ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಖ್ಯಾತಿ ಘಳಿಸಿದ ಚಂದನ್ ಹಾಗೂ ಕವಿತಾ ಗೌಡ ಬಾಳಲ್ಲಿ ಸಂಭ್ರಮ ಮನೆ ಮಾಡಿದೆ. ಮುದ್ದು ಮಗುವಿನ ಆಗಮನ ಮನೆ, ಮನಸ್ಸುಗಳಲ್ಲಿ ಮತ್ತಷ್ಟು ಖುಷಿ ನೀಡಿದೆ. ಮನಗೆ ಮುದ್ದು ಮಗನನ್ನು ಭರಮಾಡಿಕೊಂಡಿರುವ ದಂಪತಿ ಅದೇ ಖುಷಿಯಲ್ಲಿ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಾರೆ. ಮಗನೊಂದಿಗೆ ತೆಗೆಸಿರುವ ಮುದ್ದು ಮುದ್ದು ಫೋಟೋಗಳನ್ನು ಕವಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಯುಧ ಪೂಜೆಯ ದಿನದಂದು ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ. ಮಗನ ಜೊತೆಗಿನ ಮುದ್ದಾದ ಫೋಟೋವನ್ನು ಇದೀಗ ಕವಿತಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಮಗನೊಂದಿರುವ ಮತ್ತೊಂದಷ್ಟು ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಲಕ್ಷ್ಮಿಬಾರಮ್ಮ ಸೀರಿಯಲ್‌ನಲ್ಲ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಒಟ್ಟಿಗೆ ನಟಿಸಿದ್ದರು, ಬಳಿಕ ಸ್ನೇಹದಿಂದ ಪ್ರೀತಿಗೆ ತಿರಗಿತ್ತು. ಬಳಿಕ ಇಬ್ಬರೂ ಮದು ವೆಯಾದರು.ಈಗ ಕವಿತಾ ಗೌಡ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ಬಳಿಕ ಚಂದನ್ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು…
Author: Prajatv Kannada
ಕೊತ್ತಂಬರಿ ಸೊಪ್ಪನ್ನು ಆಹಾರಕ್ಕೆ ಸೇರಿಸುವುದರಿಂದ ಆಹಾರಕ್ಕೆ ಸುವಾಸನೆ ದೊರೆಯುವುದರ ಜೊತೆಗೆ ಆಹಾರವನ್ನು ಅಲಂಕರಿಸಲು ಬಳಸಲಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತಾರೆ. ಆದರೆ ಇದರ ಮುಖ್ಯ ಸಮಸ್ಯೆ ಎಂದರೆ ಕೊತ್ತಂಬರಿ ಸೊಪ್ಪು ಎರಡು ಮೂರು ದಿನಗಳಲ್ಲಿ ಹಾಳಾಗಿ ಬಿಡುತ್ತದೆ. ಇದನ್ನು ಫ್ರಿಡ್ಜ್‌ನಲ್ಲಿಟ್ಟರೂ ಇದರ ತಾಜಾತನ ಉಳಿಯುವುದಿಲ್ಲ. ಹೀಗಿರೋವಾಗ, ಮಳೆಗಾಲದ ದಿನಗಳಲ್ಲಿ ಕೊತ್ತಂಬರಿ ಸೊಪ್ಪನ್ನು ತಾಜಾ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಇಡೋದು ಹೇಗೆ ಎಂಬುದು ಜನರ ಪ್ರಶ್ನೆಯಾಗಿದೆ. ಇಲ್ಲಿದೆ ನೋಡಿ ಕೊತ್ತಂಬಾರಿ ಸೊಪ್ಪನ್ನು ದೀರ್ಘಕಾಲ ಇಡುವಂತಹ ಟಿಪ್ಸ್… ಮೊದಲಿಗೆ, ಕೊತ್ತಂಬರಿ ಸೊಪ್ಪನ್ನು ಕನಿಷ್ಠ ಮೂರು ಬಾರಿ ತೊಳೆಯಿರಿ. ಇದರಿಂದ ಸೊಪ್ಪಿನ ಎಲ್ಲಾ ಮಣ್ಣು ಮತ್ತು ಕೊಳೆಯನ್ನು ತೆಗೆದುಹಾಕುತ್ತದೆ. ನಂತರ ಅದನ್ನು ಜರಡಿಗೆ ಹಾಕಿ ಮತ್ತು ನೀರನ್ನು ಚೆನ್ನಾಗಿ ಡ್ರೈ ಆಗುವಂತೆ ಮಾಡಿ. ಅದರ ಎಲ್ಲಾ ನೀರು ಒಣಗಿದ ನಂತರ, ಅದನ್ನು ಹತ್ತಿ ಬಟ್ಟೆ ಮೇಲೆ ಇರಿಸಿ ಮತ್ತು ಗಾಳಿಯಾಡದ ಕಂಪಾರ್ಟ್ಮೆಂಟ್ನಲ್ಲಿ ಅದನ್ನು ತುಂಬಿಸಿ. ನೀವು ಕೊತ್ತಂಬರಿ ಸೊಪ್ಪನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು…
ತುಳಸಿಯು ಹಿಂದೂಗಳಿಗೆ ಅತ್ಯಂತ ಪೂಜ್ಯನೀಯವಾಗಿದ್ದು, ಇದನ್ನು ಬಹಳ ಪವಿತ್ರವೆಂದು ಕರೆಯಲಾಗುತ್ತದೆ. ಮನೆಯಲ್ಲಿ ತುಳಸಿ ಬೆಳೆಯುವುದರಿಂದ ಸೌಂದರ್ಯದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ತುಳಸಿಯಲ್ಲಿರುವ ಆರೊಮ್ಯಾಟಿಕ್ ಎಲೆಗಳು ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವುಗಳ ಔಷಧೀಯ ಗುಣಗಳಿಂದಾಗಿಯೂ ಬಹಳ ಪ್ರಸಿದ್ಧಿ ಪಡೆದಿದೆ. ತುಳಸಿ ಗಿಡವು ವಿಷ್ಣುವಿಗೆ ಇಷ್ಟವಾಗುತ್ತದೆ ಎಂದು ನಂಬಲಾಗಿದೆ. ಈ ಪವಿತ್ರ ಸಸ್ಯದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂಬ ನಂಬಿಕೆಯೂ ಇದೆ. ಅದಕ್ಕಾಗಿಯೇ ಬೆಳಿಗ್ಗೆ ಮತ್ತು ಸಂಜೆ ಈ ಗಿಡದ ಬಳಿ ದೀಪ ಹಚ್ಚಿ ಪೂಜೆ ಮಾಡಲಾಗುತ್ತದೆ. ತುಳಸಿ ಪೂಜೆಗೆ ಕೆಲವು ನಿಯಮಗಳನ್ನು ಪಾಲಿಸಬೇಕು. ಅವುಗಳನ್ನು ಅನುಸರಿಸಲು ವಿಫಲವಾದರೆ ಜೀವನದಲ್ಲಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ತುಳಸಿಯನ್ನು ಪೂಜಿಸುವಾಗ ಕೆಲವು ವಿಷಯಗಳನ್ನು ಮರೆಯಬಾರದು. ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಎಂದು ನಂಬಲಾಗಿದೆ. ಪರಮೇಶ್ವರನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹಾಗಾಗಿ ತುಳಸಿ ಬಳಿ ಶಿವಲಿಂಗವನ್ನು ಯಾವುದೇ ಸಂದರ್ಭದಲ್ಲೂ ಇಡಬಾರದು. ಹಾಗೆಯೇ ತಪ್ಪಾಗಿ ತುಳಸಿ ಗಿಡದ ಬಳಿ ಚಪ್ಪಲಿಗಳನ್ನು ಇಡಬೇಡಿ. ಹೀಗೆ ಮಾಡಿದರೆ ಸಂಪತ್ತಿನ…
ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿ ಆರಂಭಕ್ಕೂ ಮೊದಲೇ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಭಾರಿ ಹಿನ್ನಡೆ ಎದುರಾಗಿದೆ. ಪ್ರವಾಸಿ ಟೀಮ್ ಇಂಡಿಯಾ ಎದುರು ಕಾಂಗರೂ ಪಡೆ ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿ 5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ಆಡಲು ಎದುರು ನೋಡುತ್ತಿದೆ. ಈ ಸಂದರ್ಭದಲ್ಲಿ ಪ್ರಮುಖ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಗಾಯಗೊಂಡು ಸರಣಿಗೆ ಅಲಭ್ಯರಾಗಿದ್ದಾರೆ. 25 ವರ್ಷದ ಯುವ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲಿದ್ದಾರೆ. ಈ ಸಲುವಾಗಿ ನಡೆಸಲಾದ ವೈದ್ಯಕೀಯ ತಪಾಸಣೆಯಲ್ಲಿ ಕ್ಯಾಮೆರಾನ್ ಗ್ರೀನ್‌ಗೆ ಶಸ್ತ್ರಚಿಕಿತ್ಸೆಗೆ ಒಳಪಡೆದರೆ ಬೇರೆ ದಾರಿಯಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಮುಂದಿನ 6 ತಿಂಗಳು ಕಾಲ ಗ್ರೀನ್ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರ ಉಳಿಯಲಿದ್ದಾರೆ. ಬಿಜಿಟಿ 2024-25 ಸರಣಿ ಮಾತ್ರವಲ್ಲ, 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಅಲಭ್ಯರಾಗಲಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿನ ಆಸ್ಟ್ರೇಲಿಯಾ ಪ್ರವಾಸದ ವೇಳೆ ಕ್ಯಾಮೆರಾನ್ ಗ್ರೀನ್ ಬೆನ್ನು ನೋವಿನ ಸಮಸ್ಯೆ ಬಗ್ಗೆ ತಿಳಿಸಿದ್ದರು.…
ವಿರಾಟ್ ರಾತ್ರಿ ʼಅದನ್ನುʼ ಮಾಡೋದು ನಂಗೆ ಇಷ್ಟವಾಗುವುದಿಲ್ಲ” ಎಂದು ಹೇಳುವ ಮೂಲಕ ಕಿಂಗ್ ಕೊಹ್ಲಿ ಬೆಡ್ ರೂಂ ಸತ್ಯವನ್ನು ಪತ್ನಿ ಅನುಷ್ಕಾ ಶರ್ಮಾ ಬಿಚ್ಚಿಟ್ಟಿದ್ದಾರೆ. ಪವರ್ ಕಪಲ್ ಅನುಷ್ಕಾ ಹಾಗೂ ವಿರಾಟ್ ಏನೇ ಮಾಡಿದರೂ ಅದು ಸುದ್ದಿಯಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು.. ಅವರ ಅಭಿಮಾನಿಗಳಿಗೆ ಅವರ ಬಗ್ಗೆ ತಿಳಿಯೋಕೆ ತುಂಬಾ ಕುತೂಹಲ.. ಈ ಹಿಂದೆ ದಂಪತಿಗಳು ಸಂದರ್ಶನವೊಂದರಲ್ಲಿ ಭಾಗವಹಿಸಿ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದರು.. ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ಪತ್ನಿ ವಿರಾಟ್ ಕೊಹ್ಲಿ ಅವರ ಮಲಗುವ ಅಭ್ಯಾಸದ ಬಗ್ಗೆ ಹೇಳಿಕೊಂಡಿದ್ದರು.. ಬೆಳಗಿನ ಜಾವ 3 ಗಂಟೆಯ ಸ್ನೇಹಿತೆಯ ರಹಸ್ಯ ಏನು ಎಂದು ಕೇಳಿದಾಗ “ನಾವು ಬೇಗ ಮಲಗುತ್ತೇವೆ ಅದರಲ್ಲೂ ವಿರಾಟ್ ಇನ್ನು ಬೇಗ ಮಲಗುತ್ತಾರೆ.. ಒಂದು ವೇಳೆ ನಮಗೆ 3 ಗಂಟೆ ಎಚ್ಚರವಾದರೇ ನಾವು ನಮ್ಮ ನಮ್ಮ ಸ್ನೇಹಿತರಿಗೆ ಕರೆ ಮಾಡಿ ಮಾತನಾಡುತ್ತೇವೆ.. ಅಷ್ಟೇ ಅಲ್ಲ ವಿರಾಟ್ ಎಷ್ಟೇ ಬೇಗ ಮಲಗಿದರೂ ಬೇಗ ಏಳುವುದು ಅವರಿಗೆ ಇಷ್ಟವಿರುವುದಿಲ್ಲ” ವಾಮಿಕಾ ಹುಟ್ಟಿದ ನಂತರ…
ಗುಲ್ಬರ್ಗ: ನನ್ನ ಮೇಲಿನ ಯಾವ ಕೇಸ್ ವಾಪಸ್ ಪಡೆದಿದ್ದಾರೆ? ಅದರ ಬಗ್ಗೆ ದಾಖಲೆ ತೋರಿಸಿದರೆ ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇನೆ ಎಂದು ಕಲಬುರಗಿಯಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮೇಲೆ ಯಾವ ಕೇಸ್ ಇಲ್ಲ. ಕ್ಯಾಬಿನೆಟ್‌ನಲ್ಲಿ ನನ್ನ ಮೇಲಿನ ಯಾವ ಕೇಸ್ ಕೂಡ ವಾಪಸ್ ಪಡೆದಿಲ್ಲ. ನಾನು ಚಾಲೆಂಜ್ ಮಾಡುತ್ತೇನೆ. ನನ್ನ ಮೇಲೆ ಯಾವ ಕೇಸ್ ಇದೆ? ಯಾವುದು ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಿ. ಇವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಪ್ರಿಯಾಂಕ್ ಖರ್ಗೆ, ಹೆಚ್ ಕೆ ಪಾಟೀಲ್ ನನ್ನ ಚಾಲೆಂಜ್ ಸ್ವೀಕರಿಸಲಿ ಎಂದು ಸವಾಲ್ ಹಾಕಿದರು. ಅವರು ನನ್ನ ರುಜುವಾತು ಮಾಡಬೇಕು. ಇಲ್ಲದೇ ಹೋದ್ರೆ ಜನತೆ ಎದುರು ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು. ಮುಸ್ಲಿಮರ ಓಲೈಕೆಗಾಗಿ ಕೇಸ್ ವಾಪಸ್ ಪಡೆದಿದ್ದಾರೆ. ನನ್ನ ಮೇಲೆ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಯಾವುದೇ ಕೇಸ್ ಇರಲಿಲ್ಲ. ಕುಕ್ಕರ ಬಾಂಬ್…
ಖಲಿಸ್ತಾನ ಉಗ್ರ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಪಿತೂರಿಯಿದೆ ಎಂದು ಕೆನಡಾ ಆರೋಪಿಸಿರುವ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ಸಂಬಂಧ ಮತ್ತೆ ಹದಗೆಟ್ಟಿದೆ. ಕೆನಡಾದ ಹೇಳಿಕೆ ಖಂಡಿಸಿರುವ ಭಾರತ ಇದೀಗ ಅಲ್ಲಿರುವ ಹೈಕಮಿಷನರ್ ಮತ್ತು ಇತರ ಉದ್ದೇಶಿತ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ವಾಪಸ್ ಕರೆಯಿಸಿಕೊಂಡಿದೆ. ಅಲ್ಲದೇ ಇದೀಗ ಭಾರತದಲ್ಲಿರುವ ಆರು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ದೇಶದಿಂದ ಹೊರಹಾಕಲು ನಿರ್ಧಿರಿಸಿದೆ. ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ ಅಥವಾ ಅದಕ್ಕೂ ಮೊದಲು ಭಾರತವನ್ನು ತೊರೆಯಲು ಗಡುವು ನೋಡಲಾಗಿದ್ದು ಈ ಬಗ್ಗೆ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೀವರ್ಟ್ ರಾಸ್ ವೀಲರ್ (ಹಂಗಾಮಿ ಹೈ ಕಮಿಷನರ್) , ಪ್ಯಾಟ್ರಿಕ್ ಹೆಬರ್ಟ್ (ಡೆಪ್ಯುಟಿ ಹೈ ಕಮಿಷನರ್), ಮೇರಿ ಕ್ಯಾಥರೀನ್ ಜೋಲಿ, (ಫಸ್ಟ್ ಸೆಕ್ರೆಟರಿ) ಲ್ಯಾನ್ ರಾಸ್ ಡೇವಿಡ್ ಟ್ರೈಟ್ಸ್ (ಫಸ್ಟ್ ಸೆಕ್ರೆಟರಿ), ಆಡಮ್ ಜೇಮ್ಸ್ ಚುಪ್ಕಾ((ಫಸ್ಟ್ ಸೆಕ್ರೆಟರಿ) ಪೌಲಾ ಒರ್ಜುಯೆಲಾ (ಫಸ್ಟ್ ಸೆಕ್ರೆಟರಿ) ಈ ಆರು ಅಧಿಕಾರಿಗಳಿಗೆ ಅಕ್ಟೋಬರ್ 19 ಶನಿವಾರ ರಾತ್ರಿ 11:59ರೊಳಗೆ…
ಅಮೆರಿಕದ ಆರ್ಥಿಕ ತಜ್ಞರಾದ ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಹಾಗೂ ಜೇಮ್ಸ್ ಎ ರಾಬಿನ್ಸನ್ ಅವರಿಗೆ 2024ನೇ ಸಾಲಿನ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಇದು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೂ ಕರೆಯಲ್ಪಡುವ ಈ ರಿಕ್ಸ್ ಬ್ಯಾಂಖ್ ಪ್ರಶಸ್ತಿ ಆಲ್ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೆರಿಜೆಸ್ ರಿಕ್ಸ್ಬ್ಯಾಂಕ್ನಿಂದ ನೀಡಲಾಗುವ ಪ್ರಶಸ್ತಿಯಾಗಿದೆ. ಡೆರೋನ್ ಅಸಿಮೋಗ್ಲು, ಸಿಮೋನ್ ಜಾನ್ಸನ್ ಹಾಗೂ ಜೇಮ್ಸ್ ಎ ರಾಬಿನ್ಸನ್ ಅವರು ಸಾಮಾಜಿಕ ಸಂಸ್ಥೆಗಳು ಹೇಗೆ ರಚನೆ ಆಗುತ್ತವೆ, ಅವುಗಳಿಂದ ಪ್ರಗತಿ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಎಂಬುದನ್ನು ತಮ್ಮ ಅಧ್ಯಯನಗಳಿಂದ ವಿವರಿಸಿದ್ದರು. ಅವರ ಈ ಸಾಧನೆಗಾಗಿ ನೊಬೆಲ್ ಪುರಸ್ಕಾರ ನೀಡಲಾಗುತ್ತಿದೆ. ಆಲ್ಫ್ರೆಡ್ ನೊಬೆಲ್ ಎಂಬ ಸ್ವೀಡಿಶ್ ವಿಜ್ಞಾನಿಯಾಗಿದ್ದು ಅವರ ಸಾವಿನ ನಂತರ ಅವರ ಅಭಿಲಾಷೆಯಂತೆ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ, ಔಷಧ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಈ ಐದು ವಿಭಾಗಗಳಲ್ಲಿ ಸಾಧಕರಿಗೆ ನೊಬೆಲ್ ಬಹುಮಾನ ನೀಡುತ್ತಾ ಬರಲಾಗಿದೆ. ಆದರೆ, ಸ್ವೀಡನ್ನ ಸ್ವೆರಿಗೆಸ್ ರಿಕ್ಸ್ಬ್ಯಾಂಕ್ 1969ರಿಂದ ಆರ್ಥಿಕ ವಿಜ್ಞಾನ ವಿಭಾಗದಲ್ಲೂ…
ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್ ಹಿಂದಿ ಸೀಸನ್ 18’ ಆರಂಭವಾಗಿ ಕೆಲ ದಿನಗಳಷ್ಟೇ ಕಳೆದಿದೆ. ಈ ಸೀಸನ್ ನಲ್ಲಿ ಸ್ಪರ್ಧಿಗಳ ಜೊತೆಗೆ ಕತ್ತೆ ಕೂಡ ಅತಿಥಿಯಾಗಿ ಎಂಟ್ರಿಕೊಟ್ಟಿತ್ತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಸಾಕಷ್ಟು ವಿವಾದದ ಬಳಿಕ ಕೊನೆಗೂ ಕತ್ತೆಯನ್ನು ಶೋನಿಂದ ಹೊರ ತರಲಾಗಿದೆ. ಕತ್ತೆಯನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದ್ದು ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಕತ್ತೆಯನ್ನು ಬಿಗ್ ಬಾಸ್ಗೆ ಕಳುಹಿಸಿದ್ದು ಏಕೆ? ಇದೊಂದು ಪ್ರಯೋಗವೇ ಎನ್ನುವ ಪ್ರಶ್ನೆಯೂ ಮೂಡಿತ್ತು. ಈ ಬಗ್ಗೆ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಜೊತೆಗೆ ಇದು ಆಕ್ರೋಶಕ್ಕೂ ಕಾರಣವಾಗಿದೆ. ಸದ್ಯ ಇದೀಗ ಮ್ಯಾಕ್ಸ್ ಹೆಸರಿನ ಕತ್ತೆಯನ್ನು ಹೊರಕ್ಕೆ ತರಲಾಗಿದ್ದು ಇದರಿಂದ ಪ್ರಾಣಿ ಪ್ರಿಯರಿಗೆ ಖುಷಿ ಆಗಿದೆ. ಈ ಮೊದಲು ಪ್ರಾಣಿ ದಯಾ ಸಂಘದವರಾದ ಪೆಟಾದವರು ಸಲ್ಮಾನ್ ಖಾನ್ ಶೋಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಸಲ್ಮಾನ್ ಖಾನ್ ಬಳಿ ತಮ್ಮ ಪ್ರಭಾವ ಬಳಸಿ ಕತ್ತೆಯನ್ನು ಹೊರಕ್ಕೆ ತರಲು ಕೋರಲಾಗಿತ್ತು. ಕೊನೆಗೂ ಈಗ ಕತ್ತೆಯನ್ನು ಹೊರಕ್ಕೆ…
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಕಳೆದ 4 ತಿಂಗಳಿನಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಗೆ ನಿನ್ನೆ ನಡೆದ ವಿಚಾರಣೆಯಲ್ಲಿ ಜಾಮೀನು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ರೆಡಿಯಾಗಿದ್ದಾರೆ. ಜಾಮೀನು ಸಿಗದೆ ನೋವಿನಲ್ಲಿರುವ ದರ್ಶನ್ ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದ ಸರಿಯಾಗಿ ಕೂರಲು, ನಿದ್ದೆ ಮಾಡಲು ಸಾಧ್ಯವಾಗದೆ ಚಡಪಡಿಸುತ್ತಿದ್ದಾರೆ. ಅಷ್ಟಕ್ಕೂ ದರ್ಶನ್ ಗೆ ನಿಜವಾಗಿಯೂ ಬೆನ್ನು ನೋವಿದೆಯಾ ಎಂಬ ಅನುಮಾನ ಹಲವರಲ್ಲಿ ಶುರುವಾಗಿದೆ. ಹೌದು ಎನ್ನುತ್ತಿದೆ ವೈದ್ಯರು ನೀಡಿರುವ ವರದಿ. ದರ್ಶನ್ ಜಾಮೀನು ಪಡೆಯಲು ಬೆನ್ನು ನೋವಿನ ಕಾರಣ ನೀಡುತ್ತಿದ್ದಾರೆ ಎಂದು ಕೆಲವರು ಅಂದುಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಬಳ್ಳಾರಿ ವಿಮ್ಸ್ ವೈದ್ಯರು ದರ್ಶನ್ ಅವರ ಆರೋಗ್ಯ ತಪಾಸಣೆ ನಡೆಸಿದ್ದು ಇದೀಗ ಜೈಲಧಿಕಾರಿಗಳಿಗೆ ರಿಪೋರ್ಟ್ ನೀಡಿದ್ದಾರೆನೀಡಿದ್ದಾರೆ. ಬೆನ್ನುನೋವು ನಿಯಂತ್ರಣಕ್ಕೆ ಫಿಜಿಯೋ ಥೆರಪಿಯ ಸಲಹೆ ನೀಡಲಾಗಿದ್ದು, ಇದರ ಜೊತೆಗೆ ಸ್ಕ್ಯಾನಿಂಗ್ ಮಾಡಿಸಲು ಸೂಚಿಸಿದ್ದಾರೆ. ಜೊತೆಗೆ ಕೆಲವು ಮಾತ್ರೆ, ಮೂಲಾಮುಗಳನ್ನು ಬರೆದುಕೊಟ್ಟಿದ್ದಾರೆ..…