ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, ಸೆಪ್ಟೆಂಬರ್ 5 ರಂದು ಪ್ರಾರಂಭವಾಗಲಿರುವ ದುಲೀಪ್ ಟ್ರೋಫಿಯ ಆರಂಭಿಕ ಪಂದ್ಯಗಳಲ್ಲಿ ಒಂದನ್ನು ಅನಂತಪುರದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. https://youtu.be/0k8E3uH574w?si=wWEKrlyGH3X5JVqa ದುಲೀಪ್ ಟ್ರೋಫಿಯನ್ನು ಸೆಪ್ಟೆಂಬರ್ 5 ರಂದು ಆಂಧ್ರಪ್ರದೇಶದ ಅನಂತಪುರದಲ್ಲಿ ಎರಡು ಸೆಟ್‌ಗಳ ಮೊದಲ ಸುತ್ತಿನ ಪಂದ್ಯಗಳೊಂದಿಗೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಆ ಪಂದ್ಯಗಳಲ್ಲಿ ಒಂದನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ. ಅನಂತಪುರವು ಬೆಂಗಳೂರಿನಿಂದ ಸರಿಸುಮಾರು 230 ಕಿಮೀ ದೂರದಲ್ಲಿದೆ. ಈ ನಗರ ವಿಮಾನ ಸಂಪರ್ಕ ಹೊಂದಿಲ್ಲ. ಕೆಲವು ಟೀಮ್ ಇಂಡಿಯಾದ ಆಟಗಾರರಿಗೆ ಅವಕಾಶ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮೊದಲು ರೆಡ್-ಬಾಲ್ ಕ್ರಿಕೆಟ್‌ನ ಅನುಭವವನ್ನು ಪಡೆಯಲಿದ್ದಾರೆ ಎಂದು ವರದಿ ತಿಳಿಸಿದೆ. ಭಾರತವು ಬಾಂಗ್ಲಾದೇಶದ ವಿರುದ್ಧ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಮತ್ತು ಸೆಪ್ಟೆಂಬರ್ 27 ರಿಂದ ಕಾನ್ಪುರದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ದುಲೀಪ್ ಟ್ರೋಫಿಯಲ್ಲಿ ಆಡುವುದು ರೋಹಿತ್ ಮತ್ತು…
Author: Prajatv Kannada
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಇಂದು ಕೋರ್ಟ್ ಮುಂದೆ ದರ್ಶನ್ ಹಾಜರುಪಡಿಸಲಿದ್ದಾರೆ. https://youtu.be/MGuj_a1-5tw?si=trzp_46yASosMBLS ವಿಡಿಯೋ ಕಾನ್ಫರೆನ್ಸ್ ಮೂಲಕ ಡಿ ಗ್ಯಾಂಗ್‌ರನ್ನು ಪೊಲೀಸರು 24ನೇ ACMM ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕಳೆದ ಬಾರಿ ವಿಡಿಯೋ ಕಾನ್ಫರೆನ್ಸ್ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾಮುಖಿಯಾಗಿದ್ದರು. ಆ ಬಳಿಕ ಇಂದೇ ಮುಖಾಮುಖಿಯಾಗಲಿದ್ದಾರೆ. ಇಂದು 11 ಗಂಟೆ ವೇಳೆಗೆ ಕೋರ್ಟ್‌ಗೆ ಹಾಜರುಪಡಿಸಲಾಗ್ತಿದ್ದು ನಿರೀಕ್ಷೆಯಂತೆ ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆಯಾಗುವ ಸಾಧ್ಯತೆ ಇದೆ. ಕಳೆದ ಬಾರಿ ದರ್ಶನ್ ಸ್ಥಿತಿ ನೋಡಿ ಪವಿತ್ರಾ ಗೌಡ ಕಣ್ಣೀರಿಟ್ಟಿದ್ದರಂತೆ. ಇತ್ತ ಚಾರ್ಜ್‌ಶೀಟ್ ಆಗೋವರೆಗೆ ಜಾಮೀನು ಅರ್ಜಿ ಸಲ್ಲಿಸದಿರಲು ದರ್ಶನ್ ಪರ ವಕೀಲರು ನಿರ್ಧರಿಸಿದ್ದಾರೆ. ಇಂದು ಪೊಲೀಸರು ಮತ್ತೆ ರಿಮ್ಯಾಂಡ್ ಅರ್ಜಿ ಸಲ್ಲಿಸಲಿದ್ದಾರೆ. ಇನ್ನು, ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಕೊನೆ ಹಂತಕ್ಕೆ ತಲುಪಿದೆ. FSL ರಿಪೋರ್ಟ್ ಪೊಲೀಸರ ಕೈ ಸೇರಿದ್ದು ಮತ್ತಷ್ಟು ಭಯಾನಕ ಸತ್ಯ ಹೊರಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿ ಗ್ಯಾಂಗ್‌ನ ಮತ್ತಷ್ಟು ಕ್ರೌರ್ಯಗಳು ಇದರಲ್ಲಿ ಅನಾವರಣವಾಗಿದೆ ಎನ್ನಲಾಗಿದ್ದು,…
ಬೆಂಗಳೂರು:- ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಎದುರಾಗಿದ್ದು, ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರ್ ಏರಿಕೆ ಆಗಿದೆ. ಹೀಗಾಗಿ ಫಲಾನುಭವಿಗಳು ಆಕ್ರೋಶ ಹೊರ ಹಾಕಿದ್ದಾರೆ. https://youtu.be/tnHaG9eId_o?si=O1vJLnlxUPqbrTWk ಗೃಹಜ್ಯೋತಿ ಯೋಜನೆಗೆ ಒಂದು ವರ್ಷವಾದ ಬೆನ್ನಲ್ಲೇ ಬೆಸ್ಕಾಂ ಹೊಸ ಕ್ಯಾತೆ ತೆಗೆದಿದ್ದು, ಇಷ್ಟು ದಿನ ಶೂನ್ಯ ಬರುತ್ತಿದ್ದ ಕರೆಂಟ್ ಬಿಲ್ನಲ್ಲಿ ದಿಢೀರನೇ 150, 200 ರೂಪಾಯಿ ಬಂದಿದ್ದು ಗೃಹಹ್ಯೋತಿ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗೃಹಜ್ಯೋತಿ ಫಲಾನುಭವಿಗಳಿಗೆ ಬಂದಿರುವ ಕರೆಂಟ್ ಬಿಲ್ನಲ್ಲಿ ಹಲವು ಸಮಸ್ಯರಗಳು ಕಂಡುಬರುತ್ತಿವೆ. ಅದರಲ್ಲಿ ಹೆವಿಲೋಡ್ ಹೆಸರಿನಲ್ಲಿ ಯದ್ವಾತದ್ವಾ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈವರೆಗೆ ಶೂನ್ಯ ಬಿಲ್ ಬರುತ್ತಿದ್ದ ಗ್ರಾಹಕರು 200 ರೂ. ಬಿಲ್ ಬಂದಿದ್ದನ್ನು ನೋಡಿ ಶಾಕ್ ಆಗುತ್ತಿದ್ದಾರೆ. ಪ್ರತಿ ತಿಂಗಳು ಎಷ್ಟು ಪ್ರಮಾಣದಲ್ಲಿ ವಿದ್ಯುತದ ಬಳಕೆ ಮಾಡುತ್ತಿದ್ದೆವೋ ಅಷ್ಟೇ ಮಾಡುತ್ತಿದ್ದೆವು. ಆದರೆ ಈಗ ಶೂನ್ಯ ಬಿಲ್ ಜಾಗದಲ್ಲಿ 200 ರೂಪಾಯಿ ಬಂದಿದ್ದು, ಬಿಲ್ ಪಾವತಿಸಬೇಕಾ ಅಥವಾ ಬೇಡವೇ ಎಂಬ ಯೋಚನೆಯಲ್ಲಿದ್ದೇವೆ. ಅಲ್ಲದೇ ಮೂರು ಜನರಿರುವ ಮನೆಗೆ ಈ ಹಿಂದೆ…
ಟಾಲಿವುಡ್ ನಟಿ ಶೋಭಿತಾ ಇತ್ತೀಚೆಗೆ ಸಮಂತಾ ಮಾಜಿ ಪತಿ ನಾಗ ಚೈತನ್ಯ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಈ ಬೆನ್ನಲ್ಲೇ ಶೋಭಿತಾಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಈ ವಾರ ‘ಐಎಂಡಿಬಿ’ ಬಿಡುಗಡೆ ಮಾಡಿದ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶೋಭಿತಾ ಅವರಿಗೆ 2ನೇ ಸ್ಥಾನ ಸಿಕ್ಕಿದೆ. ನಾಗಚೈತನ್ಯ ಜೊತೆ ಶೋಭಿತಾ ಹೆಸರು ಕೇಳಿ ಬಂದ ಬಳಿಕ ಆಕೆಯ ಬಗ್ಗೆ ನೆಟ್ಟಿಗರಲ್ಲಿ ಕುತೂಹಲ ಶುರುವಾಗಿದೆ. ಆಕೆ ಯಾರು? ಹಿನ್ನೆಲೆ ಏನು?ಯಾವ ಸಿನಿಮಾ ಮಾಡಿದ್ದಾರೆ? ನಾಗಚೈತನ್ಯ ಹಾಗೂ ಶೋಭಿತಾ ಪರಿಚಯ ಹೇಗಾಯ್ತು ಎಂಬಿತ್ಯಾದಿಗಳನ್ನು ಹುಡುಕಾಡುತ್ತಿದ್ದಾರೆ. ಹಾಗಾಗಿ ಈ ವಾರ ‘ಐಎಂಡಿಬಿ’ ಬಿಡುಗಡೆ ಮಾಡಿದ ಭಾರತದ ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಶೋಭಿತಾ ಅವರಿಗೆ 2ನೇ ಸ್ಥಾನ ಸಿಕ್ಕಿದೆ. ಶೋಭಿತಾ ಅವರು ಬಹುಭಾಷೆಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಸಿನಿಮಾ, ವೆಬ್ ಸಿರೀಸ್ಗಳ ಮೂಲಕ ಅವರು ಹೆಸರು ಮಾಡಿದ್ದಾರೆ. ಇವೆಲ್ಲ ವೃತ್ತಿಬದುಕಿನ ವಿಷಯವಾದರೆ, ಖಾಸಗಿ ಬದುಕಿನ ಮೂಲಕವೂ ಅವರು ಸದ್ದು ಮಾಡುತ್ತಿದ್ದಾರೆ. ಟಾಲಿವುಡ್ ನಟ ನಾಗ ಚೈತನ್ಯ…
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೆಚ್ಚಿನ ಓಟಗಾರರನ್ನು ಹಿಂದೆಹಾಕಿ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಲೆಟ್ಸಿಲೆ ಟೆಬಾಗೊ ಅವರನ್ನು ಸ್ವಾಗತಿಸಲು ಬೋಟ್ಸ್‌ವಾನಾದಲ್ಲಿ ಮಂಗಳವಾರ ಅರ್ಧದಿನ ರಜೆ ಘೋಷಣೆ ಮಾಡಲಾಗಿತ್ತು. 21 ವರ್ಷ ವಯಸ್ಸಿನ ಟೆಬಾಗೊ ಆಗಸ್ಟ್ 8ರಂದು ಅಮೆರಿಕದ ಕೆನ್ನಿ ಬೆಡ್ನಾರೆಕ್ ಮತ್ತು ನೊವಾ ಲೈಲ್ಸ್ ಅವರಂತಹ ಖ್ಯಾತ ಓಟಗಾರರನ್ನು ಹಿಮ್ಮೆಟ್ಟಿಸಿ ಪ್ಯಾರಿಸ್ ಒಲಂಪಿಕ್ ನಲ್ಲಿ ಚಿನ್ನಕ್ಕೆ ಪದಕಕ್ಕೆ ಕೊರಳೊಡ್ಡಿದ್ದರು. ಲೆಟ್ಸಿಲೆ ಟೆಬಾಗೊ ಸ್ಪರ್ಧೆಯಲ್ಲಿ 19.46 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು, ಇದು ಆಫ್ರಿಕಾದ ದಕ್ಷಿಣಭಾಗದ ದೇಶಕ್ಕೆ ಮೊದಲ ಚಿನ್ನವಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್‌ನ 200 ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನದ ಗೆದ್ದು ಈ ವಿಭಾಗದಲ್ಲಿ ದೇಶಕ್ಕೆ ಮೊದಲ ಬಾರಿಗೆ ಚಿನ್ನದ ಪದಕ ತಂದುಕೊಟ್ಟ ಲೆಟ್ಸಿಲೆ ಟೆಬಾಗೊ ಸ್ವಾಗತಕ್ಕೆ ಅಲ್ಲಿನ ಜನತೆ ಸಜ್ಜಾಗಿದ್ದರು. ಹೀಗಾಗಿ ಬೋಟ್ಸ್‌ವಾನಾದ ಅಧ್ಯಕ್ಷ ಮೊಕ್‌ಗ್ವಿಟ್ಸಿ ಮಸಿಸಿ ಅವರು ಮಂಗಳವಾರ ಮಧ್ಯಾಹ್ನ ನಂತರ ಅರ್ಧದಿನ ರಜೆ ಘೋಷಣೆ ಮಾಡಿದ್ದರು. ಬೊಟ್ಸ್‌ವಾನಾದ ಒಲಿಂಪಿಕ್ ತಂಡವು ಮಂಗಳವಾರ ಟೆಬೊಗೊ ಗೆದ್ದ ಚಿನ್ನದ ಜೊತೆಗೆ ಪುರುಷರ 4×400…
ವ್ಯಾಪಕ ಪ್ರತಿಭಟನೆ ಬಳಿಕ ಬಾಂಗ್ಲಾದೇಶದಿಂದ ಏಕಾಏಕಿ ಪಲಾಯಗೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಕಳೆದ ತಿಂಗಳು ನಡೆದ ಹಿಂಸಾತ್ಮಕ ಘರ್ಷಣೆಯ ಸಮಯದಲ್ಲಿ ಕಿರಾಣಿ ಅಂಗಡಿ ಮಾಲೀಕನ ಸಾವಿನ ಹಿನ್ನೆಲೆಯಲ್ಲಿ ಶೇಖ್ ಹಸೀನಾ ಮತ್ತಿತರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿವಾದಾತ್ಮಕ ಉದ್ಯೋಗ ಮೀಸಲಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಅವಾಮಿ ಲೀಗ್ ನೇತೃತ್ವದ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನವಾಗಿದ್ದ 76 ವರ್ಷದ ಹಸೀನಾ ವಿರುದ್ಧ ಮೊಟ್ಟಮೊದಲ ಬಾರಿಗೆ ಪ್ರಕರಣ ದಾಖಲಾಗಿದೆ. ಮೊಹಮ್ಮದ್‌ಪುರದಲ್ಲಿ ಜುಲೈ 19 ರಂದು ಮೀಸಲಾತಿ ಸುಧಾರಣಾ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಕಿರಾಣಿ ಅಂಗಡಿ ಮಾಲೀಕ ಅಬು ಸೈಯದ್ ಅವರು ಸಾವನ್ನಪ್ಪಿದ್ದರು. ಅವರ ಹಿತೈಷಿ ಈ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ…
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನಗೊಂಡಿದ್ದು ಸದ್ಯ ಭಾರತರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಏಕಾಏಕಿ ಬಾಂಗ್ಲಾ ಬಿಟ್ಟು ಓಡಿಹೋಗಿರುವ ಹಸೀನಾ ಇದೇ ಮೊದಲ ಬಾರಿಗೆ ಹೇಳಿಕೆ ನೀಡಿದ್ದಾರೆ. ಬಾಂಗ್ಲಾ ದಂಗೆ ತಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಮತ್ತು ಲಕ್ಷಾಂತರ ಹುತಾತ್ಮರಿಗೆ ‘ಘೋರ ಅವಮಾನ’ ಎಂದಿದ್ದಾರೆ. 1975 ಆಗಸ್ಟ್ 15ರ ದುರಂತ ಘಟನೆಗಳನ್ನು ನೆನಪಿಸಿಕೊಂಡಿರುವ ಶೇಕ್ ಹಸೀನಾ, ತಮ್ಮ ತಂದೆ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರನ್ನು ಸೇರಿ ಅನೇಕ ಕುಟುಂಬ ಸದಸ್ಯರು ಮತ್ತು ಸಹೋದರ ಮತ್ತು ಚಿಕ್ಕಪ್ಪನಂತಹ ಸಹವರ್ತಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬಂಗಬಂಧು ಅವರಿಗೆ ಆಳವಾದ ಗೌರವವನ್ನು ವ್ಯಕ್ತಪಡಿಸಿದ್ದು ಸಂತ್ರಸ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಶೇಖ್ ಹಸೀನಾ ಅವರು ಇತ್ತೀಚಿನ ಹಿಂಸಾಚಾರ ಮತ್ತು ಅಶಾಂತಿಗೆ ಬಲಿಯಾದವರಿಗೆ ಸಂತಾಪ ಸೂಚಿಸಿದರು. ಬಾಂಗ್ಲಾ ದಂಗೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೊಲೀಸರು ಸೇರಿದಂತೆ ಅನೇಕ ಅಮಾಯಕರ ಜೀವಗಳನ್ನು ಕಳೆದುಕೊಂಡಿತು. ಜುಲೈನಿಂದ ದೇಶದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆಗೆ ಒತ್ತು ನೀಡಿದ ಅವರು, ಹಿಂಸಾಚಾರ ಮತ್ತು ರಕ್ತಪಾತದಲ್ಲಿ…
ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮ್ಮನಂತೆ ತಾನು ಕೂಡ ಖ್ಯಾತ ನಟಿಯಾಗ್ಬೇಕು ಎಂದು ಜಾನ್ವಿ ಸಾಕಷ್ಟು ಕಷ್ಟ ಪಡ್ತಿದ್ದಾರೆ. ಈ ಮಧ್ಯೆ ನಟಿ ಬಾಯ್ ಫ್ರೆಂಡ್ ಜೊತೆ ತಿರುಪತಿಗೆ ತೆರಳಿದ್ದು ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶ್ರೀದೇವಿ ಅವರ 61ನೇ ಜನ್ಮದಿನವಾದ ಹಿನ್ನೆಲೆ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಇಬ್ಬರು ತನ್ನ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ತಾಯಿಯೊಂದಿಗೆ ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದಲ್ಲದೇ ಜಾನ್ವಿ, ತಾಯಿ ಶ್ರೀದೇವಿ ಅವರ ಜನ್ಮದಿನದಂದು ಗೆಳೆಯ ಶಿಖರ್ ಪಹಾಡಿಯಾ ಅವರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಶಿಖರ್ ಜೊತೆ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಾನ್ವಿ ಹಳದಿ ಬಣ್ಣದ ಸೀರೆ ಅದಕ್ಕೆ ಮ್ಯಾಚ್ ಆಗುವಂತೆ ಗ್ರೀನ್ ಕಲರ್ ಬ್ಲೌಸ್ ಧರಿಸಿದ್ದರು. ಅಲ್ಲದೆ ಹೆವಿ ಸೊಂಟದ ಪಟ್ಟಿಯನ್ನು ನಟಿ ಧರಿಸಿದ್ದರು. ಅಮ್ಮನ ಶ್ರೀದೇವಿ ಸ್ಟೈಲ್ ನಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ರು.…
ಮಾಜಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಯುನೈಟೆಡ್ ಸ್ಟೇಟ್ಸ್‌ಗೆ ಭಾರತದ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡರು. 61 ವರ್ಷ ವಯಸ್ಸಿನ ಕ್ವಾತ್ರಾ ಅವರು ಇತ್ತೀಚಿನವರೆಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು. ಇದಕ್ಕೂ ಮುನ್ನ ಕ್ವಾತ್ರಾ ಅವರು ಫ್ರಾನ್ಸ್ ಮತ್ತು ನೇಪಾಳಕ್ಕೆ ಭಾರತದ ರಾಯಭಾರಿಯಾಗಿದ್ದರು, ನಂತರ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಕಳೆದ ಜುಲೈ 14 ರಂದು ವಿದೇಶಾಂಗ ಸೇವೆಯಿಂದ ನಿವೃತ್ತರಾಗಿದ್ದರು. ಕ್ವಾತ್ರಾ ಅವರು ತರಂಜಿತ್ ಸಿಂಗ್ ಸಂಧು ಅವರ ಉತ್ತರಾಧಿಕಾರಿಯಾಗಿದ್ದಾರೆ. ಈ ವರ್ಷಾರಂಭದಲ್ಲಿ ವಿದೇಶಿ ಸೇವೆಯಿಂದ ನಿವೃತ್ತರಾದ ಕ್ವಾತ್ರಾ 2020 ರಿಂದ 2024ರ ಅವಧಿಗೆ ಯುಎಸ್‌ನಲ್ಲಿ ಭಾರತದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅಮೆರಿಕದಲ್ಲಿ ಭಾರತದ ನೂತನ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ನಡುವೆ ಅಮೆರಿಕಗೆ ಭಾರತದ ಹೊಸ ರಾಯಭಾರಿಯಾಗಿ ಕ್ವಾತ್ರಾ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ. ನಾವೆಲ್ಲರೂ (ಭಾರತೀಯ ರಾಯಭಾರ ಕಚೇರಿಯಲ್ಲಿ) ಅವರ ನಾಯಕತ್ವದಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ಚಾರ್ಜ್ ಡಿ ಅಫೇರ್ಸ್ ಶ್ರೀಪ್ರಿಯಾ…
ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ ಕವನದ ಸಾಲುಗಳು ಶ್ರಾವಣ ಮಾಸದ ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ. ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ…