ಟಾಲಿವುಡ್ ಬ್ಯೂಟಿ ನಟಿ ಸಮಂತಾ ಸದ್ಯ ಸಿಟಾಡೆಲ್: ಹನಿ ಬನಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಮೋಷನ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿರುವ ಸಮಂತಾ ಹಾಗೂ ವರಣ್ ಧವನ್ ಸದ್ಯ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಸಮಂತಾ ಹಾಗೂ ವರುಣ್ ಧವನ್ ನಟನೆಯ ‘ಸಿಟಾಡೆಲ್: ಹನಿ ಬನಿ’ ವೆಬ್ ಸರಣಿ ಇಂದು ನವೆಂಬರ್ 07 ರಂದು ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಇಬ್ಬರು ಸ್ಟಾರ್ ನಟರಾದ ಸಮಂತಾ ಮತ್ತು ವರುಣ್ ಧವನ್ ಒಟ್ಟಿಗೆ ನಟಿಸಿರುವ ಈ ವೆಬ್ ಸರಣಿಯ ಮೇಲೆ ಭಾರಿ ನಿರೀಕ್ಷೆಗಳಿವೆ. ಪ್ರಚಾರವೂ ಸಹ ಜೋರಾಗಿಯೇ ನಡೆದಿದೆ. ಏ ಮಾಯ ಚೇಸಾವೆ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಸಮಂತಾ, ಸ್ಟಾರ್ ಹೀರೋಯಿನ್ ಆಗಿ ಬೆಳೆದರು. ಸೌತ್ನಲ್ಲಿ ಟಾಪ್ ನಟಿಯಾಗಿ ಮಿಂಚಿದ ಸಮಂತಾ ಸದ್ಯ ಬಾಲಿವುಡ್ನಲ್ಲಿ ನಿಧಾನವಾಗಿ ತಮ್ಮ ಅದೃಷ್ಟ ಪರೀಕ್ಷೆ ನಡೆಸುತ್ತಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದಿದ್ದಾರೆ. ಆದರೆ ಸದ್ಯ ತೆಲುಗು ಸಿನಿಮಾಗಳಿಂದ…
Author: Prajatv Kannada
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹೊರ ಬರಲು ಹವಣಿಸುತ್ತಿದ್ದಾರೆ. ಈಗಾಗಲೇ ನಟ ದರ್ಶನ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದ ಇತರೆ ನಾಲ್ಕು ಆರೋಪಿಗಳಿಗೆ ನಿಯಮಿತ ಜಾಮೀನು ಈಗಾಗಲೇ ಮಂಜೂರಾಗಿದೆ. ಪ್ರಕರಣದಲ್ಲಿ ಮೊದಲ ಆರೋಪಿ ಆಗಿರುವ ಪವಿತ್ರಾ ಗೌಡ ಸಹ ಜಾಮೀನಿಗೆ ಯತ್ನಿಸುತ್ತಲೇ ಇದ್ದಾರೆ. ಈ ಹಿಂದೆ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ವಜಾಗೊಂಡಿತ್ತು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದ್ರೆ ಇದೀಗ ಹೈಕೋರ್ಟ್ ನಲ್ಲೂ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಇಂದು (ನವೆಂಬರ್ 07) ಪವಿತ್ರಾ ಗೌಡ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆದಿದ್ದು, ಮುಂದಿನ ವಿಚಾರಣೆಯನ್ನು ನವೆಂಬರ್ 21ಕ್ಕೆ ಮುಂದೂಡಿಕೆ ಮಾಡಲಾಗಿದೆ. ಪ್ರಕರಣದ ಎರಡನೇ ಆರೋಪಿ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರಾಗಿರುವ ಕಾರಣ ಅದೇ ಕಾರಣವನ್ನು ಇಟ್ಟುಕೊಂಡು ಪವಿತ್ರಾ ಸಹ ಜಾಮೀನಿಗೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇಂದು ಪವಿತ್ರಾಗೆ ನಿರಾಶೆಯಾಗಿದೆ. ಅವರ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಲಾಗಿದೆ. ಪವಿತ್ರಾ…
ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬಳು ಸಾಮಾಜಿಕ ಜಾಲಾ ತಾಣದ ಮೂಲಕ ತನ್ನ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದಿದೆ. ಮಹಿಳೆ ತನ್ನ ಮಗುವಿನ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಮಾರಾಟಕ್ಕೆ ಮುಂದಾಗಿದ್ದು, ವಿಷಯ ತಿಳಿದ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆ ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ಮಗುವಿನ ಫೋಟೋವನ್ನು ಫೇಸ್‌ಬುಕ್ ನಲ್ಲಿ ಮಗು ದತ್ತು ಪಡೆಯಲು ಬಯಸುವ ದಂಪತಿಗಳ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಪ್ರಾರಂಭದಲ್ಲಿ ಯಾವುದೇ ಹಣಕ್ಕೆ ಬೇಡಿಕೆ ಇಡದ ಮಹಿಳೆ ಬಳಿಕ ಸಾಕಷ್ಟು ದಂಪತಿಗಳು ದತ್ತು ಪಡೆಯಲು ಮುಂದೆ ಬಂದಾಗ ಹಣದ ಬೇಡಿಕೆ ಇಟ್ಟಿದ್ದಾಳೆ. ಹಣಕಾಸಿನ ತೊಂದರೆಗಳಿಂದ ನಾನು ನನ್ನ ಮಗುವನ್ನು ಮಾರಾಟ ಮಾಡಲು ಮುಂದಾಗಿರುವುದಾಗಿ ಜುನಿಪರ್ ಹೇಳಿಕೊಂಡಿದ್ದಾಳೆ. 150 ಡಾಲರ್ ಅಂದರೆ ಸುಮಾರು 12 ಸಾವಿರ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾಳೆ. ಘಟನೆಯ ಬಗ್ಗೆ ತಿಳಿದ ಪೊಲೀಸರು ಮಗುವನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯ ನಂತರ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
ಬ್ರಾಂಪ್ಟನ್ ನ ಹಿಂದೂ ಸಭಾ ಮಂದಿರದಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅರ್ಚಕ ರಾಜಿಂದರ್ ಪರ್ಸಾದ್ ಅವರನ್ನು ಹಿಂದೂ ಸಭಾ ದೇವಾಲಯದ ಆಡಳಿತ ಮಂಡಳಿ ಅಮಾನತುಗೊಳಿಸಿದೆ. ದೇವಾಲಯದ ಆವರಣದಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ಖಾಲಿಸ್ತಾನಿ ಪರ ಪ್ರತಿಭಟನಾಕಾರರು ಮತ್ತು ಜನರ ನಡುವಿನ ಘರ್ಷಣೆಯ ನಂತರ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಾನ್ಸುಲರ್ ಶಿಬಿರಗಳನ್ನು ರದ್ದುಗೊಳಿಸಲಾಗಿದೆ. ಭಾರತೀಯ ಪಿಂಚಣಿದಾರರಿಗೆ ಪ್ರಮಾಣಪತ್ರಗಳನ್ನು ನೀಡಲು ಯೋಜಿಸಲಾಗಿದ್ದ ಕಾನ್ಸುಲರ್ ಶಿಬಿರಗಳನ್ನು ಭದ್ರತಾ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ. ಖಲಿಸ್ತಾನಿ ಉಗ್ರರ ಇತ್ತೀಚಿನ ಹಿಂಸಾಚಾರದ ನಂತರ ಸೂಕ್ತ ರಕ್ಷಣೆ ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಸಮುದಾಯ ಶಿಬಿರ ಸಂಘಟಕರಿಗೆ ಕನಿಷ್ಠ ಭದ್ರತಾ ರಕ್ಷಣೆಯನ್ನು ಒದಗಿಸಲು ಭದ್ರತಾ ಏಜೆನ್ಸಿಗಳಿಗೆ ಸಾಧ್ಯವಾಗಲಿಲ್ಲ, ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಕಾನ್ಸುಲೇಟ್ ಕೆಲವು ನಿಗದಿತ ಶಿಬಿರಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಭಾರತೀಯ ದೂತಾವಾಸ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ನಂತರ ಅರ್ಚಕರನ್ನು ಅಮಾನತುಗೊಳಿಸಲು ಆದೇಶವನ್ನು ಹೊರಡಿಸಲಾಗಿದೆ. ನವೆಂಬರ್ 3, 2024 ರಂದು ಹಿಂದೂ ಸಭಾದ ಆವರಣದಲ್ಲಿ ಅನುಮತಿಯಿಲ್ಲದೆ ಪ್ರತಿಭಟನಾಕಾರರೊಂದಿಗೆ…
ದಕ್ಷಿಣ ಭಾರತದ ಖ್ಯಾತ ನಟಿ, ಬಿಜೆಪಿ ವಕ್ತಾರೆ ಕಸ್ತೂರಿ ಶಂಕರ್ ವಿವಾದಕ್ಕೆ ಸಿಲುಕಿಕೊಂಡಿದ್ದಾಋಎ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತೆಲುಗು ಜನ, ತೆಲುಗು ಚಿತ್ರರಂಗ ಹಾಗೂ ಅಬ್ರಾಹ್ಮರ ವಿರುದ್ಧ ನಟಿ ನೀಡಿರುವ ಹೇಳಿಕೆಗಳು ತೀವ್ರ ವಿವಾದ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಸರ್ಕಾರಿ ನೌಕರರು, ಹಾಗೂ ಡಿಎಂಕೆ ಸದಸ್ಯರು ಕಸ್ತೂರಿ ಶಂಕರ್ ವಿರುದ್ಧ ಪ್ರತಿಭಟನೆ ನಡೆಸಿದ್ದು, ಕಸ್ತೂರಿ ಅವರ ವಿರುದ್ಧ ದೂರು ದಾಖಲಾಗಿದೆ. ಹಿಂದೂ ಮಕ್ಕಳ್ ಕಚ್ಚಿ ಸಂಘಟನೆ ಚೆನ್ನೈನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗಿಯಾಗಿದ್ದ ಕಸ್ತೂರಿ ಶಂಕರ್, ತಮಿಳುನಾಡಿನಲ್ಲಿ ಬ್ರಾಹ್ಮಣರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ವೀರಾವೇಶದಿಂದ ಮಾತನಾಡಿದ್ದರು. ವೇದಿಕೆ ಭಾಷಣದ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿಯೂ ಭಾಗಿದ್ದ ಕಸ್ತೂರಿ ಶಂಕರ್, ಈ ಸಮಯದಲ್ಲಿ ತಮಿಳುನಾಡಿನಲ್ಲಿರುವ ತೆಲುಗು ಜನ, ಅಬ್ರಾಹ್ಮಣ ಸರ್ಕಾರಿ ನೌಕರರು, ತೆಲುಗು ಚಿತ್ರರಂಗ, ಡಿಎಂಕೆ ರಾಜಕೀಯ ಮುಖಂಡರು, ಪೆರಿಯಾರ್, ವರ್ಣ ಪದ್ಧತಿ, ದಲಿತ ಹೋರಾಟ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದರು. ‘ತಮಿಳಿನ ರಾಜರ ವೇಶ್ಯೆ ಹೆಣ್ಣುಗಳ ಸೇವೆ ಮಾಡಲು ಬಂದ ತೆಲುಗರು ಇಲ್ಲಿಯೇ…
ಬಾಲಿವುಡ್ ನಟ ಸಲ್ಮಾನ್ ಖಾನ್ ಸಾಕಷ್ಟು ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆ ನೀಡಲಾಗಿದೆ. ಈ ಬೆನ್ನಲ್ಲೇ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟ ಶಾರುಖ್ ಖಾನ್ ಗೆ ಕೊಲೆ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಶಾರುಖ್ ಖಾನ್ ತಂಡ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಶಾರುಖ್‌ಗೆ ಬೆದರಿಕೆ ಬಂದ ಫೋನ್ ಫೈಜಾನ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಆತನ ಕೊನೆಯ ಸ್ಥಳ ರಾಯ್‌ಪುರದಲ್ಲಿ ಪತ್ತೆಯಾಗಿದೆ. ಮಹಾರಾಷ್ಟ್ರ ಪೊಲೀಸ್ ತಂಡ ರಾಯಪುರ ತಲುಪಿದೆ. ಮಹಾರಾಷ್ಟ್ರ ಪೊಲೀಸರು ಫೈಜಾನ್ ಖಾನ್ ಎಂಬ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಶಾರುಖ್ ಖಾನ್ ಗೆ ಮೊಬೈಲ್ ನಿಂದ ಬೆದರಿಕೆ ಕರೆ ಬಂದಿದ್ದು, 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಹಲವು ದಿನಗಳಿಂದ ಗ್ಯಾಂಗ್ಸ್ಟರ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಲ್ಮಾನ್ ಹೆಸರಿನಲ್ಲಿ ಒಂದರ ಹಿಂದೆ ಒಂದರಂತೆ ಬೆದರಿಕೆಗಳು ಬರುತ್ತಿವೆ. ನಟನ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಪೊಲೀಸರು…
ಹುಬ್ಬಳ್ಳಿ: ಸಂಸತ್ತಿನ ಜಂಟಿ ಸಂಸದೀಯ ಸಮಿತಿ ರಚನೆಯಾಗಿರುವುದು ವಕ್ಫ್ ತಿದ್ದುಪಡಿ ಮಸೂದೆ ಕುರಿತು. ಆದರೆ ಇವರು ವಿಜಯಪುರಕ್ಕೆ ಬರುತ್ತಿರುವುದು ಅನಧಿಕೃತ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿತಿ ರಚನೆ ಮಾಡುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ಆದರೆ ಜೆಪಿಸಿ ರಚಿಸಿರುವುದು ತಿದ್ದುಪಡಿ ಮಸೂದೆಗಾಗಿ ವಿನಃ ಇಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ಅಲ್ಲ. ಇದರಲ್ಲಿ ಯಾವುದೇ ಗೊಂದಲ ಇರಲಿಲ್ಲ. ರಾಜ್ಯದಲ್ಲಿ ಬಿಜೆಪಿ ನಾಯಕರು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಬೇಕಾದರೆ ಸಮಿತಿ ಮಾಡಲಿ ಎಂದರು. ಬಿಜೆಪಿಯವರಿಗೆ ಚುನಾವಣೆ ಮಾಡಲು ಯಾವುದೇ ವಿಚಾರಗಳಿಲ್ಲ. ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರೂ ಇವರು ಹೋರಾಟ ಮಾಡುತ್ತಿರುವುದು ಚುನಾವಣೆ ಹಾಗೂ ರಾಜಕೀಯಕ್ಕಾಗಿ. ಪ್ರಮೋದ್ ಮುತಾಲಿಕ್, ಬಿಜೆಪಿ ಎರಡು ಒಂದೇ. ಏಕ್ ದಿಲ್ ದೋ ಜಾನ್ ತರಹ. ಅನ್ನ ನೀಡುವ ರೈತರಿಗೆ ತೊಂದರೆ ಕೊಟ್ಟಿಲ್ಲ, ಕೊಡುವುದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದಾರೆ ಅಂತ ಗೊಂದಲ ಸೃಷ್ಟಿ ಮಾಡಿದರು. ಹೀಗಾಗಿ ವಾಪಸ್ಸು ತೆಗೆದುಕೊಂಡಿದ್ದೇವೆ ಎಂದರು
ಹುಬ್ಬಳ್ಳಿ: ವಕ್ಫ್ ಬೋರ್ಡ್ ಹೆಸರಿನಲ್ಲಿ ಸಚಿವ ಜಮೀರ್ ಅಹ್ಮದ್ ರೈತರು ಮತ್ತು ಜನಸಾಮಾನ್ಯರ ಆಸ್ತಿ ಕಬಳಿಸುವ ಮೂಲಕ ದೇಶದ್ರೋಹಿ ಕೆಲಸ ಮಾಡುತ್ತಿದ್ದು, ಅವರನ್ನು ಗಲ್ಲಿಗೇರಿಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು. https://youtu.be/9ttYSjyvbQ8?si=kUMvWiXO_8j8COhX ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ರಾಜ್ಯಾದ್ಯಂತ ವಕ್ಫ್ ಅದಾಲತ್ ನಡೆಸುತ್ತಿದ್ದು, ಇದು ಅತ್ಯಂತ ಗಂಭೀರವಾದ ವಿಷಯ. ಇವರಿಗೆ ಅಧಿಕಾರದ ಮದ ಏರಿದೆ. ತನ್ನ ಚಾಮರಾಜಪೇಟೆ ಕ್ಷೇತ್ರದಲ್ಲಿ 25 ಸಾವಿರಕ್ಕೂ ಅಧಿಕ ದೇಶದ್ರೋಹಿ ಬಾಂಗ್ಲಾ ಮುಸ್ಲಿಮರನ್ನು ಸಲಹುತ್ತಿದ್ದಾರೆ. ಈತನಿಂದಲೇ ರಾಜ್ಯದಲ್ಲಿ ಧಂಗೆ, ಗಲಭೆ ನಡೆಯುತ್ತಿವೆ. ಈ ಕಾರಣ ಈತನನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು. ಇಡೀ ದೇಶದಲ್ಲಿ ರೈತರ ಭೂಮಿಗಳು, ಮನೆ, ಮಠ, ಸರ್ಕಾರಿ ಆಸ್ಪತ್ರೆ, ಕಚೇರಿ, ರಸ್ತೆಗಳು ವಕ್ಫ್‌ಗೆ ಹೋಗುತ್ತಿವೆ. ಇದು ದೇಶಾದ್ಯಂತ ವೈರಸ್ ರೀತಿ ಹರಡುತ್ತಿದೆ. ಗೂಳಿಯಂತೆ ನುಗ್ಗುತ್ತಿರುವುದು ನೋಡಿದರೆ ದೇಶಕ್ಕೆ ಗಂಡಾಂತರ ಸೃಷ್ಟಿಯಾಗಿದೆ. ದೇಶವನ್ನು ಇಸ್ಲಾಂ ದೇಶ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿನ ಕೆಲ ಮುಸ್ಲಿಂ ಜಿಲ್ಲಾಧಿಕಾರಿ, ತಹಶಿಲ್ದಾರ, ನೋಂದಣಾಧಿಕಾರಿ,…
ಬೆಂಗಳೂರು: ಅಶೋಕ್ ಕೇಳೋದು ದೊಡ್ಡದಾ? ನಾವು ರಾಜೀನಾಮೆ ಕೊಡಿಸೋದು ದೊಡ್ಡದಾ? ಎಂದು ಆರ್.ಅಶೋಕ್ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಸಚಿವರ ರಾಜೀನಾಮೆಗೆ ವಿಪಕ್ಷ ನಾಯಕರ ಆರ್.ಅಶೋಕ್ ಒತ್ತಾಯ ವಿಚಾರವಾಗಿ ಪಾಪ ಅಶೋಕ್‌ಗೆ ರಾಜೀನಾಮೆ ಕೊಡಿಸೋಣ. ಅಶೋಕ್ ಕೇಳೋದು ದೊಡ್ಡದಾ? ನಾವು ರಾಜೀನಾಮೆ ಕೊಡಿಸೋದು ದೊಡ್ಡದಾ? ಕೊಡೋಣ ಎಂದು ತಿರುಗೇಟು ಕೊಟ್ಟಿದ್ದಾರೆಸಚಿವ ತಿಮ್ಮಾಪುರ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರು ಬೇಕಾದರೂ ರಾಜ್ಯಪಾಲರಿಗೆ ಪತ್ರ ಬರೆದು ತನಿಖೆ ಮಾಡಿ ಎಂದು ದೂರು ಕೊಡಬಹುದು. ಹಿಂದೆಯೂ ನೂರಾರು ದೂರುಗಳು ಬಂದಿತ್ತು. ಈಗ ಸ್ವಲ್ಪ ವಿಶೇಷವಾಗಿ ಹೊರಟಿದ್ದಾರೆ. ಇದೆಲ್ಲ ಬರೀ ರಾಜಕೀಯದ ಬಣ್ಣ ಅಷ್ಟೆ ಎಂದು ಕಿಡಿಕಾರಿದರು
ರಾಮನಗರ: ಮೊಬೈಲ್ ನೋಡುವ ವಿಚಾರಕ್ಕೆ ಜಗಳವಾಗಿ ಕೆರೆಗೆ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕನಕಪುರ ತಾಲೂಕಿನ ಕೂನೂರು ಗ್ರಾಮದಲ್ಲಿ ನಡೆದಿದೆ. ಕೂನೂರು ಗ್ರಾಮದ ನಿವಾಸಿ ಲಾವಣ್ಯ(17) ಮೃತ ಯುವತಿಯಾಗಿದ್ದು,] https://youtu.be/VBNoLEuqz9U?si=rnWfa4Vj-6Wc5lgR ಮೊಬೈಲ್ ನೋಡುವ ವಿಷಯವಾಗಿ ತನ್ನ ಸಹೋದರಿಯೊಂದಿಗೆ ಜಗಳ ಮಾಡಿಕೊಂಡಿದ್ದ ಯುವತಿ, ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ಬೇಸರದಿಂದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೂ ಕನಕಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.