ಹರ್ಬ್ ಲೈಫ್ ಪರ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ ಕಾರಣಕ್ಕೆ ಖ್ಯಾತ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹರ್ಬ್ ಲೈಫ್ ಪರ ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡಿರುವ ಕ್ರಿಸ್ಟಿಯಾನೋ “ಈ ಉತ್ಪನ್ನ ಪ್ರೋಟಿನ್, ನಾರು, ವಿಟಮಿನ್ ಮತ್ತು ಖನಿಜಗಳ ಸಂಪೂರ್ಣ ಮಿಶ್ರಣವಾಗಿದ್ದು ನಿಮ್ಮ ಆರೋಗ್ಯಕರ ಉಪಾಹಾರವಾಗಲಿದೆ’ ಎಂದು ಹೇಳಿದ್ದಾರೆ. ಕ್ರಿಸ್ಟಿಯಾನೋ ಪೋಸ್ಟ್ ವೈರಲ್ ಆಗಿದ್ದು ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಉತ್ಪನ್ನ ಲಿವರ್ ಸಮಸ್ಯೆ ತಂದೊಡ್ಡಲಿದೆ ಎಂದು ಹೇಳಲಾಗಿತ್ತು ಎಂದು ನೆಟ್ಟಿಗರು ಹೇಳಿದ್ದಾರೆ. ಅಂದ ಹಾಗೆ ಹರ್ಬ್ ಲೈಫ್ ಸೇವನೆಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಲಿವೆ ಎಂದು ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು.
Author: Prajatv Kannada
ಭಾರತೀಯ ಹಿಂದುಗಳನ್ನು ಓಲೈಸಲು ಮೊದಲ ಬಾರಿ ಬ್ರಿಟನ್ ಪ್ರಧಾನಿ ಕೀರ್ ಸ್ಟರ್ಮರ್ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ಇದೀಗ ಸಾಕಷ್ಟು ದೇಶಗಳಲ್ಲಿ ಭಾರತೀಯರ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಅಂತೆಯೇ ಬ್ರಿಟನ್ ನಲ್ಲೂ ಮೊದಲ ಭಾರಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಯಿತು. ಆದರೆ ಇದು ಹಿಂದೂಗಳಿಗೆ ಇಷ್ಟವಾಗಿಲ್ಲ. ಇದರಿಂದ ಅಸಮಾಧಾನಗೊಂಡ ಭಾರತೀಯರು ಬ್ರಿಟನ್ ಪ್ರಧಾನಿ ವಿರುದ್ಧ ಗರಂ ಆಗಿದ್ದಾರೆ. ಅ.29ರಂದು ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ಭಾರತೀಯ ಹಿಂದೂಗಳಿಗೆ ಅಧಿಕೃತ ದೀಪಾವಳಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಾರ್ಥನೆ, ಹಣತೆಗಳ ಬೆಳಗುವಿಕೆ, ಪ್ರಧಾನಿಗಳ ಭಾಷಣ ಮತ್ತು ಸಾಂಪ್ರದಾಯಿಕ ಭಾರತೀಯ ನೃತ್ಯವನ್ನು ಏರ್ಪಡಿಸಲಾಗಿತ್ತು. ಜತೆಗೆ ಅತಿಥಿಗಳಿಗೆ ಕುರಿ ಕಬಾಬ್, ಮೀನು, ಬಿಯರ್, ವೈನ್ ಬಡಿಸಲಾಗಿದೆ. ಈ ವೇಳೆ ಕೆಲ ಅತಿಥಿಗಳು ತಮ್ಮ ಅಕ್ರೋಶವನ್ನು ಅಲ್ಲಿಯೇ ಇದ್ದ ಕೆಟರಿಂಗ್ ಸಿಬ್ಬಂದಿ ವಿರುದ್ಧ ತೋರಿಸಿದ್ದಾರೆ. ಆದರೆ ಅವರು ಆರ್ಡರ್ ಮಾಡಿರುವುದನ್ನು ಬಡಿಸಿರುವುದಾಗಿ ಹೇಳಿದ್ದಾರೆ. ದೀಪಾವಳಿ ಧಾರ್ಮಿಕ ಮಹತ್ವವನ್ನೂ ಹೊಂದಿದೆ. ಹೀಗಾಗಿ ಸಾತ್ವಿಕ ಆಹಾರ ಬಡಿಸಬೇಕಿತ್ತು. ಮಾಂಸಾಹಾರ, ಮಧ್ಯ ಬಡಿಸುವುದಾದರೆ ನಮಗೆ…
ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಕೆಲ ವಾರಗಳೇ ಕಳೆದಿದೆ. ಆರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಈ ಎಪಿಸೋಡ್ ಸದ್ದು ಮಾಡುತ್ತಿದೆ. ಅದರಲ್ಲೂ ವೀಕೆಂಡ್ ಬಂತು ಎಂದರೆ ಯಾರು ಈ ವಾರ ಎಲಿಮಿನೇಟ್ ಆಗ್ತಿದ್ದಾರೆ ಎಂಬ ಟೆನ್ಷನ್ ಹೆಚ್ಚಗುತ್ತೆ. ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲೂ ಕಾಡುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಈ ವಾರ ಒಟ್ಟು 7 ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಯಾರ ಆಟ ಅಂತ್ಯ ಆಗಲಿದೆ ಎಂಬ ಕೌತುಕ ಇತ್ತು. ಅಂತಿಮವಾಗಿ ಎಲ್ಲರೂ ಸೇಫ್ ಆಗಿದ್ದರು. ಆದರೆ ಕೊನೆಯಲ್ಲಿ ಉಳಿದುಕೊಂಡಿದ್ದು ಭವ್ಯಾ ಮತ್ತು ಧನರಾಜ್. ಅವರಿಗೂ ಒಂದು ಸರ್ಪೈಸ್ ಕಾದಿತ್ತು. ಡೇಂಜರ್ ಝೋನ್ನಲ್ಲಿ ಇದ್ದ ಧನರಾಜ್ ಮತ್ತು ಭವ್ಯಾ ಅವರ ಪೈಕಿ ಧನರಾಜ್ ಸೇಫ್ ಆದರು. ಭವ್ಯಾ ಅವರು ಲಗೇಜ್ ಪ್ಯಾಕ್ ಮಾಡಿಕೊಂಡು ಮುಖ್ಯದ್ವಾರದ ಕಡೆಗೆ ಬರಬೇಕಾಯಿತು. ಎಲಿಮಿನೇಷನ್ನಲ್ಲಿ ಭವ್ಯಾ ಹೆಸರು ಬರುತ್ತದೆ ಎಂದು…
ತಮಿಳಿನ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಡೆಲ್ಲಿ ಗಣೇಶ್ ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡೆಲ್ಲಿ ಗಣೇಶ್ 80ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಹಲವು ಭಾಷೆಗಳಲ್ಲಿ ಡೆಲ್ಲಿ ಗಣೇಶ್ ನಟಿಸಿದ್ದಾರೆ. ತಮಿಳು, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ರು. ಗಣೇಶ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಡೆಲ್ಲಿ ಗಣೇಶ್ ನಿಧನಕ್ಕೆ ತಮಿಳು ಚಿತ್ರರಂಗ ಅನೇಕರು ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. “ಪ್ರಖ್ಯಾತ ಚಲನಚಿತ್ರ ನಟ ಡೆಲ್ಲಿ ಗಣೇಶ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ನಟನಾ ಕೌಶಲ್ಯದಿಂದ ಹೆಸರು ಮಾಡಿದ್ರು. ಪ್ರತಿ ಪಾತ್ರಕ್ಕೂ ಜೀವ ತುಂಬಿದವರು. ತಲೆಮಾರುಗಳಾದ್ಯಂತ ವೀಕ್ಷಕರನ್ನು ರಂಜಿಸಿದ್ರು. ರಂಗಭೂಮಿಯ ಬಗ್ಗೆಯೂ ಒಲವು ಹೊಂದಿದ್ದರು. ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಮೋದಿ ಬರೆದುಕೊಂಡಿದ್ದಾರೆ. ಕೆ ಬಾಲಚಂಧರ್ ಅವರಂಥಹಾ ಮೇರು…
ವಿವಾದಿತ ಹೇಳಿಕೆಗಳ ಮೂಲಕವೇ ಹೆಚ್ಚು ಹೆಚ್ಚು ಸುದ್ದಿಯಾಗುವ ನಟಿ ಕಸ್ತೂರಿ ಶಂಕರ್ ಇದೀಗ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಟಿ ಕಸ್ತೂರಿ ತೆಲುಗು ಜನರ ವಿರುದ್ಧ ಕಮೆಂಟ್ ಗಳನ್ನು ಮಾಡಿದ್ರು. ಇದ್ರಿಂದಾಗಿ ಆಕೆಯ ವಿರುದ್ಧ ಚೆನ್ನೈನಲ್ಲಿ ಹಲವು ಕೇಸ್ ದಾಖಲಾಗಿದ್ದವು. ಆದ್ರೆ ಈ ಪ್ರಕರಣಗಳಲ್ಲಿ ಆಕೆಗೆ ಸಮನ್ಸ್ ನೀಡಲು ಚೆನ್ನೈ ಪೊಲೀಸರು ಆಕೆಯ ಮನೆಗೆ ಹೋದಾಗ ಮನೆಗೆ ಬೀಗ ಹಾಕಿರೋದು ಗೊತ್ತಾಗಿದೆ. ಕಸ್ತೂರಿ ಫೋನ್ ಕೂಡ ಸ್ವಿಚ್ ಆಗಿದ್ದು ಬಂಧನ ಭೀತಿಯಲ್ಲೇ ನಟಿ ಊರು ಬಿಟ್ಟಿದ್ದಾರಂತೆ. ಹೀಗಾಗಿ ನಟಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಸ್ತೂರಿ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ತೆಲುಗು ಜನರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ನಟಿ ಮಾತುಗಳಿಗೆ ಟೀಕೆ ವ್ಯಕ್ತವಾಗಿತ್ತು. ಬಳಿಕ ನಟಿ ಕಸ್ತೂರಿ ಕ್ಷಮೆ ಯಾಚಿಸಿದರು. ತೆಲುಗು ಸಿನಿಮಾದಲ್ಲಿ ನನ್ನ ಹೆಜ್ಜೆಗಳು.. ತೆಲುಗು ಜನರೆಲ್ಲಾ ನನ್ನ ಕುಟುಂಬ. ಆದರೆ ಡಿಎಂಕೆ ಪಕ್ಷವು ತನ್ನ ಮಾತುಗಳನ್ನು ಬೇರೆ ರೀತಿಯಲ್ಲಿ ಹರಡಿದೆ. ಅವರು ನನ್ನ ವಿರುದ್ಧ…
ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್ ಹೊಸ ಫೋಟೋ ಶೂಟ್ ಮಾಡಿಸಿದ್ದು ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟಾಲಿವುಡ್ನಲ್ಲಿ ನಟಿ ಮೃಣಾಲ್ ಠಾಕೂರ್ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಿನಿಮಾ ಶೂಟಿಂಗ್, ಪ್ರಮೋಷನಲ್ನಲ್ಲಿ ಬ್ಯುಸಿ ಆಗಿರುವ ನಟಿ ಮೃಣಾಲ್ ಠಾಕೂರ್ ಸದ್ಯ ರಾಣಿಯಂತೆ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಮೃಣಾಲ್ ಠಾಕೂರ್ ಸುಂದರವಾದ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆಕರ್ಷಕವಾದ ವೆಲ್ವೆಟ್ ಹಾಗೂ ಮಿಕ್ಸ್ ಮೆಟೀರಿಯಲ್ ಬಟ್ಟೆಯ ಡ್ರೆಸ್ ಧರಿಸಿ ರಾಣಿಯಂತೆ ಕಾಣಿಸಿಕೊಂಡಿದ್ದಾರೆ. ನಟಿ ಮೃಣಾಲ್ ಠಾಕೂರ್ ಅವರು ಧರಿಸಿದ ಡ್ರೆಸ್ ಹೇಗಿತ್ತೋ ಅಷ್ಟೇ ಆಕರ್ಷಕವಾಗಿ ಅವರ ಒಡವೆಗಳೂ ಇದ್ದವು. ನಟಿ ತುಂಬಾ ಆಕರ್ಷಕವಾದ ಎಂಬ್ರಾಯ್ಡಡಿ ಇದ್ದ ಬ್ಯಾಕ್ ಸ್ಟೈಲ್ ಕೂಡಾ ತೋರಿಸಿದ್ದಾರೆ. ಇಷ್ಟಲ್ಲದೆ ನಟಿ ಧರಿಸಿದ ಆಭರಣ ಅವರ ಉಡುಗೆಗೆ ತುಂಬಾ ಚೆನ್ನಾಗಿ ಸೂಟ್ ಆಗಿದೆ. ಮೃಣಾಲ್…
ಅಮೆರಿಕದ ನೂತನ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿನ ನಗೆ ಭೀರಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಅರಿಜೋನಾ ಸೇರಿ ಎಲ್ಲಾ 7 ನಿರ್ಣಾಯಕ ರಾಜ್ಯಗಳಲ್ಲಿ ಹಿಂದಿಕ್ಕಿ ಟ್ರಂಪ್ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್‌ಸಿನ್, ನೆವಾಡ, ಅರಿಜೋನಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾವನ್ನು ನಿರ್ಣಾಯಕ ರಾಜ್ಯಗಳು ಎಂದು ಹೇಳಲಾಗುತ್ತಿತ್ತು. ಟ್ರಂಪ್‌ಗೆ 312 ಎಲೆಕ್ಟರ್‌ಗಳು ಹಾಗೂ ಕಮಲಾ ಅವರಿಗೆ 226 ಎಲೆಕ್ಟರ್‌ಗಳ ಬೆಂಬಲ ದೊರೆತಿದೆ. ಅಧ್ಯಕ್ಷರಾಗಿ ಆಯ್ಕೆಯಾಗಲು ಒಟ್ಟು 538 ಎಲೆಕ್ಟರ್‌ಗಳ ಪೈಕಿ 270 ಎಲೆಕ್ಟರ್‌ಗಳ ಬೆಂಬಲದ ಅಗತ್ಯವಿತ್ತು. ಇದರೊಂದಿಗೆ ರಿಪಬ್ಲಿಕನ್ ಪಕ್ಷವು ಸೆನೆಟ್‌ನಲ್ಲಿ ಮತ್ತೆ ಹಿಡಿತ ಸಾಧಿಸಿದೆ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧತೆ ನಡೆಸಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಬಾರಿಗೆ ಅಧ್ಯಕ್ಷೀಯ ಗಾದಿ ಏರಿದ್ದಾರೆ. ಮ್ಯಾಜಿಕ್ ನಂಬರ್ 270 ಅನ್ನು ದಾಟಿರುವ ಟ್ರಂಪ್…
ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಬೇರೆ ದೇಶಗಳಲ್ಲಿ ರಕ್ತ ಸಂಬಂಧಿಗಳು ಇದ್ದಾರೆಯೇ ಎಂಬ ಅನುಮಾನವಿದೆ. ಒಂದೆಡೆ ಟ್ರಂಪ್ ತಮ್ಮ ಯಶಸ್ಸನ್ನು ಆನಂದಿಸುತ್ತಿರುವಾಗಲೇ ಪಾಕಿಸ್ತಾನದಿಂದ ನಾನು ಟ್ರಂಪ್ ಮಗಳು ಹೇಳಿಕೊಂಡಿರುವ ಯುವತಿಯ ವಿಡಿಯೋವೊಂದು ವೈರಲ್ ಆಗಿದೆ. ಅಂದ ಹಾಗೆ ಈ ವಿಡಿಯೋ ಸಾಕಷ್ಟು ಹಳೆಯದು. ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಗೆಲುವು ಸಾಧಿಸಿದ ನಂತರ ಹಳೆ ವಿಡಿಯೋ ಮತ್ತೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬುರ್ಖಾ ತೊಟ್ಟ ಹುಡುಗಿಯೊಬ್ಬಳು ಟ್ರಂಪ್ ತನ್ನ ತಂದೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಈ ವೀಡಿಯೊವನ್ನು ಮೊದಲು 2018 ರಲ್ಲಿ ಪೋಸ್ಟ್ ಮಾಡಲಾಗಿದೆ. ಆ ಸಮಯದಲ್ಲಿ ಯಾರೂ ಯಾಕೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇತ್ತೀಚಿನ ಯುಎಸ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ, ಅನೇಕರು ಈ ವೀಡಿಯೊವನ್ನು ಮರು ಪೋಸ್ಟ್ ಮಾಡಿದ್ದಾರೆ. X ನಲ್ಲಿ ಪಾಕಿಸ್ತಾನಿ ಖಾತೆಯಿಂದ ಪೋಸ್ಟ್ ಮಾಡಲಾದ ಈ ವೀಡಿಯೊವನ್ನು 5.5 ಲಕ್ಷ ಜನರು ವೀಕ್ಷಿಸಿದ್ದಾರೆ. ಉರ್ದುವಿನಲ್ಲಿ ಈ ಹುಡುಗಿ ತಾನು…
ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ನಡೆಸಿದ ಹಿಂಸಾತ್ಮಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಲ್ ಪೊಲೀಸರು ಮತ್ತೊಬ್ಬನನ್ನು ಬಂಧಿಸಿದ್ದಾರೆ. ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀಸ್ನ ಸದಸ್ಯನಾ ಗಿರುವ ಖಲಿಸ್ತಾನಿ ಮೂಲಭೂತವಾದಿ ಇಂದರ್‌ಜಿತ್ ಗೋಸಲ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿರುವುದಾಗಿ ಪೀಲ್ ಪ್ರಾದೇಶಿಕ ಪೊಲೀಸರು ಈ ಮಾಹಿತಿ ನೀಡಿದ್ದಾರೆ. ಅಧಿಕೃತ ಪೊಲೀಸ್ ಹೇಳಿಕೆಯ ಪ್ರಕಾರ, 21 ವಿಭಾಗದ ಕ್ರಿಮಿನಲ್ ಇನ್ವೆಸ್ಟಿಗೇಶನ್ ಬ್ಯೂರೋ ಮತ್ತು ಎಸ್‌ಐಟಿಯ ತನಿಖಾಧಿಕಾರಿಗಳು ಬ್ರಾಂಪ್ಟನ್ ದೇವಸ್ಥಾನದಲ್ಲಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿ ಆರೋಪ ಹೊರಿಸಿದ್ದಾರೆ. ಖಲಿಸ್ತಾನಿ ಮೂಲಭೂತವಾದಿಯನ್ನು ಬಂಧಿಸಿದ ಕೂಡಲೇ ಬಿಡುಗಡೆ ಮಾಡಲಾಯಿತು. ಇದರೊಂದಿಗೆ ಟ್ರುಡೊ ಸರ್ಕಾರ ಖಲಿಸ್ತಾನಿಗಳಿಗೆ ಬಹಿರಂಗವಾಗಿ ರಕ್ಷಣೆ ನೀಡುತ್ತಿರುವುದು ಸ್ಪಷ್ಟವಾಗಿದೆ. ದಾಳಿಕೋರರಲ್ಲಿ ಒಬ್ಬನನ್ನು ಬ್ರಾಂಪ್ಟನ್‌ನ ಇಂದ್ರಜಿತ್ ಗೋಸಲ್ (35) ಎಂದು ಗುರುತಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ನವೆಂಬರ್ 8 ರಂದು ಅವರನ್ನು ಬಂಧಿಸಲಾಯಿತು ಮತ್ತು ಆಯುಧದಿಂದ ಹಲ್ಲೆ ಮಾಡಿದ ಆರೋಪ ಹೊರಿಸಲಾಯಿತು. ಅವರನ್ನು ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು ಮತ್ತು ನಂತರದ ದಿನಾಂಕದಲ್ಲಿ…
ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಸದ್ಯ ದುಬೈನಲ್ಲಿದ್ದಾರೆ. ಭಾರತದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ನಟಿ ಇದೀಗ ದುಬೈನಲ್ಲಿ ತೀರ ಹೀನಾಯ ಬದುಕು ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅವರೇ ಮಾಧ್ಯಮಗಳಿಗೆ ಹೇಳಿರುವಂತೆ, ದುಬೈನಲ್ಲಿ ಅವರು ಭಿಕ್ಷುಕಿಯಂತೆ ಬದುಕಿದ್ದಾರಂತೆ. ಇಷ್ಟಕ್ಕೆಲ್ಲ ಕಾರಣ ಅವರ ಮಾಜಿ ಪತಿ, ಮೈಸೂರಿನ ಆದಿಲ್ ನೀಡಿರುವ ದೂರು ಎನ್ನಲಾಗಿದೆ. ರಾಖಿ ಸಾವಂತ್ ಮಾಜಿ ಪತಿ ಆದಿಲ್, ರಾಖಿ ವಿರುದ್ಧ ವಂಚನೆ, ಕಳ್ಳತನ, ಮಾನಹಾನಿ ಇನ್ನಿತರೆ ದೂರುಗಳನ್ನು ದಾಖಲಿಸಿದ್ದಾರೆ. ಹೀಗಾಗಿ ಭಾರತಕ್ಕೆ ಬಂದರೆ ಪೊಲೀಸರು ತಮ್ಮನ್ನು ಬಂಧಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ರಾಖಿ ಸಾವಂತ್ ದುಬೈಗೆ ಪಲಯಾನ ಮಾಡಿದ್ದಾರೆ. ಅಲ್ಲಿ ಕಳೆದ ಕೆಲ ವಾರಗಳಿಂದಲೂ ವಾಸವಿದ್ದು, ಅವರೇ ಹೇಳಿರುವಂತೆ ಹಣ ಇಲ್ಲದ ಕಾರಣ ಭಿಕ್ಷುಕಿಯಂತೆ ಜೀವನ ನಡೆಸುತ್ತಿದ್ದಾರಂತೆ. ‘ಎಷ್ಟು ದಿನ ನಾನು ಸಹಾಯಕ್ಕೆ ಕೇಳುತ್ತಾ ಇರಲಿ, ಎಷ್ಟು ಜನರನ್ನು ಕೇಳಲಿ, ನನ್ನ ಜೀವನ ಭಿಕ್ಷುಕಿಯಂತೆ ಆಗಿಬಿಟ್ಟಿದೆ. ನನಗೆ ಭಾರತೀಯ ಕಾನೂನಿನ ಮೇಲೆ ವಿಶ್ವಾಸವಿದೆ, ನಾನು ಭಾರತಕ್ಕೆ ಮರಳಲಿದ್ದೇನೆ’ ಎಂದಿದ್ದಾರೆ. ದಶಕಗಳಿಂದಲೂ ಬಾಲಿವುಡ್ನಲ್ಲಿರುವ…