Author: Prajatv Kannada

ಪಂಜಾಬ್ ಕಿಂಗ್ಸ್ ಹಾಗೂ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶಲಾಕಾ ಮಕೇಶ್ವರ್‌ ಅವರೊಂದಿಗೆ ಎಂಗೇಜ್‌ಮೆಂಟ್‌ ಮಾಡಿರುವ ಫೋಟೋಗಳನ್ನು ಜಿತೇಶ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜಿತೇಶ್ ಶರ್ಮಾ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಯುವ ವಿಕೆಟ್ ಕೀಪರ್ ಗ್ರೇಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರೆ, ಶಲಾಕಾ ಮಕೇಶ್ವರ್‌ ಅವರು ಸಾಂಪ್ರದಾಯಿಕ ಸೀರೆ ತೊಟ್ಟಿದ್ದು, ಇಬ್ಬರು ತಮ್ಮ ಕೈಗಳಲ್ಲಿ ಹೂಗುಚ್ಛಗಳನ್ನು ಹಿಡಿದುಕೊಂಡಿದ್ದರು. ಇಬ್ಬರೂ ಮಹಾರಾಷ್ಟ್ರದವರಿಗೂ ಹಿಂದೂ ಸಾಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜಿತೇಶ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ಗೆನಲ್ಲಿ ಹಂಚಿಕೊಂಡಿರುವ ಫೋಟೋಗಳಿಗೆ ಸುಂದರ ಶೀರ್ಷಿಕೆಯನ್ನು ನೀಡಿದ್ದಾರೆ. “ಈ ಹುಚ್ಚು ಪ್ರಪಂಚದಲ್ಲಿ 8,8,8 ಆಗಸ್ಟ್ 8, 2024 ರಂದು ನಾವು ಹೊಸ ಲೋಕಕ್ಕೆ ಶಾಶ್ವತವಾಗಿ ಹೆಜ್ಜೆ ಇಟ್ಟಿದ್ದೇವೆ,” ಎಂದು ಪೋಸ್ಟ್ ಹಾಕಿದ್ದಾರೆ. ಟೀಮ್ ಇಂಡಿಯಾದ ಯಂಗ್ ವಿಕೆಟ್ ಕೀಪರ್ ಜಿತೇಶ್ ಶರ್ಮಾರ ಭಾವಿ ಪತ್ನಿ ಶಲಾಕಾ ಮಕೇಶ್ವರ್‌ ಅವರು ಮೆಗೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್…

Read More

ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಹಾಗೂ ಲಕ್ಷ್ಮಿಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಮೊದಲ ಮಗುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಜೋಡಿ ಇದೀಗ ಚಂದದ ಫೋಟೋ ಶೂಟ್ ಮಾಡಿಸಿದ್ದಾರೆ. ಪಾರ್ಕ್ ನಲ್ಲಿ ಚಂದನ್ ಹಾಗೂ ಕವಿತಾ ಗೌಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತುಂಬು ಗರ್ಭಿಣಿ ಕವಿತಾ ಗೌಡ ಹಳದಿ ಬಣ್ಣದ ಗೌನ್ ತೊಟ್ಟಿದ್ದರೆ, ಚಂದನ್ ಕಪ್ಪು ಬಣ್ಣದ ಸ್ವೆಟ್ ಟೀಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿಕೊಂಡಿದ್ದಾರೆ. ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರ ಈ ಒಂದು ಫೋಟೋ ಶೂಟ್‌ ಅಲ್ಲಿ ಚಂದನ್, ಗರ್ಭಿಣಿ ಕವಿತಾ ಗೌಡ ಅವರ ಹೊಟ್ಟೆ ಬಳಿ ಕಳಿತುಕೊಂಡಿದ್ದಾರೆ. ತಾಯಿ ಹೊಟ್ಟೆಯಲ್ಲಿರೋ ಮಗುವಿನ ಜೊತೆಗೆ ಮಾತನಾಡೋ ರೀತಿಯಲ್ಲಿಯೇ ವಿಶೇಷವಾಗಿಯೇ ಎಕ್ಸಪ್ರೆಷನ್ ನೀಡಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ   ವೀಕ್ಷಕರ ಮನಗೆದ್ದ  ಚಂದನ್ ಹಾಗೂ ಕವಿತಾ ಗೌಡ ಬಳಿಕ ರಿಯಲ್ ಲೈಫ್ ನಲ್ಲೂ ಒಂದಾಗಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಚಂದನ್…

Read More

ಬೆಂಗಳೂರು : ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ  ಜಿಕೆವಿಕೆ ದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ವಿಶ್ವ ಆನೆ ದಿನದಂದು ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿಲಾಗಿತ್ತು https://youtu.be/ZsNpIMzaJnc?si=-3FqihadeJI7rK4D ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ಬೆಳಗಿಸುವ ಹಾಗೂ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್,ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಹಾಗೆ ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಜಾರ್ಖಂಡ್ ಅರಣ್ಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇದು ದರ್ಶನ್ ಅಭಿಮಾನಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ‘ದರ್ಶನ್ ಬಂಧನ ತಪ್ಪು’ ಎಂದು ಅವರು ವಾದಿಸುತ್ತಿದ್ದಾರೆ. ಈ ಬೆನ್ನಲೇ ಕೆಲ ದರ್ಶನ್ ಅಭಿಮಾನಿಗಳು ‘ದರ್ಶನ್ ಬಿಡುಗಡೆ ಆಗುವವರೆಗೆ ಕನ್ನಡದ ಯಾವುದೇ ಸಿನಿಮಾ ನೋಡಲ್ಲ’ ಎಂದು ಶಪಥ ಮಾಡಿದ್ದರು. ಇದೇ ಸಮಯಕ್ಕೆ ಕೆಲ ಸಿನಿಮಾಗಳು ಫ್ಲಾಪ್ ಆದವು. ದರ್ಶನ್ ಫ್ಯಾನ್ಸ್ ಸಿನಿಮಾ ನೋಡದೇ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತು ಕೇಳಿ ಬಂತು. ಇದನ್ನು ‘ಭೀಮ’ ಸಿನಿಮಾ ಸುಳ್ಳು ಮಾಡಿದೆ. ಜನರು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದು ಇದರಿಂದ ದರ್ಶನ್ ಅಭೀಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ದರ್ಶನ್ ಬಂಧನದ ಬಳಿಕ ಅವರ ಫ್ಯಾನ್ಸ್ ಮಾಡಿದ ಶಪಥದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು. ‘ದರ್ಶನ್ ಫ್ಯಾನ್ಸ್ ಸಿನಿಮಾ ನೋಡದೇ ಇರುವುದರಿಂದಲೇ ಕನ್ನಡ ಸಿನಿಮಾಗಳು ಓಡುತ್ತಿಲ್ಲ’ ಎಂದು ಕೆಲವರು ಅಭಿಪ್ರಾಯಪಟ್ಟರು. ಆದರೆ, ಈಗ ‘ಭೀಮ’ ಸಿನಿಮಾ ಗೆಲುವು ಕಂಡಿರುವುದರಿಂದ ದರ್ಶನ್ ಅಭಿಮಾನಿಗಳು ಅಂದುಕೊಂಡಿದ್ದು ಸುಳ್ಳಾಗಿದೆ.…

Read More

ವೀಳ್ಯದೆಲೆ ಎಂದರೆ ಅದರ ಬಗ್ಗೆ ಗ್ರಾಮಾಂತರ ಪ್ರದೇಶದ ಜನರಿಗೆ ಹೆಚ್ಚಿಗೆ ವಿವರಿಸಬೇಕೆಂದಿಲ್ಲ. ಅದೇ ನಗರ ವಾಸಿಗಳು ಕೂಡ ಪಾನ್ ಶಾಪ್ ಗಳಲ್ಲಿ ಇದನ್ನು ನೋಡಿರಬಹುದು. ಪಾನ್ ಶಾಪ್ ಗಳಲ್ಲಿ ಸಿಗುವಂತಹ ವೀಳ್ಯದೆಲೆಯು ಒಂದು ರೀತಿಯ ಹೈಬ್ರೀಡ್ ಎಲೆ ಎನ್ನಬಹುದು. ದೇಶೀಯ ವೀಳ್ಯದೆಲೆಯಲ್ಲಿ ಹೆಚ್ಚಿನ ಔಷಧೀಯ ಗುಣಗಳು ಇವೆ ಎಂದು ಹೇಳಲಾಗುತ್ತದೆ. ಭಾರತೀಯರು ಆಯುರ್ವೇದದಲ್ಲಿ ವಿವಿಧ ರೀತಿಯ ಚಿಕಿತ್ಸೆಗೆ ಇದನ್ನು ಬಳಸಿಕೊಂಡು ಬಂದಿದ್ದಾರೆ ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ವೀಳ್ಯದೆಲೆಯು ಹಲವಾರು ಆರೋಗ್ಯ ಲಾಭಗಳನ್ನು ನೀಡುವುದು. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು, ಹಲ್ಲಿನ ಆರೋಗ್ಯ ಕಾಪಾಡುವುದು, ಗಾಯ ಗುಣಪಡಿಸುವುದು ಮತ್ತು ಮಧುಮೇಹ ನಿಯಂತ್ರಣದಲ್ಲಿ ಇಡುವುದು. ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ವೀಳ್ಯದೆಲೆ ಜೀರ್ಣಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ, ಗ್ಯಾಸ್ಟ್ರಿಕ್ ಟ್ರಬಲ್ ನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ. ಮಕ್ಕಳಲ್ಲಿನ ಕೆಮ್ಮು ಮತ್ತು ಅಜೀರ್ಣಕ್ಕೆ ಈ ಎಲೆಯ ರಸ ಉಪಯೋಗ. ಸಣ್ಣ ಮಕ್ಕಳಲ್ಲಿ ಉಸಿರಾಟದ…

Read More

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಜೋರಾಗಿದೆ. ರಾಜಾಹುಲಿ & ಸನ್ ವಿರುದ್ಧ ಉತ್ತರ ಕರ್ನಾಟಕ ಬಿಜೆಪಿಯ ಜೋಡಿ ಹುಲಿಗಳು ಮುಗಿಬಿದ್ದಿವೆ‌. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್ ಸಮರ ಸಾರಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. https://youtu.be/-beoKNuFVJU?si=ce_9FKnNQTag46EF ಈ ಎಲ್ಲ ಬೆಳವಣಿಗೆಗಳ ಮಧ್ಯೆ ಜಾರಕಿಹೊಳಿ, ಯತ್ನಾಳ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದಾರೆ‌. ಈ ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೀತು ಎಂಬಾ ಇನ್‌ಸೈಡ್ ಮಾಹಿತಿ ಇಲ್ಲಿದೆ ನೋಡಿ.. ಹೌದು.. ವೀಕ್ಷಕರೇ.. ರಾಜ್ಯ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಮನೆಯೊಂದು ಮೂರು ಬಾಗಿಲು ಅನ್ನೋ ಪರಿಸ್ಥಿತಿ ಇತ್ತು. ವಿಪಕ್ಷದಲ್ಲೂ ಅದೇ ಪರಿಸ್ಥಿತಿ ಮುಂದುವರಿದಿದೆ. ಅದರಲ್ಲೂ ರಾಜ್ಯ ರಾಜಕಾರಣದ ಶಕ್ತಿ ಕೇಂದ್ರ ಬೆಳಗಾವಿಯಿಂದಲೇ ಬಿಜೆಪಿ ಭಿನ್ನಮತ ಶುರುವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರನನ್ನ ನಾವು ಒಪ್ಪಲ್ಲ, ಒಪ್ಪೋದು ಇಲ್ಲ ಎಂದಿದ್ದ ಗೋಕಾಕ ಸಾಹುಕಾರ್ ಹಾಗೂ ಯತ್ನಾಳಗೆ ಈಗ ಮತ್ತಷ್ಟು ಬಲ ಸಿಕ್ಕಿದೆ. ಮೈಸೂರು ಪಾದಯಾತ್ರೆ ಸಮಾರೋಪ ಬಳಿಕ ಬೆಳಗಾವಿಯಲ್ಲಿ…

Read More

ಕೆಆರ್ ಪುರಂ ಭಾಗದಲ್ಲಿ ನವಜಾತ ಶಿಶುಗಳ ಹಾರೈಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ನೂತ‌ನ ಹೈಟೆಕ್ ಓವಂ ಆಸ್ಪತ್ರೆಯನ್ನು ಮಾಜಿ ಸಚಿವ ಬೈರತಿ ಬಸವರಾಜ್ ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ನೂತನ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬೈರತಿ ಬಸವರಾಜ್ ಅವರು ಈಗಾಗಲೇ ಬೆಂಗಳೂರಿನ ಹಲವು ಭಾಗಗಳಲ್ಲಿ ಓವಂ ಆಸ್ವತ್ರೆ ತಲೆ ಎತ್ತಿದ್ದು ಈವರೆಗೂ 15 ಸಾವಿರಕ್ಕೂ ಅಧಿಕ ನವಜಾತ ಶಿಶುಗಳ‌ ಹಾರೈಕೆ ಮಾಡಿದೆ. https://youtu.be/7hwFhX–AMI?si=1-xPcOpBaWDchHWj ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಓವಂ ಆಸ್ವತ್ರೆಯು ಕಾರ್ಯ ನಿರ್ವಹಿಸುತ್ತಿದ್ದು, ಕೆಆರ್ ಪುರಂ ಭಾಗಗಳಲ್ಲಿ ಇರುವ ಬಡ, ಮಧ್ಯಮ ಹಾಗೂ ಶ್ರೀಮಂತ ಕುಟುಂಬಗಳಿಗೂ ಒವಂ ಆಸ್ವತ್ರೆ ಸಹಕಾರಿಯಾಗಲಿದೆ. ಇನ್ನೂ ನೂತನ ಆಸ್ವತ್ರೆಯಲ್ಲಿ ಹೈಟೆಕ್ ಬೆಡ್ ಗಳು, ಆಧುನಿಕ ತಂತ್ರಜ್ಞಾನದ ಮಿಷನ್ ಗಳು, ಐಸಿಯು ತುರ್ತು ಚಿಕಿತ್ಸಾಕ ಸೌಲಭ್ಯಗಳು ಸೇರಿದಂತೆ ತುರ್ತು ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದರು‌. ಒವಂ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಆದರ್ಶ ಸೋಮಶೇಖರ್ ರವರು ಮಾತನಾಡಿ, ನವಜಾತ…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವೆಡೆ ಮಂಗಳವಾರ ಕರೆಂಟ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಕಾಮಗಾರಿ ಹಿನ್ನೆಲೆ, ಮಂಗಳವಾರ ಆಗಸ್ಟ್​ 13 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪವರ್ ಕಟ್ ಇರಲಿದೆ https://youtu.be/hZLZhTr9ebQ?si=Il68Y5hAFfwm6Gyb ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್‌ಗ್ರೋವ್, ದೇವಮತ ಶಾಲೆ, ಅಮರ್‌ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೋನಿ ಹೆಚ್.ಆರ್.ಬಿ.ಆರ್. , ಹೊರಮಾವು ಪಿ&ಟಿ ಲೇಔಟ್, ನಿಸರ್ಗ ಬಡಾವಣೆ, ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿ.ಡಬ್ಲೂ.ಎಸ್. ಎಸ್.ಬಿ ವಾಟರ್‌ಟ್ಯಾಂಕ್ ನಲ್ಲಿ ಪವರ್ ಕಟ್ ಆಗಲಿದೆ. ಅಲ್ಲದೆ ಹೆಣ್ಣೂರು ಗ್ರಾಮ, ಚೆಳ್ಳಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯಎನ್‌ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಳನಗರ, ಬೃಂದಾವನ ಲೇಔಟ್, ವಿನಾಯಕ ಲೇಔಟ್, ವಿವೇಕಾನಂದ ಲೇಔಟ್, ಮಂಜುನಾಥನಗರ ರಸ್ತೆ, ಎನ್.ಆರ್.ಐ ಲೇಔಟ್,…

Read More

ಹಾಸನ: ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು 15 ಜನರು ಅಸ್ವಸ್ಥರಾದ ಘಟನೆ ನಡೆದಿದೆ. ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ. ಹದಿನೈದು ಮಂದಿಯನ್ನೂ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕೆ.ಬಿ.ಚಂದ್ರು ಎಂಬುವವರಿಗೆ ಸೇರಿದ ಗದ್ದೆಯಲ್ಲಿ 25 ಮಂದಿ ನಾಟಿ ಮಾಡುತ್ತಿದ್ದರು. ಈ ವೇಳೆ ಗುಡುಗು, ಸಿಡಿಲು ಸಹಿತ ದಿಢೀರ್ ಮಳೆ ಶುರುವಾಗಿ, ಸಿಡಿಲು ಬಡಿದು ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ರೇಣುಕಾ (49), ಸವಿತಾ (45), ಸುಮಿತ್ರ (51), ರೇಣುಕಮ್ಮಾ (55), ನೇತ್ರ (40), ನಿರ್ಮಲ (51), ವೀಣಾ (35), ಅನಿತಾ (55) ಸೇರಿ ಹದಿನೈದು ಮಂದಿಗೆ ಗಾಯವಾಗಿದ್ದು, ಲತಾ (35) ಎಂಬುವವರ ಸ್ಥಿತಿ ಗಂಭೀರ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಗದ್ದೆ ಗ್ರಾಮದಲ್ಲಿ ನಡೆದಿದೆ.

Read More