ಇರಾನ್ ಯಾವುದೇ ಕ್ಷಣದಲ್ಲಿ ಬೇಕಾದರು ಇಸ್ರೇಲ್ ಮೇಲೆ ಪ್ರತೀಕಾರದ ದಾಳಿ ನಡೆಸಬಹುದು ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಸಬ್ಮೆರಿನ್ ಮತ್ತು ವಿಮಾನವಾಹಕ ಸಮರನೌಕೆಗಳನ್ನು ತಕ್ಷಣ ಮಧ್ಯಪ್ರಾಚ್ಯಕ್ಕೆ ರವಾನಿಸುವಂತೆ ಅಮೆರಿಕ ಆದೇಶಿಸಿದೆ. ಮಧ್ಯಪ್ರಾಚ್ಯಕ್ಕೆ ಮಾರ್ಗದರ್ಶಿ ಕ್ಷಿಪಣಿ ಸಬ್ ಮೆರಿನ್ ಅನ್ನು ರವಾನಿಸುವಂತೆ ಮತ್ತು ಈಗಾಗಲೇ ಏಶಿಯಾ ಪೆಸಿಫಿಕ್ನಿಂಕದ ಮಧ್ಯಪ್ರಾಚ್ಯದತ್ತ ಹೊರಟಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ಸಮರನೌಕೆಗೆ ತ್ವರಿತ ಗತಿಯಲ್ಲಿ ಪ್ರಯಾಣಿಸುವಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಆದೇಶಿಸಿದ್ದಾರೆ. ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯಲ್ಲಿ ಎಫ್-35 ಯುದ್ಧವಿಮಾನಗಳು ಹಾಗೂ ಎಫ್‌ಎಾ-18 ಯುದ್ಧವಿಮಾನಗಳಿವೆ. ಈ ಮಧ್ಯೆ, ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಜತೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮಾತುಕತೆ ನಡೆಸಿದ್ದು, ಇಸ್ರೇಲ್ನಣ ಭದ್ರತೆಗೆ ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲು ಅಮೆರಿಕ ಬದ್ಧವಾಗಿದೆ ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಅಮೆರಿಕದ ಸೇನಾಪಡೆಯ ಉಪಸ್ಥಿತಿಯನ್ನು ಹೆಚ್ಚಿಸುವ ಅನಿವಾರ್ಯತೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಪೆಂಟಗಾನ್ನಿ ಪತ್ರಿಕಾ ಕಾರ್ಯದರ್ಶಿ…
Author: Prajatv Kannada
ಭಾರೀ ಮಳೆಯಿಂದಾಗಿ ಕಸದ ರಾಶಿ ಮೈಮೇಲೆ ಬಿದ್ದು ಮಕ್ಕಳು ಸೇರಿದಂತೆ 21 ಮಂದಿ ಮೃತಪಟ್ಟ ಘಟನೆ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿ ಸಂಭವಿಸಿದೆ . ಭಾರೀ ಮಳೆಯಿಂದ ಉಂಟಾದ ಕುಸಿತದ ನಂತರ ಕಿಟೀಜಿಯ ಉತ್ತರ ಕಂಪಾಲಾ ಜಿಲ್ಲೆಯ ಭೂಕುಸಿತದಲ್ಲಿ ಶನಿವಾರ ಮನೆಗಳು, ಜನರು ಮತ್ತು ಜಾನುವಾರುಗಳು ತ್ಯಾಜ್ಯದ ಪರ್ವತಗಳಲ್ಲಿ ಮುಳುಗಿವೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಘಟನೆಯಲ್ಲಿ ಮಕ್ಕಳು ಸೇರಿ 21 ಮಂದಿ ಮೃತಪಟ್ಟಿದ್ದು 14ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಸದ ರಾಶಿ ಹಾಕುವ ಜಾಗದಲ್ಲಿ ಈ ದುರ್ಘಟನೆ ನಡೆದಿದ್ದು, ಘಟನೆಯ ವಿವರಗಳು ಲಭಿಸದೇ ಇದ್ದರೂ ಭಾರೀ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಕಸದ ರಾಶಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ಆಯ್ದುಕೊಳ್ಳಲು ಜನರು ಬರುತ್ತಾರೆ. ಇದನ್ನೇ ಉದ್ಯೋಗ ಮಾಡಿಕೊಂಡ ಕೆಲವರು ಸಮೀಪದಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ. ಇದಕ್ಕೆಲ್ಲಾ ಅವಕಾಶ ನೀಡಿದ್ದು ಅಧಿಕಾರಿಗಳ ಲೋಪವಾಗಿದೆ ಎಂದು ಅಧ್ಯಕ್ಷ ಯೊವೆರಿ ಮುಸೆವೆನಿ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸೋಲು ಕಂಡಿದ್ದು, ಕೈಯಲ್ಲಿ ಯಾವುದೇ ಕೆಲಸವಿಲ್ಲ. ಒಂದೊಂದು ರೂಪಾಯಿಗೂ ಹೆಣಗಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 1.2 ಕೋಟಿ ರೂ. ಸಾಲ ಇದ್ದು, ಇತ್ತ ತೀರಿಸಲು ಹಣವು ಇಲ್ಲ, ಸರಿಯಾದ ಕೆಲಸವೂ ಇಲ್ಲ. ಯಾವುದೇ ಅವಕಾಶ ಸಿಗದೆ ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದೇನೆ ಎಂದು ಹಿಂದಿ ನಟ ಗುರುಚರಣ್ ಸಿಂಗ್ ಸಂದರ್ಶನವೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. ಕಳೆದ 4 ವರ್ಷಗಳಿಂದ ಅನುಭವಿಸುತ್ತಿದ್ದೇನೆ. ಕೆಲಸಕ್ಕಾಗಿ ಮುಂಬೈನಲ್ಲಿಯೇ ಸದ್ಯಕ್ಕೆ ಉಳಿದುಕೊಂಡಿದ್ದೇನೆ. ಜನ ನನ್ನ ತುಂಬ ಇಷ್ಟಪಡುತ್ತಾರೆ ಅದು ನನಗೆ ಗೊತ್ತಿದೆ. ಆದ್ರೆ, ನಾನೇನು ಮಾಡಲಿ? ಯಾವ ಕೆಲಸವು ಕೈಹಿಡಿಯುತ್ತಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ-ತಾಯಿ ಇದ್ದಾರೆ, ಅವರ ಯೋಗಕ್ಷೇಮ ವಿಚಾರಿಸಬೇಕು, ಅವರಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ, ನನ್ನ ಕಷ್ಟಗಳಿಂದ ಇದ್ಯಾವುದು ಈಡೇರುತ್ತಿಲ್ಲ’ ಎಂದು ಭಾವುಕರಾದರು. ‘ನಾನು ಸಂಪಾದನೆ ಮಾಡಬೇಕು, ನನ್ನ ಮನೆಯ ಜವಾಬ್ದಾರಿಯನ್ನು ಹೊರಬೇಕು. ನನಗೆ 1.2 ಕೋಟಿ ರೂ. ಸಾಲವಿದೆ. ಪ್ರತಿ ತಿಂಗಳು ಸಾಲದ ಕಂತುಗಳು ಮತ್ತು ಕ್ರೆಡಿಟ್ ಕಾರ್ಡ್ ಇಎಂಐಗಳನ್ನು ಕಟ್ಟಲೇಬೇಕಿದೆ.…
ಕೆಲ ಸಮಯಗಳ ಕಾಲ ಅಸಮಾಧಾನಗೊಂಡಿದ್ದ ಭಾರತ ಹಾಗೂ ಮಾಲ್ಡೀವ್ಸ್ ಇದೀಗ ಒಂದಾಗಿದೆ. ಇದನ್ನೇ ಬಳಸಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದ ಚೀನಾಕ್ಕೆ ಹಿನ್ನಡೆಯಾಗಿದೆ. ದ್ವೀಪಗಳ ರಾಷ್ಟ್ರ ಮಾಲ್ಡೀವ್ಸ್ ತನ್ನ 28 ದ್ವೀಪಗಳ ಅಭಿವೃದ್ಧಿ ಕಾರ್ಯವನ್ನು ಭಾರತಕ್ಕೆ ವಹಿಸಿ ಕೊಡಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಇದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಭೇಟಿಯ ಫಲವಾಗಿದ್ದು, ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ದೊಡ್ಡ ಮಟ್ಟದ ರಾಜತಾಂತ್ರಿಕ ಗೆಲುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದಾಗ ಮಾಲ್ಡೀವ್ಸ್ ಗೊಂದಲಕ್ಕೆ ಬಿದ್ದು ತಪ್ಪು ಮಾಡಿತ್ತು. ಅಲ್ಲಿನ ರಾಜಕಾರಣಿಗಳು ಭಾರತ ವಿರೋಧಿ ಹೇಳಿಕೆ ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾದರು. ಹೀಗಾಗಿ ಅಲ್ಲಿಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಯಿತು. ಹೀಗಾಗಿ ಆ ದೇಶಕ್ಕೆ ಚೀನಾದ ನೆರವು ಅಗತ್ಯವಾಯಿತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದೆ. ದ್ವೀಪ ರಾಷ್ಟ್ರವು ತನ್ನ ಭಾರತದೊಂದಿಗೆ ಶಾಂತಿ ಸ್ಥಾಪಿಸಲು ಸಿದ್ಧವಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಭಾನುವಾರ ಮಾಲ್ಡೀವ್ಸ್ ಭೇಟಿ ಮುಕ್ತಾಯಗೊಳಿಸಿದ್ದರು.…
ಸ್ಯಾಂಡಲ್ ವುಡ್ ನ ಮುದ್ದಾದ ಜೋಡಿಗಳಲ್ಲಿ ಒಂದು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. ಯಶ್ ಹಾಗೂ ರಾಧಿಕಾ ಗೆ ಇಂದು (ಆ.12) ಎಂಗೇಜ್‌ಮೆಂಟ್ ಸಂಭ್ರಮವಾಗಿದ್ದು, ಪತಿ ಯಶ್ ಬಗ್ಗೆ ರಾಧಿಕಾ ವಿಶೇಷ ಪೋಸ್ಟ್ ಮೂಲಕ ಶುಭ ಹಾರೈಸಿದ್ದಾರೆ. 100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಯಶ್ ಕುರಿತು ನಟಿ ಬರೆದುಕೊಂಡಿದ್ದಾರೆ. 8 ವರ್ಷಗಳ ಹಿಂದೆ ಈ ದಿನ ನಾವು ನಿಶ್ಚಿತಾರ್ಥ ಮಾಡಿಕೊಂಡಾಗ ನಾನು ನೂರು ಜನ್ಮದಲ್ಲೂ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. 2016ರ ವೇಳೆ, ಆ.12ರಂದು ತೆಗೆದ ಎಂಗೇಜ್‌ಮೆಂಟ್ ಸಂಭ್ರಮದ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ್ ಹಾಗೂ ರಾಧಿಕಾ ಪಂಡಿತ್ ಹಲವು ವರ್ಷಗಳ ಕಾಲ ಪ್ರೀತಿಸಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ದಾಂಪತ್ಯಕ್ಕೆ ಇಬ್ಬರೂ ಮುದ್ದಾದ ಮಕ್ಕಳು ಸಾಕ್ಷಿಯಾಗಿದ್ದಾರೆ. ಇನ್ನೂ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾದ ರಾಧಿಕಾ, ಬಣ್ಣದ ಲೋಕದಿಂದ…
ಸುಳ್ಳು ಅಥವಾ ದಾರಿತಪ್ಪಿಸುವ ಸುದ್ದಿಗಳನ್ನು ಪ್ರಕಟಿಸಿದರೆ ಅಂತಹ ಮಾಧ್ಯಮಗಳನ್ನು ಮುಚ್ಚುವುದಾಗಿ ಬಾಂಗ್ಲಾದೇಶದ ನೂತನ ಸರ್ಕಾರ ಎಚ್ಚರಿಕೆ ನೀಡಿದೆ. ಮಧ್ಯಂತರ ಸರ್ಕಾರದ ಗೃಹ ವ್ಯವಹಾರಗಳ ಸಲಹೆಗಾರ ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ ಸಖಾವತ್ ಹೊಸೈನ್ ಅವರು ಬಾಂಗ್ಲಾದೇಶ ಮಾಧ್ಯಮವು ಸತ್ಯವನ್ನು ಎತ್ತಿಹಿಡಿಯಲು ವಿಫಲವಾಗಿದೆ. ಮಾಧ್ಯಮಗಳು ಸತ್ಯವನ್ನು ಎತ್ತಿಹಿಡಿಯದಿದ್ದಾಗ ರಾಷ್ಟ್ರವು ತತ್ತರಿಸುತ್ತದೆ ಎಂದಿದ್ದಾರೆ. ಸುಳ್ಳು ಅಥವಾ ದಾರಿತಪ್ಪಿಸುವ ಸುದ್ದಿಗಳನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಅವುಗಳನ್ನು ಮುಚ್ಚುತ್ತೇವೆ. ಟಾಕ್ ಶೋಗಳಲ್ಲಿ ವಸ್ತುನಿಷ್ಠ ಚರ್ಚೆಯ ಕೊರತೆಯಿದೆ ಮತ್ತು ನಿಖರವಾದ ಮಾಹಿತಿಯನ್ನು ನೀಡಲು ಮಾಧ್ಯಮಗಳು ವಿಫಲವಾಗಿವೆ ಎಂದು ಆರೋಪಿಸಿದರು. ಮೀಸಲಾತಿ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ. ನೂತನ ಸರ್ಕಾರ ರಚನೆಯಾಗುವವರೆಗೂ ಮಧ್ಯಂತರ ಸರ್ಕಾರ ಅಧಿಕಾರದಲ್ಲಿ ಇರಲಿದೆ. ಬ್ಯಾಂಕರ್, ನೊಬೆಲ್ ಬಹುಮಾನ ವಿಜೇತ ಮೊಹಮ್ಮದ್ ಯೂನಸ್ ಅವರು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.
ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮಾಜಿ ಮುಖ್ಯಸ್ಥ ಫೈಜ್ ಹಮೀದ್ ಅವರನ್ನು ಸೇನೆ ಬಂಧಿಸಿದೆ. ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗವು, ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಆದೇಶ ಅನುಸರಿಸಿ, ಲೆಫ್ಟಿನೆಂಟ್ ವಿರುದ್ಧ ಮಾಡಿದ ಟಾಪ್ ಸಿಟಿ ಕೇಸ್‌ನಲ್ಲಿನ ದೂರುಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಪಾಕಿಸ್ತಾನದ ಸೇನೆಯು ತನಿಖೆ ಕೈಗೊಂಡಿದೆ. ಪಾಕಿಸ್ತಾನ ಸೇನಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಕೈಗೊಳ್ಳಲಾಗಿದೆ. ಪಾಕಿಸ್ತಾನದ ಖಾಸಗಿ ವಸತಿ ಯೋಜನೆಯಾದ ಟಾಪ್ ಸಿಟಿ, ಹಮೀದ್ ವಿರುದ್ಧ ಆರೋಪಗಳನ್ನು ಮಾಡಿದೆ. ಟಾಪ್ ಸಿಟಿ ಮಾಲೀಕ ಮೊಯೀಜ್ ಖಾನ್ ಅವರ ಕಚೇರಿಗಳು ಮತ್ತು ನಿವಾಸದ ಮೇಲೆ ಹಮೀದ್ ದಾಳಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಮೀದ್ ವಿರುದ್ಧದ ಅಧಿಕಾರ ದುರುಪಯೋಗದ ಆರೋಪಗಳನ್ನು ತನಿಖೆ ಮಾಡಲು ಪಾಕಿಸ್ತಾನ ಸೇನೆಯು ಏಪ್ರಿಲ್‌ನಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತು. ಕಳೆದ ವರ್ಷ ನವೆಂಬರ್‌ನಲ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್,…
ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಈಗ ಗೋಪಿಲೋಲ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇದೀಗ ಈ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗಷ್ಟೇ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಟೆಯಿತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ಉಮೇಶ್ ಬಣಕಾರ್ ನಿನ್ನೆ ನಿನ್ನೆ ನೆಚ್ಚಿಕೊಂಡೆ ಎಂಬ ಹಾಡನ್ನು ಅನಾವರಣ ಮಾಡಿದರು. ಬಳಿಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಒಂದು ಸಾಂಗ್ ನಾವು ನೋಡುತ್ತವೆ. ಆದರೆ ಆ ಹಾಡಿನ ಹಿಂದೆ ಎಷ್ಟು ಕೆಲಸ ಮಾಡಿರುತ್ತಾರೆ ಎಂದರೆ ಮೇಕಪ್, ಪ್ರೊಡಕ್ಷನ್, ಪ್ರೊಡಕ್ಷನ್ ಮ್ಯಾನೇಜರ್, ಕಾಸ್ಟ್ಯೂಮ್ ಡಿಸೈನ್..ಈ ರೀತಿ ಹಲವರ ಪ್ರಯತ್ನ ಇರುತ್ತದೆ. ಈ ಹಾಡನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಲೋಕೇಷನ್, ನಟನೆ ಓವರ್ ಆಗಿ ಮಾಡದೇ ಹಾಡಿಗೆ ಎಷ್ಟು ಬೇಕೋ ಅಷ್ಟೂ ಮಾಡಿದ್ದಾರೆ. ನಿರ್ದೇಶಕರು, ಕೊರಿಯೋಗ್ರಫರ್ ಎಲ್ಲರೂ ಅದ್ಭುತ…
ಪಂಜಾಬ್ ಕಿಂಗ್ಸ್ ಹಾಗೂ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶಲಾಕಾ ಮಕೇಶ್ವರ್ ಅವರೊಂದಿಗೆ ಎಂಗೇಜ್‌ಮೆಂಟ್ ಮಾಡಿರುವ ಫೋಟೋಗಳನ್ನು ಜಿತೇಶ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಿತೇಶ್ ಶರ್ಮಾ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಯುವ ವಿಕೆಟ್ ಕೀಪರ್ ಗ್ರೇಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರೆ, ಶಲಾಕಾ ಮಕೇಶ್ವರ್ ಅವರು ಸಾಂಪ್ರದಾಯಿಕ ಸೀರೆ ತೊಟ್ಟಿದ್ದು, ಇಬ್ಬರು ತಮ್ಮ ಕೈಗಳಲ್ಲಿ ಹೂಗುಚ್ಛಗಳನ್ನು ಹಿಡಿದುಕೊಂಡಿದ್ದರು. ಇಬ್ಬರೂ ಮಹಾರಾಷ್ಟ್ರದವರಿಗೂ ಹಿಂದೂ ಸಾಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜಿತೇಶ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ಗೆನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಸುಂದರ ಶೀರ್ಷಿಕೆಯನ್ನು ನೀಡಿದ್ದಾರೆ. “ಈ ಹುಚ್ಚು ಪ್ರಪಂಚದಲ್ಲಿ 8,8,8 ಆಗಸ್ಟ್ 8, 2024 ರಂದು ನಾವು ಹೊಸ ಲೋಕಕ್ಕೆ ಶಾಶ್ವತವಾಗಿ ಹೆಜ್ಜೆ ಇಟ್ಟಿದ್ದೇವೆ,” ಎಂದು ಪೋಸ್ಟ್ ಹಾಕಿದ್ದಾರೆ. ಟೀಮ್ ಇಂಡಿಯಾದ ಯಂಗ್ ವಿಕೆಟ್ ಕೀಪರ್ ಜಿತೇಶ್ ಶರ್ಮಾರ ಭಾವಿ ಪತ್ನಿ ಶಲಾಕಾ ಮಕೇಶ್ವರ್ ಅವರು ಮೆಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್…
ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಹಾಗೂ ಲಕ್ಷ್ಮಿಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಜೋಡಿ ಇದೀಗ ಚಂದದ ಫೋಟೋ ಶೂಟ್ ಮಾಡಿಸಿದ್ದಾರೆ. ಪಾರ್ಕ್ ನಲ್ಲಿ ಚಂದನ್ ಹಾಗೂ ಕವಿತಾ ಗೌಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತುಂಬು ಗರ್ಭಿಣಿ ಕವಿತಾ ಗೌಡ ಹಳದಿ ಬಣ್ಣದ ಗೌನ್ ತೊಟ್ಟಿದ್ದರೆ, ಚಂದನ್ ಕಪ್ಪು ಬಣ್ಣದ ಸ್ವೆಟ್ ಟೀಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿಕೊಂಡಿದ್ದಾರೆ. ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರ ಈ ಒಂದು ಫೋಟೋ ಶೂಟ್ ಅಲ್ಲಿ ಚಂದನ್, ಗರ್ಭಿಣಿ ಕವಿತಾ ಗೌಡ ಅವರ ಹೊಟ್ಟೆ ಬಳಿ ಕಳಿತುಕೊಂಡಿದ್ದಾರೆ. ತಾಯಿ ಹೊಟ್ಟೆಯಲ್ಲಿರೋ ಮಗುವಿನ ಜೊತೆಗೆ ಮಾತನಾಡೋ ರೀತಿಯಲ್ಲಿಯೇ ವಿಶೇಷವಾಗಿಯೇ ಎಕ್ಸಪ್ರೆಷನ್ ನೀಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ವೀಕ್ಷಕರ ಮನಗೆದ್ದ ಚಂದನ್ ಹಾಗೂ ಕವಿತಾ ಗೌಡ ಬಳಿಕ ರಿಯಲ್ ಲೈಫ್ ನಲ್ಲೂ ಒಂದಾಗಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಚಂದನ್…