ಚಿತ್ರದುರ್ಗ:- ಚಿತ್ರದುರ್ಗದಲ್ಲಿ ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾರೆ. 38 ವರ್ಷದ ಮಂಜುನಾಥ ಮೃತರು. ಕಳೆದ ಎರಡು ವರ್ಷಗಳ ಹಿಂದೆ ಚೇತನ ಜೊತೆ ಮಂಜುನಾಥ್ ವಿವಾಹ ವಾಗಿದ್ದ. ಕೌಟುಂಬಿಕ ಕಲಹದ ಹಿನ್ನಲೆ ಪತಿಗೆ ಚೇತನ ಕಿರುಕುಳ ನೀಡುತ್ತಿದ್ದರು ಎಂದುಪತ್ನಿ ಚೇತನಾ ವಿರುದ್ದ ಮಂಜುನಾಥ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಪತಿ ಮುಂಜುನಾಥ್ ವಿರುದ್ದ ಮಹಿಳಾ ಠಾಣೆಗೆ ಪತ್ನಿ ಚೇತನ ದೂರು ಕೊಟ್ಟಿದ್ದರು. ಇದರಿಂದ ಮನನೊಂದು ಮನೆಯಲ್ಲಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
Author: Prajatv Kannada
ಕೊಪ್ಪಳ:- ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದು, ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ ಘಟನೆ ಜರುಗಿದೆ. https://youtu.be/OFLOq1ZO9FA?si=aYama5V0L6KKBqaJ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದ್ದು ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕ್ರಸ್ಟ್ ಗೇಟ್ ರಿಪೇರಿ ಮಾಡಲು ಡ್ಯಾನಲ್ಲಿನ ನೀರನ್ನು ಹಂತಹಂತವಾಗಿ ಖಾಲಿ ಮಾಡಲು ಸಿಬ್ಬಂದಿ ಮುಂದಾಗಿದ್ದಾರೆ. ಡ್ಯಾಂ ನೀರನ್ನು ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಜನ ಸುರಕ್ಷಿತವಾಗಿರುವಂತೆ ಜಿಲ್ಲಾಡಳಿತ ಡಂಗುರ ಸಾರಿ ಎಚ್ಚರಿಕೆ ನೀಡಿದೆ. ಹಾಗೂ ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಟಿಬಿ ಬೋರ್ಡ್ ಜಿಲ್ಲಾಡಳಿತ ಸೂಚನೆ ನೀಡಿದೆ. ನದಿ ಸಮೀಪಕ್ಕೆ ಮಕ್ಕಳನ್ನು, ಜಾನುವಾರುಗಳು ಹೋಗದಂತೆ ಎಚ್ಚರವಹಿಸಿ. ಟಿಬಿ ಡ್ಯಾಮ್ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಯಾರೂ ಕೂಡ ನದಿ ಪಾತ್ರಕ್ಕೆ ಹೋಗದಂತೆ ಟಿಬಿ ಡ್ಯಾಮ್ ಕೆಳಭಾಗದ ಕೊಪ್ಪಳ ತಾಲೂಕು, ಗಂಗಾವತಿ ತಾಲೂಕು, ಕಾರಟಗಿ ತಾಲೂಕಿನ ಗ್ರಾಮಗಳಲ್ಲಿ ಡಂಗುರ ಸಾರಿ ಗ್ರಾಮಸ್ಥರಿಗೆ ಸೂಚನೆ ನೀಡಲಾಗಿದೆ. ಇನ್ನು…
ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಬಿಜೆಪಿ ಮಾಜಿ ಶಾಸಕರ ಪತ್ನಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಯಿಕುಲ್ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಯಮ್‌ಥಾಂಗ್ ಹಾಕಿಪ್ ಅವರ ಮನೆಯ ಪಕ್ಕದಲ್ಲೇ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಹೌಕಿಪ್ ಅವರ 2ನೇ ಪತ್ನಿ ಸಪಂ ಚಾರುಬಾಲಾ ಅವರು ಸ್ಫೋಟದಲ್ಲಿ ಗಾಯಗೊಂಡ ನಂತರ ಅವರನ್ನು ಸಾಯಿಕುಲ್‌ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದಾಗ ಹಾಕಿಪ್ ಅವರ ಮನೆಯಲ್ಲೇ ಇದ್ದರು. ಆದ್ರೆ ಅವರು ಅಪಾಯದಿಂದ ಪಾರಾಗಿದ್ದಾರೆ. ಬಾಂಬ್ ಸ್ಫೋಟ ಸಂಭವಿಸಿದ್ದು ಹೇಗೆ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತುಮಕೂರು:- ಕಲ್ಪತರು ನಾಡಿನಲ್ಲಿ ಅತ್ಯಂತ ಸಣ್ಣ ಗಾತ್ರದ ವಿಕಾರಿ ಹಾವು ಪತ್ತೆಯಾಗಿದೆ. ಭಾರತದ 60 ಪ್ರಭೇದಗಳಲ್ಲಿ ವಿಷಯುಕ್ತ ಹವಳದ ಹಾವು ಇದಾಗಿದೆ. ತುಮಕೂರು ಜಿಲ್ಲೆ ಶಿರಾದ ಬುಕ್ಕಾಪಟ್ಟಣ ವನ್ಯ ಜೀವಿ ಧಾಮದಲ್ಲಿ ಹಾವು ಕಾಣಿಸಿಕೊಂಡಿದೆ. ವನ್ಯಜೀವಿ ನಿಸರ್ಗ ಸಂಸ್ಥೆಯ ಅಧ್ಯಕ್ಷ ಬಿ.ವಿ.ಗುಂಡಪ್ಪ ಹಾಗೂ ತಂಡದಿಂದ ಪತ್ತೆ ಹಚ್ಚಲಾಗಿದೆ. ಹವಳದ ಹಾವು ಸುಮಾರು 30 ರಿಂದ 40 ಸೆ.ಮೀ. ವರೆಗೆ ಬೆಳೆಯುವ ಸಾಮರ್ಥ್ಯ ಹೊಂದಿದೆ. ದೇಹ ತಲೆಯಿಂದ ಬಾಲದ ವರೆಗೆ ತೆಳಗ್ಗೆ ಸಿಲಿಂಡರ್ ಆಕಾರದಲ್ಲಿ ಏಕರೂಪವಾಗಿದೆ. ದೇಹದ ಮೇಲ್ಮೈ ಕಂದು ಬಣ್ಣ ಹೊಂದಿದ್ದರೆ ಕೆಳ ಭಾಗ ಹಳದಿ ಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿದೆ. ತಲೆ ಮತ್ತು ಕುತ್ತಿಗೆ ಕಪ್ಪು ಬಣ್ಣ ಹಾಗೂ ಸಣ್ಣ ಕಣ್ಣುಗಳನ್ನು ಒಳಗೊಂಡಿದೆ. ಬಾಲದ ತುದಿ ಮೊಂಡಾಗಿದ್ದು ಎರಡು ಕಪ್ಪು ಬಣ್ಣದ ಗೆರೆಗಳನ್ನು ಹೊಂದಿದೆ ದಖ್ಖನ್ ಪ್ರಸ್ಥಭೂಮಿಯ ತೇವ ಭರಿತ ಎಲೆ ಉದುರುವ ಕಾಡುಗಳಲ್ಲಿ ಮಾತ್ರ ಕಾಣಿಸೋ ಅಪರೂಪದ ಹಾವು ಇದಾಗಿದೆ ಎನ್ನಲಾಗಿದೆ
ಚಾಮರಾಜನಗರ:- ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಸೆರೆಯಾದ ಘಟನೆ ಚಾಮರಾಜನಗರ ತಾಲೂಕು ಮಹಂತಾಳಪುರ ಗ್ರಾಮದಲ್ಲಿ ಜರುಗಿದೆ. ಮಹಂತಾಳಪುರ ಗ್ರಾಮದ ಸಮೀಪದ ಕಲ್ಲು ಕ್ವಾರಿಯಲ್ಲಿ ಜೋಡಿ ಚಿರತೆ ಅಡಗಿತ್ತು. ಪ್ರತಿನಿತ್ಯ ಎರಡು ಚಿರತೆಗಳೂ ಕೂಡ ರೈತರ ಸಾಕು ಪ್ರಾಣಿಗಳನ್ನು ಕೊಂದು ಆತಂಕ ಸೃಷ್ಟಿಸಿತ್ತು. ಕಳೆದ ಮೂರು ದಿನದ ಹಿಂದೆ ಕಲ್ಲು ಕ್ವಾರಿಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿತ್ತು. ಈ ವೇಳೆ ಸ್ಥಳಿಯರು ಮೊಬೈಲಿನಲ್ಲಿ ಚಿರತೆಗಳ ಚಲನವಲನದ ಬಗ್ಗೆ ವಿಡಿಯೋ ಮಾಡಿದ್ರು. ಇದರಿಂದ ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅರಣ್ಯ ಇಲಾಕೆ ಚಿರತೆ ಸೆರೆಗೆ ಬೋನು ಅಳವಡಿಸಿದ್ರು. ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದೀಗ ಆ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದು ಮತ್ತೊಂದು ಚಿರತೆಯನ್ನೂ ಕೂಡ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರತಿಭಟನೆ ನಡೆಸಲಿದ್ದಾರೆ. https://youtu.be/OFLOq1ZO9FA?si=X6I2YJ8Ck0Aqrerk ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜೊತೆ ಸಭೆ ನಡೆಸಿದರೂ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಇಂದು ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಯಿಂದ ಸರ್ಕಾರಿ ಶಾಲೆಯಲ್ಲಿ ತರಗತಿಗಳು ವ್ಯತ್ಯಯವಾಗುವ ಸಾಧ್ಯತೆಯಿದೆ. ಬೃಹತ್ ಪ್ರತಿಭನೆ ಅಂಗವಾಗಿ ಆ.1 ರಿಂದಲೇ ವಿವಿಧ ಸ್ವರೂಪದ ಹೋರಾಟಗಳನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ. ಬೇಡಿಕೆ ಏನು ಸರ್ಕಾರ 2017 ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮೊದಲು ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತಃ 1 ರಿಂದ 7, 8ಕ್ಕೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1 ರಿಂದ 5ಕ್ಕೆ ಹಿಂಬಡ್ತಿ ನೀಡಿದೆ. ಇದರಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು 2016ಕ್ಕಿಂತ ಮೊದಲು ನೇಮಕ ಹೊಂದಿದ…
ಹೆಲಿಕಾಪ್ಟರ್‌ವೊಂದು ಹೋಟೆಲ್‌ನ ಮೇಲ್ಛಾವಣಿಗೆ ಅಪ್ಪಳಿಸಿದ್ದು, ಪೈಲಟ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಆಸ್ಟ್ರೇಲಿಯಾದ ಜನಪ್ರಿಯ ಪ್ರವಾಸಿ ತಾಣವಾದ ಕೈರ್ನ್ಸ್‌ನಲ್ಲಿ ನಡೆದಿದೆ. ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್‌ನ ಪ್ರಮುಖ ಗೇಟ್‌ವೇಯಾದ ಕೈರ್ನ್ಸ್ ನಗರದ ಹಿಲ್ಟನ್‌ನ ಡಬಲ್ ಟ್ರೀ ಹೋಟೆಲ್‌ನಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ‘ಭಾನುವಾರ ತಡರಾತ್ರಿ 2 ಗಂಟೆ ಸುಮಾರಿಗೆ ಡಬಲ್ ಎಂಜಿನ್ ಹೆಲಿಕಾಪ್ಟರ್ ಹೋಟೆಲ್ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೆಂಕಿ ಹೊತ್ತುಕೊಂಡಿದ್ದು, ತಕ್ಷಣ ಹೋಟೆಲ್‌ನಲ್ಲಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು ಎಂದು ಕ್ವೀನ್ಸ್‌ಲ್ಯಾಂಡ್ ಪೊಲೀಸರು ಮಾಹಿತಿ ನೀಡಿದ್ದಾರೆ. ಹೋಟೆಲ್‌ನಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು, ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಫೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗದಗ: ಪೊಲೀಸರು ಅಂದ್ರೆ ಕೇವಲ ಕಳ್ಳರನ್ನು, ರೌಡಿಗಳನ್ನು, ದರೋಡೆಕೋರರನ್ನು ಹಿಡಿಯೋದು ಮಾತ್ರ ಅಂದುಕೊಂಡಿರೋ ಜನ್ರಿಗೆ ಈ ಪೊಲೀಸರ ಕಾರ್ಯ ಕೊಂಚ ಡಿಫರೆಂಟ್ ಆಗಿದೆ ಗದಗ ಜಿಲ್ಲೆಯ ರೋಣ ಪೊಲೀಸರು ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ಸಮಾಜಮುಖಿ ಕಾರ್ಯವನ್ನ ಮಾಡಿ ರೋಣ ಜನ್ರ ಅಭಿನಂದನೆಗೆ ಪಾತ್ರರಾಗಿದ್ದಾರೆ. https://youtu.be/TgWzNlmO9pE?si=Dufx4Zis-NFOOsF- ನಿರಂತರ ಮಳೆ ಹಿನ್ನೆಲೆ ರೋಣ ಪಟ್ಟಣದ ಸೂಡಿ ವೃತ್ತದ ಬಸ್ ನಿಲ್ದಾಣದ ಬಳಿ ದೊಡ್ಡ ತಗ್ಗು ಗುಂಡಿಗಳೇ ಬಿದ್ದಿದ್ವು. ಇದ್ರಿಂದಾಗಿ ವಾಹನ ಸವಾರರು ಹೈರಾಣಾಗಿ ಹೋಗಿದ್ರು. ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿ ಶಾಪ ಹಾಕ್ತಿದ್ರು. ಎಷ್ಟೋ ದಿನವಾದ್ರೂ ಕೂಡಾ ತಗ್ಗು ಗುಂಡಿ ಮುಚ್ಚದಿರೋದನ್ನ ಗಮನಿಸಿದ ರೋಣ ಪೊಲೀಸರು ಸಿಪಿಐ ಎಸ್ ಎಸ್ ಬೀಳಗಿ ನೇತೃತ್ವದಲ್ಲಿ ಎ ಎಸ್ ಐ, ಎಸ್ ಬಿ ಪವಾಡಿ, ಪೋಲಿಸ್ ಪೇದೆ ರಮೇಶ್ ಜುಂಗೆನ್ನವರ್ ಮುರ್ರಂ ಮಣ್ಣು ಹಾಕಿ ತಗ್ಗು ಗುಂಡಿಗಳನ್ನ ಮುಚ್ಚೋ ಕೆಲಸ ಮಾಡಿದ್ದಾರೆ. ಆ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಪೊಲೀಸರ ಸಮಾಜಮುಖಿ ಕಾರ್ಯಕ್ಕೆ ಇದೀಗ ರೋಣದ ಜನ್ರು…
ಕೊಪ್ಪಳ: ತುಂಗಭದ್ರಾ ಡ್ಯಾಂನ ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಅಂತ ಬಹಿರಂಗ ಪಡಿಸಬೇಕು ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿ ಕಳಚಿಕೊಂಡ 19ನೇ ಕ್ರಸ್ಟ್‌ಗೇಟ್ ವೀಕ್ಷಣೆ ಮಾಡಿದ ಶಾಸಕ ಜನಾರ್ದನ ರೆಡ್ಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ತುಂಗಭದ್ರಾ ಜಲಾಶಯದ ನಿರ್ವಹಣೆಗೆ ಯಾರಿಗೆ ಕೊಟ್ಟಿದ್ದಾರೆ? ಇದಕ್ಕೆ ಎಲ್ಲಾ ಸರ್ಕರವೇ ಹೊಣೆ. ಡಿಕೆಶಿ ಅಚಾನಕ್ ಆಗಿದೆ ಅಂತ ಹೇಳ್ತಾರೆ, ಇದನ್ನ ಒಪ್ಪುವ ಪ್ರಶ್ನೆಯೇ ಬರಲ್ಲ ಅಂತ ಹೇಳಿದ್ದಾರೆ. ತುಂಗಭದ್ರಾ ಡ್ಯಾಂ ವಿಚಾರದಲ್ಲಿ ನಾನು ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲ್ಲ. ಆದ್ರೆ ಈ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯತನದ ವಿರುದ್ಧ ಸಿಬಿಐ ತನಿಖೆಯಾಗಬೇಕು. ಡ್ಯಾಂನ ವಾರ್ಷಿಕ ನಿರ್ವಹಣಾ ಗುತ್ತಿಗೆದಾರರು ಯಾರು? ಅವರಿಗೆ ಎಷ್ಟು ಕೋಟಿ ಹಣ ಸಂದಾಯ ಆಗಿದೆ? ಅಂತ ಸರ್ಕಾರ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಗೇಟ್ ಅನ್ನು ನೀವು ಸರಿ ಮಾಡದಿದ್ದರೇ ಯಾರಾದ್ರೂ ಒಬ್ಬರು ಸರಿಪಡಿಸ್ತಾರೆ. ಆದ್ರೆ ಇದು…
ಬಾಲಿವುಡ್ನ ಖ್ಯಾತ ನಟರು ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವುಗಳ ಪ್ರಾಣಕ್ಕೆ ಮಾರಕ ಎಂದು ಗೊತ್ತಿದ್ದರು ಸೆಲೆಬ್ರಿಟಿಗಳು ಮಾತ್ರ ಜಾಹೀರಾತಿನಲ್ಲಿ ಮಾನ್ ಮಾಸಾಲ ಸೇವಿಸಿ ಎಂದು ಹೇಳ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ಸಾಕಷ್ಟು ಭಾರಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್ನ ಹಿರಿಯ ನಟ ಮುಖೇಶ್ ಖನ್ನಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತುಂಬ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ಪಡೆದು ಸ್ಟಾರ್ ನಟನರು ಇಂಥ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಮುಖೇಶ್ ಖನ್ನಾ, ‘ನನ್ನನ್ನು ಕೇಳಿದರೆ, ಅಂಥ ನಟರನ್ನು ಹಿಡಿದು ಹೊಡೆಯಬೇಕು ಎನ್ನುತ್ತೇನೆ. ಅವರಿಗೂ ನಾನು ಇದನ್ನು ಹೇಳಿದ್ದೇನೆ. ಅಕ್ಷಯ್ ಕುಮಾರ್ಗೆ ಬೈಯ್ದಿದ್ದೇನೆ. ಅವರು ಆರೋಗ್ಯದ ಬಗ್ಗೆ ಕಾಳಜಿ ಇರುವ ಮನುಷ್ಯ. ಶಾರುಖ್ ಖಾನ್, ಅಜಯ್ ದೇವಗನ್ ಜೊತೆ ಅವರು ಈ ಜಾಹೀರಾತು ಮಾಡಿದ್ದಾರೆ. ಇಂಥ ಜಾಹೀರಾತುಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತದೆ. ಇದರಿಂದ ಜನರಿಗೆ…