ಬೆಂಗಳೂರು: ರಾಜ್ಯದಂತೆ ನೆರೆಯ ಆಂಧ್ರದಲ್ಲೂ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದೆಯಂತೆ.ಈ ಸಂಘರ್ಷವನ್ನ ತಪ್ಪಿಸಿ ಮಾನವನ ಜೀವ ಉಳಿಸುವುದು ಅತ್ತ ಅರಣ್ಯ ಸಂರಕ್ಷಿಸುವ ಕೆಲಸಕ್ಕೆ ಕರ್ನಾಟಕಕ್ಕೆ ,ಆಂಧ್ರಪ್ರದೇಶ ಸಹಕಾರ ಕೋರಿದೆ.ಇಂದು ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರನ್ನ ಭೇಟಿ ಮಾಡಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಒಪ್ಪಂದ ಮಾಡಿಕೊಂಡಿದ್ದಾರೆ.. https://youtu.be/6Ak3UBRn6dQ?si=yOaOOnya4YmkuFQL ರಾಜ್ಯದಲ್ಲಿ ಆನೆ ಹಾಗೂ ಮಾನವ ಸಂಘರ್ಷ ನಿರಂತರವಾಗಿದೆ.ಕಾಡಿನಿಂದ ನಾಡಿಗೆ ಕಾಡು ಪ್ರಾಣಿಗಳ ಹಾವಳಿಯೂ ಹೆಚ್ಚಿದೆ.ವನ್ಯಮೃಗಗಳ ಹಾವಳಿ ತಡೆಗೆ ರಾಜ್ಯ ಸರ್ಕಾರ ಹಲವು ಮಾರ್ಗೋಪಾಯಗಳನ್ನ ಮಾಡ್ತಿದೆ.ಅದೇ ರೀತಿ ನೆರೆಯ ಆಂಧ್ರದಲ್ಲೂ ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದ್ದು,ಜೀವ ಹಾನಿಯ ಜೊತೆ ಆಸ್ತಿಪಾಸ್ತಿಯೂ ನಷ್ಟವಾಗ್ತಿದೆ.ಈ ಕಾರಣಕ್ಕಾಗಿ ಆಂದ್ರ ಸರ್ಕಾರ ಕರ್ನಾಟಕದ ಸಹಕಾರವನ್ನ ಕೊರಿದೆ.. ಇನ್ನು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸಚಿವ ಈಶ್ವರ್ ಖಂಡ್ರೆ ಹಾಗೂ ಪವನ್ ಕಲ್ಯಾಣ ಎರಡೂ ರಾಜ್ಯಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ರು.ಹಲವು ಮಾಹಿತಿಗಳನ್ನ ಪಡೆದುಕೊಂಡ್ರು.ಆಂಧ್ರದಲ್ಲಿ ಕಾಡಾನೆಗಳ ಸೆರೆ ಹಿಡಿದು ಪಳಗಿಸಲು ಎಂಟ ಕುಮ್ಕಿ ಆನೆಗಳನ್ನ ಕೊಡುವಂತೆ ಪವನ್ ಕಲ್ಯಾಣ್ ಬೇಡಿಕೆ ಇಟ್ಟಿದ್ದಾರೆ.ಜೊತೆಗೆ ಆನೆಗಳನ್ನ…
Author: Prajatv Kannada
ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿಇಂದು ಕಾಂಗ್ರೆಸ್ ಪಕ್ಷದ ಜನಾಂದೋಲನ ಸಮಾವೇಶ ನಡೆಯಲಿದ್ದು, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೈಸೂರು ನಗರ ಪೊಲೀಸ್ ಆಯುಕ್ತರು, ಸಂಚಾರ ಮಾರ್ಗದಲ್ಲಿ ಬದಲಾವಣೆಯೊಂದಿಗೆ ಕೆಲವಡೆ ವಾಹನ ನಿಲುಗಡೆಗೆ ನಿರ್ಬಂಧ ವಿಧಿಸಿದ್ದಾರೆ. ಇನ್ನೂ ಮೈಸೂರಿನಲ್ಲಿ ನಾಲ್ವರು ಡಿಐಜಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ 36 ಡಿವೈಎಸ್ಪಿ, 77 ಇನ್ಸ್ಪೆಕ್ಟರ್ಸ್, 175 ಪಿಎಸ್ಐ, ಜಿಲ್ಲೆಯ 3 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಹೊರ ಜಿಲ್ಲೆಯ 1500 ಪೊಲೀಸರು, 60 ಕೆಎಸ್ಆರ್ಪಿ ತುಕಡಿ, 20 ಸಿಎಆರ್ ತುಕಡಿ, 500 ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಜತೆಗೆ, ಸಮಾವೇಶದ ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.
ನವದೆಹಲಿ: ರಾಜ್ಯದ ಹೆದ್ದಾರಿ ಯೋಜನೆಗಳು, ಅದರಲ್ಲಿ ಮುಖ್ಯವಾಗಿ ಶಿರಾಡಿ ಘಾಟ್ ರಸ್ತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಕೇಂದ್ರದ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಜತೆ ಮಾತುಕತೆ ನಡೆಸಿದರು. ಈ ವೇಳೆ ಮಾಜಿ ಪ್ರಧಾನಿಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು; ಕರ್ನಾಟಕ ಸರಕಾರ ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಿದರೆ ಶಿರಾಡಿ ಘಾಟ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ತಿಳಿಸಿದರು. ಅಲ್ಲದೆ; ಈ ಯೋಜನೆಗೆ ಕೆಲವು ಸಾವಿರ ಕೋಟಿಗಳಷ್ಟು ಹಣ ಹೂಡಿಕೆ ಮಾಡಲು ತಮ್ಮ ಇಲಾಖೆ ಪರಿಗಣಿಸುವುದು ಎಂದು ನಿತಿನ್ ಗಡ್ಕರಿ ಅವರು ಮಾಜಿ ಪ್ರಧಾನಿಗಳಿಗೆ ಭರವಸೆ ನೀಡಿದರು. ಅಭಿವೃದ್ಧಿ ಯೋಜನೆಯು ಸುರಂಗ ತಂತ್ರಜ್ಞಾನ ಬಳಸುವುದನ್ನು ಒಳಗೊಂಡಿರುತ್ತದೆ. ರಾಜ್ಯ ಸರಕಾರ ಕೇಂದ್ರಕ್ಕೆ ಸ್ಪಂದಿಸಬೇಕು ಎಂದು ಸಚಿವರು ಹೇಳಿದ್ದಾರೆ. ಈ ಮಾಹಿತಿಯನ್ನು ಮಾಜಿ ಪ್ರಧಾನಿಗಳು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು:- ಎಂಬಿಬಿಎಸ್ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಕೊಡಿ ಎಂದು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. https://youtu.be/_ZaqZeQXeik?si=3Ws_oeAZlxY2nd9J ರಾಜ್ಯದೆಲ್ಲೆಡೆ ಮೂರು ಮತ್ತು ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಕ್ಕಿಲ್ಲ. ತಾಂತ್ರಿಕ ದೋಷದ ನೆಪಹೇಳಿ ಸರ್ಕಾರ ಕಳೆದೊಂದು ವರ್ಷದಿಂದ ನಯಾಪೈಸೆ ಬಿಡುಗಡೆ ಮಾಡಿಲ್ಲ. ಬೆಂಗಳೂರಿನ ಬಿಎಂಸುಆರ್ಐ, ಅಟಲ್ ಬಿಹಾರಿ ವಾಜಪೇಯಿ ಕಾಲೇಜು, ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ಕಾಲೇಜು ಸೇರಿ ಹಲವು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ವಿದ್ಯಾರ್ಥಿ ವೇತನ ಬಿಡುಗಡೆ ಮಾಡದ ಸರ್ಕಾರ ಅತ್ತ ಖಾಲಿ ಹುದ್ದೆಗಳ ನೇಮಕಾತಿ ಕೂಡ ನಡೆಸುತ್ತಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ದಿನೇ ದಿನೇ ಕಳಪೆ ಆಹಾರಗಳ ಸೇವನೆ ಜನರ ಜೀವ ಹಿಂಡುತ್ತಿದೆ. ಇಂತಹ ಹೊತ್ತಿನಲ್ಲಿ ಪ್ರಮುಖ ಪಾತ್ರ ವಹಿಸುವ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳು ಕೂಡ ಭರ್ತಿ ಆಗಿಲ್ಲ. ಸುಮಾರು 2692 ಹುದ್ದೆಗಳು ಖಾಲಿ ಇವೆ. ಈ ಹಿನ್ನೆಲೆಯಲ್ಲಿ ಹುದ್ದೆ ಭರ್ತಿ ಮಾಡುವಂತೆ ಒತ್ತಾಯಿಸಿ ಉದ್ಯೋಗಾಂಕ್ಷಿಗಳು ಫ್ರೀಡಂ ಪಾರ್ಕ್ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದ್ದಾರೆ
ಬೆಂಗಳೂರು:- ಬೆಂಗಳೂರಿನ ಬೇಗೂರಿನ ಲಕ್ಷ್ಮೀಪುರದಲ್ಲಿ ತಾಯಿಯ ಎದುರೇ ತಮ್ಮನನ್ನು ಅಣ್ಣ ಬರ್ಬರವಾಗಿ ಕೊಲೆ ಮಾಡಿರುವ ಗಂಭೀರ ಘಟನೆ ಜರುಗಿದೆ. https://youtu.be/gm54gbZD4d0?si=hYWOdy30ha-Jg8Ss 18 ವರ್ಷದ ಪ್ರತಾಪ್ ಮೃತ ದುರ್ದೈವಿ ಎನ್ನಲಾಗಿದೆ. 28 ವರ್ಷದ ರಜನಿ ಕೊಲೆ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ. ಬೇಗೂರು ಠಾಣೆ ಪೋಲಿಸರು ಆರೋಪಿ ರಜನಿಯನ್ನು ಬಂಧಿಸಿದ್ದಾರೆ. ಮೃತ ಪ್ರತಾಪ್ ಮೆಕ್ಯಾನಿಕ್ ಆಗಿದ್ದನು. ಅನಾರೋಗ್ಯ ಹಿನ್ನೆಲೆಯಲ್ಲಿ ಆರೋಪಿ ರಜನಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದನು. ಕೆಲಸಕ್ಕೆ ಹೋಗದ ವಿಚಾರಕ್ಕೆ ರಜನಿ ಮತ್ತು ಪ್ರತಾಪ್ ನಡುವೆ ಗುರುವಾರ ಮಧ್ಯಾಹ್ನ ಜಗಳವಾಗಿದೆ. ಜಗಳದ ನಡುವೆ ಮೃತ ಪ್ರತಾಪ್ ರಜನಿಗೆ ದಂಪಿಂಡ ಎಂದು ಬೈದಿದ್ದಾನೆ. ಇದರಿಂದ ಜಗಳ ಇನ್ನಷ್ಟು ತಾರಕಕ್ಕೇರಿದೆ. ಬಳಿಕ ಇಬ್ಬರೂ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ತಾಯಿ ಬಿಡಿಸಲು ಬಂದರೂ ಅಣ್ಣ-ತಮ್ಮಂದಿರ ಜಗಳ ನಿಂತಿಲ್ಲ. ಬಳಿಕ ರಜನಿ ಅಡುಗೆ ಮನೆಗೆ ತೆರಳಿ ಚಾಕು ತಂದು, ತಮ್ಮ ಪ್ರತಾಪ್ನ ಎದೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಪ್ರತಾಪ್ ಕುಸಿದು ಬಿದ್ದಿದ್ದಾನೆ. ಘಟನೆ ಬಳಿಕ…
ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಬೃಂದಾವನ ಉದ್ಯಾನವನ ಅಭಿವೃದ್ಧಿ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿದರು. ಹೌದು ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ತೆರಳುವುದಕ್ಕೂ ಮುನ್ನವೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂಗೆ ಶುಕ್ರವಾರ ಭೇಟಿ ನೀಡಿದರು. ಕಾವೇರಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಬಗ್ಗೆ ಪರಿಶೀಲನೆ ನಡೆಸಿದರು. ಕೆಆರ್ಎಸ್ ಡ್ಯಾಂ ಮೇಲೆ ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಬೃಂದಾವನ ಗಾರ್ಡನ್, ನೃತ್ಯ ಕಾರಂಜಿ ಸೇರಿ ಹಲವೆಡೆ ಡಿಸಿಎಂ ಪರಿಶೀಲನೆ ನಡೆಸಿದರು. ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡ್ಯ ಡಿಸಿ ಡಾ.ಕುಮಾರ, ನೀರಾವರಿ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು.
ನಾಗರ ಪಂಚಮಿ ಸೂರ್ಯೋದಯ: 06:01, ಸೂರ್ಯಾಸ್ತ : 06:41 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ , ಶ್ರಾವಣ ಮಾಸ , ಶುಕ್ಲ ಪಕ್ಷ, ತಿಥಿ: ಪಂಚಮಿ, ನಕ್ಷತ್ರ: ಹಸ್ತ ರಾಹು ಕಾಲ: 10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ:07:30 ನಿಂದ 09:00 ತನಕ ಅಮೃತಕಾಲ: ರಾ .7:56 ನಿಂದ ರಾ .9:45 ತನಕ ಅಭಿಜಿತ್ ಮುಹುರ್ತ: ಬೆ.11:56 ನಿಂದ ಮ.12:46 ತನಕ ಮೇಷ ರಾಶಿ: ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತಡೆ ಸಂಭವ, ವಿದೇಶಕ್ಕೆ ಹೋಗುವ ಕನಸು ನನಸಾಗುವ ದಿನ, ಲಾಭದ ನಿರೀಕ್ಷೆ, ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಲಾಭ, ಕುಟುಂಬದ ಮಹಿಳಾ ಸದಸ್ಯರೊಂದಿಗೆ ಮನಸ್ತಾಪ, ಸ್ವೀಟ್ ಮಾರ್ಟ್, ಕಾಂಡಿಮೆಂಟ್ಸ್ ,ಬೇಕರಿ ವ್ಯಾಪಾರಸ್ಥರಿಗೆ ಲಾಭ, ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ…
ಇತ್ತೀಚೆಗೆ ದಿನದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಎಷ್ಟೋ ಮಂದಿ ಇದನ್ನು ನಿರ್ಲಕ್ಷಿಸುತ್ತಾರೆ. ಅಲ್ಲದೇ ಕಣ್ಣು ಮಂಜಾಗುತ್ತಿದ್ರೆ ಕನ್ನಡಕ ಹಾಕೊಂಡು ಸುಮ್ಮನಿರಬೇಡಿ. ಯಾಕಂದ್ರೆ ಇದು ಡೇಂಜರ್. ಯಾಕೆ ಅನ್ನೋದನ್ನು ಈ ಸುದ್ದಿ ಪೂರ್ತಿ ಓದಿ. ಹೌದು, ರಕ್ತದೊತ್ತಡ, ಮಧುಮೇಹ ಇತ್ತೀಚೆಗೆ ತೀರಾ ಮಾಮೂಲಿ ಆಗಿರುವುದರಿಂದ ಜನ ಅದರ ಬಗ್ಗೆ ಹೆಚ್ಚು ನಿಗಾ ವಹಿಸದೆ ಯಡವಟ್ಟಿಗೆ ಸಿಲುಕಿಕೊಳ್ಳುತ್ತಾರೆ. ಬಹುಮುಖ್ಯವಾಗಿ ಮಧುಮೇಹ ಕಣ್ಣಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಮಧುಮೇಹಿಗಳಿಗೆ ಕಣ್ಣಿನ ಸಮಸ್ಯೆ ಯಾವೆಲ್ಲಾ ಹಂತದಲ್ಲಿ ಕಾಡುತ್ತದೆ ಎನ್ನುವುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಕಣ್ಣು ಮಂಜಾಗುವುದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತವೆ. ವಯಸ್ಸಾದಂತೆ ದೃಷ್ಟಿ ದೋಷ ಎದುರಾಗುವುದು ಸಹಜವೂ ಹೌದು. ಆದರೆ, ಕಣ್ಣು ಹದಗೆಡುವುದಕ್ಕೆ ವಯಸ್ಸು ಆಗಬೇಕು ಎಂಬುದೊಂದೇ ಮಾನದಂಡವಲ್ಲ. ದೇಹದಲ್ಲಿ ಉಂಟಾಗುವ ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳು ಕೂಡಾ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತವೆ. ಆ ಪೈಕಿ ಮಧುಮೇಹವೂ ಒಂದು. ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾದರೆ ಕಣ್ಣುಗಳಿಗೆ ಸಮಸ್ಯೆ ಉಂಟಾಗುತ್ತದೆ. ಕಣ್ಣುಗಳ ಭಾಗಕ್ಕೆ ಪೂರೈಕೆಯಾಗುವ ರಕ್ತನಾಳಗಳಲ್ಲಿನ ರಕ್ತದ…
ತಾಯ್ತನ ಎನ್ನುವುದು ಬಹಳ ಖುಷಿ ನೀಡುವ ಸಂತಸದ ವಿಷಯ. ಪ್ರತಿಯೊಂದು ಹೆಣ್ಣಿಗೂ ತನ್ನ ಜೀವನ ತಾಯಿ ಆದಾಗಲೇ ಸಾರ್ಥಕವೆನಿಸುವುದು. ಗರ್ಭಾವಸ್ಥೆಯ ಪ್ರತಿಕ್ಷಣದಲ್ಲೂ ಮಹಿಳೆಯು ಬಹಳ ಜಾಗರೂಕತೆಯಿಂದ ಇರುತ್ತಾರೆ. ಒಂದು ಸಣ್ಣ ತಪ್ಪಿನಿಂದ ಮಗುವಿಗೆ ಎನು ಆಗುವುದು ಎಂದು ಹೆದರಿರುತ್ತಾರೆ. ಪ್ರಸವ ಬಹಳ ಆರಾಮಾಗಿ ಆಗಿ ತನ್ನ ಮಗು ಆರೋಗ್ಯವಾಗಿ ತನ್ನ ಮಡಿಲು ಸೇರಿದರೆ ಸಾಕು ಎಂಬುದು ಪ್ರತಿಯೊಂದು ಮಹಿಳೆಯ ಬೇಡಿಕೆ ಆಗಿರುತ್ತದೆ. ಗರ್ಭಿಣಿ ಎಂದು ತಿಳಿದ ದಿನದಿಂದ ಮಗುವಿಗಾಗಿ ಎಲ್ಲಾ ಆರೈಕೆಯನ್ನು ಮಹಿಳೆ ಆರಂಭಿಸಿಕೊಂಡಿರುತ್ತಾರೆ. ಮಗುವಿಗೆ ಆರು ತಿಂಗಳು ತುಂಬುವವರೆಗೂ ತಾಯಿಯ ಎದೆಹಾಲನ್ನು ಬಿಟ್ಟು ಬೇರೆ ಏನನ್ನು ಕೂಡ ನೀಡಬಾರದು. ಮಗುವಿಗೆ ಆರು ತಿಂಗಳು ತುಂಬಿದ ನಂತರ ಮಗು ಬೆಳೆಯುತ್ತಾ ಹೋಗುತ್ತ. ತಾಯಂದಿರು ಅಷ್ಟೇ ಯಾರೊಬ್ಬರ ಸಲಹೆಗಳನ್ನು ತೆಗೆದುಕೊಳ್ಳಲು ಸಿದ್ಧರಿರುವುದಿಲ್ಲ. ವೈದ್ಯರು ಹೇಳಿದಂತೆ ನಡೆಯಬೇಕೆಂಬುದು ಅವರ ವಿಷಯ, ಮಕ್ಕಳು ತ್ವರಿತಗತಿಯಲ್ಲಿ ಬೆಳವಣಿಗೆಯನ್ನು ಹೊಂದುವುದರಿಂದ ಸಾಮಾನ್ಯವಾಗಿ ಯಾವಾಗಲೂ ಹಸಿವು ಎಂದು ಹೇಳುತ್ತಾರೆ. ಅವರ ಬೆಳವಣಿಗೆಗೆ ಅನುಗುಣವಾಗಿ ಕ್ಯಾಲೊರಿಗಳನ್ನು ನಾವು ನೀಡಬೇಕಾಗುತ್ತದೆ. ತಂದೆ-ತಾಯಿಯರು ಏನೆಲ್ಲಾ…
ನವದೆಹಲಿ: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾದ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 10 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು, ಪಾಸ್‌ಪೋರ್ಟ್ ವಶಕ್ಕೆ ಕೊಡಬೇಕು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ. ಅಬಕಾರಿ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮನೀಷ್ ಸಿಸೋಡಿಯಾ ಅವರನ್ನು ಬಂಧಿಸಿತ್ತು.