ಮೈಸೂರು: ಚಾಮುಂಡಿ ಬೆಟ್ಟ ತಮ್ಮ ಆಸ್ತಿ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟ ಈಗ ಹೇಗಿದೆಯೋ ಮುಂದೆಯೂ ಹಾಗೆಯೇ ಇರಲಿ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಪ್ರಾಧಿಕಾರದ ರಚನೆ ಅಗತ್ಯವಿಲ್ಲ. ದೇವಸ್ಥಾನದ ಜೊತೆ ಯಾವ ಸಂಸ್ಥಾನದ ಸಂಬಂಧ ಇದೆಯೋ ಆ ಸಂಸ್ಥಾನಕ್ಕೆ ದೇವಸ್ಥಾನ ಸೇರಬೇಕು ಎಂದು ಪರೋಕ್ಷವಾಗಿ ಚಾಮುಂಡಿ ಬೆಟ್ಟ ತಮ್ಮ ಆಸ್ತಿ ಎಂದು ಹೇಳಿದರು. ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಣೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಅರುಣ್ ಜೊತೆ ಮಾತನಾಡಿದ್ದೇನೆ. ಯಾವ ಕಾರಣಕ್ಕೆ ವೀಸಾ ತಿರಸ್ಕೃತವಾಗಿದೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಕೇಂದ್ರ ಸಚಿವರ ಜೊತೆಯೂ ಮಾತನಾಡುತ್ತೇನೆ ಎಂದಿದ್ದಾರೆ.
Author: Prajatv Kannada
ಗಣಿಜಿಲ್ಲೆ ಕಂಪ್ಲಿ ಯಲ್ಲಿ ತಹಸಿಲ್ದಾರ್ ಎಸ್ ಶಿವರಾಜ್ ಅವರಿಂದ ಧ್ವಜಾರೋಹಣ ಮಾಡಲಾಯಿತು. ಧ್ವಜಾರೋಹಣ ಮಾಡುವ ಮೂಲಕ 78 ಸ್ವಾತಂತ್ರ್ಯೋತ್ಸವಕ್ಕೆ ಚಾಲನೆ ನೀಡಿದರು. ರಾಷ್ಟ್ರ ಗೀತೆಯನ್ನು ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎನ್ ಸಿಸಿ, ವಿವಿಧ ಶಾಲಾ ತುಕಡಿಗಳು, ಪೋಲೀಸ್ ಇಲಾಖೆಯಿಂದ ಗಣ್ಯರಿಗೆ ಗೌರವ ಅರ್ಪಣೆ ಮಾಡಲಾಯಿತು. ವಿವಿಧ ಶಾಲಾ ವೇಷ ಭೂಷಣಗಳಿಂದ ನೋಡುಗರ ಮನ ಸೆಳೆದರು. ಬೃಹತ್ ಪ್ರಮಾಣದಲ್ಲಿ ಈ ಸೋಬಗನ್ನು ಕಣ್ತುಂಬಿಕೊಳ್ಳಲು ಸಾರ್ಜನಿಕರು ಬಂದಿದ್ದರು.
ಹಾಸನ: ಸಾಲಭಾದೆ ತಾಳಲಾರದೆ ಗಂಡ-ಹೆಂಡತಿ ಹಾಗೂ ಪುತ್ರಿ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯಲ್ಲಿ ನಡೆದಿದೆ. ಶ್ರೀನಿವಾಸ್ (43), ಶ್ವೇತಾ (36) ಹಾಗೂ ನಾಗಶ್ರೀ (13) ಸಾವನ್ನಪ್ಪಿದ ದುರ್ದೈವಿಗಳು, ಶ್ರೀನಿವಾಸ್ ಕಾರು ಚಾಲಕನಾಗಿದ್ದರು, ಶ್ವೇತಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಕಳೆದ ಮಂಗಳವಾರ ಈ ಮೂವರು ಏಕಾಏಕಿ ಕಾಣಿಯಾಗಿದ್ದರು. ಸಂಬಂಧಿಗಳು ಎಲ್ಲೆಡೆ ಹುಡುಕಾಟ ನಡೆಸಿದ್ದರು. ನಂತರ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿನ್ನೆ ಸಂಜೆ ಬಾಗೂರು ಹೋಬಳಿ, ಮುದ್ಲಾಪುರ ಬಳಿಯ ನಾಲೆಯಲ್ಲಿ ಶ್ರೀನಿವಾಸ್, ಸ್ಮೀತಾ ಶವ ಪತ್ತೆಯಾಗಿದೆ. ಹೇಮಾವತಿ ನಾಲೆಗೆ ಹಾರಿ ಮೂವರು ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ದಂಪತಿಯ ಶವವನ್ನು ಹೊರ ತೆಗೆದಿದ್ದಾರೆ. ಸದ್ಯ ಬಾಲಕಿ ನಾಗಶ್ರೀ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಮನಗರ: ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿ ಕಾಲೇಜು ಆವರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ. ಚನ್ನಪಟ್ಟಣದ ಇತಿಹಾಸದಲ್ಲೇ ಯಾವೊಬ್ಬ ಸಚಿವರಿಂದ ಧ್ವಜಾರೋಹಣವೇ ಆಗದ ಇತಿಹಾಸವನ್ನು ಅಳಿಸಿ, ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡಿದ ಮೊದಲ ಉಪಮುಖ್ಯಮಂತ್ರಿ ಎಂಬ ಮೈಲುಗಲ್ಲನ್ನು ಸೃಷ್ಟಿಸಿದ್ದಾರೆ. ಇನ್ನೂ ಬೊಂಬೆನಾಡು ಚನ್ನಪಟ್ಟಣ ಉಪವಿಧಾನಸಭೆ ಚುನಾವಣೆ ಇನ್ನೂ ಬಹಳಷ್ಟು ಸಮಯ ಇದೆ. ಆದರೆ ಕಾವು ಮಾತ್ರ ಕ್ಷೇತ್ರದ ಮೂರು ಪಕ್ಷದ ಕಾರ್ಯಕರ್ತರಿಗೆ ಈಗಿನಿಂದಲೇ ತಟ್ಟಲು ಶುರುಮಾಡಿದೆ. ಕ್ಷೇತ್ರವನ್ನ ಹೇಗಾದರೂ ಮಾಡಿ ವಶಪಡಿಸಿಕೊಳ್ಳದೇ ನೆಮ್ಮದಿಯಿಲ್ಲ ಎಂಬಂತೆ ವಾರಕ್ಕೆ ಎರಡು ಬಾರಿ ಚನ್ನಪಟ್ಟಣ ಸುತ್ತುತ್ತಿರುವ ಡಿ.ಕೆ.ಶಿವಕುಮಾರ್, ಈ ಬಾರಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡಿದ್ದಾರೆ.
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಚೀಟಿ ಹೆಸರಿನಲ್ಲಿ ಐದು ಕೋಟಿಗೂ ಹೆಚ್ಚು ವಂಚಿಸಿ ಮಾಲೀಕ ಪರಾರಿಯಾದ ಘಟನೆ ಆನೇಕಲ್ ತಾಲೂಕಿನ ಕಾಚನಾಯಕನಹಳ್ಳಿಯಲ್ಲಿ ನಡೆದಿದೆ. ಚಿನ್ನ ಕೊಡುತ್ತೇನೆ ಎಂದು ಹಣ ಕಟ್ಟಿಸಿಕೊಂಡು ಸೇಟು ವಂಚನೆ ಮಾಡಿದ್ದಾನೆ. ಲಕ್ಷಾಂತರ ರೂ. ಸಾಲ ಮಾಡಿ ಮಹಿಳೆಯರು ಹಣ ಕಟ್ಟಿದ್ದರು. https://youtu.be/HqcWB1BmFTQ?si=C4QCxdip9htwvPl2 ಇದೀಗ ಚಿನ್ನ ಅಡವಿಟ್ಟು ಮನೆ ಖಾಲಿ ಮಾಡಿಕೊಂಡು ಸೇಟು ಎಸ್ಕೇಪ್ ಆಗಿದ್ದಾನೆ. ಮುನಾರಾಮ್ ಎಂಬ ರಾಜಸ್ಥಾನಿ ಮೂಲದ ಮಾರ್ವಾಡಿ ಆನಂದ್ ಜ್ಯುವೆಲರ್ಸ್ ಅಂಡ್ ಕೇಸರ್ ಬ್ಯಾಂಕರ್ಸ್‌ನ ಮಾಲೀಕನಾಗಿದ್ದು, ಹತ್ತು ವರ್ಷಕ್ಕೂ ಹೆಚ್ಚು ದಿನದಿಂದ ಇಲ್ಲೇ ವಾಸವಿದ್ದ. ಈತ 150ಕ್ಕೂ ಹೆಚ್ಚು ಜನರಿಂದ ಚೀಟಿ ಹಾಕಿಸಿಕೊಂಡು ಚಿನ್ನ ಅಡಮಾನ ಇಟ್ಟುಕೊಂಡಿದ್ದ. ಹಬ್ಬ ಎಂದು ಚೀಟಿ ಹಾಕಿದ್ದವರು ಚಿನ್ನ ಬಿಡಿಸಿಕೊಂಡು ಬರಲು ಹೋದಾಗ ವಂಚನೆ ಬೆಳಕಿಗೆ ಬಂದಿದೆ. ಚಿನ್ನದ ಅಂಗಡಿ ಮಾಲೀಕ ಅಂಗಡಿ ಹಾಗೂ ಮನೆ ಖಾಲಿ ಮಾಡಿಕೊಂಡು ಎಸ್ಕೇಪ್ ಆಗಿದ್ದು ಕಂಡು ಆತಂಕಕ್ಕೊಳಗಾದ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಸೇಟು ಇಂದ ವಂಚನೆಗೊಳಗಾದವರು ಸೂರ್ಯ ನಗರ ಪೊಲೀಸ್…
ಬೆಂಗಳೂರು: ದೇಶದೆಲ್ಲೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದೆ. ಸಮಸ್ತ ಭಾರತೀಯರು ದೇಶಭಕ್ತಿ ಭಾವ ಮೆರೆದಿದ್ದಾರೆ. ಇದರ ಭಾಗವಾಗಿ ಇತ್ತ ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಿದ್ದಾರೆ. https://youtu.be/YO-qBdQ7i04?si=PbjcUX1Sz8YnokVh ಧ್ವಜಾರೋಹಣದ ಬಳಿಕ ಮಾತನಾಡಿನ ಸಿಎಂ ಸಿದ್ದರಾಮಯ್ಯ ಅವರು, ನಾಡಿನ ಜನತೆಗೆ 78 ನೇ ಸ್ವಾತಂತ್ರ್ಯೋತ್ಸವದ ಶುಭಾಷಯಗಳನ್ನು ಕೋರಿದ್ದಾರೆ.ಸ್ವಾತಂತ್ರ್ಯದ ಅರಿವು ಮತ್ತು ದೇಶದ ಮೇಲಿನ ಅಭಿಮಾನದ ಕಿಚ್ಚನ್ನು ಹೊತ್ತಿಸಿದ್ದು ರಾಷ್ಟ್ರೀಯ ಚಳುವಳಿ. ಅದರ ನೇತೃತ್ವವನ್ನು ಹೊತ್ತಿದ್ದು ಮಹಾತ್ಮ ಗಾಂಧೀಜಿಯವರ ಮುಂದಾಳತ್ವದ ರಾಷ್ಟ್ರೀಯ ಕಾಂಗ್ರೆಸ್. ಈ ರಾಷ್ಟ್ರೀಯ ಚಳುವಳಿಯ ಭದ್ರ ಬುನಾದಿ ಮೇಲೆ ರೂಪುಗೊಂಡಿದ್ದೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ್ದ ಭಾರತದ ಸಂವಿಧಾನ ಮತ್ತು ಅದನ್ನು ಆಧರಿಸಿದ ಪ್ರಜಾಪ್ರಭುತ್ವ. ಹಾಗೆ 78ನೇ ಸ್ವಾತಂತ್ರೋತ್ಸವದಲ್ಲಿ ಸಿದ್ದರಾಮಯ್ಯ ʻಗ್ಯಾರಂಟಿʼ ಮಾತುಗಳಾನ್ನಾಡಿದ್ದು, ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ಜನರ ಜೀವನ ಮಟ್ಟ ಸುದಾರಿಸುವಂತೆ ಮಾಡಿದೆ ಗೃಹಲಕ್ಷ್ಮಿ ಯೋಜನೆಯಡಿ 1.20 ಕೋಟಿ ಮಹಿಳೆಯರಿಗೆ ಅನುಕೂಲ , ೀವರೆಗೆ 25,258 ಕೊಟಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ…
78 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಡಗರ-ಸಂಭ್ರಮ ಮನೆ ಮಾಡಿದೆ. ಆಗಸ್ಟ್ 15ರಂದು ದೇಶದಲ್ಲೆಡೆ 78ನೇ ಸ್ವಾತಂತ್ರೋತ್ಸವದ ಹಬ್ಬ ನಡೆಯುತ್ತಿದೆ. ಸ್ವಾತಂತ್ರೋತ್ಸವ ಅಂದರೆ ತ್ಯಾಗ ಬಲಿದಾನವನ್ನ ಸ್ಮರಿಸುವ ದಿನ. ಕನಸಿನ ಭಾರತದ ತೇರನ್ನ ಎಳೆಯುವ ಸುದಿನ. https://youtu.be/3icOGreGBO4?si=O24chYpfD78xhfIT 90 ವರ್ಷಗಳ ನಿರಂತರ ಹೋರಾಟದ ಫಲವೇ 1947ರ ಆಗಸ್ಟ್ 15ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿತ್ತು. ಈ ಶುಭ ದಿನದಂದು ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಭಾರತದ ರಾಷ್ಟ್ರೀಯ ಧ್ವಜ ಅಥವಾ ತ್ರಿವರ್ಣ ಧ್ವಜವು ನಮ್ಮ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ತ್ರಿವರ್ಣ ಧ್ವಜವು ಭಾರತದ ಜನರ ಭರವಸೆ ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಆದ್ದರಿಂದ, ಭಾರತೀಯರಾದ ನಾವು ತ್ರಿವರ್ಣ ಧ್ವಜದ ಇತಿಹಾಸ ಮತ್ತು ಮಹತ್ವವನ್ನು ತಿಳಿದುಕೊಂಡಿರಬೇಕು. ತ್ರಿವರ್ಣ ಧ್ವಜದ ಇತಿಹಾಸ ಮತ್ತು ಮಹತ್ವ ಪ್ರಪಂಚದ ಪ್ರತಿಯೊಂದು ಸ್ವತಂತ್ರ ರಾಷ್ಟ್ರವೂ ತನ್ನದೇ ಆದ ಧ್ವಜವನ್ನು ಹೊಂದಿದ್ದು, ಅದು ಸ್ವತಂತ್ರದ ಸಂಕೇತವಾಗಿದೆ. ಆಗಸ್ಟ್ 15, 1947 ರಂದು ಭಾರತವು ಬ್ರಿಟಿಷರಿಂದ…
ಮುಂಬೈ:- ರೈಲು ಬೋಗಿಯಲ್ಲಿ ನಮಾಜ್ ಮಾಡಿದ ಮುಸ್ಲಿಂ ಪ್ರಯಾಣಿಕರನ್ನು ಟಿಟಿಇ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸಖತ್ ವೈರಲ್ ಆಗಿದೆ. ಈ ವಿಡಿಯೊದಲ್ಲಿ, ರೈಲ್ವೆ ಟಿಟಿಇ ಬೋಗಿಯಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ಮುಂದಾದ ಮುಸ್ಲಿಂ ಪ್ರಯಾಣಿಕರನ್ನು ಬೈಯುತ್ತಿದ್ದಾರೆ. ರೈಲಿನಲ್ಲಿದ್ದ ಮುಸ್ಲಿಂ ಸಮುದಾಯದವರು ಬೋಗಿಯ ಮಧ್ಯದಲ್ಲಿ ನಡೆದಾಡುವ ಸ್ಥಳದಲ್ಲಿ ನಮಾಜ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಅದಕ್ಕಾಗಿ ಕುಳಿತುಕೊಳ್ಳಲು ಅವರು ದಾರಿಯಲ್ಲಿ ಪ್ಲಾಸ್ಟಿಕ್ ಅನ್ನು ಹಾಸುತ್ತಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ಟಿಟಿಇ ಕೋಪಗೊಂಡು ಅವರಿಗೆ ತಮ್ಮ ಕುಳಿತುಕೊಳ್ಳುವ ಸೀಟಿನಲ್ಲಿ ನಮಾಜ್ ಮಾಡುವಂತೆ ಮತ್ತು ದಾರಿಯಿಂದ ಎದ್ದೇಳುವಂತೆ ತಿಳಿಸಿದ್ದಾರೆ. ಇದು ವಿಡಿಯೊದಲ್ಲಿ ಕಂಡು ಬಂದಿದೆ. ಈ ರೈಲಿನಲ್ಲಿ ತಮಾಷೆಯಾಗಿ ವರ್ತಿಸಬೇಡಿ. ಈ ಮಾರ್ಗ ಇರುವುದು ನಡೆದಾಡಲು. ನಿಮಗೆ ನಮಾಜ್ ಮಾಡಲು ಅಲ್ಲ. ಇದರಲ್ಲಿ ನಮಾಜ್ ಮಾಡುವ ನಿಮ್ಮ ಮನಸ್ಥಿತಿಗೆ ಏನಾಗಿದೆ? ನಿಮ್ಮ ಈ ಆಲೋಚನೆಯನ್ನು ಬಿಟ್ಟುಬಿಡಿ. ನನ್ನ ರೈಲಿನಲ್ಲಿ ಇದು ಸಂಭವಿಸಲು…
ಅಗರ್ತಲ: ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ 16 ಬಾಂಗ್ಲಾದೇಶದ (Bangladesh) ಪ್ರಜೆಗಳನ್ನು ಪೊಲೀಸರು ಬಂಧಿಸಿದ ಘಟನೆ ತ್ರಿಪುರಾದ (Tripura) ಅಗರ್ತಲಾ ರೈಲ್ವೆ ನಿಲ್ದಾಣದಲ್ಲಿ (Agartala Railway Station) ನಡೆದಿದೆ. ಬಂಧಿತರಲ್ಲಿ ಮೂವರು ಮಹಿಳೆಯರು. 16 ಬಾಂಗ್ಲಾದೇಶಿ ಪ್ರಜೆಗಳನ್ನು ಮಂಗಳವಾರ ರಾತ್ರಿ ಅಗರ್ತಲಾ ರೈಲು ನಿಲ್ದಾಣದಿಂದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ರೈಲು ಹತ್ತುವ ಮೊದಲು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಗರ್ತಲಾ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಿಂದ ಸುಮಾರು 6 ಕಿ.ಮೀ ದೂರದಲ್ಲಿದೆ. ಬಂಧಿತರು ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಮತ್ತು ಉದ್ಯೋಗದ ಹುಡುಕಾಟದಲ್ಲಿ ಭಾರತಕ್ಕೆ ಪ್ರವೇಶಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. 20 ರಿಂದ 40 ವರ್ಷ ವಯಸ್ಸಿನ 16 ಬಾಂಗ್ಲಾದೇಶೀಯರಲ್ಲಿ ಹದಿಮೂರು ಮಂದಿ ರಾಜಶಾಹಿ ವಿಭಾಗದ ಚಪೈನವಾಬ್‌ಗಂಜ್ ಜಿಲ್ಲೆಯ ನಿವಾಸಿಗಳಾಗಿದ್ದರೆ, ಉಳಿದ ಮೂವರು ಢಾಕಾ ವಿಭಾಗದ ಗಾಜಿಪುರ ಜಿಲ್ಲೆಯ ನಿವಾಸಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಭಾವನಾ ಪಟೇಲ್ ಎಂಬ ಈ ಶಿಕ್ಷಕಿ ಕಳೆದ 8 ವರ್ಷಗಳಿಂದ ಶಾಲೆಗೆ ಹಾಜರಾಗಿಯೇ ಇಲ್ಲ. ಅಸಲಿಗೆ ಆಕೆ ಭಾರತದಲ್ಲಿಯೇ ಇಲ್ಲ. ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಈ ಶಿಕ್ಷಕಿ, ಕಳೆದ 8 ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿದ್ದಾರೆ. ಆದರೆ ಭಾರತದಲ್ಲಿ ಪ್ರತಿ ತಿಂಗಳೂ ಸಂಬಳ ಪಡೆಯುತ್ತಲೇ ಇದ್ದಾರೆ! ಅಮೆರಿಕದ ಗ್ರೀನ್ ಕಾರ್ಡ್ ಹೊಂದಿರುವ ಭಾವನಾ ಪಟೇಲ್, ಶಿಕಾಗೋ ನಗರದಲ್ಲಿ ನೆಲೆಸಿದ್ದಾರೆ. ಆದರೆ, ಶಾಲೆಯ ರೋಸ್ಟರ್‌ನಲ್ಲಿ ಆಕೆಯ ಹೆಸರು ಇನ್ನೂ ಉಳಿದು ಹೋಗಿದೆ. ಪ್ರತಿ ವರ್ಷ ದೀಪಾವಳಿ ಹಬ್ಬದ ವೇಳೆ ಆಕೆ ಭಾರತಕ್ಕೆ ಬರುತ್ತಾರೆ. ಕೆಲವು ದಿನಗಳ ಕಾಲ ಭಾರತದಲ್ಲೇ ಉಳಿಯುತ್ತಾರೆ. ಈ ವೇಳೆ ಶಾಲೆಗಳಿಗೆ ರಜೆ ಇರುತ್ತದೆ. ಹೀಗಾಗಿ ಶಾಲೆಗೆ ಹೋಗೋದಿಲ್ಲ. ಮಕ್ಕಳ ಜೊತೆ ಚರ್ಚಿಸಿ ಪಾಠ ಕೂಡಾ ಮಾಡೋದಿಲ್ಲ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಮಾಹಿತಿಗಳ ಪ್ರಕಾರ ಶಿಕ್ಷಕಿ ಭಾವನಾ ಪಟೇಲ್ ಅವರ ಈ ಗೈರು ಹಾಜರಿ ಕುರಿತಾಗಿ ಶಾಲೆಯ ಪ್ರಾಂಶುಪಾಲರು ತಾಲ್ಲೂಕು ಶಿಕ್ಷಣ ಅಧಿಕಾರಿಗಳು, ಜಿಲ್ಲಾ ಶಿಕ್ಷಣ…