Author: Prajatv Kannada

ಬಿಗ್ ಬಾಸ್ ಕನ್ನಡ ಸೀಸನ್ ಆರಂಭವಾಗಿ ಎರಡು ವಾರಗಳಾಗಿದೆ. ಈಗಾಗಲೇ ಓರ್ವ ಸ್ಪರ್ಧಿ ಮನೆಯಿಂದ ಹೊರ ಹೋಗಿದ್ದು ಇಂದು ಯಾರು ಮನೆಯಿಂದ ಔಟ್ ಆಗ್ತಾರೆ ಎಂಬ ಕುತೂಹಲ ಶುರುವಾಗಿದೆ. ಈ ಮಧ್ಯೆ ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯಲ್ಲಿ ತಪ್ಪು ಮಾಡಿದವರಿಗೆ ಸರಿಯಾಗಿಯೇ  ಬೆಂಡ್ ಎತ್ತುತ್ತಾರೆ.ಅಂತೆಯೇ ಇದೀಗ ಗೋಲ್ಡ್ ಸುರೇಶ್ ಹಾಗೂ ಜಗದೀಶ್ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ದೊಡ್ಮನೆಯಲ್ಲಿ ಎರಡನೇ ವಾರ ನಿಯಮ ಮುರಿದು ನರಕವಾಸಿಗಳು ಬ್ಲೈಂಡ್ಸ್ ಹಿಂದೆ ಹೋಗಿದ್ದರು. ಪರಿಣಾಮ, ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿ ‘ಬಿಗ್ ಬಾಸ್’ ಶಿಕ್ಷೆ ವಿಧಿಸಿದ್ದರು. ಆನಂತರ ತಮಗೆ ಅಧಿಕಾರ ಸಿಕ್ಕಾಗ.. ಬ್ಲೈಂಡ್ಸ್ ಹಿಂದೆ ಮೊದಲು ಹೋಗಿದ್ದು ಅನುಷಾ ರೈ ಎಂದು ಭಾವಿಸಿ ಗೌತಮಿ ಜಾಧವ್ ನೇರವಾಗಿ ನಾಮಿನೇಟ್ ಮಾಡಿದ್ದರು. ಆದರೆ, ಟಾಸ್ಕ್‌ ಏನು ಅಂತ ನೋಡಿ ತಿಳಿದುಕೊಳ್ಳುವಂತೆ ಮಾನಸಾರನ್ನ ಬ್ಲೈಂಡ್ಸ್ ಹಿಂದೆ ಕಳುಹಿಸಿದ್ದು ಗೋಲ್ಡ್ ಸುರೇಶ್. ಹೀಗಾಗಿ, ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಪ್ರಾಮಾಣಿಕತೆ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್‌,…

Read More

ಮಹಾರಾಷ್ಟ್ರ ಮಾಜಿ ಸಚಿವ, ಬಾಲಿವುಡ್ ಚಿತ್ರರಂಗದ ಹಲವು ಸ್ಟಾರ್ ಗಳ ಜೊತೆ ಆಪ್ತತೆ ಹೊಂದಿದ್ದ  ಎನ್​ಸಿಪಿ ಹಿರಿಯ ನಾಯಕ ಬಾಬಾ ಸಿದ್ಧಕಿ ಅವರನ್ನು ಬಾಂದ್ರಾ ಈಸ್ಟ್ ಮುಂಬೈನಲ್ಲಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಬಾಬಾ ಸಿದ್ಧಕಿ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು ಕೂಡಲೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬಾಬಾ ಸಿದ್ದಿಕಿ ನಿಧನರಾಗಿದ್ದಾರೆ. ಇಫ್ತಾರ್‌ ಕೂಟ ಹಾಗೂ ಅದ್ಧೂರಿ ಪಾರ್ಟಿಗಳ ಹೆಸರಲ್ಲಿ ಸಿನಿಮಾ ರಂಗದ ದೈತ್ಯರನ್ನೆಲ್ಲ ಒಂದೆಡೆ ಸೇರಿಸುತ್ತಿದ್ದು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಪ್ರತಿಯೊಬ್ಬರಿಗೂ ಶಾಕ್ ನೀಡಿದೆ. ಶನಿವಾರ ರಾತ್ರಿ 9.30 ಗಂಟೆ ಸುಮಾರಿಗೆ ಬಾಬಾ ಸಿದ್ಧಿಕಿ ಅವರ ಮೇಲೆ ಮೂರು ಬುಲೆಟ್‌ಗಳನ್ನು ಹಾರಿಸಲಾಗಿತ್ತು. ಅವರ ಮಗ ಜೀಶನ್‌ ಸಿದ್ದಿಕಿ ಅವರ ಕಚೇರಿಯಲ್ಲಿ ಈ ದಾಳಿ ನಡೆದಿತ್ತು. ಜೀಶನ್‌ ಬಾಂದ್ರಾ ಪೂರ್ವದ ಶಾಸಕರಾಗಿದ್ದಾರೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆ ಮೂಲಗಳ ಪ್ರಕಾರ ಕನಿಷ್ಠ ಒಂದು ಬುಲೆಟ್‌…

Read More

ಕಲಘಟಗಿ: ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಇಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಪಾದಚಾರಿ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೆ ಯುವಕ ಮೃತಪಟ್ಟಿದ್ದಾನೆ. https://youtu.be/IdZMsZ5DtaI?si=jGjr50aqx6KKILRq ಡಿಕ್ಕಿಯಾದ ರಭಸಕ್ಕೆ ದೇಹದ ಅಂಗಾಂಗಗಳು ಛಿದ್ರವಾಗಿವೆ. ಯುವಕನ ಹೃದಯ ಬೇರ್ಪಟ್ಟು ರಸ್ತೆ ಮೇಲೆ ಬಿದ್ದರೂ ಮಿಡಿಯುತ್ತಿರುವುದನ್ನು ಕಂಡ ಸ್ಥಳೀಯರು ಮಮ್ಮಲ ಮರುಗಿದ್ದಾರೆ. ಮೃತಪಟ್ಟಿರುವ ಯುವಕ ಸುಭಾಸ್ ಗುಂಡಪ್ಪನವರ ಎಂದು ತಿಳಿದು ಬಂದಿದೆ.ಈತ ಕಲಘಟಗಿ ತಾಲ್ಲೂಕಿನ ಸುಲಿಕಟ್ಟಿ ಗ್ರಾಮದವನು ಎಂದು ಹೇಳಲಾಗುತ್ತಿದೆ.ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದು ತನಿಖೆ ಕೈಗೊಂಡಿದ್ದಾರೆ .

Read More

ಮೈಸೂರು: ದಸರಾ ಸಂಭ್ರಮ ಮಹೋತ್ಸವದ ನಡುವೆ ಮೈಸೂರಿನಲ್ಲಿ ವರುಣ ಎಂಟ್ರಿ ಕೊಟ್ಟಿದ್ದಾನೆ. ಮಳೆ ನಡುವೆಯೂ ಜನರು ಉತ್ಸಾಹದಿಂದ ದಸರಾ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. https://www.youtube.com/live/uzpL9qktnKI?si=zurBDUle0OLWJwKF ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿಯಂದು ಜಂಬೂ ಸವಾರಿ   ಕಣ್ತುಂಬಿಕೊಳ್ಳುವ ಸಲುವಾಗಿ ಮೈಸೂರು ಅರಮನೆಯ ಸುತ್ತಲೂ ಕಿಕ್ಕಿರಿದು ಜನ ಸೇರಿದ್ದಾರೆ. ಈ ವೇಳೆ ಮಳೆರಾಯ ಕೂಡ ಕೃಪೆ ತೋರಿದ್ದಾನೆ. ಮಳೆ ನಡುವೆಯೇ ಮೆರವಣಿಗೆ ಸಾಗುತ್ತಿದೆ. ಜಾನಪದ ಕಲಾ ತಂಡಗಳು, ಟ್ಯಾಬ್ಲೋಗಳು ಮಳೆಯಲ್ಲೇ ಮುಂದೆ ಸಾಗುತ್ತಿವೆ. ದಸರಾ ವೀಕ್ಷಣೆಗೆಂದು ಆಗಮಿಸಿರುವ ಜನರು ಸಹ ಮಳೆಯಲ್ಲೇ ಮೆರವಣಿಗೆ ವೀಕ್ಷಿಸುತ್ತಿದ್ದಾರೆ. ಅಂಬಾರಿ ಕಟ್ಟುವ ಜಾಗಕ್ಕೆ ಕ್ಯಾಪ್ಟನ್ ಅಭಿಮನ್ಯುವನ್ನು ಕರೆತರಲಾಗಿತ್ತು. ಮಳೆ ಹಿನ್ನೆಲೆ ಅಂಬಾರಿ ಕಟ್ಟುವ ಜಾಗದಿಂದ ಅಭಿಮನ್ಯುವನ್ನು ನೆರಳಿಗೆ ಕರೆದುಕೊಂಡು ಹೋಗಲಾಯಿತು. ಮಳೆ ನಡುವೆಯೇ ಅಂಬಾರಿ ಕಟ್ಟುವ ಕೆಲಸ ಮುಂದುವರೆದಿದೆ

Read More

ಮೈಸೂರು: ಇಂದು ನಾಡಿನಾದ್ಯಂತ ವಿಜಯದಶಮಿ ಆಚರಣೆ ಈ ದಿನ ಮೈಸೂರಿನಲ್ಲಿ ಜಂಬೂಸವಾರಿ ನಡೆಯಲಿದೆ. 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗುತ್ತಾನೆ. ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳು ಬಣ್ಣ ಬಣ್ಣ ಚಿತ್ತಾರಗಳಿಂದ ಶೃಂಗಾರಗೊಂಡಿವೆ. https://www.youtube.com/live/uzpL9qktnKI?si=zurBDUle0OLWJwKF ಸಂಜೆ 4 ರಿಂದ 4:30ರ ಒಳಗಾಗಿ ಜಂಬೂಸವಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ. ಜಂಬೂಸವಾರಿಯಲ್ಲಿ ಭಾಗವಹಿಸುವ 9 ಆನೆಗಳಿಗೆ ಬಣ್ಣಗಳಿಂದ ಶೃಂಗರಿಸಲಾಗಿದೆ. ಕ್ಯಾಪ್ಟನ್​ ಅಭಿಮನ್ಯುವಿಗೆ ಒಂಬತ್ತು ಆನೆಗಳು ಸಾತ್​ ನೀಡಲಿವೆ. ನಿಶಾನೆಯಾಗಿ ಧನಂಜಯ ಆಯ್ಕೆಯಾಗಿದ್ದಾನೆ. ಅಭಿಮನ್ಯು ಅಂಬಾರಿಯನ್ನು ಹೊತ್ತು ರಾಜಗಾಂಭಿರ್ಯದಿಂದ ರಾಜಬೀದಿಗಳಲ್ಲಿ ಹೋಗುತ್ತಿರುವುದನ್ನು ನೋಡುವುದೇ ಚಂದ. ಜಂಬೂಸವಾರಿ ಕಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಮೈಸೂರು ದಸರಾಕ್ಕೆ ಆಗಮಿಸಿರುವ 14 ಆನೆಗಳ ಮೇಲೆ ಬಣ್ಣಗಳಿಂದ ಚಿತ್ರ ಬಿಡಿಸಲಾಗಿದೆ. ಆನೆಗಳ ಸೊಂಡಿಲಿಗೆ ಅರಮನೆ ಲಾಂಛನವಾದ ಗಂಡಭೇರುಂಡ ಬಿಡಸಲಾಗಿದೆ. ಕಿವಿಗಳಿಗೆ ಶಂಖಚಕ್ರ ಬಿಡಿಸಲಾಗಿದೆ. ಕಾಲು ಮತ್ತು ಬಾಲಕ್ಕೆ ಹೂವು ಮತ್ತು ಬಳ್ಳಿಗಳನ್ನು ಬಿಡಿಸಲಾಗಿದೆ. ಕಲಾವಿದ ನಾಗಲಿಂಗಪ್ಪ…

Read More

ಬೆಂಗಳೂರು: ಇನ್ನೊಂದು ವಾರದಲ್ಲಿ ಚನ್ನಪಟ್ಟಣ ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. https://www.youtube.com/live/uzpL9qktnKI?si=zurBDUle0OLWJwKF ಬಿಡದಿ ತೋಟದ ಮನೆಯಲ್ಲಿ ಚನ್ನಪಟ್ಟಣ ಭಾಗದ ಮುಖಂಡರು, ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಎರಡು ಬಾರಿ ಜೆಡಿಎಸ್  ಗೆದ್ದಿದೆ. ಈ ಹಿನ್ನಲೆಯಲ್ಲಿ ದೆಹಲಿ ಮತ್ತು ರಾಜ್ಯ ಬಿಜೆಪಿ ನಾಯಕರ ಜೊತೆ ಮಾತನಾಡಿ ಜೆಡಿಎಸ್‌ಗೆ ಟಿಕೆಟ್ ಬಿಟ್ಟು ಕೊಡಲು ಮನವಿ ಮಾಡಿದ್ದಾರೆ. ಬಿಜೆಪಿ ನಾಯಕರ ಸಹಮತದೊಂದಿಗೆ ಅವರ ಅಭಿಪ್ರಾಯ ಪಡೆದು ತೀರ್ಮಾನ ಮಾಡೋಣ ಎಂದು ಹೇಳಿದ್ದೇನೆ. ಎಲ್ಲರು ಒಟ್ಟಾಗಿ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದೇನೆ ಎಂದರು. ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಆಗಬೇಕು ಎಂಬ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕು ಎಂದು 95% ನಾಯಕರು, ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನಾವು ಈಗ ಇರುವ ಸನ್ನಿವೇಶ ನೋಡಬೇಕು. ಏನೇನು ಬೆಳವಣಿಗೆಗಳು ಇವೆ ಎಂದು ನೋಡಬೇಕು. ನಿಖಿಲ್ ಮಂಡ್ಯದಲ್ಲಿ ನಿಲ್ಲಿಸಿದಾಗ ಎಲ್ಲಾ ಪಕ್ಷಗಳು ಒಂದಾಗಿ ಸೋಲಿಸಿದರು.…

Read More

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿ ಮೆರವಣಿಗೆಗೂ ಮುನ್ನ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಸಿದರು. https://www.youtube.com/live/uzpL9qktnKI?si=zurBDUle0OLWJwKF ಮಧ್ಯಾಹ್ನ 1:41 ರಿಂದ 2:10ರ ವರೆಗೆ ಸಲ್ಲುವ ಮಕರ ಶುಭಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು. ಆ ಮೂಲಕ ದಸರಾ ಮೆರವಣಿಗೆಗೆ ಅಧಿಕೃತ ಚಾಲನೆ ನೀಡಲಾಗಿದೆ. ಮೈಸೂರಿನ ಗೌರಿಶಂಕರ ನಗರದ ಉಡಿಗಾಲ ಮಹಾದೇವಪ್ಪ ಕುಟುಂಬದವರು ಕಳೆದ 9 ದಿನಗಳಿಂದ ಈ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ್ದು, ಇಂದು ಕೋಡಿ ಸೋಮೇಶ್ವರ ದೇವಾಲಯದಲ್ಲಿ ಜೋಡಣಾ ಕಾರ್ಯ ನಡೆಯುತ್ತಿದೆ. ನಂದಿಧ್ವಜ ಪೂಜೆ ಆದ ಬಳಿಕ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ಕಟ್ಟುವ ಕಾರ್ಯ ನಡೆಯುತ್ತಿದೆ. ನಂತರ ಮೆರವಣಿಗೆಗೆ ಪುಷ್ಪಾರ್ಚನೆ ಮಾಡಿ ಸಿಎಂ ಚಾಲನೆ ನೀಡಲಿದ್ದಾರೆ. ನಂದಿಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ ಬರೆಯಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಗಣೇಶ ಪ್ರಥಮ ಪೂಜಿತ. ಆದರೆ ಜಂಬೂಸವಾರಿಯಲ್ಲಿ ನಂದಿಗೆ ಅಗ್ರ ಪೂಜೆ. ನಂದಿಧ್ವಜಕ್ಕೆ ಪೂಜೆ ಮೂಲಕವೇ ದಸರಾ ಮೆರವಣಿಗೆಗೆ ಅಧಿಕೃತ ಚಾಲನೆ ನೀಡುವುದು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯ…

Read More

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಇಂದು ಚಾಮುಂಡೇಶ್ಚರಿ ದೇವಿಗೆ ವಿಶೇಷ ಪೂಜೆ ಕೈಂಕಾರ್ಯ ನಡೆಯಿತು. https://www.youtube.com/live/uzpL9qktnKI?si=zurBDUle0OLWJwKF ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಹೊನ್ನೂರು ಗ್ರಾಮದಲ್ಲಿ ನವರಾತ್ರಿ ಅಂಗವಾಗಿ 9 ದಿನಗಳಿಂದಲೂ ತಾಯಿ ಶ್ರೀ ಚಾಮುಂಡೇಶ್ವರಿದೇವಿಗೆ ವಿಶೇಷ ಪೂಜೆ ಕೈಂಕರ್ಯ ನಡೆಸಿಕೊಂಡು ಬರಲಾಗಿತ್ತು. ಆಯುಧಪೂಜೆ ಹಬ್ಬದ ದಿನವಾದ ಶುಕ್ರವಾರದಂದು ಇಂದು ಭಕ್ತಾಧಿಗಳು ಸಡಗರ ಸಂಭ್ರಮದಿಂದ ಆಯುಧಗಳಿಗೆ ಹಾಗೂ ವಾಹನಗಳಗೆ ಬಾಳೆಕಂದು ಮಾವಿನಸೊಪ್ಪು ಹಾಗು ಹೂವಿನಿಂದ ಅಲಂಕರಿಸಿ ಪೂಜೆಗೈದರು. ನಂತರ ಸಂಜೆ 5 ಗಂಟೆಯಲ್ಲಿ ಗ್ರಾಮದಲ್ಲಿರುವ ಮಂಟಪದಲ್ಲಿ ಚಾಮುಂಡೇಶ್ಚರಿ ದೇವಿಗೆ ವಿಶೇಷವಾಗಿ ಅಲಂಕರಿಸಿ ಪೂಜೆಗೈಯಲಾಯ್ತು. ಈ ವೇಳೆ ಮಹಿಳೆಯರು ಯುವಕ ಯುವತಿಯರು ಸೇರಿದಂತೆ ಗ್ರಾಮಸ್ಥರು ಹಾಗೂ ತಾಲೂಕಿನ ವಿವಿದೆಡೆಯಿಂದ ಭಕ್ತರು ಆಗಮಿಸಿ ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದರು.

Read More