ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಇದೇ 15 ಹಾಗೂ 16 ರಂದು ನಡೆಯಲಿರುವ ಎಸ್ಸಿಒ ಶೃಂಗಸಭೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಲಾಕ್ಡೌನ್ ಘೋಷಿಸಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮದುವೆಗಳಿಗೂ ನಿಷೇಧ ಹೇರಲಾಗಿದೆ. ಬೇರೆ ದೇಶಗಳಿಂದ ಗಣ್ಯರು ಆಗಮಿಸಲಿರುವ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ಪ್ರಧಾನಿ ಲಿ ಕಿಯಾಂಗ್ ಸೇರಿದಂತೆ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 9 ವರ್ಷಗಳ ಬಳಿಕ ಜೈಶಂಕರ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇಮ್ರಾನ್ ಖಾನ್ ಅವರ ಪಕ್ಷದ ಬೆಂಬಲಿಗರ ಇತ್ತೀಚಿನ ಭಯೋತ್ಪಾದಕ ದಾಳಿಗಳು ಮತ್ತು ರಾಜಕೀಯ ಪ್ರತಿಭಟನೆಗಳಿಂದಾಗಿ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ಮಿಲಿಟರಿ ನಿಯಂತ್ರಣದಲ್ಲಿ ಭದ್ರತೆಯನ್ನು ಇರಿಸಲು ಪಾಕಿಸ್ತಾನದ ಸರ್ಕಾರ ನಿರ್ಧರಿಸಿದೆ. ಪಾಕಿಸ್ತಾನ ಸೇನೆಯ ಸುಮಾರು 10,000 ಸೈನಿಕರು ಮತ್ತು ಕಮಾಂಡೋಗಳನ್ನು ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯಲ್ಲಿ ನಿಯೋಜಿಸಲಾಗಿದೆ. ವರದಿಗಳ ಪ್ರಕಾರ, ಸ್ಥಳೀಯ ಪೊಲೀಸರು ಮತ್ತು ಇತರ ಭದ್ರತಾ ಪಡೆಗಳು ಈಗ ನೇರವಾಗಿ ಮಿಲಿಟರಿಯಿಂದ…
Author: Prajatv Kannada
ರಾಜಸ್ಥಾನ್ ರಾಯಲ್ಸ್ ತಂಡವು ಸಂಜು ಸ್ಯಾಮ್ಸನ್ ಅವರಿಗೆ ಕ್ಯಾಪ್ಟನ್ಸಿಯಿಂದ ಕೊಕ್ ನೀಡಲಾಗಿದೆ. ಇವರ ಬದಲಿಗೆ ನೂತನ ಕ್ಯಾಪ್ಟನ್ ಆಗಿ ಜೋಸ್ ಬಟ್ಲರ್ ನೇಮಕಗೊಳ್ಳಲಿದ್ದಾರೆ. ಹಾಗಾಗಿ ಸಂಜು ಸ್ಯಾಮ್ಸನ್ ಮುಂದಿನ ಸೀಸನ್ಗೆ ಬೇರೆ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ ಆಗಿ 2021ರಲ್ಲಿ ನೇಮಕ ಮಾಡಲಾಯ್ತು. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ 2 ಬಾರಿ ಸೆಮಿ ಫೈನಲ್ಸ್ ಮತ್ತು 1 ಬಾರಿ ಫೈನಲ್ ತಲುಪಿದೆ. ಕಳೆದ ಸೀಸನ್ನಲ್ಲೂ ಸಂಜು ರಾಜಸ್ಥಾನ್ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ರು. ಆದ್ರೂ ಸಂಜು ಸ್ಯಾಮ್ಸನ್ಗೆ ತಂಡದಿಂದ ಕೊಕ್ ನೀಡಲು ರಾಜಸ್ಥಾನ್ ಮುಂದಾಗಿದೆ. ಇತ್ತೀಚೆಗೆ ಹೈದರಾಬಾದ್ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಭಾರತ-ಬಾಂಗ್ಲಾದೇಶ 3ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ದಸರಾ ಹಬ್ಬದಂದು ರನ್ಗಳ ಹೊಳೆಯನ್ನೇ ಹರಿಸಿದ ಸಂಜು ಸ್ಯಾಮ್ಸನ್ 40 ಎಸೆತಗಳಲ್ಲಿ ಶತಕ ಸಿಡಿಸಿದ್ರು ಇನ್ನು, 236.17…
ಹೈದರಾಬಾದ್: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ತೆಲಂಗಾಣ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್ಪಿ) ಅಧಿಕಾರ ವಹಿಸಿಕೊಂಡಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ವರ್ಷದ ಆರಂಭದಲ್ಲಿ ಟಿ20 ವಿಶ್ವಕಪ್ ಯಶಸ್ಸು ಸೇರಿದಂತೆ ಭಾರತ ತಂಡಕ್ಕೆ ಸಲ್ಲಿಸಿದ ಸೇವೆಗಾಗಿ ಸಿರಾಜ್ ಅವರಿಗೆ ಗ್ರೂಪ್-1 ಸರ್ಕಾರಿ ಹುದ್ದೆಯನ್ನು ನೀಡಲಾಗುವುದು ಎಂದು ಘೋಷಿಸಿದ್ದರು. ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿ ಹುದ್ದೆಯ ಜೊತೆಗೆ, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 78 ರ ಬಳಿ ಸರ್ಕಾರವು 600 ಚದರ ಗಜಗಳಷ್ಟು ಭೂಮಿಯನ್ನು ಕೂಡ ಮಂಜೂರು ಮಾಡಿದೆ. ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಿತೇಂದರ್ ಅವರಿಗೆ ವರದಿ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಡಿಎಸ್ಪಿ ಹುದ್ದೆಯನ್ನು ಅಲಂಕರಿಸಿದ್ದಾರೆ. ಈ ನೇಮಕದ ಬೆನ್ನಲ್ಲೇ ಸಿರಾಜ್ ಟೀಮ್ ಇಂಡಿಯಾವನ್ನು ತೊರೆಯಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈಗ ಆರ್ಸಿಬಿ ತಂಡದ ಸ್ಟಾರ್ ವೇಗಿ ತೆಲಂಗಾಣ ಸರ್ಕಾರದ ಪೊಲೀಸ್ ಅಧಿಕಾರಿ ಆಗಿದ್ದಾರೆ. ಇವರ ಸಂಬಳ ತಿಂಗಳಿಗೆ 1,37,050 ರೂ. ಇದೆ. ಆದರೆ…
ಪತಿಯ ಪ್ರತಿಯೊಂದು ಹಂತದಲ್ಲೂ ಪತ್ನಿಯ ಸಹಕಾರ ಇದ್ದೇ ಇರುತ್ತೆ. ಅಂತದ್ದೇ ಘಟನೆಯೊಂದಕ್ಕೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ವಿಮಾನ ಹಾರಾಟದ ವೇಳೆ ಪೈಲೆಟ್ ಪತಿಗೆ ಹೃದಯಾಘಾತವಾಗಿದ್ದು ಈ ವೇಳೆ ದೈರ್ಯಗೆಡದ ಪತ್ನಿ ವಿಮಾನನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಅಕ್ಟೋಬರ್ 4ರಂದು ಈ ಘಟನೆ ನಡೆದಿದೆ. ಪೈಲಟ್ ಪತ್ನಿಯ ಮಹಾತ್ಕಾರ್ಯಕ್ಕೆ ಪ್ರತಿಯೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಟ್ವಿನ್ ಎಂಜಿನ್ ಹೊಂದಿರುವ ಬೀಚ್ಕ್ರಾಫ್ಟ್ ಕಿಂಗ್ ಏರ್ 90 ಕ್ಯಾಲಿಫೋರ್ನಿಯಾದಿಂದ ಮಾಂಟೆರೆ ಕಡೆಗೆ ಸಾಗುತ್ತಿದ್ದಾಘೆ ಈ ಘಟನೆ ಸಂಭವಿಸಿದೆ. ವಿಮಾನವನ್ನು ಆಲ್ಪರ್ ಎಂಬ ಪೈಲಟ್ ಮುನ್ನಡೆಸುತ್ತಿದ್ದರು. ಆದರೆ ಈ ವೇಳೆ ಏಕಾಏಕಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಆತನ ಪತ್ನಿ ಯವೊನ್ನೆ ಕಿನಾನೆ-ವೆಲ್ಸ್ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಕಿನಾನೆ ವೇಲ್ಸ್ ಕ್ಯಾಲಿಫೋರ್ನಿಯಾದ ಬೃಏಕರ್ಸ್ಫೀಲ್ಡ್ನಲ್ಲಿರುವ ಮೆಡೋಸ್ ಫೀಲ್ಡ್ ಏರ್ಪೋರ್ಟ್ನಲ್ಲಿ ಏರ್ಟ್ರಾಫಿಕ್ ಕಂಟ್ರೋಲ್ ಸಹಾಯದಿಂದ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾರೆ. ಆದರೆ ದುರಾದೃಷ್ಟವಶಾತ್ ಆಕೆಯ ಪತಿ ಅಷ್ಟರಲ್ಲಿ ನಿಧನರಾಗಿದ್ದಾರೆ.
ಮಲಯಾಳಂ ಚಿತ್ರರಂಗದ ಖ್ಯಾತ ನಟ ಬಾಲ ಅವರನ್ನು ಇಂದು ಬೆಳ್ಳಂಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಬಾಲ ಅವರ ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಕಡವಂತರಾ ಪೊಲೀಸರು ಬಂಧಿಸಿದ್ದಾರೆ. ಬಾಲ ಅವರ ಜೊತೆಗೆ ಅವರ ಮ್ಯಾನೇಜರ್ ರಾಜೇಶ್ ಮತ್ತು ಮತ್ತೊಬ್ಬ ಆರೋಪಿ ಅನಂತಕೃಷ್ಣನ್ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ನಿಂದನೆ ಮತ್ತು ಕಿರುಕುಳ ನೀಡಿದ ಆರೋಪ ಮೇಲೆ ಬಂಧಿಸಲಾಗಿದೆ. ಬಾಲಾ ಅವರನ್ನು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗಿದೆ. ಇಂದು ಬೆಳಗ್ಗೆ ಈ ಬಂಧನ ನಡೆದಿದೆ. ಕೆಲವು ತಿಂಗಳುಗಳಿಂದ ಬಾಲಾ ಮತ್ತು ಅವರ ಮಾಜಿ ಪತ್ನಿ ಅಮೃತಾ ಸುರೇಶ್ ನಡುವಿನ ಭಿನ್ನಾಭಿಪ್ರಾಯ ಉಂಟಾಗಿದೆ. ಅಮೃತಾ ತನ್ನ ಮದುವೆಯ ಸಂದರ್ಭದಲ್ಲಿ ಎದುರಿಸಿದ ಕೌಟುಂಬಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ್ದರು. ಏತನ್ಮಧ್ಯೆ, ಬಾಲಾ ಮತ್ತು ಅಮೃತಾರ ಮಾಜಿ ಡ್ರೈವರ್ ಗಂಭೀರ ಆರೋಪ ಮಾಡಿದ್ದಾರೆ. ನಟನ ಬಳಿ ನಾನು ಕೆಲಸ ಮಾಡುವಾಗ ತನ್ನ ಹೆಂಡತಿಯೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ನೋಡಿದ್ದೇನೆ ಎಂದು ಆರೋಪಿಸಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಚಿ.ದತ್ತರಾಜ್ ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ದತ್ತರಾಜ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ಚಿ.ದತ್ತರಾಜ್, ಖ್ಯಾತ ಸಾಹಿತಿ ಚಿ.ಉದಯಶಂಕರ್ ಸಹೋದರ. ರಾಜ್ ಕುಮಾರ್ ಕುಟುಂಬದ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ದತ್ತರಾಜ್ ರಾಜ್ ಕುಮಾರ್ ನಟನೆಯ ಕೆರಳಿದ ಸಿಂಹ, ಕಾಮನಬಿಲ್ಲು, ಅದೇ ಕಣ್ಣು, ಶೃತಿ ಸೇರಿದಾಗ, ಶಿವರಾಜಕುಮಾರ್ ಅಭಿನಯದ ಮೃತ್ಯುಂಜಯ, ಆನಂದ ಜ್ಯೋತಿ ಹಾಗೂ ಮಂಜುಳ ಅವರು ನಟಿಸಿದ್ದ ‘ರುದ್ರಿ’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಇಂದು ಮಧ್ಯಾಹ್ನ 1.30ಕ್ಕೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲೋಕಾಯುಕ್ತ ವಿಚಾರಣೆಗೆ ಒಳಪಡಿಸುವಂತೆ ಒಳಪಡಿಸುವಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮನವಿ ಸಲ್ಲಿಸಿದ್ದಾರೆ. ಸೋಮವಾರ ಮೈಸೂರಿನ ಲೋಕಾಯುಕ್ತ ಕಚೇರಿಗೆ ಬಂದು ಸ್ನೇಹಮಹಿ ಕೃಷ್ಣ, ಲೋಕಾಯುಕ್ತಕ್ಕೆ ಪತ್ರದ ಮೂಲಕ ಮನವಿ ಸಲ್ಲಿಕೆ ಮಾಡಿದ್ದಾರೆ. ಅಕ್ಟೋಬರ್ 10ರಂದು ವಾಟ್ಸಪ್ ಮೂಲಕ ಮನವಿ ಮಾಡಿದ್ದ ಸ್ನೇಹಮಯಿ ಕೃಷ್ಣ ಸೋಮವಾರ ಖುದ್ದು ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿದ್ದರಾಮಯ್ಯರನ್ನು ವಿಚಾರಣೆಗೆ ಒಳಪಡಿಸಬೇಕು. ಅವರು ಸಾಕ್ಷಿಗಳ ನಾಶ ಮಾಡುತ್ತಿದ್ದಾರೆ. ಮುಚ್ಚಿಡುತ್ತಿದ್ದಾರೆ. ಭಾಷಣದಲ್ಲಿ ಪ್ರಚೋದನೆ ನೀಡುತ್ತಿದ್ದಾರೆ. ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ವಿಚಾರಣೆಗೆ ಒಳಪಡಿಸಿ, ಬಂಧಿಸಿ ಎಂದು ಮನವಿ ಮಾಡಿದ್ದಾರೆ. ಲೋಕಾಯುಕ್ತ ಕಚೇರಿಗೆ ಕೂಡಲೆ ಸಿಸಿಟಿವಿ ಅಳವಡಿಸಿ, ಕೆಪಿಸಿಸಿ ವಕ್ತಾರರು ಪದೇ ಪದೇ ಲೋಕಾಯುಕ್ತ ಕಚೇರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ದೂರಿದ್ದಾರೆ.
ಹುಬ್ಬಳ್ಳಿ:- ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಮಾತ್ರವಲ್ಲ 42 ಕೇಸ್ ಗಳನ್ನು ಹಿಂಪಡೆಯಲಾಗಿದೆ. ಪ್ರಮುಖವಾಗಿ ಹಳೇ ಹುಬ್ಬಳ್ಳಿ ಕೇಸ್ ಬಗ್ಗೆ ಬಿಜೆಪಿಯವರು ಮಾತನಾಡುತ್ತಾರೆ. ಕ್ಯಾಬಿನೆಟ್ ನಲ್ಲಿ ಉಪಸಮಿತಿ ಮಾಡಿ, ವರದಿ ಕೊಟ್ಟಿದೆ ಒಪ್ಪಿಕೊಂಡಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು. ನಗರದಲ್ಲಿ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನವರು ಮುಸ್ಲಿಂ ಓಲೈಕೆ ಮಾಡುತ್ತಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೋರ್ಟ್ ಏನ್ ಹೇಳುತ್ತೆ ಎಂಬುದು ವಾದ ಎಂದರು. ಬಿಜೆಪಿಯವರು ಬಿಲ್ಕೀಸ್ ಬಾನು ಕೇಸ್ ನಲ್ಲಿ ಎರಡು ವರ್ಷಾ ಮುಂಚೆನೆ ಬಿಟ್ಟರು, ಯಾವ ಆಧಾರದ ಮೇರೆಗೆ ಬಿಟ್ಟರು. ಶಿಕ್ಷೆ ಮುಗಿಯದೆ ಗುಜರಾತ್ ಸರ್ಕಾರ ಅವರನ್ನು ಬಿಟ್ಟಿತು ಎಂದರು. ಬಾಬಾ ರಾಮ್ ರಹೀಮ್ 15 ಬಾರಿ ಪೇರೋಲ್ ನಲ್ಲಿ ಹೊರ ಬರ್ತಾರೆ. ಇದರ ಅರ್ಥ ಏನು ? ಇದು ತುಷ್ಟಿಕರಣ ರಾಜಕಾರಣ ಅಲ್ಲವಾ? ಎಂದು ಪ್ರಶ್ನಿಸಿದರು. ಸಹಜವಾಗಿ ಈ ರೀತಿ ಬಿಡುಗಡೆಯಾಗುವುದು ಇದೆ. ಮುಸ್ಲಿಂ ಅಂತ ಅಂದಕೂಡಲೇ ಬಿಜೆಪಿಯವರು ಬರ್ತಾರೆ. ಬಿಜೆಪಿ ಆರೋಪಕ್ಕೆ…
ಬೆಂಗಳೂರು ಗ್ರಾಮಾಂತರ:- ಉದ್ಯಮಿ ಮನೆಗೆ ನುಗ್ಗಿ 15 ಲಕ್ಷ ದೋಚಿ ಖದೀಮರು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದಲ್ಲಿ ಜರುಗಿದೆ. ಲಾಲಾರಾಮ್ ಎಂಬುವವರು ದಸರಾ ಹಬ್ಬದ ಪೂಜೆ ಹಾಗೂ ಭಜನೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ತೆರಳಿದ್ದರು. ಈ ವೇಳೆ ಮನೆ ಬಾಗಿಲು ಮುರಿದು 15 ಲಕ್ಷ ರೂಪಾಯಿ ಮೌಲ್ಯದ 355 ಗ್ರಾಂ ಚಿನ್ನಾಭರಣ, 5 ಕೆಜಿ ಬೆಳ್ಳಿ ಹಾಗೂ 70 ಸಾವಿರ ನಗದು ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಹಿಂದೆ ಎರಡು ಬಾರಿ ಟ್ರಂಪ್ ಹತ್ಯೆಗೆ ಯತ್ನ ನಡೆದಿತ್ತು. ಇದೀಗ ಮೂರನೇ ಭಾರಿ ಮತ್ತೆ ದುಷ್ಕರ್ಮಿಗಳು ಡೋನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಭಾನುವಾರ ಕ್ಯಾಲಿಪೋರ್ನಿಯಾದ ಕೋಚೆಲ್ಲಾ ವ್ಯಾಲಿಯಲ್ಲಿ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ನಕಲಿ ಪಾಸ್‌ನೊಂದಿಗೆ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಡುಗಳಿಂದ ತುಂಬಿಕೊಂಡಿದ್ದ ಶಾಟ್‌ಗನ್ ಹಾಗೂ ಹ್ಯಾಂಡ್‌ಗನ್ ಅನ್ನು ಬಂಧಿತನಿಂದ ವಶಪಡಿಸಿಕೊಳ್ಳಲಾಗಿದೆ. ನಾವು ಭಾಗಶಃ ಟ್ರಂಪ್ ಅವರ ಮತ್ತೊಂದು ಹತ್ಯೆ ಯತ್ನವನ್ನು ತಡೆದಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಬಂಧಿತನನ್ನು 49 ವರ್ಷದ ಲಾಸ್ ವೇಗಾಸ್ ಮೂಲದ ವೆಮ್ ಮಿಲ್ಲರ್ ಎಂದು ಗುರುತಿಸಲಾಗಿದ್ದು ಈತ ನಕಲಿ ಪ್ರೆಸ್ ಪಾಸ್ ಇಟ್ಟುಕೊಂಡು ರ್ಯಾಲಿ ಪ್ರವೇಶಿಸಿದ್ದ. ಆತನನ್ನು ಆರಂಭದಲ್ಲೇ ತಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಕಳೆದ ಜುಲೈ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಟ್ರಂಪ್ ಅವರ ಹತ್ಯೆ ಯತ್ನ ನಡೆದಿತ್ತು.…