ಬೆಂಗಳೂರು: ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ. 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ಹೇ ಳಿದರು. https://youtu.be/8i1f4vd4NZI?si=4fEatkPOqgKn8FOg ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುಡಾದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ. ಸಿಎಂ ಅವರದ್ದೂ ಸೇರಿದಂತೆ ಸುಮಾರು 1,200 ಕ್ಕೂ ಅಧಿಕ ನಿವೇಶನಗಳ ಹಗರಣ ನಡೆದಿದೆ ಎಂಬ ದೂರು ಬಂದಿದ್ದು, ಅದಕ್ಕಾಗಿ ದಾಳಿ ಮಾಡಲಾಗಿದೆ. 3-4 ಸಾವಿರ ಕೋಟಿ ರೂ. ಹಗರಣ ನಡೆದಿದೆ ಎಂದು ಮುಡಾ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನವರೇ ಆದ ಮರಿಗೌಡ ಪತ್ರದಲ್ಲಿ ತಿಳಿಸಿದ್ದರು. ಅದಾದ ಬಳಿಕ ಸ್ನೇಹಮಯಿ ಕೃಷ್ಣ ಇಡಿಗೆ ದೂರು ನೀಡಿದ್ದಾರೆ. ಇದರಲ್ಲಿ ರಾಜಕೀಯದ ಪ್ರಶ್ನೆ ಉದ್ಭವವೇ ಆಗುವುದಿಲ್ಲ. ಇದರಲ್ಲಿ ಬಿಜೆಪಿ ಅಥವಾ ಕೇಂದ್ರ ಸರ್ಕಾರದ ಪಾತ್ರವೇ ಇಲ್ಲ ಎಂದರು. ಇದನ್ನು ರಾಜಕೀಯವಾಗಿ ನೋಡಬಾರದು. ನಿವೇಶನಗಳು ವಾಪಸ್ ಸಿಕ್ಕರೆ ಹಾಗೂ ಹಣ ಸಿಕ್ಕರೆ ರಾಜ್ಯ ಸರ್ಕಾರಕ್ಕೆ ಲಾಭವಾಗುತ್ತದೆ. ಸರ್ಕಾರದಲ್ಲಿ ಖಜಾನೆ ಖಾಲಿಯಾಗಿ ಸಂಬಳ ಕೊಡಲಾಗದ ಪರಿಸ್ಥಿತಿ ಇದೆ. ಇಂತಹ…
Author: Prajatv Kannada
ಬೆಂಗಳೂರು:- ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡಿಸೋ ಕೆಲಸ ಕಾಂಗ್ರೆಸ್ ಮಾಡತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. https://youtu.be/rIHFfNdVUW8?si=P7Sag7r0OnO9_ULz ಈ ಸಂಬಂಧ ಮಾತನಾಡಿದ ಅವರು,ಯಾವುದೇ ಸಮುದಾಯಕ್ಕೂ ಅನ್ಯಾಯವಾಗಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದ್ದು ನಾವು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮುದಾಯದ ಜೊತೆ ಮತ್ತೆ ಚರ್ಚೆ ಮಾಡುತ್ತೇವೆ ಎಂದರು. ಕಾಲಮಿತಿಯಲ್ಲಿ ಮೀಸಲಾತಿ ನೀಡಬೇಕು ಎಂದರೆ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೆ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಬೇರೆ ಸಮಾಜಗಳಿಗೆ ನೋವಾಗುವಂತೆ ತೀರ್ಮಾನ ಮಾಡಿತ್ತು. ನಂತರ ಆ ಸರ್ಕಾರವೇ ನಾವು ಯಾವುದೇ ಮೀಸಲಾತಿ ಜಾರಿ ಮಾಡುವುದಿಲ್ಲ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಈ ವಿಚಾರ ನ್ಯಾಯಾಲಯದಲ್ಲಿರುವಾಗ ನಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದರು. ಈಗ ಚುನಾವಣಾ ನೀತಿ ಸಂಹಿತೆ ಇದೆ. ಇದಾದ ನಂತರ ಸಭೆ ಕರೆದು ಮಾತನಾಡುತ್ತೇವೆ ಎಂದು ಸಮುದಾಯದ ಮುಖಂಡರಿಗೆ ಗೌರವಯುತವಾಗಿ ಹೇಳಿದ್ದೇವೆ. ಅವರ ಭಾವನೆ, ಕಳಕಳಿ ನಮಗೆ ಅರ್ಥವಾಗುತ್ತದೆ. ಮುಂದಿನ ದಿನಗಳಲ್ಲಿ…
ಕಲಿಯುಗದ ದೇವರಾದ ತಿರುಮಲನ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಧಾರಾಕಾರ ಮಳೆಯಿಂದಾಗಿ ಭಕ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯಿಂದ ತಿರುಮಲದ ನಡಿಗೆ ಮಾರ್ಗದ ಹಲವು ಕಡೆ ಭೂಕುಸಿತ ಉಂಟಾಗಿದೆ. ಇದರಿಂದಾಗಿ ಎರಡು ದಿನಗಳ ಹಿಂದೆ ಭಕ್ತರಿಗಾಗಿ ಸ್ವಾಮಿಯ ಎದುರಿನ ನಡಿಗೆಯನ್ನು ಟಿಟಿಡಿ ಎಚ್ಚರಿಕೆಯಿಂದ ಮುಚ್ಚಿತ್ತು. ಇನ್ನೊಂದೆಡೆ ಇತ್ತೀಚೆಗೆ ಕಾಡುಪ್ರಾಣಿಗಳ ಓಡಾಟವೂ ಹೆಚ್ಚಿದೆ. ಇದರ ನಡುವೆ ವರುಣ ಶಾಂತವಾಗಿದ್ದು, ಟಿಟಿಡಿ ಭಕ್ತರಿಗಾಗಿ ಪಾದಚಾರಿ ಮಾರ್ಗವನ್ನು ಮತ್ತೆ ತೆರೆದಿದೆ. ಸಾಮಾನ್ಯವಾಗಿ ಅನೇಕ ಭಕ್ತರು ನಡಿಗೆದಾರಿಯ ಮೂಲಕ ಬಂದು ತಿರುಮಲಕ್ಕೆ ಭೇಟಿ ನೀಡಲು ಆಸಕ್ತಿ ತೋರಿಸುತ್ತಾರೆ. ಹೀಗಾಗಿ ಮತ್ತೆ ವಾಕಿಂಗ್ ಪಾತ್ ಆರಂಭಿಸುವುದಾಗಿ ಟಿಟಿಡಿ ಘೋಷಣೆ ಮಾಡಿದೆ. ಒಂದೆಡೆ ಧಾರಾಕಾರವಾಗಿ ಸುರಿಯುತ್ತಿರುವ ಶ್ರೀಗಳ ಭಕ್ತರು ಶ್ರೀಗಳ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮತ್ತೊಂದೆಡೆ, ತಿರುಮಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸದ್ಯ 26 ಕಂಪಾರ್ಟ್ ಮೆಂಟ್ ಗಳಲ್ಲಿ ಭಕ್ತರು ಕಾಯುತ್ತಿದ್ದಾರೆ. ಗುರುವಾರ 58,637 ಭಕ್ತರು ಟೋಕನ್ ಇಲ್ಲದ ಭಕ್ತರು 12 ಗಂಟೆಗಳ…
ಚಿಕ್ಕಮಗಳೂರು: ಬೆಳ್ಳಂಬೆಳಗ್ಗೆ ಭಯಂಕರ ವಾಮಾಚಾರಕ್ಕೆ ಕಾಫಿನಾಡಿನ ಮಲೆನಾಡು ಭಾಗ ಅಕ್ಷರಶಃ ಬೆಚ್ಚಿಬಿದ್ದಿದೆ. ಮೂರು ದಾರಿ ಕೂಡಿರುವ ಕಡೆ ಕಿಡಿಗೇಡಿಗಳು ಮಡಿಕೆಗೆ ಮೂರ್ತಿ ರೂಪ ಕೊಟ್ಟು ವಾಮಾಚಾರ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದ ಚೇತನ್ ಎಂಬವರ ಮನೆ ಹಾಗೂ ಚೇತನ್ ಮನೆಯ ಮೂರು ದಾರಿ ಕೂಡಿರುವ ಕಡೆ ವಾಮಾಚಾರ ಮಾಡಿದ್ದಾರೆ. ಒಂದು ಗುಚ್ಚು ಹಸಿರು ಬಳೆಯ ಮೇಲೆ ಮಣ್ಣಿನ ಮಡಕೆ ಕೂರಿಸಿ, ಆ ಮಡಿಕೆಗೆ ಗೊಂಬೆ ರೂಪ ನೀಡಿ ಕಾಳಿಯ ಮುಖದಂತೆ ಮಾಡಿ ಮಾಟ ಮಾಡಿದ್ದಾರೆ. ಬೆಳಗಿನ ಜಾವ 4 ರಿಂದ 5 ಗಂಟೆ ಸುಮಾರಿಗೆ ಐವರು ಕಿಡಿಗೇಡಿಗಳ ಈ ದುಷ್ಕೃತ್ಯವನ್ನ ಸ್ಥಳೀಯರು ತಮ್ಮ ಮನೆಯ ಒಳಭಾಗದಿಂದ ನೋಡಿದ್ದಾರೆ. ಆದರೆ, ಯಾರೋ? ಏನೋ? ಎಂದು ಹೋಗಲು ಭಯಗೊಂಡು ಮನೆಯಲ್ಲೇ ಇದ್ದರು. ಬೆಳಗ್ಗೆ ನೋಡಿದಾಗ ಮಾಟ ಮಾಡಿರುವುದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಡದಾಳು ಗ್ರಾಮದ ಚೇತನ್ ಎಂಬವರ ಮನೆ ಹಾಗೂ ಚೇತನ್ ಮನೆಯ ಮೂರು ದಾರಿ…
ಕೋಲಾರ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯ ಪರಿಣಾಮ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಅದರಲ್ಲೂ ರೈತರು ಬೆಳೆದ ಬೆಳೆಗಳು ಮಳೆಯ ಹೊಡೆತಕ್ಕೆ ಕೊಚ್ಚಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಕೋಲಾರ ತಾಲೂಕು ಹೊದಲವಾಡಿ ಗ್ರಾಮದಲ್ಲಿ ಹೂ ತೋಟಕ್ಕೆ ನಿರಂತರ ಮಳೆಯಿಂದ ನೀರಿನಲ್ಲಿ ನೆನೆದು ಹೂವಿನ ತೋಟ ಕೊಳೆಯಲು ಆರಂಭಿಸಿದೆ. ಪರಿಣಾಮ ದೀಪಾವಳಿವರೆಗೂ ಹೂವಿನ ಬೆಳೆ ಇರುತ್ತದೆ ಎಂದು ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಜಡಿ ಮಳೆ ತಣ್ಣೀರೆರಚಿದೆ. ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಚೆಂಡು ಹೂವು ತೋಟದಲ್ಲಿ ನೀರು ನಿಂತಿದ್ದು ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ದೀಪಾವಳಿ ಹಬ್ಬದ ಹಿನ್ನೆಲೆ ಹೂವಿಗೆ ಒಳ್ಳೆಯ ಬೆಲೆ ಬರುತ್ತದೆ. ಹಬ್ಬಕ್ಕಾಗಿಯೇ ತೋಟಕ್ಕೆ ಗೊಬ್ಬರ ನೀರು ಹಾಕಿ ಔಷಧ ಹಾಕಿ ಚೆನ್ನಾಗಿ ತೋಟವನ್ನು ಬೆಳೆಸಿ, ಹಬ್ಬದ ಸಮಯಕ್ಕೆ ಒಂದಷ್ಟು ಆದಾಯ ಮಾಡಿಕೊಳ್ಳಬಹುದು ಎಂದುಕೊಂಡಿದ್ದ ಹೂವು ಬೆಳೆಗಾರ ವೇಣು ಅವರಿಗೆ ನಿರಾಸೆಯಾಗಿದೆ. ಕಳೆದ ನವರಾತ್ರಿ ಹಬ್ಬದಲ್ಲಿ ಒಂದಷ್ಟು ಆದಾಯ ಬಂದಿದೆ. ಆದರೆ…
ಬೆಂಗಳೂರು:-;ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ದಿನ ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. https://youtu.be/l38VW_WiNHQ?si=UgNVO5WZoT7jvtOQ ಕಾರ್ಯಾಚರಣೆ ವೇಳೆ ಮುಡಾದ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಸಾಲು- ಸಾಲು ಪ್ರಶ್ನೆಗಳಿಗೆ ಮುಡಾದ ಸಿಬ್ಬಂದಿಗಳು ಕಂಗಾಲಾಗಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗೆ ಮುಡಾ ಅಧಿಕಾರಿಗಳು ತಬ್ಬಿಬ್ಬಾದರು. ಶ್ರೀಮತಿ ಪಾರ್ವತಿ ಅವರ ಸೈಟ್ ಮೂಲ ದಾಖಲಾತಿ ಕೊಡಿ. ವೈಟ್ನರ್ ಹಾಕಿದ್ದ ದಾಖಲೆ ಕೊಡಿ. ಮೂಲ ದಾಖಲೆ ಎಲ್ಲಿದೇ? ಎಲ್ಲ ಸರಿಯಾದ ದಾಖಲೆ ಕೊಡಿ. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಡಾ ಅಧಿಕಾರಿಗಳು ನಾವು ಹೊಸಬರು ಸರ್ ಕಳೆದ ತಿಂಗಳಷ್ಟೇ ಹೊಸದಾಗಿ ಮುಡಾಗೆ ಬಂದಿದ್ದೇವೆ. ನಮಗೂ ಇದಕ್ಕೂ ಸಂಬಂಧವಿಲ್ಲ. ದಯಮಾಡಿ ಈ ವಿಚಾರದಲ್ಲಿ ನಮ್ಮನ್ನು ಬಿಡಿ. ಇಲ್ಲಿರುವ ದಾಖಲೆಗಳನ್ನು ಕೊಡ್ತೇವೆ. ನೀವು ಕೇಳಿದ ಕೆಲ ದಾಖಲೆಗಳ ಪೈಕಿ ಇರುವ ದಾಖಲೆಯನ್ನು ಕೊಡ್ತೀವಿ ಎಂದಿದ್ದಾರೆ. ಈ ಮಧ್ಯೆ ಇಡಿ ಅಧಿಕಾರಿಗಳಿಗೆ 2010ರ ವರೆಗೆ…
ಬೆಂಗಳೂರು;- ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ ಆಗಲಿದ್ದು, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗುಡುಗು, ಮಿಂಚು ಸಹಿತ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಹೀಗಾಗಿ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಡಾ.ಸಿ.ಎಸ್ ಪಾಟೀಲ್ ಮುನ್ಸೂಚನೆ ನೀಡಿದ್ದಾರೆ. ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ಕರಾವಳಿಯ ಜಿಲ್ಲೆಗಳು, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸಲಿದೆ. ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮಳೆ/ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಶನಿವಾರವೂ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಕರಾವಳಿಯ ಬಹುತೇಕ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಈ ಆರು ಜಿಲ್ಲೆಗಳನ್ನು ಹೊರತುಪಡಿಸಿದರೆ, ದಕ್ಷಿಣ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು:- ಇಂದಿನಿಂದ ಎರಡು ದಿನ ನಗರದ ಈ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಇರಲಿದೆ. ಇಂದು ಮತ್ತು ನಾಳೆ ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊಡ್ಡಗುಂಟ ದಸರಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ನಡೆಯಲಿದೆ. https://youtu.be/IoWEWTUPnD8?si=kuZa8h0cBMmCWygw ಹೀಗಾಗಿ ಇಂದು ಬೆಳಗ್ಗೆ 9 ಗಂಟೆಯಿಂದ ನಾಳೆ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ ಬೆಂಗಳೂರು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಪಾಟರಿ ರಸ್ತೆ – ಎಂ.ಎಂ ರಸ್ತೆ ಜಂಕ್ಷನ್‌ನಿಂದ ಎಂ.ಎಂ ರಸ್ತೆ ಮೂಲಕ ದೊಡ್ಡಗುಂಟಿ ಸರ್ಕಲ್ ಮತ್ತು ಅಸ್ಸೆ ರಸ್ತೆ ಜಂಕ್ಷನ್‌ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಅಸ್ಸೆ ರಸ್ತೆ – ಸುಂದರಮೂರ್ತಿ ರಸ್ತೆ ಜಂಕ್ಷನ್‌ನಿಂದ ತಂಬುಚೆಟ್ಟಿ ರಸ್ತೆ ಮೂಲಕ ಎಂ.ಎಂ ರಸ್ತೆ ಪಾಟರಿ ರಸ್ತೆ ಜಂಕ್ಷನ್‌ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ರಾಮಕೃಷ್ಣಪ್ಪ ರಸ್ತೆ – ಪಿ.ಎಸ್.ಕೆ ನಾಯ್ಡು ರಸ್ತೆ ಜಂಕ್ಷನ್‌ನಿಂದ ರಾಮಕೃಷ್ಣಪ್ಪ ರಸ್ತೆ ಸುಂದರಮೂರ್ತಿ ರಸ್ತೆ ಮೂಲಕ ಅಸ್ಸೆ ರಸ್ತೆ ಜಂಕ್ಷನ್ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ…
ವ್ಯಕ್ತಿಯೊರ್ವ ಮೂರು ಜನನಾಂಗಗಳನ್ನು ಹೊಂದಿದ್ದ ಅತಿ ವಿರಳ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಂಗ್ಲೆಂಡ್‌ನ 78 ವರ್ಷದ ವ್ಯಕ್ತಿಯೊಬ್ಬರು ಇತ್ತೀಚೆಗೆ ನಿಧನರಾಗಿದ್ದಾಗ ಅವರ ದೇಹವನ್ನು ‘ಯುನಿವರ್ಸಿಟಿ ಆಫ್ ಬರ್ಮಿಂಗ್‌ಹ್ಯಾಮ್’ನ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿತ್ತು. ಮೃತ ವ್ಯಕ್ತಿಗೆ ಬಾಹ್ಯದಲ್ಲಿದ್ದ ಒಂದು ಶಿಶ್ನದ ಜೊತೆ ಆಂತರಿಕವಾಗಿ ಇನ್ನೆರಡು ಶಿಶ್ನ ಇರುವುದು ಕಂಡು ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಅಂಶವನ್ನು ಸಂಶೋಧಕರು ಕಾಲೇಜಿನ ‘ದಿ ಜರ್ನಲ್ ಆಫ್ ಮೆಡಿಕಲ್ ಕೇಸ್ ರಿಪೋರ್ಟ್ಸ್’ನಲ್ಲಿ ದಾಖಲಿಸಿದ್ದಾರೆ. ವಿಚಿತ್ರವೆಂದರೆ ತಮ್ಮ ಜನನಾಂಗದ ಜೊತೆ ತಮ್ಮದೇ ದೇಹದಲ್ಲಿ ಇನ್ನೆರಡು ಜನನಾಂಗ ಇರುವುದು ಆ ವ್ಯಕ್ತಿಗೆ ಗೊತ್ತೆ ಇರಲಿಲ್ಲ. ಪುರುಷನ ದೇಹದ ಈ ಪರಿಸ್ಥಿತಿಗೆ ವೈದ್ಯಕೀಯ ಭಾಷೆಯಲ್ಲಿ ‘ಟ್ರಿಫಲಿಯಾ’ ಎನ್ನುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಮೊದಲು ಟ್ರಿಫಲಿಯಾ ಪ್ರಕರಣ 2020 ರಲ್ಲಿ ಯುರೋಪ್‌ನಲ್ಲಿ ವರದಿಯಾಗಿತ್ತು. ಮಗುವೊಂದು ಮೂರು ಜನನಾಂಗಗಳೊಂದಿಗೆ ಜನಿಸಿತ್ತು. ಸುಧಾರಿತ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಸರಿಪಡಿಸಲಾಗಿತ್ತು. ಇದೀಗ ಮತ್ತೋರ್ವ ವ್ಯಕ್ತಿಗೆ ಮೂರು ಜನನಾಂಗ ಇರುವುದು ಆತ ಮೃತಪಟ್ಟ ಬಳಿಕ…
ರಷ್ಯಾದಲ್ಲಿ ಅಕ್ಟೋಬರ್ 22ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ತೆರಳಲಿದ್ದಾರೆ. ಅಕ್ಟೋಬರ್ 22ಕ್ಕೆ ರಷ್ಯಾಗೆ ತೆರಳಲಿದ್ದು ಎರಡು ದಿನಗಳ ಕಾಲ ಅಲ್ಲಿರಲಿದ್ದಾರೆ. ಇದು ಈ ವರ್ಷದಲ್ಲಿ ಪ್ರಧಾನಿ ಮೋದಿಯವರ ಎರಡನೇ ರಷ್ಯಾ ಭೇಟಿಯಾಗಲಿದೆ. ಮೋದಿ ರಷ್ಯಾದ ಅಧ್ಯಕ್ಷರೊಂದಿಗೆ ಅನೌಪಚಾರಿಕ ಭೇಟಿಗಾಗಿ ಮಾಸ್ಕೋಗೆ ತೆರಳಿದ್ದರು. ಮಾಸ್ಕೋಗೆ ಅವರ ಪ್ರವಾಸವು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಮೊದಲನೆಯದಾಗಿತ್ತು. ಆಗಸ್ಟ್‌ನಲ್ಲಿ, ಪ್ರಧಾನ ಮಂತ್ರಿ ರಷ್ಯಾದ ಅಧ್ಯಕ್ಷರಿಗೆ ಕರೆ ಮಾಡಿದರು ಮತ್ತು ಉಕ್ರೇನ್ ಸಂಘರ್ಷದ ಶೀಘ್ರ ಪರಿಹಾರವನ್ನು ಒತ್ತಾಯಿಸಿದರು. ಪ್ರಧಾನಿ ಮೋದಿ ಕೈವ್‌ಗೆ ಭೇಟಿ ನೀಡಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ ಈ ಸಂಭಾಷಣೆ ನಡೆದಿದೆ. ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಆರು ಬಾರಿ ರಷ್ಯಾಕ್ಕೆ ಭೇಟಿ ನೀಡಿದ್ದಾರೆ. ರಷ್ಯಾ ಈ ವರ್ಷ ಬ್ರಿಕ್ಸ್‌ನ ಅಧ್ಯಕ್ಷತೆ ವಹಿಸುತ್ತಿದೆ. BRICS ಬ್ರೆಜಿಲ್, ರಷ್ಯಾ, ಭಾರತ, ಚೀನಾ…