‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಪರಿಚಯಿಸಲಾಗಿತ್ತು. ನರಕದಲ್ಲಿ ಇದ್ದ ಮಹಿಳಾ ಸ್ಪರ್ಧಿಗಳಿಗೆ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಕೆಲವು ಮೂಲ ಸೌಕರ್ಯಗಳನ್ನು ನೀಡಿಲ್ಲ ಎಂಬ ಆರೋಪ ಕೆಲವರಿಂದ ಕೇಳಿಬಂದಿತ್ತು. ಅಲ್ಲದೇ, ಈ ಬಗ್ಗೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿತ್ತು. ಇದೀಗ ಈ ಆರೋಪಕ್ಕೆ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಅವರು ಮಹಿಳಾ ಸ್ಪರ್ಧಿಗಳಿಂದ ಉತ್ತರ ಕೊಡಿಸಿದ್ದಾರೆ. ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆಯನ್ನು ಆರಂಭಿಸುವಾಗಲೇ ಸುದೀಪ್ ಅವರು ಒಂದು ಪ್ರಶ್ನೆ ಕೇಳಿದರು. ‘ನರಕದಲ್ಲಿ ಇದ್ದಾಗ ಎಷ್ಟು ಖುಷಿ ಇತ್ತು? ಇದು ತುಂಬ ಮುಖ್ಯವಾದ ಪ್ರಶ್ನೆ. ಮಹಿಳಾ ಆಯೋಗದವರು ಆರೋಪ ಮಾಡಿದ್ದಾರೆ. ಅನ್ಯಾಯ, ಅನಾನುಕೂಲ ಆಗಿದೆ ಅಂತ ಹೇಳಿದ್ದಾರೆ. ಈ ಬಗ್ಗೆ ಉತ್ತರ ನೀವು ನೀಡಿ’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ಮಹಿಳಾ ಸ್ಪರ್ಧಿಗಳ ಪೈಕಿ ಚೈತ್ರಾ ಕುಂದಾಪುರ, ಮಾಸನಾ, ಮೋಕ್ಷಿತಾ ಪೈ,…
Author: Prajatv Kannada
ಎನ್‌ಸಿಪಿ ಹಿರಿಯ ಮುಖಂಡ, ಡಿಸಿಎಂ ಅಜಿತ್ ಪವಾರ್ ಆಪ್ತ ಹಾಗೂ ಬಾಲಿವುಡ್ ತಾರೆಯರ ಜೊತೆಗೆ ಉತ್ತಮ ಸ್ನೇಹ ಹೊಂದಿದ್ದ ರಾಜಕಾರಣಿ ಬಾಬಾ ಸಿದ್ದಿಕಿ ಅವರನ್ನು ಸುಪಾರಿ ಹಂತಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಇವರ ಹತ್ಯೆಗೆ ಬಾಲಿವುಡ್ ಮಂದಿ ಬೆಚ್ಚಿ ಬಿದ್ದಿದ್ದಾರೆ. ಸಲ್ಮಾನ್ ಖಾನ್ ಗೆ ಹೆಚ್ಚು ಆಪ್ತರಾಗಿದ್ದ ಬಾಬಾ ಸಿದ್ದಿಕಿ ಕೊಲೆಯಿಂದ ಸಲ್ಮಾನ್ ಖಾನ್ ಕಂಗಲಾಗಿದ್ದಾರೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿರುವಾಗಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ. ಈ ಮಧ್ಯೆ ಮತ್ತೊಂದು ಪೋಸ್ಟ್ ವೈರಲ್ ಆಗಿದೆ. ಲಾರೆನ್ಸ್ ಬಿಷ್ಣೋಯ್ಸ್ ಗ್ಯಾಂಗ್ನವರು ಎನ್ನಲಾದ ವ್ಯಕ್ತಿಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಅದರ ಸ್ಕ್ರೀನ್ ಶಾಟ್ ವೈರಲ್ ಆಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಬಾಬಾ ಸಿದ್ಧಿಕಿ ಮತ್ತು ಸಲ್ಮಾನ್ ಖಾನ್ ನಡುವೆ ಆಪ್ತ ಒಡನಾಟ ಇತ್ತು. ಅನೇಕ ಸಂದರ್ಭಗಳಲ್ಲಿ ಬಾಬಾ ಸಿದ್ಧಿಕಿ ಮನೆಗೆ ಸಲ್ಲು ತೆರಳಿದ್ದರು. ಸಲ್ಮಾನ್ ಖಾನ್ಗೆ ಸಹಾಯ ಮಾಡಿದ್ದಕ್ಕಾಗಿ ಸಿದ್ಧಿಕಿಯ ಹತ್ಯೆ ನಡೆದಂತಿದೆ. ಫೇಸ್ಬುಕ್ ಪೋಸ್ಟ್ ಮೂಲಕ…
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ದರ್ಶನ್ ಗೆ ಬೆನ್ನು ನೋವು ಉಲ್ಬಣಗೊಂಡಿದ್ದು, ಈಗಾಗಲೇ ಜೈಲು ವೈದ್ಯರು ಹಾಗೂ ಹೊರಗಿನಿಂದಲೂ ಬಂದಿದ್ದ ವೈದ್ಯರು ತಪಾಸಣೆ ನಡೆಸಿದ್ದಾರೆ. ಹೀಗಿದ್ದರೂ ಚಿಕಿತ್ಸೆಗೆ ಒಪ್ಪದೆ ನಟ ದರ್ಶನ್ ನೋವಿನಲ್ಲೇ ಇದ್ದಾನೆ. ಎಮ್‌ಆರ್‌ಐ ಸ್ಕ್ಯಾನ್, ಸಿಟಿ ಸ್ಕ್ಯಾನೂ ಯಾವುದು ಬೇಡ ,ನಾನೂ ಎಲ್ಲೂ ಹೋಗಲ್ಲ ಅಂತಿದ್ದರಂತೆ. ವೈದ್ಯರು ನಟ ದರ್ಶನ್‌ಗೆ ಆಪರೇಷನ್ ಮಾಡುವ ಅಗತ್ಯವಿದೆ ಎಂದಿದ್ದಾರೆ. ಆದರೂ ಒಪ್ಪದೆ ಚಿಕಿತ್ಸೆಗೆ ನಿರಾಕರಿಸುತ್ತಿದ್ದರಂತೆ. ಇಷ್ಟು ಬೆನ್ನು ನೋವಿಗೆ ಯಾತನೆ ಅನುಭವಿಸಿದ್ದರೂ ಚಿಕಿತ್ಸೆ ಬೇಡ ಅಂತಿರೋದ್ಯಾಕೆ ಎಂದು ಜೈಲಾಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಳ್ಳಾರಿ ಜೈಲಾಧಿಕಾರಿಗಳು ತಂದಿದ್ದಾರೆ. ಮುಂದಿನ ಬಾರಿ ಕುಟುಂಬಸ್ಥರು ಬಂದಾಗ ಚಿಕಿತ್ಸೆ ಬಗ್ಗೆ ಗಮನಕ್ಕೆ ತರಲು ಸೂಚನೆ ನೀಡಲಾಗಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ಸಮಸ್ಯೆ ಬರದೆ ಎಚ್ಚರ ವಹಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಉತ್ತರ ಗಾಜಾದ ಜಬಾಲಿಯಾ ಪಟ್ಟಣದಲ್ಲಿರುವ ನಿರಾಶ್ರಿತರ ಶಿಬಿರಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 30 ಪ್ಯಾಲೆಸ್ಟೀನಿಯಾದವರು ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ. ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 12 ಜನರು ಮೃತಪಟ್ಟಿದ್ದಾರೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದು, ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಏಜೆನ್ಸಿಯ ವಕ್ತಾರ ಮಹ್ಮದ್ ಬಾಸ್ಸಲ್ ಹೇಳಿದ್ದಾರೆ. ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯಾದವರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಬಿರದಲ್ಲಿನ ಎಂಟು ಶಾಲೆಗಳ ಮೇಲೆ ಹಲವಾರು ದಾಳಿಗಳು ಕನಿಷ್ಠ 18 ಜನರನ್ನು ಕೊಂದಿವೆ ಎಂದು ಏಜೆನ್ಸಿಯ ಉತ್ತರ ಗಾಜಾ ನಿರ್ದೇಶಕ ಅಹ್ಮದ್ ಅಲ್-ಕಹ್ಲುತ್ ಹೇಳಿದ್ದಾರೆ. ಒಟ್ಟಾರೆಯಾಗಿ, ಏಜೆನ್ಸಿ ಒದಗಿಸಿದ ಅಂಕಿಅಂಶಗಳ ಪ್ರಕಾರ ದಿನದ ದಾಳಿಯಲ್ಲಿ ಕನಿಷ್ಠ 110 ಮಂದಿ ಗಾಯಗೊಂಡಿದ್ದಾರೆ. ಜಬಾಲಿಯಾ ಶಿಬಿರದಲ್ಲಿನ ಶಾಲೆಗಳ ಮೇಲಿನ ದಾಳಿಯ ಕುರಿತಾದ ಪ್ರಶ್ನೆಗಳಿಗೆ ಇಸ್ರೇಲಿ ಮಿಲಿಟರಿ ಪ್ರತಿಕ್ರಿಯಿಸಲಿಲ್ಲ ಎಂದು AFP ವರದಿ ಮಾಡಿದೆ. ಇಸ್ರೇಲ್ ಇದುವರೆಗೆ 17,000 ಮಕ್ಕಳು, 11,000 ಕ್ಕೂ ಹೆಚ್ಚು…
ಪಾಕಿಸ್ತಾನದ ಕರಾಚಿಯಲ್ಲಿ ಡಿಫ್ತೀರಿಯಾ ಕಾಯಿಲೆಯಿಂದ ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಡಿಫ್ತಿರಿಯಾವು ಗಂಭೀರ ಮತ್ತು ಸಾಂಕ್ರಾಮಿಕ ರೋಗವಾಗಿದ್ದು, ಡಿಫ್ತಿರಿಯಾ ಆಂಟಿಟಾಕ್ಸಿನ್ (ಡಿಎಟಿ) ಲಸಿಕೆಯ ಕೊರತೆಯಿಂದ ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ವ್ಯಾಕ್ಸಿನೇಷನ್ ಸಹಾಯದಿಂದ ಇದನ್ನು ತಡೆಯಬಹುದು. ಆದರೆ, ಕರಾಚಿ ಮತ್ತು ಸಿಂಧ್‌ನ ಇತರ ಭಾಗಗಳಲ್ಲಿ ಈ ರೋಗದ ವಿರುದ್ಧ ಅಗತ್ಯವಿರುವ ಆಂಟಿಟಾಕ್ಸಿನ್ ಔಷಧಿಗಳ ಕೊರತೆ ಈ ಕಾಯಿಲೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ವರದಿಯಾಗಿದೆ. ಕಳೆದ ವರ್ಷ, ಸಿಂಧ್‌ನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ 140 ಡಿಫ್ತೀರಿಯಾ ಪ್ರಕರಣಗಳು ದಾಖಲಾಗಿದ್ದವು, ಅದರಲ್ಲಿ 52 ಮಕ್ಕಳು ಮೃತಪಟ್ಟಿದ್ದರು. ಈ ವರ್ಷ 100 ಕ್ಕೂ ಹೆಚ್ಚು ಮಕ್ಕಳು ಡಿಫ್ತೀರಿಯಾದಿಂದ ಸಾವನ್ನಪ್ಪಿದ್ದಾರೆ. ಇಡೀ ಸಿಂಧ್‌ನಲ್ಲಿ ಆಂಟಿಟಾಕ್ಸಿನ್ ಔಷಧಿ ಲಭ್ಯವಿಲ್ಲ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳುತ್ತಾರೆ. ಒಂದು ಮಗುವಿಗೆ ಚಿಕಿತ್ಸೆ ನೀಡಲು 0.25 ಮಿಲಿಯನ್ ಪಾಕಿಸ್ತಾನಿ ರೂಪಾಯಿ (ಸುಮಾರು ₹1.2 ಲಕ್ಷ) ಮೌಲ್ಯದ ಆಂಟಿಟಾಕ್ಸಿನ್ ಔಷಧದ ಅಗತ್ಯವಿದೆ ಎಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ…
ವಿಶ್ವದ ಪ್ರಸಿದ್ಧ ಕಾರ್ಟೂನ್‌ಗಳಲ್ಲಿ ಡೋರೆಮಾನ್ ಕೂಡ ಒಂದು. ಇಂದಿಗೂ ಪ್ರತಿಯೊಬ್ಬ ಮಕ್ಕಳು ಕೂಡ ಈ ಡೋರೆಮಾನ್ ಕಾರ್ಟುನ್ ಇಷ್ಟ ಪಟ್ಟು ನೋಡುತ್ತಾರೆ. ಆದ್ರೆ ಡೋರೆಮನ್ ಪಾತ್ರಕ್ಕೆ ತನ್ನ ಧ್ವನಿಯ ಮೂಲಕ ಜೀವನ ನೀಡುತ್ತಿದ್ದ ಖ್ಯಾತ ನಟಿ ನೊಬುಯೊ ಒಯಾಮಾ ನಿಧನರಾಗಿದ್ದಾರೆ. ನಟಿ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್ ಗೆದ್ದು ಬಂದಿದ್ದ ನೊಬುಯೊ ಇದೀಗ ಕೊನೆಯುಸಿರೆಳೆದಿದ್ದಾರೆ. 1979 ರಲ್ಲಿ ‘ಡೋರೆಮನ್’ ಕಾರ್ಟೂನ್ ಶೋ ಪ್ರಾರಂಭವಾಯಿತು. ನೊಬುಯೊ ಒಯಾಮಾ 1979 ರಿಂದ 2005 ರವರೆಗೆ ನಟಿ ನೊಬುಯೊ ಒಯಾಮಾ ಡೋರೇಮನ್‌ಗೆ ಧ್ವನಿ ನೀಡಿದ್ದಾರೆ. ಆಕೆಯ ಧ್ವನಿಯು ಜಪಾನ್‌ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಮಕ್ಕಳಿಗೆ ಇಷ್ಟವಾಯಿತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಓಯಾಮಾ ನಿಧನರಾಗಿದ್ದಾರೆ. ಆಕೆಯ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. 1933 ರಲ್ಲಿ ಟೋಕಿಯೊದಲ್ಲಿ ಜನಿಸಿದ ನೊಬುಯೊ ಒಯಾಮಾ 1957 ರಿಂದ ಕಂಠದಾನ ಕಲಾವಿದೆಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ರು. ಅವರು ಲಸ್ಸಿ ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ನಂತರ ಅವರು 1965 ಮತ್ತು 1966 ರ ನಡುವೆ…
ಮಹಾರಾಷ್ಟ್ರದ ಮಾಜಿ ಸಚಿವ, ಎನ್‌ಸಿಪಿ ಹಿರಿಯ ಮುಖಂಡ, ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ,ನಟಿಯರ ಆತ್ಮೀಯ ಸ್ನೇಹಿತ ಬಾಬಾ ಸಿದ್ಧಿಕಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸಿದ್ದಿಕಿ ಸಾವು ಅನೇಕರಿಗೆ ಶಾಕ್ ಆಗಿದೆ. ಸಿದ್ದಿಕಿ ಹತ್ಯೆ ಬಳಿಕ ನಟ ಸಲ್ಮಾನ್ ಖಾನ್ ಗೆ ಭದ್ರತೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಬಾಬಾ ಸಿದ್ಧಿಕಿಗೆ ಸಲ್ಮಾನ್ ಖಾನ್ ಆಪ್ತರಾಗಿದ್ದರು. ಅವರ ನಿಧನದ ಬಳಿಕ ಸಲ್ಲು ಮನೆ ಮುಂಭಾಗ ಭದ್ರತೆ ಹೆಚ್ಚಿಸಲಾಗಿದೆ. ಅಲ್ಲದೇ ತಮ್ಮ ನಿವಾಸ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಯಾರೂ ಭೇಟಿ ನೀಡಬೇಡಿ ಎಂದು ಸಲ್ಮಾನ್ ಖಾನ್ ಕುಟುಂಬದವರು ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಮೊದಲು ಸಲ್ಮಾನ್ ಖಾನ್ ಹತ್ಯೆಗೆ ಪ್ರಯತ್ನ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ಭದ್ರತೆ ಹೆಚ್ಚಿಸಿಕೊಂಡಿದ್ದರು. ಈಗ ಅವರ ಆಪ್ತರಾದ ಬಾಬಾ ಸಿದ್ಧಿಕಿ ಕೊಲೆ ಆಗಿರುವುದರಿಂದ ಸಲ್ಲು ಫ್ಯಾಮಿಲಿಗೆ ಆತಂಕ ಹೆಚ್ಚಿದೆ. ಬಾಬಾ ಸಿದ್ಧಿಕಿ ಅವರ ಕುಟುಂಬಕ್ಕೆ ಈ ಕಷ್ಟದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಬೆಂಬಲವಾಗಿ ನಿಂತಿದ್ದಾರೆ. ಸಿದ್ಧಿಕಿ ಪುತ್ರ…
2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದಲ್ಲಿನ ಸತ್ಖೀರದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಿಗೆ ಕಾಣಿಕೆಯಾಗಿ ಬಂಗಾರ ಹಾಗೂ ಬೆಳ್ಳಿಯಿಂದ ಮಾಡಿದ್ದ ಕಿರೀಟವನ್ನು ಪ್ರಧಾನಿ ನೀಡಿದ್ದರು. ಇದೀಗ ಆ ಕಿರೀಟ ಕಳ್ಳತನವಾಗಿದೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಎಂದಿನಂತೆ ದೇವಸ್ಥಾನದ ಅರ್ಚಕರು ಪೂಜೆ ಮಾಡಿ ತೆರಳಿದ್ದಾರೆ. ಇದಾದ ಬಳಿಕ ದುಷ್ಕರ್ಮಿಗಳು ಮಧ್ಯಾಹ್ನ 2.00 ರಿಂದ 2.30ರ ನಡುವೆ ಈ ಕಿರೀಟ ಕಳ್ಳತನ ಮಾಡಿದ್ದಾರೆ. ದೇಗುಲದ ಸ್ವಚ್ಛತಾ ಸಿಬ್ಬಂದಿ ದೇವಿಯ ಕಿರೀಟ ಕಾಣೆಯಾಗಿರುವುದನ್ನು ಮೊದಲು ಪತ್ತೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಯಲ್ಲಿ ಉಲ್ಲೇಖಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಸ್ಪೆಕ್ಟರ್ ತೈಜುಲ್ ಇಸ್ಲಾಮ್, ದೇಗುಲದ ಸಿಸಿಟಿವಿ ಫೂಟೇಜ್ ತರಸಿಕೊಂಡು ಕಳ್ಳರ ಪತ್ತೆ ಮಾಡುತ್ತಿದ್ದೇವೆ. ಕಳುವಾಗಿರುವ ಕೀರಿಟವನ್ನು ಬೆಳ್ಳಿ ಮತ್ತು ಬಂಗಾರದಿಂದ ಮಾಡಲಾಗಿದ್ದು, ಎರಡು ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಪ್ರತೀಕವಾಗಿ ಇದನ್ನು ಸಮರ್ಪಣೆ ಮಾಡಲಾಗಿತ್ತು ಎಂದಿದ್ದಾರೆ. ಹಿಂದೂ ಪುರಾಣದ ಪ್ರಕಾರ, ಜೆಶೋರೇಶ್ವರಿ ದೇಗುಲವೂ ದೇವಿಯ 51…
ಹಲವು ದಶಕಗಳ ಬಳಿಕ ಸಹರಾ ಮರುಭೂಮಿಯಲ್ಲಿ ಧಾರಾಕಾರ ಮಳೆ ಸುರಿದಿದೆ. ಮರುಭೂಮಿಯ ತಾಳೆ ಮರಗಳು, ಮರಳು ದಿಬ್ಬಗಳ ನಡುವೆ ಜೀವ ಜಲ ಹರಿದು ಬಂದಿದ್ದು ಇದರಿಂದ ಜನ ಸಖತ್ ಖುಷಿಯಾಗಿದ್ದಾರೆ. ಮೊರಾಕ್ಕೊದ ಆಗ್ನೇಯ ದಿಕ್ಕಿನಲ್ಲಿರುವ ಮರುಭೂಮಿ ಜಗತ್ತಿನಲ್ಲೇ ಅತಿ ಶುಷ್ಕ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಮಳೆ ತೀರಾ ಅಪರೂಪ. ಮೊರಾಕ್ಕೋ ಸರ್ಕಾರದ ಪ್ರಕಾರ, ಇತ್ತೀಚೆಗೆ ಎರಡು ದಿನ ಇಲ್ಲಿನ ಕೆಲವು ಭಾಗಗಳಲ್ಲಿ ಸುರಿದ ಮಳೆ ವಾರ್ಷಿಕ ಮಳೆಯ ಸರಾಸರಿ ಪ್ರಮಾಣವನ್ನು ಮೀರಿಸಿದೆ. ಇಲ್ಲಿ ವಾರ್ಷಿಕವಾಗಿ ಸರಾಸರಿ 250 ಮಿಲಿ ಮೀಟರ್‌ಗಿಂತ (10 ಇಂಚು) ಕಡಿಮೆ ಮಳೆ ಬೀಳುತ್ತದೆ. ಹಲವು ದಶಕಗಳ ನಂತರ ಮರುಭೂಮಿ ಸಸ್ಯವರ್ಗ, ಮರಳು ದಿಬ್ಬಗಳ ನಡುವೆ ನೀರು ನಿಂತಿರುವ ದೃಶ್ಯಗಳು ನೋಡಲು ಮೋಹಕವಾಗಿದ್ದು, ಮರುಭೂಮಿಯಲ್ಲಿ ವಾಸಿಸುವ ಜನರು ಭೇಟಿ ನೀಡುವ ಪ್ರವಾಸಿಗರಿಗರು ಈ ದೃಶ್ಯವನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ. “ನಾವು ಇಂಥ ದೃಶ್ಯವನ್ನು ನೋಡಿ 30ರಿಂದ 50 ವರ್ಷಗಳೇ ಆದವು” ಎಂದು ಮೊರಾಕ್ಕೋ ಹವಾಮಾನ ನಿರ್ದೇಶನಾಲಯದ ಅಧಿಕಾರಿ ಹೊಸ್ಸೈನ್ ಯಾಬೇಬ್…
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ಉದ್ಯಮಿ ರತನ್ ಟಾಟಾ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇದೀಗ ರತನ್ ಟಾಟಾ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರತನ್ ಟಾಟಾ ಅವರು ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸ್ನೇಹ ಬಾಂಧವ್ಯದ ಸರ್ವಶ್ರೇಷ್ಠ ವ್ಯಕ್ತಿ” ಎಂದು. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ 86 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದರು. ಈ ಕುರಿತು ಇಸ್ರೇಲ್ ಪ್ರಧಾನಿ ನೆತನ್ಯಾಹು ಸಂತಾಪ ಸೂಚಿಸಿ ಮಾಡಿರುವ ಪೋಸ್ಟ್‌ನಲ್ಲಿ, ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಗೆ ರತನ್ ಟಾಟಾ ನೀಡಿರುವ ಕೊಡುಗೆಗಳನ್ನು ನೆತನ್ಯಾಹು ಉಲ್ಲೇಖಿಸಿದ್ದಾರೆ. “ನನ್ನ ಗೆಳೆಯ ಹಾಗು ಪ್ರಧಾನಿ ನರೇಂದ್ರ ಮೋದಿ ಅವರೇ, ರತನ್ ಟಾಟಾರ ನಿಧನಕ್ಕೆ ನಾನು ಮತ್ತು ಇಸ್ರೇಲ್ ಜನರು ಶೋಕ ವ್ಯಕ್ತಪಡಿಸುತ್ತಿದ್ದೇವೆ. ಅವರು ಭಾರತದ ಹೆಮ್ಮೆಯ ಪುತ್ರ. ಎರಡೂ ದೇಶಗಳ ಸ್ನೇಹ ಬಾಂಧವ್ಯ ವೃದ್ಧಿಗೆ ಕೆಲಸ ಮಾಡಿದ…