ಸಂಸದ ಈ.ತುಕಾರಾಂ ರಾಜೀನಾಮೇಯಿಂದ ತೆರವಾಗಿದ್ದ ಸಂಡೂರು ಕ್ಷೇತ್ರದಲ್ಲಿ ಉಪಚುನಾವಣೆಗೆ ಜಿಲ್ಲಾಢಳಿತದಿಂದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ.ಸಂಡೂರು ಕ್ಷೇತ್ರದಲ್ಲಿ 1,17,789 ಪುರುಷ, 1,18,282 ಮಹಿಳೆ ಹಾಗೂ 29 ಅಲ್ಪಸಂಖ್ಯಾತ ಲಿಂಗತ್ವ ಮತ ದಾರರು ಸೇರಿ 2,36,100 ಮದಾರರು ಇದ್ದು, ಮತದಾನಕ್ಕೆ 253 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. https://youtu.be/dfyRvy1tem0?si=oF6vmKTmhnQLur55 ಮತದಾನದ ಕಾರ್ಯಕ್ಕೆ ಸಂಡೂರು ಕ್ಷೇತ್ರದಲ್ಲಿ 1,215 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಿ, ಅವರಿಗೆ ಅಗತ್ಯ ತರಬೇತಿ ನೀಡಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂ ದಿಯನ್ನು ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
Author: Prajatv Kannada
ಹುಬ್ಬಳ್ಳಿ: ಶಿಗ್ಗಾವಿ ಸವಣೂರು ಕ್ಷೇತದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ದೊಡ್ಡ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ರೌಡಿಶೀಟರ್ ಅಂತ ಎಸ್ಪಿ ಹಾಗೂ ಅಜ್ಜಂಪೀರ್ ಖಾದ್ರಿ ಇಬ್ಬರೂ ಹೇಳಿದ್ದಾರೆ. ಎಸ್ಪಿ ಅವರು ಯಾಕೆ ಹೇಳಿದರು. https://youtu.be/pejSJjdFjHk?si=m8uy5KPlwBGn3sUQ ಅದನ್ನು ಯಾಕೆ ವಾಪಸ್ ತೊಗೆದುಕೊಂಡರು ಎಂದು ಸಿಎಂ ಸ್ಪಷ್ಟೀಕರಣ ನೀಡಬೇಕು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯದ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದರು. ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೀಡಿರುವ ಹೇಳಿಕೆ ವಿರುದ್ದ ಕಾಂಗ್ರೆಸ್ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಈಗ ಬಗ್ಗೆ ಪ್ರಲ್ಹಾದ್ ಜೋಷಿಯವರು ಸ್ಪಷ್ಟನೆ ನೀಡಿದ್ದಾರೆ ಎಂದು ಹೇಳಿದರು. ಮತ್ತೊಂದು ಹೊಸ ಸುಳ್ಳಿಗೆ ಸ್ಪಷ್ಟನೆ ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಎಂಬ…
ಮಂಡ್ಯ: ಶೌಚಗೃಹ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಿಲ್ ಹಣ ಬಿಡುಗಡೆ ಮಾಡಲು ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ಸೋಮವಾರ ರಾತ್ರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. https://youtu.be/E9gYl1QTjzg?si=aaPymGUsctzTnfF5 ತಾಲೂಕಿನ ತಗ್ಗಹಳ್ಳಿ ಗ್ರಾಪಂ ಸದಸ್ಯ ಕೆ.ಆರ್.ಅನಿಲ್‌ಕುಮಾರ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಕಾಮಗಾರಿ ಮಾಡಿದ ಬಿಲ್ ಹಣ ಬಿಡುಗಡೆ ಮಾಡಿಸಲು 50 ಸಾವಿರ ರೂ ಲಂಚದ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಕೋಲಕಾರನದೊಡ್ಡಿಯ ಚನ್ನಬಸಪ್ಪ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.ಅದರಂತೆ ಸೋಮವಾರ ರಾತ್ರಿ ನಗರದ ಲೋಕಾಯುಕ್ತ ಕಚೇರಿ ಸಮೀಪದ ಹೋಟೆಲ್‌ನಲ್ಲಿ ಲಂಚ ಸ್ವೀಕರಿಸುವ ವೇಳೆ ವಶಕ್ಕೆ ಪಡೆಯಲಾಗಿದೆ. ಡಿವೈಎಸ್ಪಿ ಸುನಿಲ್‌ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಮೋಹನ್ ರೆಡ್ಡಿ, ಜಯರತ್ನಾ, ಸಿಬ್ಬಂದಿ ಮಹದೇವಸ್ವಾಮಿ, ಶಂಕರ್, ಶರತ್ ದಾಳಿ ನಡೆಸಲಾಗಿದೆ.
ಕಲಘಟಗಿ: ತುರ್ತು ಅಪಘಾತ ಸಂಭವಿಸಿದಾಗ ಪ್ರತಿಯೊಬ್ಬ ವ್ಯಕ್ತಿಗೂ ರಕ್ತದ ಅವಶ್ಯಕತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಶಿಬಿರದ ಮುಖಾಂತರ ನೀಡಿದ ಎಷ್ಟು ರಕ್ತದಾನಿಗಳ ಸಹಕಾರ ಅಮೂಲ್ಯವಾಗಿದೆ ಎಂದು ಹಿರಿಯ ದಿವಾಣ ನ್ಯಾಯಾಧೀಶರಾದ ರವೀಂದ್ರ ಹೊನ್ನೂಲಿ ತಿಳಿಸಿದರು. https://youtu.be/q_8D-8qSDW4?si=rsm5oKGpwbaYkbPp ಅವರು ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ಕಲಘಟಗಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಶಾ ದಾಮಜಿ ಜಾದವಜಿ ಚೇಡಾ ಸ್ಮಾರಕ ಹಾಗೂ ರಾಷ್ಟೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಂಯೋಗದೊಂದಿಗೆ ಪ್ರತಿಯೊಬ್ಬರು ರಕ್ತ ನೀಡುವ ಮುಖಾಂತರ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಕಿರಿಯ ದಿವಾಣಿ ನ್ಯಾಯಾಧೀಶರಾದ ಗಣೇಶ್ ಎನ್, ವಕೀಲ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೆಕಾರ್, ದತ್ತಮೂರ್ತಿ ಕುಲಕರ್ಣಿ, ವಿಬಿ ಶಿವನಗೌಡರ್, ರವೀಂದ್ರ ತೋಟಗಂಟಿ. ಕೆ ಬಿ ಗುಡಿಹಾಳ, ಬಿ ವಿ ಪಾಟೀಲ್, ಎಂ ಎಂ. ಚಲವಾದಿ, ಎಂಜಿ ಚೌದರಿ, ಶೋಭಾ ಬಳಿಗೇರ, ಸೀಮಾ ಪಾಟೀಲ್, ಗೀತಾ ಮಟ್ಟಿ, ಚೈತ್ರ ಕೋಟಿ, ನ್ಯಾಯಾಲಯದ ಸಿಬ್ಬಂದಿಗಳು…
ಕಲಘಟಗಿ: ಪಟ್ಟಣದ ತಾಲೂಕು ದಂಡಾಧಿಕಾರಿ ಕಾರ್ಯಾಲಯದಲ್ಲಿ ಕೋಟೆ ನಾಡು ಚಿತ್ರದುರ್ಗದ ರಕ್ಷಣೆಗಾಗಿ ಒನಕೆಯನ್ನುಅಸ್ತ್ರವಾಗಿಟ್ಟುಕೊಂಡು ದಿಟ್ಟ ಹೋರಾಟಗಾರ್ತಿ, ಶೌರ್ಯ ಸಾಹಸಕ್ಕೆ ಹೆಸರಾಗಿದ್ದ ಕೆಚ್ಚೆದೆಯ ನಾರಿ ವೀರ ವನತೆ ಓಬವ್ವ ಜಯಂತಿಯನ್ನು ತಾಲೂಕು ದಂಡಾಧಿಕಾರಿ ವೀರೇಶ್ ಮುಳಗುಂದಮಠ ಪುಷ್ಪನಮನ ಸಲ್ಲಿಸುವ ಮುಖಾಂತರ ಆಚರಿಸಿದರು. https://youtu.be/q_8D-8qSDW4?si=-mKx3JI0uytMQ2fi ಈ ಸಂದರ್ಭದಲ್ಲಿ ಗ್ರೇಡ್- ತಹಶೀಲ್ದಾರ್ ಬಸವರಾಜ್ ಹೊಂಕಣ್ಣದವರು, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಮಹೇಶ್ ಅಲಗೂರು, ವೈ ಜಿ ಭಗವತಿ, ತಾಲೂಕು ಕ ಸಾ ಪ. ಅಧ್ಯಕ್ಷ ರಮೇಶ್ ಸೋಲಾರಕೊಪ್ಪ, ಅನಿತಾ ನಾಯಕ್, ನಂದಿನಿ ಖಾನಾಪುರ್, ಮಂಜುನಾಥ ದನಿಗೊಂಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಬೀದರ್: ಬೀದರ್‌ನಲ್ಲಿ ಎರಡು ಕಡೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಪೋಲಿಸರು ಶಾಕ್ ಕೊಟ್ಟಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ರವೀಂದ್ರ ರೊಟ್ಟೆ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. https://youtu.be/c1AZfY1rq3k?si=dOPW6hnYE7qxBnOw ಇದಕ್ಕೂ ಮೊದಲು ಬೀದರ್ ಡಿಸಿ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಕೆಲವು ತಿಂಗಳ ಹಿಂದೆ ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಅದಿಕಾರ ಸ್ವೀಕರಿಸಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ರವೀಂದ್ರಕುಮಾರ ರೊಟ್ಟಿ ಮನೆ ಮೇಲೆ ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ.
ಬೆಂಗಳೂರು : ಏರ್‌ಪೋರ್ಟ್ ರಸ್ತೆಯ ಮೇಲ್ಸೆತುವೆ ಮೇಲೆ ಸರಣಿ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ. https://youtu.be/a9-RN7X-060?si=JyyCfOuNtORSiJtO ಯಲಹಂಕ ಮೇಲ್ಸೇತುವೆ ಮೇಲೆ ಇನ್ನೋವಾ ಕಾರಿಗೆ ಮೊದಲು ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಫ್ಲೈಓವರ್ ಬಲಭಾಗದಲ್ಲಿ ನಿಲ್ಲಿಸಿಕೊಂಡು ಗಲಾಟೆ ಮಾಡುತ್ತಿದ್ದಾಗ, ಅತಿ ವೇಗವಾಗಿ ಬಿಎಂಟಿಸಿ ವೋಲ್ವೊ ಬಸ್ ಬಂದಿದ್ದು ಲಾರಿಗೆ ರಭಸವಾಗಿ ಗುದ್ದಿದೆ. ಬಸ್ ನ ಮುಂದಿನ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಿಎಂಟಿಸಿ ವೋಲ್ವೋ ಬಸ್ ಚಾಲಕನಿಗೆ ಗಂಭೀರವಾಗಿ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋವಾ ಕಾರು, ಸಿಮೆಂಟ್ ಲಾರಿ, ವೋಲ್ವೋ ಬಸ್ʼನ್ನು ಕ್ರೇನ್ ಮೂಲಕ ತೆರವು ಮಾಡಿ ವಶಕ್ಕೆ ಪಡೆದಿದ್ದು, ಸದ್ಯ ಯಲಹಂಕ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನೆಲಮಂಗಲ: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. https://youtu.be/Ps_dCmArqkI?si=jvNKv7uEkt9tbUd7 ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ವಿಳಂಬವಾಗುತ್ತಿದ್ದು, ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ ಎಂಬ ದೂರುಗಳು ಬಂದಿದ್ದವು. ಹೀಗಾಗಿ ಇಂದು ಕೇಂದ್ರ ಸಚಿವ ವಿ.ಸೋಮಣ್ಣ ತುಮಕೂರು ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಅಷ್ಟಪಥ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಸಂಬಂಧ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಕೇಂದ್ರ ಸಚಿವ ಸೋಮಣ್ಣ ದಿನೇ ದಿನೇ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ತಡೆಯಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿ ತಾಕೀತು ಮಾಡಿದರು.
ದೆವುತ್ಥನ ಏಕಾದಶಿ ಸೂರ್ಯೋದಯ: 06:23, ಸೂರ್ಯಾಸ್ತ : 05:37 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ, ಶರದ ಋತು, ಕಾರ್ತಿಕ್ ಮಾಸ, ತಿಥಿ: ಏಕಾದಶಿ, ನಕ್ಷತ್ರ:ಪೂ.ಭಾ/ಉ.ಭಾ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ರಾ .1:18 ನಿಂದ ರಾ .2:46 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಸಾಹಸ ಕ್ರೀಡೆ ಪಟುಗಳಿಗೆ ಸಿಹಿಸುದ್ದಿ, ಕುಟುಂಬ ಸದಸ್ಯರಆರೋಗ್ಯದ ನಿಮಿತ್ಯ ಹಣ ಖರ್ಚು,ಪರಸ್ತ್ರೀ/ ಪರಪುರುಷ ಸ್ನೇಹದಿಂದ ಕುಟುಂಬದಲ್ಲಿ ಕಲಹ,ಹೈನುಗಾರಿಕೆ ಪ್ರಾರಂಭಿಸಲು ಸೂಕ್ತ ಸಮಯ, ನಿಮ್ಮ ಯಶಸ್ಸು ಸಹಿಸಲಾರದವರಿಂದ ಕಿರಿಕಿರಿ, ಲಾಭದ ನಿರೀಕ್ಷೆ, ವಿದೇಶಿ…
ಕೆಂಪು ಗ್ರಹ ಎಂದು ಕರೆಯಲ್ಪಡುವ ಮಂಗಳವು ಆಕ್ರಮಣಶೀಲತೆಯನ್ನು ಪ್ರತಿನಿಧಿಸುತ್ತದೆ. ಸಾಮಾನ್ಯವಾಗಿ ಮಂಗಳನ ಸ್ವಭಾವವು ಉಗ್ರವಾಗಿರುತ್ತದೆ ಅಥವಾ ಪಾಪದ ಅಧಿಪತಿಯಾಗಿದ್ದರೆ ಅದು ಅಶುಭವಾಗಬಹುದು ಎಂದು ಹೇಳುತ್ತಾರೆ. ಆದರೆ ಮಂಗಳವಾರದಂದು ಹನುಮಂತನನ್ನು ಪೂಜಿಸುವುದರಿಂದ ಎಲ್ಲಾ ದುರಾದೃಷ್ಟಗಳು ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಅದೇ ರೀತಿ ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡಿದರೆ ಅಶುಭ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಮಂಗಳವಾರದಂದು ಯಾವ ಕಾರ್ಯವನ್ನು ಮಾಡಬಾರದು? ಇದರಿಂದ ಏನೆಲ್ಲಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ವಿವರ ಇಲ್ಲಿದೆ ನೋಡಿ. ಸಾಲದ ವಹಿವಾಟು ಮಾಡಬೇಡಿ ಮಂಗಳವಾರದಂದು ಸಾಲದ ವಹಿವಾಟು ಮಾಡಬಾರದು. ಅಲ್ಲದೆ, ಯಾವುದೇ ರೀತಿಯ ಹೂಡಿಕೆಯನ್ನು ತಪ್ಪಿಸಬೇಕು. ಮಂಗಳವಾರದ ಬದಲು ಬುಧವಾರ ಹೂಡಿಕೆ ಮಾಡಬಹುದು. ಮಂಗಳವಾರ ಹಣದ ವ್ಯವಹಾರವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಾಡಿದ ಸಾಲವನ್ನು ತೀರಿಸಲು ಕಷ್ಟವಾಗುತ್ತದೆ ಮತ್ತು ಹಣವನ್ನು ಹಿಂತಿರುಗಿಸಲು ಕಷ್ಟವಾಗುತ್ತದೆ. ಆದ್ದರಿಂದ, ಮಂಗಳವಾರ ಯಾವುದೇ ರೀತಿಯ ವಹಿವಾಟು ಮತ್ತು ಹಣದ ಹೂಡಿಕೆಯನ್ನು ಮಾಡಬೇಡಿ. ಮಾಂಸ ಮತ್ತು ಮದ್ಯ ಸೇವನೆ ಮಾಡಬಾರದು ಮಂಗಳವಾರ ಪವನಪುತ್ರ ಹನುಮಂತನ…