Author: Prajatv Kannada

ತುಮಕೂರು: ಮದುವೆ ಹೆಸರಲ್ಲಿ ದೋಖಾ ಮಾಡುತ್ತಿದ್ದ ತಂಡವನ್ನ ಬಂಧಿಸುವಲ್ಲಿ ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮದುಮಗಳು ಕೋಮಲಾ @ ಲಕ್ಷ್ಮೀ ಬಾಳಸಾಬ್ ಜನಕರ, ಚಿಕ್ಕಪ್ಪ ಪಾತ್ರಧಾರಿ ಸಿದ್ದಪ್ಪ, ಚಿಕ್ಕಮ್ಮ ಪಾತ್ರಧಾರಿ ಲಕ್ಷ್ಮೀಬಾಯಿ, ಬ್ರೋಕರ್ ಲಕ್ಷ್ಮಿ ಬಂಧಿತರು. ಮದುವೆ ಹೆಸರಲ್ಲಿ ಅವಿವಾಹಿತರನ್ನೇ ಟಾರ್ಗೆಟ್‌ ಮಾಡಿ, ಸಂಪ್ರದಾಯದಂತೆ ಮದುವೆ ಮಾಡಿಕೊಂಡು ಹಣ-ಚಿನ್ನದೊಂದಿಗೆ ಪರಾರಿಯಾಗ್ತಾರೆ. ಹೌದು ಗ್ರಾಮದ ಪಾಲಾಕ್ಷಯ್ಯ ಎಂಬವರು ತಮ್ಮ ಮಗ ದಯಾನಂದಮೂರ್ತಿಗೆ 37 ವರ್ಷ ದಾಟಿದರೂ ಹೆಣ್ಣು ಸಿಗದೇ ನೊಂದಿದ್ದರು. ಕುಷ್ಟಗಿ ಮೂಲದ ಬಸವರಾಜು ಎಂಬಾತನ ಮೂಲಕ ಹುಬ್ಬಳ್ಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಮದುವೆ ಬ್ರೋಕರ್‌ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು. ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನ ಮಾಡಿದ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬಳು ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಳು. ಕೋಮಲಾ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿದ್ದಳು. ಬಳಿಕ ಹುಡುಗಿಯನ್ನು ಗಂಡಿನ…

Read More

ಉತ್ತರ ಪ್ರದೇಶ:- ಇಲ್ಲಿನ ಫಿರೋಜಾಬಾದ್ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಗುಪ್ತಾಂಗದೊಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿ ಥಳಿಸಿ ಕೊಂದ ಘಟನೆ ಜರುಗಿದೆ. ಆರೋಪಿ ಪತಿ ತನ್ನ ಸಹೋದರರೊಂದಿಗೆ ಸೇರಿ ಪತ್ನಿಯ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಮಹಿಳೆಯ ಖಾಸಗಿ ಭಾಗಗಳ ಒಳಗೆ ಚಪಾತಿ ಮಾಡುವ ಲಟ್ಟಣಿಗೆ ತೂರಿಸಿದ್ದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಹಲ್ಲೆಯಿಂದಾಗಿ ಆಕೆಯ ದೇಹದಾದ್ಯಂತ ಅನೇಕ ಗಾಯಗಳ ಗುರುತುಗಳು ಸಹ ಇದ್ದವು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಲಟ್ಟಣಿಗೆ ಮಹಿಳೆಯ ಕರುಳಿನವರೆಗೂ ತಲುಪಿ ಹಾನಿಗೊಳಿಸಿದ್ದರಿಂದ ಆಕೆ ಸಾವನಪ್ಪಿದ್ದಾಳೆ ಎಂಬುದಾಗಿ ತಿಳಿಸಿದ್ದಾರೆ. ಸುರ್ಜೀತ್ ಆರೋಪಿ ಪತಿ. ಸೋಮವಾರ ರಂದು ರಾತ್ರಿ ತನ್ನ 28 ವರ್ಷದ ಪತ್ನಿ ರೇಷ್ಮಾ ಅವರೊಂದಿಗೆ ಜಗಳವಾಡಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಮೊದಲು ರೇಷ್ಮಾಳನ್ನು ಕಟ್ಟಿಹಾಕಿ ತನ್ನ ಸಹೋದರರೊಂದಿಗೆ ಮನೆಯಲ್ಲಿ ಥಳಿಸಿದ್ದಾನೆ. ಇದರಿಂದ ಆಕೆ ಸಾವನಪ್ಪಿದ್ದಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಆತನ ಘೋರ ಕೃತ್ಯ ಬೆಳಕಿಗೆ ಬಂದಿದೆ.…

Read More

ಸೂರ್ಯೋದಯ: 06:02, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ, ಶ್ರಾವಣ ಮಾಸ , ಶುಕ್ಲ ಪಕ್ಷ, ತಿಥಿ: ಅಷ್ಟಮಿ, ನಕ್ಷತ್ರ: ವಿಶಖಾ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ರಾ .1:10 ನಿಂದ ರಾ .2:52 ತನಕ ಅಭಿಜಿತ್ ಮುಹುರ್ತ: ಬೆ.11:55 ನಿಂದ ಮ.12:46 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ: ನಿಮ್ಮ ಪತ್ನಿ ಕಡೆಯಿಂದ ಆಸ್ತಿ ಭಾಗ್ಯ,ಈ ವಾರದಲ್ಲಿ ದೊಡ್ಡ ಧನಾತ್ಮಕ ಬದಲಾವಣೆ ಸಾಧ್ಯತೆ, ಉದ್ಯೋಗದಲ್ಲಿ ಅಧಿಕಾರಿಯ ಸಂಪೂರ್ಣ ಬೆಂಬಲ, ಉದ್ಯೋಗದಲ್ಲಿ ವರ್ಗಾವಣೆ ಜೊತೆ ಬಡ್ತಿ ಯೋಗ, ಆದಾಯಕ್ಕೆ ಹೊಸ ಅವಕಾಶಗಳ ಭಾಗ್ಯ, ಶೀತ, ನೆಗಡಿ, ಕೆಮ್ಮುಗಳಿಂದ ಬಳಲುವಿರಿ,…

Read More

ಬೆಳಗಾವಿ: ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಒಂದೇ ದಿನ 41 ಮಂದಿಗೆ ವಾಂತಿ-ಭೇದಿಯಾದ ತೀವ್ರ ಅಸ್ವಸ್ಥರಾದ ಮೂವರನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಮೂವರನ್ನು ಬೈಲಹೊಂಗಲ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿತ್ರಾಣಗೊಂಡಿರುವ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಇನ್ನಿಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಕಾಣಿಸಿಕೊಂಡಿದೆ. ಪ್ರಾಣಾಪಾಯ ಆಗಿಲ್ಲ. ನಿತ್ರಾಣಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರಿಸಲಾಗಿದೆ. ಗ್ರಾಮದಲ್ಲಿ ನಾಲ್ವರು ವೈದ್ಯರು ಹಾಗೂ ಹಲವು ವೈದ್ಯಕೀಯ ಸಿಬ್ಬಂದಿ ಸ್ಥಳದಲ್ಲೇ ಇದ್ದಾರೆ. ನೀರನ್ನು ಕುದಿಸಿ 90% ಕುಡಿಯುವಂತೆ ಜಾಗೃತಿ ವಹಿಸಲಾಗಿದೆ.

Read More

ಚಾಮರಾಜನಗರ:- ಗಡಿನಾಡು ಚಾಮರಾಜನಗರ ಜಿಲ್ಲೆಯಲ್ಲಿ ರಾತ್ರೋರಾತ್ರಿ ಭಾರೀ ಮಳೆ ಆಗಿದೆ. ಚಾಮರಾಜನಗರ ಜಿಲ್ಲೆಯ ಹಲವೆಡೆ ಮಳೆ ಆಗಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಯಲ್ಲಿಯೇ ಭಾರೀ ಮಳೆ ಸೂರಿಯುತ್ತಿದ್ದು, ರಾತ್ರಿ 11 ರ ನಂತರ ಭಾರೀ‌ ಮಳೆ ಆಗಿದೆ. ಭಾರೀ ಮಳೆಗೆ ಈರುಳ್ಳಿ ಬೆಳೆ ನಾಶವಾಗಿದ್ದು, ಬಾಲೆ ಬೆಳೆ ನೆಲಕ್ಕುರುಳಿದೆ. ಇದರಿಂದ ರೈತ ಕಂಗಾಲಾಗಿದ್ದಾನೆ. ಮಳೆಯ ಅವಾಂತರಕ್ಕೆ ಅಕ್ಷರಶಃ ರೈತರು ನಲುಗಿ ಹೋಗಿದ್ದಾರೆ.

Read More

ರಾಯಚೂರು:- ಜಿಲ್ಲೆಯ ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯ ಕಾಮುಕ ಶಿಕ್ಷಕನಿಗೆ ಪೊಲೀಸರು ಧರ್ಮದೇಟು ಕೊಟ್ಟಿದ್ದಾರೆ. ಶಾಲಾ ಅತಿಥಿ ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಮಾಡಿ ಜೊತೆಗೆ ಮಲಗಲು ಕರೆದ ಮೆಹಬೂಬ್ ಅಲಿ ಎಂಬುವವರಿಗೆ ಹಿಗ್ಗಾಮುಗ್ಗ ಥಳಿಸಿದ್ದು ಶಿಕ್ಷಕಿಯ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಲಾಗಿದೆ. ಸಹ ಶಿಕ್ಷಕ ಮೆಹಬೂಬ್ ಅಲಿ ಅವರು ತಮ್ಮದೇ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿ, ಮಂಚಕ್ಕೆ ಕರೆದಿದ್ದರು. ಈ ಹಿನ್ನೆಲೆ ನಿನ್ನೆ ಶಾಲೆ ಬಳಿ ಬಂದಿದ್ದ ಶಿಕ್ಷಕಿ ಸಂಬಂಧಿಕರು ಮೆಹಬೂಬ್ ಅಲಿ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ನೀಡಿ ಸಭ್ಯತೆಯ ಪಾಠ ಕಳಿಸಿದ್ದಾರೆ. ಸದ್ಯ ಮೆಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾರೆ. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಶಿಕ್ಷಕ ಕ್ಷಮೆಯಾಚಿಸಿದ್ದರಿಂದ ಪೊಲೀಸರಿಗೆ ದೂರು ನೀಡದೇ ಶಿಕ್ಷಕಿ ಸುಮ್ಮನಾಗಿದ್ದಾರೆ. ಇದೀಗ ಶಿಕ್ಷಕ, ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳುವ ವಿಡಿಯೋ ವೈರಲ್ ಆಗಿದೆ.

Read More

ಬೆಂಗಳೂರು:- ಕಿಲ್ಲರ್ ಬಿಬಿಎಂಪಿ ಕಸದ ಲಾರಿ ಮತ್ತೊಂದು ಬಲಿ ಪಡೆದುಕೊಂಡಿದೆ. ರಸ್ತೆ ದಾಟುತ್ತಿದ್ದ ವೃದ್ಧೆಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿದ್ದು, ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಕುಮಾರಸ್ವಾಮಿ ಲೇಔಟ್ ನ ಜಂಬೂಸವಾರಿ ದಿಣ್ಣೆ ಬಳಿ ರಸ್ತೆ ದಾಟುತ್ತಿದ್ದ ವೇಳೆ ಯಮವೇಗವಾಗಿ ಬಂದ ಕಸದ ಟಿಪ್ಪರ್ ಲಾರಿ ವೃದ್ಧೆಗೆ ಡಿಕ್ಕಿ ಹೊಡೆದಿದೆ. https://youtu.be/9Vz9t1kq9v4?si=8l34rq7_vEhfTEq8 ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತ ವೃದ್ದೆಯನ್ನು ಆಂಧ್ರಪ್ರದೇಶದ ಚಿತ್ತೂರಿನ ಆದಿಲಕ್ಷ್ಮಮ್ಮ‌ ಎಂದು ಗುರುತಿಸಲಾಗಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಬಸ್ ಹತ್ತಲು ಬಂದಿದ್ದ ಆದಿಲಕ್ಷ್ಮಮ್ಮ ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿದೆ. ಭಾರೀ ವೇಗವಾಗಿ ಬಂದು ಗುದ್ದಿದ ಕಸದ ಲಾರಿಯ ವೇಗದ ತೀವ್ರತೆಗೆ ಆದಿಲಕ್ಷ್ಮಮ್ಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಬಿಬಿಎಂಪಿ ಕಸದ ಲಾರಿ ಚಾಲಕ ಮಹಮ್ಮದ್ ಎಂಬಾತನನ್ನು ಕೆ ಎಸ್ ಲೇಔಟ್ ಸಂಚಾರಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಮಳೆಯ ಅಬ್ಬರ ಮುಂದುವರಿಯಲಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. https://youtu.be/ovbBFOnTM_c?si=QoUXDN2Y8JFTGs0e ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಶಿವಮೊಗ್ಗ, ತುಮಕೂರು, ವಿಜಯನಗರ, ಕೊಡಗು, ಹಾನಸ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲೂ ಮಳೆಯಾಗಲಿದೆ.ಯಾದಗಿರಿ, ವಿಜಯಪುರ, ಕಲಬುರಗಿ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಗದಗದಲ್ಲಿ ಒಣಹವೆ ಇರಲಿದ್ದು,ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಗಿನ ಜಾವ ಮಳೆಯಾಗಿದೆ, ಎಚ್​ಎಎಲ್​ನಲ್ಲಿ 29.8 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.5 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 29.7 ಡಿಗ್ರಿ ಸೆಲ್ಸಿಯಸ್​ ಗರಿಷ್ಠ ಉಷ್ಣಾಂಶ, 20.1 ಡಿಗ್ರಿ ಸೆಲ್ಸಿಯಸ್​ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.2…

Read More

ನಟ, ನಟಿಯರು ಏನೇ ಮಾಡಿದ್ರು ಪ್ರತಿಯೊಬ್ಬರು ಅದನ್ನು ಗಮನಿಸುತ್ತಿರುತ್ತಾರೆ. ಒಳ್ಳೆಯ   ಕೆಲಸಮಾಡಿದಾಗ ಬೇಷ್ ಎನ್ನುವ ನೆಟ್ಟಿಗರು ತಪ್ಪು ಮಾಡಿದಾಗ ಖಂಡಿಸುತ್ತಾರೆ. ಇದೀಗ ನಟ ಕಿಂಗ್ ಖಾನ್ ಶಾರುಖ್ ಖಾನ್ ಮಾಡಿದ ಯಡವಟ್ಟು ಟೀಕಾಕಾರರ ಕೆಂಗಣ್ಣಿಗೆ ಬಿದ್ದಿದೆ. ನಟನ ಈ ನಡೆಗೆ ಸಾಮಾಜಿಕ ಜಾಲಾ ತಾಣದಲ್ಲಿ ವ್ಯಾಪಕ ಟೀಕೆ  ವ್ಯಕ್ತವಾಗಿದೆ. ಬಾಲಿವುಡ್ ಕಿಂಗ್‌ ಖಾನ್‌ ಶಾರುಖ್‌ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಗರಿಮೆಗೆ ಪಾತ್ರರಾಗಿದ್ದಾರೆ. ಲೋಕರ್ನೋ ಫಿಲ್ಮಫೆಸ್ಟಿವಲ್​ನ 77ನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶಾರುಖ್ ಪಾತ್ರರಾಗಿದ್ದಾರೆ. ಸ್ವಿಟ್ಜರ್​ಲ್ಯಾಂಡ್​ನಲ್ಲಿ ನಡೆದ ಫಿಲ್ಮ್‌ ಫೆಸ್ಟಿವಲ್​ನಲ್ಲಿ ಭಾಗಿಯಾದ ಶಾರುಖ್​ ಖಾನ ತಮ್ಮ ಜೀವಮಾನದ ಶ್ರೇಷ್ಠ ಸಾಧನೆಯ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಒಂದು ಯಡವಟ್ಟು ನಡೆದು ಹೋಗಿದೆ. ಶನಿವಾರ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾರುಖ್​ ಖಾನ್ ಫೋಟೋ ಸೇಷನ್ ನಡೆಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಫ್ರೇಮ್​ನಲ್ಲಿ ಬರೋ ರೀತಿ ಶಾರುಖ್ ಪಕ್ಕದಲ್ಲಿ ನಿಂತಿದ್ದರು. ಆ ವ್ಯಕ್ತಿಯನ್ನು…

Read More

ಕೊಲ್ಕತ್ತಾದ ಆರ್​ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನೈಟ್ ಡ್ಯೂಡಿ ಡಾಕ್ಟರ್ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯ ಕುರಿತು ಪ್ರತಿಯೊಬ್ಬರು ಆಕ್ರೋಶ ಹೊರ ಹಾಕಿದ್ದು ಆರೋಪಿಯ ರಾಕ್ಷಸ ಕೃತ್ಯಕ್ಕೆ ಹಿಡಿ ಶಾಪ ಹಾಕಿದ್ದಾರೆ. ಇದೀಗ ಕೃತ್ಯದ ಬಗ್ಗೆ ಸ್ಯಾಂಡಲ್​ವಡ್ ನಟಿ ಆಶಿಕಾ ರಂಗನಾಥ್ ಆಕ್ರೋಶವನ್ನು ಹೊರಹಾಕಿದ್ದಾರೆ. ಇನ್​​ಸ್ಟಾಗ್ರಾಮ್​ನಲ್ಲಿ ಕೊಲ್ಕತ್ತಾದ ಬರ್ಬರತೆಯ ಬಗ್ಗೆ ಬರೆದುಕೊಂಡಿರುವ ನಟಿ, ಎಲ್ಲ ವೈದ್ಯಕೀಯೇತರ ವೃತ್ತಿಯಲ್ಲಿರುವವರೇ ಅರ್​ ಜಿ ಕರ್ ಮೆಡಿಕಲ್ ಕಾಲೇಜ್​ನಲ್ಲಿ ನಡೆದ ಘಟನೆ ಕೇವಲ ವೈದ್ಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ, ದಯವಿಟ್ಟು ಅರಿತುಕೊಳ್ಳಿ, ಆ ಮಹಿಳೆ ಕೆಲಸ ಮಾಡುವ ಜಾಗದಲ್ಲಿಯೇ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೆಲ್ಲಿ? ಇದು ನಿರ್ಭಯಾ ಪ್ರಕರಣಕ್ಕಿಂತ ಏನು ಕಡಿಮೆಯಿಲ್ಲ ಎಂದಿದ್ದಾರೆ. ಕೆಲವು ನಾಯಕರು ಹೇಳುವ ಪ್ರಕಾರ ಮಧ್ಯರಾತ್ರಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಅಂತೆ. ಆದ್ರೆ ಅವಳು ಹೋಗಿದ್ದು ನೈಟ್​ ಡ್ಯೂಟಿಗೆ, ಅತ್ಯಂತ ನೆಮ್ಮದಿಯ ವಲಯದಲ್ಲಿ ಇದ್ದಂತವಳು. ಅವಳಿಗೆ ಅಲ್ಲಾದರೂ ರಕ್ಷಣೆ ಸಿಕ್ಕಿದ್ಯಾ. ಈ…

Read More