ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದ ನಾಲ್ಕೇ ವರ್ಷಕ್ಕೆ ದೂರ ದೂರವಾಗಿದ್ದರು. ಇಂದಿಗೂ ಇಬ್ಬರು ದೂರವಾಗಲು ಕಾರಣ ಮಾತ್ರ ಸ್ಪಷ್ಟವಾಗಿಲ್ಲ. ಈ ಮಧ್ಯೆ ನಾಗಚೈತನ್ಯ ನಟಿ ಶೋಭಿತಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಅತ್ತ ಸಮಂತಾ ಮಾತ್ರ ಡಿವೋರ್ಸ್ ಬಳಿಕ ಒಂಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೀಗ ಒಂಟಿಯಾಗಿರುವ ನಟಿ ಸಮಂತಾ ನಿರ್ದೇಶಕನೋರ್ವನ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ. ನಿರ್ದೇಶಕ ರಾಜ್ ನಿಡಿಮೋರ್ ಜೊತೆಗೆ ನಟಿ ಸಮಂತಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೆಬ್ ಸೀರಿಸ್ನಲ್ಲಿ ಜೊತೆಯಾದ ನಂತರದಿಂದ ಸಮಂತಾ ಆತನ ಜೊತೆಗೆ ಡೇಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಗಾಳಿ ಸುದ್ದಿಗೆ ನಟಿಯ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸಿನಿಮಾದಲ್ಲಿ ಅಸಾಧಾರಣ ಅಭಿನಯಕ್ಕಾಗಿ ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಗಳಿಸಿದರು. ಹನಿ ಬನ್ನಿಯಲ್ಲಿ ರಾಜ್ ನಿಡಿಮೋರ್…
Author: Prajatv Kannada
ಇಂದು ಮತ್ತು ನಾಳೆ ಕನ್ನಡ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ರಾಕ್ ಲೈನ್ ವೆಂಕಟೇಶ್ ನೇತೃತ್ವದಲ್ಲಿ ಸುಮಾರು 8 ಮಂದಿ ಪುರೋಹಿತರು ಈ ಪೂಜೆ ನಡೆಸಿಕೊಡುತ್ತಿದ್ದಾರೆ. ಕನ್ನಡ ಚಿತ್ರರಂಗದ ನಟ, ನಟಿಯರು, ಕಲಾವಿದರು, ತಂತ್ರಜ್ಞರು ಸೇರಿದಂತೆ ಸುಮಾರು 600ಕ್ಕೂ ಅಧಿಕ ಮಂದಿ ಈ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಕಲಾವಿದರ ಸಂಘದಲ್ಲಿ ನಡೆಯುತ್ತಿರುವ ಈ ಪೂಜೆ ಜೈಲು ಸೇರಿರುವ ದರ್ಶನಗಾಗಿ. ಅವರನ್ನು ಉಳಿಸಲು ಈ ಪೂಜೆ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಮಾತನಾಡಿದ ಹಿರಿಯ ನಟಿ ಗಿರಿಜಾ ಲೋಕೇಶ್, ದರ್ಶನ್ ಉಳಿಸಲು ‘ಹೋಮ’ ಮಾಡಿದ್ರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ. ದರ್ಶನ್ಗಾಗಿ ಹೋಮ ಮಾಡಿದ್ರೆ ತಪ್ಪೇನು? ಈಗ ದರ್ಶನ್ ಮೇಲೆ ಆರೋಪ ಬಂದಿದೆ ಅಂತ ಆತನನ್ನು ದೂರ ತಳ್ಳೋದು ತಪ್ಪು. ಆಳಿಗೊಂದು ಕಲ್ಲು ಹೊಡೆಯೋದು ಸರಿಯಲ್ಲ. ಇಡೀ ಸಮಗ್ರ ಇಂಡಸ್ಟ್ರಿ ಒಳಿತಿಗೆ ಮಾಡ್ತಿರೋ ಹೋಮ ಇದು ಎಂದಿದ್ದಾರೆ. ದೊಡ್ಡಣ್ಣ ಹಾಗೂ ಅವರ ಪತ್ನಿ ಈ…
ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಮುರಿದು ಅಪಾರ ಪ್ರಮಾಣದ ನೀರು ನದಿಗೆ ಹೋಗುತ್ತಿದೆ. ಈ ವರ್ಷದ ಮುಂಗಾರು ಮಳೆ ಅಬ್ಬರಕ್ಕೆ ಡ್ಯಾಂ ಭರ್ತಿಯಾಗಿದೆ ಎಂದು ಸಂತಸಗೊಂಡಿದ್ದ ರೈತರು ಈಗ ಗೇಟ್ ಮುರಿದಿರುವುದರಿಂದ ಆತಂಕಗೊಂಡಿದ್ದಾರೆ. ಡ್ಯಾಂ ಇಂಜಿನಿಯರ್ ಕನ್ನಯ್ಯ ನಾಯ್ಡು ಅವರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನೀರು ಇರುವಾಗಲೇ ಗೇಟ್ ಅಳವಡಿಸುವ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ನೀರು ಇರುವಾಗ ಶಟರ್‌ಗಳನ್ನು ಹೇಗೆ ಸೆಟ್ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಿರುವ ಕನ್ನಯ್ಯ ನಾಯ್ಡು ಆಯಂಡ್ ಟೀಂ 20 ಅಡಿ ಅಗಲ, 12 ಅಡಿ ಉದ್ದದ ಕಟ್ ಮಾಡಿ ರೆಡಿ ಇರಿಸಿಕೊಂಡಿದೆ. ಈಗ ಗೇಟ್ ಮುಚ್ಚಿದರೆ ಜಲಾಶಯದಲ್ಲಿ ಸಾಕಷ್ಟು ನೀರು ಉಳಿಸಿಕೊಳ್ಳಬಹುದು. ಇಲ್ಲವಾದರೆ ಸುಮಾರು 60 ಟಿಎಂಸಿಯಷ್ಟು ನೀರು ವ್ಯರ್ಥವಾಗಿ ಹರಿದುಹೋಗಲಿದೆ. ಕನ್ನಯ್ಯ ನಾಯ್ಡು ಅವರ ಪ್ರಯತ್ನದಿಂದ ನೀರು ಉಳಿಯುವ ಭರವಸೆ ಮೂಡಿದೆ. ಪರಿಣಿತರಾದ ಕನ್ನಯ್ಯ ನಾಯ್ಡು ಅವರಿಂದ…
ಕನ್ನಡ ಚಿತ್ರರಂಗದ ಏಳಿಗೆಗಾಗಿ ಕಲಾವಿದರ ಸಂಘದಲ್ಲಿ ಇಂದು ಮತ್ತು ನಾಳೆ ಪೂಜೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರೋ ಕಲಾವಿದರ ಸಂಘದಲ್ಲಿ ಈ ಪೂಜೆ ನಡೆಯುತ್ತಿದೆ. ಹಿರಿಯ ನಟಿ ಶಾಂತಲಾ, ಮಾಲತಿ ಶ್ರೀ ಮೈಸೂರು, ಪದ್ಮಜಾ ರಾವ್ ಮೊದಲಾದವರು ದೀಪ ಬೆಳಗಿ ಪೂಜೆಗೆ ಚಾಲನೆ ನೀಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ಈ ಪೂಜೆ ನಡೆಯುತ್ತಿದ್ದದೊಡ್ಡಣ್ಣ ಹಾಗೂ ಅವರ ಪತ್ನಿ ಪೂಜೆಯ ಸಕಲ ಸಿದ್ದತೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಗಣಪತಿ ಹೋಮದಿಂದ ಪೂಜೆ ಶುರುವಾಗಿದ್ದು, ಅಶ್ಲೇಷ ಬಲಿ, ಸರ್ಪ ಶಾಂತಿ, ಮೃತ್ಯುಂಜಯ ಹೋಮ ಜರುಗಲಿದೆ. 8 ಜನರ ವಿಶೇಷ ಪುರೋಹಿತರ ತಂಡ ಆಗಮಿಸಿದೆ. ಬೆಳಿಗ್ಗೆ 8 ಗಂಟೆಯಿಂದ ಪೂಜೆ ಆರಂಭ ಆಗಿದೆ. ಕನ್ನಡ ಚಿತ್ರರಂಗದ ತಂತ್ರಜ್ಞರು, ಕಲಾವಿದರು ಸೇರಿ 600 ಮಂದಿ ಇದರಲ್ಲಿ ಭಾಗಿ ಆಗಲಿದ್ದಾರೆ. ಕೊವಿಡ್ ಪೂರ್ಣಗೊಂಡ ನಂತರ ಕನ್ನಡ ಚಿತ್ರರಂಗ ಮೊದಲಿಗಿಂತ ಮಂಕಾಗಿದೆ. ಅನೇಕ ಸಾವು-ನೋವುಗಳು ಸಂಭವಿಸಿವೆ. ಹೀಗಾಗಿ, ಈ ಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಕಲಾವಿದರ ಸಂಘದಲ್ಲಿ ಹೋಮ ಹವನ ಮಾಡಲಾಗುವುದು ಎಂಬ ಸುದ್ದಿ ಕೇಳಿ ಬರ್ತಿದ್ದಂತೆ…
ಕಲಬುರಗಿ :- ಜಿಲ್ಲೆಯ ಆಳಂದ ತಾಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ 5ನೇ ತರಗತಿ ಓದುತ್ತಿರುವ 10 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನೇ ಲೈಂಗಿಕ ದೌರ್ಜನ್ಯ ಎಸಗುವ ಯತ್ನ ಮಾಡಿರುವ ಘಟನೆ ಜರುಗಿದೆ. ಘಟನೆ ಸಂಬಂಧ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆ ಅವಧಿ ಮುಗಿದ ಬಳಿಕ ವಿದ್ಯಾರ್ಥಿನಿಯನ್ನ ಕರೆಯಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಶಾಲಾ ಕೋಣೆಯಲ್ಲೆ ಶಿಕ್ಷಕ ಮಲ್ಲಿಕಾರ್ಜುನ ಕುಮಸಿ 5 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು ಸದ್ಯ ಕಾಮುಕನ ಹೆಡೆಮುರಿಕಟ್ಟಲಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆಯ ಇನ್ಸ್ಪೆಕ್ಟರ್ ಓರ್ವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರಿದ ಮಹಿಳೆಗೆ ಬಂಗಾರಪೇಟೆ ಪೊಲೀಸ್ ಠಾಣೆಯ ಸಿಪಿಐ ನಂಜಪ್ಪ ಎಂಬಾತ ಕಿರುಕುಳ ನೀಡುತ್ತಿದ್ದಾರೆ. ಲೈಂಗಿಕವಾಗಿ ಸಹಕರಿಸದಿದ್ದರೆ ಸುಳ್ಳು ಕೇಸ್ ಹಾಕಿಸಿ ಒಳಗೆ ಹಾಕಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಂಜುಳ ಎಂಬ ಮಹಿಳೆ ಈ ರೀತಿ ಆರೋಪ ಮಾಡಿದ್ದಾರೆ. ಪಕ್ಕದ ಮನೆಯವರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದು, ಇದರ ಬಗ್ಗೆ ದೂರಲು ಪೊಲೀಸ್ ಠಾಣೆಗೆ ಬಂದ ನಮ್ಮನ್ನೇ ಶೋಷಿಸಲಾಗುತ್ತಿದೆ. ಠಾಣೆಗೆ ಕರೆಸಿ ನನ್ನನ್ನು ʼಮಲಗೋಕೆ ಬಾʼ ಎಂದು ಸಿಪಿಐ ಕರೆಯುತ್ತಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೊಂದ ಮಹಿಳೆ, ಅಲ್ಲಿಂದಲೇ ಈ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಮಹಿಳಾ ಪೊಲೀಸರಿಲ್ಲದೆ ನನ್ನನ್ನು ಬಂಧಿಸಿ ಅವಮಾನ ಮಾಡಿದ್ದಾರೆ. ಪುರುಷ ಪೊಲೀಸರನ್ನು ಆಗಾಗ ಮನೆ ಬಳಿ ಕಳುಹಿಸಿ ಕಿರುಕುಳ, ಅವಮಾನ ನೀಡುತ್ತಿದ್ದಾರೆ. ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ…
ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿಯಾಗಿಲ್ಲ ಎನ್ನುವ ಸುದ್ದಿ ಕೆಲ ದಿನಗಳಿಂದ ಕೇಳಿ ಬರ್ತಿದೆ. ಅದಕ್ಕೆ ಪೂರಕ ಎನ್ನುವಂತಹ ಅನೇಕ ಘಟನೆಗಳು ನಡೆಯುತ್ತಿವೆ. ಡಿವೋರ್ಸ್ ಪಡೆಯಲು ಈ ದಂಪತಿ ನಿರ್ಧರಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದ್ದು ಅಭಿಷೇಕ್ ಮಾತ್ರ ನಾನಿನ್ನು ವಿವಾಹಿತ ಎಂದಿದ್ದಾರೆ. ಈ ಮಧ್ಯೆ ಅಭಿಷೇಕ್ ಪ್ಯಾರಿಸ್ ನಲ್ಲಿ ಸಿಂಗಲ್ ಆಗಿ ಸುತ್ತಾಡಿರುವುದು ಅನುಮಾನಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದತಾಗಿದೆ. ಫ್ಯಾಮಿಲಿ ಮ್ಯಾನ್ ಆಗಿದ್ದ ಅಭಿಷೇಕ್ ಬಚ್ಚನ್ ಎಲ್ಲೇ ಹೋದರು ಹೆಂಡತಿ ಹಾಗೂ ಮಗಳೊಂದಿಗೆ ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಪತ್ನಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಅಂಬಾನಿ ಕುಟುಂಬದ ಮದುವೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಪ್ರತ್ಯೇಕವಾಗಿ ಆಗಮಿಸಿದ್ದರು. ಇದರಿಂದ ಜನರ ಅನುಮಾನ ಜಾಸ್ತಿ ಆಗಿತ್ತು. ಈಗ ಅಭಿಷೇಕ್ ಬಚ್ಚನ್ ಅವರು ಒಂಟಿಯಾಗಿ ಪ್ಯಾರಿಸ್ನಲ್ಲಿ ಸುತ್ತಾಟ ನಡೆಸಿದ್ದಾರೆ. ಒಲಂಪಿಕ್ಸ್ ನೋಡಲು ಅಭಿಷೇನ್ ಬಚ್ಚನ್ ಅವರು ಪ್ಯಾರಿಸ್ಗೆ…
ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಸೆಪ್ಟೆಂಬರ್ 5 ರಂದು ಪ್ರಾರಂಭವಾಗಲಿರುವ ದುಲೀಪ್ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಒಂದನ್ನು ಅನಂತಪುರದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. https://youtu.be/0k8E3uH574w?si=wWEKrlyGH3X5JVqa ದುಲೀಪ್ ಟ್ರೋಫಿಯನ್ನು ಸೆಪ್ಟೆಂಬರ್ 5 ರಂದು ಆಂಧ್ರಪ್ರದೇಶದ ಅನಂತಪುರದಲ್ಲಿ ಎರಡು ಸೆಟ್‌ಗಳ ಮೊದಲ ಸುತ್ತಿನ ಪಂದ್ಯಗಳೊಂದಿಗೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಆ ಪಂದ್ಯಗಳಲ್ಲಿ ಒಂದನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ. ಅನಂತಪುರವು ಬೆಂಗಳೂರಿನಿಂದ ಸರಿಸುಮಾರು 230 ಕಿಮೀ ದೂರದಲ್ಲಿದೆ. ಈ ನಗರ ವಿಮಾನ ಸಂಪರ್ಕ ಹೊಂದಿಲ್ಲ. ಕೆಲವು ಟೀಮ್ ಇಂಡಿಯಾದ ಆಟಗಾರರಿಗೆ ಅವಕಾಶ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ರೆಡ್-ಬಾಲ್ ಕ್ರಿಕೆಟ್‌ನ ಅನುಭವವನ್ನು ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ. ಭಾರತವು ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಮತ್ತು ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ದುಲೀಪ್ ಟ್ರೋಫಿಯಲ್ಲಿ ಆಡುವುದು ರೋಹಿತ್ ಮತ್ತು…
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಇಂದು ಕೋರ್ಟ್ ಮುಂದೆ ದರ್ಶನ್ ಹಾಜರುಪಡಿಸಲಿದ್ದಾರೆ. https://youtu.be/MGuj_a1-5tw?si=trzp_46yASosMBLS ವಿಡಿಯೋ ಕಾನ್ಫರೆನ್ಸ್ ಮೂಲಕ ಡಿ ಗ್ಯಾಂಗ್‌ರನ್ನು ಪೊಲೀಸರು 24ನೇ ACMM ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕಳೆದ ಬಾರಿ ವಿಡಿಯೋ ಕಾನ್ಫರೆನ್ಸ್ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿಯಾಗಿದ್ದರು. ಆ ಬಳಿಕ ಇಂದೇ ಮುಖಾಮುಖಿಯಾಗಲಿದ್ದಾರೆ. ಇಂದು 11 ಗಂಟೆ ವೇಳೆಗೆ ಕೋರ್ಟ್‌ಗೆ ಹಾಜರುಪಡಿಸಲಾಗ್ತಿದ್ದು ನಿರೀಕ್ಷೆಯಂತೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆ ಇದೆ. ಕಳೆದ ಬಾರಿ ದರ್ಶನ್ ಸ್ಥಿತಿ ನೋಡಿ ಪವಿತ್ರಾ ಗೌಡ ಕಣ್ಣೀರಿಟ್ಟಿದ್ದರಂತೆ. ಇತ್ತ ಚಾರ್ಜ್‌ಶೀಟ್ ಆಗೋವರೆಗೆ ಜಾಮೀನು ಅರ್ಜಿ ಸಲ್ಲಿಸದಿರಲು ದರ್ಶನ್ ಪರ ವಕೀಲರು ನಿರ್ಧರಿಸಿದ್ದಾರೆ. ಇಂದು ಪೊಲೀಸರು ಮತ್ತೆ ರಿಮ್ಯಾಂಡ್ ಅರ್ಜಿ ಸಲ್ಲಿಸಲಿದ್ದಾರೆ. ಇನ್ನು, ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಕೊನೆ ಹಂತಕ್ಕೆ ತಲುಪಿದೆ. FSL ರಿಪೋರ್ಟ್ ಪೊಲೀಸರ ಕೈ ಸೇರಿದ್ದು ಮತ್ತಷ್ಟು ಭಯಾನಕ ಸತ್ಯ ಹೊರಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿ ಗ್ಯಾಂಗ್‌ನ ಮತ್ತಷ್ಟು ಕ್ರೌರ್ಯಗಳು ಇದರಲ್ಲಿ ಅನಾವರಣವಾಗಿದೆ ಎನ್ನಲಾಗಿದ್ದು,…
ಬೆಂಗಳೂರು:- ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಎದುರಾಗಿದ್ದು, ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರ್ ಏರಿಕೆ ಆಗಿದೆ. ಹೀಗಾಗಿ ಫಲಾನುಭವಿಗಳು ಆಕ್ರೋಶ ಹೊರ ಹಾಕಿದ್ದಾರೆ. https://youtu.be/tnHaG9eId_o?si=O1vJLnlxUPqbrTWk ಗೃಹಜ್ಯೋತಿ ಯೋಜನೆಗೆ ಒಂದು ವರ್ಷವಾದ ಬೆನ್ನಲ್ಲೇ ಬೆಸ್ಕಾಂ ಹೊಸ ಕ್ಯಾತೆ ತೆಗೆದಿದ್ದು, ಇಷ್ಟು ದಿನ ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರನೇ 150, 200 ರೂಪಾಯಿ ಬಂದಿದ್ದು ಗೃಹಹ್ಯೋತಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗೃಹಜ್ಯೋತಿ ಫಲಾನುಭವಿಗಳಿಗೆ ಬಂದಿರುವ ಕರೆಂಟ್ ಬಿಲ್ನಲ್ಲಿ ಹಲವು ಸಮಸ್ಯರಗಳು ಕಂಡುಬರುತ್ತಿವೆ. ಅದರಲ್ಲಿ ಹೆವಿಲೋಡ್ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ಶೂನ್ಯ ಬಿಲ್ ಬರುತ್ತಿದ್ದ ಗ್ರಾಹಕರು 200 ರೂ. ಬಿಲ್ ಬಂದಿದ್ದನ್ನು ನೋಡಿ ಶಾಕ್ ಆಗುತ್ತಿದ್ದಾರೆ. ಪ್ರತಿ ತಿಂಗಳು ಎಷ್ಟು ಪ್ರಮಾಣದಲ್ಲಿ ವಿದ್ಯುತದ ಬಳಕೆ ಮಾಡುತ್ತಿದ್ದೆವೋ ಅಷ್ಟೇ ಮಾಡುತ್ತಿದ್ದೆವು. ಆದರೆ ಈಗ ಶೂನ್ಯ ಬಿಲ್ ಜಾಗದಲ್ಲಿ 200 ರೂಪಾಯಿ ಬಂದಿದ್ದು, ಬಿಲ್ ಪಾವತಿಸಬೇಕಾ ಅಥವಾ ಬೇಡವೇ ಎಂಬ ಯೋಚನೆಯಲ್ಲಿದ್ದೇವೆ. ಅಲ್ಲದೇ ಮೂರು ಜನರಿರುವ ಮನೆಗೆ ಈ ಹಿಂದೆ…