ಪ್ರಜ್ವಲ್ ಎಂಬಾತ ವಿವಾಹಿತ ಮಹಿಳೆಗೆ ಬಾಳು ಕೊಡ್ತೀನಿ ಎಂದು ನಂಬಿಸಿ ಆಕೆಯ ಜೊತೆ ಕೆಲ ದಿನಗಳ ಕಾಲ ಒಟ್ಟಿಗೆ ಜೀವನ ನಡೆಸಿ ಆಕೆಯನ್ನು ಬಳಸಿಕೊಂಡು ಇದೀಗ ಬೋರಾದ್ಳು ಎಂದು ಬಿಟ್ಟು ಹೋಗಿದ್ದಾನೆ. ಘಟನೆ ಸಂಬಂಧ ಮಹಿಳೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ. ನೊಂದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕುತ್ತಿದ್ದಳು. ಇದನ್ನು ಕಂಡ ಕ್ಯಾಬ್ ಚಾಲಕ ಪ್ರಜ್ವಲ್ ಆ ರೀಲ್ಸ್ಗಳಿಗೆ ಲೈಕ್, ಕಮೆಂಟ್ ಮಾಡುತ್ತಿದ್ದ. ಮಹಿಳೆ ಕೂಡ ಆ ಕಮೆಂಟ್ಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಳು. ಹೀಗೆ ಇವರಿಬ್ಬರ ನಡುವೆ ಪರಿಚಯ ಬೆಳೆದು ಇಬ್ಬರೂ ಹತ್ತಿರವಾದರು. ಮೆಸೇಜ್ ಮಾಡ್ತಾ, ಮಾಡ್ತಾ ಪ್ರಜ್ವಲ್ ಮನೆವರೆಗೂ ಬಂದಿದ್ದ. ನಿನ್ನನ್ನೇ ಮದುವೆ ಆಗ್ತೀನೆಂದು ಒಟ್ಟಿಗೆ ವಾಸವಾಗಿದ್ದ. ಆದರೆ ಈಗ ಬೋರಾದ್ಳು ಅಂತಾ ಮೋಸ ಮಾಡಿ ಬಿಟ್ಟು ಹೋಗಿದ್ದಾನೆ.
Author: Prajatv Kannada
ಉತ್ತರ ಅಮೆರಿಕಾ ಮೂಲದ ಸಂಸ್ಥೆಯೊಂದು ಭಾರತೀಯ ಮೂಲಕ ಕೋಫೋರ್ಜ್ ಹೆಸರಿನ ಐಟಿ ಕಂಪನಿಗೆ ಭಾರೀ ಪ್ರಮಾಣದ ದಂಡದ ನೋಟಿಸ್ ಜಾರಿ ಮಾಡಿದೆ. ಹ್ಯಾಕಿಂಗ್ ಆರೋಪ ಮಾಡಿರುವ ಅಮೆರಿಕಾ ಮೂಲಕ ಕಂಪೆನಿಯು 11 ಮಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು (ಸುಮಾರು 92 ಕೋಟಿ ರೂ.) ದಂಡ ಪಾವತಿಸಬೇಕೆಂದು ನೋಟಿಸ್ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಐಟಿ ಕಂಪನಿ ಕೋಫೋರ್ಜ್, ಅಮೆರಿಕ ಮೂಲದ ಸಂಸ್ಥೆ ನಷ್ಟ ಪರಿಹಾರದ ರೂಪದಲ್ಲಿ 7,597,780 ಅಮೆರಿಕನ್ ಡಾಲರ್ ಹಣವನ್ನು ಭರಿಸಬೇಕೆಂದು ನೋಟಿಸ್ ನೀಡಿರೋದಾಗಿ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ. ಕೋಫೋರ್ಜ್ ಸಂಸ್ಥೆಯು ಸಂಭಾವ್ಯ ನಷ್ಟ ಪರಿಹಾರ ರೂಪದಲ್ಲಿ 4,276,800 ಅಮೆರಿಕನ್ ಡಾಲರ್ ನೀಡೋದಾಗಿ ಪೂರಕ ನೋಟಿಸ್ ನೀಡಿದ್ದು ಈ ವಿಚಾರವಾಗಿ ಅಮೆರಿಕದ ಕಂಪನಿ ಜೊತೆ ಮಾತುಕತೆ ನಡೆಯುತ್ತಿದೆ, ಆದರೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ರಾಷ್ಟ್ರೀಯ ಷೇರು ವಿನಿಮಯ (ಎನ್‌ಎಸ್‌ಇ)ಗೆ ವಿವರಣೆ ನೀಡಿದೆ. ಷೇರು ಮಾರುಕಟ್ಟೆಯಲ್ಲಿ ತನ್ನ ಷೇರುಗಳ ವಿನಿಯಮ ಮಾಡುತ್ತಿರುವ ಹಿನ್ನೆಲೆಯಲ್ಲಿ ಎನ್‌ಎಸ್‌ಇ ನಿಯಮ…
ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ನಟನೆಯ ಭೀಮ ಸಿನಿಮಾ ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬಂದಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಭೀಮನಿಗೆ ಅಭಿಮಾನಿಗಳು ಫುಲ್ ಮಾರ್ಕ್ ನೀಡಿದ್ದಾರೆ. ಯುವ ಪೀಳಿಗೆ ಯಾವ ರೀತಿಯಲ್ಲಿ ಹಾದಿತಪ್ಪುತ್ತಾರೆ ಅನ್ನೋದನ್ನ ಭೀಮ ಸಿನಿಮಾದಲ್ಲಿ ಹೇಳಲಾಗಿದೆ. ಇದೀಗ ದುನಿಯಾ ವಿಜಯ್ ಶಾಕಿಂಗ್ ಹೇಳಿಕೆಯೊಂದನ್ನ ನೀಡಿದ್ದಾರೆ. ಭೀಮ ಸಿನಿಮಾ ಮೂಲಕ ಡ್ರಗ್ಸ್ ಬಗ್ಗೆ ದುನಿಯಾ ವಿಜಯ್ ದನಿ ಎತ್ತಿದ್ದಾರೆ. ರಾಜ್ಯದಲ್ಲಿ ಎಗ್ಗಿಲ್ಲದೆ ಡ್ರಗ್ಸ್ ಮಾಫಿಯಾ ನಡೀತಿದ್ಯಂತೆ, ಈ ಬಗ್ಗೆ ಸಿನಿಮಾ ಮೂಲಕ ಎಚ್ಚರಿಸಲು ದುನಿಯಾ ವಿಜಯ್ ಹೊರಟಿದ್ದಾರೆ. ಇದರ ಬಗ್ಗೆ ಎಲ್ಲಾ ದಾಖಲೆ ಇದೆ. ಯಾರೂ ಇದರ ಬಗ್ಗೆ ಮಾತಾಡ್ತಿಲ್ಲ. ಇದರ ವಿರುದ್ಧ ಯಾರೂ ಕ್ರಮ ಕೈಗೊಳ್ತಾ ಇಲ್ಲ. ಕೊನೆಗೆ ಸಿನಿಮಾ ಮೂಲಕ ಜಾಗೃತಿ ಮೂಡಿಸೋಕೆ ಬಂದೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಈ ಇಂಟರ್ ವ್ಯೂವ್ ಬಳಿಕ ಅವರೆಲ್ಲಾ ಎಚ್ಚೆತ್ತುಕೊಳ್ತಾರೆ. ಇನ್ನೊಂದು ವಾರ ಯಾವುದೂ ನಡೆಯೋಲ್ಲ. ಆದ್ರೆ ರೇಟ್ ಜಾಸ್ತಿ ಮಾಡ್ತಾರೆ. 10 ಇರೋ ಮಾತ್ರೆಗಳು…
ಕಳೆದ ಕೆಲ ದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಎಲ್ಲಿ ನೋಡಿದರೂ ಪ್ರತಿಭಟನೆಗಳು ಭುಗಿಲೆದ್ದಿದೆ. ಲೆಕ್ಕವೇ ಇಲ್ಲದಷ್ಟು ಆಸ್ತಿ ಪಾಸ್ತಿಗಳು ಹಾನಿಯಾಗಿದೆ. ಶೇಕ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಇದೆಲ್ಲದರ ನಡುವೆ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು 500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾಕಾರರು ಬಾಂಗ್ಲಾದ ಪ್ರತಿಷ್ಠಿತ ಹಿಂದೂ ಗಾಯಕ ರಾಹುಲ್ ಆನಂದ ಅವರ 140 ವರ್ಷಗಳ ಹಳೆಯ ಮನೆಗೆ ದಾಳಿ ಮಾಡಿ ಬೆಂಕಿ ಹಚ್ಚಿ, ಮನೆ ಲೂಟಿ ಮಾಡಿ ವಿಕೃತಿ ಮೆರೆದಿದ್ದಾರೆ. ಕಳೆದ ಜುಲೈ 5ರಂದು ಉದ್ರಿಕ್ತರ ಗುಂಪೊಂದು ರಾಹುಲ್ ಆನಂದ ಅವರ ಮನೆಯನ್ನು ಧ್ವಂಸಗೊಳಿಸಿದೆ. ಸುಂದರವಾಗಿದ್ದ ಮನೆಯನ್ನು ಲೂಟಿ ಮಾಡಿದ ದುರ್ಷಕರ್ಮಿಗಳು ಬೆಂಕಿ ಹಚ್ಚಿದ್ದು ಮನೆ ಸುಟ್ಟು ಗುರುತೇ ಸಿಗದಂತೆ ಆಗಿದೆ. ಅಷ್ಟು ಮಾತ್ರವಲ್ಲ ಮನೆಯಲ್ಲಿದ್ದ 3000ಕ್ಕೂ ಹೆಚ್ಚು ಸಂಗೀತ ವಾದ್ಯಗಳನ್ನು ಗುಂಪು ದೋಚಿದೆ. ಇವೆಲ್ಲವು ಉನ್ನತ ಬೆಲೆಬಾಳುವ ಮತ್ತು ಅತ್ಯಂತ ಹಳೆಯ ಸಂಗೀತ ಸಾಧನಗಳಾಗಿದ್ದವು. ಘಟನೆಯ ಬಳಿಕ ಗಾಯಕನ ಕುಟುಂಬವು ಜೀವ…
ದೆಹಲಿ: 530 ದಿನಗಳ ಬಳಿಕ ಎಎಪಿ ನಾಯಕ ಮನೀಶ್ ಸಿಸೋಡಿಯಾ ಶುಕ್ರವಾರ ಸಂಜೆ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹೊಸ ಮದ್ಯ ನೀತಿ ಹಗರಣದ ಆರೋಪ ಎದುರಿಸುತ್ತಿದ್ದ ಮಾಜಿ ಡಿಸಿಎಂಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಜೈಲಿನಿಂದ ಹೊರಬಂದ ಸಿಸೋಡಿಯಾರನ್ನು ಎಎಪಿ ಬೆಂಬಲಿಗರು ಸಂಭ್ರಮದಿಂದ ಬರಮಾಡಿಕೊಂಡರು. ನಿಮ್ಮ ಪ್ರೀತಿ, ದೇವರ ಆಶೀರ್ವಾದ ಮತ್ತು ಸತ್ಯದ ಶಕ್ತಿಯಿಂದ, ಎಲ್ಲಕ್ಕಿಂತ ಮುಖ್ಯವಾಗಿ ಬಾಬಾಸಾಹೇಬರ ಕನಸಿನಿಂದಾಗಿ ನಾನು ಜೈಲಿನಿಂದ ಹೊರಬಂದಿದ್ದೇನೆ. ಯಾವುದೇ ಸರ್ವಾಧಿಕಾರಿ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತು ಸರ್ವಾಧಿಕಾರದ ಕಾನೂನುಗಳನ್ನು ರಚಿಸಿ ವಿರೋಧ ಪಕ್ಷದ ನಾಯಕರನ್ನು ಕಂಬಿ ಹಿಂದೆ ಹಾಕಿದರೆ, ಆಗ ದೇಶದ ಸಂವಿಧಾನವು ಅವರನ್ನು ರಕ್ಷಿಸುತ್ತದೆ ಎಂದು ಸಿಸೋಡಿಯಾ ಭರವಸೆ ವ್ಯಕ್ತಪಡಿಸಿದ್ದಾರೆ. ಸಂವಿಧಾನದ ಈ ಶಕ್ತಿಯೊಂದಿಗೆ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬರುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಸಿಸೋಡಿಯಾ ಅವರ ಎಂಟನೇ ಮೇಲ್ಮನವಿ ಬಳಿಕ ಜಾಮೀನು ನೀಡಲಾಯಿತು. ಈ ನಡುವೆ, ಕಳೆದ ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು…
ತಿರುವನಂತಪುರಂ: ಭೂಕುಸಿತದ ಕರಾಳ ಭೀಕರತೆಯನ್ನು ಅನುಭವಿಸಿದ ವಯನಾಡಿಗೆ ಈಗ ಭೂಕಂಪದ ಭೀತಿ ಎದುರಾಗಿದೆ. ಇಂದು ಬೆಳಗ್ಗೆ 10:15 ಕ್ಕೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇತ್ತೀಚೆಗೆ ಭೂಕುಸಿತ ಸಂಭವಿಸಿದ ಚೂರಲ್ಮಲಾ – ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋಮೀಟರ್ ದೂರದಲ್ಲಿರುವ ಅಂಬಲವಾಯಲ್-ಎಡಕಲ್ ಪ್ರದೇಶಗಳಲ್ಲಿ ಬೆಳಗ್ಗೆ ಗುಡುಗು ಸದ್ದು ಕೇಳಿಸಿತು ಎನ್ನಲಾಗಿದೆ. ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಶಬ್ದ ಕೇಳಿ ಅಂಬಲವಾಯಲ್-ಎಡಕಲ್ ಭಾಗದ ಜನರು ಮನೆಯಿಂದ ಹೊರ ಬಂದರು. ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಶಿಬಿರದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿವೆ. ಆರಂಭದಲ್ಲಿ ಗುಡುಗು ಇರಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಶಬ್ದವು ಭೂಮಿಯ ಮೇಲ್ಮೈಯಿಂದ ಬಂದಿದೆ. ಹಲವರಿಗೆ ತಮ್ಮ ಮನೆಯ ಕಿಟಕಿ ಗಾಜುಗಳು ಅಲುಗಾಡಿರುವ ಅನುಭವವಾಗಿದೆ. ಭೂಕುಸಿತದ ತೀವ್ರತೆಯನ್ನು ಮೌಲ್ಯಮಾಪನ ಮಾಡಲು ಕೇಂದ್ರದ ತಜ್ಞರ ತಂಡವು ಈಗಾಗಲೇ ವಯನಾಡು ಪ್ರದೇಶಕ್ಕೆ ಭೇಟಿ ನೀಡುತ್ತಿದೆ.
ಸೂರ್ಯೋದಯ: 06:01, ಸೂರ್ಯಾಸ್ತ : 06:41 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ , ಶ್ರಾವಣ ಮಾಸ , ಶುಕ್ಲ ಪಕ್ಷ, ತಿಥಿ:ಷಷ್ಠಿ ನಕ್ಷತ್ರ: ಚಿತ್ತ, ರಾಹು ಕಾಲ: 09:00 ನಿಂದ 10:30 ತನಕ ಯಮಗಂಡ: 01:30 ನಿಂದ 03:00 ತನಕ ಗುಳಿಕ ಕಾಲ: 06:00 ನಿಂದ 07:30 ತನಕ ಅಮೃತಕಾಲ: ರಾ .10:35 ನಿಂದ ರಾ.12:24 ತನಕ ಅಭಿಜಿತ್ ಮುಹುರ್ತ: ಬೆ.11:56 ನಿಂದ ಮ.12:46 ತನಕ ಮೇಷ ರಾಶಿ: ಷರತ್ತುಗಳಿಗೆ ಸಹಿ ಮಾಡಬೇಡಿ, ನೂತನ ಉದ್ಯೋಗ ದೊರೆತು ಸಮಾಧಾನ, ಅಕ್ಕಂದಿರ ಹಾಗೂ ಮಾವಂದಿರ ಆರ್ಥಿಕ ಬೆಂಬಲದಿಂದ ಹೊಸ ವ್ಯವಹಾರ ಪ್ರಾರಂಭ, ಪಾಲುದಾರರಿಗೆ ಸೇರಿಕೊಳ್ಳುವಾಗ ನಿಗ ಇರಲಿ,ಗುತ್ತಿಗೆದಾರರು ತೆಗೆದುಕೊಳ್ಳುವ ಕಾಮಗಾರಿಗಳ ಬಗ್ಗೆ ವಸ್ತುಗಳ ಬೆಲೆ ಹಾಗೂ ಕೂಲಿ ಕಾರ್ಮಿಕರ ವೇತನ ಏರಿಕೆ ನೋಡಿಕೊಂಡು ವ್ಯವಹರಿಸಿ, ಹಳೆಯ ಬಾಕಿ ಒಬ್ಬ ವ್ಯಕ್ತಿಯಿಂದ ತಡೆಹಿಡಿಯಲಾಗುವುದು, ಪಾತ್ರೆ ವ್ಯಾಪಾರಸ್ಥರು ವ್ಯಾಪಾರ ವಹಿವಾಟಗಳಲ್ಲಿ ನಷ್ಟ, ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ…
ಹಾಸನ : ಮರಗಳ ಸಮೇತವಾಗಿ ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತ ಹಿನ್ನೆಲೆ ಹಾಸನ-ಮಂಗಳೂರು ಮಾರ್ಗದ ರೈಲುಗಳ ಸಂಚಾರ ಸ್ಥಗಿತವಾಗಿದೆ. https://youtu.be/0LA9qsZweOA?si=PBbZEMg2KfVH5-Yx ಕಿಲೋಮೀಟರ್ ಸಂಖ್ಯೆ 42/43 ರ ಮಧ್ಯೆ ಭೂಕುಸಿತ ಉಂಟಾಗಿದೆ. ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆ ಬಳಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿದೆ. ಹೀಗಾಗಿ ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಸಕಲೇಶಪುರ, ಯಡಕುಮಾರಿ, ಶಿರವಾಗಿಲು, ಆಲೂರು ಸೇರಿ ಆರು ಕಡೆ ಆರು ರೈಲುಗಳು ನಿಂತಿದೆ. ದಿಢೀರ್ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಟ ನಡೆಸಿದ್ದು, ರೈಲಿನಲ್ಲಿ ಸಾವಿರಾರು ಪ್ರಯಾಣಿಕರು ಕುಳಿತಿದ್ದಾರೆ. ಮಧ್ಯರಾತ್ರಿಯಿಂದ ರೈಲುಗಳ ಸಂಚಾರ ನಿಂತಿದ್ದು, ಸಕಲೇಶಪುರ, ಯಡಕುಮಾರಿ, ಶಿರವಾಗಲು, ಆಲೂರು ಸೇರಿ ಆರು ಕಡೆ ಆರು ರೈಲುಗಳು ನಿಂತಿದೆ. ಪರ್ಯಾಯ ವಾಹನ ವ್ಯವಸ್ಥೆ ಮಾಡುವಂತೆ ಒತ್ತಾಯ ಮಾಡಲಾಗಿದ್ದು, ಹೀಗಾಗಲೇ ರೈಲ್ವೆ ಇಲಾಖೆ ಕಾರ್ಮಿಕರು ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದೆ.
ಗದಗ:- ನಾಯಿಗಳ ದಾಳಿಯಿಂದ ಯುವಕರು ಜಿಂಕೆ ರಕ್ಷಣೆ ಮಾಡಿದ ಘಟನೆ ಜರುಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸುವರ್ಣಗಿರಿ- ಯಲ್ಲಾಪುರ ರಸ್ತೆಯ ಮರಡಿ ಹನುಮಪ್ಪ ದೇವಸ್ಥಾನದ ಬಳಿ ಸಂಭವಿಸಿದೆ. ನಾಯಿಗಳ ದಾಳಿಯಿಂದ ಜಿಂಕೆ ಗಾಯಗೊಂಡಿತ್ತು. ಸಂತೋಷ ಕಾರಬಾರಿ, ಮುತ್ತಣ್ಣ ಮುಶೇಪ್ಪನವರ ಎಂಬ ಯುವಕರಿಂದ ಜಿಂಕೆ ರಕ್ಷಣೆ ಮಾಡಲಾಗಿದೆ. ಸುವರ್ಣಗಿರಿ ತಾಂಡಾದ ಯುವಕರಿಂದ ಜಿಂಕೆ ರಕ್ಷಣೆ ಮಾಡಲಾಗಿದೆ. ಗ್ರಾಮಕ್ಕೆ ತೆರಳುವ ವೇಳೆ ಜಿಂಕೆ ಮೇಲೆ ನಾಯಿಗಳು ದಾಳಿ ಮಾಡಿದ್ದು, ತಕ್ಷಣ ನೋಡಿದ ಯುವಕರು ನಾಯಿಗಳಿಂದ ಜಿಂಕೆ ರಕ್ಷಣೆ ಮಾಡಲಾಗಿದೆ. ಗಾಯವಾಗಿದ್ದ ಜಿಂಕೆಗೆ ಲಕ್ಷ್ಮೇಶ್ವರ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆಗೆ ಜಿಂಕೆ ಹಸ್ತಾಂತರಿಸಿ ಯುವಕರು ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು: ನಾಡಿನಲ್ಲಿ ಈಗಾಗಲೇ ವರಮಹಾಲಕ್ಷ್ಮಿ ಹಬ್ಬದ ಕಳೆಗಟ್ಟಿದೆ, ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿಗೆ ಅಲಂಕಾರ ಮಾಡಿ, ಮನೆಗೆ ಐಶ್ವರ್ಯ, ಸಂಪತ್ತು ನೀಡು ತಾಯಿಯೇ ಪ್ರಾರ್ಥಿಸಲಾಗುವುದು. ಶ್ರಾವಣ ಮಾಸದ ಶುಕ್ರವಾರದಂದು ಲಕ್ಷ್ಮಿ ವ್ರತವನ್ನು ಮಾಡುವುದರಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಿದ ಫಲ ಸಿಗಲಿದೆ. https://youtu.be/0LA9qsZweOA?si=F2qAg6JvzfXhbCIR ಈ ಹಿನ್ನೆಲೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಭರಣ ಖರೀದಿಸುವ ಪ್ರತಿ ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡಲಿದೆ ಎಂದು ಸಂಸ್ಥೆಯ ಮಾಲೀಕ ಟಿ.ಎ.ಶರವಣ ತಿಳಿಸಿದ್ದಾರೆ ಹಬ್ಬದ ಅಂಗವಾಗಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ನಗರದ ಮಳಿಗೆಗಳಲ್ಲಿ ವಜ್ರದ ಆಭರಣದ ಖರೀದಿಗೆ ವಜ್ರದ ಮೌಲ್ಯದ ಮೇಲೆ ಶೆ.10ರಷ್ಟು ರಿಯಾಯಿತಿ ಚಿನ್ನದ ಆಭರಣಗಳ ಮೇಲೆ ಮೇಕಿಂಗ್ ಚಾರ್ಜಸ್, ಬೆಳ್ಳಿಯ ಆಭರಣಗಳ ಖರೀದಿಯ ಮೇಲೆ ಶೆ.10ರಷ್ಟು ರಿಯಾಯಿತಿ . ಪ್ರತಿ ಕೆಜಿ ಬೆಳ್ಳಿ ವಸ್ತುಗಳ ಖರೀದಿಯ ಮೇಲೆ 2 ಸಾವಿರ ರಿಯಾಯಿತಿ ಇರಲಿದೆ.