Author: Prajatv Kannada

ಗದಗ: ತಂದೆಯೋರ್ವ ತನ್ನ ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗದಗ ಜಿಲ್ಲೆಯ ಕೊರ್ಲಹಳ್ಳಿ ಬಳಿ ನಡೆದಿದೆ. ಮುಂಡರಗಿ ತಾಲೂಕಿನ ಮಕ್ತುಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ ಮೊದಲು ಮೂವರು ಮಕ್ಕಳನ್ನು ನದಿಗೆ ಎಸೆದು ಬಳಿಕ ತಾನೂ ಸಹ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. https://youtu.be/VBNoLEuqz9U?si=ik3cQ47Jp_HGonVi ವೇದಾಂತ 3, ಪವನ 4, ಧನ್ಯಾ 6 ನದಿ ಪಾಲಾದ ಮಕ್ಕಳು. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ. ಇನ್ನು ನಾಲ್ವರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಹೊರ ತೆಗೆದಿದ್ದಾರೆ. ಕೌಟುಂಬಿಕ ಕಲಹ,ಸಾಲಭಾದೆಯಿಂದ ಬೇಸತ್ತು ಮಕ್ತುಂಪುರ ಗ್ರಾಮದ ಮಂಜುನಾಥ್ ತನ್ನ ಹೆಂಡತಿಯ ಅಣ್ಣನ ಮಗ ವೇದಾಂತ್ ಸೇರಿದಂತೆ ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಏನೇ ಇರಲಿ ಗಂಡ ಹೆಂಡಿರ ನಡುವೆ ಕೂಸು ಬಡವ ಎಂಬಂತೆ. ಏನೂ ಅರಿಯದ ಕಂದಮ್ಮಗಳನ್ನು ನದಿಗೆ ಎಸೆದ ಕಟುಕ ತಂದೆ ಕೃತ್ಯಕ್ಕೆ ತೀವ್ರ…

Read More

ಮಂಡ್ಯ: ಮಂಡ್ಯದ ಜಿಲ್ಲಾ ಭೂ ದಾಖಲೆ ನೌಕರರ ಸಂಘದ ಆವರಣದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿರುವ ಘಟನೆ ಆವರಣದಲ್ಲಿ ನಡೆದಿದೆ. https://youtu.be/V1L6z5yB-eY?si=sHPbTXbj8rdVTw-e ಖಚಿತ ಮಾಹಿತಿ ಆಧರಿಸಿ ನ್ಯಾಯಾಲಯದ ವಾರೆಂಟ್ ಪಡೆದು ಅಬಕಾರಿ ನಿರೀಕ್ಷಕಿ ವನಿತಾ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದಾಗ,3 ಮೀಟರ್ ಎತ್ತರದ ಎರಡು ಗಿಡಗಳು ಪತ್ತೆಯಾಗಿವೆ. ಸುಮಾರು 50ಸಾವಿರ ಬೆಳೆ ಬಾಳುವ ಎರಡೂ ಗಾಂಜಾ ಗಿಡಗಳಾಗಿದ್ದು, ಯಾರೋ ಗಾಂಜಾ ಸೇವಿಸಿ ಬೀಜ ಬಿಸಾಡಿದಾಗ ಗಿಡಗಳು ಬೆಳೆದಿರುವ ಶಂಕೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ಗಾಂಜಾ ಬೆಳೆದ ಆರೋಪಿಗಳ ಪತ್ತೆಗೆ ಮುಂದಾಗಿದ್ದು, ಮಂಡ್ಯ ಅಬಕಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡಿ ಸದ್ಯ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ನಟಿಸಿರುತ್ತಿರುವ ನಟಿ ಚಂದನಾ ಅನಂತ ಕೃಷ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಲಕ್ಷ್ಮೀ ನಿವಾಸ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಮೂಲಕ ಖ್ಯಾತ ನಟನ ಮನೆಗೆ ಸೊಸೆಯಾಗಿ ಚಿನ್ನು ಮರಿ ಕಾಲಿಡಲಿದ್ದಾರೆ. ಕುಟುಂಬದವರೇ ನೋಡಿ ಒಪ್ಪಿರುವ ಹುಡುಗನ ಜೊತೆಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ಹೇಳದಿದ್ದರೂ, ಇದೇ ನವೆಂಬರ್ 28 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕುಟುಂಬದ ಸಮ್ಮುಖದಲ್ಲಿ ಸ್ನೇಹಿತರು, ಸಂಬಂಧಿಕರು ಹಾಗೂ ಕಲಾವಿದರು ನಟಿ ಚಂದನಾ ಅವರ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಚಂದನಾ ಅವರು ಕೈ ಹಿಡಿಯಲು ಹೊರಟಿರುವ ಹುಡುಗ ಪ್ರತ್ಯಕ್ಷ್ ಉದಯ್. ಉದ್ಯಮಿಯಾಗಿರುವ ಪ್ರತ್ಯಕ್ಷ್ ಅವರ ಪೋಷಕರು ಕೂಡ ಬಣ್ಣದ ಲೋಕದವರೇ ಅನ್ನೋದು ವಿಶೇಷ. ಡಾ ರಾಜ್ ಕುಮಾರ್ ಅವರ ಜೊತೆಗೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ದಿ.ಉದಯ್ ಹುತ್ತಿನಗದ್ದೆ ಪ್ರತ್ಯಕ್ಷ್ ಅವರ ತಂದೆ. ಇವರು…

Read More

ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ರೆ ಇದು ಸುಳ್ಳು ಸುದ್ದಿ. ನಟ ಶಿವರಾಜ್ ಕುಮಾರ್ ಆರೋಗ್ಯವಾಗಿದ್ದು ಯಾವುದೇ ಸಮಸ್ಯೆಯಾಗಿಲ್ಲ.ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ. ಶಿವಣ್ಣನಿಗೆ ಏನೂ ಆಗಿಲ್ಲ. ಸುಮ್ನೆ ಏನೇನೋ ಸುದ್ದಿ ಹಬ್ಬಿಸಬೇಡಿ. ಸುಳ್ಳು ಸುದ್ದಿಯನ್ನ ಮೊದಲೇ ಹಬ್ಬಿಸಬೇಡಿ. ಶಿವಣ್ಣ ಪರ್ಫೆಕ್ಟ್ ಆಗಿಯೇ ಇದ್ದಾರೆ. ಅವರಿಗೆ ಹೆಲ್ತ್ ಪ್ರಾಬ್ಲಂ ಅಂತ ಏನೇನೋ ಹಬ್ಬಿಸಬೇಡಿ ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಶಿವಣ್ಣನ ಸಿನಿಮಾ ಬರ್ತಿದೆ. ಇದೇ ತಿಂಗಳು 15 ರಂದು ಈ ಚಿತ್ರ ತೆರೆಗೆ ಬರ್ತಿದೆ. ಎಲ್ಲರೂ ಅದನ್ನ ನೋಡೋಣ. ಎಲ್ಲರೂ ಅದನ್ನ ಎಂಜಾಯ್ ಮಾಡೋಣ. ಸುಮ್ನೆ ಏನೇನೋ ಸುದ್ದಿ ಹಬ್ಬಿಸಿ, ಸಿನಿಮಾ ರಿಲೀಸ್ ಸಂಭ್ರಮವನ್ನ ಹಾಳು ಮಾಡೋದು ಬೇಡ ಎಂದಿದ್ದಾರೆ. ಶಿವರಾಜ್ ಕುಮಾರ್ ಯಾವುದನ್ನೂ ಮುಚ್ಚಿಟ್ಟಿಲ್ಲ. ಎಲ್ಲವನ್ನೂ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಇರೋ ಸಮಸ್ಯೆಯ ಕುರಿತು ಕೇಳೋ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ. ಯಾವುದನ್ನೂ ಮುಚ್ಚು…

Read More

ಪ್ರೀತಿ, ಕಾಮ, ಆಸೆ, ಸ್ಪರ್ಶ ಮುಂತಾದ ಹಲವು ಭಾವನೆಗಳನ್ನು ವ್ಯಕ್ತಪಡಿಸುವುದರಿಂದ ಪುರುಷ ಮತ್ತು ಮಹಿಳೆಯ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಸೆಕ್ಸ್ನ ಪ್ರಯೋಜನಗಳು: ಲೈಂಗಿಕ ಕ್ರಿಯೆಯು ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಇದು ಮಾತ್ರವಲ್ಲದೇ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ರಕ್ತದೊತ್ತಡ ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲೈಂಗಿಕತೆಯು ನಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ, ಉತ್ತಮ ನಿದ್ರೆ ಮತ್ತು ರಕ್ತ ಪರಿಚಲನೆಯು ನಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರುತ್ತದೆ ತಿಂಗಳಿಗೆ ಎಷ್ಟು ಬಾರಿ ಸಂಭೋಗ ನಡೆಸಬೇಕು?: ವರದಿಯ ಪ್ರಕಾರ, ವಿವಾಹಿತರು ಪ್ರಣಯ ಸಂಬಂಧದಲ್ಲಿರುವವರಿಗಿಂತ ಹೆಚ್ಚು ಲೈಂಗಿಕತೆಯನ್ನು ಹೊಂದಿರುತ್ತಾರೆ. ಒಂದು ತಿಂಗಳಲ್ಲಿ ನೀವು ಎಷ್ಟು ಬಾರಿ ಲೈಂಗಿಕತೆಯನ್ನು ಹೊಂದಬಹುದು ಎಂಬುದಕ್ಕೆ ಯಾವುದೇ ಮಿತಿಯಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ನೀವು ಯಾವುದೇ ಸಮಯದಲ್ಲಿ ಬೇಕಾದರೂ ಲೈಂಗಿಕತೆಯನ್ನು ಹೊಂದಬಹುದು ಆದರೆ ಕೆಲವು ವೈದ್ಯರು ವಾರಕ್ಕೊಮ್ಮೆ ಸಂಭೋಗ ನಡೆಸಲು ಶಿಫಾರಸು ಮಾಡುತ್ತಾರೆ. ಇದು ಪಾಲುದಾರರ ನಡುವೆ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಸಂಬಂಧಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.…

Read More

ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಡೊನಾಲ್ಡ್‌ ಟ್ರಂಪ್‌ ಅಮೆರಿಕಾದ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಓಹಾಯೋ ಸೆನೆಟರ್ J.D.ವ್ಯಾನ್ಸ್ ನೇಮಕಗೊಂಡಿದ್ದಾರೆ. ಉಪಾಧ್ಯಕ್ಷ J.D.ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಇದೀಗ ಅಮೆರಿಕಾದ ದ್ವಿತೀಯ ಮಹಿಳೆ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಅಮೆರಿಕಾದ ದ್ವಿತೀಯ ಮಹಿಳೆಯ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯೂ ಉಷಾ ಚಿಲುಕುರಿ ಪಾಲಾಗಿದೆ. ಉಷಾ ಚಿಲುಕುರಿ ವ್ಯಾನ್ಸ್ ಅವರ ಪೋಷಕರು 1970ರಲ್ಲಿ ಅಮೆರಿಕಾಗೆ ತೆರಳಿದ್ದರು. ಉಷಾ ಸ್ಯಾನ್ ಡಿಯಾಗೋ ಉಪನಗರದಲ್ಲಿ ಹುಟ್ಟಿ ಬೆಳೆದಿದ್ದರು. ಉಷಾ ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಚಿಲುಕುರಿ ಅವರು ಈ ಮೊದಲು ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದರು. ಬಳಿಕ ರಿಪಬ್ಲಿಕ್ ಪಕ್ಷ ಸೇರಿಕೊಂಡು, ಪತಿಯ ಪರವಾಗಿ ಸೆನೆಟರ್ ಚುನಾವಣೆಯಲ್ಲಿ ಪ್ರಚಾರ ಕೂಡ ನಡೆಸಿದ್ದರು. ಸದ್ಯ ಅವರ ಕುಟುಂಬವು ಓಹಿಯೋದ ಸಿನ್ಸಿನಾಟಿಯಲ್ಲಿ ನೆಲೆಸಿದೆ. ಜೆಡಿ ವ್ಯಾನ್ಸ್ ಭಾರತೀಯ ಮೂಲದ ವಕೀಲೆ ಉಷಾ ಚಿಲುಕುರಿ ವ್ಯಾನ್ಸ್…

Read More

ಟೊಮ್ಯಾಟೋಗಳನ್ನು ಪ್ರಪಂಚದಾದ್ಯಂತದ ವಿವಿಧ ಆಹಾರಗಳನ್ನು ತಯಾರಿಸುವುದರಲ್ಲಿ ಬಳಸುತ್ತಾರೆ. ಅವು ರುಚಿಕರ ಮಾತ್ರವಲ್ಲದೆ, ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ಮಾರುಕಟ್ಟೆಯಿಂದ ದುಬಾರಿ ಬೆಲೆ ಕೊಟ್ಟು ತಂದ ಟೊಮೆಟೋ ಹಾಳಾದರೆ ಬೇಸರವಾಗುವುದು ಖಂಡಿತ. ಅದಕ್ಕಾಗಿ ನಾವಿಂದು ಟೊಮೆಟೊಗಳನ್ನು ಸಂಗ್ರಹಿಸಲು ಕೆಲವು ಆರೋಗ್ಯಕರ ವಿಧಾನಗಳನ್ನು ತಿಳಿಸಿದ್ದೇವೆ. ನೀವು ಟೊಮೆಟೊಗಳನ್ನು ಫ್ರಿಡ್ಜ್‌ನಲ್ಲಿ ಇಡುತ್ತೀರಾ?​ ಟೊಮೆಟೊಗಳನ್ನು ಫ್ರಿಜ್‌ನಲ್ಲಿ ಇಡಬಾರದು ಎಂದು ನಮಗೆ ಯಾವಾಗಲೂ ಹೇಳಲಾಗುತ್ತದೆ. ರೆಫ್ರಿಜರೇಟರ್ ಟೊಮೆಟೊಗಳಿಗೆ ತಂಪಾದ ಶೇಖರಣಾ ಸ್ಥಳವಾಗಿದೆ. ಆದ್ದರಿಂದ, ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಟೊಮೆಟೊಗಳನ್ನು ಇರಿಸುವುದು ಮುಖ್ಯ. ಟೊಮೆಟೋವನ್ನು ಅಡುಗೆಗೆ ಬಳಸುವಾಗ ಮೊದಲು ಹೆಚ್ಚು ಹಣ್ಣಾಗಿರುವ ಟೊಮೆಟೋವನ್ನು ಬಳಸಿ. ನೀವು ಸಾಕಷ್ಟು ಮಾಗಿದ ಟೊಮೆಟೊಗಳನ್ನು ಹೊಂದಿದ್ದರೆ ಮಾತ್ರ, ನೀವು ಅವುಗಳನ್ನು ಫ್ರಿಡ್ಜ್‌ನಲ್ಲಿಡಬಹುದು. ಟೊಮೆಟೋದ ಕಾಂಡದ ಬದಿ ಕೆಳಗಿರುವಂತೆ ಇರಿಸಿ​ ಟೊಮೆಟೊಗಳು ಬೇಗನೆ ಕೊಳೆಯುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅವುಗಳು ಹೆಚ್ಚು ದಿನಗಳವರೆಗೆ ಇರುವಂತೆ ಮಾಡಲು ಅವುಗಳ ಕಾಂಡದ ಬದಿಯನ್ನು ಕೆಳಗೆ ಇರಿಸಿ. ಇದು ಅವುಗಳನ್ನು ವೇಗವಾಗಿ ಹಣ್ಣಾಗಿಸುತ್ತದೆ. ಟೊಮೆಟ್ಯೋವನ್ನು ಸೂರ್ಯನ ಬೆಳಕಿನಿಂದ ದೂರ ಇಡುವುದು ದೀರ್ಘಕಾಲದವರೆಗೆ ತಾಜಾ ಮತ್ತು ತಿನ್ನಲು ಯೋಗ್ಯವಾಗಿರುವಂತೆ ಮಾಡಲು ಸಹಕಾರಿಯಾಗಿದೆ. ​ಹಸಿರು ಬಣ್ಣವಿರುವ ಟೊಮೆಟ್ಯೋ ಖರೀದಿಸಿ​…

Read More

ಛಟ ಪೂಜಾ ಸೂರ್ಯೋದಯ: 06:21, ಸೂರ್ಯಾಸ್ತ : 05:38 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ: ಷಷ್ಠಿ ನಕ್ಷತ್ರ: ಪುರ್ವಾಷಾಢ ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಬೆ.6:49 ನಿಂದ ಬೆ.8:28 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ ರಾಶಿ: ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ, ಕುಟುಂಬದಲ್ಲಿ ಜಗಳ ಸಂಭವ, ವ್ಯಾಪಾರದ ಆರ್ಥಿಕ ಮುಗ್ಗಟ್ಟು, ಮಕ್ಕಳಿಂದ ಮನಸ್ತಾಪ, ರಾಜಕೀಯ ರಂಗದ ಜನಪ್ರತಿನಿಧಿಗಳಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ, ಅಣ್ಣ-ತಮ್ಮಂದಿರ ಆಸ್ತಿಗಾಗಿ ಹೋರಾಟ, ಸಹೋದರಿಗಳಿಂದ ಮನಸ್ತಾಪ, ಎಲ್ಲ ಚಲನಚಿತ್ರ ನಟ ನಟಿಯರಿಗೆ ನಷ್ಟ, ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಸಾಲಗಾರರಿಂದ ಅವಮಾನ, ಹೊಸ ವ್ಯಾಪಾರ ಪ್ರಾರಂಭಿಸಲು ಸೂಕ್ತ ಸಮಯವಲ್ಲ, ಜಾತಕ ಆಧಾರದ (ಜನ್ಮ…

Read More

ಮಂಡ್ಯ: ಮಂಡ್ಯದ ಜಿಲ್ಲಾ ಭೂ ದಾಖಲೆ ನೌಕರರ ಸಂಘದ ಆವರಣದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿರುವ ಘಟನೆ  ಆವರಣದಲ್ಲಿ ನಡೆದಿದೆ. ಖಚಿತ ಮಾಹಿತಿ ಆಧರಿಸಿ ನ್ಯಾಯಾಲಯದ ವಾರೆಂಟ್ ಪಡೆದು ಅಬಕಾರಿ ನಿರೀಕ್ಷಕಿ ವನಿತಾ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿದಾಗ, 3 ಮೀಟರ್ ಎತ್ತರದ ಎರಡು ಗಿಡಗಳು ಪತ್ತೆಯಾಗಿವೆ. ಸುಮಾರು 50ಸಾವಿರ ಬೆಳೆ ಬಾಳುವ ಎರಡೂ ಗಾಂಜಾ ಗಿಡಗಳಾಗಿದ್ದು, ಯಾರೋ ಗಾಂಜಾ ಸೇವಿಸಿ ಬೀಜ ಬಿಸಾಡಿದಾಗ ಗಿಡಗಳು ಬೆಳೆದಿರುವ ಶಂಕೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ಗಾಂಜಾ ಬೆಳೆದ ಆರೋಪಿಗಳ ಪತ್ತೆಗೆ ಮುಂದಾಗಿದ್ದು,  ಮಂಡ್ಯ ಅಬಕಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಈ ಹಿಂದೆ ಪ್ರಧಾನಿ ನೆತನ್ಯಾಹು ಅವರ ಪ್ರತಿಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಗಿಡಾನ್ ಸಾರ್ ಇದೀಗ ಇಸ್ರೇಲ್‍ನ ನೂತನ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ. ಬೆಂಜಮಿನ್ ನೆತನ್ಯಾಹು ಬಲಪಂಥೀಯ ಪಕ್ಷ ಲಿಕುಡ್ ಪಾರ್ಟಿಯ ನಾಯಕತ್ವ ವಹಿಸುವುದನ್ನು ವಿರೋಧಿಸಿ 2020ರಲ್ಲಿ ಲಿಕುಡ್ ಪಾರ್ಟಿಯನ್ನು ತೊರೆದಿದ್ದ ಗಿಡಾನ್, `ನ್ಯೂ ಹೋಪ್’ ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಕಳೆದ ವರ್ಷ ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡ ಬಳಿಕ ಇಸ್ರೇಲ್‍ನ `ಯುದ್ಧಕಾಲದ ತುರ್ತು ಸಚಿವ ಸಂಪುಟ’ಕ್ಕೆ ಸೇರ್ಪಡೆಗೊಂಡಿದ್ದು ಖಾತೆರಹಿತ ಸಚಿವರಾಗಿದ್ದರು. ಇದೀಗ ಇಸ್ರೇಲ್ ನ ನೂತನ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ.

Read More