Author: Prajatv Kannada

ಗದಗ:- ಪೈಪ್ ಲೈನ್ ದುರಸ್ಥಿ ವೇಳೆ ಅವಘಡ ಸಂಭವಿಸಿದ್ದು, ಮಣ್ಣು ಕುಸಿದ ಹಿನ್ನೆಲೆ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರರಾಗಿದ್ದಾರೆ. 24×7 ಪೈಪ್ ಲೈನ್ ದುರಸ್ಥಿ ಮಾಡುವಾಗ ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ. ಓರ್ವ ಗಾಯಾಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದರೆ, ಮತ್ತೊಬ್ಬನಿಗೆ ಗಂಭೀರಗಾಯವಾಗಿದೆ. ಗದಗ ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ‌ ಪೈಪ್ ಲೈನ್ ರಿಪೇರಿ ವೇಳೆ ಘಟನೆ ಜರುಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ನಜೀರ್ ಸಾಬ್, ಮಂಜುನಾಥ್ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೇ ಜಿಮ್ಸ್ ಆಸ್ಪತ್ರೆಯಲ್ಲಿ ನಜೀರ್ ಸಾಬ್ ನವಲಗುಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಾಯಾಳು ಮಂಜಯನಾಥ್ ಪಲ್ಲೇದ್ ಗೆ ಚಿಕಿತ್ಸೆ ಮುಂದುವರೆದಿದೆ. ಗ್ಯಾಸ್ ಪೈಪ್ ಲೈನ್ ರಿಪೇರಿಗೆ ವೇಳೆ ನೀರಿನ ಪೈಪ್ ಡ್ಯಾಮೇಜ್ ಗೊಂಡಿತ್ತು. ಈ ವೇಳೆ ನೀರಿನ ಪೈಪ್ ರಿಪೇರಿ ಮಾಡಲು ಇಬ್ಬರು ಕಾರ್ಮಿಕರು ಮುಂದಾಗಿದ್ದರು. ಏಕಾಏಕಿ ಭೂಮಿ ಕುಸಿತದಿಂದಾಗಿ ಮಣ್ಣಿನ ಅಡಿಯಲ್ಲಿ ಕಾರ್ಮಿಕರು ಸಿಲುಕಿದ್ದರು. ಕೂಡಲೇ ಜಿಮ್ಸ್ ಆಸ್ಪತ್ರೆಗೆ ಕಾರ್ಮಿಕರನ್ನ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು.…

Read More

ಬೆಂಗಳೂರು:- ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಕನ್ನಡದ ಖ್ಯಾತ ನಿರ್ಮಾಪಕ ಆಸ್ಪತ್ರೆಗೆ ದಾಖಲಾಗಿದ್ದಾರೆ.ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಕೆ. ಮಂಜು ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ನಿರ್ಮಾಪಕ ಕೆ ಮಂಜು ಅವರು ಇಂದು ಸಂಜೆ ದಿಢೀರ್​ ಆಗಿ ಎದೆ ನೋವು ಕಾಣಿಸಿದೆ. ತಕ್ಷಣ ಕೆ. ಮಂಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನಿರ್ಮಾಪಕ ಕೆ.ಮಂಜು ಮಗ ಮಾತನಾಡಿ, ನಿರ್ಮಾಪಕ ಕೆ.ಮಂಜು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆ.ಮಂಜು ಆರೋಗ್ಯದಲ್ಲಿ ಕೊಂಚ ಚೇತರಿಕೆ ಆಗಿದ್ದು. ವೈದ್ಯರು ಇಂದು ರಾತ್ರಿ ಇಲ್ಲ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದಾರಂತೆ. ಕೆ.ಮಂಜು ಅರೋಗ್ಯದ ಬಗ್ಗೆ ಮಗ ಶ್ರೇಯಸ್ ಮಂಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಸ್ವತಃ ಮಂಜು ಅವರು ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಕೆಲಸ ಹೆಚ್ಚಾಗಿ ಒತ್ತಡ ಉಂಟಾಗಿತ್ತು, ಹೀಗಾಗಿ ವೈದ್ಯರ ಸಲಹೆ ಮೇರೆಗೆ ಜನರಲ್ ಬಾಡಿ ಚೆಕಪ್ ಮಾಡಿಸಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಹಿಂದೆ ಆಪರೇಷನ್…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಬೆಸ್ಕಾಂ ಸಿಬ್ಬಂದಿಗಳ ತುರ್ತು ಕಾಮಗಾರಿ ಹಿನ್ನೆಲೆ, ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಓಬಳೇಶ್ ಕಾಲೋನಿ, ರೋಸ್ ಗಾರ್ಡನ್, ರಾಯಪುರ, ಬಿನ್ನಿ ಪೇಟ್, ಪಾದರಾಯನಪುರ, ಜೆಜೆಆರ್ ನಗರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜಂಥಾ ಕಾಲೋನಿ, ಶಾಮನಾ ಗಾರ್ಡನ್, ರಫತ್ ನಗರ, ರಂಗನಾಥ್ ಕಾಲೋನಿ, ಹೊಸಹಳ್ಳಿ ಮುಖ್ಯರಸ್ತೆ, ಪರ‍್ಕ್ ನಾವು ಬಿನ್ನಿ ಪೇಟೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾಟ್ರಸ್, ಎಸ್‌ಡಿ ಮಠ, ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್, ಮನರ‍್ತಿ ಪೆಟ್, ಸುಲ್ತಾನ್ ಪೆಟ್, ನಲ್ಬಂಡ್‌ವಾಡಿ ಎದುರು ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಗೋಪಾಲನ್ ಅಪಾರ್ಟ್‌ಮೆಂಟ್, ಮರಿಯಪ್ಪ ಎ. ಕೆಪಿಎಸ್ ಮಠ, ಗಂಗಪ್ಪ ಗಾರ್ಡನ್, ಭುವನೇಶ್ವರಿ ನಗರ,…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಮಳೆ ಆಗಿದ್ದು,ವಾಹನ ಸವಾರರು ಹೈರಾಣಾಗಿದ್ದಾರೆ.ಮೆಜೆಸ್ಟಿಕ್, ಶಾಂತಿನಗರ, ತ್ಯಾಗರಾಜನಗರ, ಜಯನಗರ, ಜೆಪಿನಗರ, ಶ್ರೀನಗರ, ಕೆಆರ್​ ಮಾರುಕಟ್ಟೆ, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ರಸ್ತೆ, ವಿಜಯನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ, ಪೀಣ್ಯ, ಹೆಬ್ಬಾಳ, ಯಲಹಂಕ, ಬನ್ನೇರುಘಟ್ಟ ರಸ್ತೆ, ಕೆ.ಆರ್​.ಪುರಂ, ಟಿನ್ ಫ್ಯಾಕ್ಟರಿ ಮಹದೇವಪುರ, ಬೆಳ್ಳಂದೂರು, ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಸಿಲ್ಕ್​ ಬೋರ್ಡ್​, ಬಿಟಿಎಂ ಲೇಔಟ್, ಜೆ.ಪಿ.ನಗರ, ಬನಶಂಕರಿ, ಕತ್ರಿಗುಪ್ಪೆ, ಪದ್ಮನಾಭನಗರ, ನಾಯಂಡಹಳ್ಳಿ, ಕೆಂಗೇರಿ, ನಾಗರಬಾವಿ, R.Rನಗರ, ಕೋಣನಕುಂಟೆ, ತಲಘಟ್ಟಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ನಾಗಮಂಗಲ, ನಾಯಕನಹಟ್ಟಿ, ಬರಗೂರು, ನಾರಾಯಣಪುರ, ಕವಡಿಮಟ್ಟಿ, ಕಕ್ಕೇರಿ, ಹೆಸರಘಟ್ಟ, ಬೆಳ್ಳೂರು, ಕೆಂಭಾವಿ, ಚಿತ್ರದುರ್ಗ, ಬೇಲೂರು, ಕೃಷ್ಣರಾಜಪೇಟೆ, ಹುಣಸಗಿ, ರೋಣ, ರಾಯಚೂರು, ಮುರಗೋಡು, ಯಡವಾಡ, ಗುಬ್ಬಿ, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಮಾಗಡಿ, ಪರಶುರಾಂಪುರ, ಶಾಹಪುರ, ಸೇಡಂ, ಶೋರಾಪುರ, ಬಾದಾಮಿ, ಯಲಬುರ್ಗಾದಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ, ಎಚ್​ಎಎಲ್​ನಲ್ಲಿ 28.3 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.7 ಡಿಗ್ರಿ ಸೆಲ್ಸಿಯಸ್​…

Read More

ಬೆಂಗಳೂರು:- ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ತಾಯಿ ವಿಧಿವಶರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸರೋಜಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಅವರು ನಿಧನರಾಗಿದ್ದಾರೆ. ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ ಸುದೀಪ್​ರ ಜೆಪಿ ನಗರ ನಿವಾಸಕ್ಕೆ ತರಲಾಗುವುದು, ಜೆಪಿ ನಗರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಲಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಸುದೀಪ್ ಮನೆಯಲ್ಲಿ ಶೋಕದ ವಾತವರಣ ಮನೆ ಮಾಡಿದೆ.

Read More

ಈ ವಾರದ ಬಿಗ್ ​ಬಾಸ್ ಕನ್ನಡ ಸೀಸನ್ 11ರ ವಾರದ ಪಂಚಾಯಿತಿಯ ಎಪಿಸೋಡ್ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಮನೆಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಭಾರಿ ಜಗಳ, ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿರುವುದು, ಸ್ಪರ್ಧಿಗಳು ವರ್ತಿಸಿದ ರೀತಿ, ಮಾತನಾಡಿದ ರೀತಿ ಹಲವು ವಿಷಯಗಳಿಗೆ ಸುದೀಪ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ಕೂತಿದ್ದ ಅಭಿಮಾನಿಗಳು ಕಿಚ್ಚನ ಡಿಸಿಷನ್ ಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಎಂದಿನಂತೆ ಸ್ಟೈಲ್ ಆಗಿ ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಟ್ಟ ಸುದೀಪ್ ಸ್ಪರ್ಧಿಗಳ ಜೊತೆ ಸಣ್ಣದಾಗಿ ಉಭಯ ಕುಶಲೋಪರಿ ನಡೆಸಿದರು. ಆ ನಂತರ ಬಿಗ್​ಬಾಸ್ ಮನೆಯೊಳಗೆ ಒಂದು ಕೇಕ್ ಒಂದನ್ನು ಕಳಿಸಿದರು. ಕೇಕ್ ಮೇಲೆ ಅಭಿನಂದನೆಗಳು ಎಂದು ಬರೆಯಲಾಗಿದ್ದು ಕೇಕ್ ನೋಡಿ ಸ್ಪರ್ಧಿಗಳೆಲ್ಲ ಬಹಳ ಖುಷಿಯಾದರು. ವಿಷಯ ಗೊತ್ತಿಲ್ಲದ ಸ್ಪರ್ಧಿಗಳು ಖುಷಿಯಿಂದ ಕೇಕ್ ತಿಂದರು. ಕೇಕ್ ಕಳಿಸಿದ ಜನರಿಗೆ ಥ್ಯಾಂಕ್ಸ್ ಎಂದು ಖುಷಿಯಿಂದ ಹೇಳಿದರು. ಕೇಕ್ ಕತ್ತರಿಸುವಾಗ ಹಾಡುಗಳನ್ನು ಸಹ ಹಾಡಿದರು. ಕೆಲವು ಸ್ಪರ್ಧಿಗಳು…

Read More

ಬೆಂಗಳೂರು: ರಾಜ್ಯದಲ್ಲಿ ಮಳೆ  ಬೆನ್ನಲ್ಲೇ ತರಕಾರಿ ಬೆಲೆ ಏರಿಕೆಯಾಗಿದೆ. ಹಿಂಗಾರು ಮಳೆ ಎಫೆಕ್ಟ್‌ಗೆ ಗ್ರಾಹಕರು ಹೈರಾಣಾಗಿದ್ದಾರೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಯಷ್ಟು ತರಕಾರಿ ಪೂರೈಕೆಯಾಗದ ಹಿನ್ನೆಲೆ ಹಾಗೂ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ನಷ್ಟವಾದ ಹಿನ್ನೆಲೆ 9 ತಿಂಗಳಲ್ಲಿ ಮೊದಲ ಬಾರಿಗೆ ತರಕಾರಿ ಹಣದುಬ್ಬರ 9.24ಕ್ಕೆ ಏರಿಕೆಯಾಗಿದೆ. https://youtu.be/HDZWd5XQAq4?si=4kuU_YyPDo14N6zc ದೈನಂದಿನ ಅಡುಗೆಗೆ ಬೇಕಾದ ಈರುಳ್ಳಿ, ಆಲುಗೆಡ್ಡೆ, ಟೊಮಾಟೊ ದರಗಳ ಏರಿಕೆಯಿಂದ ಗ್ರಾಹಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಳ್ಳುಳ್ಳಿ ಕೆಜಿಯೊಂದಕ್ಕೆ 320 ರೂ. ಇಂದ 440 ರೂ. ದರ ಏರಿಕೆ ಆಗಿದ್ದು, ಈರುಳ್ಳಿ ದರ 80ರ ಆಸುಪಾಸಿನಲ್ಲಿದೆ. ತರಕಾರಿ ದರ ಇನ್ನೂ ಹೆಚ್ಚುವ ಆತಂಕ ಗ್ರಾಹಕರಲ್ಲಿ ಮನೆ ಮಾಡಿದೆ. ಯಾವ ತರಕಾರಿ ದರ ಎಷ್ಟಿತ್ತು? ಎಷ್ಟಾಗಿದೆ? ದಪ್ಪ ಈರುಳ್ಳಿ: 58 – 79 ರೂ. ಸಾಂಬಾರ್ ಈರುಳ್ಳಿ: 60 – 85 ರೂ. ಟೊಮಾಟೊ: 60- 85 ರೂ. ಹಸಿ ಮೆಣಸಿನಕಾಯಿ: 50 – 70 ರೂ. ಬೀಟ್‌ರೂಟ್: 45 -…

Read More

ಕಲಘಟಗಿ (ಧಾರವಾಡ) : ಪಟ್ಟಣದ ಮುಖ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಎಪಿಎಂಸಿ, ಬಮ್ಮಿಗಟ್ಟಿ ಕ್ರಾಸ್, ಮೀನು ಮಾರ್ಕೆಟ್, ಮಚ್ಚಿಗೆರ ಓಣಿ, ಯುವ ಶಕ್ತಿ ಸರ್ಕಲ್, ಚೌಡಿ ಕ್ರಾಸ್, ಬಸ್ ನಿಲ್ದಾಣ, ಮುಂತಾದ ಕಡೆಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಜನಸಾಮಾನ್ಯರು ನಡೆದಾಡುವುದು ಕಷ್ಟಕರವಾಗಿದೆ. https://youtu.be/u96Q3mN2f-c?si=7DklMbiozitcOSxR ಪ್ರತಿನಿತ್ಯ ಕೆಲವೊಂದು ಪ್ರದೇಶಗಳಲ್ಲಿ ಹತ್ತು ರಿಂದ ಹದಿನೈದು ನಾಯಿಗಳ ಗುಂಪು ಪ್ರತಿನಿತ್ಯ ಚಿಕ್ಕ ಮಕ್ಕಳು ಮಾರ್ಕೆಟ್ ಸ್ಥಳದ ದಾರಿಯಲ್ಲಿ ಹೋಗುವಾಗ ಕೈಯಲ್ಲಿರುವ ಪದಾರ್ಥಗಳನ್ನು ತೆಗೆದುಕೊಂಡು ಬರುವಾಗ ಆ ಪದಾರ್ಥಗಳನ್ನು ತಿನ್ನುವ ಆಸೆಗೆ ನಾಯಿಗಳು ಗುಂಪು ಭಯ ಹುಟ್ಟಿಸುತ್ತಿವೆ. ರಸ್ತೆಗಳಲ್ಲಿ ವಾಹನ ಸವಾರರು ಸಂಚಾರ ಮಾಡುವಾಗ ನಾಯಿಗಳ ಗುಂಪು ಓಡಿ ಹೋಗುವಾಗ ವಾಹನಗಳಿಗೆ ಹಾಗೂ ವಾಹನ ಸವಾರರಿಗೆ ಅಡ್ಡವಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಮುಂಡಗೋಡ ಹಾಗೂ ಹಳಿಯಾಳ ರಸ್ತೆ ಉದ್ದಕ್ಕೂ ಮಾಂಸ ಆಹಾರ ಪದಾರ್ಥ ತಿನ್ನಲು ನಾಯಿಗಳ ಗುಂಪುಗಳನ್ನು ನೋಡಿದರೆ ಭಯಂಕರವಾಗುತ್ತದೆ. ರಾತ್ರಿ ವೇಳೆ ಬೈಕ್ ಸವಾರರಿಗೆ ದಾರಿಯಲ್ಲಿ ಹೋಗುವರಿಗೆ ಪ್ರತಿನಿತ್ಯ ಸಮಸ್ಯೆ…

Read More

ಸ್ಯಾಂಡಲ್ ವುಡ್ ಗಾಯಕ, ನಟ ವಸಿಷ್ಠ ಸಿಂಹ ಅವರನ್ನು ಯಾವ ಪಾತ್ರಗಳಲ್ಲಿ ನೋಡಲು ಬಯಸುತ್ತೀರಿ..? | Prajaa Poll | Prajaatv ka ನಾಯಕ ಪಾತ್ರದಲ್ಲಿ ಖಳನಟನ ಪಾತ್ರದಲ್ಲಿ ಗಾಯಕರಾಗಿ

Read More