Author: Prajatv Kannada

ಬೆಂಗಳೂರು:- ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. 50 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ್ ಟಾಟಾ ದಾಖಲಿಸಿದ ಎಫ್​ಐಆರ್​ ಪ್ರಶ್ನಿಸಿ ಕುಮಾರಸ್ವಾಮಿ ಮತ್ತು ಎಂಎಲ್​ಸಿ ರಮೇಶ್​ ಗೌಡ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.21ಕ್ಕೆ ಮುಂದೂಡಿದೆ. ಉದ್ಯಮಿ ವಿಜಯ್‌ ಟಾಟಾಗೆ ಬೆದರಿಕೆ ಕೇಸ್‌ನಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಮತ್ತು ಎಂಎಲ್​ಸಿ ರಮೇಶ್​ ಗೌಡ ವಿರುದ್ಧವೂ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ನಿಖಿಲ್ ಕುಮಾರಸ್ವಾಮಿಯನ್ನ ಚನ್ನಪಟ್ಟಣ ಬೈ ಎಲೆಕ್ಷನ್‌ಗೆ ನಿಲ್ಲಿಸ್ತಾ ಇದ್ದೀನಿ, 50 ಕೋಟಿ ರೂ. ಕೊಡದೇ ಇದ್ರೆ ನಿಮ್ಮ ಪ್ರಾಜೆಕ್ಟ್​ಗಳನ್ನ ಕಂಪ್ಲೀಟ್ ಮಾಡೋಕೆ ಬಿಡಲ್ಲ ಅಂತಾ ಹೆಚ್‌ಡಿ ಕುಮಾರಸ್ವಾಮಿ ಬೆದರಿಕೆ ಹಾಕಿದ್ರು ಎಂದು ವಿಜಯ್ ತಾತಾ ದೂರು ನೀಡಿದ್ದರು. ಅಲ್ಲದೆ ರಮೇಶ್ ಗೌಡ ವಿರುದ್ಧ 5 ಕೋಟಿ ರೂ. ಬೇಡಿಕೆಯ ಬಾಂಬ್ ಸಿಡಿಸಿದ್ದರು. ಇದಾದ ಬೆನ್ನಲ್ಲೇ ರಮೇಶ್ ಗೌಡ ವಿಜಯ್ ಟಾಟಾ ವಿರುದ್ಧವೇ ಪ್ರತಿದೂರು ನೀಡಿ, ಅವರೇ 100 ಕೋಟಿ ರೂ.…

Read More

ಬೆಂಗಳೂರು:- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ಗೆ ದಿಢೀರ್ Z ಶ್ರೇಣಿಯ ಭದ್ರತೆ ಒದಗಿಸಲಾಗಿದೆ. ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ರಾಷ್ಟ್ರದಾದ್ಯಂತ ಸುದ್ದಿಯಲ್ಲಿರುವ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೇಂದ್ರ ಸರ್ಕಾರ ‘Z’ ಕೆಟಗರಿ ಭದ್ರತೆ ಒದಗಿಸಿದೆ ಪ್ರಾಸಿಕ್ಯೂಷನ್ ಅನುಮತಿ ಬಳಿಕ ಇಲಾಖೆಯ ಸಲಹೆ ಮೇರೆಗೆ ಥಾವರ್ ಚಂದ್ ಗೆಹ್ಲೋಟ್ ಅವರು ಬುಲೆಟ್ ಪ್ರೂಫ್ ಕಾರು ಪಡೆದಿದ್ದರು. ಇದೀಗ ಕೇಂದ್ರ ಸರ್ಕಾರವೇ ಗೆಹ್ಲೋಟ್ ಅವರಿಗೆ ‘Z’ ಕೆಟಗರಿ ಭದ್ರತೆ ನೀಡಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶ ಹೊರಡಿಸಿದೆ. ಗುಪ್ತಚರ ಇಲಾಖೆಯ ಇತ್ತೀಚಿನ ಬೆದರಿಕೆ ವರದಿಯ ನಂತರ ಈ ಆದೇಶ ಹೊರಡಿಸಿದೆ.

Read More

ಬೆಂಗಳೂರು:- ವಾಲ್ಮೀಕಿ ನಿಗಮದ ಹಗರಣ ಕೇಸ್ ಗೆ ಸಂಬಧಪಟ್ಟಂತೆ ಮಾಜಿ ಸಚಿವ ನಾಗೇಂದ್ರ ಇಂದು ಜೈಲಿಂದ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿ ನಾಗೇಂದ್ರ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಸೋಮವಾರ ಸಂಜೆ ಕೋರ್ಟ್‌ ಆದೇಶ ಪ್ರಕಟವಾದ ಹಿನ್ನೆಲೆಯಲ್ಲಿ ಇಂದು ನಾಗೇಂದ್ರ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣದಲ್ಲಿ ಜುಲೈ 12 ರಂದು ಜಾರಿ ನಿರ್ದೇಶನಾಲಯ ಸತತ 7 ಗಂಟೆ ವಿಚಾರಣೆ ನಡೆಸಿದ ಬಳಿಕ ನಾಗೇಂದ್ರ ಅವರನ್ನು ಬಂಧಿಸಿತ್ತು. 2 ಲಕ್ಷ ರೂ. ಬಾಂಡ್, ಎರಡು ಶ್ಯೂರಿಟಿ, ತನಿಖಾ ಸಂಸ್ಥೆಗಳು ಕರೆದಾಗ ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್‌ ಷರತ್ತು ವಿಧಿಸಿದೆ.

Read More

ಬೆಂಗಳೂರು:- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ 5 ದಿನ ಸಂಚಾರ ಮಾರ್ಪಾಡು ಮಾಡಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಿಂದ ರವಿವಾರ ರ ವರೆಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಂತರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯಾವಳಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಮಾರ್ಪಾಡು ಮಾಡಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ವಾಹನಗಳ ನಿಲುಗಡೆ ನಿಷೇಧ ಕ್ಲೀನ್ಸ್ ರಸ್ತೆ, ಎಂ.ಜಿ ರಸ್ತೆ, ಎಂ.ಜಿ ರಸ್ತೆ ಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್‌ರಸ್ತೆ. ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಕಸ್ತೂರ್ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ವಿಶ್ವಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ. ವಾಹನಗಳ ನಿಲುಗಡೆ ಸ್ಥಳಗಳು ಯು.ಬಿ ಸಿಟಿ ಪಾರ್ಕಿಂಗ್ ಸ್ಥಳದಲ್ಲಿ ವಾಹನ…

Read More

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಕಡೆ ರಾತ್ರಿ ಇಡೀ ಜಿಟಿ ಜಿಟಿ ಮಳೆಯಾಗಿದೆ. ಬೆಂಗಳೂರು ನಗರ- ಗ್ರಾಮಾಂತರ ಭಾಗದಲ್ಲಿ ಮುಂಜಾನೆಯೂ ಮಳೆ (Rain) ಮುಂದುವರೆದಿದೆ. ಮಳೆಯಿಂದಾಗಿ ಕೆಲಸ- ಕಾಲೇಜಿಗೆ ಹೋಗುವವರು, ವಾಹನ ಸವಾರರು ಪರದಾಡುತ್ತಿದ್ದಾರೆ. ಆಗ್ನೇಯ ಬಂಗಾಳ ಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಹವಾಮಾನ ಇಲಾಖೆಯಿಂದ ಇಂದು (ಮಂಗಳವಾರ) – ನಾಳೆ (ಬುಧವಾರ) ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅ.17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ಜೈಲು ವಾರ ಮುಂದುವರೆದಿದೆ. 17 ಆರೋಪಿಗಳ ಪೈಕಿ ಐವರು ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಲಾಗಿದೆ. ಮತ್ತೊಂದೆಡೆ ರೇಣುಕಾಸ್ವಾಮಿ ಕುಟುಂಬಸ್ಥರು ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಕಣ್ಣೀರು ಹಾಕ್ತಿದ್ದಾರೆ. ದರ್ಶನ್, ಪವಿತ್ರಾ ಅವರ ಜಾಮೀನಿನ ತೀರ್ಪಿನ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಭಾವುಕರಾಗಿರುವ ರೇಣುಕಸ್ವಾಮಿ ತಂದೆ ಕಾಶಿನಾಥ್ ಅವರು ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ಪೊಲೀಸರು ಪ್ರಕರಣದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ನ್ಯಾಯಾಂಗದ ತೀರ್ಪು ಸ್ವಾಗತಿಸುತ್ತೇನೆ ಎಂದಿದ್ದಾರೆ. ಕೋರ್ಟ್ ತೀರ್ಪಿನ ಬಳಿಕ ಮಾತನಾಡಿದ ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ, ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಭರವಸೆ ಹೆಚ್ಚಾಗಿದೆ. ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಭರವಸೆ ಮೂಡಿದೆ. ದೇಶದ ಸಂವಿಧಾನ ಆ ರೀತಿಯಾಗಿದೆ. ನ್ಯಾಯಾಲಯ‌ ನ್ಯಾಯವನ್ನ ಎತ್ತಿ ಹಿಡಿದಿದೆ. ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 125 ದಿನ ಕಳೆದಿದೆ. ದರ್ಶನ್ ಸೋಮವಾರವಾದ್ರು ಹೊರಗೆ ಬರ್ತಾರೆ ಎಂದುಕೊಂಡವರಿಗೆ ಬಿಗ್ ಶಾಕ್ ನೀಡಿದೆ. ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಇದರಿಂದ ಸದ್ಯದ ಮಟ್ಟಿಗೆ ದರ್ಶನ್ ಜೈಲಿನಿಂದ ಹೊರಬರುವುದು ಅನುಮಾನವೇ ಆಗಿದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಅರಾಮಾಗಿದ್ದರು. ಕೆಲವೊಂದು ರೌಡಿಗಳ ಜೊತೆ ಸ್ನೇಹ ಬೆಳೆಸಿಕೊಂಡು ಬೇಕಾಗಿದ್ದು ತರಿಸಿಕೊಂಡು ತಿಂದು ಉಂಡು ನೆಮ್ಮದಿಯಾಗಿದ್ದರು. ಆದ್ರೆ ಯಾವಾಗ ದರ್ಶನ್ ರಾಜಾತಿಥ್ಯ ಪಡೆಯುತ್ತಿರುವ ಫೋಟೋ ವೈರಲ್ ಆಯ್ತೋ ಆಗಲೇ ದರ್ಶನ್ ಗೆ ನರಕ ಶುರುವಾಗಿದ್ದು. ಪರಪ್ಪನ ಅಗ್ರಹಾರ ಜೈಲಿನಿಂದ ಡೈರೆಕ್ಟ್ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಯಿತು. ಬಳ್ಳಾರಿ ಜೈಲಿಗೆ ಹೋದ ನಂತರ ಅವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಯಿತು. ಹಾಗಾಗಿ ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ಅವರು ಪ್ರಯತ್ನ ನಡೆಸಿದ್ದರು. ಆದರೆ ಅವರ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ದರ್ಶನ್ ಅವರ ಜಾಮೀನು ಅರ್ಜಿಯನ್ನು ಸೋಮವಾರ 57ನೇ ಸಿಸಿಹೆಚ್​ ನ್ಯಾಯಾಲಯ ವಜಾಗೊಳಿಸಿದೆ. ದರ್ಶನ್ ಜಾಮೀನು…

Read More

ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್ ಇದೀಗ 11 ಸೀಸನ್ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಇದೇ ಅವರ ಕೊನೆಯ ಬಿಗ್ ಬಾಸ್ ನಿರೂಪಣೆ ಎಂದು ಸುದೀಪ್ ಸೋಷಿಯಲ್ ಮೀಡಿಯಾ ಮೂಲಕ ಅಧಿಕೃತ ಮಾಹಿತಿ ನೀಡಿದ್ದಾರೆ. ಇದು ಸುದೀಪ್ ಹಾಗೂ ಬಿಗ್ ಬಾಸ್ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ. ಅಲ್ಲದೆ ಸುದೀಪ್ ಅವರ ಈ ಏಕಾಏಕಿ ನಿರ್ಧಾರಕ್ಕೆ ಕಾರಣವೇನು ಎಂಬ ಕುತೂಹಲ ಮನೆ ಮಾಡಿದೆ. ಈ ಬಗ್ಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದಾರೆ ರೂಪೇಶ್ ರಾಜಣ್ಣ ‘ಬಿಗ್ ಬಾಸ್’ ಆಯೋಜಕರ ವಿರುದ್ಧ ಹರಿಹಾಯ್ದಿದ್ದರು. ಸುದೀಪ್ ಅವರಿಗೆ ಅವಮಾನ ಆಗಿದೆ ಎಂದು ಒಂದು ದಿನದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆದರೆ, ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಈ ವಿಚಾರವನ್ನು ರೂಪೇಶ್ ರಾಜಣ್ಣ ಅವರು ವಿವರಿಸಿದ್ದಾರೆ. ಸುದೀಪ್ ಬಿಗ್…

Read More

ಹಾಸ್ಯ ಪಾತ್ರಗಳ ಮೂಲಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಅತುಲ್​ ಪರ್ಚುರೆ ಕೊನೆಯುಸಿರೆಳೆದಿದ್ದಾರೆ.ಕಳೆದ ಕೆಲ ವರ್ಷಗಳಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅತುಲ್ ಪರ್ಚುರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. 57 ವರ್ಷದ ಅತುಲ್​ ಪರ್ಚುರೆ ತಾಯಿ, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕ ಅತುಲ್​ ಖ್ಯಾತಿ ಗಳಿಸಿದ್ದರು. ಮರಾಠಿ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅತುಲ್​ ಪರ್ಚುರೆ ಸ್ವತಃ ಪ್ರತಿಭೆಯಿಂದ ಬಾಲಿವುಡ್​ ಸಿನಿಮಾಗಳಲ್ಲೂ ಅವಕಾಶ ಪಡೆದರು. ‘ಕಲ್​ಯುಗ್​​’, ‘ಗೋಲ್​ಮಾಲ್​’, ‘ಪಾರ್ಟ್ನರ್​’, ‘ಬಿಲ್ಲು ಬಾರ್ಬರ್​’, ‘ಆಲ್​ ದಿ ಬೆಸ್ಟ್​’, ‘ಆವಾರಪನ್​’, ‘ಬುಡ್ಡ ಹೋಗ ತೇರಾ ಬಾಪ್’ ಮುಂತಾದ ಹಿಂದಿ ಸಿನಿಮಾಗಳಲ್ಲಿ ಅತುಲ್​ ಪರ್ಚುರೆ ಅವರು ಅಭಿನಯಿಸಿದ್ದರು. ಲಿವರ್​ ಕ್ಯಾನ್ಸರ್​ ಇರುವುದು ಗೊತ್ತಾಗ ಬಳಿಕ ಅತುಲ್ ಪರ್ಚುರೆ ಅವರ ವೃತ್ತಿಬದುಕಿಗೆ ಅಲ್ಪವಿರಾಮ ಬಿದ್ದಿತ್ತು. ಆದರೆ ಚಿಕಿತ್ಸೆ ಪಡೆದು ಅವರು ಮತ್ತೆ ನಟನೆಯಲ್ಲಿ ತೊಡಗಿಕೊಂಡಿದ್ದರು. ಸಿನಿಮಾಗಳ ಜೊತೆ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಅವರು ಹೆಸರು ಮಾಡಿದ್ದರು.…

Read More

ಕಾಲಿವುಡ್ ನಟ ಜಯಂ ರವಿ ಹಾಗೂ ಆರತಿ ಡಿವೋರ್ಸ್ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ರವಿ ಅವರಿಗೆ ಗಾಯಕಿಯೊಂದಿಗೆ ಸಂಬಂಧ ಇರುವ ಕಾರಣಕ್ಕೆ ಡಿವೋರ್ಸ್ ನೀಡಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಪ್ರೀತಿಸಿ ಮದುವೆಯಾಗಿದ್ದ ಜಯಂ ರವಿ ಹಾಗೂ ಆರತಿ ಅವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಆದ್ರೆ ಮದುವೆಯಾದ 15ವರ್ಷಗಳ ಬಳಿಕ ಜೋಡಿ ಬೇರೆ ಬೇರೆಯಾಗೋ ನಿರ್ಧಾರ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ಆಗಿದೆ. ಜಯಂ ರವಿ ಅವರು ಇನ್​ಸ್ಟಾಗ್ರಾಮ್ ಮೂಲಕ ಪತ್ನಿ ಆರತಿ ಅವರೊಂದಿಗಿನ ವೈವಾಹಿಕ ಜೀವನ ಕೊನೆಗೊಳಿಸುತ್ತಿರುವುದಾಗಿ ಅನೌನ್ಸ್ ಮಾಡಿದರು. ಅಷ್ಟೇ ಅಲ್ಲದೆ ಈ ಪೋಸ್ಟ್ ತಕ್ಷಣ ವೈರಲ್ ಆಗಿ ಆರತಿ ರವಿ ಅವರು ಈ ಬೆಳವಣಿಗೆ ತನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದು ಇನ್ನೂ ಚರ್ಚೆಗೆ ಕಾರಣವಾಗಿತ್ತು. ಆರತಿ ರವಿ ಹಾಗೂ ಜಯಂ ರವಿ ಅವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅವರ ಪ್ರೀತಿಗೆ ಹಾಗೂ ಮದುವೆಗೆ ಮನೆಯವರಿಂದ ಅಂತಹ ಬೆಂಬಲವೇನೂ ಸಿಕ್ಕಿರಲಿಲ್ಲ. ಆದರೂ ಇವರು ಎಲ್ಲರ…

Read More