ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ ಕವನದ ಸಾಲುಗಳು ಶ್ರಾವಣ ಮಾಸದ ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ. ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ. ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ…
Author: Prajatv Kannada
ಬೆಂಗಳೂರು: ʼಕುಂದಾಪ್ರ ಕನ್ನಡ ಪ್ರತಿಷ್ಠಾನ, ಬೆಂಗಳೂರುʼ ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ 2 ದಿನಗಳ ಅದ್ಧೂರಿ ʼಕುಂದಾಪ್ರ ಕನ್ನಡ ಹಬ್ಬʼವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆ.17ರ ಸಂಜೆ 5ಕ್ಕೆ ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂ. https://youtu.be/OM_JYTYmFfk?si=C2rHUaopers2LOiK 3ರಲ್ಲಿರುವ ವೈಟ್ ಪೆಟಲ್ಸ್‌ನಲ್ಲಿ ಆ. 17 ಮತ್ತು 18ರಂದು ನಡೆಯಲಿರುವ ಈ ಹಬ್ಬದ ಕುರಿತು ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಬಾರ್ಕೂರು ಅವರು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಶನಿವಾರ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಊರ ಗೌರವದ ಸನ್ಮಾನ ಇರಲಿದೆ. ಅಂದು ಮುಖ್ಯ ಅತಿಥಿಗಳಾಗಿ ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಂಗೀತ ನಿರ್ದೇಶಕ ರವಿ ಬಸ್ರೂರು, ಮಾರಣಕಟ್ಟೆ ಎಂ.ಎಸ್. ಮಂಜ ಚಾರಿಟಬಲ್ ಟ್ರಸ್ಟ್‌ನ ಕೃಷ್ಣಮೂರ್ತಿ ಮಂಜ, ಲೈಫ್‌ಲೈನ್ ಫೀಡ್ಸ್ ಪ್ರೈ.ಲಿ. ಎಂಡಿ ಕಿಶೋರ್ ಕುಮಾರ್ ಹೆಗ್ಡೆ ಇರಲಿದ್ದಾರೆ. ಭಾನುವಾರ ಸಂಜೆ 5ರ ಸಮರೋಪ ಸಮಾಂಭದಲ್ಲಿ ಪದ್ಮಶ್ರೀ…
ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಕುರಿತು ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿವೈ ವಿಜಯೇಂದ್ರ ತಿಳಿಸಿದರು. https://youtu.be/p4nE2UD-G4I?si=mxH6gSjAPlZg4Xmy ಬೆಂಗಳೂರಿನಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಯೋಗೀಶ್ವರ್ ಅವರು ಚನ್ನಪಟ್ಟಣದಲ್ಲಿ ತಾವೂ ಸ್ಪರ್ಧಾಕಾಂಕ್ಷಿ ಎಂದು ಹೇಳಿದ್ದು ತಪ್ಪೆನ್ನುವುದಿಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಅವರಿಗೆ ಅವರದ್ದೇ ಆದ ಹಿಡಿತ, ಬೆಂಬಲ ಇದೆ. ಆದರೆ ಬಿಜೆಪಿ-ಜೆಡಿಎಸ್ ಪಕ್ಷಗಳು ಒಟ್ಟಾಗಿ ಹೋಗುವ ಸಂದರ್ಭ ಇದು. ಅಲ್ಲಿ ಕುಮಾರಸ್ವಾಮಿ ಅವರು ಆಯ್ಕೆ ಆಗಿದ್ದರು. ಎರಡೂ ಪಕ್ಷಗಳ ವರಿಷ್ಠರು ದೆಹಲಿ ಮಟ್ಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿವರಿಸಿದರು ಬಿಜೆಪಿ- ಜೆಡಿಎಸ್ಪ ಕ್ಷಗಳು ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸಿದ್ದೇವೆ. ವಿಧಾನಸಭಾ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಸಮಿತಿ ರಚಿಸಿ ಅಭಿಪ್ರಾಯ ಪಡೆದಿದ್ದೇವೆ. ಅಶ್ವಥ್ ನಾರಾಯಣ್ ಅವರ ಸಮಿತಿಯ ವರದಿ ಬಗ್ಗೆ ಮಾಹಿತಿ ಇಲ್ಲ. ನಾನು ಕೂಡ ಅಶ್ವಥ್ ನಾರಾಯಣ್ ಜೊತೆ ಚರ್ಚೆ…
ಬೆಂಗಳೂರು: ಪ್ರಧಾನಿ ಮೋದಿಗೆ ಟೀಕಿಸಿದ್ದಕ್ಕೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಹೌದು.. ಹದಿನೈದು ಜನರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿದೆ.ಯುವಕನೊಬ್ಬ ಪ್ರಧಾನಿ ಮೋದಿಯನ್ನು ಟೀಕಿಸಿ ಸಿದ್ದರಾಮಯ್ಯ ಜನಪರ ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿ ಹೊಗಳಿರುವುದೇ ಈ ಹಲ್ಲೆಯ ಹಿಂದಿನ ಕಾರಣ. https://youtu.be/a3eGRfmPNyE?si=NSz9tDpVyF5tQCPf ಈ ಯುವಕನ ಮೇಲೆ ರೊಚ್ಚಿಗೆದ್ದ ಗುಂಪು ಮೇಲೆ ಹಲ್ಲೆ ಮಾಡಿ ಮೋದಿ, ಮೋದಿ ಎಂದು ಕೂಗು ಎಂದು ಬಲವಂತ ಮಾಡಿದೆ. ಆದರೆ ಯುವಕ ಇದಕ್ಕೆ ಒಪ್ಪದಿದ್ದಾಗ ಮತ್ತಷ್ಟು ಹಲ್ಲೆ ಮಾಡಿದೆ. ನೀನು ಸಿದ್ದರಾಮಯ್ಯ ಫಾಲೋವರ್ ಆಗಿದ್ದರೆ ನಿಮ್ಮ ಮನೆಯಲ್ಲಿ ಇಟ್ಟುಕೊ ಎಂದು ಬೆದರಿಕೆ ಹಾಕಿದೆ. ಅಲ್ಲದೆ, ಮೋದಿ ಎಂದು ಹೆಸರು ಹೇಳು ಎಂದು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಗುಂಪು ಯುವಕನ ಮೇಳ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ
ಯಾದಗಿರಿ: ನದಿ ದಡಕ್ಕೆ ನೀರು ಕುಡಿಯಲು ಹೋಗಿದ್ದ ವ್ಯಕ್ತಿ ಮೇಲೆ ಮೊಸಳೆ ದಾಳಿ ಮಾಡಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬದುಕುಳಿರುವಂತಹ ಘಟನೆ ಜಿಲ್ಲೆಯ ವಡಗೇರ ತಾಲೂಕಿನ ಶಿವಪುರ ಬಳಿ ನಡೆದಿದೆ. ಶಿವಪುರ ಗ್ರಾಮದ ನಿವಾಸಿ ಭೀಮಾಶಂಕರ ಮೊಸಳೆ ದಾಳಿಗೆ ಒಳಗಾದ ವ್ಯಕ್ತಿ. ಮೊಸಳೆ ದಾಳಿಯಿಂದ ಬಲಗೈ ಕಳೆದುಕೊಂಡಿದ್ದಾರೆ. ಭೀಮಾಶಂಕರ ನದಿ ತೀರಕ್ಕೆ ದನ ಮೇಯಿಸಲು ಹೋಗಿದ್ದರು. ಈ ವೇಳೆ ನೀರು ಕುಡಿಯಲು ಹೋದಾಗ ದಾಳಿ ಮಾಡಿದೆ. ಗಾಯಗೊಂಡ ಭೀಮಾಶಂಕರಗೆ ರಾಯಚೂರಿನ ರಿಮ್ಸ್ಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಮಾಡಿರುವ ನಿರ್ಧಾರದಿಂದ ಚಿತ್ರರಂಗದಲ್ಲಿ ಭಿನ್ನಭಿಪ್ರಾಯ ಮೂಡಿದೆ. ಕಳೆದ ಕೆಲ ದಿನಗಳ ಹಿಂದೆ ಸಭೆ ನಡೆಸಿದ ನಿರ್ಮಾಪಕ, ವಿತರಕರ ಸಂಘ ನಟ ಧನುಶ್, ವಿಶಾಲ್ ಅವರುಗಳ ವಿರುದ್ಧ ನಿಷೇಧ ಹೇರಿತ್ತು, ಬೇಡಿಕೆಗಳಿಗೆ ಒತ್ತಾಯಿಸಿ ನವೆಂಬರ್ 1 ರಿಂದ ಚಿತ್ರೀಕರಣ ಬಂದ್ ಮಾಡುವ ನಿರ್ಧಾರ ಪ್ರಕಟಿಸಿತ್ತು. ಧನುಶ್ ಹಾಗೂ ವಿಶಾಲ್ ಮೇಲೆ ನಿಷೇಧ ಹೇರಿರುವುದನ್ನು ತೀವ್ರವಾಗಿ ಖಂಡಿಸಿದ್ದ ಹಲವು ನಟರು. ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದರು. ನಿರ್ಮಾಪಕರ ಸಂಘ ಧನುಶ್ಗೆ ವಿರುದ್ಧವಾಗಿ ನಿಂತಿದ್ದರೆ ತಮಿಳು ಚಿತ್ರರಂಗದ ಕಲಾವಿದರ ಸಂಘ ಧನುಶ್ ಪರವಾಗಿ ನಿಂತಿದ್ದು, ಇದೀಗ ನಿರ್ಮಾಪಕರೊಟ್ಟಿಗೆ ಸಂಧಾನಕ್ಕೆ ಮುಂದಾಗಿದೆ. ತಮಿಳು ಕಲಾವಿದರ ಸಂಘದ ಅಧ್ಯಕ್ಷ ನಾಸರ್ ಅವರ ಮುಂದಾಳತ್ವದಲ್ಲಿ ಕಲಾವಿದರ ಸಂಘವು ಧನುಶ್, ವಿಶಾಲ್ ಇನ್ನಿತರರ ಪರವಾಗಿ ತಮಿಳು ಚಿತ್ರರಂಗ ನಿರ್ಮಾಪಕ ಕೌನ್ಸಿಲ್ನ ಸದಸ್ಯರೊಟ್ಟಿಗೆ ಸಂಧಾನ ನಡೆಸಲಿದೆ. ಸಂಧಾನ ಸಭೆಗೂ ಮುನ್ನ ಆಂತರಿಕ ಸಭೆಯನ್ನು ನಡೆಸಲಾಗಿದ್ದು, ಸಭೆಯಲ್ಲಿ ಅಧ್ಯಕ್ಷ ನಾಸರ್ ಜೊತೆಗೆ ಉಪಾಧ್ಯಕ್ಷ ಪೂಚಿ ಮುರುಗನ್, ಖಜಾಂಚಿ ಕಾರ್ತಿ…
ನಟಿ ಸಮಂತಾರಿಂದ ದೂರವಾಗಿದ್ದ ನಟ ನಾಗಚೈತನ್ಯ ಎರಡನೇ ಭಾರಿ ಮದುವೆಯಾಗಲು ರೆಡಿಯಾಗಿದ್ದಾರೆ. ಆ.8ರಂದು ನಾಗಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಹಿಂದೆ ನಾಗ ಚೈತನ್ಯ ಹಾಗೂ ಸಮಂತಾ ದೂರಾಗತ್ತಾರೆ ಎಂದು ಭವಿಷ್ಯ ನುಡಿದಿದ್ದ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಈಗ ನಾಗ ಚೈತನ್ಯ ಹಾಗೂ ಶೋಭಿತಾರ ದಾಂಪತ್ಯದ ಕುರಿತು ಭವಿಷ್ಯ ನುಡಿದಿದ್ದು, ಈ ಇಬ್ಬರೂ ಮೂರು ವರ್ಷಗಳ ಬಳಿಕ ದೂರಾಗುತ್ತಾರೆ. ಇವರಿಬ್ಬರು ದೂರಾಗಲು ಹೆಣ್ಣೊಬ್ಬಳು ಕಾರಣ ಆಗಲಿದ್ದಾಳೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಭವಿಷ್ಯವೇ ವೇಣು ಸ್ವಾಮಿಗೆ ಮುಳುವಾಗುವಂತಿದ್ದು ವೇಣು ಸ್ವಾಮಿ ವಿರುದ್ಧ ದೂರು ದಾಖಲಾಗಿದೆ ವೇಣು ಸ್ವಾಮಿ ವಿರುದ್ಧ ಅಕ್ಕಿನೇನಿ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಸೈಬರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. ಇದರ ನಡುವೆ ವೇಣು ಸ್ವಾಮಿ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದು, ‘ನಾನು ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಜಾತಕ ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಈ ಹಿಂದೆ ನಾಗ ಚೈತನ್ಯ-ಸಮಂತಾರ…
ಕೊಪ್ಪಳ:- ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಇಂದು ಸಂಜೆಯಿಂದ ಆರಂಭವಾಗಲಿದೆ. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ತುಂಡಾಗಿ ನೀರುಪೋಲಾಗುತ್ತಿರುವ ಕಾರಣ ಸದ್ಯ ತಾತ್ಕಾಲಿಕ ಗೇಟ್ ಅಳವಡಿಕೆಗೆ ತುಂಗಭದ್ರಾ ಡ್ಯಾಮ್ ಮಂಡಳಿ ನಿರ್ಧಾರ ಕೈಗೊಂಡಿದೆ. ಜಲಾಯಶಯದ ನೀರು ಖಾಲಿಯಾಗುವ ಮೊದಲೇ ತಾತ್ಕಾಲಿಕ ಗೇಟ್ ಅಳವಡಿಕೆಗೆ ಯತ್ನಿಸಲಾಗುತ್ತಿದೆ. ನೀರಿನಲ್ಲೇ ಗೇಟ್ ಇಳಿಸಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ತಜ್ಞರ ತಂಡ ಪ್ರಯತ್ನಿಸಲಿದೆ. ತಾತ್ಕಾಲಿಕ ಹೊಸ ಗೇಟ್ ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ತಯಾರಾಗಿದೆ. ನಾರಾಯಣ ಇಂಜಿನಿಯರ್ಸ್, ಹಿಂದೂಸ್ತಾನ್ ಇಂಜಿನಿಯರ್ಸ್, ಜಿಂದಾಲ್ ತಂತ್ರಜ್ಞರ ತಂಡದಿಂದ ಗೇಟ್ ಅಳವಡಿಕೆ ಕೆಲಸ ನಡೆಯಲಿದೆ. ಗೇಟ್ ಅಳವಡಿಕೆ ಯಶಸ್ವಿಯಾದರೆ ಅಪಾರ ಪ್ರಮಾಣದ ನೀರು ಉಳಿಯಲಿದೆ. ಹೀಗಾಗಿ ತಾತ್ಕಾಲಿಕ ಹೊಸ ಗೇಟ್ ಅಳವಡಿಕೆಗೆ ಡ್ಯಾಮ್ ಮಂಡಳಿ ಮುಂದಾಗಿದೆ. ಕೊಪ್ಪಳ ತಾಲೂಕಿನ ಮುಶಿರಾಬಾದ್ ಬಳಿಯಿರುವ ತುಂಗಭದ್ರಾ ಡ್ಯಾಮ್ನ 19ನೇ ಕ್ರಸ್ಟ್ ಗೇಟ್ ತುಂಡಾಗಿ ಎರಡು ದಿನದಲ್ಲಿ 14 ಟಿಎಂಸಿ ನೀರು ಹೊರಕ್ಕೆ ಹರಿದುಹೋಗಿದೆ. ಆಗಸ್ಟ್ 10ರಂದು ಡ್ಯಾಮ್ನಲ್ಲಿ ಬರೋಬ್ಬರಿ 105…
ನವದೆಹಲಿ: ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಮತ್ತು ಅದರ ಸಂಸ್ಥಾಪಕ ಬಾಬಾ ರಾಮ್‍ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪವನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿದೆ. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠವು ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ತೀರ್ಪು ಪ್ರಕಟಿಸಿದೆ. ಕಂಪನಿ ಮತ್ತು ಅದರ ಸಂಸ್ಥಾಪಕ ನ್ಯಾಯಾಲಯದ ಆದೇಶದ ಉಲ್ಲಂಘನೆ ಹಿನ್ನಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ಬಳಿಕ ರಾಮ್‍ದೇವ್ ಅವರು ನವೆಂಬರ್ 2023ರ ಸುದ್ದಿಗೋಷ್ಠಿಯಲ್ಲಿ ಕ್ಷಮೆಯಾಚಿಸಿದ್ದರು. ಈ ಬಗ್ಗೆ ಪತ್ರಿಕೆಗಳಲ್ಲಿಯೂ ಕ್ಷಮಾಪಣೆ ಪ್ರಕಟಿಸಿದ್ದರು. ಕೋವಿಡ್-19 ವ್ಯಾಕ್ಸಿನೇಷನ್ ಮತ್ತು ಆಧುನಿಕ ಔಷಧದ ವಿರುದ್ಧ ಪತಂಜಲಿ ಟೀಕೆ ಮಾಡಿತ್ತು. ಪತಂಜಲಿ ಉತ್ಪನ್ನಗಳು ಕೊರೊನಾ ಗುಣಪಡಿಸುತ್ತದೆ ಎಂದು ಜಾಹೀರಾತು ನೀಡಿತ್ತು. ಈ ಜಾಹೀರಾತಿನ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ಪ್ರಾರಂಭಿಸಿತ್ತು. ಈ ವರ್ಷ ಫೆಬ್ರವರಿಯಲ್ಲಿ,…
ಯುವಕನೊಬ್ಬನ ಕೊಲೆ ಮಾಡಿ ಬಸ್ ನಿಲ್ದಾಣದಲ್ಲಿ ಶವ ಎಸೆದು ಹೋಗಿರುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ನಡೆದಿದೆ. ಗಡಿ ತಾಲೂಕಿನಲ್ಲಿ ಕಳೆದ ಎರಡು ಮೂರು ತಿಂಗಳ ಅವಧಿಯಲ್ಲಿ ನಾಲ್ಕು ಕೊಲೆಗಳಾಗಿದ್ದು ಸದ್ಯ ತಾಲೂಕಿನ ಜನರು ಭಯಭೀತರಾಗಿದ್ದಾರೆ. ಅಥಣಿ ತಾಲೂಕಿನ ಅನಂತಪುರ ಗ್ರಾಮದ ಹೊರವಲಯದ ಚೆನ್ನಮ್ಮ ವೃತ್ತದಲ್ಲಿರುವ ಬಸ್ ನಿಲ್ದಾಣದಲ್ಲಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಯುವಕನ ವ್ಯಕ್ತಿಯ ಶವ ಪತ್ತೆಯಾಗಿದ್ದು ಯುವಕನ್ನ ಮದಭಾವಿ ಗ್ರಾಮದ ಅಪ್ಪಾಸಾಬ ಸಿದ್ದಪ್ಪ ಕಾಂಬಳೆ(37) ಎಂದು ಗುರುತಿಸಿಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬರಬೇಕಿದ್ದು ಅಥಣಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.