ಬಾಲಿವುಡ್ನ ಖ್ಯಾತ ನಟರು ಪಾನ್ ಮಸಾಲಾ ಜಾಹೀರಾತಿನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವುಗಳ ಪ್ರಾಣಕ್ಕೆ ಮಾರಕ ಎಂದು ಗೊತ್ತಿದ್ದರು ಸೆಲೆಬ್ರಿಟಿಗಳು ಮಾತ್ರ ಜಾಹೀರಾತಿನಲ್ಲಿ ಮಾನ್ ಮಾಸಾಲ ಸೇವಿಸಿ ಎಂದು ಹೇಳ್ತಿದ್ದಾರೆ. ಅಂಥವರ ವಿರುದ್ಧ ಈಗಾಗಲೇ ಸಾಕಷ್ಟು ಭಾರಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಾಲಿವುಡ್ನ ಹಿರಿಯ ನಟ ಮುಖೇಶ್ ಖನ್ನಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತುಂಬ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ಪಡೆದು ಸ್ಟಾರ್ ನಟನರು ಇಂಥ ಜಾಹೀರಾತಿನಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಮುಖೇಶ್ ಖನ್ನಾ, ‘ನನ್ನನ್ನು ಕೇಳಿದರೆ, ಅಂಥ ನಟರನ್ನು ಹಿಡಿದು ಹೊಡೆಯಬೇಕು ಎನ್ನುತ್ತೇನೆ. ಅವರಿಗೂ ನಾನು ಇದನ್ನು ಹೇಳಿದ್ದೇನೆ. ಅಕ್ಷಯ್ ಕುಮಾರ್ಗೆ ಬೈಯ್ದಿದ್ದೇನೆ. ಅವರು ಆರೋಗ್ಯದ ಬಗ್ಗೆ ಕಾಳಜಿ ಇರುವ ಮನುಷ್ಯ. ಶಾರುಖ್ ಖಾನ್, ಅಜಯ್ ದೇವಗನ್ ಜೊತೆ ಅವರು ಈ ಜಾಹೀರಾತು ಮಾಡಿದ್ದಾರೆ. ಇಂಥ ಜಾಹೀರಾತುಗಳ ಮೇಲೆ ಕೋಟ್ಯಂತರ ರೂಪಾಯಿ ಸುರಿಯಲಾಗುತ್ತದೆ. ಇದರಿಂದ ಜನರಿಗೆ…
Author: Prajatv Kannada
ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವು ಸರಿ ಇಲ್ಲ. ಇಬ್ಬರು ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿದ್ದು ಸದ್ದು ಮಾಡುತ್ತಲೆ ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಇದೀಗ ಇದೇ ಮೊದಲ ಭಾರಿಗೆ ನಟ ಅಭಿಷೇಕ್ ಬಚ್ಚನ್ ಗಾಳಿ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನಿನ್ನೂ ವಿವಾಹಿತ’ ಎಂದು ಹೇಳುವ ಮೂಲಕ ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಇತ್ತೀಚೆಗೆ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಅನಂತ್ ಅಂಬಾನಿ ಮದುವೆಗೂ ಇವರು ಪ್ರತ್ಯೇಕವಾಗಿ ಬಂದಿದ್ದು ಚರ್ಚೆ ಹುಟ್ಟುಹಾಕಿತು. ಆ ಬಳಿಕ ಡಿವೋರ್ಸ್ಗೆ ಸಂಬಂಧಿಸಿದ ಪೋಸ್ಟ್ ಲೈಕ್ ಮಾಡಿ ಅವರು ಸುದ್ದಿ ಆದರು. ಅಭಿಷೇಕ್ ಬಚ್ಚನ್ ಅವರು ಮಾಧ್ಯಮಗಳ ಕೈಗೆ ಸಿಗುತ್ತಿಲ್ಲ. ಪ್ರೆಸ್ಮೀಟ್ಗಳಲ್ಲಿ ಭಾಗಿ ಆಗುತ್ತಿಲ್ಲ. ಹೀಗಿರುವಾಗಲೇ ಅವರು ವಿದೇಶಿ ಮಾಧ್ಯಮ ಒಂದಕ್ಕೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ‘ವದಂತಿಗಳ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ.…
ಶ್ರೀನಗರ: ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮರನಾಥ್ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳು ರದ್ದಾಗಿವೆ. ಇದರಿಂದ ಎರಡೂ ಮಾರ್ಗಗಳಲ್ಲಿ ಯಾತ್ರೆ ಸ್ಥಗಿತಗೊಂಡಿದೆ. ಬುಧವಾರ ನಿರ್ವಹಣಾ ಕಾರ್ಯಕ್ಕಾಗಿ ಪಹಲ್ಗಾಮ್ ಮಾರ್ಗವನ್ನು ಮುಚ್ಚಲಾಗಿತ್ತು. ಭಾನುವಾರ ಅಮರನಾಥ ಯಾತ್ರೆಯ ಪಹಲ್ಗಾಮ್ ಮತ್ತು ಬಲ್ಟಾಲ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದಿದೆ ಎಂದು ಕಾಶ್ಮೀರದ ವಿಭಾಗೀಯ ಆಯುಕ್ತ ವಿ ಕೆ ಭಿದುರಿ ಹೇಳಿದ್ದಾರೆ. ಮಳೆಯ ಕಾರಣ, ಅಮರನಾಥ ಯಾತ್ರೆಯ ಬಾಲ್ಟಾಲ್ ಅಕ್ಷದ ಮೇಲೆ ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಯಾತ್ರಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಸೋಮವಾರ ಬಾಲ್ಟಾಲ್ ಮಾರ್ಗದಿಂದ ಯಾವುದೇ ಯಾತ್ರೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ವರ್ಷ ಇದುವರೆಗೆ 3,880 ಮೀಟರ್ ಎತ್ತರದ ಗುಹಾ ದೇಗುಲದಲ್ಲಿ 5.10 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಶಿವನ ದರ್ಶನ ಪಡೆದಿದ್ದಾರೆ.
ನಾನು ಗಟ್ಟಿಮುಟ್ಟಾಗಿ ಚೆನ್ನಾಗಿದ್ದಾಗ ಪೂಜೆ ಪುನಸ್ಕಾರದ ಬಗ್ಗೆ ನಿರ್ಲಕ್ಷ್ಯ ಮಾಡ್ತಿದ್ದೆ. ಆದರೀಗ ವಯಸ್ಸು 75 ಆದ್ಮೇಲೆ ಗೊತ್ತಾಗ್ತಿದೆ. ಗಣಪತಿ ಹೋಮ, ಸರ್ಪದೋಷ ಪರಿಹಾರ ಮಾಡ್ತಿದ್ದೇನೆ ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ ಹೇಳಿದ್ದಾರೆ. ಆಗಸ್ಟ್ 13,14ರಂದು ಕನ್ನಡ ಚಿತ್ರರಂಗದ ಕಲಾವಿದರ ಸಂಘದಲ್ಲಿ ಚಿತ್ರರಂಗದ ಏಳಿಗೆಗಾಗಿ ಹೋಮ ಹವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಉಳಿವಿಗಾಗಿ, ಎಲ್ಲ ಕಲಾವಿದರ ಒಳಿತಿಗಾಗಿ ಪೂಜೆ ಹೋಮ ಹವನ ಮಾಡಲು ನಿರ್ಧರಿಸಿದ್ದೇವೆ. ಆಗಸ್ಟ್ 13,14 ರಂದು ಪೂಜೆ ಮಾಡಲಾಗುತ್ತಿದೆ. ಅಂದಿನ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಮಂತ್ರಿಸಿದ್ದೇವೆ. ಅನ್ನದಾತರು, ನಿರ್ಮಾಪಕ, ನಿರ್ದೇಶಕರು, ಛಾಯಾಗ್ರಾಹಕರು, ಪ್ರೊಡಕ್ಷನ್ ಬಾಯ್ಸ್ ಮೇಕಪ್ ಆರ್ಟಿಸ್ಟ್ ಆರ್ಟ್ ಫಿಲಂ, ಪೋಷಕರ ಕಲಾವಿದರ ಸಂಘ, ಫಿಲ್ಮ್ ಚೇಂಬರ್ಸ್ ಅವರ ಕರೆದಿದ್ದೇವೆ ಎಂದರು. ಹಿಂದೆ ಅಣ್ಣಾವ್ರು ಹೇಳ್ತಿದ್ರು. ಇವರೆಲ್ಲ ಕೆಲಸ ಮಾಡಿದ್ರೇನೆ ನಾವು ಚೆನ್ನಾಗಿ ಕಾಣೋದು ಅಂತಿದ್ರು. ನನ್ನ ತಾಯಿ ಮೇಲಾಣೆ ಸ್ವಾರ್ಥಕ್ಕಾಗಿ ಪೂಜೆ ಹೋಮ ಹವನ ಮಾಡ್ತಿಲ್ಲ. ಇದು ಕನ್ನಡ ಚಿತ್ರರಂಗದ…
ಹುಬ್ಬಳ್ಳಿ:- ಶ್ರಾವಣ ಮಾಸದ ಎರಡನೇ ಸೋಮವಾರದಂದು ಕರ್ತೃ ಜಗದ್ಗುರು ಶ್ರೀ ಗುರುಸಿದ್ದೇಶ್ವರ ಮಹಾಶಿವಯೋಗಿಗಳವರ ಗದ್ದುಗೆಯನ್ನು ಇದೆ ಮೊದಲ ಬಾರಿಗೆ ವಿವಿಧ ಬಗೆಯ ತರಕಾರಿ (ಕಾಯಿಪಲ್ಲೆ) ಗಳಿಂದ ಅಲಂಕಾರ ಮಾಡಲಾಗಿದೆ. ಈ ತರಕಾರಿ ಅಲಂಕಾರ ಸೇವೆ ಸಲ್ಲಿಸಿದವರು ಶ್ರೀ ಮಠದ ಪರಮ ಭಕ್ತರಾದ ರಾಚಯ್ಯ ಆರ್ ವಾರಿಕಲ್ಮಠಶ್ರುಪ್ರಕಾಶ ವಿ ಕೊಚಲಾಪುರಮಠ ಹಾಗೂ ಅಶೋಕ ಹೊಸಮಠ ಇವರುಗಳು ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರತಿ ಸೋಮವಾರದಂದು ಸಂಜೆ 6.30ಕ್ಕೆ ಪಲ್ಲಕ್ಕಿ ಉತ್ಸವ ಜರುಗುತ್ತದೆ ಆದ ಕಾರಣ ಸಮಸ್ತ ಶ್ರೀಮಠದ ಭಕ್ತರು ಪಲ್ಲಕ್ಕಿ ಸೇವೆಯಲ್ಲಿ ಭಾಗವಹಿಸಿ ಶ್ರೀ ಗುರುಸಿದ್ಧೇಶ್ವರರ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿ ಮಾಡಲಾಗಿದೆ.
ಬೆಂಗಳೂರು: ಹಲವು ದಿನಗಳ ಬಳಿಕ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆಯಾಗಿದ್ದು ಮೆಜೆಸ್ಟಿಕ್, ಕಾಪೋರೇಷನ್, ಹೆಬ್ಬಾಳ, ಮಲ್ಲೇಶ್ವರಂ, ಯಶವಂತಪುರ ಸೇರಿ ನಗರದ ಹಲವು ಕಡೆ ಸವಾರರು ಪರದಾಟ ನಡೆಸಿದ್ದಾರೆ. ತಡರಾತ್ರಿ ಗುಡುಗು ಸಹಿತ ಭಾರೀ ಮಳೆ ಸುರಿದಿದ್ದು ನಗರದಾದ್ಯಂತ ಸುಮಾರು 60 ಮಿ.ಮೀಟರ್ ನಷ್ಟು ಮಳೆಯಾಗಿದೆ. ತಡರಾತ್ರಿ ಆರಂಭವಾಗಿ, ಬೆಳಗ್ಗೆ 7 ಗಂಟೆವರೆಗೂ ಅನೇಕ ಕಡೆ ಮಳೆ ಸುರಿದಿದೆ. ಮುಂದಿನ ಮೂರ್ನಾಲ್ಕು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಯಿದೆ. ವಿಂಡ್ಸರ್ ಮ್ಯಾನರ್ ಸೇತುವೆ ಸರ್ವೀಸ್ ರಸ್ತೆಯಲ್ಲಿ ಕೆರೆಯಂತೆ ನೀರು ನಿಂತಿದೆ. ಎರಡು ಅಡಿಯಷ್ಟು ನೀರು ತುಂಬಿ ಅವಾಂತರ ಸೃಷ್ಟಿಯಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು ಮಳೆ ನೀರಿನಲ್ಲಿ ವಾಹನಗಳು ಕೆಟ್ಟು ನಿಂತಿವೆ. ಭಾರೀ ಮಳೆಗೆ ಮಲ್ಲೇಶ್ವರಂ ಕ್ಲೌಡ್ ನೈನ್ ಆಸ್ಪತ್ರೆ ಸಮೀಪ ರಸ್ತೆಗೆ ಮರ ಉರುಳಿದೆ. ಎರಡು ಸೀಳುಗಳಾಗಿ ಮುರಿದು ರಸ್ತೆಗೆ ಮರ ಬಿದ್ದಿದ್ದು ಆ ರಸ್ತೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
ತುಮಕೂರು: ತುಮಕೂರು ಜಿಲ್ಲೆ, ತಿಪಟೂರು ತಾಲೂಕಿನ ಜೈಪುರ ಗೇಟ್ ಬಳಿ ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಹೊಳೆ ನರಸಿಪುರ ತಾಲೂಕು, ಕಳ್ಳಿ ಮೂಲದ ನವೀನ್(28), ತಿಪಟೂರು ತಾಲೂಕಿನ ಗಂಗನಘಟ್ಟ ಗ್ರಾಮದ ಶೇಷಾದ್ರಿ(47) ಮೃತ ದುರ್ದೈವಿಗಳಾಗಿದ್ದು, ನವೀನ್ ಚನ್ನರಾಯಪಟ್ಟಣ ಕಡೆಯಿಂದ ತಿಪಟೂರು ಮಾರ್ಗವಾಗಿ ತೆರಳುತ್ತಿದ್ದರು. ಶೇಷಾದ್ರಿ ಹಾಗೂ ಸಚಿನ್ ಎಂಬುವರು ಬೈಕ್‌ನಲ್ಲಿ ಹಿಂದಿನಿಂದ ಬರುತ್ತಿದ್ದರು. ಮುಂದೆ ಹೋಗುತ್ತಿದ್ದ ನವೀನ್ ಏಕಾಏಕಿ ಬೈಕ್ ತಿರುಗಿಸಿದ ಪರಿಣಾಮ ಎರಡು ಬೈಕ್‌ಗಳ ನಡುವೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇನ್ನೂ ಘಟನೆ ಸಂಬಂಧ ನೊಣವಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹಲವು ಕೊಡುಗೆಗಳನ್ನು ಘೋಷಿಸಿದೆ https://youtu.be/eommfkuQ0es?si=WN_ROFBuRrHI_hzr ಈ ಹಿನ್ನೆಲೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ಹಬ್ಬದ ಪ್ರಯುಕ್ತ ಆಭರಣ ಖರೀದಿಸುವ ಪ್ರತಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಲಿದೆ ಎಂದು ಸಂಸ್ಥೆಯ ಮಾಲೀಕ ಟಿ.ಎ.ಶರವಣ ತಿಳಿಸಿದ್ದಾರೆ ಹಬ್ಬದ ಅಂಗವಾಗಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಗರದ ಮಳಿಗೆಗಳಲ್ಲಿ ವಜ್ರದ ಆಭರಣದ ಖರೀದಿಗೆ ವಜ್ರದ ಮೌಲ್ಯದ ಮೇಲೆ ಶೆ.10ರಷ್ಟು ರಿಯಾಯಿತಿ ಚಿನ್ನದ ಆಭರಣಗಳ ಮೇಲೆ ಮೇಕಿಂಗ್ ಚಾರ್ಜಸ್, ಬೆಳ್ಳಿಯ ಆಭರಣಗಳ ಖರೀದಿಯ ಮೇಲೆ ಶೆ.10ರಷ್ಟು ರಿಯಾಯಿತಿ . ಪ್ರತಿ ಕೆಜಿ ಬೆಳ್ಳಿ ವಸ್ತುಗಳ ಖರೀದಿಯ ಮೇಲೆ 2 ಸಾವಿರ ರಿಯಾಯಿತಿ ಇರಲಿದೆ ಜೈಪುರದ ರಾಜಮನೆತನದ ಇತಿಹಾಸ ಸಾರ್ವ ಪಾರಂಪರಿಕ ಒಡವೆಗಳು ಭಾರತೀಯ ಸಂಸ್ಕೃತಿ ಮತ್ತು ಶತಮಾನಗಳ ಹಳೆಯ ವಿನ್ಯಾಸಗಳನ್ನು ಪ್ರತಿ ಧ್ವನಿಸುವ ದೈವಿಕ ಆಭರಣಗಳು ಭಕ್ತಿ ಬಿಂಬಿಸುವ ಲೈಟ್ ವೆಯಿಟ್ ಟೆಂಪಲ್ ಜುವೆಲ್ಲರಿ ಹೊಳೆಯುವ ವಜ್ರದ ಸೆಟ್ʼಗಳು ಬೆಳ್ಳಿ ಆಭರಣಗಳು ಮತ್ತು ಚಿನ್ನದ ಆಂಟಿಕ್…
ಸೂರ್ಯೋದಯ: 06:02, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ , ಶ್ರಾವಣ ಮಾಸ , ಶುಕ್ಲ ಪಕ್ಷ, ತಿಥಿ: ಸಪ್ತಮಿ ನಕ್ಷತ್ರ: ಸ್ವಾತಿ ರಾಹು ಕಾಲ: 07:30ನಿಂದ 09:00ತನಕ ಯಮಗಂಡ: 03:00ನಿಂದ 04:30ತನಕ ಗುಳಿಕ ಕಾಲ: 10:30ನಿಂದ12:00 ತನಕ ಅಮೃತಕಾಲ: రా.1:08 ನಿಂದ రా.2:53 ತನಕ ಅಭಿಜಿತ್ ಮುಹುರ್ತ: ಬೆ.11:55 ನಿಂದ ಮ.12:46 ತನಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಸಮಾಲೋಚನೆಗಾಗಿ ಕರೆ ಮಾಡಿರಿ. ಮೇಷ ರಾಶಿ ಊರಿಂದ ಊರಿಗೆ ಹೋಗುವ ಅಲೆಮಾರಿ ವ್ಯಾಪಾರಸ್ಥರಿಗೆ ಧನಲಾಭವಿದೆ, ಕಾದಾಟದ ಟಗರು ವ್ಯಾಪಾರಸ್ಥರಿಗೆ ಉತ್ತಮ ಬೇಡಿಕೆ ಲಾಭ ಕೂಡ ಇದೆ, ಕಂಬಳಿ ವ್ಯಾಪಾರಸ್ಥರಿಗೆ ಧನಲಾಭವಿದೆ, ಕುದುರೆ ವ್ಯಾಪಾರಸ್ಥರಿಗೆ ಬೇಡಿಕೆ ಹೆಚ್ಚಾಗಲಿದೆ, ಜೀವನದ ಗುರಿ ಸಾಧಿಸಲು ಗಮನ ಹರಿಸುವಿರಿ,ನೀವು ಸ್ವತಂತ್ರವಾಗಿ ಇರಲು ಇಷ್ಟ ಪಡುವಿರಿ, ನೀವು ಅನಿಸಿದ್ದನ್ನು ಮಾಡಿ ತೋರಿಸುವಿರಿ, ಕೆಲವರಿಗೆ ಮದುವೆ ನಿರಾಸಕ್ತಿ, ತಮಗೆ ಬರಬೇಕಾದ ಬಾಕಿ ಸಾಲದ ಮೊತ್ತ ಕೈಸೇರುವುದು.…
ಈರುಳ್ಳಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಬಹು ಪ್ರಯೋಜನಗಳಿದ್ದು, ಇದರಿಂದ ನಮ್ಮ ದೇಹಕ್ಕೆ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣ ಹಾಗೂ ವಿಟಮಿನ್ ಬಿ ಸೇರಿದಂತೆ ವಿವಿಧ ಉಪಯುಕ್ತ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತವೆ. ಈರುಳ್ಳಿಯನ್ನು ಕತ್ತರಿಸುವಾಗ ನಿಮಗೆ ಹಲವು ಬಾರಿ ಈರುಳ್ಳಿಯ ಮೇಲ್ಭಾಗದಲ್ಲಿ ಅಥವಾ ಈರುಳ್ಳಿಯ ಒಳಭಾಗಗಳಲ್ಲಿ ಹೆಚ್ಚಾಗಿ ಕರಿ ಬಣ್ಣ ಕಾಣಿಸುತ್ತದೆ. ಇದನ್ನು ಕೆಲವರು ಕತ್ತರಿಸುತ್ತಾರೆ ಮತ್ತೊಂದಿಷ್ಟು ಜನರು ತೊಳೆದು ತಿನ್ನುತ್ತಾರೆ. ಈರುಳ್ಳಿಯಲ್ಲಿ ಕಂಡುಬರುವ ಕಪ್ಪು ಬಣ್ಣವನ್ನು ಆಸ್ಪರ್ಜಿಲಸ್ ನೈಗರ್ ಎಂದು ಕರೆಯಲಾಗುತ್ತದೆ. ಈ ರೀತಿಯ ಕಪ್ಪು ಬಣ್ಣದ ಶಿಲೀಂದ್ರವು ಹೆಚ್ಚಾಗಿ ಮಣ್ಣಿನಲ್ಲಿ ಕಂಡುಬರುತ್ತದೆ. ಇದು ಒಂದು ರೀತಿಯ ವಿಷವನ್ನು ಬಿಡುಗಡೆ ಮಾಡುತ್ತದೆ ಎಂದು ಸಂಶೋಧನೆಯು ತಿಳಿಸಿದೆ. ಒಂದು ವೇಳೆ ನೀವು ಖರೀದಿಸಿದ ಈರುಳ್ಳಿಯ ಮೇಲೆ ಕಪ್ಪು ಬಣ್ಣವಿದ್ದರೆ ಅದನ್ನು ನೀವು ತೆಗೆದುಹಾಕಿ ಸ್ವಚ್ಛವಾಗಿ ತೊಳೆದು ಬಳಸಿದರೆ ಇದರಿಂದ ಯಾವುದೇ ಅಪಾಯವಿಲ್ಲ ಆದರೆ, ಅಲರ್ಜಿ ಇರುವವರಿಗೆ ಇದು ಅಪಾಯಕಾರಿ ಎಂದು ಹೇಳಬಹುದು. ಅದೇ ರೀತಿ ನಿಮಗೆ ಅಸ್ತಮಾ ಇದ್ದರೂ ಕೂಡ ಇದು ಅಪಾಯಕಾರಿ. ಒಂದು…