ಬಿಗ್ ಬಾಸ್ ಸೀಸನ್ 11ರಿಂದ ಹೊರ ಬಂದಿರುವ ಲಾಯರ್ ಜಗದೀಶ್ ಅವರಿಗೆ ದರ್ಶನ್ ಅಭಿಮಾನಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಈಗಾಗಲೇ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟ ದರ್ಶನ್, ಹಾಗೂ ದರ್ಶನ್ ಅಭಿಮಾನಿ ರಿಷಿ ವಿರುದ್ಧ ಜಗದೀಶ್ ದೂರು ನೀಡಿದ್ದಾರೆ. ಇದೀಗ ದರ್ಶನ್ ವಿರುದ್ಧ ಮತ್ತೆ ಜಗದೀಶ್ ಗುಡುಗಿದ್ದಾರೆ. ಅಣ್ಣಾವ್ರ ಮಕ್ಕಳಿಗೆ ನೀನು ಹೋಲಿಕೆ ಮಾಡಿಕೊಳ್ತಿ. ಅಣ್ಣಾವ್ರ ಮಕ್ಕಳು ಯಾರು ನಿನ್ನ ತರ ಜೈಲಿಗೆ ಹೋಗಿಲ್ಲ. ಅಂದು ಅಣ್ಣಾವ್ರ ಫ್ಯಾಮಿಲಿ ಬಗ್ಗೆ ಮಾತಾಡ್ತಿದ್ದೆ. ನೀನು ನಿನ್ನ ಪಟಾಲಂ ಚಿತ್ರರಂಗವನ್ನ GPA ಮಾಡ್ಕೊಂಡಿದ್ದೀರ. ನಿನ್ನ ಹೆಂಡತಿಗೆ ಮೇಸೇಜ್ ಮಾಡಿದ್ರು ಅಂತ ನಿನಗೆ ಕೋಪ ಬಂತು ನನ್ನ ಹೆಂಡತಿ ಮಕ್ಕಳ ವಿಚಾರಕ್ಕೆ ಬಂದ್ರೆ ನಿನಗೆ ನನ್ನ ತಾಖತ್ ಏನು ಅಂತ ತೋರಿಸ್ತೀನಿ ಎಂದು ಚಿಟಿಕೆ ಹೊಡೆದು ದರ್ಶನ್‌ಗೆ ಎಚ್ಚರಿಕೆ ನೀಡಿದ್ದಾರೆ. ದರ್ಶನ್ ಬಗ್ಗೆ ಯಾಕ್ ಏಕವಚನದಲ್ಲಿ ಮಾತಾಡ್ತೀಯಾ, ಮರ್ಡರ್ ಆಗ್ತೀಯಾ ಎಂದೆಲ್ಲಾ ಮೆಸೇಜ್ಗಳು ಬರ್ತಿವೆ ಎಂದು ಲಾಯರ್ ಜಗದೀಶ್ ಆರೋಪ ಮಾಡಿದ್ದಾರೆ.…
Author: Prajatv Kannada
ಹುಣಸೆ ಮರವು ದೊಡ್ಡ ಮತ್ತು ಬಲವಾದ ಮರವಾಗಿದೆ. ಇದು ಅಗಾಧವಾಗಿ ಬೆಳೆಯುವ ಮರಗಳ ಜಾತಿಗೆ ಸೇರಿರುವ ಮರವಾಗಿದೆ. ಇದರ ಎಲೆಗಳು ಚಿಕ್ಕದಾಗಿರುತ್ತವೆ, ವೃತ್ತಾಕಾರದಲ್ಲಿರುತ್ತವೆ ಮತ್ತು ಹೂವುಗಳು ಕೆಂಪು ಅಥವಾ ಹಳದಿ ಬಣ್ಣದಲ್ಲಿರುತ್ತವೆ. ಹುಣಸೆ ಹಣ್ಣುಗಳು ಉದ್ದ ಮತ್ತು ತೆಳ್ಳಗಿರುತ್ತವೆ, ಬೀಜಗಳನ್ನು ಹೊಂದಿರುವ ಈ ಹಣ್ಣು ಕೆಲವೊಮ್ಮೆ ಹುಳಿ ಅನುಭವವನ್ನು ನೀಡುತ್ತದೆ. ಹುಣಸೆ ಹಣ್ಣಿನ ಸೇವನೆಯು ಭಕ್ಷ್ಯಗಳಿಗೆ ಸಿಹಿ ಮತ್ತು ಹುಳಿ ರುಚಿಯನ್ನು ನೀಡುತ್ತದೆ ಮತ್ತು ಇದನ್ನು ಚಟ್ನಿಗಳಲ್ಲಿ, ಉಪ್ಪಿನಕಾಯಿಗಳಲ್ಲಿ, ಮಸಾಲೆಯುಕ್ತ ಆಹಾರಗಳಲ್ಲಿ ಬಳಸಲಾಗುತ್ತದೆ. ಹೌದು ಹುಣಸೆ ಹಣ್ಣಿಗೆ ಅಡುಗೆ ಮನೆಯಿಂದ ಹಿಡಿದು, ದೊಡ್ಡ ದೊಡ್ಡ ಔಷಧ ಕಾರ್ಖಾನೆಗಳವರೆಗೆ ಉತ್ತಮ ಬೇಡಿಕೆ ಇದೆ. ಆದರೆ ಈ ಬೆಳೆ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಇದೊಂದು ರೀತಿಯಲ್ಲಿ ಸದ್ದಿಲ್ಲದೆ ಆದಾಯ ಮಾಡುವ ವಿಧಾನ. ಹಿಂದಿನ ಕಾಲದಲ್ಲಿ ಊರ ಹೊರಗಿನ ಅಥವಾ ವ್ಯವಸಾಯ ಮಾಡಲಾಗದ ಪ್ರದೇಶಗಳಲ್ಲಿ ಹುಣಸೆ ಮರಗಳನ್ನು ಬೆಳೆಸಲಾಗುತ್ತಿತ್ತು, ರಾಜ- ಮಹಾರಾಜರು, ಜಮೀನ್ದಾರರು, ಪಾಳೇಗಾರರು ಹತ್ತಾರು ಹುಣಸೆ ತೋಪುಗಳನ್ನು ಹೊಂದಿರುತ್ತಿದ್ದರು. ಏಕೆಂದರೆ ಯಾವುದೇ ಗೊಬ್ಬರ ಅಥವಾ…
ಭೋಪಾಲ್: ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯಿಂದ ಮಹಿಳೆಯರಿಗೆ ಆದ್ಯತೆ ನೀಡುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ. ಚುನಾವಣೆಯ ಜೊತೆಗೆ, ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಅದರಂತೆ ಮಧ್ಯಪ್ರದೇಶ ಕ್ಯಾಬಿನೆಟ್ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಪ್ರಮಾಣವನ್ನು 35% ಏರಿಸುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ಇಲ್ಲಿಯವರೆಗೂ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಕಲ್ಪಿಸಲಾಗುತ್ತಿತ್ತು. ಸರ್ಕಾರ ಈಗ ಕೋಟಾದಲ್ಲಿ ಹೆಚ್ಚುವರಿಯಾಗಿ 2% ನೀಡಿದೆ. ಕಾಯ್ದೆಯಾಗಿ ಜಾರಿ ಬಂದರೆ ಮಹಿಳಾ ಮೀಸಲಾತಿ ಪ್ರಮಾಣ 35% ಏರಿಕೆಯಾಗಲಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅನುಮೋದಿಸಲಾಗಿದೆ. ಮಧ್ಯಪ್ರದೇಶದಲ್ಲಿ ಸರ್ಕಾರಿ ಸೇವೆಗಳ ಎಲ್ಲಾ ನೇಮಕಾತಿಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು 33% ರಿಂದ 35% ಗೆ ಹೆಚ್ಚಿಸಲಾಗಿದೆ. ಇದು ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಮಧ್ಯಪ್ರದೇಶದ ಡಿಸಿಎಂ ರಾಜೇಂದ್ರ ಶುಕ್ಲಾ ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ರಾಜ್ಯದಲ್ಲಿ 254 ಹೊಸ ರಸಗೊಬ್ಬರ ಮಾರಾಟ ಕೇಂದ್ರಗಳನ್ನು ತೆರೆಯಲು ಸಂಪುಟ ಅನುಮೋದನೆ…
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ನಾಲ್ಕು ವರ್ಷಗಳೇ ಕಳೆದಿದೆ. ಇದುವರೆಗೂ ಸುಶಾಂತ್ ರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿದು ಬಣದಿಲ್ಲ. ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದ್ದು ಇನ್ನೂ ಕಾರಣ ಬಹಿರಂಗವಾಗಿಲ್ಲ. ನಟನ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂದು ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಆಯಾಮದಲ್ಲೂ ಸಹ ಈಗಾಗಲೇ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆದರೆ ಇದುವರೆಗೆ ಸತ್ಯಾಂಶ ಹೊರ ಬಂದಿಲ್ಲ. ಈ ಮಧ್ಯೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಿಂಗ್ ಅವರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಅನ್ನು ಆಸ್ಪತ್ರೆಯಲ್ಲಿ ಬದಲು ಮಾಡಲಾಗಿದೆ. ಇದನ್ನು ಆತ್ಮಹತ್ಯೆ ಎನ್ನುವಂತೆ…
ನವದೆಹಲಿ: ಖಾಸಗಿ ಆಸ್ತಿಗಳ ಮೇಲೆ ಸರ್ಕಾರಿ ಹಕ್ಕಿನ ವ್ಯಾಪ್ತಿ ಎಲ್ಲಿಯವರೆಗೆ ಇದೆ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಎಲ್ಲಾ ಖಾಸಗಿ ಹಕ್ಕುಗಳ ಮೇಲೆ ರಾಜ್ಯ ಸರ್ಕಾರಗಳ ಮೇಲೆ ಹಕ್ಕುಗಳು ಇರುವುದಿಲ್ಲ ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ, ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನ್ಯಾ. ಕೃಷ್ಣಯ್ಯರ್ ನೀಡಿದ್ದ ತೀರ್ಪನ್ನು 8:1 ಬಹುಮತದೊಂದಿಗೆ ವಜಾ ಮಾಡಿದೆ. ಸಂವಿಧಾನದ ಆರ್ಟಿಕಲ್ 39(ಬಿ)ಪ್ರಕಾರ ಖಾಸಗಿಯವರ ಮಾಲೀಕತ್ವದ ಎಲ್ಲಾ ಸಂಪನ್ಮೂಲಗಳನ್ನು ವಶಕ್ಕೆ ಪಡೆಯುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇರಲ್ಲ ಎಂದು ಸಿಜೆಐ ಚಂದ್ರಚೂಡ್ ನೇತೃತ್ವದ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನಿಕ ಪೀಠ ಸ್ಪಷ್ಟವಾಗಿ ತಿಳಿಸಿದೆ. ಕೆಲವೇ ಪ್ರಕರಣಗಳಲ್ಲಿ ಇದಕ್ಕೆ ವಿನಾಯ್ತಿ ಇರಲಿದೆ ಎಂದು ಸಾಂವಿಧಾನಿಕ ಪೀಠ ತಿಳಿಸಿದೆ. ಈ ವಿಚಾರವನ್ನು 1950ರ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗದು. ಅಂದು ರಾಷ್ಟ್ರೀಕರಣ ನಡೆದಿತ್ತು. ಆದರೆ ಇಂದು ಹೂಡಿಕೆ ವಾಪಸಾತಿ ನಡೆಯುತ್ತಿದೆ. ಖಾಸಗಿ ಹೂಡಿಕೆ ಇದೆ. ಇದು ಪರಿವರ್ತನೆ. ಹೀಗಾಗಿ ಇಂದಿನ ಸ್ಥಿತಿಗೆ ಅನುಗುಣವಾಗಿ…
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಮಂಗಳವಾರ ಆರಂಭವಾದ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಚುನಾವಣೆಗಳು ಕ್ರಮೇಣ ಮುಕ್ತಾಯಗೊಳ್ಳುತ್ತಿವೆ. ಅಲಬಾಮಾ, ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ, ಮಿಸೌರಿ, ಒಕ್ಲಹೋಮ, ಸೌತ್ ಕೆರೊಲಿನಾ, ಟೆನ್ನೆಸ್ಸೀ ಮತ್ತು ವೆಸ್ಟ್ ವರ್ಜೀನಿಯಾದಲ್ಲಿ ಇದುವರೆಗೆ ಟ್ರಂಪ್‌ಗೆ ಜಯಗಳಿಸಿದೆ ಎಂದು US ಮಾಧ್ಯಮಗಳು ವರದಿ ಮಾಡಿವೆ. ಕಮಲಾ ಹ್ಯಾರಿಸ್ ಇದುವರೆಗೆ ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ವರ್ಮೊಂಟ್ ಮತ್ತು US ರಾಜಧಾನಿ ವಾಷಿಂಗ್ಟನ್ DC ಅನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ, ಕಮಲಾ ಹ್ಯಾರಿಸ್ 99 ಚುನಾವಣಾ ಮತಗಳನ್ನು ಪಡೆದ್ರೆ, ಟ್ರಂಪ್‌ಗೆ 178 ಚುನಾವಣಾ ಮತಗಳನ್ನು ಪಡೆದಿದ್ದಾರೆ. ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಮ್ಯಾಜಿಕ್ ಸಂಖ್ಯೆ 270 ಆಗಿದೆ. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಡೊನಾಲ್ಡ್ ಟ್ರಂಪ್ ಮಂಗಳವಾರ ಓಹಿಯೋ ಮತ್ತು ಟೆಕ್ಸಾಸ್ ಎರಡನ್ನೂ ಗೆದ್ದಿದ್ದು, ಒಟ್ಟು 57 ಚುನಾವಣಾ ಮತಗಳನ್ನು ಗಳಿಸಿದ್ದಾರೆ. ಓಹಿಯೋದಲ್ಲಿ, ಮಾಜಿ ಅಧ್ಯಕ್ಷರು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ…
ಬಿಗ್ ಬಾಸ್ ಸೀಸನ್ ಕ್ಕೆ 11 ಎಂಟ್ರಿಕೊಟ್ಟಿದ್ದ ಲಾಯರ್ ಜಗದೀಶ್ ದೊಡ್ಮನೆಗೆ ಕಾಲಿಟ್ಟ ಸ್ಫೀಡ್ ನಲ್ಲಿಯೇ ಮನೆಯಿಂದ ಹೊರ ಬಂದಿದ್ದರು. ವಕೀಲ ಜಗದೀಶ್ ಅವರನ್ನು ಕೇವಲ ಎರಡೂವರೆ ವಾರಗಳಲ್ಲಿಯೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಜಗದೀಶ್ ಮತ್ತಷ್ಟು ಸದ್ದು ಮಾಡ್ತಿದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ 5 ತಿಂಗಳು ಜೈಲಿನಲ್ಲಿದ್ದು, ಜಾಮೀನಿನ ಮೇಲೆ ಚಿಕಿತ್ಸೆ ಪಡೆಯಲು ಹೊರಗೆ ಬಂದಿರುವ ನಟ ದರ್ಶನ್ ವಿರುದ್ಧ ಜಗದೀಶ್ ಕೋಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದರ್ಶನ್ ಮೇಲೆ ದೂರು ದಾಖಲಿಸಿದ ಲಾಯರ್ ಜಗದೀಶ್, ನಟ ದರ್ಶನ್ s/o ಶ್ರೀನಿವಾಸ್ ತೂಗುದೀಪ ಹಾಗೂ ಆತನ ಅಭಿಮಾನಿಗಳಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಲಾಗಿದೆ. ನಾನು ದರ್ಶನ್ ವಿರುದ್ಧ ಏಕವಚನದಲ್ಲಿ ಮಾತನಾಡಿದ್ದೇನೆಂದು ದರ್ಶನ್ ಅಭಿಮಾನಿಗಳು ನನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಕಳೆದ 2 ದಿನಗಳಲ್ಲಿ ಬರೋಬ್ಬರಿ 1,000ಕ್ಕೂ ಅಧಿಕ ಬಾರಿ ಕರೆ ಮಾಡಿದ್ದಾರೆ. ಇದೆಲ್ಲದಕ್ಕೂ…
ಸ್ಯಾಂಡಲ್ ವುಡ್ ನ ಬೆಸ್ಟ್ ಜೋಡಿಗಳಲ್ಲಿ ಒಂದು ಯಶ್ ಹಾಗೂ ರಾಧಿಕಾ ಪಂಡಿತ್. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ಇದೀಗ ಮುದ್ದಾಗಿ ಸಂಸಾರ ಮಾಡುತ್ತಿದ್ದಾರೆ. ಅತ್ತ ಕೋಟಿ ಕೋಟಿ ಬಜೆಟ್ ನ ಸಿನಿಮಾಗಳಲ್ಲಿ ಯಸ್ ಬ್ಯುಸಿಯಾಗಿದ್ರೆ ಇತ್ತ ನಟಿ ರಾಧಿಕಾ ಪಂಡಿತ್ ಪತಿಗೆ ಬೆನ್ನುಲುಭಾಗಿ ನಿಂತಿದ್ದಾರೆ. ಜೊತೆಗೆ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಂದ ಹಾಗೆ ಪ್ರತಿ ಬಾರಿಯೂ ಯಶ್ ಗೆ ರಾಧಿಕಾ ಬಗ್ಗೆ ಕೇಳಿದಾಗೆಲ್ಲಾ ಆಕೆಯ ಬಗ್ಗೆ ಉತ್ತಮವಾಗಿಯೇ ಮಾತನಾಡಿದ್ದಾಋಎ. ‘ನನ್ನಂತಹ ವಿಚಿತ್ರ ಆಲೋಚನೆ ಇರುವ ವ್ಯಕ್ತಿಯನ್ನು ಸಹಿಸಿಕೊಳ್ಳುವುದು ಸುಲಭ ಅಲ್ಲ. ಈ ನಿಟ್ಟಿನಲ್ಲಿ ನನಗೆ ರಾಧಿಕಾ ಬಾಳಸಂಗಾತಿಯಾಗಿ ಸಿಕ್ಕಿರುವುದಕ್ಕೆ ನಾನು ಅದೃಷ್ಟವಂತ. ನನ್ನ ಯಾವ ನಿರ್ಧಾರಕ್ಕೂ ಅವರು ಅಡ್ಡಿ ಬರುವುದಿಲ್ಲ. ಅವರಿಗೆ ಹೆಚ್ಚು ಸಮಯ ನೀಡಬೇಕು ಅನಿಸುತ್ತದೆ. ರಾಧಿಕಾ ನನಗೆ ಮೊದಲು ಬೆಸ್ಟ್ ಫ್ರೆಂಡ್, ನಂತರ ಹೆಂಡತಿ’ ಎಂದು ಹೇಳಿದ್ದರು. ಯಶ್ ತನ್ನ ನೂರಾರು ಕೋಟಿ ಬಜೆಟ್‌ನ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಮನೆಯ ಕಾರ್ಯಕ್ರಮಗಳಲ್ಲಿ…
ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ಎಂಟ್ರಿಕೊಟ್ಟ ಗಾಯಕ ಹನುಮಂತನ ಆಟ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಿದೆ. ಬಂದ ಮೊದಲ ವಾರ ಸೈಲೆಂಟ್ ಇದ್ದ ಹನುಮಂತ ಈಗ ತನ್ನ ಆಟದ ಪಥ ಬದಲಿಸಿದ್ದಾರೆ. ಬಿಗ್‌ಬಾಸ್ ಆಟವನ್ನು ಅರಿತುಕೊಂಡು ಆಡುತ್ತಿದ್ದು ಹನುಮಂತನ ಆಟಕ್ಕೆ ಪ್ರತಿಯೊಬ್ಬರು ಫಿದಾ ಆಗಿದ್ದಾರೆ. .6ನೇ ವಾರದ ಮೂರನೇ ದಿನ ಹನುಮಂತ ತೆಗೆದುಕೊಂಡ ನಿರ್ಧಾರದಲ್ಲಿ ಹನುಮ ಬಿಗ್‌ಬಾಸ್ ಅನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಎರಡನೇ ಬಾರಿ ಮನೆಯ ಕ್ಯಾಪ್ಟನ್ ಆಗಿರುವ ಹನುಮಂತ ನಾಯಕತ್ವವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. 6ನೇ ವಾರಕ್ಕೆ ಮನೆಯಲ್ಲಿ ಕೆಂಪು, ಹಳದಿ, ಹಸಿರು,ನೀಲಿ ತಂಡವನ್ನು ಮಾಡಲಾಗಿದ್ದು ಒಂದೊಂದು ತಂಡದಲ್ಲಿ ತಲಾ ಮೂರು ಜನ ಇದ್ದಾರೆ. ಬಿಗ್‌ಬಾಸ್ ತಂಡಗಳಿಗೆ ಟಾಸ್ಕ್ ನೀಡಿ ಗೆದ್ದ ತಂಡಕ್ಕೆ ಸಿಕ್ಕಾಪಟ್ಟೆ ಸೌಕರ್ಯ ನೀಡಿದೆ. ಗೆದ್ದ ತಂಡ ಇಮ್ಯೂನಿಟಿ ಕಾರ್ಡ್, ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್, ಲಕ್ಷುರಿ ಕಾರ್ಡ್, ಗುಡ್‌ನೈಟ್ ಕಾರ್ಡ್, ಕಿಕ್‌ಔಟ್ ಕಾರ್ಡ್, ಪನಿಷ್‌ಮೆಂಟ್ ಕಾರ್ಡ್ (ಗೆದ್ದವರಿಗೆ ಸೋತವರು ಸೇವೆ) ಇವುಗಳನ್ನು…
ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು 36 ನೇ ಜನ್ಮದಿನದ ಸಂಭ್ರಮದಲ್ಲಿ ನಟಿ ಅನುಷ್ಕಾ ಶೆಟ್ಟಿ ಮಗನ ಫೋಟೋವನ್ನು ಶೇರ್ ಮಾಡಿದ್ದಾರೆ. ಇಂದು ವಿರಾಟ್ ಪತ್ನಿ, ಮಕ್ಕಳೊಡನೆ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ವೇಳೆ ಇದೇ ಮೊದಲ ಬಾರಿಗೆ ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಮಗ ಆಕಾಯ್‌ನ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಗಳು ವಾಮಿಕಾಳೂ ಆ ಫೋಟೊದಲ್ಲಿ ಕಾಣಿಸಿಕೊಂಡಿದ್ದಾಳೆ. ವಿರಾಟ್ ಅವರು ತಮ್ಮ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಆಡುತ್ತಿರುವ ಫೋಟೊ ಇದಾಗಿದ್ದು ಮಗನ ಫೋಟೊವನ್ನು ಇದೇ ಮೊದಲ ಬಾರಿಗೆ ಅನುಷ್ಕಾ ಅವರು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಇದೇ ವರ್ಷ ಫೆಬ್ರುವರಿ 15ರಂದು ಅನುಷ್ಕಾ ಅವರು ಆಕಾಯ್‌ನಿಗೆ ಜನ್ಮ ನೀಡಿದ್ದರು. ಇನ್ನು, ಕೊಹ್ಲಿ ಹಾಗೂ ಅನುಷ್ಕಾ ಅವರು ಭಾರತದಲ್ಲಿ ಎಲ್ಲೇ ಹೋದರೂ ಅವರಿಗೆ ಅಭಿಮಾನಿಗಳು ಮುತ್ತಿಕ್ಕಿಕೊಳ್ಳುತ್ತಾರೆ. ಇದರಿಂದ ಅವರು ಖಾಸಗಿ ಜೀವನಕ್ಕೆ ಸಾಕಷ್ಟು ಮುಜುಗರ ಅನುಭವಿಸುತ್ತಿದ್ದಾರೆ ಎಂದು ಅನೇಕ ಸಾರಿ ವರದಿಯಾಗಿದ್ದವು. ಸದ್ಯ ಕೊಹ್ಲಿ ದಂಪತಿ ಲಂಡನ್‌ಗೆ ಮನೆ ಬದಲಾಯಿಸಿದ್ದಾರೆ ಎನ್ನಲಾಗಿದೆ.…