Author: Prajatv Kannada

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ತಮ್ಮ ಹೇಳಿಕೆಗಳ ಮೂಲಕವೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ವರ್ಮಾ ಇದೀಗ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿಚಾರದಲ್ಲಿ ಮೂಗು ತೂರಿಸಿದ್ದಾರೆ. ಇದುವರೆಗೂ ಸಿನಿಮಾಗಳಲ್ಲಿ ಮಾತ್ರವೇ ಅಂಡರ್ ವರ್ಲ್ಡ್ ಕಥೆಗಳನ್ನು ಹೇಳುತ್ತಿದ್ದ ವರ್ಮಾ ಇದೀಗ ರಿಯಲ್ ಅಂಡರ್ ವರ್ಲ್ಡ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದಾರೆ. ಇದರಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಆರ್ ಜಿ ವಿ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಆದರೆ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಆರ್​ಜಿವಿ ಬಾಯಿಗೆ ಬಂದಂತೆ ‘ಎಕ್ಸ್​’ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಬಾ ಸಿದ್ಧಿಕಿ ಅವರ ಹತ್ಯೆ ನಡೆಯಿತು. ಸಲ್ಮಾನ್​ ಖಾನ್​ ಜೊತೆ ಬಾಬಾ ಸಿದ್ಧಿಕಿ ಅವರಿಗೆ ಆಪ್ತ ಒಡನಾಟ ಇತ್ತು. ಆ ಕಾರಣದಿಂದಲೇ ಬಾಬಾ ಸಿದ್ಧಿಕಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್ ಕಡೆಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್​ಗೆ ಯಾರೆಲ್ಲ ಸಹಾಯ ಮಾಡುತ್ತಾರೋ ಅವರನ್ನು ಕೂಡ ಕೊಲ್ಲುವುದಾಗಿ…

Read More

ರೆಬೆಲ್ ಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಂಬರೀಶ್ ಹಾಗೂ ಸುಮಲತಾರ ಮುದ್ದಿನ ಮಗ ಅಭಿಷೇಕ್ ಅಂಬರೀಶ್ ಸದ್ಯದಲ್ಲೇ ತಂದೆಯಾಗುತ್ತಿದ್ದಾರೆ. ಅವಿವಾ ತುಂಬು ಗರ್ಭಿಣಿಯಾಗಿದ್ದು ಪುಟ್ಟ ಕಂದನ ಆಗಮನಕ್ಕೆ ಇಡೀ ಮನೆ ಎದುರು ನೋಡುತ್ತಿದೆ. ಈ ಮಧ್ಯೆ ಅಭಿಷೇಕ್ ಪತ್ನಿ ಅವಿವಾ ಮುದ್ದಾದ ಬೇಬಿ ಬಂಪ್ ಫೋಟೋವನ್ನು ಹಂಚಿಕೊಂಡಿದ್ದಾರೆ.  ಕಳೆದ ಕೆಲ ದಿನಗಳ ಹಿಂದಷ್ಟೇ ಸೊಸೆಗೆ ಸುಮಲತಾ ಅಂಬರೀಶ್ ಸೀಮಂತ ಮಾಡಿದ್ದರು.ಮನೆಯಲ್ಲೇ ನಡೆದ ಸೀಮಂತಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಇದೀಗ ತುಂಬು ಗರ್ಭಿಣಿಯಾಗಿರುವ ಅವಿವಾ ಪಿಂಕ್ ಬಣ್ಣದ ಸೀರೆಯುಟ್ಟು ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಮನೆಗೆ ಯಂಗ್ ಜೂನಿಯರ್ ರೆಬೆಲ್ ಸ್ಟಾರ್ ಬರಲಿ ಎಂದು ವಿಶ್ ಮಾಡುತ್ತಿದ್ದಾರೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದಪ್ಪ ಅವರುಗಳು ಕಳೆದ ವರ್ಷ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.  ಅವಿವಾ ಬಿದಪ್ಪ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದಪ್ಪ ಅವರ ಮಗಳಾಗಿದ್ದು, ಸ್ವತಃ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಜೊತೆಗೆ ಮಾಡೆಲಿಂಗ್​ನಲ್ಲಿಯೂ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಗೆ ದಿನದಿಂದ ದಿನಕ್ಕೆ ಬೆನ್ನು ನೋವಿನ ಸಮಸ್ಯೆ ಜಾಸ್ತಿಯಾಗುತ್ತಿದೆ. ಈ ಹಿಂದೆ ಹಲವು ಬಾರಿ ಬೆಡ್ ಹಾಗೂ ದಿಬ್ಬಿಂಗಾಗಿ ದರ್ಶನ್ ಮನವಿ ಮಾಡಿದ್ದರು. ಆದ್ರೆ ನ್ಯಾಯಾಲಯ ಅದಕ್ಕೆ ಸಮ್ಮತಿ ನೀಡಿರಲಿಲ್ಲ. ಇದೀಗ ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಸ್ಪತ್ರೆಯಿಂದ ಮೆಡಿಕಲ್ ಬೆಡ್ ಹಾಗೂ ದಿಂಬನ್ನು ಒದಗಿಸಲಾಗಿದೆ. ಮಂಗಳವಾರ ದರ್ಶನ್ ಮೆಡಿಕಲ್ ರಿಪೋರ್ಟ್ ಬಂದ ಬಳಿಕ ಜೈಲಾಧಿಕಾರಿ ಈ ಕುರಿತು ವೈದ್ಯಾಧಿಕಾರಿಗಳಿಗೆ ತಿಳಿಸಿದ್ದರು. ಈ ಹಿನ್ನೆಲೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಬುಧವಾರ ದರ್ಶನ್‌ಗೆ ಬೆಡ್ ಮತ್ತು ದಿಂಬನ್ನು ನೀಡಲಾಗಿದೆ. ವಿಮ್ಸ್ ನ್ಯೂರೋ ಸರ್ಜನ್ ಡಾ. ವಿಶ್ವನಾಥ್ ಬೆಡ್ ಮತ್ತು ದಿಂಬು ನೀಡುವಂತೆ ವರದಿಯಲ್ಲಿ ಉಲ್ಲೇಖಿಸಿದ್ದರು. ಹೀಗಾಗಿ ಇಂದು ಅಂಬುಲೆನ್ಸ್ ಮೂಲಕ ಬೆಡ್ ಮತ್ತು ದಿಂಬನ್ನು ಬಳ್ಳಾರಿ ಜೈಲಿಗೆ ರವಾನಿಸಲಾಗಿದೆ. ಜೈಲು ಸಿಬ್ಬಂದಿ ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ತಪಾಸಣೆ ಮಾಡಿ ಹೈ ಸೆಕ್ಯೂರಿಟಿ ಸೆಲ್ ಒಳಗೆ ಬಿಟ್ಟಿದ್ದಾರೆ. ವೈದ್ಯರ ಮೆಡಿಕಲ್ ರಿಪೋರ್ಟ್…

Read More

ತನ್ನ ಮಾಜಿ ಪತಿಯನ್ನು ಏಕಾಂತ ಸೆರೆಮನೆಯಲ್ಲಿ ಇರಿಸಲಾಗಿದ್ದು, ಅಧಿಕಾರಿಗಳು ಜೈಲಿನ ಸೆಲ್‌ನಲ್ಲಿ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದ್ದಾರೆ ಮತ್ತು ಪುತ್ರರಿಗೆ ವಾರಕ್ಕೊಮ್ಮೆ ಕರೆ ಮಾಡಲೂ ಅನುಮತಿಸಲಾಗುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಶೆಹಬಾಜ್ ಷರೀಫ್ ನೇತೃತ್ವದ ಸರಕಾರದ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮ್ರಾನ್ ಖಾನ್ ಪತ್ನಿ ಮಾಡಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಶೃಂಗಸಭೆಯ ನಡುವೆಯೇ ಗೋಲ್ಡ್ ಸ್ಮಿತ್ ಅವರು ಆರೋಪಗಳು ಕೇಳಿಬಂದಿವೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸೇರಿದಂತೆ ಸದಸ್ಯ ರಾಷ್ಟ್ರಗಳ ಉನ್ನತ ನಾಯಕರು SCO ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ.

Read More

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಖ್ಯಾತಿ ಘಳಿಸಿದ ನಟಿ ಸಂಯುಕ್ತಾ ಹೆಗ್ಡೆ ಆಗಾಗ ಟ್ರಿಪ್ ಗೆ ಹೋಗುತ್ತಿರುತ್ತಾರೆ. ಸದ್ಯ ಬಾಲಿಗೆ ಪ್ರವಾಸ ಹೋಗಿರುವ ನಟಿ ಅಲ್ಲಿ ಕಳೆದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಆರ್ಯ ಪಾತ್ರಕ್ಕೆ ಜೀವ ತುಂಬಿದ ಸಂಯುಕ್ತಾ ಹೆಗ್ಡೆ ತಮ್ಮ ನೇರವಾದ ಮಾತು ಹಾಗೂ ಬೋಲ್ಡ್ ಜೀವನ ಶೈಲಿಯಿಂದಲೇ ಸಖತ್ ಖ್ಯಾತಿ ಘಳಿಸಿದ್ದಾರೆ. ಆಗಾಗ ಸಿನಿಮಾಗಳಿಗೆ ಬಣ್ಣ ಹಚ್ಚುವ ನಟಿ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ದೇಶ ವಿದೇಶಗಳಿಗೆ ಟ್ರಾವೆಲ್ ಮಾಡುವ ಸಂಯುಕ್ತ ಹೆಗ್ಡೆ ಮಸ್ತ್ ಮಸ್ತ್ ಫೋಟೊಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ದುಬೈ, ಅಬುಧಾಬಿ, ಮುಂಬೈ, ಚೆನ್ನೈ ಅಂತ ಟ್ರಾವೆಲ್ ಮಾಡ್ತಾನೆ ಇರೋ ಸಂಯುಕ್ತಾ ಈ ಬಾರಿ ಬಾಲಿಗೆ ತೆರಳಿದ್ದಾರೆ. ಆರೆಂಜ್ ಮಿನಿ ಸ್ಕರ್ಟ್ ಮತ್ತು ಪಿಂಕ್ ಎಂಡ್ ವೈಟ್ ಕ್ರಾಪ್ ಟಾಪ್ ಧರಿಸಿರೋ ಸಂಯುಕ್ತಾ ಬಾಲಿಯ ಬೀಚ್ ನಲ್ಲಿ ಎಂಜಾಯ್ ಮಾಡ್ತಿರೋ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದರ…

Read More

ಪ್ರೇಗ್‌ನಲ್ಲಿನಡೆದ ಸಂಗೀತ ಕಚೇರಿಯಲ್ಲಿ ಖ್ಯಾತ ಗಾಯಕ ಹಾಗೂ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಾಸ್ ಮೇಲೆ ಪ್ರೇಕ್ಷಕರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬ ಲೇಸರ್ ಲೈಟ್ ಹಾಯಿಸಿದ್ದಾನೆ. ಇದರಿಂದ ಗಾಭರಿಗೊಂಡ ನಿಕ್ ಜೋನಾಸ್ ಭಯದಿಂದ ವೇದಿಕೆಯಿಂದ ನಿರ್ಗಮಿಸಿದ್ದಾರೆ. ಲೇಸರ್ ಗುರಿಯಾಗಿಸಿಕೊಂಡ ತತ್ ಕ್ಷಣವೇ ತಮ್ಮ ಭದ್ರತಾ ತಂಡವನ್ನು ಎಚ್ಚರಿಸಿದರು. ಸಂಗೀತ ಕಚೇರಿಯನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ನಿಕ್ ಜೋನಾಸ್ ಸಹೋದರರಾದ ಕೆವಿನ್ ಮತ್ತು ಜೋ ಅವರೂ ಬಳಿಕ ವೇದಿಕೆಯಲ್ಲಿ ಹಾಜರಿದ್ದರು. ಭದ್ರತಾ ಸಿಬಂದಿ ಕಾರ್ಯಪ್ರವೃತ್ತರಾಗಿ ನಿಕ್‌ ಅವರತ್ತ ಲೇಸರ್ ಗುರಿಪಡಿಸಿದ ವ್ಯಕ್ತಿಯನ್ನು ಗುರುತಿಸಿ ಸ್ಥಳದಿಂದ ಹೊರ ಹಾಕಿದ್ದಾರೆ. ನಿಕ್ ಮತ್ತು ಉಳಿದವರೆಲ್ಲರೂ ಸುರಕ್ಷಿತವಾಗಿದ್ದಾರೆ.

Read More

ಮಂಡ್ಯ: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಚಾಲನೆ ನೀಡಿದರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕೆ.ಹಳ್ಳಿಯ ಬೆಂಗಳೂರು ಜಲಮಂಡಳಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ, ಡಿಸಿಎಂ ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಯೋಜನೆಯನ್ನು ಲೋಕಾರ್ಪಣೆಗೊಳಿಸುವುದಕ್ಕೂ ಮುನ್ನ ಚಂಡಿಕಾ ಹೋಮ, ಗಣಪತಿ ಪೂಜೆ, ಯಜಮಾನ ಸಂಕಲ್ಪ, ಮಹಾ ಸುದರ್ಶನ ಚಕ್ರ ಪೂಜೆ, ಸುದರ್ಶನ ಹೋಮ, ಮಹಾಚಂಡಿ ಕಳಾಸರಾಧನೆ, ಮಹಮಂಗಳಾರತಿ ನೆರವೇರಿಸಲಾಯಿತು. ಮಹಾಸಂಕಲ್ಪ, ಚಂಡಿ ನವ ಬ್ರಹ್ಮ ಪೂಜೆ, ದುರ್ಗಾ ಸಪ್ತ ಸತಿ ನಾರಾಯಾಣ ಸೇರಿದಂತೆ 13 ಅಧ್ಯಾಯ, ಗಂಗಾ, ಯಮುನಾ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಮೊದಲಾದ ಸಪ್ತ ನದಿಗಳ ಕಳಸ ಸ್ಥಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಾ ಪೂರ್ಣಾವತಿ, ಮಂಗಳ ದ್ರವ್ಯ ಸಮರ್ಪಣೆ ಮಹಾ ಮಂಗಳಾರತಿ ಸೇರಿ ಹೋಮ-ಹವನ ನೆರವೇರಿಸಲಾಯತು. ಶೈವಾಗಮ ವಿಶಾರಾಧ ಜ್ಞಾನ ಸ್ಕಂದ ದೀಕ್ಷಿತರ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ನಡೆಯಿತು. ಡಿಸಿಎಂ ಡಿ.ಕೆ ಶಿವಕುಮಾರ್‌ ಪೂಜಾ…

Read More

ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಎಸ್‌ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಈ ವೇಳೆ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಜೈಶಂಕರ್.  ಗಡಿಯಾಚೆಗಿನ ಚಟುವಟಿಕೆಗಳು ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕತಾವಾದ ದಿಂದ ಕೂಡಿದ್ದರೆ ವ್ಯಾಪಾರವನ್ನು ಉತ್ತೇಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ಚಟುವಟಿಕೆಗಳು ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ಕೂಡಿದ್ದರೆ, ಅದು ದ್ವಿಪಕ್ಷೀಯ ವ್ಯಾಪಾರ, ಸಂಬಂಧಗಳಿಗೆ ಸಹಕಾರಿಯಲ್ಲ ಎಂದು ವಿದೇಶಾಂಗ ಸಚಿವ ಎಸ್​ ಜೈಶಂಕರ್ ತಿಳಿಸಿದ್ದಾರೆ. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಸ್​ಸಿಒ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಬೆಳವಣಿಗೆಗೆ ಶಾಂತಿ ಮತ್ತು ಸ್ಥಿರತೆಯ ಅಗತ್ಯವಿದೆ ಎಂಬುದು ಮೂಲತತ್ವವಾಗಿದೆ ಎಂದರು. ಏಕಪಕ್ಷೀಯ ಅಜೆಂಡಾಗಳ ಮೂಲಕ ಸಂಬಂಧಗಳು ಪ್ರಗತಿ ಹೊಂದಲು ಸಾಧ್ಯವಿಲ್ಲ, ಅಭಿವೃದ್ಧಿ ಮತ್ತು ಪ್ರಗತಿಗೆ ಶಾಂತಿ ಮತ್ತು ಸ್ಥಿರತೆ ಅಗತ್ಯ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ ಅವರು, ಈ ಕೆಲಸಗಳು ಆಗದಿದ್ದರೆ ಅಭಿವೃದ್ಧಿಯ ಮಾತೇ ಇಲ್ಲ ಎಂದು ಹೇಳಿದರು.…

Read More

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡದಾಗಿ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಇದು ಕೇವಲ ಮಾತಿನ ಫೈಟ್ ಆಗದೆ ಇಬ್ಬರು ಸ್ಪರ್ಧಿಗಳು ಕೈ ಕೈ ಮಿಲಾಯಿಸಿಕೊಂಡಿದ್ದರು. ಈ ಕಾರಣದಿಂದ ಬಿಗ್ ಬಾಸ್ ಸ್ಪರ್ಧಿ ರಂಜಿತ್ ಹಾಗೂ ಜಗದೀಶ್ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ‘ಬಿಗ್ ಬಾಸ್​’ ಮನೆಯಲ್ಲಿ ದಿನದಿಂದ ದಿನಕ್ಕೆ ವಾತಾವರಣ ಹದಗೆಡುತ್ತಿದೆ. ಅಕ್ಟೋಬರ್ 17ರ ಎಪಿಸೋಡ್​ನಲ್ಲಿ ಎಲ್ಲರೂ ಜಗದೀಶ್ ವಿರುದ್ಧ ಒಂದಾಗಿದ್ದರು. ಇದರಿಂದ ಸಿಡುಕುತ್ತಿದ್ದ ಜಗದೀಶ್ ಬಿಗ್ ಬಾಸ್ ವಿರುದ್ಧವೇ ಅವಾಚ್ಯ ಶಬ್ದ ಬಳಕೆ ಮಾಡುತ್ತಿದ್ದರು. ಇನ್ನು, ರಂಜಿತ್ ಅವರು ‘ಹೀಗೆ ಮುಂದುವರಿದರೆ ಜಗದೀಶ್ ಅವರ ಎದಮೇಲೆ ಕಾಲಿಟ್ಟು ಹೋಗೋತ್ತೇನೆ’ ಎಂದು ಎಚ್ಚರಿಕೆ ನೀಡಿದ್ದರು. ಕೆಲವು ವರದಿಗಳ ಪ್ರಕಾರ ದೊಡ್ಮನೆಯಲ್ಲಿ ಜಗದೀಶ್ ಹಾಗೂ ರಂಜಿತ್ ಮಧ್ಯೆ ಫೈಟ್ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ನಿಯಮಗಳ ಪ್ರಕಾರ ಮನೆಯಲ್ಲಿ ಫೈಟ್ ಆದರೆ ಅದರ ಭಾಗಿದಾರರನ್ನು…

Read More

ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಹುಲಿ ಹೆಜ್ಜೆ‌ಕಂಡು ರೈತರು ಭಾರೀ ಅತಂಕಕ್ಕೆ ಒಳಗಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ಸುತ್ತಾಮುತ್ತಾ ಹುಲಿ ಪ್ರತ್ಯಕ್ಷ ಘರ್ಜನೆ ರೈತರಲ್ಲಿ ಆತಂಕ ಸೃಷ್ಟಿಸಿದೆ. ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ನಂಜೇದೇವನಪುರ, ವೀರನಪುರ ಹಾಗೂ ಯಡಬೆಟ್ಟ ಸುತ್ತಾಮುತ್ತಾ ಹುಲಿ‌ಸಂಚರಿಸಿ ರೈತರ ಸಾಕು ಪ್ರಾಣಿಗಳ‌ ಮೇಲೆ ದಾಳಿ ನಡೆಸಿ ಆತಂಕ‌ ಸೃಷ್ಟಿಸಿದೆ. ಆ ಭಾಗದಲ್ಲಿ ಕಳೆದ ಮೂರು ತಿಂಗಳಿಂದ ಜಾನುವಾರುಗಳ‌ನ್ನು‌ ಕೊಂದು ಅಟ್ಟಹಾಸ ಮೆರೆದಿರುವ ವ್ಯಾಘ್ರವು ಕಲ್ಲು ಕ್ವಾರಿ ಜಮೀನುಗಳ‌ ಪಾಳು ಬಿದ್ದ ಗುತ್ತಿಗಳಲ್ಲಿ ಆಶ್ರಯಿಸಿ ಜಾನುವಾರುಗಳ‌ಮೇಲೆ‌ದಾಳಿ ನಡೆಸಿದೆ. ಹಲ ದಿನಗಳಿಂದ ಜಾನುವಾರುಗಳ‌ ಮೇಲೆ ಹುಲಿ ನಡೆಸಿ ಕೊಂದು ಆತಂಕ ಸೃಷ್ಟಿಸಿತ್ತು. ಆಗ ದಾಳಿ‌ನಡೆಸಿರುವುದು ಹುಲಿಯಲ್ಲ‌ ಎಂದೆ ಅರಣ್ಯ ಇಲಾಖೆ ಸಬೂಬು ಹೇಳುತ್ತಿತ್ತು. ನಂತರ ಯಡಬೆಟ್ಟ ಸಮೀಪದ ಎಣ್ಣೆಹೊಳೆ ಬಳಿ ಹಾಡುಹಗಲೆ ಹುಲಿ ಅಡ್ಡಾಡಿ ಹಸುವೊಂದನ್ನು ಕೊಂದು ಹಾಕಿತ್ತು. ಆಗ ದನಗಾಯಿಗಳು ಹುಲಿ ಸಂಚರಿಸುವ ವಿಡಿಯೋ ಮಾಡಿ ಸಾಮಾಜಿಕ‌ ಜಾಲ ತಾಣದಲ್ಲಿ ಹರಿ ಬಿಟ್ಟಿದ್ರು. ಇದೀಗ ಮಳೆ‌ಹೆಚ್ಚಾಗಿರುವ…

Read More