Author: Prajatv Kannada

ಧಾರವಾಡ: ದಾರವಾಡದ ಲಾಡ್ಜ್ ಒಂದರಲ್ಲಿ ಅಪ್ರಾಪ್ತೆ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜರುಗಿದೆ. ಬಳಿಕ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಹಲವು ವಾಟ್ಸ್‌ಆಯಪ್ ಗ್ರೂಪ್‌ಗೂ ಹಾಕಿದ್ದು, ಹಲವರು ಬೇರೆ ಗ್ರೂಪ್‌ಗೆ ಶೇರ್‌ ಮಾಡಿದ್ದಾರೆ. ಸದ್ಯ ಯುವಕನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಬೇರೆ ಬೇರೆ ಗ್ರೂಪ್‌ನಲ್ಲಿ ವಿಡಿಯೋ ಶೇರ್‌ ಮಾಡಿದ್ದ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಸದ್ಯ ದೌರ್ಜನ್ಯ ಎಸಗಿದ ಆರೋಪಿ ಮೇಲೆ ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

Read More

ತುಮಕೂರು:- ಇತ್ತೀಚೆಗೆ ಬಡ ಕೃಷಿಕ ಯುವಕರಿಗೆ ಹೆಣ್ಣು ಸಿಗೋದೇ ಕಷ್ಟವಾಗಿದೆ.. ಮದುವೆ ವಯಸ್ಸು ಮೀರಿದರೂ ಕನ್ಯೆ ಸಿಗದೇ ಅದೆಷ್ಟೋ ಮಂದಿ ಮದುವೆಯಾಗದೇ ಸಿಂಗಲ್ಲಾಗಿಯೇ ಉಳಿದಿದ್ದಾರೆ.. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರ ತಂಡವೊಂದು ಹುಟ್ಟಿಕೊಂಡಿದ್ದು, ವಂಚನೆ ಮಾಡುತ್ತಿರೋದು ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಅತ್ತಿಗಟ್ಟೆ ಗ್ರಾಮದ ಪಾಲಾಕ್ಷಯ್ಯಗೆ 37 ವರ್ಷದ ಮಗನಿದ್ದಾನೆ. ಇಡೀ ಕರ್ನಾಟಕ ಸುತ್ತಾಡಿದರೂ ಮಗ ದಯಾನಂದಮೂರ್ತಿಗೆ ಹೆಣ್ಣು ಸಿಕ್ಕಿರಲಿಲ್ಲ. ಇದರಿಂದಾಗಿ ಪಾಲಾಕ್ಷಯ್ಯ ಕುಟುಂಬ ಚಿಂತಾಕ್ರಾಂತವಾಗಿತ್ತು. ಈ ನಡುವೆ ಪಾಲಾಕ್ಷಯ್ಯಗೆ ಪರಿಚಯವಾಗಿದ್ದ ಕುಷ್ಟಗಿ ಮೂಲದ ಬಸವರಾಜು ಬಳಿ ಅಳಲು ತೋಡಿಕೊಂಡಾಗ ಬಸವರಾಜು ಹುಬ್ಬಳ್ಳಿ ಮೂಲದ ಬ್ರೋಕರ್ ಲಕ್ಷ್ಮೀ ಎಂಬಾಕೆಯನ್ನು ಪರಿಚಯ ಮಾಡಿಸ್ತಾನೆ.. ಈ ಕಿಲಾಡಿ ಬ್ರೋಕರ್ ಲಕ್ಷ್ಮೀ ಪಾಲಾಕ್ಷಯ್ಯ ಕುಟುಂಬಕ್ಕೆ ನಯವಾಗಿ ವಂಚಿಸಲು ಪ್ಲಾನ್ ಮಾಡುತ್ತಾಳೆ. ಕಿಲಾಡಿ ಬ್ರೋಕರ್ ಲಕ್ಷ್ಮೀ ನಮ್ಮ ಬಳಿ ಒಂದು ಹೆಣ್ಣಿದೆ, ಅವಳಿಗೆ ತಂದೆ ತಾಯಿ ಇಲ್ಲ, ನೀವೇ ಮದುವೆ ಮಾಡಿಕೊಳ್ಳಬೇಕು ಎಂದು ಸುಳ್ಳಿನ ಕಥೆ ಹೆಣೆಯುತ್ತಾಳೆ. ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದ ಲಕ್ಷ್ಮೀ ಬಾಳಾಸಾಬ್ ಎಂಬ ಆಂಟಿಯನ್ನು…

Read More

ಸ್ಯಾಂಡಲ್ ವುಡ್ ಸಿನಿಮಾ ರಂಗದ ಏಳಿಗೆಗಾಗಿ ಇಂದು ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ, ಹವನ ನಡೆಯುತ್ತಿದೆ. ಈ ಪೂಜೆಯಲ್ಲಿ ಕನ್ನಡ ಸಿನಿಮಾ ರಂಗದ ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ. ನಾಗಾರಾಧನೆ ವೇಳೆ ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿರುವ ಘಟನೆ ನಡೆದಿದೆ ನಾಗಾರಾಧನೆ ನಡೆಯುತ್ತಿದ್ದ ವೇಳೆ, ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಕೂಡಲೇ ಅವರಿಗೆ ಕುಡಿಯಲು ನೀರು ಕೊಟ್ಟು ಸಮಾಧಾನಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ, “ನನಗೆ ಆಗಾಗ ಈ ರೀತಿ ಆಗುತ್ತದೆ. ಏನಾಯ್ತು ಅಂತ ಗೊತ್ತು ಆಗೋದಿಲ್ಲ. ಆಗೆಲ್ಲ ದೇವರ ತೀರ್ಥ ಕೊಟ್ಟಾಗ ಸರಿ ಹೋಗುತ್ತದೆ. ನಾಲ್ಕೈದು ಜನ ನನ್ನನ್ನು ಹಿಡಿಯಬೇಕಾಗುತ್ತದೆ. ಮನೆಯಲ್ಲಿಯೂ ಈ ರೀತಿ ಆಗುತ್ತದೆ” ಎಂದಿದ್ದಾರೆ. ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ಉಡುಪಿಯ ಪ್ರಕಾಶ್ ಅಮ್ಮಣ್ಣಾಯ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದೆ. ನೆನಪಿರಲಿ ಪ್ರೇಮ್-ಜ್ಯೋತಿ, ಅಭಿಷೇಕ್ ಅಂಬರೀಶ್, ದೊಡ್ಡಣ್ಣ ದಂಪತಿ, ಪದ್ಮಾ ವಾಸಂತಿ, ಜ್ಯೋತಿ ಬಂಟ್ವಾಳ ಮುಂತಾದ ಹಿರಿಯ ನಟ, ನಟಿಯರು ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲದೆ ನಟ, ನಟಿಯರು,…

Read More

ಬೆಂಗಳೂರು: ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಒಟ್ಟು 34,967 ಮಂಜೂರಾತಿ ಹುದ್ದೆಗಳ ಪೈಕಿ 14,523 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತಹಂತವಾಗಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. https://youtu.be/j6hNnQo4brM?si=fSNCqSpVHgN2oyPe ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ ಸರ್ಕಾರದ ಪರ ವಕೀಲರು ಸರ್ಕಾರದ ಹೇಳಿಕೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ವೈದ್ಯಾಧಿಕಾರಿಗಳು, ತಜ್ಞರು, ದಂತ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಸಿ, ನರ್ಸಿಂಗ್ ಅಧಿಕಾರಿಗಳು ಹಾಗೂ ಡಿ ಗ್ರೂಪ್ ನೌಕರರೂ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳ ಒಟ್ಟು ಸಂಖ್ಯೆ 34,967ರಷ್ಟಿದ್ದು, ಇದರಲ್ಲಿ 20,444 ಹುದ್ದೆಗಳು ಭರ್ತಿಯಾಗಿವೆ ಎಂದು ತಿಳಿಸಲಾಗಿದೆ. ‘ಒಟ್ಟು 14,523 ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ, ಸರ್ಕಾರಿ ಗುತ್ತಿಗೆ, ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ 16,501 ಹುದ್ದೆಗಳ ಕಾರ್ಯ ನಿರ್ವಹಣೆಯಾಗುತ್ತಿದೆ. ಗ್ರಾಮೀಣ ಕಡ್ಡಾಯ ಸೇವೆಯಡಿ 2,371…

Read More

ದೇರ್ ಅಲ್-ಬಾಲಾಹ್ ನಲ್ಲಿರುವ ಮನೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕೇವಲ ನಾಲ್ಕು ದಿನಗಳ ನವಜಾತ ಅವಳಿ ಮಕ್ಕಳು ಮೃತಪಟ್ಟಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅವಳಿ ಮಕ್ಕಳ ತಂದೆ ಮೊಹಮ್ಮದ್ ಅಬು ಅಲ್-ಕುಮ್ಸಾನ್ ಘಟನೆಯ ವೇಳೆ ಸ್ಥಳೀಯ ಸರ್ಕಾರಿ ಕಚೇರಿಯಲ್ಲಿ ಮಕ್ಕಳ ಜನನವನ್ನು ನೋದಾಯಿಸಲು ತೆರಳಿದ್ದರು. ಘಟನೆಯ ಬಗ್ಗೆ ಮೊಹಮ್ಮದ್ ಗೆ ಕರೆ ಮಾಡಿದ ಸ್ಥಳೀಯರು ಮನೆಯ ಮೇಲೆ ಬಾಂಬ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ವೈಮಾನಿಕ ದಾಳಿಯು ನವಜಾತ ಶಿಶುಗಳ ಜೊತೆಗೆ ಮಕ್ಕಳ ತಾಯಿ ಹಾಗೂ ಅಜ್ಜಿಯ ಜೀವವನ್ನೂ ಬಲಿ ತೆಗೆದುಕೊಂಡಿತು. “ಏನಾಯಿತು ಎಂದು ನನಗೆ ತಿಳಿದಿಲ್ಲ” ಎಂದು ಮೊಹಮ್ಮದ್ ಆಘಾತದಿಂದ ಹೇಳಿದರು. “ಅದು ಮನೆಗೆ ಅಪ್ಪಳಿಸಿದ ಶೆಲ್ ಎಂದು ನನಗೆ ತಿಳಿಸಲಾಗಿದೆ.” “ಮಕ್ಕಳ ಜನನವನ್ನು ಆಚರಿಸಲು ಸಹ ನನಗೆ ಸಮಯವಿರಲಿಲ್ಲ” ಎಂದು ಅವರು ಹೇಳಿದರು. ಹಮಾಸ್ ನಡೆಸುತ್ತಿರುವ ಗಾಝಾದ ಆರೋಗ್ಯ ಸಚಿವಾಲಯವು ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಸಮಯದಲ್ಲಿ 115 ಶಿಶುಗಳು ಜನಿಸಿ ನಂತರ ಕೊಲ್ಲಲ್ಪಟ್ಟಿವೆ ಎಂದು…

Read More

ಸೂರ್ಯೋದಯ: 06:02, ಸೂರ್ಯಾಸ್ತ : 06:38 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ , ಶ್ರಾವಣ ಮಾಸ, ಶುಕ್ಲ ಪಕ್ಷ, ತಿಥಿ: ನವಮಿ ನಕ್ಷತ್ರ: ಅನುರಾಧ ರಾಹು ಕಾಲ:12:00 ನಿಂದ 01:30 ತನಕ ಯಮಗಂಡ: 10:30 ನಿಂದ 12:00 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ರಾ .3:50 ನಿಂದ ಬೆ.5:28 ತನಕ ಅಭಿಜಿತ್ ಮುಹುರ್ತ:ಇಲ್ಲ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಮೇಷ ರಾಶಿ: ಹೊಸ ವ್ಯಾಪಾರ ಪ್ರಾರಂಭ,ಟ್ರಾವೆಲ್ ಏಜೆನ್ಸಿ ಅವರಿಗೆ ಆದಾಯ ಹೆಚ್ಚಾಗಲಿದೆ, ಉದ್ಯೋಗದಲ್ಲಿ ಪ್ರೊಮೋಷನ್ ಜೊತೆ ವರ್ಗಾವಣೆ, ಶುಭಮಂಗಳ ಕಾರ್ಯ,ಕಷ್ಟಗಳ ನಡುವೆ ಉತ್ಸಾಹದಿಂದ ಕೆಲಸ ನಿರ್ವಹಣೆ, ಬಂಧುಗಳ ಸಹಾಯ-ಸಹಕಾರ ಮುಂದುವರೆಯುತ್ತದೆ, ಸಂಪಾದನೆ ಉತ್ತಮ, ಸಂತಾನದ ಶುಭ ಸಮಾಚಾರ, ಭೂ ವ್ಯವಹಾರಗಳಲ್ಲಿ ಮೋಸ ಸಂಭವ, ಉದ್ಯೋಗ ಸ್ಥಾನದಲ್ಲಿ ಪ್ರಭಾವಿ ವ್ಯಕ್ತಿಯಿಂದ ಕಿರಿಕಿರಿ, ಈಜುಕೊಳ ಸಂಸ್ಥೆ ಅವರಿಗೆ ಆದಾಯ, ಯೋಗ…

Read More

ಜಪಾನ್ ನ ಹಾಲಿ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ತಾವು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಜಪಾನ್ ಗೆ ಹೊಸ ಪ್ರಧಾನಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಸೆಪ್ಟೆಂಬರ್‌ನಲ್ಲಿ ಮುಂಬರುವ ಪಕ್ಷದ ನಾಯಕತ್ವದ ಮತದಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಮ್ಮ ಆಡಳಿತ ಪಕ್ಷದ ಕಾರ್ಯನಿರ್ವಾಹಕರಿಗೆ ಸೂಚಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಜಪಾನ್‌ ಹೊಸ ಪ್ರಧಾನಿಯನ್ನು ಹೊಂದಲಿದೆ ಎಂದು ಜಪಾನ್‌ನ ಮಾಧ್ಯಮಗಳು ವರದಿ ಮಾಡಿವೆ. ಕಿಶಿಡಾ 2021 ರಲ್ಲಿ ಅವರ ಆಡಳಿತ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸೆಪ್ಟೆಂಬರ್‌ನಲ್ಲಿ ಅವರ ಅವಧಿ ಮುಕ್ತಾಯಗೊಳ್ಳುತ್ತದೆ.  ಅವರ ಪಕ್ಷದ ಭ್ರಷ್ಟಾಚಾರ ಹಗರಣಗಳಿಂದ ಕುಟುಕಿರುವ ಕಿಶಿಡಾ ಅವರು ಶೇ.20ಕ್ಕಿಂತ ಕಡಿಮೆಯಾದ ಬೆಂಬಲದ ರೇಟಿಂಗ್‌ಗಳನ್ನು ಹೊಂದಿದ್ದಾರೆ.

Read More

ಅಮರಾವತಿ: ಪ್ರೀತಿಯೊಂದು (Love) ಸುಂದರ ಅನುಭವ. ಅದನ್ನ ಅನುಭವಿಸಬೇಕೇ ಹೊರತು ಹೇಳಿಕೊಳ್ಳಲಾಗಲ್ಲ. ಅದಕ್ಕಾಗಿ ಕೆಲವರು ಪ್ರೀತಿಯೆಂಬುದೇ ಮಾಯೆ ಎನ್ನುತ್ತಾರೆ. ಕೆಲವರಿಗೆ ಹೇಳಿಕೊಳ್ಳಲು ಸಂಕೋಚ, ಹೇಳಿಕೊಂಡರೇ ಇದ್ದ ಸಂಬಂಧವೂ ಬಿಟ್ಟುಹೋಗುತ್ತದೆ ಅನ್ನೋ ಆತಂಕ. ಆದ್ರೆ ಆನ್‌ಲೈನ್‌ ಯುಗದಲ್ಲಿ ಪ್ರೀತಿ – ಪ್ರೇಮ ಎಂಬುದು ಕ್ಷಣಿಕ ಸುಃಖವಾಗಿದೆ. ಬೆಳಗ್ಗೆ ಪ್ರಪೋಸ್‌ ಮಾಡಿ, ಸಂಜೆ ಹೊತ್ತಿಗೆ ಶೇಕ್‌ ಹ್ಯಾಂಡ್‌ ಮಾಡಿ ಬ್ರೇಕಪ್‌ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಇಲ್ಲೊಬ್ಬಳು ವಿಧವೆ ತನ್ನ ಪ್ರಿಯಕರ ಕೈಕೊಟ್ಟಿದ್ದಕ್ಕಾಗಿ ಅವನ ಮೇಲೆ ಆಸಿಡ್‌ ದಾಳಿಗೆ ಮುಂದಾಗಿದ್ದಾಳೆ 44 ವರ್ಷದ ವಿಧವೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಮದುವೆ  ದಿನವೇ ಆತನ ಮೇಲೆ ಆಸಿಡ್‌ ದಾಳಿಗೆ ಯತ್ನಿಸಿದ್ದು, ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಆಂಧ್ರಪ್ರದೇಶದ ನಂಡಲೂರಿನಲ್ಲಿ ನಡೆದಿದೆ. ಘಟನೆ ನಂತರ ಯುವಕನ ವಿವಾಹ ಕಾರ್ಯಕ್ರಮ ರದ್ದಾಗಿದೆ. ಆಸಿಡ್‌ ದಾಳಿ ನಡೆಸಿದ ಆರೋಪಿ ಮಹಿಳೆ ಸಾಫ್ಟ್‌ವೇರ್‌ ಎಂಜಿನಿಯರ್‌ ಜಯಾ. ಈಕೆಗೆ 22 ವರ್ಷದ ಮಗನಿದ್ದಾನೆ. ಇನ್ನೂ ಆಸಿಡ್‌ ದಾಳಿಗೆ ಒಳಗಾದ ಮಾಜಿ ಪ್ರಿಯಕರ ಶೇಖ್ ಸೈಯದ್ (32),…

Read More

ಕೊಡಗಿನ ಬ್ಯೂಟಿ, ಕಿರುತೆರೆ ನಟಿ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹೆಚ್ಚು ಆಕ್ಟೀವ್ ಆಗಿದ್ದಾರೆ. ತಮ್ಮ  ಹಾಟ್ ಹಾಟ್ ಫೋಟೋಗಳನ್ನು ನಟಿ ಶೇರ್ ಮಾಡುತ್ತಲೆ ಇರುತ್ತಾರೆ. ಇತ್ತೀಚೆಗೆ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಖಾಸಗಿ ವಿಚಾರಕ್ಕೆ ಸುದ್ದಿಯಾಗ್ತಿದ್ದಾರೆ. ಸ್ಯಾಂಡಲ್ ವುಡ್ ಬಳಿಕ ಟಾಲಿವುಡ್ ಗೆ ಎಂಟ್ರಿಕೊಟ್ಟಿರುವ ಜ್ಯೋತಿ ರೈ ಅಲ್ಲೂ ಹೆಚ್ಚು ಸಂಚಲನ ಸೃಷ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ನಟಿ ಆಗಾಗ ತಮ್ ಫೋಟೋಗಳನ್ನ ಶೇರ್ ಮಾಡುತ್ತಿರುತ್ತಾರೆ. ಇದೀಗ ನಟ ಸಖತ್ ಹಾಟ್ ಫೋಟೋಗೆ ಫೋಸ್ ನೀಡಿದ್ದ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅಡಿಬರಹ ಬರೆದುಕೊಂಡಿರುವ ನಟಿ ಜ್ಯೋತಿ ಯಾವುದೇ ಅಡೆತಡೆಗಳಿಲ್ಲದೆ ಸ್ವಂತಿಕೆಯಿಂದ ಬದುಕುತ್ತೇನೆ ಎಂದು ಅರ್ಥ ಬರುವ ರೀತಿಯಲ್ಲಿ ಬರೆದುಕೊಂಡಿದ್ದಾರೆ. ಜ್ಯೋತಿ ರೈ ಸದ್ಯ ತಮ್ಮ ಹೊಸ ರೀತಿಯ ಫೋಟೋ ಶೂಟ್ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ. ಮೆರೂನ್ ಕಲರ್ ಸ್ಟ್ರೈಪ್ಸ್ ಇರುವ ಬಟ್ಟೆಯನ್ನು ಧರಿಸಿದ್ದು ನಟಿ ಸಖತ್ ಹಾಟ್ ಆಗಿ…

Read More

ದೆಹಲಿ: ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಮೋಹನ್ ಕ್ವಾತ್ರಾ  ಅಧಿಕಾರ ಸ್ವೀಕರಿಸಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. 61 ವರ್ಷ ವಯಸ್ಸಿನ ಕ್ವಾತ್ರಾ ಅವರು ಇತ್ತೀಚಿನವರೆಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ  ಕೆಲಸ ನಿರ್ವಹಿಸಿದ್ದರು. ಇದಕ್ಕೂ ಮುನ್ನ ಕ್ವಾತ್ರಾ ಅವರು ಫ್ರಾನ್ಸ್ ಮತ್ತು ನೇಪಾಳಕ್ಕೆ ಭಾರತದ ರಾಯಭಾರಿಯಾಗಿದ್ದರು, ನಂತರ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಕಳೆದ ಜುಲೈ 14 ರಂದು ವಿದೇಶಾಂಗ ಸೇವೆಯಿಂದ ನಿವೃತ್ತರಾಗಿದ್ದರು. ಕ್ವಾತ್ರಾ ಅವರು ತರಂಜಿತ್ ಸಿಂಗ್ ಸಂಧು ಅವರ ಉತ್ತರಾಧಿಕಾರಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ವಿದೇಶಿ ಸೇವೆಯಿಂದ ನಿವೃತ್ತರಾದ ಕ್ವಾತ್ರಾ 2020 ರಿಂದ 2024ರ ಅವಧಿಗೆ ಯುಎಸ್‌ನಲ್ಲಿ (US) ಭಾರತದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅಮೆರಿಕದಲ್ಲಿ ಭಾರತದ ನೂತನ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ನಡುವೆ ಅಮೆರಿಕಗೆ ಭಾರತದ ಹೊಸ ರಾಯಭಾರಿಯಾಗಿ ಕ್ವಾತ್ರಾ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ. ನಾವೆಲ್ಲರೂ (ಭಾರತೀಯ ರಾಯಭಾರ ಕಚೇರಿಯಲ್ಲಿ) ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಚಾರ್ಜ್ ಡಿ ಅಫೇರ್ಸ್ ಶ್ರೀಪ್ರಿಯಾ ರಂಗನಾಥನ್…

Read More