ಬೆಂಗಳೂರು:- ಕರ್ನಾಟಕದಲ್ಲಿ ಅಕ್ಟೋಬರ್ 23ರವರೆಗೂ ಭಾರೀ ಮಳೆಯ ಮುನ್ಸೂಚನೆ ಕೊಟ್ಟಿರುವ ಹವಮಾನ ಇಲಾಖೆಯು, ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಬಳ್ಳಾರಿ, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ, ವಿಜಯಪುರ, ಬೀದರ್ನಲ್ಲಿ ಮಳೆಯಾಗಲಿದೆ. ಎಚ್ಎಎಲ್ನಲ್ಲಿ 22.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 21.9ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 23.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 24.0ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
Author: Prajatv Kannada
ಬೆಂಗಳೂರು:- ಬೆಂಗಳೂರಿನ ಲಾಡ್ಜ್ ನಲ್ಲಿದ್ದ ತೀರ್ಥಹಳ್ಳಿ ತಹಶೀಲ್ದಾರ್ ಸಾವನ್ನಪ್ಪಿದ ಘಟನೆ ಜರುಗಿದೆ. ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಜಕ್ಕಣ್ಣಗೌಡರ ಸಾವನ್ನಪ್ಪಿದ ಅಧಿಕಾರಿ. ಇವರು ವೈಭವ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಆದ್ರೆ, ಇಂದು ರಾತ್ರಿ 9ರ ಸುಮಾರಿಗೆ ಅವರು ರೂಮ್ನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದರೆ ಮತ್ತೊಂದೆಡೆ ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ. ಇನ್ನು ತೀರ್ಥಹಳ್ಳಿಯ ಹಶೀಲ್ದಾರ್ ಜಕ್ಕಣ್ಣಗೌಡರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿದ್ದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಕೂಡಲೇ ಲಾಡ್ಜ್ ಆಗಮಿಸಿದ್ದಾರೆ. ಹಾಗೇ ಸ್ಥಳಕ್ಕೆ ಇನ್ನು ಉಪ್ಪಾರ ಪೇಟೆ ಪೊಲೀಸ್ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಮಾಡಿದ ಬಳಿಕ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ.
ಬೆಂಗಳೂರು: ದೇವಿನಗರ ಬಸ್ ನಿಲ್ದಾಣ ಬಳಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರರು ಮೃತಪಟ್ಟಿದ್ದಾರೆ. ಬೈಕ್ ಸವಾರರು ಬಿಇಎಲ್ ಕಡೆಯಿಂದ ಹೆಬ್ಬಾಳ ಕಡೆ ಬರುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ನಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಮೃತರಲ್ಲಿ ಓರ್ವನ ಸೊಂಟದಲ್ಲಿ ಚಾಕು ಪತ್ತೆಯಾಗಿದೆ. ಯುವಕರು ಚಾಕುತೋರಿಸಿ ದರೋಡೆ ಮಾಡುತ್ತಿದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ಹೆಬ್ಬಾ
ಭಾರತ ಮತ್ತು ಕೆನಡಾ ನಡುವಿನ ಬಾಂಧವ್ಯ ಹದಗೆಡಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ನೇರ ಹೊಣೆ ಎಂದು ಭಾರತ ವಿದೇಶಾಂಗ ಸಚಿವಾಲಯ ಹೇಳಿದೆ. ಖಾಲಿಸ್ತಾನಿ ಪ್ರತ್ರ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸಂಬಂಧ ಬುಧವಾರ ತನಿಖಾ ಆಯೋಗದ ಮುಂದೆ ಹಾಜರಾದ ಟ್ರುಡೊ, ‘ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ್‌ಗಳ ಪಾತ್ರವಿದೆ ಎಂದು ಆರೋಪಿಸಿದಾಗ ನನ್ನಲ್ಲಿ ಯಾವುದೇ ಬಲವಾದ ಪುರಾವೆಗಳಿರಲಿಲ್ಲ, ಗುಪ್ತಚರ ಮಾಹಿತಿ ಮಾತ್ರ ಇತ್ತು’ ಎಂದು ಒಪ್ಪಿಕೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ‘ನಾವು ಈವರೆಗೂ ಹೇಳಿಕೊಂಡು ಬಂದಿದ್ದೇ ಇಂದು ನಿಜವಾಗಿದೆ. ಭಾರತ ಮತ್ತು ಭಾರತದ ರಾಜತಾಂತ್ರಿಕರ ವಿರುದ್ಧ ಆರೋಪ ಮಾಡುತ್ತಾ ಬಂದಿರುವ ಕೆನಡಾ, ತಾನು ಮಾಡಿರುವ ಗಂಭೀರ ಆರೋಪಗಳನ್ನು ರುಜುವಾತು ಮಾಡುವ ಯಾವುದೇ ಪುರಾವೆಗಳನ್ನು ನಮಗೆ ಪ್ರಸ್ತುತಪಡಿಸಿಲ್ಲ’ ಎಂದರು. ‘ಅಲಕ್ಷ್ಯದ ನಡವಳಿಕೆಯಿಂದ ಭಾರತ-ಕೆನಡಾ ಸಂಬಂಧದ ಮೇಲೆ ಉಂಟಾದ ಹಾನಿಯ ಸಂಪೂರ್ಣ ಹೊಣೆ ಕೆನಡಾ ಪ್ರಧಾನಿ ಟ್ರುಡೊ ಅವರ ಮೇಲಿದೆ’ ಎಂದು ಹೇಳಿದರು.
ಕಳೆದೊಂದು ವರ್ಷದಿಂದ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಿದೆ. ಈಗಾಗಲೇ ಇಸ್ರೇಲ್ ಗಾಜಾ ಪಟ್ಟಿ ಹಾಗೂ ಲೆಬನಾನ್ ದೇಶಗಳನ್ನು ನರಕಗೊಳಿಸಿದೆ. ಇಷ್ಟೇ ಸಾಲದು ಎಂಬಂತೆ ಇದೀಗ ಸಿರಿಯಾ ಮೇಲು ದಾಳಿ ಮುಂದುವರೆಸಿದೆ. ಕರಾವಳಿ ನಗರ ಲತಾಕಿಯಾದ ಮೇಲೆ ಇಸ್ರೇಲ್ ಪಡೆಗಳು ವಾಯುದಾಳಿ ನಡೆಸಿದೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ‘ಸನಾ’ ಹೇಳಿದ್ದು, ಲತಾಕಿಯ ನಗರದ ಶಸ್ತ್ರಾಸ್ತ್ರ ಕೋಠಿಯನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ‘ಲತಾಕಿಯಾದ ಮೇಲೆ ಶತ್ರಗಳ ಗುರಿಗಳನ್ನು ವೈಮಾನಿಕ ದಾಳಿ ರಕ್ಷಣಾ ವ್ಯವಸ್ಥೆ ತಡೆದಿದೆ’ ಎಂದು ಸನಾ ತಿಳಿಸಿದೆ. ಇಸ್ರೇಲ್ ಆಕ್ರಮಣದಿಂದಾಗಿ ಲತಾಕಿಯಾದ ಪ್ರವೇಶದ ದ್ವಾರದ ಬಳಿ ದಾಳಿ ನಡೆದಿದೆ. ಈ ಪ್ರದೇಶ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರ ಭದ್ರ ಹಿಡಿತದಲ್ಲಿದೆ. ಇಸ್ರೇಲ್ ಯುದ್ಧ ಸಾರಿರುವ ಲೆಬನಾನ್‌ನ ಹಿಜ್ಬುಲ್ಲಾ ಬಂಡುಕೋರರಿಗೆ ಅಸ್ಸಾದ್ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿರಿಯಾ ಮೇಲೆ ಇಸ್ರೇಲ್ ಹಲವು ಬಾರಿ ದಾಳಿ ನಡೆಸಿದೆ. ಆದರೆ ಲತಾಕಿಯ ಮೇಲಿನ ದಾಳಿ ಬಗ್ಗೆ ಮಾಹಿತಿ ಪಡೆಯಲು…
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಉಕ್ರೇನ್ ಗೆ 425 ಮಿಲಿಯನ್ ಡಾಲರ್ ನೆರವು ಪ್ಯಾಕೇಜ್ ಘೋಷಿಸಿದ್ದಾರೆ. ಬುಧವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರೊಂದಿಗೆ ಉಕ್ರೇನ್ಗೆ ಭದ್ರತಾ ಸಹಾಯವನ್ನು ಹೆಚ್ಚಿಸುವ ಪ್ರಯತ್ನಗಳ ಬಗ್ಗೆ ಬೈಡನ್ ಮಾತನಾಡಿದರು ಎಂದು ಶ್ವೇತ ಭವನ ತಿಳಿಸಿದೆ. ಭದ್ರತಾ ಪ್ಯಾಕೇಜ್ ನಲ್ಲಿ ವಾಯು ರಕ್ಷಣಾ ಸಾಮರ್ಥ್ಯ, ಗಾಳಿಯಿಂದ ನೆಲಕ್ಕೆ ಯುದ್ಧಸಾಮಗ್ರಿಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ನಿರ್ಣಾಯಕ ಶಸ್ತ್ರಾಸ್ತ್ರಗಳು ಸೇರಿವೆ ಎಂದು ಶ್ವೇತಭವನ ಹೇಳಿಕೆಯಲ್ಲಿ ತಿಳಿಸಿದೆ. ಟೆಲಿಗ್ರಾಮ್ ನಲ್ಲಿ ಬರೆದುಕೊಂಡಿರುವ ಜೆಲೆನ್ಸ್ಕಿ, ಹೊಸ ಪ್ಯಾಕೇಜ್ ಗಾಗಿ ಬೈಡನ್, ಕಾಂಗ್ರೆಸ್ ಎರಡೂ ಪಕ್ಷಗಳು ಮತ್ತು ಅಮೆರಿಕದ ಜನರಿಗೆ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಸಂಸತ್ತಿನಲ್ಲಿ ಮಂಡಿಸಿದ ಕೈವ್ ಅವರ ಐದು ಅಂಶಗಳ “ವಿಜಯ ಯೋಜನೆಯ” ಬಗ್ಗೆ ಬೈಡನ್ ಅವರೊಂದಿಗೆ ಮಾತನಾಡಿದ್ದಾನೆ ಎಂದಿದ್ದಾರೆ. “ಜಂಟಿ ಶಸ್ತ್ರಾಸ್ತ್ರ ಉತ್ಪಾದನೆಯ ಸಾಧ್ಯತೆಯನ್ನು ಪರಿಗಣಿಸಲು ನಾನು ಪ್ರಸ್ತಾಪಿಸಿದೆ” ಎಂದು ಅವರು ಹೇಳಿದರು. “ಉಕ್ರೇನ್ ಸೈನಿಕರಿಗೆ ಹೆಚ್ಚುವರಿ ತರಬೇತಿಯ ಪ್ರಾಮುಖ್ಯತೆಯ ಬಗ್ಗೆಯೂ ನಾವು ಚರ್ಚಿಸಿದ್ದೇವೆ.” ರಷ್ಯಾವನ್ನು ಪ್ರಾಮಾಣಿಕ ರಾಜತಾಂತ್ರಿಕತೆಯತ್ತ…
ಪೆಟ್ರೋಲ್ ಟ್ಯಾಂಕರ್ ನಿಂದ ಸೋರುತ್ತಿದ್ದ ಇಂಧನ ಸಂಗ್ರಹಿಸಲು ಮುಂದಾದ ವೇಳೆ ಟ್ಯಾಂಕರ್ ಸ್ಫೋಟಗೊಂಡು ಮಕ್ಕಳು ಸೇರಿದಂತೆ 140 ಮಂದಿ ಭೀಕರವಾಗಿ ಸಾವನ್ನಪ್ಪಿರುವ ಘಟನೆ ನೈಜೀರಿಯಾದ ಜಿಗಾವಾ ರಾಜ್ಯದ ಮಜಿಯಾ ಪಟ್ಟಣದ ಸಂಭವಿಸಿದೆ. ಮಧ್ಯರಾತ್ರಿ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಟ್ಯಾಂಕರ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವಕ್ತಾರ ಲಾವನ್ ಆಡಮ್ ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಘಟನಾ ಸ್ಥಳಕ್ಕೆ ಧಾವಿಸಿ ಇಂಧನವನ್ನು ತೆಗೆದುಕೊಳ್ಳುತ್ತಿದ್ದ ವೇಳೆ ಟ್ಯಾಂಕರ್ ಸ್ಫೋಟಗೊಂಡು ಈ ಘಟನೆ ಸಂಭವಿಸಿದ ಎಂದು ಅವರು ಹೇಳಿದರು. “ಇತರ ಸ್ಥಳಗಳಲ್ಲಿ ಸಮಾಧಿ ಮಾಡಲಾದ ಜನರನ್ನು ಹೊರತುಪಡಿಸಿ ಸುಮಾರು 140 ಜನರನ್ನು ಸಾಮೂಹಿಕ ಸಮಾಧಿಯಲ್ಲಿ ಇರಿಸಲಾಯಿತು” ಎಂದು ಈ ಪ್ರದೇಶದ ರಾಷ್ಟ್ರೀಯ ತುರ್ತು ನಿರ್ವಹಣಾ ಏಜೆನ್ಸಿಯ ಮುಖ್ಯಸ್ಥ ನುರಾ ಅಬ್ದುಲ್ಲಾಹಿ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದರು. ಮಜಿಯಾ ನಿವಾಸಿಗಳು ಬುಧವಾರ ಸಂತ್ರಸ್ತರಿಗಾಗಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದ್ದರಿಂದ ಶೋಕದಲ್ಲಿದ್ದರು. ಹೆಚ್ಚಿನ ಶವಗಳನ್ನು ಗುರುತಿಸಲಾಗಿಲ್ಲ ಎಂದು ತುರ್ತು ಸೇವೆಗಳು ತಿಳಿಸಿವೆ. ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆ…
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ತಮ್ಮ ಹೇಳಿಕೆಗಳ ಮೂಲಕವೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ವರ್ಮಾ ಇದೀಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿಚಾರದಲ್ಲಿ ಮೂಗು ತೂರಿಸಿದ್ದಾರೆ. ಇದುವರೆಗೂ ಸಿನಿಮಾಗಳಲ್ಲಿ ಮಾತ್ರವೇ ಅಂಡರ್ ವರ್ಲ್ಡ್ ಕಥೆಗಳನ್ನು ಹೇಳುತ್ತಿದ್ದ ವರ್ಮಾ ಇದೀಗ ರಿಯಲ್ ಅಂಡರ್ ವರ್ಲ್ಡ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಇದರಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಆರ್ ಜಿ ವಿ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಆರ್ಜಿವಿ ಬಾಯಿಗೆ ಬಂದಂತೆ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಬಾ ಸಿದ್ಧಿಕಿ ಅವರ ಹತ್ಯೆ ನಡೆಯಿತು. ಸಲ್ಮಾನ್ ಖಾನ್ ಜೊತೆ ಬಾಬಾ ಸಿದ್ಧಿಕಿ ಅವರಿಗೆ ಆಪ್ತ ಒಡನಾಟ ಇತ್ತು. ಆ ಕಾರಣದಿಂದಲೇ ಬಾಬಾ ಸಿದ್ಧಿಕಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ಗೆ ಯಾರೆಲ್ಲ ಸಹಾಯ ಮಾಡುತ್ತಾರೋ ಅವರನ್ನು ಕೂಡ ಕೊಲ್ಲುವುದಾಗಿ…
ರೆಬೆಲ್ ಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಂಬರೀಶ್ ಹಾಗೂ ಸುಮಲತಾರ ಮುದ್ದಿನ ಮಗ ಅಭಿಷೇಕ್ ಅಂಬರೀಶ್ ಸದ್ಯದಲ್ಲೇ ತಂದೆಯಾಗುತ್ತಿದ್ದಾರೆ. ಅವಿವಾ ತುಂಬು ಗರ್ಭಿಣಿಯಾಗಿದ್ದು ಪುಟ್ಟ ಕಂದನ ಆಗಮನಕ್ಕೆ ಇಡೀ ಮನೆ ಎದುರು ನೋಡುತ್ತಿದೆ. ಈ ಮಧ್ಯೆ ಅಭಿಷೇಕ್ ಪತ್ನಿ ಅವಿವಾ ಮುದ್ದಾದ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದಷ್ಟೇ ಸೊಸೆಗೆ ಸುಮಲತಾ ಅಂಬರೀಶ್ ಸೀಮಂತ ಮಾಡಿದ್ದರು.ಮನೆಯಲ್ಲೇ ನಡೆದ ಸೀಮಂತಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಇದೀಗ ತುಂಬು ಗರ್ಭಿಣಿಯಾಗಿರುವ ಅವಿವಾ ಪಿಂಕ್ ಬಣ್ಣದ ಸೀರೆಯುಟ್ಟು ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮನೆಗೆ ಯಂಗ್ ಜೂನಿಯರ್ ರೆಬೆಲ್ ಸ್ಟಾರ್ ಬರಲಿ ಎಂದು ವಿಶ್ ಮಾಡುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ್ಪ ಅವರುಗಳು ಕಳೆದ ವರ್ಷ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಅವಿವಾ ಬಿದಪ್ಪ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಮಗಳಾಗಿದ್ದು, ಸ್ವತಃ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್ನಲ್ಲಿಯೂ…
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಗೆ ದಿನದಿಂದ ದಿನಕ್ಕೆ ಬೆನ್ನು ನೋವಿನ ಸಮಸ್ಯೆ ಜಾಸ್ತಿಯಾಗುತ್ತಿದೆ. ಈ ಹಿಂದೆ ಹಲವು ಬಾರಿ ಬೆಡ್ ಹಾಗೂ ದಿಬ್ಬಿಂಗಾಗಿ ದರ್ಶನ್ ಮನವಿ ಮಾಡಿದ್ದರು. ಆದ್ರೆ ನ್ಯಾಯಾಲಯ ಅದಕ್ಕೆ ಸಮ್ಮತಿ ನೀಡಿರಲಿಲ್ಲ. ಇದೀಗ ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್ ಹಾಗೂ ದಿಂಬನ್ನು ಒದಗಿಸಲಾಗಿದೆ. ಮಂಗಳವಾರ ದರ್ಶನ್ ಮೆಡಿಕಲ್ ರಿಪೋರ್ಟ್ ಬಂದ ಬಳಿಕ ಜೈಲಾಧಿಕಾರಿ ಈ ಕುರಿತು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ಈ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಬುಧವಾರ ದರ್ಶನ್‌ಗೆ ಬೆಡ್ ಮತ್ತು ದಿಂಬನ್ನು ನೀಡಲಾಗಿದೆ. ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಬೆಡ್ ಮತ್ತು ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಇಂದು ಅಂಬುಲೆನ್ಸ್ ಮೂಲಕ ಬೆಡ್ ಮತ್ತು ದಿಂಬನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ಜೈಲು ಸಿಬ್ಬಂದಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ತಪಾಸಣೆ ಮಾಡಿ ಹೈ ಸೆಕ್ಯೂರಿಟಿ ಸೆಲ್ ಒಳಗೆ ಬಿಟ್ಟಿದ್ದಾರೆ. ವೈದ್ಯರ ಮೆಡಿಕಲ್ ರಿಪೋರ್ಟ್…