ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನ ಮಳೆಯ ಅಬ್ಬರ ಮುಂದುವರಿಯಲಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. https://youtu.be/ovbBFOnTM_c?si=QoUXDN2Y8JFTGs0e ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ಮೈಸೂರು, ಮಂಡ್ಯ, ಚಾಮರಾಜನಗರ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ತುಮಕೂರು, ವಿಜಯನಗರ, ಕೊಡಗು, ಹಾನಸ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರಿನಲ್ಲೂ ಮಳೆಯಾಗಲಿದೆ.ಯಾದಗಿರಿ, ವಿಜಯಪುರ, ಕಲಬುರಗಿ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಗದಗದಲ್ಲಿ ಒಣಹವೆ ಇರಲಿದ್ದು,ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳಗಿನ ಜಾವ ಮಳೆಯಾಗಿದೆ, ಎಚ್ಎಎಲ್ನಲ್ಲಿ 29.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 29.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.2…
Author: Prajatv Kannada
ನಟ, ನಟಿಯರು ಏನೇ ಮಾಡಿದ್ರು ಪ್ರತಿಯೊಬ್ಬರು ಅದನ್ನು ಗಮನಿಸುತ್ತಿರುತ್ತಾರೆ. ಒಳ್ಳೆಯ ಕೆಲಸಮಾಡಿದಾಗ ಬೇಷ್ ಎನ್ನುವ ನೆಟ್ಟಿಗರು ತಪ್ಪು ಮಾಡಿದಾಗ ಖಂಡಿಸುತ್ತಾರೆ. ಇದೀಗ ನಟ ಕಿಂಗ್ ಖಾನ್ ಶಾರುಖ್ ಖಾನ್ ಮಾಡಿದ ಯಡವಟ್ಟು ಟೀಕಾಕಾರರ ಕೆಂಗಣ್ಣಿಗೆ ಬಿದ್ದಿದೆ. ನಟನ ಈ ನಡೆಗೆ ಸಾಮಾಜಿಕ ಜಾಲಾ ತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಗರಿಮೆಗೆ ಪಾತ್ರರಾಗಿದ್ದಾರೆ. ಲೋಕರ್ನೋ ಫಿಲ್ಮಫೆಸ್ಟಿವಲ್ನ 77ನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶಾರುಖ್ ಪಾತ್ರರಾಗಿದ್ದಾರೆ. ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾದ ಶಾರುಖ್ ಖಾನ ತಮ್ಮ ಜೀವಮಾನದ ಶ್ರೇಷ್ಠ ಸಾಧನೆಯ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಒಂದು ಯಡವಟ್ಟು ನಡೆದು ಹೋಗಿದೆ. ಶನಿವಾರ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾರುಖ್ ಖಾನ್ ಫೋಟೋ ಸೇಷನ್ ನಡೆಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಫ್ರೇಮ್ನಲ್ಲಿ ಬರೋ ರೀತಿ ಶಾರುಖ್ ಪಕ್ಕದಲ್ಲಿ ನಿಂತಿದ್ದರು. ಆ ವ್ಯಕ್ತಿಯನ್ನು…
ಕೊಲ್ಕತ್ತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ನೈಟ್ ಡ್ಯೂಡಿ ಡಾಕ್ಟರ್ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯ ಕುರಿತು ಪ್ರತಿಯೊಬ್ಬರು ಆಕ್ರೋಶ ಹೊರ ಹಾಕಿದ್ದು ಆರೋಪಿಯ ರಾಕ್ಷಸ ಕೃತ್ಯಕ್ಕೆ ಹಿಡಿ ಶಾಪ ಹಾಕಿದ್ದಾರೆ. ಇದೀಗ ಕೃತ್ಯದ ಬಗ್ಗೆ ಸ್ಯಾಂಡಲ್ವಡ್ ನಟಿ ಆಶಿಕಾ ರಂಗನಾಥ್ ಆಕ್ರೋಶವನ್ನು ಹೊರಹಾಕಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಕೊಲ್ಕತ್ತಾದ ಬರ್ಬರತೆಯ ಬಗ್ಗೆ ಬರೆದುಕೊಂಡಿರುವ ನಟಿ, ಎಲ್ಲ ವೈದ್ಯಕೀಯೇತರ ವೃತ್ತಿಯಲ್ಲಿರುವವರೇ ಅರ್ ಜಿ ಕರ್ ಮೆಡಿಕಲ್ ಕಾಲೇಜ್ನಲ್ಲಿ ನಡೆದ ಘಟನೆ ಕೇವಲ ವೈದ್ಯರಿಗೆ ಸಂಬಂಧಿಸಿದ ಸಮಸ್ಯೆಯಲ್ಲ, ದಯವಿಟ್ಟು ಅರಿತುಕೊಳ್ಳಿ, ಆ ಮಹಿಳೆ ಕೆಲಸ ಮಾಡುವ ಜಾಗದಲ್ಲಿಯೇ ಸುರಕ್ಷಿತವಾಗಿಲ್ಲ ಅಂದ್ರೆ ಮತ್ತೆಲ್ಲಿ? ಇದು ನಿರ್ಭಯಾ ಪ್ರಕರಣಕ್ಕಿಂತ ಏನು ಕಡಿಮೆಯಿಲ್ಲ ಎಂದಿದ್ದಾರೆ. ಕೆಲವು ನಾಯಕರು ಹೇಳುವ ಪ್ರಕಾರ ಮಧ್ಯರಾತ್ರಿ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡಬಾರದು ಅಂತೆ. ಆದ್ರೆ ಅವಳು ಹೋಗಿದ್ದು ನೈಟ್ ಡ್ಯೂಟಿಗೆ, ಅತ್ಯಂತ ನೆಮ್ಮದಿಯ ವಲಯದಲ್ಲಿ ಇದ್ದಂತವಳು. ಅವಳಿಗೆ ಅಲ್ಲಾದರೂ ರಕ್ಷಣೆ ಸಿಕ್ಕಿದ್ಯಾ. ಈ…
ಶ್ರಾವಣ ಮಾಸ ಬಂದ ಹಿನ್ನಲೆ ಶುಭ ಕಾರ್ಯಗಳು ಆರಂಭವಾಗಿದ್ದು ರೈತರು ಬೆಳೆದ ಹೂಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರು ದಿಲ್ ಖುಷ್ ಆಗಿದ್ದಾರೆ. ಕೆ.ಜಿ. ಸೇವಂತಿ ಹೂ ಬೆಲೆ 200 ರೂ, ಕೆ.ಜಿ. ರೋಜ್ ಹೂ ಗೆ 250 ರೂ, ಕೆ.ಜಿ. ಚೆಂಡು ಹೂ 60 ರೂ, ಮ್ಯಾರಿಗೋಲ್ಡ್ 150 ರೂ, ಕೆ.ಜಿ. ಕನಕಾಂಬರಗೆ ಸಾವಿರ ರೂ. ಬೆಲೆ ಇದೆ. ಇದ್ರಿಂದ ರೈತರು ವರ್ಷದ 365 ದಿನಗಳು ಶ್ರಾವಣ ಮಾಸದಿಂದ ಕೂಡಿರಲಿ ಅಂತ ಬೇಡಿಕೊಳುತ್ತಿದ್ದಾರೆ. ತರಹೇವಾರಿ ಹೂ ಬೆಳೆಗೆ ಖ್ಯಾತಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಸ್ತುತ 15 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಹೂ ಬೆಳೆಯಲಾಗುತ್ತಿದೆ. ದ್ರಾಕ್ಷಿ, ಬಾಳೆ ಸೇರಿದಂತೆ ತರಕಾರಿ ಬೆಳೆ ಬದಲು ಈಗ ರೈತರು ಸುಲಭವಾಗಿ ಹಣ ಮಾಡುವ ಹೂ ಬೆಳೆಯುತ್ತ ಮುಖ ಮಾಡಿದ್ದಾರೆ. ಇನ್ನು ಚಿಕ್ಕಬಳ್ಳಾಪುರದ ಹೂ ಮಾರುಕಟ್ಟೆಗೆ ಪ್ರತಿದಿನ ದೇಶದ ವಿವಿಧ ಮೂಲೆಗಳಿಂದ ದೊಡ್ಡ ದೊಡ್ಡ ವರ್ತಕರು ಆಗಮಿಸಿ ಹೂ ಕೊಂಡುಕೊಳ್ಳುತ್ತಿದ್ದಾರೆ. ಆಶಾಡ ಕಳೆದು…
ಕೊಪ್ಪಳ:- ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ಗೆ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ಇಂದು ಸಂಜೆಯಿಂದ ಆರಂಭವಾಗಲಿದೆ. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ಗೇಟ್ ತುಂಡಾಗಿ ನೀರುಪೋಲಾಗುತ್ತಿರುವ ಕಾರಣ ಸದ್ಯ ತಾತ್ಕಾಲಿಕ ಗೇಟ್ ಅಳವಡಿಕೆಗೆ ತುಂಗಭದ್ರಾ ಡ್ಯಾಮ್ ಮಂಡಳಿ ನಿರ್ಧಾರ ಕೈಗೊಂಡಿದೆ. ಜಲಾಯಶಯದ ನೀರು ಖಾಲಿಯಾಗುವ ಮೊದಲೇ ತಾತ್ಕಾಲಿಕ ಗೇಟ್ ಅಳವಡಿಕೆಗೆ ಯತ್ನಿಸಲಾಗುತ್ತಿದೆ. ನೀರಿನಲ್ಲೇ ಗೇಟ್ ಇಳಿಸಿ ತಾತ್ಕಾಲಿಕ ಗೇಟ್ ಅಳವಡಿಕೆಗೆ ತಜ್ಞರ ತಂಡ ಪ್ರಯತ್ನಿಸಲಿದೆ. ತಾತ್ಕಾಲಿಕ ಹೊಸ ಗೇಟ್ ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ತಯಾರಾಗಿದೆ. ನಾರಾಯಣ ಇಂಜಿನಿಯರ್ಸ್, ಹಿಂದೂಸ್ತಾನ್ ಇಂಜಿನಿಯರ್ಸ್, ಜಿಂದಾಲ್ ತಂತ್ರಜ್ಞರ ತಂಡದಿಂದ ಗೇಟ್ ಅಳವಡಿಕೆ ಕೆಲಸ ನಡೆಯಲಿದೆ. ಗೇಟ್ ಅಳವಡಿಕೆ ಯಶಸ್ವಿಯಾದರೆ ಅಪಾರ ಪ್ರಮಾಣದ ನೀರು ಉಳಿಯಲಿದೆ. ಹೀಗಾಗಿ ತಾತ್ಕಾಲಿಕ ಹೊಸ ಗೇಟ್ ಅಳವಡಿಕೆಗೆ ಡ್ಯಾಮ್ ಮಂಡಳಿ ಮುಂದಾಗಿದೆ. ಕೊಪ್ಪಳ ತಾಲೂಕಿನ ಮುಶಿರಾಬಾದ್ ಬಳಿಯಿರುವ ತುಂಗಭದ್ರಾ ಡ್ಯಾಮ್ನ 19ನೇ ಕ್ರಸ್ಟ್ ಗೇಟ್ ತುಂಡಾಗಿ ಎರಡು ದಿನದಲ್ಲಿ 14 ಟಿಎಂಸಿ ನೀರು ಹೊರಕ್ಕೆ ಹರಿದುಹೋಗಿದೆ. ಆಗಸ್ಟ್ 10ರಂದು ಡ್ಯಾಮ್ನಲ್ಲಿ ಬರೋಬ್ಬರಿ 105…
ಬಾಂಗ್ಲಾದಲ್ಲಿ ಸಂಭವಿಸಿದ ಆಂತರಿಕ ಮೀಸಲಾತಿ ಕಿಚ್ಚು ಇಡೀ ದೇಶವನ್ನೇ ಸುಡ್ತಿದೆ. ಪ್ರಧಾನಿ ಮನೆಯನ್ನೇ ಧ್ವಂಸ ಮಾಡಿದ ಕಿಡಿಗೇಡಿಗಳು ಕಂಡ ಕಂಡಲ್ಲಿ ಕೇಕೆ ಹಾಕ್ತಿದ್ದಾರೆ. ಇದರ ನಡುವೆ ಹಿಂದೂ ಕುಟುಂಬಗಳನ್ನೇ ಟಾರ್ಗೆಟ್ ಮಾಡಿಕೊಂಡಿರೋ ಪ್ರಕರಣ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಇದು ಹಿಂದೂ ಸಮಾಜದವರ ರಕ್ತ ಕುದಿಯುವಂತೆ ಮಾಡಿದೆ. ಹಾಗಾಗಿ ಕರ್ನಾಟಕದಲ್ಲಿರುವ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಹೆಮ್ಮೆಟ್ಟಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ನಗರದಲ್ಲಿ ಅಕ್ರಮವಾಗಿ ಬಾಂಗ್ಲಾ ನುಸುಳುಕೋರರು ನೆಲಸಿರುವ ಬಗ್ಗೆ ಈಗಾಗಲೇ ಪೊಲೀಸರಿಗೂ ಮಾಹಿತಿ ಇದೆ. ಹಾಗಾಗಿ ಅಕ್ರಮ ವಲಸಿಗರ ಮೇಲೆ ದಾಳಿ ಕೂಡ ನಡೆದು ಕೆಲವರನ್ನು ವಾಪಸ್ಸು ಕಳುಹಿಸಲಾಗಿದೆ. ಆದರೆ ಈಗ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆ ಹಾಗು ಹಿಂದೂಗಳ ಹತ್ಯೆಯಿಂದಾಗಿ ಈ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರನ್ನ ಭೇಟಿ ಮಾಡಿ ನಗರದಲ್ಲಿ ಅಕ್ರಮವಾಗಿ ನೆಲಸಿರುವ ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ಬರ್ಮಾ ರೋಹಿಂಗ್ಯಾ ಮುಸ್ಲಿಮರನ್ನು ಕರ್ನಾಟಕದಿಂದ…
ಮಾವಿನ ಮರಗಳು ಕೇವಲ ರುಚಿಕರವಾದ ಹಣ್ಣುಗಳ ಮೂಲವಲ್ಲ, ಆದರೆ ಅವುಗಳ ಎಲೆಗಳು ವಿವಿಧ ಉಪಯೋಗಗಳನ್ನು ಹೊಂದಿವೆ. ಮಾವಿನ ಎಲೆಗಳು ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ ಮತ್ತು ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ಔಷಧದಲ್ಲಿ ಶತಮಾನಗಳಿಂದ ಬಳಸಲ್ಪಟ್ಟಿವೆ. ಈ ಎಲೆಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ ಏಕೆಂದರೆ ಅವುಗಳು ಫ್ಲೇವನಾಯ್ಡ್‌ಗಳು ಮತ್ತು ಫೀನಾಲ್‌ಗಖ ಹೆಚ್ಚಿನ ಅಂಶವನ್ನು ಹೊಂದಿರುತ್ತವೆ. ಆರೋಗ್ಯಕ್ಕೆ ಮಾವಿನ ಎಲೆಗಳ ಪ್ರಯೋಜನಗಳು ಮಧುಮೇಹವನ್ನು ನಿಯಂತ್ರಿಸುತ್ತದೆ: ಮಾವಿನ ಎಲೆಗಳು ಮಧುಮೇಹವನ್ನು ನಿರ್ವಹಿಸಲು ತುಂಬಾ ಉಪಯುಕ್ತವಾಗಿದೆ. ಮಾವಿನ ಮರದ ಕೋಮಲ ಎಲೆಗಳು ಆಂಥೋಸಯಾನಿಡಿನ್‌ಗಳು ಎಂಬ ಟ್ಯಾನಿನ್‌ಗಳನ್ನು ಹೊಂದಿರುತ್ತವೆ, ಇದು ಆರಂಭಿಕ ಮಧುಮೇಹಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಎಲೆಗಳನ್ನು ಒಣಗಿಸಿ ಪುಡಿಮಾಡಿಕೊಂಡು ಚಿಕಿತ್ಸೆಗಾಗಿ ದ್ರಾವಣವಾಗಿ ಬಳಸಲಾಗುತ್ತದೆ. ಇದು ಡಯಾಬಿಟಿಕ್ ಆಂಜಿಯೋಪತಿ ಮತ್ತು ಡಯಾಬಿಟಿಕ್ ರೆಟಿನೋಪತಿಗೆ ಚಿಕಿತ್ಸೆ ನೀಡಲು ಸಹ ಸಹಾಯ ಮಾಡುತ್ತದೆ. ರಾತ್ರಿಯಿಡೀ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ನೆನೆಸಿಡಿ. ಮಧುಮೇಹದ ಲಕ್ಷಣಗಳನ್ನು ನಿವಾರಿಸಲು ಈ ನೀರನ್ನು ಸೋಸಿಕೊಂಡು ಕುಡಿಯಿರಿ. ಇದು…
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬಕ್ಕೆ ದಿನಗಣನೆ ಶುರುಮಾಗಿದೆ. ಮನೆಯ ಹೆಂಗಳೆಯರು ಹಬ್ಬದ ತಯಾರಿಯಲ್ಲಿದ್ದಾರೆ. ಈ ನಡುವೆ ಪ್ರತಿಷ್ಟಾಪಿಸಲ್ಪಡುವ ಲಕ್ಷ್ಮಿಗೆ ಚೆಂದವಾಗಿ ಸೀರೆಯನ್ನೂ ಈ ಹಬ್ಬದಂದು ಉಡಿಸಲಾಗುತ್ತದೆ. ಸರಳವಾಗಿ ಸೀರೆ ಉಡಿಸುವ ವಿಧಾನ ಹೀಗಿದೆ. ಲಕ್ಷ್ಮಿಯನ್ನು ಎಲ್ಲಿ ಪ್ರತಿಷ್ಠಾಪನೆ ಮಾಡಬೇಕೆಂದು ಅಂದುಕೊಂಡಿದ್ದೇವೋ ಆ ಜಾಗವನ್ನು ಗೋಮೂತ್ರದಿಂದ ಶುದ್ಧ ಮಾಡಬೇಕು. ನಂತರ ಕೂರಿಸುವ ಟೇಬಲ್ ಅನ್ನು ರಂಗೋಲಿಯಿಂದ ಅಲಂಕರಿಸಬೇಕು. ರಂಗೋಲಿ ಮಧ್ಯೆ ಸ್ವಸ್ಥಿಕ್ ಚಿಹ್ನೆ ಇಡಿ, ರಂಗೋಲಿ ಹಾಕಲು ಅಕ್ಕಿ ಹಿಟ್ಟು ಬಳಸಬಹುದು. ಈಗ ದೇವಿಗೆ ಉಡಿಸಲು ಇಟ್ಟ ಸೀರೆ ಬ್ಲೌಸ್ ಪೀಸ್ ತೆಗೆದುಕೊಂಡು ಅದರ ಎರಡು ಕೈಗಳನ್ನು ಮೊದಲು ರೆಡಿ ಮಾಡಿಕೊಳ್ಳಬೇಕು. ಬ್ಲೌಸ್ ಪೀಸ್‌ನ ಎರಡು ಬದಿಗೆ ಪೇಪರ್ ಪೀಸ್ ಹಾಕಿ, ನಂತರ ನಿಧಾನಕ್ಕೆ ಬ್ಲೌಸ್ ಪೀಸ್ ಅನ್ನು ಮಡಚಬೇಕು. ಹೀಗೆ ಮಾಡಿದರೆ ಬ್ಲೌಸ್ ಸ್ಟಿಫ್ ಆಗಿರುತ್ತದೆ. ಅದೇ ಬಟ್ಟೆಯನ್ನು ಒಳಗೆ ಸೇರಿಸಿ ಪಿನ್ ಹಾಕಿ. ಹೀಗೆ ಮಾಡಿದರೆ ದೇವಿಯ ಎರಡು ಕೈಗಳು ಸಿದ್ಧವಾಗುತ್ತದೆ. ಬಟ್ಟೆಯ ಮಧ್ಯಭಾಗದಲ್ಲಿ ನ್ಯೂಸ್ ಪೇಪರ್ ಇಡದ ಕಾರಣ ಅದು ಖಾಲಿನೇ…
ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ 17 ಜನರನ್ನು ಬಂಧಿಸಿರುವ ಪೊಲೀಸರು ಸಾಕಷ್ಟು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ದರ್ಶನ್ ಜೈಲು ಸೇರಿ 50 ದಿನ ಕಳೆದಿದ್ದು ಸದ್ಯಕ್ಕೆ ಹೊರ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಫೋನ್ ಕಾಲ್ ಡಿಟೈಲ್ಸ್ ಕಲೆ ಹಾಕಿದ್ದಾರೆ. ಕೊಲೆ ಕೇಸ್ ನಿಂದ ದರ್ಶನ್ ರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮಿ ಸಾಕಷ್ಟ ಕಷ್ಟ ಪಡುತ್ತಿದ್ದಾರೆ. ದೇವಸ್ಥಾನ, ರಾಜಕಾರಣಿಗಳು ಎಂದು ಸುತ್ತಾಡುತ್ತಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಇತ್ತ ಪೊಲೀಸರು ರೇಣುಕಾಸ್ವಾಮಿ ಹಂತಕರಿಗೆ ಶಿಕ್ಷೆ ಕೊಡಿಸಲು ಪಣತೊಟ್ಟಿದ್ದು ಅದಕ್ಕೆ ಬೇಕಾದ ಸಾಕ್ಷ್ಯ ಸಂಗ್ರಹ ಮಾಡ್ತಿದ್ದಾರೆ. ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಒಂದೊಂದು ಸಾಕ್ಷ್ಯಗಳು ಪೊಲೀಸರ ಕೈ ಸೇರ್ತಿವೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯ, ದರ್ಶನ್…
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್,ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರೋ ಪವಿತ್ರಾ ಗೌಡರನ್ನು ಕಾಣಲು ಮಗಳು ಖುಷಿ ಆಗಾಗ ಜೈಲಿಗೆ ಭೇಟಿ ನೀಡುತ್ತಾ ಇರುತ್ತಾರೆ. ಈ ಮಧ್ಯೆ ಪ್ರೀತಿಯ ಅಮ್ಮನನ್ನು ನೆನೆದು ಖುಷಿ ಗೌಡ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಅಮ್ಮನ ಜೊತೆಗಿರುವ ಫೋಟೋ ಹಂಚಿಕೊಂಡ ಖುಷಿಗೊಂಡ ಅಮ್ಮನನ್ನು ಹೊಗಳಿದ್ದಾರೆ. ಅವಳು ನನ್ನ ಪ್ರೇರಣೆ, ಪರಿಸ್ಥಿತಿ ಎಷ್ಟೇ ಇದ್ದರೂ ಹೇಗೆ ಗಟ್ಟಿಯಾಗಿರಬೇಕೆಂದು ಕಲಿಸುತ್ತಾಳೆ. ಅವಳು ಯಾವಾಗಲೂ ತುಂಬಾ ಮುಕ್ತ ಮತ್ತು ಬೆಂಬಲ ನೀಡುತ್ತಾಳೆ. ಅವಳು ಶತಕೋಟಿಯಲ್ಲಿ ಒಬ್ಬಳು. ಅವಳಂತಹ ತಾಯಿಯನ್ನು ಪಡೆಯಲು ನಾನು ನಿಜವಾಗಿಯೂ ತುಂಬಾ ಕೃತಜ್ಞನಾಗಿದ್ದೇನೆ ಮತ್ತು ಅದೃಷ್ಟಶಾಲಿಯಾಗಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ ಅಂತ ಖುಷಿ ಗೌಡ ಬರೆದುಕೊಂಡಿದ್ದಾರೆ. ಸ್ಯಾಂಡಲ್‌ವುಡ್ ನಟಿ ಹಾಗೂ ಫ್ಯಾಷನ್ ಡಿಸೈನರ್ ಪವಿತ್ರಾ ಗೌಡ ಸದ್ಯ ಪರಪ್ಪನ…