Author: Prajatv Kannada

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭೆ ಉಪ ಚುನಾವಣೆಯ ಪ್ರಚಾರ ಕಾರ್ಯಕ್ರಮ ಮುಗಿಸಿಕೊಂಡು ಭಾನುವಾರ ರಾತ್ರಿ ಹುಬ್ಬಳ್ಳಿ ಗೆ ಮರಳಿದ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ನಿವಾಸದಲ್ಲಿ ಭೋಜನ ಸವಿದರು. https://youtu.be/VZPGTsPz6xg?si=uj3Hh1MlRhnH5vDo ಸಂತೋಷನಗರ ಮಧುರಾ ಪಾರ್ಕ್‌ ನಲ್ಲಿರುವ ತಮ್ಮ ಮನೆಗೆ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಅಬ್ಬಯ್ಯ ಹಾಗೂ ಅವರ ಪತ್ನಿ, ಮಕ್ಕಳು, ಕುಟುಂಬದ ಸದಸ್ಯರು ಸ್ವಾಗತಿಸಿದರು.‌ ಶಿಗ್ಗಾಂವ ಉಪ ಚುನಾವಣಾ ಪ್ರಚಾರ ಮುಗಿಸಿ ನೇರವಾಗಿ ಹುಬ್ಬಳ್ಳಿಗೆ ಆಗಮಿಸಿದ ಅವರು ಮುಖ ್ಯ ಮಂತ್ರಿ ಸಿದ್ಧರಾಮಯ್ಯ ನವರು ನಾಟಿ ಕೋಳಿ ಸಾರು,ಮಟನ್ ಬಿರಿಯಾನಿ,ಖಡಕ್ ಜೋಳದ ರೊಟ್ಟಿ ಊಟ ಸವಿದರು. ಒಂದು ಕಡೆ ಸಸ್ಯಹಾರಿ ಇನ್ನೊಂದು ಕಡೆ ಮಾಂಸಹಾರಿ ಭರ್ಜರಿ ಬಗೆ ಬಗೆಯ ಉತ್ತರ ಕರ್ನಾಟಕ ಭಾಗದ ವಿಶೇಷ ಖಾದ್ಯದ ರುಚಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರು ಸವಿದರು ಹುಬ್ಬಳ್ಳಿಯಲ್ಲಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಮನೆಗೆ ತೆರಳಿದ ಸಿಎಂ ಸಿದ್ಧರಾಮಯ್ಯಗೆ ಶಾಸಕ ಪ್ರಸಾದ ಅಬ್ಬಯ್ಯ…

Read More

ತುಮಕೂರು: ಅನುಮಾನಸ್ಪದವಾಗಿ ಏಕಲವ್ಯ ವಸತಿ ಶಾಲೆಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬಜ್ಜನಹಳ್ಳಿ ಬಳಿಯಿರುವ ಏಕಲವ್ಯ ವಸತಿ ಶಾಲೆಯಲ್ಲಿ ನಡೆದಿದೆ. 8ನೇ ತರಗತಿಯಲ್ಲಿ ಓದುತ್ತಿದ್ದ ಅಭಿಲಾಷ್(13) ಮೃತ ವಿದ್ಯಾರ್ಥಿ. ಸದ್ಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ವಸತಿ ಶಾಲೆ ಪ್ರಿನ್ಸಿಪಾಲ್, ವಾರ್ಡನ್ ನಿರ್ಲಕ್ಷ್ಯದಿಂದ ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿದೆ. ಮೃತ ವಿದ್ಯಾರ್ಥಿ ಅಭಿಲಾಷ್, ಶಕುನಿ ತಿಮ್ಮನಹಳ್ಳಿಯ ನಿವಾಸಿ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಬೆಳಗಾವಿ: ತಹಸೀಲ್ದಾರ್‌ ಕಚೇರಿಯಲ್ಲಿ ತಹಶಿಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕಸಹಾಯಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ರಿಸಾಲ್ದಾರ್ ಗಲ್ಲಿಯಲ್ಲಿರುವ ತಹಶಿಲ್ದಾರ್ ಆಫೀಸ್‌ನಲ್ಲಿ ನಡೆದಿದೆ. ತಹಶಿಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡವಣ್ಣನವರ ಆತ್ಮಹತ್ಯೆಗೆ ಶರಣಾದ ಸರ್ಕಾರಿ ನೌಕರನಾಗಿದ್ದಾರೆ. https://youtu.be/VZPGTsPz6xg?si=ZcRkTd54qy9l1ND0 ತಹಶೀಲ್ದಾರ್ ಬಸವರಾಜ ನಾಗರಾಳ ಕಚೇರಿಯಲ್ಲಿಯೇ ನೇಣುಬಿಗಿದುಕೊಂಡಿದ್ದಾರೆ. ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇನ್ನು ಸರ್ಕಾರಿ ನೌಕರ ಆತ್ಮಹತ್ಯೆಗೆ ಶರಣಾಗುವ ಮುನ್ನ ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ಆಪ್ತ ಸಹಾಯಕನ (ಪಿಎ) ಹೆಸರು ಬರೆದಿಟ್ಟಿದ್ದಾರೆ. ಬೆಳಗಾವಿಯ ತಹಶಿಲ್ದಾರ್ ಬಸವರಾಜ್ ನಾಗರಾಳ‌ ಚೇಂಬರ್‌ನಲ್ಲಿಯೇ ಕೆಲಸ ಮಾಡುತ್ತಿದ್ದ ಎಫ್‌ಡಿಸಿ ರುದ್ರಣ್ಣ ಯಡಣ್ಣವರ ಇದೇ ಬೆಳಗಾವಿ ಜಿಲ್ಲೆಯ ರಾಯಭಾಗ ಮೂಲದರಾಗಿದ್ದರು. ಇನ್ನು ನೌಕರ ಬರೆದಿಟ್ಟಿದ್ದ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂದಿದ್ದಾರೆ. ಘಟನಾ ಸ್ಥಳಕ್ಕೆ ತಹಶಿಲ್ದಾರ್, ಖಡೇಬಜಾರ್ ಪೊಲೀಸರ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಹಾಸನ:- ಮದುವೆಗೆ ಒಂದು ವಾರ ಇರುವಾಗಲೇ ಭೀಕರವಾಗಿ ಕಾನ್ಸ್‌ಟೇಬಲ್‌ ಕೊಲೆಯಾದ ಘಟನೆ ಜರುಗಿದೆ. ಹಾಸನ ತಾಲೂಕಿನ ದುದ್ದ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಹರೀಶ್.ವಿ ಕೊಲೆಯಾದ ಪೊಲೀಸ್ ಕಾನ್ಸ್‌ಟೇಬಲ್. ಹರೀಶ್ ಬೆಂಗಳೂರಿನ KSISFನಲ್ಲಿ ಕಾನ್ಸ್‌ಟೇಬಲ್ ಆಗಿದ್ದರು. https://youtu.be/i-Rc8_2RjEo?si=SYDhNGzLOgh_2QuO ಇದೇ ತಿಂಗಳು 11 ರಂದು ಹರೀಶ್ ವಿವಾಹ ನಿಶ್ಚಯವಾಗಿತ್ತು. ಸೋಮವಾರ ರಾತ್ರಿ ಮದುವೆ ಆಮಂತ್ರಣ ಪತ್ರ ಹಂಚಿ ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ ದುದ್ದ ಗ್ರಾಮದ ಹೊರವಲಯದಲ್ಲಿರುವ ಡಾಬಾ ಸರ್ಕಲ್‌ನಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Read More

ರಾಯಚೂರು:- ನಗರದ ಹೊರವಲಯದ ಪವರ್ ಗ್ರಿಡ್ ಬಳಿ ಸಂಭವಿಸಿದ ಅಪಘಾತದಲ್ಲಿ ಇಬ್ಬರು ದುರ್ಮರಣ ಹೊಂದಿದ ಘಟನೆ ಜರುಗಿದೆ https://youtu.be/EyWj1HY7uGE?si=9mqT_quMi59_3jcN ನಾಲ್ವರಿದ್ದ ಬೈಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯದ ಪವರ್ ಗ್ರಿಡ್ ಬಳಿ ಜರುಗಿದೆ. ಶರಣಬಸವ, ಶಿವು ಮೃತರು ಎಂದು ಹೇಳಲಾಗಿದೆ. ಇರ್ಫಾನ್ ಹಾಗೂ ಗರೀಬ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಯಚೂರಿನಿಂದ ಕಲ್ಲೂರಿಗೆ ಕಟ್ಟಡ ಕೆಲಸಕ್ಕಾಗಿ ನಿತ್ಯವು ಪ್ರಯಾಣಿಸುತ್ತಿದ್ದರು. ಒಂದೇ ಬೈಕನಲ್ಲಿ ನಾಲ್ವರು ಹೊರಟಿದ್ದಾಗ ಪವರ್ ಗ್ರಿಡ್ ಬಳಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಕಾರು ಸಹಿತ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಳ ಶೋಧಕ್ಕೆ ಮುಂದಾಗಿದ್ದಾರೆ.

Read More

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನ, ಬೆಳ್ಳಿ ಬೆಲೆ ಎರಡೂ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 73,550 ರುಪಾಯಿ ಇದೆ. https://youtu.be/qkEqvi2fBDQ?si=ekJLuetmXGHofgrt 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 80,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,600 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 73,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,600 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 5ಕ್ಕೆ) 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,550 ರೂ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 80,240 ರೂ 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60,180 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 96 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ:…

Read More

ಬೆಂಗಳೂರು:- ಕರ್ನಾಟಕದ ಹಲವೆಡೆ ನವೆಂಬರ್ 9 ರಿಂದ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. https://youtu.be/EyWj1HY7uGE?si=0kLHYrjQ5yDwtW58 ಮೈಸೂರು, ಕೋಲಾರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರಕ್ಕೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಒಣಹವೆ ಮುಂದುವರೆಯಲಿದೆ.

Read More

ಸೂರ್ಯೋದಯ: 06:20, ಸೂರ್ಯಾಸ್ತ : 05:39 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ ಸಂವತ್ಸರ, ದಕ್ಷಿಣ ಅಯಣ, ಶುಕ್ಲ ಪಕ್ಷ,ಶರದ ಋತು, ಕಾರ್ತಿಕ್ ಮಾಸ, ತಿಥಿ:ಚೌತಿ ನಕ್ಷತ್ರ: ಜೇಷ್ಠ ರಾಹು ಕಾಲ: 03:00 ನಿಂದ 04:30 ತನಕ ಯಮಗಂಡ: 09:00 ನಿಂದ 10:30 ತನಕ ಗುಳಿಕ ಕಾಲ: 12:00 ನಿಂದ 01:30 ತನಕ ಅಮೃತಕಾಲ: ಬೆ.4:21 ನಿಂದ ಬೆ.6:02 ತನಕ ಅಭಿಜಿತ್ ಮುಹುರ್ತ: ಬೆ.11:37 ನಿಂದ ಮ.12:22 ತನಕ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ವಿದೇಶ ಭಾಗ್ಯ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ, ಎಣ್ಣೆ,, ನೀರು, ಮಾರಾಟಗಾರರಿಗೆ ಧನ ಲಾಭ, ಸ್ಯಾರಿ ಸೆಂಟರ್ ಪ್ರಾರಂಭಿಸುವ ಚಿಂತನೆ, ಸಂಗಾತಿಗೆ ನೆನೆದು ಮನದಲ್ಲಿ ಒಯ್ದಾಟ, ಕಮಿಷನ್ ಏಜೆಂಟರಿಗೆ ಧನ ಲಾಭ, ಆರ್ಥಿಕ ಸಲಹೆಗಾರರಿಗೆ ಸಿಹಿ ಸುದ್ದಿ, ಉದ್ಯೋಗದ ಪ್ರಮೋಷನ್ ಪ್ರಯತ್ನದಲ್ಲಿ ಹಿನ್ನಡೆ, ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ, ವಕೀಲರಿಗೆ ಉನ್ನತ ಹುದ್ದೆ ದೊರೆಯಲಿದೆ, ಗ್ಲಾಸ್ ಪ್ರೇಮ…

Read More

ಮಾಜಿ ನೀಲಿ ಸುಂದರಿ ಸನ್ನಿ ಲಿಯೋನ್ 2011ರಲ್ಲಿ ಡೇನಿಯಲ್ ವೆಬ್ಬರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾದ 13 ವರ್ಷಗಳ ಬಳಿಕ ದಂಪತಿ ಮತ್ತೆ ಮದುವೆಯಾಗಿದ್ದಾರೆ. ಹೌದು. ಮೂವರು ಮಕ್ಕಳ ಮುಂದೆ ಸನ್ನಿ ಲಿಯೋನ್ ಮತ್ತು ಡೇನಿಯಲ್ ತಮ್ಮ ಮದುವೆಯ ಪ್ರತಿಜ್ಞೆಯನ್ನು ನವೀಕರಿಸಿದ್ದಾರೆ. ಅಕ್ಟೋಬರ್ 31 ರಂದು ಮಾಲ್ಡೀವ್ಸ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಂಪತಿ ಮತ್ತೊಮ್ಮೆ ವಿವಾಹವಾಗಿದ್ದಾರೆ. ಸನ್ನಿ, ಡೇನಿಯಲ್ ವಿವಾಹ ಸಮಾರಂಭದಲ್ಲಿ ಮೂವರು ಮಕ್ಕಳಾದ ನಿಶಾ, ನೋಹ್ ಮತ್ತು ಅಶಾರ್ ಭಾಗಿಯಾಗಿದ್ದರು. ಆದರೆ, ಸನ್ನಿ ಮತ್ತು ಡೇನಿಯಲ್ ಮದುವೆಯ ಫೋಟೋಗಳನ್ನು ಇನ್ನೂ ಹಂಚಿಕೊಂಡಿಲ್ಲ. ಆದರೆ ಅವರ ಮದುವೆ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ. ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ತಮ್ಮ ವಿವಾಹದ ಪ್ರತಿಜ್ಞೆಯನ್ನು ದೀರ್ಘಕಾಲದವರೆಗೆ ನವೀಕರಿಸಲು ಬಯಸಿದ್ದರು ಎಂದು ಮೂಲವೊಂದು ETimes ಗೆ ತಿಳಿಸಿದೆ. ಅವರ ಮಕ್ಕಳಾದ ನಿಶಾ, ನೋವಾ ಮತ್ತು ಅಶರ್ ಅವರ ಮಹತ್ವವನ್ನು ಅರ್ಥಮಾಡಿಕೊಳ್ಳುವವರೆಗೆ ಅವರು ಕಾಯುತ್ತಿದ್ದರು. ಸನ್ನಿ ಮತ್ತು ಡೇನಿಯಲ್…

Read More

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಯ ಸುತ್ತ ಹಲವು ಅನುಮಾನ ಹುಟ್ಟಿಕೊಂಡಿದೆ.  ಸಾಲ ಮಾಡಿಕೊಂಡು ಸತ್ತಿರಬಹುದು ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರಬಂದಿದೆ. ಆದ್ರೆ ಗುರುಪ್ರಸಾದ್ ಸಾಲ ಮಾಡಿದ್ರೂ ಹೆದರುವವರಲ್ಲ ಅಂತ ಪತ್ನಿ ಹೇಳಿದ್ದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. ತನಿಖೆ ಚುರುಕಾಗಿದ್ದು ಗುರುಪ್ರಸಾದ್​ ಬಳಸ್ತಿದ್ದ ಮೊಬೈಲ್, ಟ್ಯಾಬ್ ವಶಕ್ಕೆ ಪಡೆದು ಎಫ್​ಎಸ್​​ಎಲ್​ಗೆ ಕಳುಹಿಸಲಾಗಿದೆ. ಗಾಂಧಿನಗರದ ಖ್ಯಾತ ನಿರ್ದೇಶಕ, ಸಾಕಷ್ಟು ನಟರ ಭವಿಷ್ಯ ಬೆಳಗಿಸಿದ ಪ್ರತಿಭಾವಂತನ ಸಾವು ದುರಂತವಾಗಿದೆ. ಕೊಳೆತು ನಾರುತ್ತಿದ್ದ ಸ್ಥಿತಿಯಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆಯಾಗಿದೆ. ಇವರ ಸಾವಿನ ಸುತ್ತ ಅನುಮಾನಗಳು ಹುತ್ತ ಹುಟ್ಟಿಕೊಂಡಿದ್ದು ಪೊಲೀಸರಿಗೆ ಕೆಲವೊಂದು ಇಂಟ್ರೆಸ್ಟಿಂಗ್​ ಅಂಶಗಳು ಲಭ್ಯವಾಗಿದೆ. ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾದನಾಯಕಹಳ್ಳಿ ಠಾಣೆ ಪೊಲೀಸರು ಗುರುಪ್ರಸಾದ್ ಸಾವಿನ ನಿಗೂಢತೆಯನ್ನು ಭೇದಿಸುವ ಪ್ರಯತ್ನದಲ್ಲಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಕೂಡ ಪೊಲೀಸರ ಕೈಸೇರಿದೆ, ಗುರುಪ್ರಸಾದ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ, ಆದ್ರೆ ಉಸಿರುಗಟ್ಟಿ ಸಾವಾಗಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ…

Read More