Author: Prajatv Kannada

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಎರಡು ವಾರ ಕಳೆದಿದೆ. ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕೆ  ವಿವಾದಕ್ಕೆ ಕಾರಣವಾಗುತ್ತಲದೆ ಇದೆ.ಈ ಮಧ್ಯೆ ರಾಮನಗರ ಪೊಲೀಸರು ಬಿಗ್ ​ಬಾಸ್​ಗೆ ನೊಟೀಸ್ ನೀಡಿದ್ದು, ಬಿಗ್​ ಬಾಸ್​ ಕಾರ್ಯಕ್ರಮದ ವಿಡಿಯೋಗಳನ್ನು ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸುವಂತೆ ಸೂಚನೆ ನೀಡಿದ್ದಾರೆ. ಬಿಗ್​ಬಾಸ್​ ಕನ್ನಡ ಸೀಸನ್ 11 ರ ಆರಂಭದಿಂದಲೇ ಸ್ವರ್ಗ ಮತ್ತು ನರಕ ಎಂಬ ಕಾನ್ಸೆಪ್ಟ್ ಇಡಲಾಗಿತ್ತು. ಅದರಂತೆ ಆರಂಭದ ದಿನವೇ ಕೆಲವು ಸ್ಪರ್ಧಿಗಳನ್ನು ಸ್ವರ್ಗಕ್ಕೆ ಕೆಲವುನ ಸ್ಪರ್ಧಿಗಳನ್ನು ನರಕಕ್ಕೆ ಕಳಿಸಲಾಗಿತ್ತು. ನರಕಕ್ಕೆ ಹೋದ ಸ್ಪರ್ಧಿಗಳು ನೆಲದ ಮೇಲೆ ಹಾಕಲಾದ ಬೆಡ್​ನಲ್ಲಿ ಮಲಗಬೇಕಿತ್ತು. ಅವರಿಗೆ ಊಟದ ಬದಲಿಗೆ ಕೇವಲ ಗಂಜಿ ಕೊಡಲಾಗಿತ್ತು. ಕೂರಲು ಕುರ್ಚಿ ವ್ಯವಸ್ಥೆ ಇರಲಿಲ್ಲ. ಅವರನ್ನು ಜೈಲಿನ ಮಾದರಿಯ ಸರಳುಗಳ ಹಿಂದೆ ಇಡಲಾಗಿತ್ತು. ಕುಡಿಯಲು ನೀರಿಗೆ ಒಂದು ಮಡಿಕೆ ಇಡಲಾಗಿತ್ತು. ನೀರು, ಊಟಕ್ಕೆ ಸ್ವರ್ಗವಾಸಿಗಳ ಅನುಮತಿ ಕೇಳಬೇಕಿತ್ತು, ಶೌಚಾಲಯ ಹೋಗಲು ಸಹ ಅನುಮತಿ ಕೇಳ ಬೇಕಿತ್ತು. ಕೆಲವೊಮ್ಮೆ ಸ್ವರ್ಗವಾಸಿಗಳು ಅನುಮತಿ ಕೊಡುತ್ತಿರಲಿಲ್ಲ. ಹಣ್ಣು ತಿಂದಿದ್ದಕ್ಕೆ, ಉಪ್ಪಿನ…

Read More

ಹೈದರಾಬಾದ್: ಭಾರತದ ಟಿ20 ಕ್ರಿಕೆಟ್‌ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ‌ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್‌ 12) ಬಾಂಗ್ಲಾದೇಶ (ವಿರುದ್ಧ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಅಬ್ಬರಿಸಿದ ಸೂರ್ಯ ಕೇವಲ 35 ಎಸೆತಗಳಲ್ಲಿ 75 ರನ್‌ ಚಚ್ಚಿದರು. ಇದೇ ವೇಳೆ ಭಾರತದ ಪರ ಅತಿ ವೇಗವಾಗಿ 2,500 ರನ್‌ ಪೂರೈಸಿದ 2ನೇ ಬ್ಯಾಟರ್‌ ಎಂಬ ದಾಖಲೆಗೆ ಪಾತ್ರರಾದರು. ಟೀಂ ಇಂಡಿಯಾ ಪರ ಆಡಿದ 71ನೇ ಇನಿಂಗ್ಸ್‌ ಹಾಗೂ 73ನೇ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌, 2,500 ರನ್‌ಗಳ ಗಡಿ ದಾಟಿಸಿದರು. ಅಂದಹಾಗೆ ಮಾಜಿ ನಾಯಕ ವಿರಾಟ್‌ ಕೊಹ್ಲಿ ಕೇವಲ 68 ಇನಿಂಗ್ಸ್‌ 73 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ ಭಾರತೀಯ ಬ್ಯಾಟರ್‌ ಎನಿಸಿಕೊಂಡಿದ್ದರು. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್‌ ಆಜಂ ಹೆಸರಿನಲ್ಲೂ ಈ ದಾಖಲೆ ಇದೆ. ಬಾಬರ್‌ ಕೇವಲ 62 ಇನಿಂಗ್ಸ್‌, 67 ಪಂದ್ಯಗಳಲ್ಲಿ ಈ ಮೈಲುಗಲ್ಲು…

Read More

ಮೈಸೂರು: ಜನ ಯಶಸ್ವಿ ಅಂದ್ರೆ ದಸರಾ ಯಶಸ್ವಿ ಅಂತಲೇ ಅರ್ಥ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಈ ಬಾರಿ ಹೆಚ್ಚು ಜನ ದಸರಾ ನೋಡಲು ಬಂದಿದ್ದಾರೆ. ಜಿಲ್ಲಾಡಳಿತ ಅದ್ಧೂರಿಯಾಗಿ ದಸರಾ ಆಚರಿಸಿದ್ದಾರೆ. ಮಳೆ ಬಂದಿದ್ದು ಬಿಟ್ರೆ, ಜನ ಖುಷಿಯಿಂದ ದಸರಾ ನೋಡಿದ್ದಾರೆ. ನಾಡ ಹಬ್ಬ ಆದ ಕಾರಣ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಜನ ಯಶಸ್ವಿ ಅಂದ್ರೆ ದಸರಾ ಯಶಸ್ವಿ ಅಂತಲೇ ಅರ್ಥ ಎಂದು ಹೇಳಿದರು. ಇನ್ನೂ ಉತ್ತರ ಪ್ರದೇಶಕ್ಕೆ ಬಂದಿರುವ ಪಾಲು ನೋಡಿ. ನಮಗೆ ಬಂದಿರುವ ಪಾಲನ್ನೂ ನೋಡಿ. ಅವರಿಗೂ ನಮಗೂ ಎಷ್ಟು ವತ್ಯಾಸ ಇದೆ. ನಮಗೆ ತೆರಿಗೆ ಪಾಲಿನಲ್ಲಿ ಅನ್ಯಾಯ ಆಗಿದೆ ಅಂತ ಜನ ದನಿ ಎತ್ತಬೇಕು. ಬಿಜೆಪಿಯವರು ಕೇಂದ್ರ ಸರ್ಕಾರವನ್ನ ಸಮರ್ಥನೆ ಮಾಡ್ಕೊಂಡು ಮಾತಾಡೋದು ಕರ್ನಾಟಕದ ಜನರಿಗೆ ಮಾಡುವ ದ್ರೋಹವಾಗಿದೆ. ಇಷ್ಟೊಂದು ಜನ ಎಂಪಿ ಗೆಲ್ಲಿಸಿದ್ರೆ ರಾಜ್ಯದ ಪರ ದನಿ ಎತ್ತಬೇಕಲ್ವ?. ಇವತ್ತಿನವರಿಗೆ ದನಿ ಎತ್ತಿಲ್ಲ. ಕರ್ನಾಕಟಕ್ಕೆ 5 ವರ್ಷದಲ್ಲಿ 60 ಸಾವಿರ ಕೋಟಿ…

Read More

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಶಂಭೂವಿನಹಳ್ಳಿ‌ ಗ್ರಾಮದಲ್ಲಿ ಬೆಳ್ಳಂಬೆಳ್ಳಗೆ ಗನ್‌ ಸೌಂಡ್‌ ಕೇಳಿಸಿದೆ. ಆದ್ರೆ ಪೊಲೀಸರು ಆರೋಪಿ ಮೇಲೆ ಫೈರಿಂಗ್‌ ಮಾಡಿದ್ದಲ್ಲ, ಪತ್ನಿ‌ ಜೊತೆ ಆಕ್ರಮ ಸಂಬಂಧ ಆರೋಪ ಹಿನ್ನಲೆ ಗನ್‌ ನಿಂದ ಗುಂಡು‌ ಹಾರಿಸಿ ಯುವಕನ ಹತ್ಯೆಗೆ ಯತ್ನಸಿರುವ ಘಟನೆ ನಡೆದಿದೆ. ಮಂಜು(26) ಗುಂಡೇಟು ದಾಳಿಯಿಂದ ಗಾಯಗೊಂಡ ಯುವಕನಾಗಿದ್ದು, ಶಿವರಾಜು(37) ಗುಂಡು ಹಾರಿಸಿದ ಆರೋಪಿಯಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ಈ ಘಟನೆ ನಡೆದಿದ್ದು, ಪ್ರಾಣಾಪಾಯದಿಂದ ಯುವಕ ಪಾರಾಗಿದ್ದಾನೆ. ಮುಂಬೈನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜು ವಾರದ ಹಿಂದೆ ಗ್ರಾಮಕ್ಕೆ ಬಂದಿದ್ದ. ಲಾರಿ ಡ್ರೈವರ್‌ ಕೆಲಸ ಮಾಡುತ್ತಿದ್ದ ಮಂಜು ಜೊತೆಗೆ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎಂದು ಫೈರಿಂಗ್ ಮಾಡಿದ್ದಾನೆ. ಸದ್ಯ ಗಾಯಾಳು ಮಂಜುಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಂಡವಪುರ ಪೊಲೀಸರು ಆರೋಪಿ ಶಿವರಾಜ್ ನನ್ನು ಬಂಧಿಸಿದ್ದಾರೆ. ಪಾಂಡವಪುರ ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.    

Read More

ಬೆಂಗಳೂರು-ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ದುರ್ಬಳಕೆಗೆ ಯತ್ನಿಸಿದ ಸಂಬಂಧ ನಗರದ ಕೇಂದ್ರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದ್ದು ಈ ಸಂಬಂಧ ಕೆಲ ದೂರುಗಳು ಬಂದ ಹಿನ್ನೆೆಲೆ ಅ.11ರಂದು ಸಿಇಎನ್ ಪೊಲೀಸ್ ಠಾಣೆ ಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ವಂಚಕರು ಸಾಮಾಜಿಕ ಜಾಲತಾಣಗಳ ತುಷಾರ್ ಗಿರಿನಾಥ್ ಅವರ ಭಾವಚಿತ್ರ, ಹೆಸರು, ಹುದ್ದೆ ಮತ್ತು ಸಂಸ್ಥೆೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದಿದ್ದರು. ನಕಲಿ ಫೇಸ್ ಬುಕ್ ಖಾತೆ ಮೂಲಕ ಪಾಲಿಕೆಯ ಅಧಿಕಾರಿ ಹಾಗೂ ನೌಕರರಿಗೆ ಮತ್ತು ಸಾರ್ವಜನಿಕರಿಗೆ ವಂಚಿಸುವ ಸಾಧ್ಯತೆ ಇರುವುದರಿಂದ ಸದರಿ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಿಸಿ, ಫೇಸ್‌ಬುಕ್ ಖಾತೆಯನ್ನು ತೆರೆದಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

Read More

ಬೆಂಗಳೂರು:- ಇಂದಿನಿಂದ ಅ.17 ರವರೆಗೆ, ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಮಂಡ್ಯ, ಮೈಸೂರು ಕೊಡಗು ಹಾಗೂ ಹಾಸನ ಜಿಲ್ಲೆಯ ಕೆಲವು ಕಡೆ ಭಾರಿ ಮಳೆ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ಅಕ್ಟೋಬರ್ 16, 17ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಇವತ್ತಿನಿಂದ ಅಕ್ಟೋಬರ್ 17ರ ವರೆಗೆ ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಸಿ ಎಸ್ ಪಾಟೀಲ್ ಹೇಳಿದ್ದಾರೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಅ. 15ರ ವರೆಗೆ ಹಲವು ಕಡೆ ಮಳೆ ಸಾಧ್ಯತೆಯಿದೆ. ಅ.16ರಂದು ಕರಾವಳಿಯಲ್ಲಿ 16 ರಿಂದ 18ರ ವರೆಗೆ ವ್ಯಾಪಕ ಮಳೆಯಾಗುವ ಸಂಭವವಿದೆ. ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ತುಮಕೂರು ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗಬಹುದು.

Read More

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಬಾಂದ್ರಾ ಪೂರ್ವದ ಶಾಸಕರಾಗಿರುವ ಅವರ ಪುತ್ರ ಜೀಶಾನ್ ಅವರ ಕಚೇರಿಯಲ್ಲಿ ಶನಿವಾರ ರಾತ್ರಿ 9:30 ರ ಸುಮಾರಿಗೆ ಸಿದ್ದಿಕಿ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸಿದ್ದಿಕಿ ಮೇಲೆ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಾಜಿ ಸಚಿವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಒಂದು ಗುಂಡು ಎದೆಗೆ ತಗುಲಿದ್ದರಿಂದ ಅವರು ಸಾವಿಗೀಡಾಗಿದ್ದಾರೆ. ಬಾಂದ್ರಾ ಪಶ್ಚಿಮದಿಂದ ಮೂರು ಬಾರಿ ಶಾಸಕರಾಗಿದ್ದ ಸಿದ್ದಿಕಿ ಅವರು 48 ವರ್ಷಗಳ ಕಾಲ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಪಕ್ಷವನ್ನು ತೊರೆದು ಅಜಿತ್ ಪವಾರ್ ಅವರ ಎನ್‌ಸಿಪಿಗೆ ಸೇರಿದ್ದರು. ಜೀಶನ್ ಸಿದ್ದಿಕಿ ಅವರನ್ನು ಆಗಸ್ಟ್‌ನಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿಸಲಾಗಿತ್ತು.

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ 4 ತಿಂಗಳು ಕಳೆದಿದೆ. ಸದ್ಯ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದೆ ನರಕ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಅವರು ವಿಪರೀತ ಬೆನ್ನು ನೋವಿನಿಂದ ನರಳುತ್ತಿದ್ದಾರೆ. ಒಂದು ಕಡೆದ ದರ್ಶನ್ ಹೊರ ಬರುವುದನ್ನೇ ಅವರ ಅಭಿಮಾನಿಗಳು ಕಾಯ್ತಿದ್ದಾರೆ. ಮತ್ತೊಂದೆಡೆ ದರ್ಶನ್ ಪರ ಲಾಯರ್ ದಾಸನನ್ನು ಹೇಗಾದರು ಮಾಡಿ ಹೊರತರಲೇ ಬೇಕು ಎಂದುಕೊಳ್ತಿದ್ದಾರೆ. ಬಳ್ಳಾರಿ ಜೈಲಲ್ಲಿರೋ ದರ್ಶನ್​ಗೆ ಒಂದೊಂದು ಕ್ಷಣವೂ ನರಕ ದರ್ಶನವಾಗ್ತಿದೆ. ಹೊರಗಿದ್ದ ವೇಳೆ ರಾಜನಂತೆ ಸಾಫ್ಟ್ ಹಾಸಿಗೆಯಲ್ಲಿ ಮಲಗುತ್ತಿದ್ದ ದರ್ಶನ್ ಬಳ್ಳಾರಿ ಜೈಲಿನಲ್ಲಿ ಚಾಪೆ ಮೇಲೆ ಮಲಗುವಂತಾಗಿದೆ. ಜೊತೆಗೆ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ತಪಾಸಣೆ ನಡೆಸಿದ್ದ ವೈದ್ಯರು, ಸ್ಕ್ಯಾನಿಂಗ್​ ಮಾಡಲೇ ಬೇಕು ಅಂತಾ ವರದಿ ನೀಡಿದ್ದಾರಂತೆ. ಪರಪ್ಪನ ಅಗ್ರಹಾರ ಜೈಲಲ್ಲಿದ್ದಾಗ ರಾಜನಂತಿದ್ದ ದರ್ಶನ್ ಅಲ್ಲಿನ ಸೌಕರ್ಯದಿಂದಾಗಿ ಫುಲ್ ಆರಾಮಾಗಿದ್ದರು. ಆದರೆ ರಾಜಾತಿಥ್ಯ ಎಫೆಕ್ಟ್​ನಿಂದ ಬಳ್ಳಾರಿ ಸೆಂಟ್ರಲ್​ ಜೈಲಿಗೆ ಶಿಫ್ಟ್ ಆಗಿ ನರಕ ಅನುಭವಿಸುತ್ತಿದ್ದಾರೆ. ಕೂರೋದಕ್ಕೂ ಆಗದೆ,…

Read More

ಕೆಜಿಎಫ್ ಸಿನಿಮಾದ ಬಳಿಕ ಬಾಲಿವುಡ್ ನಟ ಸಂಜಯ್ ದತ್ ಗೆ ಅದೃಷ್ಟ ಖುಲಾಯಿಸಿದೆ. ಕೆಜಿಎಫ್ ಬಳಿಕ ಸಂಜಯ್ ತಮಿಳು, ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿರುವ ಸಂಜಯ್ ದತ್, ಕಳೆದ ಕೆಲ ವರ್ಷಗಳಿಂದ ಧಾರ್ಮಿಕತೆಯತ್ತ ಮುಖ ಮಾಡಿದ್ದದು, ಆಗಾಗ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಅಂತೆಯೇ ಕರ್ನಾಟಕದ ಪ್ರಸಿದ್ಧ ದೇವಾಲಯ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಕೆಲವು ಗೆಳೆಯರೊಟ್ಟಿಗೆ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದಿದ್ದ ಸಂಜಯ್ ದತ್ ಅವರು ಹುಲಿ ಕುಣಿತದ ಊದು ಪೂಜೆ ಯಲ್ಲಿ ಭಾಗವಹಿದರು. ಇದೇ ಪೂಜೆಯಲ್ಲಿ ಪಾಲ್ಗೊಳ್ಳಲೆಂದು ಸಂಜಯ್ ದತ್ ಅವರು ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ಬಿರುವೆರ್ ಕುಡ್ಲ ಸಂಘಟನೆಯ ಹುಲಿವೇಷ ಕುಣಿತದ ಊದು ಪೂಜೆ ಆಯೋಜಿಸಿದ್ದರು. ಈ ವಿಶೇಷ ಪೂಜೆಯಲ್ಲಿ ನಟ ಸಂಜಯ್ ದತ್ ಭಾಗವಹಿಸಿದ್ದರು. ದೇವಾಲಯಕ್ಕೆ ಆಗಮಿಸಿದ್ದ ಸಂಜಯ್ ದತ್ ಅವರಿಗೆ ದೇವಸ್ಥಾನದ ವತಿಯಿಂದ ವಿಶೇಷ ಗೌರವ…

Read More

ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ ರಂಗೇರಿದೆ. ಅಮೆರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚುನಾವಣ ಕಣದಲ್ಲಿದ್ದು ಭರ್ಜರಿ ಪೈಪೋಟಿ ಆರಂಬವಾಗಿದೆ. ಈ ಮಧ್ಯೆ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿ ಖ್ಯಾತಿ ಗಾಯಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಅವರು 30 ನಿಮಿಷಯದ ವಿಡಿಯೋವೊಂದನ್ನು ತಯಾರು ಮಾಡಿದ್ದಾರೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಮೊದಲ ಬಾರಿ ದಕ್ಷಿಣ ಭಾರತದ ಸಂಗೀತ ನಿರ್ದೇಶಕರೊಬ್ಬರು ಈ ರೀತಿ ಪ್ರಚಾರದಲ್ಲಿ ಸಹಕಾರಿಯಾಗಿದ್ದಾರೆ. ಈ ಒಂದು 30 ನಿಮಿಷಗಳ ವಿಡಿಯೋ ಸಾಂಗ್​ನಲ್ಲಿ ಎ ಆರ್ ರೆಹಮಾನ್ ಕೂಡ ತಮ್ಮ ಧ್ವನಿಯನ್ನು ನೀಡಿದ್ದಾರೆ ಎಂದು ಏಷಿಯನ್ ಅಮೆರಿಕಾ ಮತ್ತು ಫೆಸಿಫಿಕ್ ಐಲ್ಯಾಂಡರ್​ನ ಚೇರ್​ಮನ್ ಶೇಖರ್ ನರಸಿಂಹನ್ ಹೇಳಿದ್ದಾರೆ. ರೆಹಮಾನ್ ಸಿದ್ಧಪಡಿಸಿರುವ 30 ನಿಮಿಷದ ವಿಡಿಯೋ ಬಿಡಗಡೆ ಕಾರ್ಯಕ್ರಮ ಇಂದು AAPIನ ಅಮೆರಿಕಾ ಕಾಲಮಾನದ ಪ್ರಕಾರ ರಾತ್ರಿ ಎಂಟು ಗಂಟೆಗೆ ಹಾಗೂ ಭಾರತೀಯ ಕಾಲಮಾನದ ಪ್ರಕಾರ ಅಕ್ಟೋಬರ್ 14 ಮುಂಜಾನೆ 5.30ಕ್ಕೆ  ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆಯಾಗಲಿದೆ.…

Read More