ ಜೊತೆಯಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ‘ಮಿಟ್ಟಿ’ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.…

Read More