ಗದಗ: ನಿರಂತರವಾಗಿ ಗದಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಅನ್ನದಾತರ ಬದುಕು ಹೇಳತೀರದಾಗಿದೆ. ಬೆಳೆ ನೀರಲ್ಲಿ ನಿಂತಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. https://youtu.be/GI4u2G5Dw0Q?si=7WoZxjZMMrYZ47Yw ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಬೆಳೆದು ನಿಂತ ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಬೆಳೆ ಕೊಳೆಯೋ ಹಂತ ತಲುಪಿದೆ. ಇನ್ನೇನು ಹತ್ತಿ ಬಿಡಿಸಬೇಕು ಎನ್ನುವಷ್ಟರಲ್ಲಿ ನೀರಿಗೆ ತೋಯ್ದ ಹತ್ತಿ ಹಾಳಾಗಿ ನೆಲಕಚ್ಚಿದೆ. ಗಿಡದಲ್ಲಿಯೇ ಮೊಳಕೆ ಒಡೆಯಲಾರಂಭಿಸಿದೆ. ಇದ್ರಿಂದಾಗಿ ಅನ್ನದಾತ ಆತಂಕದಲ್ಲಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತರಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕೆಂದು ಮಾಡಳ್ಳಿ ಗ್ರಾಮದ ರೈತ ಹನಮಂತಪ್ಪ ಚಿಂಚಲಿ ಆಗ್ರಹಿಸಿದ್ದಾರೆ.
Author: Prajatv Kannada
ಬೆಂಗಳೂರು: ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿ ಇರಲಿರುವುದರಿಂದ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾಜ್ಯದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ. https://youtu.be/L7phtfT3OGU?si=BN7UG2ZVyiY7y_8q ರೈಲ್ವೇ ಖಾತೆಯ ರಾಜ್ಯ ಸಚಿವ ಸೋಮಣ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ? ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಜನದಟ್ಟಣೆ ನಿಯಂತ್ರಿಸಿ, ಸುಗಮ ಸಂಚಾರಕ್ಕಾಗಿ ವಿಶೇಷ ರೈಲುಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಇದೇ ಅಕ್ಟೋಬರ್ 31 ರಿಂದ ನವೆಂಬರ್ 2 ವರೆಗೆ ರಾಜ್ಯದಾದ್ಯಂತ ವಿಶೇಷ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರಿಗೆ ಉತ್ತಮ ಸಂಚಾರದ ವ್ಯವಸ್ಥೆ ಕಲ್ಪಿಸಲು ಭಾರತೀಯ ರೈಲ್ವೆ ಒಟ್ಟು 34 ವಿಶೇಷ ರೈಲುಗಳ ವ್ಯವಸ್ಥೆಮಾಡಿದೆ. ಸಾರ್ವಜನಿಕರು ಈ ವಿಶೇಷ ರೈಲುಗಳ ಸೌಲಭ್ಯ ಪಡೆದುಕೊಳ್ಳಿ, ನಿಮ್ಮ ಹಬ್ಬದ ಸಂಭ್ರಮ ಇಮ್ಮಡಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.
ಬೆಂಗಳೂರು:- ಅಕ್ಟೋಬರ್ 21 ರಿಂದ ಮತ್ತೆ ಮಳೆ ಆರ್ಭಟ ಜೋರಾಗಿರಲಿದ್ದು, ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. https://youtu.be/iYYd2VVTkf4?si=LKJyHMPj-FGtr8tT ಬೆಂಗಳೂರಿನಲ್ಲಿ ಶುಭ್ರ ಆಕಾಶವಿದೆ, ಎಚ್ಎಎಲ್ನಲ್ಲಿ22.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 22.1ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 24.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶವಿದೆ, ಎಚ್ಎಎಲ್ನಲ್ಲಿ22.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 22.1ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್…
ಬೆಂಗಳೂರು:- ಡಿವೈಡರ್ ಮೇಲೆ ಬಿಎಂಟಿಸಿ ಬಸ್ ಹತ್ತಿದ ಘಟನೆ ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನಗರದ ಬನಶಂಕರಿ ಬಸ್ ಸ್ಟ್ಯಾಂಡ್ ಬಳಿ ಜರುಗಿದೆ. https://youtu.be/TZtH4KZK3Js?si=MpSDhtzOc1rsYj3k ಡಿಪೋ 20ರ ಬನಶಂಕರಿಗೆ ಸೇರಿದ ಬಸ್ ಇದಾಗಿದ್ದು, ಡಿಪೋದಿಂದ ಹೊರಗೆ ಬರ್ತಿದ್ದಂತೆ ಈ ಘಟನೆ ನಡೆದಿದೆ. ಡಿವೈಡರ್ ಮೇಲೆ ಸುಮಾರು ಅರ್ಧದಷ್ಟು ಬಸ್ ಹತ್ತಿದೆ. ಬಸ್ ಕೆಳಗೆ ಇಳಿಸಲು BMTC ಚಾಲಕ ಹರಸಾಹಸ ಪಡುತ್ತಿದ್ದಾರೆ. KA- 57 F 0361 ನಂಬರ್ ನ ಬಸ್ ಇದಾಗಿದ್ದು, ಡಿಪೋದಿಂದ ಬಸ್ ಸ್ಟ್ಯಾಂಡ್ ಗೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಬಸ್ ನಲ್ಲಿ ಯಾರು ಪ್ರಯಾಣಿಕರು ಇರಲಿಲ್ಲ. ಇದರಿಂದ ಸ್ವಲ್ಪ ಹೊತ್ತು ಬನಶಂಕರಿ ರೋಡ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ನಾವು ಇಷ್ಟಪಟ್ಟು ತಿನ್ನುವ ವಿವಿಧ ಬಗೆಯ ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಬೀಜಗಳು ಕೂಡ ಒಂದು. ಬಿಸಿಲಿನ ಬೇಗೆ ತಾಳಲಾರದೆ ಕುಡಿಯುವ ಕೋಲ್ಡ್ ಬಾದಾಮಿ ಹಾಲು, ಬಾದಾಮಿ ಕುಲ್ಫಿ ಹೀಗೆ ವಿವಿಧ ಮೂಲಗಳಿಂದ ನಮ್ಮ ದೇಹಕ್ಕೆ ಬಾದಾಮಿ ಸೇರ್ಪಡೆಯಾಗುತ್ತಾ ಹೋಗುತ್ತದೆ. ಬಾದಾಮಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಅದು ನಮಗೆ ಶಕ್ತಿಯನ್ನು ತುಂಬುತ್ತದೆ. ಆರೋಗ್ಯಕರ ಕೊಬ್ಬು, ಫೈಬರ್, ಪ್ರೋಟಿನ್, ಮೆಗ್ನೇಸಿಯಂ ಇತ್ಯಾದಿ ಅಂಶಗಳು ಇದರಲ್ಲಿರುವ ಕಾರಣ ಬಾದಮಿಯ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಅದರ ಅತಿಯಾದ ಸೇವನೆಯು ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ. ಅತಿಯಾಗಿ ಬಾದಾಮಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳ ಅಪಾಯ ಹೆಚ್ಚಿಸುತ್ತದೆ. ಈ ಬಗ್ಗೆ ತಜ್ಞರು ಏನು ಹೇಳಿದ್ದಾರೆ ಎನ್ನುವುದನ್ನು ಮುಂದೆ ಓದಿ. ರಕ್ತದೊತ್ತಡ ಮತ್ತು ಹೃದ್ರೋಗದ ಹೊರತಾಗಿ ಬಾದಾಮಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರೊಂದಿಗೆ ಇದು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಅನೇಕ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹೆಸರಿನಲ್ಲಿ…
ಕೊಲೆಸ್ಟ್ರಾಲ್ ಹೆಚ್ಚಾದರೆ ಅದರಿಂದ ಇಲ್ಲದ ಸಮಸ್ಯೆಗಳು ಶುರುವಾಗುತ್ತವೆ. ಮುಖ್ಯವಾಗಿ ಹೃದಯಕ್ಕೆ ಸಂಬಂಧಪಟ್ಟಂತೆ ಕಾಯಿಲೆಗಳು ಕಾಣಿಸಿ ಕೊಳ್ಳುತ್ತವೆ. ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ಇದಕ್ಕೆ ಪುಷ್ಟಿ ಕೊಡುತ್ತವೆ. ಸಕ್ಕರೆ ಕಾಯಿಲೆ ಒಂದು ವೇಳೆ ಮಿತಿ ಮೀರಿದರೆ ತುಂಬಾ ಕಷ್ಟ. ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಔಷಧಿಗಳು ಈಗಾಗಲೇ ಲಭ್ಯವಿದೆ. ವೈದ್ಯರಿಂದ ಕೇಳಿ ಪಡೆದು ತೆಗೆದುಕೊಳ್ಳಬಹುದು. ಆದರೆ ಹೇಳದೆ ಕೇಳದೆ ಹೆಚ್ಚಾದ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಿದರೆ ಅದಕ್ಕೆ ಇಲ್ಲಿದೆ ಸುಲಭ ಟಿಪ್ಸ್.
ಶುಕ್ರವಾರ- ರಾಶಿ ಭವಿಷ್ಯ ಅಕ್ಟೋಬರ್-18,2024 ಸೂರ್ಯೋದಯ: 06:13, ಸೂರ್ಯಾಸ್ತ : 05:48 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶರದ ಋತು, ಅಶ್ವಿನಿ ಮಾಸ, ತಿಥಿ: ಪಾಡ್ಯಾ ನಕ್ಷತ್ರ: ಅಶ್ವಿನಿ, ರಾಹು ಕಾಲ:10:30 ನಿಂದ 12:00 ತನಕ ಯಮಗಂಡ: 03:00 ನಿಂದ 04:30 ತನಕ ಗುಳಿಕ ಕಾಲ: 07:30 ನಿಂದ 09:00 ತನಕ ಅಮೃತಕಾಲ: ಬೆ.7:06 ನಿಂದ ಬೆ.8:31 ತನಕ ಅಭಿಜಿತ್ ಮುಹುರ್ತ: ಬೆ.11:38 ನಿಂದ ಮ.12:24 ತನಕ ಮೇಷ ರಾಶಿ: ಕಂಕಣ ಬಲದ ಸಿಹಿ ಸುದ್ದಿ ಹಂಚಿಕೊಳ್ಳುವಿರಿ, ಅಮಾನತು ಗೊಂಡಿರುವ ಉದ್ಯೋಗಿಗಳು ಮರು ನೇಮಕ, ತಡೆಹಿಡಿದ ಎಲ್ಲಾ ಕೆಲಸ ಕಾರ್ಯಗಳು ಸುಗಮ ರೀತಿಯಲ್ಲಿ ಯಶಸ್ವಿ ಕಾಣುವ ಸೌಭಾಗ್ಯ ಕೂಡಿಬಂದಿದೆ,ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭಫಲವನ್ನು ಖಚಿತವಾಗಿ ಪಡೆದುಕೊಳ್ಳುವಿರಿ. ವ್ಯಾಪಾರ ವಹಿವಾಟದಲ್ಲಿ ಗಣನೀಯ ಏರಿಕೆ. ಭೂಮಿ ಖರೀದಿ ಅಥವಾ ಭೂಮಿ ಮಾರಾಟ ಬಯಸುವರಿಗೆ ಯಶಸ್ಸು. ಮನೆ ಕಟ್ಟಡ ಸುಗಮವಾಗಲಿದೆ. ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಶುಭ ಮಂಗಳ ಕಾರ್ಯ ಜರುಗುವುದು.…
ನವದೆಹಲಿ:- ಪಿಜ್ಜಾ ವಿಚಾರಕ್ಕೆ ಒಂದೇ ಕುಟುಂಬದ ಇಬ್ಬರು ಮಹಿಳೆಯರ ನಡುವೆ ಮಾರಾಮಾರಿ ನಡೆದ ಘಟನೆ ದೆಹಲಿಯ ಸೀಲಂಪುರ್ ಪ್ರದೇಶದಲ್ಲಿ ಜರುಗಿದೆ ಸೀಲಾಂಪುರ ಪ್ರದೇಶದಲ್ಲಿ ಪಿಜ್ಜಾ ತಿನ್ನುವ ವಿಚಾರಕ್ಕೆ ಜಗಳ ಸಂಭವಿಸಿದೆ ಮತ್ತು ಗುಂಡುಗಳನ್ನು ಹಾರಿಸಲಾಗಿದೆ. ಅತ್ತಿಗೆ ಮತ್ತು ನಾದಿನಿಯ ನಡುವೆ ಅವರ ಅತ್ತೆಯ ಮನೆಯಲ್ಲಿ ಜಗಳ ನಡೆದ ನಂತರ ಅತ್ತಿಗೆ ತನ್ನ ಅಣ್ಣನನ್ನು ಕರೆದರು. ಆಗ ಅವರೆಲ್ಲರ ನಡುವೆ ವಾಗ್ವಾದ ನಡೆದಿದೆ. ಜೀಶಾನ್ ಎಂಬ ಅಣ್ಣ ತನ್ನ ಮನೆಯಲ್ಲಿ ಪಿಜ್ಜಾ ತಂದು ತಮ್ಮ ಮತ್ತು ಅವನ ಕುಟುಂಬಕ್ಕೆ ವಿತರಿಸಲು ಪ್ರಾರಂಭಿಸಿದನು. ಜೀಶಾನ್ ಪಿಜ್ಜಾ ಹಂಚಿದ್ದಕ್ಕೆ ಆತನ ಪತ್ನಿ ಕೋಪಗೊಂಡರು. ಇದೇ ವಿಚಾರಕ್ಕೆ ಜಗಳ ಉಂಟಾಯಿತು. ಕೊನೆಗೆ ಆಕೆಯ ಅತ್ತಿಗೆ ತನ್ನ ಅಣ್ಣನನ್ನು ಮನೆಗೆ ಕರೆದರು. ಆಗ ಆತನೂ ಬಂದು ಜಗಳವಾಡಿ, ಕೋಪದಿಂದ ಜೀಶಾನ್ನ ಹೆಂಡತಿಯ ಮೇಲೆ ಗುಂಡು ಹಾರಿಸಿದ್ದಾನೆ. ಆಕೆಗೆ ಗಂಭೀರ ಗಾಯಗಳಾಗಿವೆ. ಮಹಿಳೆಯ ಹೊಟ್ಟೆಗೆ ಗುಂಡು ಹಾರಿಸಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.
ಸರಳ ಕಥೆಗಳನ್ನು ನೈಜವಾಗಿ ಸೊಗಸಾಗಿ ಸಿನಿಮಾ ರೂಪಕೊಡುವ ನಿರ್ದೇಶಕ ಸಿಂಪಲ್ ಸುನಿ ಈಗ ಮತ್ತೊಂದು ಫ್ರೆಶ್ ಕಥೆ ಒಪ್ಪಿಸೋದಿಕ್ಕೆ ಬರ್ತಿದ್ದಾರೆ. ಈ ಬಾರಿ ಸುನಿ ನವನಾಯಕನ್ನು ಬೆಳ್ಳಿಪರದೆಗೆ ಪರಿಚಯಿಸಲು ಹೊರಟ್ಟಿದ್ದಾರೆ. ರಂಗಭೂಮಿಗೀಳು ಅಂಟಿಸಿಕೊಂಡ ವೀರಾಜ್ ಈಗ ಹೀರೋ ಆಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸುನಿ-ವೀರಾಜ್ ಮೊದಲ ಕೂಸಿಗೆ ಕುವೆಂಪು ಅವರ ಪದ್ಯದ ಸಾಲುಗಳಾದ ದೇವರು ರುಜು ಮಾಡಿದನು ಎಂಬ ಟೈಟಲ್ ಇಡಲಾಗಿದೆ. ದೇವರು ರುಜು ಮಾಡಿದನು ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ.. ಸಿಂಪಲ್ ಸುನಿ ರಚನ, ವಚನ ಹಾಗೂ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರ್ತಿದೆ. ಕೈಯಲ್ಲಿ ಗಿಟಾರ್ ಹಿಡಿದಿರುವ ವೀರಾಜ್ ರಕ್ತಸಿಕ್ತರಾಗಿ ಕಾಣಿಸಿಕೊಂಡಿದ್ದಾರೆ. ಗ್ರೀನ್ ಹೌಸ್ ಪ್ರೊಡಕ್ಷನ್ ನಡಿ ಗೋವಿಂದ್ ರಾಜ್ ಸಿಟಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಂತೋಷ್ ರೈ ಪತಾಜಿ ಕ್ಯಾಮೆರಾ ಹಿಡಿಯಲಿದ್ದು, ಜೆರೆಡ್ ಮತ್ತು ಜುಡಾ ಮ್ಯೂಸಿಕ್ ದೇವರು ರುಜು ಮಾಡಿದನು ಚಿತ್ರಕ್ಕಿದೆ. ಪುಟ್ಟದೊಂದು ಝಲಕ್ ಮೂಲಕ ಹೀರೋ ಹಾಗೂ ಟೈಟಲ್ ರಿವೀಲ್ ಮಾಡಲಾಗಿದೆ. ಈಗಾಗಲೇ…
ಕಳ್ಳಬಟ್ಟಿ ಕುಡಿದು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ ಆಗಿದೆ ಈ ದುರಂತದ ಕುರಿತಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಜಿಪಿ ಅಲೋಕ್ ರಾಜ್ ಮತ್ತು ಅಬಕಾರಿ ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಸಿಎಂ ನಿತಿಶ್ ಕುಮಾರ್ ಉನ್ನತ ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಲು ಹೇಳಿದ್ದಾರೆ. ಅದರ ಜೊತೆಗೆ ಕಳ್ಳಬಟ್ಟಿ ಸರಾಯಿ ಪೂರೈಕೆ ಹಿಂದಿರುವ ಕೈಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಡಿಜಿಪಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ. ಈ ಒಂದು ದುರಂತದ ಬಗ್ಗೆ ಸಂಪೂರ್ಣವಾಗಿ ತನಿಖೆ ಕೈಗೊಳ್ಳಲು ಎರಡು ವಿಶೇಷ ತಂಡವನ್ನು ರಚಿಸಲಾಗಿದೆ. ಒಂದು ತಂಡ ಈ ದುರಂತಕ್ಕೆ ಕಾರಣವಾದ ಸ್ಥಳೀಯ ಮಟ್ಟದ ಆರೋಪಿಗಳನ್ನು ಕಂಡು ಹಿಡಿಯಲು ನಿಯೋಜನೆ ಮಾಡಲಾಗಿದೆ. ಮತ್ತೊಂದು ತಂಡವನ್ನು ಮದ್ಯಪಾನ ನಿಷೇಧ ಮಾಡಿದ ಇಲಾಖೆಯಲ್ಲಿ ಸದ್ಯ ನಡೆದಿರುವ ಘಟನೆ ಹಾಗೂ ಈ ಹಿಂದೆ ನಡೆದಿರುವ ಇದೇ ರೀತಿಯ ಘಟನೆಯಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಎಸ್ಐಟಿ ರಚನೆ…