ದೇವರ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ವೇಳೆ ನಟ ಜೂನಿಯರ್ ಎನ್ ಟಿ ಆರ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿನಿಮಾದ ಕೆಲವು ಫೈಟ್ ದೃಶ್ಯಗಳ ಶೂಟಿಂಗ್ ವೇಳೆ ಜೂನಿಯರ್ ಎನ್ ಟಿ ಆರ್ ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಸಲಾಗಿದೆ ಎಂಬ ಸುದ್ದಿ ಎರಡು ದಿನದ ಹಿಂದೆಯೇ ಹರಿದಾಡಲು ಆರಂಭಿಸಿತ್ತು. ಇದೀಗ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿದೆ. ದೇವರ ಚಿತ್ರತಂಡದವರು ನೀಡಿರುವ ಮಾಹಿತಿಯಂತೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಜೂ ಎನ್ಟಿಆರ್ ಗಾಯಗೊಂಡಿದ್ದಾರೆಯೇ ವಿನಃ ಸಿನಿಮಾದ ಶೂಟಿಂಗ್ನಲ್ಲಿ ಅಲ್ಲ. ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಜೂನಿಯರ್ ಎನ್ ಟಿ ಆರ್ ಅವರ ಮಣಿಕಟ್ಟು ಹಾಗೂ ಹೆಬ್ಬೆರಳಿಗೆ ಗಾಯಗಳಾಗಿದೆ. ಬಳಿಕ ಸೂಕ್ತ ಚಿಕಿತ್ಸೆ ಪಡೆದುಕೊಂಡು ನೋವಿನ ನಡುವೆಯೂ ‘ದೇವರ’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಲ್ಲದೆ ಸಿನಿಮಾದ ಮೊದಲ ಭಾಗದ ಚಿತ್ರೀಕರಣವನ್ನೂ ಸಹ ಮುಗಿಸಿಕೊಟ್ಟಿದ್ದಾರೆ ಎಂದಿದ್ದಾರೆ. ಇನ್ನೂ ದೇವರ ಸಿನಿಮಾದ ಶೂಟಿಂಗ್ ಬಗ್ಗೆ ಟ್ವೀಟ್ ಮಾಡಿದ್ದ ಜೂ ಎನ್ಟಿಆರ್ ‘ದೇವರ’ ಸಿನಿಮಾದ ಮೊದಲ ಭಾಗದ ಚಿತ್ರೀಕರಣ…
Author: Prajatv Kannada
ಬೆಂಗಳೂರು: ಈ ಭಾರೀ ಮಳೆಯಿಂದಾಗಿ ನೆಲಮಂಗಲದದಲ್ಲಿರುವ ಚೋಳರ ಕಾಲದ ದೇವಾಲಯ ನೀರಿನಲ್ಲಿ ಮುಳುಗಡೆ ಆಗಿದ್ದು ಮಳೆಯಿಂದಾಗಿ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರುಅರ್ಕಾವತಿ ಹಾಗೂ ಕುಮಧ್ವತಿ ನದಿಯ ಜಲಾಶಯ https://youtu.be/FKnNETA1xdk?si=2wTKyqT8mTeaJ-mw ನೆಲಮಂಗಲ ತಾಲೂಕಿನ ಗಡಿ ಭಾಗದಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯ ಬೆಂಗಳೂರಿಗೆ ನೀರು ಒದಗಿಸಲು ಮೈಸೂರು ಮಹಾರಾಜರು ನಿರ್ಮಾಣ ಮಾಡಿದ್ದ ತಿಪ್ಪಗೊಂಡನಹಳ್ಳಿ ಜಲಾಶಯ ಜಲಾಶಯದ ಹಿನ್ನೀರಿನಲ್ಲಿ ಶ್ರೀ ಸೋಮೇಶ್ವರ ದೇವಾಲಯ ಸಂಪೂರ್ಣವಾಗಿ ಮುಳುಗಡೆ ಹಾಗೆ ದೇವಾಲಯದ ಗೋಪುರದ ಬಾವುಟದವರೆಗೂ ಮುಳುಗಡೆಗೊಂಡಿದ್ದು ಈ ಬಾರಿಯ ಮಳೆಯಿಂದಾಗಿ ದೇವಾಲಯ ಮುಳುಗಡೆ ಆಘಿದೆ.
ಹುಬ್ಬಳ್ಳಿ: ಇಲ್ಲಿಯ ನೈಋತ್ಯ ರೈಲ್ವೆ ವಲಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿಯಾಗಿ (ಸಿಎಒ) ನೇಮಕವಾದ ಅಜಯ ಶರ್ಮಾ ಅವರನ್ನು ರೈಲ್ವೆ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಷ್ಠಿತ ಹುದ್ದೆ ಅಲಂಕರಿಸಿದ ಶರ್ಮಾ ಅವರು ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿ ಪಡೆದಿದ್ದಾರೆ. 1990ರ ಇಂಡಿಯನ್ ರೈಲ್ವೆ (ಐಆರ್‌ಎಸ್‌ಇ) ಬ್ಯಾಚ್ ನ ಇವರು 1992ರಲ್ಲಿ ಸೇವೆಗೆ ಸೇರ್ಪಡೆಯಾದರು ಅಲ್ಲಿಂದ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇವರ ಚಾಕಚಕ್ಯತೆಯ ಕೆಲಸ ಕಾರ್ಯಗಳು ಇಲಾಖೆಯಲ್ಲಿ ಗಮನ ಸೆಳೆದಿವೆ ಭೂಪಾಲ್ ಹಾಗೂ ಇಂದೋರ್ನಲ್ಲಿ ಯೋಜನಾ ನಿರ್ದೇಶಕರಾಗಿ, ಉತ್ತರ ರೈಲ್ವೆಯಲ್ಲಿ ಮುಖ್ಯ ಸೇತುವೆ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ರೈಲ್ವೆ ಬೋರ್ಡ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಅಪಾರ ಜ್ಞಾನವುಳ್ಳ ಅಜಯ ಶರ್ಮಾ ಅವರು ನೈಋತ್ಯ ರೈಲ್ವೆಗೆ ಬಂದಿರುವುದು ಗುತ್ತಿಗೆದಾರರಲ್ಲಿ ಅಪಾರ ಸಂತೋಷ ಉಂಟು ಮಾಡಿದೆ. ಬಹು ಆಯಾಮದ ವ್ಯಕ್ತಿತ್ವದ ಅವರೊಂದಿಗೆ ಕೆಲಸ ಮಾಡುವುದು ನಮಗೆ ಒದಗಿರುವ ಸದವಕಾಶ ಎಂದು…
ಕೋಲಾರ : ಕೋರ್ಟ್ ಕೇಳಿರುವ ದಾಖಲಾತಿ ಲಭ್ಯವಾಗಿಲ್ಲ, ಇವಿಎಂ ಸ್ಟ್ರಾಂಗ್ ರೂಂ ನಲ್ಲಿ ದಾಖಲಾತಿ ಹುಡುಕಿದ ನಂತರ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ. ಹೌದು .. ಇವಿಎಂ ಸ್ಟ್ರಾಂಗ್ ರೂಂ ನಲ್ಲಿ ದಾಖಲಾತಿ ಹುಡುಕಿದ ನಂತರ ಹೇಳಿಕೆ ನೀಡಿದ್ದು ಹೈಕೋರ್ಟ್ ಕೇಳಿರುವ ಮತೆಣಿಕೆ ವಿಡಿಯೋ ಚಿತ್ರೀಕರಣ ಹಾಗೂ ಫಾರಂ 17ಸಿ ಲಭ್ಯವಾಗಿಲ್ಲ, ಮಾಲೂರು ಖಜಾನೆಯಲ್ಲಿ ಇರುವ ಸಾಧ್ಯತೆ ಇದೆ ಅಲ್ಲಿ ಹುಡುಕಿ ನಂತರ ಕೋರ್ಟ್ ಗೆ ಸಲ್ಲಿಸಲಾಗುತ್ತದೆ, ಆ ನಂತರ ಸ್ಟ್ರಾಂಗ್ ರೂಂ ನಲ್ಲಿ ದಾಖಲಾತಿ ಹುಡುಕಿದ ನಂತರ ಹೇಳಿಕೆ ಪಡೆದಿದ್ದು ಕೋಲಾರ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಟ್ರಾಂಗ್ ರೂಂ
ಬೆಂಗಳೂರು ಬಳ್ಳಾರಿ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿ ಬರೋಬ್ಬರಿ 70 ಗಂಟೆ ಕಳೆದಿದೆ. ಇದೀಗ 19ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆ ಪ್ರಯತ್ನಗಳು ನಡೆದಿವೆ. https://youtu.be/PlHrZxOVovI?si=bgTBjP29HJ4frQWm ಜಲಾಶಯದ ನೀರನ್ನು ಕ್ರಸ್ಟ್ ಗೇಟ್ ಕೆಳಗಿನವರೆಗೂ ಖಾಲಿ ಮಾಡದೇ, ಅದಕ್ಕೂ ಮೊದಲೇ ಸ್ಟಾಪ್‌ಲಾಗ್ ಗೇಟ್ ಅಳವಡಿಕೆಗೆ ತುಂಗಾಭದ್ರಾ ಬೋರ್ಡ್, ಕರ್ನಾಟಕ ಮತ್ತು ಆಂಧ್ರ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಸ್ಟಾಪ್ ಲಾಗ್‌ನ 10 ಪುಟಗಳ ನೀಲಿನಕ್ಷೆ ಆಧರಿಸಿ ಸಮರೋಪಾದಿಯಲ್ಲಿ ಐದು ಎಂಜಿನಿಯರಿಂಗ್ ಕಂಪನಿಗಳು ಗೇಟ್‌ಗಳನ್ನು ನಿರ್ಮಿಸುತ್ತಿವೆ. 20 ಅಡಿ ಎತ್ತರ, 60 ಅಡಿ ಅಗಲ, 48 ಟನ್ ಭಾರದ ಸ್ಟಾಪ್ ಲಾಗ್‌ಗೇಟನ್ನು ಏಕಕಾಲದಲ್ಲಿ ಡ್ಯಾಂ ಮೇಲೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ತುರ್ತು ಗೇಟನ್ನು ಐದು ಭಾಗಗಳಾಗಿ ತಯಾರಿಸಲಾಗ್ತಿದೆ. ನಂತರ ಇದನ್ನು ಡ್ಯಾಂ ಮೇಲೆ ಕೊಂಡೊಯ್ದು, 18 ಮತ್ತು 19ನೇ ಪಿಯರ್‌ಗಳ ನಡುವೆ ಹಂತ ಹಂತವಾಗಿ ಎಲಿಮೆಂಟ್‌ಗಳನ್ನು ಇಳಿಸಿ ತುರ್ತು ಗೇಟ್ ನಿರ್ಮಿಸಲಾಗುತ್ತದೆ. ಬುಧವಾರ ಈ ಪ್ರಕ್ರಿಯೆ ಆರಂಭ ಆಗಲಿದ್ದು, ತುರ್ತು ಗೇಟ್…
ಕೂದಲು ಉದುರುವಿಕೆಯಂತಹ ಈ ಸಾಮಾನ್ಯ ಸಮಸ್ಯೆಗೆ ಕೆಲವರು ಸಪ್ಲಿಮೆಂಟರಿ, ವಿಟಮಿನ್ ಮಾತ್ರೆ, ಮೆಡಿಸಿನ್ ಇಂತಹ ಕ್ರಮಗಳಿಗೆ ಮುಂದಾಗಿದ್ದಾರೆ. ಕೆಲವರು ವಿಟಮಿನ್ ಕೊರತೆಯೇ ಕೂದಲ ಉದುರುವಿಕೆಗೆ ಕಾರಣ ಎಂದು ವಿಟಮಿನ್‌ಗಳಿಗೆ ಮೊರೆ ಹೋಗಿದ್ದಾರೆ. ಕೂದಲು ಉದುರುವಿಕೆಗೆ ವಿಟಮಿನ್ ಕೊರತೆ ಒಂದೇ ಕಾರಣವಲ್ಲ. ಇದು ಹಲವಾರು ಕಾರಣಗಳಿಂದಾಗಿ ಸಂಭವಿಸಬಹುದು ಅನ್ನೋದು ತಜ್ಞರ ಅಭಿಪ್ರಾಯ. ಪುರುಷರ ವಿಷಯಕ್ಕೆ ಬಂದಾಗ, ಆಂಡ್ರೊಜೆನೆಟಿಕ್ ಅಲೋಪೆಸಿಯಾ ಸುಮಾರು 95% ರಷ್ಟು ಕೂದಲು ಉದುರುವಿಕೆ ಪ್ರಕರಣಗಳಿಗೆ ಕಾರಣವಾಗಿದೆ, ಈ ಸಂಭವನೀಯತೆಯು ಮಹಿಳೆಯರಿಗೆ ಸುಮಾರು 40% ರಷ್ಟು ಹೇರ್‌ಫಾಲ್‌ಗೆ ಕಾರಣವಾಗಿದೆ. ವಿಟಮಿನ್ ಕೊರತೆಯಲ್ಲದೇ ಜೆನೆಟಿಕ್ಸ್, ಹಾರ್ಮೋನ್ ಅಸಮತೋಲನ, ಒತ್ತಡ, ಔಷಧಿಗಳು ಅಥವಾ ವೈದ್ಯಕೀಯ ಪರಿಸ್ಥಿತಿಗಳು ಕೂದಲು ಉದುರುವಿಕೆಗೆ ಇತರ ಸಾಮಾನ್ಯ ಕಾರಣಗಳಾಗಿವೆ. ಕಡಿಮೆ ಮಟ್ಟದ ಬಯೋಟಿನ್ ಅಥವಾ ವಿಟಮಿನ್ ಡಿ ಕೊರತೆಯ ಕಾರಣದಿಂದಾಗಿ ನಿಮ್ಮ ಕೂದಲು ಉದುರಬಹುದು. ವಿಟಮಿನ್ ತೆಗೆದುಕೊಳ್ಳೋ ಮುನ್ನ ಇಲ್ಲಿ ನೀವು ಗಮನಿಸಬೇಕಾದ ವಿಚಾರ ಏನೆಂದರೆ, ನಿಮ್ಮ ಕೂದಲು ಉದುರುವಿಕೆಗೆ ವಿಟಮಿನ್ ಕೊರತೆ ಕಾರಣವಲ್ಲದಿದ್ದರೆ, ನೀವು ಎಷ್ಟೇ ವಿಟಮಿನ್ ತೆಗೆದುಕೊಂಡರು…
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಂಧನಕ್ಕೆ ಒಳಗಾಗಿರುವ 17 ಆರೋಪಿಗಳಿಗೆ ಇಂದು ಮತ್ತೆ ನ್ಯಾಯಾಂಗ ಬಂಧನ ಮುಂದೂಡಲಾಗಿದೆ. ಈ ಹಿಂದೆ ಆಗಸ್ಟ್ 14 ರ ವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ನೀಡಲಾಗಿತ್ತು. ಇಂದು (ಆಗಸ್ಟ್ 14) ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನಟ ದರ್ಶನ್ ಮತ್ತು ಪ್ರಕರಣದ ಇತರೆ ಆರೋಪಿಗಳನ್ನು 24ನೇ ಎಸಿಎಂಎಂ ಇನ್ಚಾರ್ಜ್ ಕೋರ್ಟ್ ಎದುರು ಹಾಜರುಪಡಿಸಲಾಯ್ತು. ಪೊಲೀಸರ ರಿಮ್ಯಾಂಡ್ ಅರ್ಜಿಯನ್ನು ಪುರಸ್ಕರಿಸಿದ ಮ್ಯಾಜಿಸ್ಟ್ರೇಟರು, ಪ್ರಕರಣದ ಎಲ್ಲ ಆರೋಪಿಗಳಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಜೈಲಿನಲ್ಲಿರುವ ಆರೋಪಿಗಳು ಹಾಗೂ ತುಮಕೂರು ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಪೊಲೀಸರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಹಾಜರು ಪಡಿಸಿದ್ದರು. ಈ ಸಮಯದಲ್ಲಿ ಪೊಲೀಸರು, ಎಲ್ಲ ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಸ್ತರಿಸುವಂತೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ಜಡ್ಜ್ ವಿಶ್ವನಾಥ್ ಸಿ ಗೌಡರ್ ಅವರು ಎಲ್ಲ ಆರೋಪಿಗಳಿಗೂ ಆಗಸ್ಟ್ 28ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ…
ಕುಂಬಳಕಾಯಿ ಬೀಜಗಳು ನೋಡಲು ಚಿಕ್ಕದಾಗಿದ್ದರೂ, ಇದರಿಂದ ಅಪಾರವಾದ ಆರೋಗ್ಯ ಪ್ರಯೋಜನಗಳಿದೆ. ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಸಮೃದ್ಧವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇವಿಸುವ ಮೂಲಕ, ನೀವು ದೀರ್ಘಕಾಲೀನ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕುಂಬಳಕಾಯಿ ಬೀಜಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಬಿ 2, ಫೋಲೇಟ್ ಮತ್ತು ಬೀಟಾ ಕ್ಯಾರೋಟಿನ್ ನಂತಹ ಪೋಷಕಾಂಶಗಳಿವೆ. ಇದು ದೇಹದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ. ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಸೈನ್ಸ್ ಡೈರೆಕ್ಟ್‌ನಲ್ಲಿನ ವರದಿಯ ಪ್ರಕಾರ, ಕುಂಬಳಕಾಯಿ ಬೀಜಗಳ ಸೇವನೆಯು ಕೊಲೊರೆಕ್ಟಲ್, ಸ್ತನ ಮತ್ತು ಹೊಟ್ಟೆಯ ಕ್ಯಾನ್ಸರ್‌ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಕುಂಬಳಕಾಯಿ ಬೀಜಗಳು ಪ್ರಬಲವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ರಕ್ತದಲ್ಲಿರುವ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಹೇರಳವಾಗಿದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಕುಂಬಳಕಾಯಿ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮಧುಮೇಹ ಹೊಂದಿರುವವರಿಗೆ ಪ್ರಯೋಜನಕಾರಿಯಾಗಿದೆ. ಆದಾಗ್ಯೂ, ಇದನ್ನು ಸಾಬೀತುಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಉತ್ತಮ ನಿದ್ರೆ: ಕುಂಬಳಕಾಯಿ ಬೀಜಗಳು ಅಮೈನೋ ಆಮ್ಲವನ್ನು ಹೊಂದಿದ್ದು…
ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತೀ ಹಬ್ಬವೂ ಒಂದು ನಿರ್ದಿಷ್ಟ ಮಾಸದ ನಕ್ಷತ್ರ ಅಥವಾ ತಿಥಿಯಂದು ಆಚರಿಸಿದರೆ ಕೆಲವು ಹಬ್ಬಗಳು ನಿರ್ದಿಷ್ಟ ದಿನಗಳಲ್ಲಿಯೇ ಆಚರಿಸುವ ರೂಢಿಯಲ್ಲಿದೆ, ಶ್ರಾವಣ ಮಾಸದ ನಾಗರಪಂಚಮಿ ಹಬ್ಬವಾದ ನಂತರ ಪೌರ್ಣಮಿಗಿಂತ ಮುಂಚೆ ಬರುವ ಶುಕ್ರವಾರದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗುತ್ತದೆ. https://youtu.be/x0cMmaYAFmU?si=yevL-SoPTVxKIUSs ವರಲಕ್ಷ್ಮಿ ಪೂಜೆಯನ್ನು ಸಾಮಾನ್ಯವಾಗಿ ತಮ್ಮ ಅತ್ತೆಯಿಂದ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದ ಮಹಿಳೆಯರು ಮಾಡುತ್ತಾರೆ. ಆದ್ದರಿಂದ, ಇದು ಒಂದು ತಲೆಮಾರಿನಿಂದ ಇನ್ನೊಂದು ಪೀಳಿಗೆಗೆ ಮುಂದುವರಿಯುವ ಪದ್ಧತಿ. ವರಲಕ್ಷ್ಮಿ ವ್ರತವನ್ನು ಮಾಡುವವರು ಬೆಳ್ಳಿಯ ಅಥವಾ ಇನ್ಯಾವುದೇ ಲೋಹದಿಂದ ತಯಾರಿಸಿದ ಲಕ್ಷ್ಮಿ ದೇವಿಯ ಮುಖವನ್ನು ಬಳಸುತ್ತಾರೆ. ಪೂಜೆಯ ಸಮಯದಲ್ಲಿ ಇದನ್ನು ವರ್ಷದಿಂದ ವರ್ಷಕ್ಕೆ ಬಳಸಲಾಗುತ್ತದೆ. ಮಾವಿನ ಎಲೆಗಳನ್ನು ಬಳಸಿ ತಳಿರು ತೋರಣಗಳಿಂದ ಮನೆಯ ಬಾಗಿಲನ್ನು ಸಿಂಗರಿಸಬೇಕು. ಹೂವಿನ ಮಾಲೆಗಳನ್ನು ಮನೆಯಲ್ಲಿ ಬಾಗಿಲಿಗೆ ಕಟ್ಟಬೇಕು. ಇದರಿಂದಾಗಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ವಿದ್ಯೆಗೆ ಬ್ರಹ್ಮನ ಅರಸಿ ಸರಸ್ವತಿ ಅದಿದೇವತೆಯಾದರೆ, ಸುಖಃ ಮತ್ತು ಸಂಪತ್ತುಗಳಿಗೆ ವಿಷ್ಣುವಿನ ಪತ್ನಿ ಮಹಾ ಲಕ್ಶ್ಮೀಯೇ ಅಧಿದೇವತೆ. ಯಾರಿಗೆ ಲಕ್ಷ್ಮಿ ಚೆನ್ನಾಗಿ…
ಬೆಂಗಳೂರು: BPL ಕಾರ್ಡ್ ದಾರರಿಗೆ ಗುಡ್ ನ್ಯೂಸ್ ಕೊಡಲು ಮುಂದಾದ ರಾಜ್ಯ ಸರ್ಕಾರ ಸದ್ಯ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ಮಾಡುತ್ತಿದ್ದು, ಇನ್ನು ಮುಂದೆ ಎಣ್ಣೆ, ಬೇಳೆ, ಸಕ್ಕರೆ ಮತ್ತು ಇತರ ಆಹಾರ ಪದಾರ್ಥಗಳನ್ನು ಕೊಡಲು ರಾಜ್ಯಸರ್ಕಾರ ಚಿಂತನೆ ನಡೆಸಿದೆ. https://youtu.be/tnHaG9eId_o?si=ZsYzavpeaGK8tdYe ಅನ್ನ ಭಾಗ್ಯ ಯೋಜನೆಯಡಿ ದ 5 ಕೆ.ಜಿ ಅಕ್ಕಿಯ ದುಡ್ಡಿನ ಬದಲು ಬೇಳೆ, ಉಪ್ಪು ಸಕ್ಕರೆ ಹಾಗೂ ಎಣ್ಣೆ ನೀಡುವಂತೆ ನಾಶೇ 93ರಷ್ಟು ಫಲಾನುಭವಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಸಚಿವ ದ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಮಾಡಲು ಸಚಿವರು ಮುಂದಾಗಿದ್ದಾರೆ. ರಾಜ್ಯ ಸರಕಾರ ನಡೆಸಿದ ಸಮೀಕ್ಷೆಯಲ್ಲಿ ಶೇ 93ರಷ್ಟು ಫಲಾನುಭವಿಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲಿಗೆ 5 ಕೆಜಿ ಅಕ್ಕಿ ಜತೆಗೆ ಇತರೆ ಅಗತ್ಯ ವಸ್ತುಗಳನ್ನು ಪಡೆಯಲು ಆಸಕ್ತಿ ತೋರಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವರು…