ಬೆಂಗಳೂರು: ನಾವು ಕಂಡ ಕಂಡಲ್ಲಿ ಕುಳಿತು ಆಹಾರ ಸೇವನೆ ಮಾಡ್ತೇವೆ. ಇತ್ತೀಚಿನ ದಿನಗಳಲ್ಲಿ ಜನರು ಟಿವಿ ಮುಂದೆ ಕುಳಿತು ಆಹಾರ ಸೇವನೆ ಮಾಡುವುದು ಹೆಚ್ಚು. ಆದ್ರೆ ವಾಸ್ತುಶಾಸ್ತ್ರದ ಪ್ರಕಾರ, ಆಹಾರ ಸೇವನೆಯನ್ನು ಎಲ್ಲೆಂದರಲ್ಲಿ ಮಾಡಬಾರದು. ಅದಕ್ಕೂ ದಿಕ್ಕು,ವಾಸ್ತವಿದೆ. ಆಹಾರ ಸೇವಿಸುವಾಗ ಯಾವ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ನಾವಿಂದು ಹೇಳ್ತೆವೆ. ಆಹಾರ ಸೇವಿಸುವಾಗ ಈ ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ. ಇದು ಆರೋಗ್ಯ ವೃದ್ಧಿಗೂ ಕಾರಣವಾಗುತ್ತದೆ. ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಿದ್ರೆ ಶುಭ ? ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಕುಳಿತು ಆಹಾರ ಸೇವನೆ ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ಎರಡೂ ದಿಕ್ಕನ್ನು ದೇವರ ವಾಸಸ್ಥಾನವೆಂದು ನಂಬಲಾಗಿದೆ. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖಮಾಡಿ ಆಹಾರ ತಿನ್ನುವುದರಿಂದ ದೇವರ ಕೃಪೆ ಸದಾ ನಿಮ್ಮ ಮೇಲಿರುತ್ತದೆ. ಆಯುಷ್ಯ ವೃದ್ಧಿಯಾಗುತ್ತದೆ. ಹಾಗೆಯೇ ಈ ದಿಕ್ಕಿನಲ್ಲಿ ಕುಳಿತು ಊಟ ಮಾಡಿದ್ರೆ ಶಕ್ತಿ ಹೆಚ್ಚುತ್ತದೆ.…
Author: Prajatv Kannada
ಬೆಂಗಳೂರು: ಕಾಫಿ ಶಾಪ್ ವಾಶ್ ರೂಂನಲ್ಲಿ ಮೊಬೈಲ್ ಕ್ಯಾಮರಾ ಆನ್ ಮಾಡಿಟ್ಟಿದ್ದ ಆರೋಪಿಯನ್ನು ಸದಾಶಿವ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರಾವತಿ ಮೂಲದ ಮನೋಜ್ ಬಂಧಿತ ಆರೋಪಿಯಾಗಿದ್ದು, ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಸೆಂಟರಲ್ಲಿ ನಡೆದಿದ್ದ ಘಟನೆಯಾಗಿದೆ. ಬಂಧಿತ ಆರೋಪಿ ಕಳೆದ ಒಂದೂವರೆ ವರ್ಷದಿಂದ ಕಾಫಿ ಶಾಪಲ್ಲಿ ಕೆಲಸ ಮಾಡಿಕೊಂಡಿದ್ದನು. ಮಹಿಳೆಯೊಬ್ಬರು ಕಾಫಿ ಶಾಪ್ ಗೆ ತೆರಳಿದ್ದರು. ಶೌಚಾಲಯಕ್ಕೆ ಹೋದ ವೇಳೆ ಕಸದ ಬುಟ್ಟಿಯಲ್ಲಿ ಮೊಬೈಲ್ ಇರುವುದನ್ನು ಗಮನಿಸಿದ್ದರು. ಮೊಬೈಲ್ ತೆಗೆದು ನೋಡಿದಾಗ ಏರೋಪ್ಲೇನ್ ಮೋಡ್ ಗೆ ಹಾಕಿ ಕ್ಯಾಮರಾ ಆನ್ ಮಾಡಿ ಇಡಲಾಗಿತ್ತು. ಕ್ಯಾಮೆರಾ ಕಂಡೊಡನೆ ಗಾಬರಿಯಾದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೃತ್ಯದ ಸ್ಥಳಕ್ಕಾಗಮಿಸಿದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ ಭದ್ರಾವತಿ ಮೂಲದ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ನಿರ್ದೇಶಕ ತರುಣ್ ಹಾಗೂ ನಟಿ ಸೋನಲ್ ಇಂದು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗ್ರ್ಯಾಂಡ್ ವಿವಾಹಕ್ಕೆ ತರುಣ್ ಹಾಗೂ ಸೋನಲ್ ಕೂಡ ಸಖತ್ ಆಗಿಯೇ ರೆಡಿ ಆಗಿದ್ದಾರೆ. ನಟಿ ಸೋನಲ್ ಗೋಲ್ಡನ್ ಕಲರ್ ಸೀರೆಯುಟ್ಟು ಹಸೆಮಣೆ ಏರಿದ್ದಾರೆ. ಗೋಲ್ಡನ್ ಸೀರೆಗೆ ಸೋನಲ್, ಹೆವಿ ಜ್ಯುವೆಲ್ಲರಿ ತೊಟ್ಟು ಸೋನಲ್ ಗೊಂಬೆಯಂತೆ ಕಂಗೊಳ್ಳಿಸಿದ್ದಾರೆ. ಮದುಮಗಳ ಲುಕ್ನಲ್ಲಿ ಸೋನಲ್ ಮಿಂಚಿದ್ದಾರೆ. ಖಳನಟ ಸುಧೀರ್ ಪುತ್ರ, ನಿರ್ದೇಶಕ ತರುಣ್ ಸುಧೀರ್ ಗೋಲ್ಡನ್ ಕಲರ್ ಕುರ್ತಾ ಹಾಗೂ ಪಂಚೆ ಧರಿಸಿದ್ದಾರೆ. ಜೊತೆಗೆ ಮೈಸೂರು ಪೇಟ ತೊಟ್ಟು ಮದು ಮಗನ ಲುಕ್ನಲ್ಲಿ ತರುಣ್ ಕಂಗೊಳಿಸಿದ್ದಾರೆ. ಆಗಸ್ಟ್ 10 ರಂದು ವಿವಾಹದ ಆರತಕ್ಷತೆ ಸಮಾರಂಭ ಜೋರಾಗಿ ನಡೆಯಿತು. ತರುಣ್ -ಸೋನಲ್ ಮದುವೆಯಾಗಿ ನವ ಜೀವನಕ್ಕೆ ಕಾಲಿಡುತ್ತಿದ್ದು, ಅನೇಕ ಗಣ್ಯರು ನವ ಜೋಡಿಗೆ ಶುಭಕೋರಿದ್ರು. ತರುಣ್ ಕಲ್ಯಾಣಕ್ಕೆಂದು ಅದ್ದೂರಿ ಮಂಟಪ ಕೂಡ ರೆಡಿಯಾಗಿದೆ. ತರುಣ್ ಮನೆಯ ಸಂಪ್ರದಾಯಗಳಂತೆ ಶಾಸ್ತ್ರಗಳನ್ನು ಮಾಡಲಾಗ್ತಿದೆ. ಕಲ್ಯಾಣ ಮಂಟಪದ ಅಲಂಕಾರ ಕೂಡ ಅದ್ಭುತವಾಗಿದೆ. ಪ್ರವೇಶ ದ್ವಾರದಲ್ಲಿ ಮಹಾದ್ವಾರದ ಮಾದರಿ…
ಕಾಟೇರ ಸಿನಿಮಾದ ವೇಳೆ ಶುರುವಾದ ಪ್ರೀತಿಗೆ ತರುಣ್ ಸುಧೀರ್ ಹಾಗೂ ಸೋನಲ್ ಮದುವೆಗೆ ಮುದ್ರೆ ಒತ್ತಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಸೋನಲ್ ಹಾಗೂ ತರುಣ್ ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋನಲ್ ಹಾಗೂ ತರುಣ್ ಕಾಟೇರ ಸಿನಿಮಾದ ಹಾಡಿಗೆ ಗ್ರ್ಯಾಂಡ್ ಆಗಿ ವೇದಿಕೆಗೆ ಎಂಟ್ರಿಕೊಟ್ಟಿದ್ದಾರೆ. ಬ್ಲ್ಯಾಕ್ ಕಲರ್ ಗೋಲ್ಡ್ ಎಂಬ್ರಾಯ್ಡರಿ ಕಾಂಬಿನೇಷನ್ ಶೆರ್ವಾನಿಯಲ್ಲಿ ತರುಣ್ ಸುಧೀರ್ ಮಿಂಚುತ್ತಿದ್ದರೆ, ಗೋಲ್ಡ್ ಕಲರ್ ಲೆಹಂಗದಲ್ಲಿ ವಧು ಸೋನಲ್ ಕಂಗೊಳಿಸುತ್ತಿದ್ದಾರೆ. ದರ್ಶನ್ ಅವರಿಂದಲೇ ನಮ್ಮ ಪ್ರೀತಿ ಶುರುವಾಯಿತು ಎಂದು ಸೋನಲ್ ಹಾಗೂ ತರುಣ್ ಅವರು ಹೇಳಿಕೊಂಡಿದ್ದರು. ಬೆಂಗಳೂರಿನ ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೇಸ್ ಸಭಾಂಗಣದಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯುತ್ತಿದೆ. ಅವಾರ್ಡ್ ಫಂಕ್ಷನ್ ಥೀಮ್‌ನಲ್ಲಿ ಸಿದ್ಧವಾದ ವೇದಿಕೆಯಲ್ಲಿ ಆರತಕ್ಷತೆ ಹಾಗೂ ಮದುವೆ ನಡೆಯಲಿದೆ. ಸಂಪೂರ್ಣವಾಗಿ ಕೆಂಪು ಬಣ್ಣದ ಅಲಂಕಾರದಿಂದ ಮದುವೆ ಹಾಲ್ ಮಿಂಚುತ್ತಿದೆ. ಕೆಂಪು ಹೂವುಗಳು, ಕೆಂಪು ಕಾರ್ಪೆಟ್, ಕೆಂಪು ದೀಪಗಳನ್ನು ಅಲಂಕಾರಕ್ಕೆ ಬಳಕೆ ಮಾಡಿದ್ದು, ಪ್ರೀತಿಸಿ ಮದುವೆಯಾಗುತ್ತಿರುವ ತಾರಾಜೋಡಿಗೆ ಜೋಡಿಗೆ ರೆಡ್ ಥೀಮ್ ವೇದಿಕೆಯಲ್ಲಿ…
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನ ಚೈನ್ ಕಟ್ ಆಗಿರುವುದಕ್ಕೆ ರಾಜ್ಯ ಸರಕಾರದ ಆಡಳಿತದ ನಿರ್ಲಕ್ಷ್ಯವೇ ಕಾರಣ ಮಾಜಿ ಸಚಿವ ಹಾಲಪ್ಪ ಆಚಾರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ ಗೇಟ್ ಸ್ಥಿತಿ ಅವಲೋಕನ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 19 ನೇ ಗೇಟ್ ಕ್ರಸ್ಟ್ ಗೇಟ್ ಅಲ್ಲಿ ಉಳಿದಿಲ್ಲ. ಕಿತ್ತುಕೊಂಡು ಹೋಗಿದೆ. ಇದರಿಂದ ರೈತ ಸಮೂಹ ತುಂಬಾ ಆತಂಕದಲ್ಲಿ ಇದೆ.ಇದನ್ನು ನೋಡಿದರೆ ರಾಜ್ಯದಲ್ಲಿ ಆಡಳಿತ ಜವಾಬ್ದಾರಿ ಹಳಿ ತಪ್ಪಿದೆ ಎನಿಸುತ್ತದೆ. ಜಲಾಶಯ ನಂಬಿ 10 ಲಕ್ಷ ಎಕರೆ ರೈತರು ಜೀವನ ನಡೆಸುತ್ತಿದ್ದಾರೆ. ಇದರಿಂದ ರೈತರಿಗೆ ಬಹಳ ಆಘಾತವಾಗಿದೆ. ರೈತರ ತಲೆ ಮೇಲೆ ರಾಜ್ಯ ಸರಕಾರ ಬಂಡೆ ಎಳೆದಿದೆ. ಪ್ರತಿ ವರ್ಷ ಗೇಟ್ ಮೆಂಟೇನನ್ಸ್ ಮಾಡುವ ಕೆಲಸ ಸರಕಾರದ ಜವಾಬ್ದಾರಿ. ಆದರೆ, ಅಧಿಕಾರಿಗಳು, ಆಡಳಿತ ವ್ಯವಸ್ಥೆಯ ಅಸಡ್ಡೆಯಿಂದ ಈ ಸಮಸ್ಯೆ ತಲೆದೂರಿದೆ. ಕೂಡಲೇ ಇಡೀ ಸರಕಾರ ಸ್ಥಳದಲ್ಲಿ ಕುಳಿತು ಸಮಸ್ಯೆ ಬಗೆಹರಿಸಬೇಕು. ಗೇಟ್ ಅಳವಡಿಕೆಯ ಪ್ರಯತ್ನ ಮಾಡಬೇಕು.…
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಸೇರಿ 50 ದಿನ ಕಳೆದಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಸೇರಿರುವ 17 ಮಂದಿ ಸದ್ಯದ ಮಟ್ಟಿಗೆ ಹೊರ ಬರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಮಧ್ಯೆ ಪೊಲೀಸರು ಹಲವು ಮಹತ್ವದ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಈ ಮಧ್ಯೆ ಕೇಸ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಯೆಸ್. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಆರೋಪಿ ದರ್ಶನ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿವೆ. ಈಗಾಗಲೇ ತನಿಖೆ ಹಂತವನ್ನ ಪೂರ್ಣಗೊಳಿಸೋ ನಿಟ್ಟಿನಲ್ಲಿ ಸಾಗ್ತಿರೋ ಪೊಲೀಸರ ಕೈಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಈಗ ಸಿಕ್ಕಿರೋ ಎವಿಡೆನ್ಸ್ ಕೇಸ್‌ನಲ್ಲಿ ದರ್ಶನ್ ಪಾತ್ರ ಇತ್ತು ಅನ್ನೋದಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಆರೋಪಿ ದರ್ಶನ್ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿವೆ. ಈಗಾಗಲೇ ತನಿಖೆ ಹಂತವನ್ನ ಪೂರ್ಣಗೊಳಿಸೋ ನಿಟ್ಟಿನಲ್ಲಿ…
ತಮಿಳು ನಟ ಹಾಗೂ ನಿರ್ದೇಶಕ ರಂಜಿತ್ ವಿವಾದಾತ್ಮಕ ಹೇಳಿಕೆ ನೀಡಿದ್ದರೆ. ಅಂತರ್ ಜಾತಿ ಪ್ರೇಮ ಅಥವಾ ವಿವಾಹ ನಡೆದರೆ ಪಾಲಕರು ನಡೆಸುವ ಮರ್ಯಾದ ಹತ್ಯೆ ಯನ್ನು ರಂಜಿತ್ ಸಮರ್ಥಿಸಿಕೊಂಡಿದ್ದಾರೆ. ರಂಜಿತ್ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ರಂಜಿತ್ ಅವರು ‘ಕವುಂದಂಪಾಲಾಯಂ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 9ರಂದು ತಮಿಳುನಾಡಿನ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಪ್ರೇಕ್ಷಕರ ಜೊತೆ ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ಬಳಿಕ ರಂಜಿತ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮರ್ಯಾದಾ ಹತ್ಯೆಯ ಪರವಾಗಿ ರಂಜಿತ್ ಮಾತನಾಡಿದ್ದಾರೆ. ‘ತಂದೆ-ತಾಯಿಗೆ ಮಾತ್ರ ಆ ನೋವು ಏನು ಎಂಬುದು ಗೊತ್ತು. ಒಂದು ಬೈಕ್ ಕಳೆದುಹೋದರೆ ಏನಾಯಿತು ಅಂತ ನಾವು ನೋಡಲು ಹೋಗುವುದಿಲ್ಲವೇ? ಅದೇ ರೀತಿ ಮಕ್ಕಳನ್ನೇ ಜೀವನ ಎಂದುಕೊಂಡ ಪಾಲಕರು ಕೂಡ ಸಿಟ್ಟು ತೋರಿಸುತ್ತಾರೆ. ಅದು ಹಿಂಸೆ ಅಲ್ಲವೇ ಅಲ್ಲ. ಮಕ್ಕಳ ಬಗ್ಗೆ ಅವರು ತೋರಿಸುವ ಕಾಳಜಿ ಅದು’ ಎಂದು ರಂಜಿತ್ ಹೇಳಿದ್ದಾರೆ. ಈ ಹೇಳಿಕೆಗೆ…
ಧಾರವಾಡ: ಅಂಜುಮನ್ ಸಂಸ್ಥೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. 10ಕ್ಕೂ ಹೆಚ್ಚು ಜನ ಅಪರಿಚಿತರು ತಮಟಗಾರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವಕರು ತಮಟಗಾರ ಅವರ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಟಗಾರ ಅವರು ಮನೆಯಲ್ಲಿರದೆ, ಬೆಂಗಳೂರಿನಲ್ಲಿ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇಸ್ಮಾಯಿಲ್ ಅವರ ಮೇಲೆ ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿ ಹಲ್ಲೆ ನಡೆಸಲು ಈ ಯುವಕರು ಗುಂಪು ತಯಾರಾಗಿತ್ತು. ಇಸ್ಮಾಯಿಲ್ ಅವರ ಊರಲ್ಲಿ ಇಲ್ಲದೇ ಹೋಗಿದ್ದರಿಂದ ಆತಂಕಗೊಂಡಿರುವ ಅವರ ಮನೆಯವರು ಧಾರವಾಡದ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಟಗಾರ ಅವರ ಕುಟುಂಬ ತಮಗೆ ಜೀವ ಭಯವಿದೆ. ರಕ್ಷಣೆ ನೀಡಬೇಕು ಎಂದು ಹಿಂದೆಯೇ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು.
ಸ್ಯಾಂಡಲ್ ವುಡ್ ನ ಮತ್ತೊಂದು ಜೋಡಿ ತರುಣ್ ಸುಧೀರ್ ಹಾಗೂ ನಟಿ ಸೋನಲ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತಾರಾ ಜೋಡಿಯಾದ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮಂಥೆರೋ ಆರತಕ್ಷತೆಗೆ ಸ್ಯಾಂಡಲ್ ವುಡ್ ನ ಅನೇಕ ಗಣ್ಯರ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಕಾಟೇರ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿ ಎಂಟ್ರಿಕೊಟ್ಟ ನಟಿ ಮಲಾಶ್ರೀ ಮಗಳು ಆರಾಧನಾ ರಾಮ್ ತರುಣ್ ಹಾಗೂ ಸೋನಲ್ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ತರುಣ್ ಸುಧೀರ್ ಸಿನಿಮಾ ರಂಗದ ಜೊತೆಗೆ ರಾಜಕೀಯ ಗಣ್ಯರ ಜೊತೆಯು ಉತ್ತಮ ಸಂಪರ್ಕ ಹೊಂದಿದ್ದಾರೆ. ಇದೇ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ವಿಶ್ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕ, ಗೀತರಚನಕಾರ ಹಂಸಲೇಖ ಅವರು ಆರತಕ್ಷತೆ ಸಮಾರಂಭಕ್ಕೆ…
ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆ ಯೋಗೇಶ್ವರ್ ಬೆಂಬಲಿಗರು ಆಯೋಜಿಸಿದ್ದ ಸಮಾನ ಮನಸ್ಕರ ಸಮಾವೇಶ ಅಂತಿಮ ಕ್ಷಣದಲ್ಲಿ ರದ್ದಾಗಿದೆ. ಯೋಗೇಶ್ವರ್ ಅಭಿಮಾನಿ ಬಳಗ ಮತ್ತು ಸಮಾನ ಮನಸ್ಕರ ವೇದಿಕೆ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ‘ನಮ್ಮ ಶಾಸಕ ನಮ್ಮ ಹಕ್ಕು’ ಹೆಸರಿನಲ್ಲಿ ಸಮಾವೇಶ ಹಮ್ಮಿಕೊಂಡಿತ್ತು. ಉಪಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೇ, ಸ್ವತಂತ್ರ ಸ್ಪರ್ಧೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಮಾವೇಶ ನಡೆಸಲು ಮುಂದಾಗಿದ್ದ ಸಿಪಿವೈಗೆ ಭಾನುವಾರ (ಇಂದು) ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ತದಲ್ಲಿ ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಯೋಗೇಶ್ವರ್ ರನ್ನ ದೆಹಲಿಗೆ ಕರೆಸಿರೋ ಬಿಜೆಪಿ ನಾಯಕರು ಟಿಕೆಟ್ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ…