ಉತ್ತರ ಪ್ರದೇಶ:- ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಜಾರಿ ಬಿದ್ದ ಪುಟ್ಟ ಮಗಳನ್ನು ರಕ್ಷಿಸಲು ಅಪ್ಪನೋರ್ವ ರೈಲು ನಿಲ್ಲಿಸಿ 16 ಕಿಲೋಮೀಟರ್ ಹಿಂದಕ್ಕೆ ಓಡಿಹೋಗಿ ಮಗುವನ್ನು ಪತ್ತೆಹಚ್ಚಿ ಉಳಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಅಪ್ಪನ ಭುಜವೇರಿ ಕುಳಿತಿದ್ದ 8 ವರ್ಷದ ಮಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ನಿದ್ದೆಗೆ ಜಾರಿದ ಮುದ್ದಿನ ಮಗಳನ್ನು ಮಲಗಿಸೋದಕ್ಕೆ ಅಪ್ಪ ತಡಕಾಡಿದ್ದ. ತುರ್ತು ಕಿಟಕಿ ಪಕ್ಕದಲ್ಲೇ ಮಗಳನ್ನು ಮಲಗಿಸಿ ಜೋಪಾನ ಮಾಡುತ್ತಿದ್ದ. ಮಂಪರುಗಣ್ಣಿನಲ್ಲೇ ಇದ್ದವನಿಗೆ ಶಾಕ್ ಕೊಟ್ಟಿದ್ದು ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು. ಗಾಳಿ ಬರಲಿ ಅಂತ ತುರ್ತು ಕಿಟಕಿಯನ್ನು ಯಾರೋ ತೆಗೆದಿದ್ದಾರೆ. ಕೂಡಲೇ ಪಕ್ಕದಲ್ಲೇ ಮಲಗಿದ್ದ ಕಂದಮ್ಮ ಕಿಟಕಿಯಿಂದ ಜಾರಿ ಕೆಳಕ್ಕೆ ಬಿದ್ದಿದ್ದಾಳೆ ಉತ್ತರ ಪ್ರದೇಶದ ಲಲಿತ್ಪುರ ರೈಲು ನಿಲ್ದಾಣ ಕರುಣಾಜನಕ ಘಟನೆಗೆ ಸಾಕ್ಷಿಯಾಗಿದೆ. ಮಥುರಾದ ಅರವಿಂದ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಕ್ಕೆ ವಾಪಾಸ್ ಆಗುತ್ತಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ಎಮರ್ಜೆನ್ಸಿ ವಿಂಡೋ ಬಳಿ ಮಲಗಿದ್ದ ಮಗಳು ಜಾರಿ ಬಿದ್ದ ಕೂಡಲೇ ಅಕ್ಷರಶಃ ಎದೆ ಝಲ್ ಅಂದಿತ್ತು.…
Author: Prajatv Kannada
ನವದೆಹಲಿ: ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು, ಮುಂದಿನ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳಲು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಹೆಸರು ಶಿಫಾರಸು ಮಾಡಿದ್ದಾರೆ. ಮುಂದಿನ ನವೆಂಬರ್ 11ರಂದು ಸಿಜೆಐ ಹುದ್ದೆಯಿಂದ ಚಂದ್ರಚೂಡ್ ನಿವೃತ್ತಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ,ಮುಂದಿನ ಶಿಫಾರಸು ಕಳುಹಿಸುವಂತೆ ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಚಂದ್ರಚೂಡ್ ಅವರಿಗೆ ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಪತ್ರ ಬರೆದಿರುವ ಚಂದ್ರಚೂಡ್ ಅವರು ತಮ್ಮ ಉತ್ತರಾಧಿಕಾರಿಯಾಗಿ ಸಂಜೀವ್ ಖನ್ನಾ ಅವರ ಹೆಸರನ್ನ ಶಿಫಾರಸು ಮಾಡಿದ್ದಾರೆ. ಸರ್ಕಾರದ ಅನುಮೋದನೆ ನಂತರ ನ್ಯಾ. ಸಂಜೀವ್ ಖನ್ನಾ 51ನೇ ಸಿಜೆಐಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 2022ರ ನವೆಂಬರ್ 8ರಂದು ಸಿಜೆಐ ಉದಯ್ ಉಮೇಶ್ ಲಲಿತ್ ಅವರು ನಿವೃತ್ತಿ ಹೊಂದಿದ ಬಳಿಕ ಚಂದ್ರಚೂಡ್ ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಿದ್ದರು. ಯುಯು ಲಲಿತ್ ಅವರಿಗೂ ಮುನ್ನ ಎನ್.ವಿ.ರಮಣ ಅವರು 48ನೇ ಸಿಜೆಐ ಆಗಿ ಅಧಿಕಾರ ನಿರ್ವಹಿಸಿದ್ದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಕಾಲಿಕವಾಗಿ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ ಘೋಷಿಸಿ ರೈತರಿಗೆ ಬಲ ತುಂಬಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಮಾದ್ಯಮದವರೊಂದಿಗೆ ಮಾತನಾಡಿ, ಮುಂಗಾರು, ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಪ್ರಧಾನಿ ಮೋದಿ ಅವರು ಅನ್ನದಾತರಿಗೆ ಬೆಳಕು ತೋರಿದ್ದಾರೆ ಎಂದು ಬಣ್ಣಿಸಿದರು. 2025-26ಕ್ಕೆ ಹಿಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮೋದಿ ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಮಂತ್ರಿಮಂಡಲ ಸಮಿತಿ (ಸಿಸಿಇಎ) ವ್ಯಾಪಾರ ವರ್ಷ 2025-26ಕ್ಕಾಗಿ ಸೂಚಿಸಿದ ಎಲ್ಲಾ ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಲು ಅನುಮೋದನೆ ನೀಡಿದೆ ಎಂದರು. ಎಂಎಸ್‌ಪಿಯಲ್ಲಿ ಗರಿಷ್ಠ ಹೆಚ್ಚಳವಾಗಿ ಕುರಿ ಮೇವಿನ ಕಾಳು ಮತ್ತು ಸಾಸಿವೆಗಳಿಗೆ ಪ್ರತಿ ಕ್ವಿಂಟಲ್ ಗೆ 300 ರೂ. ಹಾಗೂ ಮಸೂರ ಬೇಳೆಗೆ ಪ್ರತಿ ಕ್ವಿಂಟಲ್ ಗೆ 275 ರೂ. ಹೆಚ್ಚಿಸಿದೆ. ಕಡಲೆ, ಗೋಧಿ,…
ಮಡಿಕೇರಿ: ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ ಕಾವೇರಿ ಪವಿತ್ರ ತೀರ್ಥೋದ್ಭವ ನೆರವೇರಿತು. ಭಕ್ತರಿಗೆ ತೀರ್ಥರೂಪಿಣಿಯಾಗಿ ಕಾವೇರಿ ದರ್ಶನ ನೀಡಿದಳು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷ ತುಲಾ ಲಗ್ನದಲ್ಲಿ ತೀರ್ಥೋದ್ಭವವಾಯಿತು. ವರ್ಷಕ್ಕೊಮ್ಮೆ ಜರುಗುವ ದೇಶದ ಪವಿತ್ರ ತೀರ್ಥೋದ್ಭವ ಸಂಭ್ರಮ ಇಂದು ನಡೆಯಿತು. ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ದರ್ಶನವಾದಳು. ನಿಗದಿಯಂತೆ 7:40ಕ್ಕೆ ಸೂರ್ಯ ಕನ್ಯಾ ಲಗ್ನದಿಂದ ತುಲಾ ಲಗ್ನಕ್ಕೆ ಪ್ರವೇಶಿಸುತ್ತಿದ್ದಂತೆ ತೀರ್ಥೋದ್ಭವ ನೆರವೇರಿತು. ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿ, ಮೂರು ಬಾರಿ ಉಕ್ಕಿ ಬಂದಳು. ಬಳಿಕ ಅರ್ಚಕರು ನೆರೆದಿರುವ ಭಕ್ತರಿಗೆ ಬ್ರಹ್ಮಕುಂಡಿಕೆಯಿಂದ ತೀರ್ಥ ಪ್ರೋಕ್ಷಣೆ ಮಾಡಿದರು. ತೀರ್ಥೋದ್ಭವಕ್ಕೆ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಆಗಮಿಸಿದ್ದರು. ಬೆಳಗ್ಗೆ 7 ಗಂಟೆ 40 ನಿಮಿಷಕ್ಕೂ ಮೊದಲು ಒಂದು ಗಂಟೆಯಿಂದ ನಿರಂತರವಾಗಿ ಅರ್ಚಕ ಗುರುರಾಜ್ ಆಚಾರ್ ನೇತೃತ್ವದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆದವು. ಜೊತೆಗೆ ಅರ್ಚಕ ಪ್ರಶಾಂತ್…
ಕಲಬುರಗಿ: ಬೈಕ್, ಕಾರು, ಲಾರಿ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿರುವ ಘಟನೆ ಜೇವರ್ಗಿ ತಾಲೂಕಿನ ಹಸನಾಪುರ ಬಳಿ ನಡೆದಿದೆ. ರಾಘವೇಂದ್ರ (35), ಮುಜಾಹಿದ್ (30), ಹುಸೇನ್ (45) ಮೃತರು. ಕಾರು ರಾಯಚೂರು ಜಿಲ್ಲೆಯ ಹಟ್ಟಿ ಗ್ರಾಮಕ್ಕೆ ತೆರಳುತ್ತಿತ್ತು. ಬೈಕ್‌ನಲ್ಲಿದ್ದ ಪರಮಾನಂದ ಎಂಬುವರಿಗೆ ಮತ್ತು ಕಾರಿನಲ್ಲಿದ್ದ ಇನ್ನೂ ಮೂವರಿಗೆ ಗಂಭೀರ ಗಾಯವಾಗಿದೆ. ಗಾಯಗೊಂಡ ನಾಲ್ವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸ್ಥಳಕ್ಕೆ ಕಲಬುರಗಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಿಟನ್ನ ಖ್ಯಾತ ಪಾಪ್ ಗಾಯಕ ಲಿಯಾಮ್ ಪಾಯ್ನ್ ಅವರು ತಾವು ತಂಗಿದ್ದ ಹೋಟೆಲ್ ಕೊಠಡಿಯ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಲಿಯಾಮ್ ಪಾಯ್ನ್ ಅವರಿಗೆ 31 ವರ್ಷ ವಯಸ್ಸಾಗಿದ್ದು ಅವರು ಅರ್ಜೆಂಟೀನಾದ ರಾಜಧಾನಿ ಬೋನಸ್ ಐರಿಸ್ನಲ್ಲಿ ಲಿಯಾಮ್ ಹೋಟೆಲ್ ನ್ಲಿ ತಂಗಿದ್ದರು. ಲಿಯಾಮ್ ಸಾವಿಗೆ ಮುನ್ನ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಡಿರುವ ಕರೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೋನಸ್ ಐರಿಸ್ ಪೊಲೀಸರು, ಲಿಯಾಮ್ ಅವರು ಕಾಸಾ ಸರ್ ಹೋಟೆಲ್ನ ಮೂರನೇ ಮಹಡಿಯ ತನ್ನ ಕೋಣೆಯ ಬಾಲ್ಕನಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಳಗೆ ಹಾರಿದ ಕೂಡಲೇ ಲಿಯಾಮ್ ಸಾವನ್ನಪ್ಪಿದ್ದಾರೆ. ‘ಸಂಜೆ ಐದು ಗಂಟೆ ವೇಳೆಗೆ ಘಟನೆ ನಡೆದಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದರು ಆ ವೇಳೆಗಾಗಲೆ ಲಿಯಾಮ್ ನಿಧನ ಹೊಂದಿದ್ದರು. ಆತ ಬಹಳ ಒರಟು ಹಾಗೂ ಮಾದಕ ದ್ರವ್ಯ ವ್ಯಸನಿಯಾಗಿದ್ದ, ಮಾದಕ ವಸ್ತು ಸೇವಿಸಿಯೇ ಆತ ಈ ಕೃತ್ಯ ಎಸಗಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಸಲಿಗೆ…
ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿರುವ ಉಗ್ರಂ ಮಂಜು ಹಾಗೂ ಧರ್ಮ ಕೀರ್ತಿರಾಜ್ ಒಟ್ಟಿಗೆ ಸಿನಿಮಾ ಮಾಡಿದ್ದು ಸದ್ಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿಕೊಡುವ ಮೊದಲೇ ಈ ಚಿತ್ರದಲ್ಲಿ ಇಬ್ಬರು ನಟಿಸಿದ್ದು ಚಿತ್ರವಲ್ಲಿ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ಸಿನಿಮಾ ಟೀಸರ್ ರಿಲೀಸ್ ಮಾಡಲಾಗಿದೆ. ಉಗ್ರಂ ಮಂಜು ಹಾಗೂ ಧರ್ಮ ಕೀರ್ತಿ ರಾಜ್ ನಟನೆಯ ಸಿನಿಮಾಗೆ ‘ಟೆನೆಂಟ್’ ಎಂದು ಹೆಸರಿಡಲಾಗಿದ್ದು ಚಿತ್ರದಲ್ಲಿ ಧರ್ಮ ಮತ್ತು ಮಂಜು ಜೊತೆಗೆ ತಿಲಕ್, ರಾಕೇಶ್ ಮಯ್ಯ, ಸೋನು ಗೌಡ ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಧರ್ ಶಾಸ್ತ್ರೀ ಎಂಬುವವರು ಚಿತ್ರವನ್ನು ನಿರ್ದೇಶನ ಮಾಡಿದ್ದು, ಈಚೆಗಷ್ಟೇ ಟೀಸರ್ ರಿಲೀಸ್ ಆಗಿದೆ. ಸದ್ಯ ಟೀಸರ್ ಸಾಕಷ್ಟು ಗಮನ ಸೆಳೆಯುತ್ತಿದೆ. ‘ಟೆನೆಂಟ್’ ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ಸದ್ಯ ರಿಲೀಸ್ ಆಗಿರುವ ಟೀಸರ್ ಆಕರ್ಷಕವಾಗಿದ್ದು, ಕೂತೂಹಲ ಮೂಡಿಸುವಂತೆ ಇದೆ ಮತ್ತು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ‘ನವಗ್ರಹ’ ಸಿನಿಮಾದಲ್ಲಿ ‘ಕಣ್ ಕಣ್ಣ…
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ಜಾಮೀನು ಅರ್ಜಿ ವಿಚಾರಣೆಗೆ ಹೈಕೋರ್ಟ್ ಗೆ ದರ್ಶನ್ ಮನವಿ ಮಾಡಿದ್ದಾರೆ. ಅಕ್ಟೋಬರ್ 22ರಂದು ದರ್ಶನ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಪವಿತ್ರಾಗೌಡ ಕೂಡ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇತರೆ ಆರೋಪಿಗಳಾದ ಅನುಕುಮಾರ್, ಪ್ರದೋಷ್ ಮತ್ತು ವಿನಯ್ ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿದೆ. ಕೋರ್ಟ್ ಜಾಮೀನು ಮಂಜೂರು ಮಾಡಿ ಮೂರು ದಿನ ಕಳೆದರೂ ಪರಪ್ಪನ ಅಗ್ರಹಾರದಲ್ಲಿರುವ ದೀಪಕ್, ತುಮಕೂರು ಜೈಲಲ್ಲಿರುವ ರವಿಶಂಕರ್ ಇನ್ನೂ ಬಿಡುಗಡೆಯಾಗಿಲ್ಲ. ಜಾಮೀನು ಪ್ರಕ್ರಿಯೆ ಮುಗಿಯದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಬರೋಬ್ಬರು ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಧ್ರುವ ಸರ್ಜಾಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಮಾರ್ಟಿನ್ ಸಿನಿಮಾದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೊಟ್ಟ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್ ಆದ ಒಂದೇ ತಿಂಗಳಲ್ಲಿ ಒಟಿಟಿಗೆ ಬರಲು ಸಜ್ಜಾಗಿದೆ. ಎರಡು ದಿನಗಳ ಹಿಂದೆಯಷ್ಟೇ ‘ಮಾರ್ಟಿನ್’ ಸಕ್ಸಸ್ ವಿಚಾರಕ್ಕೆ ಧ್ರುವ ಸರ್ಜಾ ಚಿತ್ರತಂಡದೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದರು. ಈ ಬೆನ್ನಲ್ಲೇ ಇದೀಗ ಒಟಿಟಿಗೆ ಮಾರ್ಟಿನ್ ಎಂಟ್ರಿಕೊಡಲು ಸಜ್ಜಾಗಿದೆ. ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ 20 ಕೋಟಿಗೆ ಹೆಚ್ಚು ಕಲೆಕ್ಷನ್ ಮಾಡಿರುವ ‘ಮಾರ್ಟಿನ್’ ಇನ್ನು ಒಂದೇ ತಿಂಗಳಲ್ಲಿ ಒಟಿಟಿಗೆ ಬರಲಿದೆ. ಈ ಬಗ್ಗೆ ಧ್ರುವ ಸರ್ಜಾ ಆಪ್ತರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಚಿತ್ರದ ಡಿಜಿಟಲ್ ರೈಟ್ಸ್ ಹಾಗೂ ಟಿವಿ ರೈಟ್ಸ್ ಬಗ್ಗೆ ಜೀ ನೆಟ್ವರ್ಕ್ ಜೊತೆ ಮಾತುಕತೆ ನಡೆಯುತ್ತಿದ್ದು, ಇನ್ನೂ ಸಿನಿಮಾ ಸೇಲ್ ಆಗಿಲ್ಲ. ಈ ವಿಚಾರವಾಗಿ…
ಬೆಂಗಳೂರು:- ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ವಿಚಾರಣೆಗೆ ಗೈರಾಗಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿ ಆದೇಶಿಸಿದೆ. ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ತಬಸ್ಸುಮ್ ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ಬೆಂಗಳೂರಿನ 42ನೇ ACMM ಕೋರ್ಟ್ ಜಡ್ಜ್ ಕೆ.ಎನ್.ಶಿವಕುಮಾರ್ ಅವರು ಇಂದು ಯತ್ನಾಳ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ದಿನೇಶ್ ಗುಂಡೂರಾವ್ ಪತ್ನಿ ತಬಸುಮ್ ಸಲ್ಲಿಸಿದ್ದ ಖಾಸಗಿ ದೂರನ್ನು ಆಗಸ್ಟ್ 29 ರಂದು ಮಾನ್ಯ ಮಾಡಿದ್ದ ನ್ಯಾಯಾಲಯ, ಅಕ್ಟೋಬರ್ 16 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಶಾಸಕ ಯತ್ನಾಳ್ಗೆ ಸಮನ್ಸ್ ಜಾರಿಗೊಳಿಸಿತ್ತು. ಆದ್ರೆ ಯತ್ನಾಳ್ ಇಂದು ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28 ಕ್ಕೆ ಮುಂದೂಡಿದೆ. ಈ ಮೂಲಕ ಬಸನಗೌಡ…